ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,30,31,2017
Question 1 |
1. ಯಾವ ರಾಜ್ಯ ಇತ್ತೀಚೆಗೆ "ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ (CCP)" ಅನ್ನು ಜಾರಿಗೆ ತಂದಿದೆ?
ಪಂಜಾಬ್ | |
ಅರುಣಾಚಲ ಪ್ರದೇಶ | |
ಸಿಕ್ಕಿಂ | |
ಜಾರ್ಖಂಡ್ |
ರೋಗಿಗಳ ಉತ್ತಮ ಆರೈಕೆಯ ಬಗ್ಗೆ ರೋಗಿಗಳ ಕುಟುಂಬ ಸದಸ್ಯರಿಗೆ ಅರಿವು ನೀಡಲು ಪಂಜಾಬ್ ಸರ್ಕಾರ ತನ್ನ ಪ್ರಮುಖ ಆರೋಗ್ಯ ಯೋಜನೆಯಾದ "ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ (CCP)" ಅನ್ನು ಪ್ರಾರಂಭಿಸಿದೆ. ಉತ್ತಮ ಕುಟುಂಬ ನಿರ್ವಹಣೆ ಜಾರಿಗೆ ತರುವ ಮೂಲಕ ರೋಗಿಯ ಫಲಿತಾಂಶಗಳನ್ನು ಸುಧಾರಿಸುವುದು CCP ಯೋಜನೆಯ ಗುರಿಯಾಗಿದೆ.
Question 2 |
2. ಈ ಕೆಳಗಿನ ಯಾವ ದೇಶ ಸಾರ್ಕ್ ಕಲಾವಿದರ ಕ್ಯಾಂಪ್ ಮತ್ತು ವರ್ಣಚಿತ್ರಗಳ ಪ್ರದರ್ಶನದ 7 ನೇ ಆವೃತ್ತಿಯಲ್ಲಿ ಭಾಗವಹಿಸುತ್ತಿಲ್ಲ?
ಪಾಕಿಸ್ತಾನ | |
ಬಾಂಗ್ಲದೇಶ | |
ಅಫ್ಘಾನಿಸ್ತಾನ | |
ಶ್ರೀಲಂಕಾ |
ರಾಷ್ಟ್ರಗಳ ಕಲಾವಿದರ ಕ್ಯಾಂಪ್ ಮತ್ತು ವರ್ಣಚಿತ್ರಗಳ ಪ್ರದರ್ಶನದ 7ನೇ ನೇಪಾಳದ ಕಠ್ಮಂಡುವಿನಲ್ಲಿ ಜುಲೈ 28, 2017 ರಿಂದ ನಡೆಯಲಿದೆ. ಅಫ್ಘಾನಿಸ್ತಾನವನ್ನು ಹೊರತುಪಡಿಸಿ ಸಾರ್ಕ್ ಸದಸ್ಯ ರಾಷ್ಟ್ರಗಳ 40 ಕ್ಕೂ ಹೆಚ್ಚು ಕಲಾವಿದರು 4 ದಿನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ಕ್ ಸದಸ್ಯ ರಾಷ್ಟ್ರಗಳ ಕಲೆ ಮತ್ತು ಸಂಸ್ಕೃತಿಗಳನ್ನು ಒಟ್ಟಿಗೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
Question 3 |
3. ಕೆನರಾ ಬ್ಯಾಂಕ್ ತನ್ನ ಮೊದಲ ಡಿಜಿಟಲ್ ಬ್ಯಾಂಕಿಂಗ್ ಶಾಖೆ "CANDI" ಅನ್ನು ಯಾವ ನಗರದಲ್ಲಿ ಪ್ರಾರಂಭಿಸಿದೆ?
ಮೈಸೂರು | |
ಪುಣೆ | |
ಹೈದ್ರಾಬಾದ್ | |
ಬೆಂಗಳೂರು |
ಕೆನರಾ ಬ್ಯಾಂಕ್ ತನ್ನ ಮೊದಲ ಡಿಜಿಟಲ್ ಬ್ಯಾಂಕಿಂಗ್ ಶಾಖೆ "CANDI" ಅನ್ನು ಬೆಂಗಳೂರಿನ ಎಂ.ಜಿ ರೋಡ್ನಲ್ಲಿ ಸ್ಪೆನ್ಸರ್ ಟವರ್ಸ್ನಲ್ಲಿ ಪ್ರಾರಂಭಿಸಿದೆ. ಗ್ರಾಹಕರಿಗೆ ಡಿಜಿಟಲ್ ಅನುಭವವನ್ನು ಒದಗಿಸುವುದು ಇದರ ಉದ್ದೇಶ. ಡಿಜಿಟಲ್ ಕಾರ್ಯಾಚರಣೆಯ ಭಾಗವಾಗಿ, ಬ್ಯಾಂಕ್ ಗ್ರಾಹಕರ ಸ್ನೇಹಿ ಮೊಬೈಲ್ ಅಪ್ಲಿಕೇಶನ್ಗಳನ್ನು ಪರಿಚಯಿಸಿದೆ, ಇದರಿಂದ ಗ್ರಾಹಕರು ಬ್ಯಾಂಕಿಗೆ ಭೇಟಿ ಮಾಡದೆಯೇ ತಮ್ಮ ಖಾತೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯ ಆಗಲಿದೆ. ಡಿಜಿಟಲ್ ಶಾಖೆಯ ಅತ್ಯಂತ ಆಕರ್ಷಣೀಯ ವೈಶಿಷ್ಟ್ಯವೆಂದರೆ ಹುಮನಾಯ್ಡ್ ರೋಬೋಟ್. ಇದು ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಗ್ರಾಹಕರ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಸಲಿದೆ. ಇದು ದೇಶದ ಸಾರ್ವಜನಿಕ ವಲಯದ ಬ್ಯಾಂಕ್ನಿಂದ ಮೊದಲ-ಅದರ-ರೀತಿಯ ಉಪಕ್ರಮವಾಗಿದೆ.
Question 4 |
4. ಈ ಕೆಳಗಿನ ಯಾವ ದೇಶ 2018 ಏಷ್ಯನ್ ಫುಟ್ಬಾಲ್ ಒಕ್ಕೂಟ (AFC) U-19 ಚಾಂಪಿಯನ್ಷಿಪ್ ಆತಿಥ್ಯವನ್ನು ವಹಿಸಲಿದೆ?
ಇಂಡೋನೇಷಿಯಾ | |
ಶ್ರೀಲಂಕಾ | |
ನೇಪಾಳ | |
ಬಾಂಗ್ಲದೇಶ |
2018 ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್ಸಿ) ಯು -19 ಚಾಂಪಿಯನ್ಸಿಪ್ ಆತಿಥ್ಯವನ್ನು ಇಂಡೋನೇಷ್ಯಾ ವಹಿಸಲಿದೆ. ಅಕ್ಟೋಬರ್ 18 ರಿಂದ ನವೆಂಬರ್ 4, 2018 ರವರೆಗೆ ಈ ಚಾಂಪಿಯನ್ಷಿಪ್ ನಡೆಯಲಿದೆ.
Question 5 |
5. ವಿಶ್ವದ ಮೊದಲ ಸಂಪೂರ್ಣ ಹಸಿರು ಮೆಟ್ರೋ ವ್ಯವಸ್ಥೆಯನ್ನು ಹೊಂದಿರುವ ಭಾರತದ ಮೆಟ್ರೊ ಯಾವುದು?
ದೆಹಲಿ ಮೆಟ್ರೋ | |
ಕೊಲ್ಕತ್ತಾ ಮೆಟ್ರೋ | |
ಬೆಂಗಳೂರು ಮೆಟ್ರೋ | |
ಕೊಚ್ಚಿ ಮೆಟ್ರೋ |
ದೆಹಲಿ ಮೆಟ್ರೋ ತನ್ನ ವಸತಿ ಕಾಲೋನಿಗಳಲ್ಲಿ ಹಸಿರು ಕಟ್ಟಡದ ನಿಯಮಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವದ ಮೊಟ್ಟಮೊದಲ 'ಹಸಿರು' ಮೆಟ್ರೋ ವ್ಯವಸ್ಥೆಯಾಗಿದೆ.
Question 6 |
6. ಅಂತಾರಾಷ್ಟ್ರೀಯ ಹುಲಿ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಜುಲೈ 27 | |
ಜುಲೈ 28 | |
ಜುಲೈ 29 | |
ಜುಲೈ 30 |
ಅಂತಾರಾಷ್ಟ್ರೀಯ ಹುಲಿ ದಿನವನ್ನು ಜುಲೈ 29 ರಂದು ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ದಿನವನ್ನು ಗ್ಲೋಬಲ್ ಟೈಗರ್ ಡೇ (ಜಿಟಿಡಿ) ಎಂದು ಕರೆಯಲಾಗುತ್ತದೆ. ವಿಶ್ವ ವನ್ಯಜೀವಿ ನಿಧಿಯ(WWF) ಪ್ರಕಾರ ಪ್ರಪಂಚದಲ್ಲಿ ಕೇವಲ 3,890 ಹುಲಿಗಳು ಮಾತ್ರ ಇವೆ. ಅವುಗಳಲ್ಲಿ ಭಾರತವು ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿದೆ. ಜುಲೈ 2016ರ ವೇಳೆಗೆ ದೇಶದಲ್ಲಿ 2,500 ಹುಲಿಗಳು ಇವೆ ಎನ್ನಲಾಗಿದೆ.
Question 7 |
7. ಯಾವ ದೇಶ ಇತ್ತೀಚೆಗೆ ಉಪಗ್ರಹ-ಸಾಗಿಸುವ ರಾಕೆಟ್ "ಸಿಮೊರ್ಗ್" ಅನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾಯಿಸಿತು?
ಇರಾನ್ | |
ಇರಾಕ್ | |
ಫ್ರಾನ್ಸ್ | |
ರಷ್ಯಾ |
Question 8 |
8. ಇತ್ತೀಚೆಗೆ "ಜಿಯೋ ಪಾರ್ಸಿ ಪ್ರಚಾರ ಹಂತ -2" ಯೋಜನೆಯನ್ನು ಕೇಂದ್ರ ಸರ್ಕಾರ ಯಾವ ರಾಜ್ಯದಲ್ಲಿ ಪ್ರಾರಂಭಿಸಿದೆ?
ರಾಜಸ್ತಾನ | |
ಗುಜರಾತ್ | |
ಮಹಾರಾಷ್ಟ್ರ | |
ಮಧ್ಯ ಪ್ರದೇಶ |
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಖಾತೆ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರವರು ಮುಂಬೈಯಲ್ಲಿ ಜಿಯೊ ಪಾರ್ಸಿ ಯೋಜನೆಯಡಿ "ಜಿಯೊ ಪಾರ್ಸಿ ಪ್ರಚಾರದ ಹಂತ -2" ಕ್ಕೆ ಚಾಲನೆ ನೀಡಿದರು. "ಜಿಯೊ ಪಾರ್ಸಿ" ಯೋಜನೆ (ಅಥವಾ ಕೇಂದ್ರೀಯ ವಲಯ ಯೋಜನೆ) ಮುಖ್ಯ ಉದ್ದೇಶವೆಂದರೆ ಕ್ಷೀಣಿಸುತ್ತಿರುವ ಪಾರ್ಸಿ ಜನಸಂಖ್ಯೆಯನ್ನು ಸ್ಥಿರಗೊಳಸಿ, ಪಾರ್ಸಿ ಜನಸಂಖ್ಯೆಯನ್ನು ದೇಶದಲ್ಲಿ ಹೆಚ್ಚಿಸುವುದು.
Question 9 |
9. OECD-FAO ಕೃಷಿ ಹೊರನೋಟ 2017-2026 ವರದಿಯ ಪ್ರಕಾರ ವಿಶ್ವದ ಅತಿ ದೊಡ್ಡ ಗೋಮಾಂಸ ರಫ್ತು ಮಾಡುವ ದೇಶ ಯಾವುದು?
ಭಾರತ | |
ಬ್ರೆಜಿಲ್ | |
ರಷ್ಯಾ | |
ಯುಕೆ |
ಇತ್ತೀಚೆಗೆ ಬಿಡುಗಡೆಯಾದ OECD-FAO ಅಗ್ರಿಕಲ್ಚರಲ್ ಔಟ್ಲುಕ್ 2017-2026 ವರದಿಯ ಪ್ರಕಾರ, ಬ್ರೆಜಿಲ್ ಪ್ರಪಂಚದ ಅತಿ ದೊಡ್ಡ ಗೋಮಾಂಸ ರಫ್ತು ದೇಶವೆನಿಸಿದೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಇವೆ. ವರದಿ ಪ್ರಕಾರ, ಭಾರತವು 2016 ರಲ್ಲಿ 1.56 ಮಿಲಿಯನ್ ಟನ್ ಗೋಮಾಂಸ ರಫ್ತು ಮಾಡಿದೆ. 2026ರ ವೇಳೆಗೆ 1.93 ಟನ್ಗಳಷ್ಟು ರಫ್ತು ಮಾಡುವ ಮೂಲಕ 2026 ರಲ್ಲಿ ಇದೇ ಸ್ಥಾನದಲ್ಲಿ ಭಾರತ ಮುಂದುವರೆಯಲಿದೆ ಎಂದು ಅಂದಾಜಿಸಲಾಗಿದೆ.
Question 10 |
10. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
I) ಮುಂತ್ರಾ ಭಾರತದ ಮೊದಲ ಮಾನವರಹಿತ ಟ್ಯಾಂಕ್
II) ಮುಂತ್ರಾ ವನ್ನು ಇಸ್ರೋ ಅಭಿವೃದ್ದಿಪಡಿಸಿದೆ
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಇತ್ತೀಚೆಗೆ ಭಾರತದ ಮೊದಲ ಮಾನವರಹಿತ ಟ್ಯಾಂಕ್ "ಮುಂತ್ರಾ" ಅಭಿವೃದ್ದಿಪಡಿಸಿದೆ. ಈ ಟ್ಯಾಂಕ್ ಮೂರು ಬಗೆಗಳಲ್ಲಿ ಅಭಿವೃದ್ದಿಪಡಿಸಲಾಗಿದೆ. ಗಣಿ ಪತ್ತೆಗೆ ಮುಂತ್ರಾ ಎಮ್, ಕಣ್ಗಾವಲಿಗೆ ಮುಂತ್ರಾ ಎಸ್ ಮತ್ತು 'ಪರಮಾಣು ಮತ್ತು ಜೈವಿಕ-ಬೆದರಿಕೆ ಪ್ರದೇಶಗಳಲ್ಲಿ ಮುಂತ್ರಾ ಎನ್ ಈ ಮೂರು ಬಗೆಯ ಟ್ರಾಂಕ್ ಗಳಾಗಿವೆ.
[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ30312017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment