ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್, 3, 4, 2017
Question 1 |
1. ಪ್ರಮುಖ ದತ್ತಾಂಶ ಸಂರಕ್ಷಿಸುವ ಸಮಸ್ಯೆಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಯಾವ ಸಮಿತಿಯನ್ನು ರಚಿಸಿದೆ?
ಬಿ ಎನ್ ಶ್ರೀಕೃಷ್ಣ ಸಮಿತಿ | |
ಮಾಥುರ್ ಸಮಿತಿ | |
ಆರ್ ಕೆ ಚಂದ್ರನ್ ಸಮಿತಿ | |
ರಾಮಚಂದ್ರನ್ ಸಮಿತಿ |
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿವೃತ್ತಿ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದತ್ತಾಂಶ ಸಂರಕ್ಷಿಸುವ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಪರಿಣಿತರ ಸಮಿತಿಯೊಂದನ್ನು ರಚಿಸಿದೆ. ದತ್ತಾಂಶ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಗುರುತಿಸುವುದು ಮತ್ತು ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಸಂರಕ್ಷಿಸುವುದು ಸಮಿತಿಯ ಉದ್ದೇಶ.
Question 2 |
2. ಇತ್ತೀಚೆಗೆ ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು “e-RaKAM” ಪೋರ್ಟಲ್ ಪ್ರಾರಂಭಿಸಿದೆ. “e-RaKAM” ವಿಸ್ತ್ರತ ರೂಪ ________?
Rashtriya Kisan Agri Mandi | |
Rashtriya Kisan Agriculture Mandi | |
Rashtriya Kisan Agricultural Mandi | |
Rashtriya Kisan Agri Produce Mandi |
ಕೇಂದ್ರ ಸರ್ಕಾರ ಇತ್ತೀಚೆಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇ-ರಾಷ್ಟ್ರೀಯ ಕಿಸಾನ್ ಅಗ್ರಿ ಮಂಡಿ (ಇ-ರಾಕಮ್) ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಚಿಕ್ಕ ಹಳ್ಳಿಗಳ ರೈತರನ್ನು ವಿಶ್ವದ ಅತಿ ದೊಡ್ಡ ಮಾರುಕಟ್ಟೆಗಳನ್ನು ಅಂತರ್ಜಾಲದ ಮೂಲಕ ಸಂಪರ್ಕಿಸುವ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ. ಇದರಡಿ ರೈತರು, PSUs, ನಾಗರಿಕ ಸರಬರಾಜುದಾರರು ಮತ್ತು ಖರೀದಿದಾರರು ಒಂದೇ ವೇದಿಕೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯನ್ನು ಸರಾಗಗೊಳಿಸಬಹುದು. ರೈತರಿಗೆ ಇ-ಪಾವತಿ ಮೂಲಕ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗುವುದು.
Question 3 |
3. 19 ನೇ RCEP ಟ್ರೇಡ್ ನೆಗೋಶಿಯೇಟಿಂಗ್ ಕಮಿಟಿ (ಟಿಎನ್ಸಿ) ಸಭೆಯನ್ನು ಆಯೋಜಿಸಿದ್ದ ರಾಷ್ಟ್ರ ಯಾವುದು?
ಭಾರತ | |
ಶ್ರೀಲಂಕಾ | |
ರಷ್ಯಾ | |
ಫಿಲಿಫೈನ್ಸ್ |
Question 4 |
4. ವಿಶ್ವದ ಅತಿ ಉದ್ದದ ಪಾದಚಾರಿ ತೂಗು ಸೇತುವೆಯನ್ನು ಯಾವ ದೇಶದಲ್ಲಿ ತೆರೆಯಲಾಗಿದೆ?
ಸ್ವಿಟ್ಜರ್ಲ್ಯಾಂಡ್ | |
ಅಮೆರಿಕ | |
ಚೀನಾ | |
ಜಪಾನ್ |
ವಿಶ್ವದ ಅತಿ ಉದ್ದದ ಪಾದಚಾರಿ ತೂಗು ಸೇತುವೆ "ಯುರೋಪವೇಗ್ (ಅಥವಾ ಯುರೋಪ್ ಸೇತುವೆ)" ಇತ್ತೀಚೆಗೆ ಸ್ವಿಟ್ಜರ್ಲೆಂಡ್ನ ರಂಡಾದಲ್ಲಿ ಅನಾವರಣಗೊಳಿಸಲಾಗಿದೆ. ಇದು 1,620 ಅಡಿ ಉದ್ದವಿದೆ. ಗ್ರೇಬೆಂಗೂಫರ್ ಕಣಿವೆಕ್ಕಿಂತ 278 ಅಡಿ ಎತ್ತರವಿದೆ.
Question 5 |
5. ಇತ್ತೀಚೆಗೆ ನಿಧನರಾದ ಖ್ಯಾತ ವಿಜ್ಞಾನಿ “ಪುಷ್ಪ ಭಾರ್ಗವ” ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?
ಭೌತಶಾಸ್ತ್ರ | |
ವೈದ್ಯಕೀಯ | |
ಜೀವಶಾಸ್ತ್ರ | |
ರಾಸಾಯನಶಾಸ್ತ್ರ |
ಹಿರಿಯ ಅಣು ಜೀವಶಾಸ್ತ್ರಜ್ಞ ಮತ್ತು ತಳಿ ಪರಿವರ್ತಿತ ಬೆಳೆಗಳ ತೀವ್ರವಾದ ಟೀಕಾಕಾರರಾಗಿದ್ದ ಡಾ. ಪುಷ್ಪಾ ಮಿತ್ರ ಭಾರ್ಗವ (89) ಆಗಸ್ಟ್ 1, 2017 ರಂದು ಹೈದರಾಬಾದ್ನಲ್ಲಿ ನಿಧನ ಹೊಂದಿದ್ದಾರೆ. ಹೈದ್ರಾಬಾದಿನ ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿಯನ್ನು ಸ್ಥಾಪಿಸಲಾದ ವರ್ಷದಲ್ಲಿ ಸಂಸ್ಥೆಯ ನೇತೃತ್ವ ವಹಿಸಿದ್ದರು.
Question 6 |
6. ಈ ಕೆಳಗಿನ ಯಾವ ರಾಜ್ಯದಲ್ಲಿ “ಆದಿ ಪೆರುಕು ಹಬ್ಬ”ವನ್ನು ಆಚರಿಸಲಾಗುತ್ತದೆ?
ತಮಿಳುನಾಡು | |
ಆಂಧ್ರ ಪ್ರದೇಶ | |
ತೆಲಂಗಣ | |
ಕೇರಳ |
ಆದಿ ಪೆರುಕು ಉತ್ಸವವನ್ನು ತಮಿಳುನಾಡಿನಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ. ನೀರಿನ ಜೀವ ಉಳಿಸುವ ಗುಣಲಕ್ಷಣಗಳಿಗೆ ಗೌರವ ಸಲ್ಲಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. 'ಆದಿ 18' ಎಂದು ಕರೆಯಲಾಗುವ ಹಬ್ಬವನ್ನು ತಮಿಳು ಕ್ಯಾಲೆಂಡರ್ ವರ್ಷದ 18 ನೇ ಆದಿ ತಿಂಗಳಂದು ಆಚರಿಸಲಾಗುತ್ತದೆ, ಅದರಲ್ಲೂ ವಿಶೇಷವಾಗಿ ಕಾವೇರಿ ನದಿಯಜಲಸಂಪತ್ತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಆಚರಿಸಲಾಗುತ್ತದೆ.
Question 7 |
7. “ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI)”ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?
ಸಂಜಯ್ ಬರು | |
ವಿಕ್ರಂ ಗೋಯೆಂಕಾ | |
ರಾಜೀವ್ ಶುಕ್ಲಾ | |
ನವೀನ್ ಉಪಾಧ್ಯಯ |
Question 8 |
8. ಸೈನಿಕರ ನಿಯೋಜನೆ ಮತ್ತು ಬಡ್ತಿಗೆ ವಿವರಗಳ ಮಾಹಿತಿ ಕಲೆ ಹಾಕಲು ಯಾವ ಮೊಬೈಲ್ ಅಪ್ಲಿಕೇಶನ್ ಅನ್ನು ಭಾರತೀಯ ಸೇನೆ ಅಭಿವೃದ್ಧಿಪಡಿಸಿದೆ?
ಸಿಪಾಯಿ ಆಪ್ | |
ಸೋಲ್ಜರ್ ಆಪ್ | |
ಹಮ್ರಾಜ್ ಆಪ್ | |
ಪೋಸ್ಟಿಂಗ್ ಆಪ್ |
Question 9 |
9. ಈ ಕೆಳಗಿನ ಯಾರು ಇರಾನಿನ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು?
ಹುಸೇನ್ ಬಾಷ | |
ಹಸನ್ ರೌಹನಿ | |
ಸಯ್ಯದ್ ಹಸನ್ | |
ಮಹಮ್ಮದ್ ಖಾತಮಿ |
ಹಸನ ರೌಹಾನಿ ರವರು ತಮ್ಮ ಎರಡನೇ ಅವಧಿಗೆ ಹಾಗೂ ಇರಾನ್ ನ 7 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ರೌಹಾನಿ 577 ಮತಗಳನ್ನು ಪಡೆದು ತನ್ನ ಮುಖ್ಯ ಸ್ಪರ್ಧಿಯಾದ ಇಬ್ರಾಹಿಂ ರಾಯ್ಸಿ ಅವರನ್ನು ಸೋಲಿಸಿ ಮರುಚುನಾವಣೆಯಲ್ಲಿ ಜಯಗಳಿಸಿದ್ದರು.
Question 10 |
10. ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ನ ಅತ್ಯುನ್ನತ ಗೌರವ "ಭಾರತ್ ಗೌರವ್" ವನ್ನು ಯಾವ ಭಾರತೀಯ ಕ್ರೀಡಾಪಟುವಿಗೆ ನೀಡಿ ಗೌರವಿಸಲಾಯಿತು?
ಧನರಾಜ್ ಪಿಳ್ಳೈ | |
ಸಯ್ಯದ್ ನಯೀಮುದ್ದಿನ್ | |
ಸುಭಾಶ್ ಬೊಮಿಕ್ | |
ಬೊದ್ದುಪಲ್ಲಿ ಅಮಿತ್ |
ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೆ ರವರಿಗೆ ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ನ ಅತಿದೊಡ್ಡ ಗೌರವಾರ್ಥ "ಭಾರತ್ ಗೌರವ್" ವನ್ನು ಆಗಸ್ಟ್ 1, 2017 ರಂದು ಕ್ಲಬ್ನ ಸಂಸ್ಥಾಪನ ದಿನದಂದು ನೀಡಿ ಗೌರವಿಸಲಾಯಿತು. ಪಿಳ್ಳೆ ಅವರು ಭಾರತೀಯ ಹಾಕಿ ತಂಡವನ್ನು ಪುನಶ್ಚೇತನಗೊಳಿಸಲು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮತ್ತು 15 ವರ್ಷದ ವೃತ್ತಿಜೀವನದಲ್ಲಿ ನಾಲ್ಕು ಒಲಿಂಪಿಕ್ಸ್, ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯನ್ ಗೇಮ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 339 ಪಂದ್ಯಗಳಿಂದ 170 ಗೋಲುಗಳನ್ನು ಹೊಡೆದಿದ್ದಾರೆ.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-3-4-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
Super questions white for example if any problems please email us back To you happy karunadu exams