ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್, 11, 12, 2017

Question 1

1. ಗ್ಲೋಬಲ್ ಎಂಟರ್ಪ್ರೆನರ್ಷಿಪ್ ಶೃಂಗಸಭೆಯ (GES-2017) ಆತಿಥ್ಯ ವಹಿಸಲಿರುವ ನಗರ ಯಾವುದು?

A
ಬೆಂಗಳೂರು
B
ಹೈದ್ರಾಬಾದ್
C
ಪುಣೆ
D
ಮುಂಬೈ
Question 1 Explanation: 
ಹೈದ್ರಾಬಾದ್

ಹೈದ್ರಾಬಾದಿನಲ್ಲಿ ಗ್ಲೋಬಲ್ ಎಂಟರ್ಪ್ರೆನರ್ಷಿಪ್ ಶೃಂಗಸಭೆ (ಜಿಇಎಸ್-2017) ಯನ್ನು ಭಾರತ ಮತ್ತು ಅಮೆರಿಕ ಸಹಯೋಗದಲ್ಲಿ 28-30, 2017 ರಂದು ನಡೆಯಲಿದೆ.

Question 2

2. ಈ ಕೆಳಗಿನ ಯಾವ ಭಾರತೀಯ ಕ್ರೀಡಾಪಟುವನ್ನು ಆಗ್ನೇಯ ಏಷ್ಯಾ ಪ್ರದೇಶದಲ್ಲಿ (SEAR) ವಿಶ್ವ ಆರೋಗ್ಯ ಸಂಸ್ಥೆಯ ದೈಹಿಕ ಚಟುವಟಿಕೆಯ ಸದ್ಬಾವನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ?

A
ಸಚಿನ್ ತೆಂಡುಲ್ಕರ್
B
ರಾಹುಲ್ ದ್ರಾವಿಡ್
C
ಮಿಲ್ಕಾ ಸಿಂಗ್
D
ಮೇರಿ ಕೋಮ್
Question 2 Explanation: 
ಮಿಲ್ಕಾ ಸಿಂಗ್

ಭಾರತದ ಖ್ಯಾತ ಕ್ರೀಡಾಪಟು ಮಿಲ್ಕಾ ಸಿಂಗ್ ಅವರು ಆಗ್ನೇಯ ಏಷ್ಯಾ ಪ್ರದೇಶದಲ್ಲಿ (SEAR) ವಿಶ್ವ ಆರೋಗ್ಯ ಸಂಸ್ಥೆಯ ದೈಹಿಕ ಚಟುವಟಿಕೆಯ ಸದ್ಬಾವನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಗೌರವಾನ್ವಿತ ರಾಯಭಾರಿಯಾಗಿ ಸಿಂಗ್ ಅವರು ಸಾಂಕ್ರಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವ ಯೋಜನೆಗಳನ್ನು ಪ್ರೋತ್ಸಾಹಿಸಲು ಶ್ರಮಿಸಲಿದ್ದಾರೆ. ಮಿಲ್ಖಾ ಸಿಂಗ್ “ಪ್ಲೈಯಿಂಗ್ ಸಿಖ್” ಎಂದೇ ಖ್ಯಾತಿ ಪಡೆದಿದ್ದಾರೆ.

Question 3

3. ಈ ಕೆಳಗಿನ ಯಾರು “ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯ” ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಪ್ರಸೂನ್ ಜೋಶಿ
B
ಮಣಿಶರ್ಮ
C
ಕರಣ್ ಸಿಂಗ್
D
ಅನಿಲ್ ಕಪೂರ್
Question 3 Explanation: 
ಪ್ರಸೂನ್ ಜೋಶಿ

ಖ್ಯಾತ ಗೀತ ರಚನೆಕಾರ ಪ್ರಸೂನ್ ಜೋಶಿ ರವರು ಮೂರು ವರ್ಷಗಳ ಅವಧಿಗೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಪಹ್ಲಾಜ್ ನಿಹಾಲಾನಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಫಾನಾ, ರಂಗ್ ದೇ ಬಸಂತಿ, ಬ್ಲ್ಯಾಕ್, ದೆಹಲಿ 6 ಮತ್ತು ಭಾಗ್ ಮಿಲ್ಕಾ ಭಾಗ್ ಚಲನಚಿತ್ರಗಳಿಗೆ ಗೀತ ರಚನೆ ಮಾಡಿದ ನಂತರ ಅವರು ಹೆಚ್ಚು ಪ್ರಾಮುಖ್ಯತೆ ಗಳಿಸಿದರು. 2008 ಮತ್ತು 2013 ರಲ್ಲಿ ಎರಡು ಬಾರಿ ಇವರಿಗೆ ಅತ್ಯುತ್ತಮ ಗೀತರಚನೆಕಾರ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

Question 4

4. ಈ ಕೆಳಗಿನವರುಗಳಲ್ಲಿ ಯಾರಿಗೆ 2017 ದಿ ಹಿಂದೂ ನಾಟಕಕಾರ ಪ್ರಶಸ್ತಿ ಲಭಿಸಿದೆ?

A
ಅರವಿಂದ್ ಶಾಸ್ತ್ರಿ ಮತ್ತು ನವೀನ್ ರಾಜ್
B
ಗೆರೀಶ್ ಖೇಮನಿ ಮತ್ತು ಅಕ್ಷತ್ ನಿಗಮ್
C
ಸುನೀಲ್ ಶನ್ಬಾಗ್ ಮತ್ತು ಕೆವಾಲ್ ಅರೋರಾ
D
ಸುರೇಶ್ ಸೋನಿ ಮತ್ತು ಅಕ್ಷತ್ ನಿಗಮ್
Question 4 Explanation: 
ಗೆರೀಶ್ ಖೇಮನಿ ಮತ್ತು ಅಕ್ಷತ್ ನಿಗಮ್

ಮುಂಬೈನಲ್ಲಿ ನಡೆದ 13ನೇ ದಿ ಹಿಂದೂ ರಂಗಭೂಮಿ ಉತ್ಸವದಲ್ಲಿ ಗೆರಿಶ್ ಖೇಮನಿ ಮತ್ತು ಅಕ್ಷತ್ ನಿಗಮ್ ರವರಿಗೆ 2017 ದಿ ಹಿಂದೂ ನಾಟಕಕಾರ ಪ್ರಶಸ್ತಿ ಲಭಿಸಿದೆ. 'ಇನ್ ಸರ್ಚ್ ಆಫ್ ದರಿಯಾ ಸಾಗರ್' ನಾಟಕಕ್ಕಾಗಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿಯು ರೂ 2 ಲಕ್ಷ ನಗದು ಒಳಗೊಂಡಿದೆ.

Question 5

5. ಆನೆಗಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಕೆಳಗಿನ ಯಾವ ರಾಷ್ಟ್ರವ್ಯಾಪ್ತಿ ಪ್ರಚಾರವನ್ನು ಪ್ರಾರಂಭಿಸಿದೆ?

A
ಗಜ ಯಾತ್ರ
B
ಗಜ ಕೇಸರಿ ಯಾತ್ರ
C
ಗಜ ಸಂರಕ್ಷಣ ಯಾತ್ರ
D
ಮೇಲಿನ ಯಾವುದು ಅಲ್ಲ
Question 5 Explanation: 
ಗಜ ಯಾತ್ರ

ವಿಶ್ವ ಆನೆ ದಿನದ ಅಂಗವಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಡಾ. ಹರ್ಷ ವರ್ಧನ್ ರವರು ಆನೆಗಳನ್ನು ರಕ್ಷಿಸಲು ರಾಷ್ಟ್ರಾದ್ಯಂತದ "ಗಜ ಯಾತ್ರೆ"ಗೆ ನವದೆಹಲಿಯಲ್ಲಿ ಚಾಲನೆ ನೀಡಿದರು. ಈ ಆಂದೋಲನವನ್ನು ಆನೆಗಳನ್ನು ಹೊಂದಿರುವ 12 ರಾಜ್ಯಗಳಲ್ಲಿ ಆಯೋಜಿಸಲಾಗುವುದು. ವಿಶ್ವ ಆನೆ ದಿನವನ್ನು ಆಗಸ್ಟ್ 12 ರಂದು ಪ್ರತಿವರ್ಷ ಆಚರಿಸಲಾಗುತ್ತದೆ.

Question 6

6. ಪಾಕಿಸ್ತಾನದ ಮದರ್ ತೆರೆಸಾ ಎಂದೇ ಖ್ಯಾತಿ ಪಡೆದಿದ್ದ ಡಾ. ರುತ್ ಫಾವ್ ಇತ್ತೀಚೆಗೆ ನಿಧನರಾದರು. ಇವರು ಮೂಲತಃ ಯಾವ ದೇಶದವರು?

A
ಜರ್ಮನಿ
B
ಜಪಾನ್
C
ಫ್ರಾನ್ಸ್
D
ಇಟಲಿ
Question 6 Explanation: 
ಜರ್ಮನಿ

ಜರ್ಮನಿಯ ವೈದ್ಯೆ, ಪಾಕಿಸ್ತಾನದ ಮದರ್ ತೆರೆಸಾ ಎಂದೇ ಖ್ಯಾತಿ ಪಡೆದಿದ್ದ ಡಾ. ರುತ್ ಫಾವ್ (87) ಅವರು ನಿಧನರಾದರು. ಪಾಕಿಸ್ತಾನದಲ್ಲಿ ಕುಷ್ಠರೋಗ ನಿವಾರಣೆಗೆ ತಮ್ಮ ಜೀವನವನ್ನೇ ಇವರು ಮುಡುಪಾಗಿಟ್ಟಿದ್ದರು.1960ರಲ್ಲಿ ಪಾಕಿಸ್ತಾನಕ್ಕೆ ಮೊದಲ ಭಾರಿ ಭೇಟಿ ನೀಡಿದ್ದ ಇವರು ಕುಷ್ಠರೋಗಿಗಳ ಸಂಕಷ್ಟವನ್ನು ಅರಿತು, ಕೊನೆಯವರೆಗೂ ಪಾಕ್ನಲ್ಲಿಯೇ ನೆಲೆಸಲು ನಿರ್ಧರಿಸಿದ್ದರು.ಮೇರಿ ಅಡಿಲೇಡ್ ಕುಷ್ಠರೋಗ ಕೇಂದ್ರವನ್ನು ಸ್ಥಾಪಿಸಿದ ಇವರು, ಗಿಲ್ಗಿಟ್ ಬಾಲ್ಟಿಸ್ತಾನ್ ಸೇರಿದಂತೆ ಪಾಕ್ನ ಎಲ್ಲ ಪ್ರಾಂತ್ಯಗಳಲ್ಲೂ ಇದರ ಶಾಖೆ ತೆರೆದು, ಸುಮಾರು 50 ಸಾವಿರ ಕುಟುಂಬಗಳಿಗೆ ಚಿಕಿತ್ಸೆ ನೀಡಿದರು. ಇವರ ಸತತ ಪರಿಶ್ರಮದ ಫಲವಾಗಿ ವಿಶ್ವ ಆರೋಗ್ಯ ಸಂಸ್ಥೆಯು, ಪಾಕಿಸ್ತಾನವನ್ನು ಏಷ್ಯಾದಲ್ಲಿಯೇ ಮೊದಲ ಕುಷ್ಠರೋಗ ಮುಕ್ತ ದೇಶ ಎಂದು 1996ರಲ್ಲಿ ಘೋಷಿಸಿತ್ತು.

Question 7

7. ಕೇಂದ್ರ ಸರ್ಕಾರವು ಹೊಸ ಉಪ-ಯೋಜನೆ "AGEY ಅನ್ನು ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡಿಎವೈ –ಎನ್.ಆರ್.ಎಲ್.ಎಂ.)ದ ಭಾಗವಾಗಿ ಪ್ರಾರಂಭಿಸಲಿದೆ. AGEY ಎಂದರೆ __________?

A
ಅಜೀವಿಕ ಗ್ರಾಮೀಣ ಎಕ್ಸ್ಪ್ರೆಸ್ ಯೋಜನೆ
B
ಅಜೀವಕ ಗ್ರಾಮ ಎಕ್ಸ್ಪ್ರೆಸ್ ಯೋಜನೆ
C
ಅಗದ್ ಗ್ರಾಮೀಣ ಎಕ್ಸ್ಪ್ರೆಸ್ ಯೋಜನೆ
D
ಆನಂದ ಗ್ರಾಮೀಣ ಎಕ್ಸ್ಪ್ರೆಸ್ ಯೋಜನೆ
Question 7 Explanation: 
ಅಜೀವಿಕ ಗ್ರಾಮೀಣ ಎಕ್ಸ್ಪ್ರೆಸ್ ಯೋಜನೆ

ಕೇಂದ್ರ ಸರ್ಕಾರಶೀಘ್ರದಲ್ಲೇ "ಆಜೀವಿಕ ಗ್ರಾಮೀಣ ಎಕ್ಸ್ಪ್ರೆಸ್ ಯೋಜನೆ" (AGEY) ಹೆಸರಿನ ಹೊಸ ಉಪ-ಯೋಜನೆಯನ್ನು ಪ್ರಾರಂಭಿಸಲಿದೆ. ಇದು ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಉಪಯೋಜನೆ. ಆರಂಭದಲ್ಲಿ, AGEY ಅನ್ನು ದೇಶದ 250 ಬ್ಲಾಕ್ಗಳಲ್ಲಿ ಜಾರಿಗೆ ತರಲಾಗುವುದು. ಪ್ರತಿ ಬ್ಲಾಕ್ ಗೆ ಸಾರಿಗೆ ಸೇವೆಗಳನ್ನು ನಿರ್ವಹಿಸಲು 6 ವಾಹನಗಳಿಗೆ ಒದಗಿಸಲಾಗುವುದು. DAY-NRLM ಅಡಿಯಲ್ಲಿ ಸ್ವಯಂ ಸಹಾಯ ಗುಂಪುಗಳು (SHGs) ಹಿಂದುಳಿದ ಪ್ರದೇಶಗಳಲ್ಲಿ ರಸ್ತೆ ಸಾರಿಗೆ ಸೇವೆಯನ್ನು ನಿರ್ವಹಿಸಲಿವೆ. ಹಿಂದುಳಿದ ಗ್ರಾಮೀಣ ಪ್ರದೇಶಗಳ ಒಟ್ಟಾರೆ ಆರ್ಥಿಕ ಅಭಿವೃದ್ಧಿಗಾಗಿ ಪ್ರಮುಖ ಸೇವೆಗಳು ಮತ್ತು ಸೌಕರ್ಯಗಳೊಂದಿಗೆ (ಮಾರುಕಟ್ಟೆಗಳಿಗೆ ಪ್ರವೇಶ, ಶಿಕ್ಷಣ ಮತ್ತು ಆರೋಗ್ಯದಂತಹ) ದೂರದ ಗ್ರಾಮಗಳನ್ನು ಸಂಪರ್ಕಿಸಲು ಸುರಕ್ಷಿತ, ಕೈಗೆಟುಕುವ ಮತ್ತು ಸಮುದಾಯದ ಮೇಲ್ವಿಚಾರಣೆ ಮಾಡುವ ಗ್ರಾಮೀಣ ಸಾರಿಗೆ ಸೇವೆಗಳನ್ನು ಒದಗಿಸಲು ಇದು ಸಹಾಯ ಮಾಡಲಿದೆ.

Question 8

8. ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲು ಫೇಸ್ಬುಕ್ನ 'ಶಿ ಮೀನ್ಸ್ ಬಿಸ್ನೆಸ್ (She means business)' ಕಾರ್ಯಕ್ರಮವನ್ನು ಯಾವ ರಾಜ್ಯ ಸರ್ಕಾರವು ಪ್ರಾರಂಭಿಸಿದೆ?

A
ಒಡಿಶಾ
B
ಜಾರ್ಖಂಡ್
C
ಮಧ್ಯ ಪ್ರದೇಶ
D
ಕರ್ನಾಟಕ
Question 8 Explanation: 
ಒಡಿಶಾ

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರವರು ಇತ್ತೀಚೆಗೆ ಭುವನೇಶ್ವರದಲ್ಲಿ ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲು ಫೇಸ್ಬುಕ್ನ 'ಶಿ ಮೀನ್ಸ್ ಬಿಸ್ನೆಸ್ (She means business)' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರಡಿ, 2018ರ ಅಂತ್ಯದ ವೇಳೆಗೆ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳಲ್ಲಿ 25,000 ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಗುಂಪು (ಎಸ್ಹೆಚ್ಜಿ) ಸದಸ್ಯರಿಗೆ ತರಬೇತಿ ನೀಡಲು ಒಡಿಶಾದ ಎಂಎಸ್ಎಂಇ ಇಲಾಖೆ ಮತ್ತು ಪ್ರಾಜೆಕ್ಟ್ ಮಿಷನ್ ಶಕ್ತಿಯೊಂದಿಗೆ ಫೇಸ್ಬುಕ್ ಒಪ್ಪಂದ ಮಾಡಿಕೊಂಡಿದೆ.

Question 9

9. ಒರಾಂಗ್ ರಾಷ್ಟ್ರೀಯ ಉದ್ಯಾನವನ (ಒಎನ್ಪಿ) ಯಾವ ರಾಜ್ಯದಲ್ಲಿದೆ?

A
ಅಸ್ಸಾಂ
B
ಅರುಣಾಚಲ ಪ್ರದೇಶ
C
ತ್ರಿಪುರ
D
ಮಣಿಪುರ
Question 9 Explanation: 
ಅಸ್ಸಾಂ
Question 10

10. 2017 ಅಂತಾರಾಷ್ಟ್ರೀಯ ಯುವ ದಿನದ ಧ್ಯೇಯವಾಕ್ಯ __________?

A
ನಮ್ಮ ಜಗತ್ತನ್ನು ಬದಲಿಸಿ
B
ಯುವಜನ ಮತ್ತು ಮಾನಸಿಕ ಆರೋಗ್ಯ
C
ಯುವಜನರಿಂದ ಶಾಂತಿ ನಿರ್ಮಾಣ
D
ಉತ್ತಮ ಸಮಾಜಕ್ಕೆ ಯುವಜನತೆ
Question 10 Explanation: 
ಯುವಜನರಿಂದ ಶಾಂತಿ ನಿರ್ಮಾಣ

ಅಂತಾರಾಷ್ಟ್ರೀಯ ಯುವ ದಿನವನ್ನು ಪ್ರತಿವರ್ಷ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಈ ವರ್ಷ ಅಂತಾರಾಷ್ಟ್ರೀಯ ಯುವ ದಿನದ ಧ್ಯೇಯವಾಕ್ಯ ಯುವಜನರಿಂದ ಶಾಂತಿ ನಿರ್ಮಾಣ.

There are 10 questions to complete.

[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-11-12-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್, 11, 12, 2017”

  1. Shivu

    Thank you karunadu

  2. Super qustion thank you karunadu exams centre

  3. shreenivas r pawar

    Karunadu exam super ittu

Leave a Comment

This site uses Akismet to reduce spam. Learn how your comment data is processed.