ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,24,25,26,2017
Question 1 |
1. 2017 ಯುಎಸ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?
ಪಿ ಕಶ್ಯಪ್ | |
ಹೆಚ್ ಎಸ್ ಪ್ರಣಯ್ | |
ಸುಮೀತ್ ರೆಡ್ಡಿ | |
ಬಿ ಸಾಯಿ ಪ್ರಣೀತ್ |
ಕ್ಯಾಲಿಫೋರ್ನಿಯಾದ ಅನಾಹೈಮ್ನಲ್ಲಿ ನಡೆದ 2017 ಯುಎಸ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ಅವರು 21-15, 20-22, 21-12ರಿಂದ ಫೈನಲ್ನಲ್ಲಿ ಕಶ್ಯಪ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.
Question 2 |
2. 2017 ನ್ಯಾಷನಲ್ ಬ್ರಾಡ್ಕಾಸ್ಟಿಂಗ್ ಡೇ (ಎನ್ಬಿಡಿ) ಅನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಜುಲೈ 21 | |
ಜುಲೈ 22 | |
ಜುಲೈ 23 | |
ಜುಲೈ 24 |
ಜುಲೈ 23 ರಂದು ರಾಷ್ಟ್ರೀಯ ಬ್ರಾಡ್ಕಾಸ್ಟಿಂಗ್ ಡೇ (ಎನ್ಬಿಡಿ) ಅನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು 1927ರಲ್ಲಿ, ರೇಡಿಯೋ ಪ್ರಸಾರವನ್ನು ಭಾರತದಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ ಮೊದಲ ಬಾರಿಗೆ ರೇಡಿಯೊ ಪ್ರಸಾರವು ಬಾಂಬೆ ಸ್ಟೇಷನ್ ನಿಂದ ಜುಲೈ 23, 1927 ರಂದು ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಂಪನಿ (ಐಬಿಸಿ) ಎಂಬ ಖಾಸಗಿ ಕಂಪನಿಯಿಂದ ಪ್ರಸಾರವಾಯಿತು. ಇದು ಬ್ರಿಟಿಷ್ ವೈಸರಾಯ್ ಲಾರ್ಡ್ ಇರ್ವಿನ್ ಅವರಿಂದ ಆರಂಭಗೊಂಡಿತು. ಜೂನ್ 8, 1936 ರಂದು, ಇಂಡಿಯನ್ ಸ್ಟೇಟ್ ಬ್ರಾಡ್ಕಾಸ್ಟಿಂಗ್ ಸರ್ವಿಸ್ ಅಖಿಲ ಭಾರತ ರೇಡಿಯೋ (ಎಐಆರ್) ಆಯಿತು.
Question 3 |
3. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್. ರಾವ್ ಇತ್ತೀಚೆಗೆ ನಿಧನರಾದರು. ರಾವ್ ಅವರು ಈ ಕೆಳಗಿನ ಯಾವ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು?
ISRO | |
BARC | |
DRDO | |
VSSC |
ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್. ರಾವ್ ಅವರು ನಿಧನರಾಗಿದ್ದಾರೆ. ಭಾರತೀಯ ಭಾಹ್ಯಾಕಾಶ ಸಂಶೋಧನಾ ಕೇಂದ್ರದ ಸಾಧನೆಗಳಿಗೆ ಅವಿರತ ಶ್ರಮದ ಮೂಲಕ ಅಡಿಪಾಯ ಹಾಕಿದ ವಿಜ್ಞಾನಿ ಪ್ರೊ.ಯು.ಆರ್. ರಾವ್ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಅದಮಾರು ಗ್ರಾಮ. ಬಾಹ್ಯಾಕಾಶ ಶಾಸ್ತ್ರ ಮತ್ತು ಉಪಗ್ರಹ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತಿ ಗಳಿಸಿದ್ದ ರಾವ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.ಪ್ರೊ.ಯು.ಆರ್.ರಾವ್ ಅವರು ಪ್ರತಿಷ್ಠಿತ ‘ಐಎಎಫ್ ಹಾಲ್ ಆಫ್ ಫೇಮ್’ ಸೇರ್ಪಡೆ ಗೌರವಕ್ಕೆ ಪಾತ್ರರಾಗಿದ್ದರು. ಇಂಟರ್ನ್ಯಾಷನಲ್ ಏರೋನಾಟಿಕಲ್ ಫೆಡರೇಷನ್ (ಐಎಎಫ್) ನೀಡುವ ಈ ಗೌರವ ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು.
Question 4 |
4. 2021ರಲ್ಲಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್ ಅನ್ನು ಯಾವ ದೇಶ ಆಯೋಜಿಸಲಿದೆ?
ಭಾರತ | |
ಪಾಕಿಸ್ತಾನ | |
ಚೀನಾ | |
ರಷ್ಯಾ |
2021 ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಹಾಗೂ 2018 ಮಹಿಳಾ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ಷಿಪ್ ಭಾರತದಲ್ಲಿ ನಡೆಯಲಿವೆ. ಇತ್ತೀಚೆಗೆ ರಷ್ಯಾದ ಮಾಸ್ಕೋದಲ್ಲಿ ನಡೆದ ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ಕಾರ್ಯನಿರ್ವಾಹಕ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ಪ್ರಕಟಿಸಿಲಾಗಿದೆ. ಇದೆ ಮೊದಲ ಬಾರಿಗೆ ಪುರುಷರ ವಿಶ್ವ ಚ್ಯಾಂಪಿಯನ್ಶಿಪ್ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ.
Question 5 |
5. ಅಸಮಾನತೆಯನ್ನು ಕಡಿಮೆಗೊಳಿಸುವ ಹೊಸ ಜಾಗತಿಕ ಬದ್ದತೆ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?
123 | |
132 | |
145 | |
133 |
ಅಂತಾರಾಷ್ಟ್ರೀಯ ಎನ್ಜಿಒ ಆಕ್ಸ್ಫ್ಯಾಮ್ ಮತ್ತು ಡೆವಲಪ್ಮೆಂಟ್ ಫೈನಾನ್ಸ್ ಇಂಟರ್ನ್ಯಾಷನಲ್ (ಡಿಎಫ್ಐ) ಸಿದ್ಧಪಡಿಸಿದ ಅಸಮಾನತೆ (ಸಿಆರ್ಐ) ಕಡಿಮೆಗೊಳಿಸಲು ಹೊಸ ಜಾಗತಿಕ ಬದ್ಧತೆ ಸೂಚ್ಯಂಕದಲ್ಲಿ 152 ರಾಷ್ಟ್ರಗಳಲ್ಲಿ ಭಾರತ 132 ನೇ ಸ್ಥಾನ ಪಡೆದಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಸರ್ಕಾರಗಳು ಯಾವ ಕ್ರಮಗಳನ್ನು ಕೈಗೊಂಡಿವೆ ಎಂಬುದನ್ನು ಆಧರಿಸಿ ಸೂಚ್ಯಂಕವನ್ನು ತಯಾರಿಸಲಾಗಿದೆ. CRI ಸೂಚ್ಯಂಕವನ್ನು ಜನಪರ ಕಲ್ಯಾಣಕ್ಕಾಗಿ ಮಾಡಲಾದ ಖರ್ಚು, ತೆರಿಗೆ ವ್ಯವಸ್ಥೆಯ ಪ್ರಗತಿಶೀಲ ಸ್ವರೂಪ ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ವೇತನ ಅಸಮಾನತೆಯ ಆಧಾರದ ಮೇಲೆ ರಾಷ್ಟ್ರಗಳಿಗೆ ಸ್ಥಾನಮಾನವನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಸ್ವೀಡನ್, ಅಗ್ರಸ್ಥಾನದಲ್ಲಿದೆ, ಬೆಲ್ಜಿಯಂ, ಡೆನ್ಮಾರ್ಕ್, ನಾರ್ವೆ, ಜರ್ಮನಿ ಮತ್ತು ಫಿನ್ಲ್ಯಾಂಡ್ ನಂತರದ ಸ್ಥಾನದಲ್ಲಿವೆ.
Question 6 |
6. ಈ ಕೆಳಗಿನ ಯಾವ ಮೆಟ್ರೋ ತನ್ನದೇ ಆದ FM ರೇಡಿಯೊ ಸ್ಟೇಷನ್ ಹೊಂದಿರಲಿರುವ ದೇಶದ ಮೊದಲ ಮೆಟ್ರೋ ಎನಿಸಲಿದೆ?
ಲಕ್ನೋ ಮೆಟ್ರೋ | |
ಮುಂಬೈ ಮೆಟ್ರೋ | |
ಬೆಂಗಳೂರು ಮೆಟ್ರೋ | |
ಕೊಚ್ಚಿ ಮೆಟ್ರೋ |
ಮೆಟ್ರೊ ಸುರಕ್ಷತೆ ಮತ್ತು ಮಂಡಳಿಯ ಮನೋರಂಜನೆಯ ಬಗ್ಗೆ ಮಾಹಿತಿಯನ್ನು ಒದಗಿಸಲು ಖಾಸಗಿ FM ರೇಡಿಯೊ ಕೇಂದ್ರದೊಂದಿಗೆ ಸಹಯೋಗದೊಂದಿಗೆ ಲಕ್ನೋ ಮೆಟ್ರೋ ತನ್ನ ಸ್ವಂತ ಎಫ್ಎಂ ರೇಡಿಯೊ ಸ್ಟೇಷನ್ ಹೊಂದಿರುವ ಭಾರತದ ಮೊದಲ ಮೆಟ್ರೋ ಎನಿಸಲಿದೆ.
Question 7 |
7. ಇತ್ತೀಚೆಗೆ ನಿಧನರಾದ ಪ್ರೊಫೆಸರ್ ಯಶ್ ಪಾಲ್ ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದ ವಿಜ್ಞಾನಿ ಎನಿಸಿದ್ದರು?
ಭೌತಶಾಸ್ತ್ರ | |
ರಾಸಾಯನ ಶಾಸ್ತ್ರ | |
ವೈದ್ಯಕೀಯ | |
ಜೀವಶಾಸ್ತ್ರ |
ದೇಶದ ಖ್ಯಾತ ಭೌತ ವಿಜ್ಞಾನಿ ಹಾಗೂ ಪದ್ಮವಿಭೂಷಣ ಪುರಸ್ಕೃತ ಶಿಕ್ಷಣ ತಜ್ಞ ಪ್ರೊ. ಯಶ್ ಪಾಲ್ (90) ವಿಧಿವಶರಾಗಿದ್ದಾರೆ. ಕಾಸ್ಮಿಕ್ ಕಿರಣಗಳ ಅಧ್ಯಯನದಲ್ಲಿ ಅವರ ಕೊಡುಗೆ ಅಪಾರ. ಪ್ರಾಧ್ಯಾಪಕ ಯಶ್ ಪಾಲ್ ಯೋಜನಾ ಆಯೋಗದ ಮುಖ್ಯ ಸಲಹೆಗಾರರಾಗಿದ್ದರು. ಅವರು 1984 ರಿಂದ 1986 ರವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ವಿಶ್ವವಿದ್ಯಾನಿಲಯ ಧನಸಹಾಯದ ಆಯೋಗದ ಅಧ್ಯಕ್ಷರಾಗಿ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಚಾನ್ಸೆಲರ್ ಆಗಿ ಸೇವೆ ಸಲ್ಲಿಸಿದರು. ವಿಜ್ಞಾನ ಕ್ಷೇತ್ರಕ್ಕೆ ಪಾಲ್ ಅವರ ಕೊಡುಗೆಗಾಗಿ ಸರ್ಕಾರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮ ವಿಭೂಷಣ’ ನೀಡಿ ಗೌರವಿಸಿತ್ತು.
Question 8 |
8. 2017 ಬ್ರಿಕ್ಸ್ ಯುವ ವೇದಿಕೆ (Youth Summit) ಯಾವ ದೇಶದಲ್ಲಿ ನಡೆಯಲಿದೆ?
ಭಾರತ | |
ಬ್ರೆಜಿಲ್ | |
ಚೀನಾ | |
ರಷ್ಯಾ |
ರಂದು ಚೀನಾದ ಬೀಜಿಂಗ್ನಲ್ಲಿ ಬ್ರಿಕ್ಸ್ ಯೂತ್ ಫೋರಮ್ (ಬಿವೈಎಫ್) ಜುಲೈ 25, 2017 ರಂದು ಆರಂಭವಾಗಿದೆ. 3 ದಿನಗಳ ಫೋರಂನ ವಿಷಯ 'ಬ್ರಿಕ್ಸ್ ಪಾಲುದಾರಿಕೆಯನ್ನು ವರ್ಧಿಸಿ, ಯುವ ಅಭಿವೃದ್ಧಿಗೆ ಉತ್ತೇಜನ ನೀಡಿ'.
Question 9 |
9. ಇತ್ತೀಚೆಗೆ ಯಾವ ದೇಶ ಐಎಮ್ಎಫ್ ಮತ್ತು ವಿಶ್ವ ಬ್ಯಾಂಕ್ (ಡಬ್ಲ್ಯೂಬಿ) ನಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದೆ?
ಬೊಲಿವಿಯಾ | |
ಪೆರು | |
ಟರ್ಕಿ | |
ಉತ್ತರ ಕೊರಿಯ |
ಬೊಲಿವಿಯಾದ ಅಧ್ಯಕ್ಷ ಇವೊ ಮೊರೇಲ್ಸ್ ಇತ್ತೀಚೆಗೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಮತ್ತು ವಿಶ್ವ ಬ್ಯಾಂಕಿನಿಂದ ತನ್ನ ಸರಕಾರದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದ್ದಾರೆ.
Question 10 |
10. ಹೊಸದಾಗಿ ರಚನೆಯಾದ “ದ್ವೀಪಗಳ ಅಭಿವೃದ್ಧಿ ಏಜೆನ್ಸಿ (ಐಡಿಎ)” ಯ ಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರ ಸಚಿವರು ಯಾರು?
ರಾಜನಾಥ್ ಸಿಂಗ್ | |
ಅರುಣ್ ಜೇಟ್ಲಿ | |
ನರೇಂದ್ರ ಸಿಂಗ್ ತೋಮರ್ | |
ಸುಷ್ಮಾ ಸ್ವರಾಜ್ |
2017 ಜುಲೈ 24 ರಂದು ಹೊಸದಾಗಿ ರಚನೆಯಾದ ದ್ವೀಪಗಳ ಅಭಿವೃದ್ಧಿ ಸಂಸ್ಥೆ (ಐಡಿಎ) ಯ ಮೊದಲ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಹಿಸಿದ್ದರು. ವಿವರವಾದ ಸಮಾಲೋಚನೆಗಳ ನಂತರ ಹತ್ತು ದ್ವೀಪ ಪ್ರದೇಶಗಳು ಅವುಗಳೆಂದರೆ ಅಂಡಮಾನ್ ಮತ್ತು ನಿಕೋಬಾರ್ ಸ್ಮಿತ್, ರಾಸ್, ಏವ್ಸ್, ಲಾಂಗ್ ಮತ್ತು ಲಿಟಲ್ ಅಂಡಮಾನ್ ಮತ್ತು ಲಕ್ಷದ್ವೀಪದಲ್ಲಿ ಬಂಗಾರಮ್, ಸುಹೆಲಿ, ಚೆರಿಯಂ ಮತ್ತು ತಿನ್ನಕರ ಮೊದಲಾದವು ಮೊದಲ ಹಂತದ ಸಮಗ್ರ ಬೆಳವಣಿಗೆಗೆ ಗುರುತಿಸಲ್ಪಟ್ಟವು. ದ್ವೀಪಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಯ ವಿಮರ್ಶೆ ಸಭೆಯ ನಂತರ ಜೂನ್ 1, 2017 ರಂದು IDA ಸ್ಥಾಪಿಸಲಾಯಿತು.
[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ2425262017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
Very important thank you please keep it up.