ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,16,17,18,2017
Question 1 |
1. ರೋವಾ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
ತ್ರಿಪುರ | |
ಮಣಿಪುರ | |
ಅಸ್ಸಾಂ | |
ಮೇಘಾಲಯ |
ರೋವಾ ವನ್ಯಜೀವಿ ಅಭಯಾರಣ್ಯ ಉತ್ತರ ತ್ರಿಪುರಾ ಜಿಲ್ಲೆಯಲ್ಲಿದೆ ಮತ್ತು ಕೇವಲ 0.86 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಇದು 150 ಜಾತಿಯ ಪಕ್ಷಿಗಳು, ಕಾಡು ಮೃಗಗಳು ಮತ್ತು ಸಸ್ತನಿಗಳಿಗೆ ನೆಲೆಯಾಗಿದೆ.
Question 2 |
2. ನೇಪಾಳದ ನೂತನ ಮುಖ್ಯ ನ್ಯಾಯಾಧೀಶರಾಗಿ ಯಾರು ಪ್ರಮಾಣವಚನ ಸ್ವೀಕರಿಸಿದರು?
ಗೋಪಾಲ್ ಪ್ರಸಾದ್ ಪರಾಜುಲಿ | |
ದೇವೇಂದ್ರ ನಾಥ್ ಮಜುರಿ | |
ಸುರೇಂದ್ರ ಕುಮಾರ್ | |
ಕಲ್ಯಾಣ್ ವಾಗ್ಮಿ |
ನ್ಯಾಯಮೂರ್ತಿ ಗೋಪಾಲ್ ಪ್ರಸಾದ್ ಪರಾಜುಲಿ ನೇಪಾಳದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಜುಲೈ 17, 2017 ರಂದು ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರವಧಿ ಏಪ್ರಿಲ್ 28, 2018 ರವರೆಗೆ ಇರಲಿದೆ.
Question 3 |
3. ಖ್ಯಾತ ಗಣಿತತಜ್ಞೆ ಮೇರಿಮ್ ಮಿರ್ಝಖಾನಿ ನಿಧನರಾದರು. ಅವರು ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?
ಇರಾಕ್ | |
ಇರಾನ್ | |
ಸಿಂಗಪುರ | |
ದಕ್ಷಿಣ ಆಫ್ರಿಕಾ |
ಇರಾನಿನ ಗಣಿತಶಾಸ್ತ್ರಜ್ಞೆ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾದ ಮರಿಯಾಮ್ ಮಿರ್ಝಖಾನಿ (40) ಜುಲೈ 14, 2017 ರಂದು ನಿಧನರಾದರು. ಮಿರ್ಝಖಾನಿ ಅವರು ಗಣಿತಶಾಸ್ತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಫೀಲ್ಡ್ಸ್ ಪದಕವನ್ನು ಗೆದ್ದ ಮೊದಲ ಇರಾನಿ ಮಹಿಳೆಯಾಗಿದ್ದಾರೆ.
Question 4 |
4. ಈ ಕೆಳಗಿನ ಯಾರು 2017 ರ ಪುರುಷರ ಸಿಂಗಲ್ಸ್ ವಿಂಬಲ್ಡನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು?
ರೋಜರ್ ಫೆಡರರ್ | |
ನೊವಾಕ್ ಜೊಕೊವಿಕ್ | |
ರಫೆಲ್ ನಡಾಲ್ | |
ಸ್ಟಾನ್ ವಾವಿಂಕ್ರ |
ಸ್ವಿಸ್ ವೃತ್ತಿಪರ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಅವರು 2017 ಪುರುಷರ ಸಿಂಗಲ್ಸ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಫೈನಲ್ನಲ್ಲಿ ಮರಿನ್ ಸಿಲಿಕ್ ವಿರುದ್ಧ 6-3, 6-1, 6-4 ಸೆಟ್ಗಳಿಂದ ಜಯಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ವಿಜಯದೊಂದಿಗೆ ಫೆಡರರ್ ದಾಖಲೆಯ 8 ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Question 5 |
5. 2017 ಫಾರ್ಮುಲಾ ಒನ್ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?
ಲೆವಿಸ್ ಹ್ಯಾಮಿಲ್ಟನ್ | |
ಸೆಬಾಸ್ಟಿಯನ್ ವೆಟಲ್ | |
ಡೆನಿಯಲ್ ರಿಕ್ಕಿಯಾರ್ಡೊ | |
ಮ್ಯಾಕ್ಸ್ ವರ್ಸ್ಟಪನ್ |
Question 6 |
6. “2017 ವರ್ಲ್ಡ್ ಡೇ ಫಾರ್ ಇಂಟರ್ನ್ಯಾಷನಲ್ ಜಸ್ಟಿಸ್ (WDIJ)” ಯಾವ ದಿನದಂದು ಆಚರಿಸಲಾಗುತ್ತದೆ?
ಜುಲೈ 15 | |
ಜುಲೈ 18 | |
ಜುಲೈ 17 | |
ಜುಲೈ 20 |
ವರ್ಲ್ಡ್ ಡೇ ಫಾರ್ ಇಂಟರ್ನ್ಯಾಷನಲ್ ಜಸ್ಟಿಸ್ ಅನ್ನು ಜುಲೈ 17 ರಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯವನ್ನು ಉತ್ತೇಜಿಸಲು ಮತ್ತು ಮಾನವ ಹಕ್ಕುಗಳ ಮೇಲೆ ಕೇಂದ್ರೀಕರಿಸಲು ಈ ದಿನವನ್ನು ಆಚರಿಸಲಾಗುತ್ತದೆ.
Question 7 |
7. ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ಕಾರ್ಯನಿರ್ವಹಿಸುವ ಭಾರತದ ಮೊದಲ ರೈಲು ನಿಲ್ದಾಣ ಯಾವುದು?
ಮಾತುಂಗ ರೈಲು ನಿಲ್ದಾಣ | |
ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣ | |
ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ | |
ದೆಹಲಿ ರೈಲು ನಿಲ್ದಾಣ |
ಮಾತುಂಗ ರೈಲ್ವೆ ನಿಲ್ದಾಣವು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವ ಭಾರತದ ಮೊದಲ ನಿಲ್ದಾಣವಾಗಿದೆ. ಇದು ಮುಂಬಯಿ ಸಬರ್ಬನ್ ರೈಲ್ವೇ ನೆಟ್ವರ್ಕ್ನ ಕೇಂದ್ರ ನಿಲ್ದಾಣವಾಗಿದೆ. ಈ ರೈಲು ನಿಲ್ದಾಣದಲ್ಲಿ 30 ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
Question 8 |
8. ಈ ಕೆಳಗಿನ ಯಾವ ಬಾಲಿವುಡ್ ನಟಿ 2017 ಐಐಎಫ್ಎ (IIFA) ವರ್ಷದ ಮಹಿಳಾ ಪ್ರಶಸ್ತಿಯನ್ನು ಗೆದ್ದಿದ್ದಾರೆ?
ತಪ್ಸಿ ಪನ್ನು | |
ಸೋನಂ ಕಪೂರ್ | |
ದೀಪಿಕಾ ಪಡುಕೋಣೆ | |
ಅಲಿಯಾ ಭಟ್ |
ಅಮೆರಿಕಾದ ನ್ಯೂಯಾರ್ಕ್ನಲ್ಲಿ ನಡೆದ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕ್ಯಾಡೆಮಿ (ಐಐಎಫ್ಎ)ಯ 18 ನೇ ಆವೃತ್ತಿಯಲ್ಲಿ “ಪಿಂಕ್” ಚಿತ್ರದಲ್ಲಿನ ಪಾತ್ರಕ್ಕಾಗಿ ತಪ್ಸಿ ಪನ್ನು ಅವರು 2017 ಐಐಎಫ್ಎ ವರ್ಷದ ಮಹಿಳಾ ಪ್ರಶಸ್ತಿಯನ್ನು ಗೆದ್ದುಕೊಂಡರು. ಉಡ್ತಾ ಪಂಜಾಬ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಶಾಹಿದ್ ಕಪೂರ್ ಮತ್ತು ಆಲಿಯಾ ಭಟ್ ಅತ್ಯುತ್ತಮ ನಟ & ನಟಿ ಪ್ರಶಸ್ತಿಯನ್ನು ಪಡೆದರು.
Question 9 |
9. 2017 ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನವನ್ನು (ಎನ್ಎಂಐಡಿ) ಯಾವ ದಿನದಂದು ಆಚರಿಸಲಾಗುತ್ತದೆ?
ಜುಲೈ 17 | |
ಜುಲೈ 18 | |
ಜುಲೈ 19 | |
ಜುಲೈ 20 |
2017 ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನವನ್ನು ಜುಲೈ 18 ರಂದು ಆಚರಿಸಲಾಗುತ್ತದೆ. ವರ್ಣಭೇದ ನೀತಿ ವಿರುದ್ಧ ತನ್ನ ದಣಿವರಿಯದ ಹೋರಾಟಕ್ಕಾಗಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ನೆಲ್ಸನ್ ಮಂಡೇಲಾ ಅವರ ಜನ್ಮ ದಿನವಾದ ಜುಲೈ 18 ರಂದು ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನವೆಂದು (ಎನ್ಎಂಐಡಿ) ಆಚರಿಸಲಾಗುತ್ತದೆ.
Question 10 |
10. ಭಾರತದ ಮೊದಲ ಜೈವಿಕ ಮೆಥೇನ್ ಬಸ್ ಅನ್ನು ಯಾವ ಭಾರತೀಯ ಕಂಪನಿಯು ತಯಾರಿಸುತ್ತಿದೆ?
ಟಾಟಾ ಮೋಟಾರ್ಸ್ | |
ಮಹೀಂದ್ರ & ಮಹೀಂದ್ರ | |
ಮಾರುತಿ ಸುಝುಕಿ | |
ಬಜಾಜ್ ಮೋಟರ್ಸ್ |
ಟಾಟಾ ಮೋಟರ್ಸ್ ಲಿಮಿಟೆಡ್ ಭಾರತದ ಮೊದಲ ಜೈವಿಕ ಸಿಎನ್ಜಿ (ಜೈವಿಕ ಮೀಥೇನ್) ಬಸ್ ಅನ್ನು ತಯಾರಿಸಿದೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಲಾಗಿದ್ದ “ಉರ್ಜಾ ಉತ್ಸವ್’ ಎಂಬ ಜೈವಿಕ ಇಂಧನ ಕಾರ್ಯಕ್ರಮದಲ್ಲಿ ಈ ಬಸ್ಸನ್ನು ಅನಾವರಣಗೊಳಿಸಲಾಯಿತು.
[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ1617182017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
a
Comment
Super