ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನ-31
Question 1 |
1. ರಾಜ್ಯ ಸರ್ಕಾರದ “ಎಲಿವೇಟ್-100 (Elevate 100)” ಯೋಜನೆಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
ಅ) ನವೋದ್ಯಮಿಗಳಿಗೆ ಉತ್ತೇಜನ ನೀಡಲು ‘ಎಲಿವೇಟ್–100’ ಯೋಜನೆ ಜಾರಿಗೆ ತರಲಾಗಿದೆ
ಆ) ಇದು ರಾಜ್ಯ ಕಾರ್ಮಿಕ ಇಲಾಖೆಯ ಒಂದು ಉಪಕ್ರಮವಾಗಿದೆ
ಇ) ಸಂಪೂರ್ಣವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದಕ್ಕಾಗಿ ರೂ 400 ಕೋಟಿ ಮೀಸಲಿಡಲಾಗಿದೆ.
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ I ಮಾತ್ರ | |
ಹೇಳಿಕೆ II & III ಮಾತ್ರ | |
ಹೇಳಿಕೆ I & III ಮಾತ್ರ | |
ಮೇಲಿನ ಎಲ್ಲವೂ |
ನವೀನ ಆಲೋಚನೆ ಹೊಂದಿರುವ ನವೋದ್ಯಮಿಗಳಿಗೆ ಉತ್ತೇಜನ ನೀಡಲು ‘ಎಲಿವೇಟ್–100’ ಎಂಬ ಯೋಜನೆ ಜಾರಿಗೆ ತರಲಾಗಿದೆ. ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಬಯೋಟೆಕ್ನಾಲಜಿ ಇಲಾಖೆಯು ಎಲಿವೇಟ್ 100 ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಉದ್ಯಮಗಳಿಗೆ ಸಮಗ್ರ ಉದ್ಯಮಶೀಲತೆ ವೇದಿಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ₹ 400 ಕೋಟಿ ಮೀಸಲಿಡಲಾಗಿದೆ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಒದಗಿಸಿದರೆ ಉಳಿದ ನೆರವನ್ನು ಖಾಸಗಿ ಸಂಸ್ಥೆಗಳು ನೀಡಲಿವೆ. 2020ರ ವೇಳೆಗೆ ರಾಜ್ಯದಲ್ಲಿ 20 ಸಾವಿರ ನವೋದ್ಯಮ ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ.
Question 2 |
2. ಈ ಕೆಳಗಿನ ಯಾವ ಇ-ಕಾಮರ್ಸ್ ಸಂಸ್ಥೆ ರಾಜ್ಯದ ಆಯ್ದಾ ನವೋದ್ಯಮಗಳಿಗೆ ಶಿಕ್ಷಣ, ತರಭೇತಿ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ರಾಜ್ಯ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ಅಮೆಜಾನ್ ಇಂಡಿಯಾ | |
ಫ್ಲಿಫ್ ಕಾರ್ಟ್ | |
ಇ-ಬೇ | |
ಸ್ನಾಪ್ ಡೀಲ್ |
ಅಮೆಜಾನ್ ಇಂಡಿಯಾ ರಾಜ್ಯದ ಆಯ್ದಾ ನವೋದ್ಯಮಗಳಿಗೆ ಶಿಕ್ಷಣ, ತರಭೇತಿ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ರಾಜ್ಯ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಬೆಂಗಳೂರಿನಲ್ಲಿ ನಡೆದ “ಎಲಿವೇಟ್-100” ಯೋಜನೆಯ ಕಾರ್ಯಕ್ರಮದಲ್ಲಿ ಈ ಒಪ್ಪಂದಕ್ಕೆ ಸಹಿಹಾಕಲಾಯಿತು.
Question 3 |
3. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
I) ದೇಶದಲ್ಲೆ ಪ್ರಥಮವೆನಿಸಿದ “ಡಿಜಿಟಲ್ ನರ್ವ್ ಸೆಂಟರ್ (DiNC)” ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ
II) ಐಬಿಎಂ ಸಹಯೋಗದೊಂದಿಗೆ “ಡಿಜಿಟಲ್ ನರ್ವ್ ಸೆಂಟರ್”ಅನ್ನು ಸ್ಥಾಪಿಸಲಾಗಿದೆ
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ದೇಶದಲ್ಲೆ ಪ್ರಥಮವೆನಿಸಿದ “ಡಿಜಿಟಲ್ ನರ್ವ್ ಸೆಂಟರ್ (DiNC)” ಅನ್ನು ಕೋಲಾರದಲ್ಲಿ ಸ್ಥಾಪಿಸಲಾಗಿದೆ. ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಈ ಕೇಂದ್ರ ಉದ್ಘಾಟಿಸಿದರು. ಡಿಜಿಟಲ್ ನರ್ವ್ ಸೆಂಟರ್ ಅನ್ನು ಟಾಟಾ ಟ್ರಸ್ಟ್ ಸಹಯೋಗದಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರಕ್ಕೆ ಅಗತ್ಯವಿರುವ ಡಿಜಿಟಲ್ ಸೌಕರ್ಯಗಳನ್ನು ಟಾಟಾ ಟ್ರಸ್ಟ್ ಒದಗಿಸಲಿದೆ.
Question 4 |
4. ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಗಮನಸಿ:
I) ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿಸಿದೆ
II) ತುಮಕೂರು, ಹಾಸನ ಮತ್ತು ಚಿಕ್ಕಮಗಳೂರಿಗೆ ನೀರೊದಗಿಸುವುದು ಯೋಜನೆಯ ಉದ್ದೇಶವಾಗಿದೆ
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿಸಿದೆ. ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ನೀರೊದಗಿಸುವುದು ಯೋಜನೆಯ ಉದ್ದೇಶವಾಗಿದೆ.
Question 5 |
5. ಇತ್ತೀಚೆಗೆ ನಿಧನರಾದ ಧರ್ಮಸಿಂಗ್ ರವರು ಕರ್ನಾಟಕದ ಎಷ್ಟನೇ ಮುಖ್ಯಮಂತ್ರಿ ಆಗಿದ್ದರು?
14 | |
16 | |
17 | |
22 |
ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ರವರು ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ಕಾಂಗ್ರೆಸ್ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. 1960ರಲ್ಲಿ ಗುಲ್ಬರ್ಗ ನಗರ ಪಾಲಿಕೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಧರ್ಮಸಿಂಗ್ 1978ರಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಮೊದಲಬಾರಿಗೆ ಶಾಸಕರಾಗಿ ಹಾರಿಸಿಬಂದರು. ಅಲ್ಲಿಂದ ನಿರಂತರವಾಗಿ ಸತತ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ, 1980 ಹಾಗೂ 2009ರಲ್ಲಿ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ವಿಜೇತರಾಗಿದ್ದರು. ಸಮಾಜ ಕಲ್ಯಾಣ, ಅಬಕಾರಿ, ಗೃಹ, ನಗರಾಭಿವೃದ್ಧಿ, ಕಂದಾಯ ಸೇರಿದಂತೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1990ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಂತಿಮವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬೆಂಬಲ ಧರ್ಮಸಿಂಗ್ ಅವರಿಗೆ ಸಿಕ್ಕಿದ ಪರಿಣಾಮ 2004 ಮೇ 28ರಂದು ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
Question 6 |
6. ಇತ್ತೀಚಗೆ ರ್ನಾಟಕದ ಪಶ್ಚಿಮ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹರಿಯುವ ನೇತ್ರಾವತಿ ನದಿಯ ನೀರನ್ನು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಬಳಸಬಹುದಾದ ಸಾಧ್ಯತಾ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ ಸಲ್ಲಿಸಿದೆ. ಈ ಸಮಿತಿಯ ಅಧ್ಯಕ್ಷರನ್ನು ಗುರುತಿಸಿ?
ಪ್ರೊ. ಟಿ. ಜಿ. ಸೀತಾರಾಮ್ ಸಮಿತಿ | |
ಪ್ರೊ. ಜೆ. ರಾಘವನ್ ಸಮಿತಿ | |
ಪ್ರೊ. ಕಿಶೋರ್ ಕುಮಾರ್ ಸಮಿತಿ | |
ಪ್ರೊ. ರಾಮಚಂದ್ರನ್ ಸಮಿತಿ |
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಟಿ.ಜಿ.ಸೀತಾರಾಮ್ ನೇತೃತ್ವದ ತಜ್ಞರ ತಂಡ ಕರ್ನಾಟಕದ ಪಶ್ಚಿಮ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹರಿಯುವ ನೇತ್ರಾವತಿ ನದಿಯ ನೀರನ್ನು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಬಳಸಬಹುದಾದ ಸಾಧ್ಯತಾ ವರದಿಯನ್ನು ಸಲ್ಲಿಸಿದೆ. ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಅವರಿಗೆ ವರದಿಯನ್ನು ಸಲ್ಲಿಸಿಲಾಯಿತು. ಮಂಗಳೂರಿನಲ್ಲಿರುವ ನದಿಗಳಿಗೆ ಜಲಾಶಯಗಳನ್ನು ನಿರ್ಮಿಸಿದರೆ ಅದನ್ನು ಶುದ್ಧೀಕರಿಸಿ ಬೆಂಗಳೂರಿಗೆ ನೀರು ಪೂರೈಕೆ ಮಾಡಬಹುದು. ಪ್ರತಿ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿಗಳಿಂದ ಸುಮಾರು 240 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತದೆ. ಜಲಾಶಯಗಳನ್ನು ನಿರ್ಮಿಸಿದರೆ ಬೆಂಗಳೂರು ನಗರದ ನಾಗರಿಕರಿಗೆ ಕುಡಿಯಲು ಅಗತ್ಯವಿರುವ ಸರಿಸುಮಾರು 24 ಟಿಎಂಸಿ ನೀರಿನಲ್ಲಿ ಸುಮಾರು 20 ಟಿಎಂಸಿ ನೀರನ್ನು ಸಂಗ್ರಹಿಸಬಹುದು ಮತ್ತು ಮಂಗಳೂರು ನಗರಕ್ಕೆ 2.1 ಟಿಎಂಸಿ ನೀರನ್ನು ಪೂರೈಕೆ ಮಾಡಬಹುದು ಎಂದು ತಜ್ಞರ ತಂಡ ಹೇಳಿದೆ. ಪ್ರೊ.ಸೀತಾರಾಮ್ ಅವರು ಐಐಎಸ್ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ.
Question 7 |
7. ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ “ಸಾರ್ವತ್ರಿಕ ಆರೋಗ್ಯ ಕಾರ್ಡ್” ಯೋಜನೆಯ ಬಗ್ಗೆ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
I) ರಾಜ್ಯದ 1.48 ಕುಟುಂಬಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತ ಆರೋಗ್ಯ ಸೇವೆ ನೀಡುವುದು ಯೋಜನೆಯ ಉದ್ದೇಶ
II) ರಾಜ್ಯ ಮತ್ತು ಕೇಂದ್ರ ಸರ್ಕಾರದ ಏಳು ಪ್ರಮುಖ ಆರೋಗ್ಯ ಯೋಜನೆಗಳನ್ನು ಸಾರ್ವತ್ರಿಕ ಆರೋಗ್ಯ ಕಾರ್ಡ್ ವ್ಯಾಪ್ತಿಯಡಿ ತರಲಾಗುವುದು
III) ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬ ₹ 300 ಮತ್ತು ನಗರ ಪ್ರದೇಶದ ಪ್ರತಿ ಕುಟುಂಬ ₹700 ಪಾವತಿ ಮಾಡಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದು
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
I & II | |
II & III | |
I & III | |
I, II & III |
ರಾಜ್ಯದ 1.48 ಕೋಟಿ ಕುಟುಂಬಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ನೀಡುವ ‘ಸಾರ್ವತ್ರಿಕ ಆರೋಗ್ಯ ಕಾರ್ಡ್’ ಯೋಜನೆಯನ್ನು ರಾಜ್ಯ ಸರ್ಕಾರ ನವೆಂಬರ್ 1 ರಿಂದ ಜಾರಿಗೆ ತರಲಿದೆ. ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಏಳು ಪ್ರಮುಖ ಆರೋಗ್ಯ ಯೋಜನೆಗಳನ್ನು ಸಾರ್ವತ್ರಿಕ ಆರೋಗ್ಯ ಕಾರ್ಡ್ ವ್ಯಾಪ್ತಿಯಡಿ ತರಲಾಗುವುದು. ಇದರಡಿ, ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬ ₹ 300 ಮತ್ತು ನಗರ ಪ್ರದೇಶದ ಪ್ರತಿ ಕುಟುಂಬ ₹700 ಪಾವತಿ ಮಾಡಿ ನೋಂದಾಯಿಸಿಕೊಳ್ಳಬಹುದು.
Question 8 |
8. ಈ ಕೆಳಗಿನ ಯಾವ ಸ್ಥಳದಲ್ಲಿ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ಸ್ಥಾಪಿಸಲು ನಿರ್ಧರಿಸಿದೆ?
ಮೈಸೂರು | |
ಕೂಡಲ ಸಂಗಮ | |
ಬೆಂಗಳೂರು | |
ಧಾರಾವಾಡ |
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಕ್ಷರ ಧಾಮದ ಮಾದರಿಯಲ್ಲಿ ನಿರ್ಮಾಣವಾಗುವ ವಸ್ತು ಸಂಗ್ರಹಾಲಯದಲ್ಲಿ ಅಧ್ಯಯನ ಕೇಂದ್ರ, ಬಸವಣ್ಣರ ಸಂದೇಶಗಳು, ಹಂಪಿ ಮಾದರಿಯ ಸಾಲುಗಂಬಗಳು, ಶರಣ ಗ್ರಾಮ ಹೀಗೆ ಪ್ರತಿಯೊಂದು ಇರಲಿದೆ.
Question 9 |
9. ಗೌರವ ಡಾಕ್ಟರೇಟ್ಗೆ ಸಮನಾದ ‘ನಾಡೋಜ’ ಪ್ರಶಸ್ತಿಯನ್ನು ಈ ಕೆಳಕಂಡ ಯಾವ ವಿಶ್ವವಿದ್ಯಾಲಯ ನೀಡುತ್ತದೆ?
ಮೈಸೂರು ವಿಶ್ವವಿದ್ಯಾಲಯ | |
ಕನ್ನಡ ವಿಶ್ವವಿದ್ಯಾಲಯ | |
ಧಾರಾವಾಡ ವಿಶ್ವವಿದ್ಯಾಲಯ | |
ಬೆಂಗಳೂರು ವಿಶ್ವವಿದ್ಯಾಲಯ |
ನಾಡೋಜ ಪ್ರಶಸ್ತಿಯು ಹಂಪೆ ಕನ್ನಡ ವಿಶ್ವವಿದ್ಯಾಲಯವು ಪ್ರತಿವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿ. ನಾಡೋಜ ಎಂಬ ಪದವು ಆದಿಕವಿ ಪಂಪನಿಗೆ ಸಂಬಂಧಿಸಿದ್ದಾಗಿದೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ 'ದೇಶಿಕೋತ್ತಮ' ಪದವಿ ಪ್ರೇರಣೆಯಿಂದ ಕನ್ನಡ ವಿವಿ ನಾಡೋಜ ಪದವಿ ನೀಡುತ್ತಿದೆ. ನಾಡೋಜ ಗೌರವ ಪದವಿಯು ಶಾಲು, ಸರಸ್ವತಿ ವಿಗ್ರಹ, ಪ್ರಮಾಣ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
Question 10 |
10. ನವೆಂಬರ್ 1 ರಿಂದ ಜಾರಿಗೆ ಬರಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ರುಚಿಭರಿತ ಹಾಲು (ಫ್ಲೇವರ್ಡ್ ಹಾಲು) ನೀಡುವ ಪ್ರಾಯೋಗಿಕ ಯೋಜನೆಗೆ ಯಾವ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ?
ರಾಯಚೂರು ಮತ್ತು ಮೈಸೂರು | |
ಬೀದರ್ ಮತ್ತು ಕಲ್ಬುರ್ಗಿ | |
ಧಾರಾವಾಡ ಮತ್ತು ವಿಜಯಪುರ | |
ಶಿವಮೊಗ್ಗ ಮತ್ತು ಚಿಕ್ಕಮಗಳೂರು |
ಸರ್ಕಾರಿ ಶಾಲಾ ಮಕ್ಕಳಿಗೆ ರುಚಿಭರಿತ ಹಾಲು (ಫ್ಲೇವರ್ಡ್ ಹಾಲು) ನೀಡುವ ಪ್ರಾಯೋಗಿಕ ಯೋಜನೆಗೆ ಮೈಸೂರು ಹಾಗೂ ರಾಯಚೂರು ಜಿಲ್ಲೆ ಆಯ್ಕೆಯಾಗಿದ್ದು, ನವೆಂಬರ್ 1ರಿಂದ ಜಾರಿಗೆ ಬರಲಿದೆ.
[button link=”http://www.karunaduexams.com/wp-content/uploads/2017/09/ರಾಜ್ಯ-ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-31.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Super