ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್, 5, 6, 2017
Question 1 |
1. ಇತ್ತೀಚಿನ ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ (ಬಿಬಿಐ) ಪ್ರಕಾರ ಏಷ್ಯಾದ ಎರಡನೆಯ ಶ್ರೀಮಂತ ವ್ಯಕ್ತಿ ಯಾರು?
ಅನಿಲ್ ಅಂಬಾನಿ | |
ಮುಖೇಶ್ ಅಂಬಾನಿ | |
ಸುನೀಲ್ ಭಾರ್ತಿ | |
ಆದಿತ್ಯಾ ಬಿರ್ಲಾ |
2017 ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (ಬಿಬಿಐ) ಪ್ರಕಾರ ಮುಕೇಶ್ ಅಂಬಾನಿ ಏಷ್ಯಾದ ಎರಡನೆಯ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 2017 ರ ಸೂಚ್ಯಂಕದ ಪ್ರಕಾರ, ಅಂಬಾನಿ ಅವರ ನಿವ್ವಳ ಮೌಲ್ಯವು 35.8 ಶತಕೋಟಿ $ ನಷ್ಟು (2.2 ಲಕ್ಷ ಕೋಟಿ ರೂ.ಗೆ) ಹೆಚ್ಚಾಗಿದೆ. ಪ್ರಸ್ತುತ, ಅಲಿಬಾಬಾ ಗ್ರೂಪ್ ಸಂಸ್ಥಾಪಕ ಜಾಕ್ ಮಾ ಏಷ್ಯಾದಲ್ಲಿ $ 43.2 ಶತಕೋಟಿ ಮೌಲ್ಯದ ಸಂಪತ್ತಿನೊಂದಿಗೆ ಶ್ರೀಮಂತ ವ್ಯಕ್ತಿ
Question 2 |
2. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
I) ವಿಶ್ವ ಸ್ತನಪಾನ ಸಪ್ತಾಹವನ್ನು ಪ್ರತಿವರ್ಷ ಆಗಸ್ಟ್ 1 ರಿಂದ 7 ರವರೆಗೆ ಆಚರಿಸಲಾಗುತ್ತದೆ
II) “ಸಸ್ಟೈನಿಂಗ್ ಬ್ರೆಸ್ಟ್ ಫೀಡಿಂಗ್ ಟುಗೆದರ್” ಇದು ಈ ವರ್ಷದ ಧ್ಯೇಯವಾಕ್ಯ
ಮೇಲಿನ ಯಾವ ಹೇಳಿಕೆ ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ವಿಶ್ವ ಸ್ತನ್ಯಪಾನ ಸಪ್ತಾಹ (ಡಬ್ಲ್ಯುಬಿಡಬ್ಲ್ಯೂ) ಅನ್ನು ಪ್ರತಿವರ್ಷ ಆಗಸ್ಟ್ 1 ರಿಂದ 7 ರವರೆಗೆ ಆಚರಿಸಲಾಗುವುದು. 2017 ಥೀಮ್ "ಸಸ್ಟೈನಿಂಗ್ ಬ್ರೆಸ್ಟ್ ಫೀಡಿಂಗ್ ಟುಗೆದರ್". ಭಾರತದಲ್ಲಿ ಎದೆಹಾಲುಣಿಸುವಿಕೆಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ತೀವ್ರಗೊಳಿಸಲು, ಸ್ತನ್ಯಪಾನವನ್ನು ಪ್ರೋತ್ಸಾಹಿಸಲು ಮತ್ತು ಸ್ತನ್ಯಪಾನವನ್ನು ಬೆಂಬಲಿಸುವ ಸೇವೆಗಳನ್ನು ಉತ್ತೇಜಿಸಲು "MAA- ತಾಯಿಯ ಸಂಪೂರ್ಣ ಪ್ರೀತಿ" ಎಂಬ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಸಚಿವಾಲಯ ಪ್ರಾರಂಭಿಸಿದೆ.
Question 3 |
3. ನ್ಯಾಯಯುತ ಮಾರುಕಟ್ಟೆ ನಿರ್ವಹಣೆಯ ಮೇಲೆ ಸೆಬಿಯು ಈ ಕೆಳಗಿನ ಯಾವ ಸಮಿತಿಯನ್ನು ರಚಿಸಿದೆ?
ಗುರುಪ್ರಸಾದ್ ಸಮಿತಿ | |
ಟಿ ಕೆ ವಿಶ್ವನಾಥನ್ ಸಮಿತಿ | |
ಆರ್ ಕೆ ಭಾರ್ಗವ ಸಮಿತಿ | |
ರಮೇಶ್ ಚಂದ್ರ ಸಮಿತಿ |
ಷೇರು ವಿನಿಮಯ ಮತ್ತು ನಿಯಂತ್ರಣ ಮಂಡಳಿ (ಸೆಬಿ) ಇತ್ತೀಚೆಗೆ ನ್ಯಾಯಯುತ ಮಾರುಕಟ್ಟೆ ನಿರ್ವಹಣೆಯ ಮೇಲೆ ಸಮಿತಿಯನ್ನು ರಚಿಸಿದೆ, ಮಾಜಿ ಲೋಕಸಭಾ ಕಾರ್ಯದರ್ಶಿ ಮತ್ತು ಕಾನೂನು ಕಾರ್ಯದರ್ಶಿ ಟಿ. ಕೆ. ವಿಶ್ವನಾಥನ್ ಸಮಿತಿಯ ನೇತೃತ್ವ ವಹಿಸಿದ್ದಾರೆ. ಸಮಿತಿಯು SEBI, ಮ್ಯೂಚುಯಲ್ ಫಂಡ್, ದಲ್ಲಾಳಿಗಳು, ಆಡಿಟ್ ಸಂಸ್ಥೆಗಳು, ಸ್ಟಾಕ್ ಎಕ್ಸ್ಚೇಂಜ್ಗಳು, ಡಾಟಾ ಅನಾಲಿಸ್ಟಿಕ್ಸ್ ಸಂಸ್ಥೆಗಳು ಮತ್ತು ಕಾನೂನು ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಆಂತರಿಕ ವಹಿವಾಟು ಮತ್ತು ಮೋಸದ ಮತ್ತು ನ್ಯಾಯಸಮ್ಮತವಲ್ಲದ ವ್ಯಾಪಾರದ ಅಭ್ಯಾಸಗಳು (FUTP) ಸೇರಿದಂತೆ ಅಸ್ತಿತ್ವದಲ್ಲಿರುವ SEBI ನಿಯಮಗಳ ಸುಧಾರಣೆಗಳನ್ನು ಸೂಚಿಸುವ ಸಲುವಾಗಿ ಸಮಿತಿಯು ಕಾರ್ಯನಿರ್ವಹಿಸಲಿದೆ.
Question 4 |
4. ಬಾಂಬೆ ಷೇರು ವಿನಿಮಯ (BSE) ಕೇಂದ್ರದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಸ್ವರೂಪ್ ಸುಚೇತ | |
ಧೀರೆಂದ್ರ ಸ್ವರೂಪ್ | |
ಕಾಶಿ ಕುಲಕರ್ಣಿ | |
ಸುಧಾಕರ್ ರಾವ್ |
ಬಿಎಸ್ಇಯ ಸಾರ್ವಜನಿಕ ಹಿತಾಸಕ್ತಿ ನಿರ್ದೇಶಕರಾಗಿದ್ದ ಧೀರೆಂದ್ರ ಸ್ವರೂಪ್ ಅವರನ್ನು ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅವರು ಸುಧಕರ ರಾವ್ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
Question 5 |
5. “2017 ಬ್ರಿಕ್ಸ್ ವ್ಯಾಪಾರ ಸಚಿವರ (Trade Minister)” ಸಭೆ ಯಾವ ದೇಶದಲ್ಲಿ ಜರುಗಿತು?
ಚೀನಾ | |
ಬ್ರೆಜಿಲ್ | |
ರಷ್ಯಾ | |
ಭಾರತ |
ಚೀನಾದಲ್ಲಿ ಶಾಂಘೈನಲ್ಲಿ ಬ್ರಿಕ್ಸ್ ವ್ಯಾಪಾರ ಮಂತ್ರಿಗಳ 7ನೇ ಸಭೆಯನ್ನು ಆಯೋಜಿಸಲಾಗಿದೆ. ಭಾರತದಿಂದ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ 6 ಸದಸ್ಯರ ನಿಯೋಗ ಸಭೆಯಲ್ಲಿ ಭಾಗವಹಿಸಿತ್ತು. ವ್ಯಾಪಾರ ಸೌಕರ್ಯ, ಆರ್ಥಿಕ ಮತ್ತು ತಾಂತ್ರಿಕ ಸಹಕಾರ, ವಿಷಯಗಳ ಬಗ್ಗೆ ಸಭೆಯಲ್ಲಿ
Question 6 |
6. “ಪೀಟರ್ ಒ ನೀಲ್” ರವರು ಯಾವ ದೇಶದ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ?
ಪಪುವಾ ನ್ಯೂ ಗಿನಿಯಾ | |
ಮಲೇಷಿಯಾ | |
ಫಿಲಿಪೈನ್ಸ್ | |
ಮೆಕ್ಸಿಕೊ |
Question 7 |
7. ಭಾರತದ ಮೊದಲ ಖಾಸಗಿ ವಲಯದ ಕ್ಷಿಪಣಿ ಉಪ-ವ್ಯವಸ್ಥೆಗಳ ಉತ್ಪಾದನಾ ಸೌಲಭ್ಯವು ಯಾವ ನಗರದಲ್ಲಿ ಸ್ಥಾಪಿತವಾಗಿದೆ?
ಗುವಾಹಟಿ | |
ಹೈದ್ರಾಬಾದ್ | |
ಪುಣೆ | |
ಮುಂಬೈ |
ಭಾರತದ ಪ್ರಥಮ ಖಾಸಗಿ ಕ್ಷಿಪಣಿ ಉಪ-ವ್ಯವಸ್ಥೆಗಳ ತಯಾರಿಕಾ ಸೌಲಭ್ಯವು ಹೈದರಾಬಾದ್ ಬಳಿ ಉದ್ಘಾಟಿಸಲಾಯಿತು. ರಕ್ಷಣಾ ಉತ್ಪನ್ನದಲ್ಲಿ ಖಾಸಗೀ ವಲಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಇದನ್ನು ಸ್ಥಾಪಿಸಲಾಗಿದೆ. ಕಲ್ಯಾಣಿ ಗ್ರೂಪ್ ಮತ್ತು ಇಸ್ರೇಲ್ನ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ ನಡುವೆ $ 2.5 ಶತಕೋಟಿ ಜಂಟಿ ಉದ್ಯಮವಾಗಿದೆ.
Question 8 |
8. ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ರಾಜೀವ್ ಕುಮಾರ್ | |
ಸುರೇಶ್ ಶುಕ್ಲಾ | |
ಅಮಿತ್ ಭಂಡಾರಿ | |
ರವಿ ಶ್ರೀವತ್ಸ |
ಖ್ಯಾತ ಅರ್ಥಶಾಸ್ತ್ರಜ್ಞ ಡಾ. ರಾಜೀವ್ ಕುಮಾರ್ ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅರವಿಂದ್ ಪಾನಗರಿಯಾ ರವರು ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಲಿದ್ದು, ಈ ಜಾಗವನ್ನು ರಾಜೀವ್ ಕುಮಾರ್ ತುಂಬಲಿದ್ದಾರೆ.
Question 9 |
9. BIMSTEC ರಾಷ್ಟ್ರಗಳ ವಿದೇಶಾಂಗ ಸಚಿವರ 15 ನೇ ಸಭೆಯನ್ನು ಯಾವ ದೇಶ ಆಯೋಜಿಸಲಿದೆ?
ನೇಪಾಳ | |
ಭಾರತ | |
ಬಾಂಗ್ಲದೇಶ | |
ಮ್ಯಾನ್ಮಾರ್ |
BIMSTEC ದೇಶಗಳ ವಿದೇಶಾಂಗ ಸಚಿವರ 15ನೇ ಸಭೆ ಆಗಸ್ಟ್ 10-11, 2017 ರಂದು ಕಠ್ಮಂಡು, ನೇಪಾಳದಲ್ಲಿ ನಡೆಯಲಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Question 10 |
10. ಭಾರತ, ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾ ಕ್ಷೇತ್ರಗಳನ್ನು ಪ್ರತಿನಿಧಿಸಲು ವಿಶ್ವ ಬ್ಯಾಂಕ್ (ಡಬ್ಲ್ಯುಬಿ)ನ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು?
ಕಿರಣ್ ಕಾರ್ಣಿಕ್ | |
ಎಸ್ ಅಪರ್ಣ | |
ಸುಚೇತಾ ಸಿಂಗ್ | |
ಕೃಪಾಲ್ ಕುಮಾರ್ |
ಗುಜರಾತ್ ಕ್ಯಾಡರ್ನ 1988-ಬ್ಯಾಚ್ ಐಎಎಸ್ ಅಧಿಕಾರಿಯಾದ ಎಸ್.ಅಪರ್ಣ ಅವರನ್ನು ಮೂರು ವರ್ಷಗಳ ಕಾಲ ಭಾರತದ, ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾ ಕ್ಷೇತ್ರಗಳನ್ನು ಪ್ರತಿನಿಧಿಸಲು ವಿಶ್ವ ಬ್ಯಾಂಕ್ (ಡಬ್ಲ್ಯೂಬಿ) ಯ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಅವರು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-5-6-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ