ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನ-30
Question 1 |
1. ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಮಾಹಿತಿ ಪ್ರಕಾರ ಕರ್ನಾಟಕ 2017ನೇ ಸಾಲಿನ ಜೂನ್‌ವರೆಗೆ ಬಂಡವಾಳ ಹೂಡಿಕೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ?
ಒಂದನೇ ಸ್ಥಾನ | |
ಎರಡನೇ ಸ್ಥಾನ | |
ಮೂರನೇ ಸ್ಥಾನ | |
ನಾಲ್ಕನೇ ಸ್ಥಾನ |
Question 2 |
2. 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದ ವೇಳೆ ಮುಖ್ಯಮಂತ್ರಿ ಆಗಿದ್ದವರು ಯಾರು?
ವಿರೇಂದ್ರ ಪಾಟೀಲ್ | |
ದೇವರಾಜು ಅರಸ್ | |
ಕಡಿದಾಳ್ ಮಂಜಪ್ಪ | |
ಡಿ ನಿಜಲಿಂಗಪ್ಪ |
Question 3 |
3. 2017ನೇ ಸಾಲಿನ ಅರ್ಜುನ್ ಪ್ರಶಸ್ತಿಗೆ ಆಯ್ಕೆಯಾಗಿರುವ ಕರ್ನಾಟಕದ ಕ್ರೀಡಾಪಟುಗಳನ್ನು ಗುರುತಿಸಿ?
ಎಸ್.ವಿ. ಸುನೀಲ್ ಮತ್ತು ಪ್ರಕಾಶ್ ನಂಜಪ್ಪ | |
ಗಿರೀಶ್ ನಾಗರಾಜೆಗೌಡ ಮತ್ತು ಪ್ರಕಾಶ್ ನಂಜಪ್ಪ | |
ಕೆ ಎಲ್ ರಾಹುಲ್ ಮತ್ತು ಎಸ್ ವಿ ಸುನೀಲ್ | |
ವಂದನಾ ರಾವ್ ಮತ್ತು ಎಸ್ ವಿ ಸುನೀಲ್ |
ಕರ್ನಾಟಕ ರಾಜ್ಯದಿಂದ ಹಾಕಿ ಆಟಗಾರ ಎಸ್.ವಿ.ಸುನಿಲ್ ಮತ್ತು ಶೂಟರ್ ಪ್ರಕಾಶ್ ನಂಜಪ್ಪ ಅವರಿಗೆ 2017ನೇ ಸಾಲಿನ ಅರ್ಜುನ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ 5 ಲಕ್ಷ ನಗದು ಒಳಗೊಂಡಿದೆ.
Question 4 |
4. ಇತ್ತೀಚೆಗೆ ಸುದ್ದಿಯಲ್ಲಿದ್ದ ಹಾಕ್-ಐ ಯುದ್ದ ವಿಮಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
I) ಹಾಕ್-ಐ ಪೈಲಟ್ ತರಭೇತಿ ಯುದ್ದ ವಿಮಾನವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಿರ್ಮಿಸಿದೆ
II) ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ರವರು ಬೆಂಗಳೂರಿನಲ್ಲಿ ಹಾಕ್-ಐ ಲೋಕಾರ್ಪಣೆ ಮಾಡಿದರು
III) ಇದು ಬ್ರಿಟನ್ ನ ಹಾಕ್-132 ಯುದ್ಧ ವಿಮಾನಗಳ ಅವತರಣಿಕೆಯಾಗಿದ್ದು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
I & II | |
II & III | |
I & III | |
I, II & III |
ಹಾಕ್-ಐ ಪೈಲಟ್ ತರಭೇತಿ ಯುದ್ದ ವಿಮಾನವನ್ನು ಕೇಂದ್ರ ಸರಕಾರಿ ಸ್ವಾಮ್ಯದ ಹಿಂದೂಸ್ತಾನ್ ಎರೋನಾಟಿಕ್ ಲಿ.ನ (ಎಚ್ಎಲ್) ನಿರ್ಮಿಸಿದೆ. ಹಾಕ್-ಐ ಪೈಲಟ್ ತರಬೇತಿ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ದೇಶಕ್ಕೆ ಸಮರ್ಪಿಸಿದರು. ಇದು ಹಾಕ್-132 ಯುದ್ಧ ವಿಮಾನಗಳ ದೇಶೀಯ ಅವತರಣಿಕೆ. ಬ್ರಿಟನ್ ನಲ್ಲಿ ನಿರ್ಮಾಣಗೊಳ್ಳುವ ಹಾಕ್-132 ಯುದ್ಧ ವಿಮಾನಗಳನ್ನು ಭಾರತ ತಂತ್ರಜ್ಞಾನ ಹಸ್ತಾಂತರ ಒಪ್ಪಂದ ಮೂಲಕ ಖರೀದಿಗೆ ಮುಂದಾಗಿತ್ತು. ಮೊದಲ ಹಂತರ ವಿಮಾನಗಳನ್ನು ಬ್ರಿಟನ್ ನ ಬಿಎಇ ಸಿಸ್ಟಮ್ಸ್ ನಿಂದ ನೇರವಾಗಿ ಭಾರತ ಖರೀದಿ ಮಾಡಿತ್ತು.
Question 5 |
5. ಈ ಕೆಳಗಿನ ಯಾರು ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
ಎನ್ ಆರ್ ನಾರಾಯಣ ಮೂರ್ತಿ | |
ಸುಧಾ ಮೂರ್ತಿ | |
ನಂದನ್ ನಿಲೇಕಣಿ | |
ಕ್ರಿಸ್ ಗೋಪಾಲನ್ |
ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಮಾಜಿ ಸಿಇಒ ಮತ್ತು ಸಹ ಸಂಸ್ಥಾಪಕರಾಗಿದ್ದ ನಂದನ್ ನಿಲೇಕಣಿ ಅವರು ಹೊಸ ಅಧ್ಯಕ್ಷರಾಗಿ ಇನ್ಫೋಸಿಸ್ ಗೆ ಹಿಂದಿರುಗಿದ್ದಾರೆ. ಸಿಇಒ ಹುದ್ದೆಗೆ ರಾಜೀನಾಮೆ ನೀಡಿ ಹೊಸದಾಗಿ ಸೃಷ್ಟಿಸಿದ್ದ ಉಪಾಧ್ಯಕ್ಷ ಹುದ್ದೆಯನ್ನು ತಾತ್ಕಾಲಿಕವಾಗಿ ವಹಿಸಿಕೊಂಡಿದ್ದ ವಿಶಾಲ್ ಸಿಕ್ಕಾ ಅವರು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.
Question 6 |
6. ಯಾವ ಸಂಸ್ಥೆ ಮಂಗಳೂರು ಪೋರ್ಟ್ ಟ್ರಸ್ಟ್ (ನವ ಮಂಗಳೂರು ಬಂದರು ಟ್ರಸ್ಟ್-ಎನ್ಎಂಪಿಟಿ) ನಲ್ಲಿ 4 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ?
ಟಾಟಾ ಪವರ್ಸ್ | |
ಬಾಷ್ | |
ರಿಲಾಯನ್ಸ್ | |
ಆದಾನಿ |
ಬಾಷ್ ಸಂಸ್ಥೆ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ನವ ಮಂಗಳೂರು ಬಂದರು ಟ್ರಸ್ಟ್-ಎನ್ಎಂಪಿಟಿ) ಯಲ್ಲಿ 4 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಭಾರತದಲ್ಲಿರುವ ಬಾಷ್ಎನರ್ಜಿ ಅಂಡ್ ಬಿಲ್ಡಿಂಗ್ ಸಲೂಶನ್ಸ್ (ಬಿಇಬಿಎಸ್) ತಂಡ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಸುಮಾರು 18 ಎಕರೆ ಪ್ರದೇಶದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಘಟಕದಿಂದ ಪ್ರತಿದಿನ 20,000 ಯೂನಿಟ್ಗಳಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ. ಅಂದರೆ, ನಗರ ಪ್ರದೇಶದ ಸುಮಾರು 5,000 ಮನೆಗಳಿಗೆ ಬಳಸುವ ವಿದ್ಯುತ್ಗೆ ಸಮನಾದ ವಿದ್ಯುತ್ತನ್ನು ಉತ್ಪಾದಿಸುತ್ತದೆ.
Question 7 |
7. ಈ ಕೆಳಗಿನ ಯಾವ ರಾಜಕೀಯ ಪಕ್ಷ ಇತ್ತೀಚೆಗೆ ರಾಜ್ಯದಲ್ಲಿ “ಮಿಷನ್ 5000” ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ?
ಜೆಡಿಎಸ್ | |
ಬಿಜೆಪಿ | |
ಎಎಪಿ | |
ಕಾಂಗ್ರೆಸ್ |
ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ “ಮಿಷನ್ 5000” ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಿದೆ. ಸ್ಥಳೀಯರನ್ನೇ ಗುರುತಿಸಿ, ಸ್ಥಳೀಯ ನಾಯಕರನ್ನಾಗಿ ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Question 8 |
8. ಪ್ಯಾರಿಸ್ ಆಫ್ ಪ್ಲಾಸ್ಟರ್ ಗಣೇಶ ಮೂರ್ತಿಯ ನಿಷೇಧ ಇತ್ತೀಚೆಗೆ ಸುದ್ದಿಯಲ್ಲಿದೆ. ಪ್ಯಾರಿಸ್ ಆಫ್ ಪ್ಲಾಸ್ಟರ್ ನ ರಾಸಾಯನಿಕ ಹೆಸರು ಮತ್ತು ಸೂತ್ರವೇನು?
ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್, CaSO4 1/2H20 | |
ಮೆಗ್ನೀಷಿಯಂ ಸಲ್ಪೇಟ್ ಹೈಡ್ರಾಕ್ಸೆಡ್, MgSO4 H20 | |
ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಹೆಮಿಹೈಡ್ರೇಟ್ CaHO H20 | |
ಮೇಲಿನ ಯಾವುದು ಅಲ್ಲಾ |
Question 9 |
9. ಇತ್ತೀಚೆಗೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್ ಮೂಲದ ನರೀಷ್ (Nourish) ಸಂಸ್ಥೆ ಈ ಕೆಳಗಿನ ಯಾವುದರ ಸಂಸ್ಕರಣೆಗೆ ಒಪ್ಪಂದಕ್ಕೆ ಸಹಿ ಹಾಕಿವೆ?
ಸಿಹಿ ಗೆಣಸು | |
ಬ್ಯಾಡಗಿ ಮೆಣಸಿನಕಾಯಿ | |
ಮಾವು | |
ಗೋಡಂಬಿ |
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್ ಮೂಲದ ನರೀಷ್ (Nourish) ಸಂಸ್ಥೆ ಸಿಹಿ ಗೆಣಸು ಸಂಸ್ಕರಣೆಗೆ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದಡಿ ರೂ 11 ಕೋಟಿ ವೆಚ್ಚದಲ್ಲಿ ಸಿಹಿ ಗೆಣಸು ಸಂಸ್ಕರಣೆ ಘಟಕವನ್ನು ನಿರ್ಮಿಸಲಾಗುವುದು.
Question 10 |
10. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
I) ಉಳ್ಳಾಲ ಶ್ರೀನಿವಾಸ್ ಮಲ್ಯ ರವರನ್ನು ಮಂಗಳೂರಿನ ವಾಸ್ತುಶಿಲ್ಪಿ ಎಂದೇ ಕರೆಯಲಾಗುತ್ತದೆ
II) ಮಂಗಳೂರು ನಗರ ಪಾಲಿಕೆ ಮಲ್ಯ ರವರ ಸ್ಮರಣಾರ್ಥ ರೂ 2 ಲಕ್ಷ ಮೊತ್ತದ ಪ್ರಶಸ್ತಿಯನ್ನು ಸ್ಥಾಪಿಸಲು ನಿರ್ಧರಿಸಿದೆ
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ಮಂಗಳೂರು ನಗರ ಪಾಲಿಕೆ ಉಳ್ಳಾಲ ಶ್ರೀನಿವಾಸ್ ಮಲ್ಯ ರವರ ಸ್ಮರಣಾರ್ಥ ರೂ 2 ಲಕ್ಷ ಮೊತ್ತದ ಪ್ರಶಸ್ತಿಯನ್ನು ಸ್ಥಾಪಿಸಲು ನಿರ್ಧರಿಸಿದೆ, ಮಲ್ಯ ಅವರನ್ನು ಮಂಗಳೂರಿನ ನಿರ್ಮಾತ ಎಂತಲೇ ಕರೆಯಲಾಗುತ್ತದೆ. ನವೆಂಬರ್ 21 ರಂದು ಮಲ್ಯ ಅವರ ಜನ್ಮದಿನದಂದು ಪ್ರಶಸ್ತಿಯನ್ನು ನೀಡಲಾಗುವುದು. ಯು.ಎಸ್. ಮಲ್ಯ ಅವರು ನವ ಮಂಗಳೂರು ಬಂದರು, ಬಜಪೆಯ ವಿಮಾನ ನಿಲ್ದಾಣ ಮತ್ತು ನೆತ್ರಾವತಿ ನದಿ ಸೇತುವೆ, ಸುರತ್ಕಲ್ನಲ್ಲಿ ಎಂಜನಿಯರಿಂಗ್ ಕಾಲೇಜು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.
[button link=”http://www.karunaduexams.com/wp-content/uploads/2017/08/ರಾಜ್ಯ-ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-30.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Super sir
Nice