ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್, 9, 10, 2017

Question 1

1. ಶಪಥ್ ಭಾರದ್ವಾಜ್ ರವರು ಭಾರತದ ಟಾರ್ಗೆಟ್ ಒಲಂಪಿಕ್ ಪೊಡಿಯಂ (TOP) ಯೋಜನೆಗೆ ಆಯ್ಕೆಯಾಗಿರುವ ಭಾರತದ ಕಿರಿಯ ಕ್ರೀಡಾಪಟು ಎನಿಸಿದ್ದಾರೆ. ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಶೂಟಿಂಗ್
B
ಕುಸ್ತಿ
C
ಎತ್ತರ ಜಿಗಿತ
D
ಉದ್ದ ಜಿಗಿತ
Question 1 Explanation: 
ಶೂಟಿಂಗ್
Question 2

2. 2017 ನೇಟಿಕ್ಸ್ ಜಾಗತಿಕ ನಿವೃತ್ತಿ ಸೂಚ್ಯಂಕ (GRI) ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
54
B
43
C
35
D
65
Question 2 Explanation: 
43

2017 ಜಾಗತಿಕ ನಿವೃತ್ತಿ ಸೂಚ್ಯಂಕದಲ್ಲಿ ಭಾರತ 43ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದು, ಸ್ವಿಟ್ಜರ್ಲೆಂಡ್, ಐಸ್ಲ್ಯಾಂಡ್ ಮತ್ತು ಸ್ವೀಡೆನ್ ನಂತರದ ಸ್ಥಾನ ಪಡೆದುಕೊಂಡಿವೆ. ವಸ್ತು ಯೋಗಕ್ಷೇಮ, ಆರೋಗ್ಯ, ಹಣಕಾಸು ಮತ್ತು ಜೀವನದ ಗುಣಮಟ್ಟ ಆಧರಿಸಿ ಸೂಚ್ಯಂಕವನ್ನು ತಯಾರಿಸಲಾಗುವುದು. ಸೂಚ್ಯಂಕದ ಉದ್ದೇಶವು ನಿವೃತ್ತಿ ಮತ್ತು ಭವಿಷ್ಯದ ನಿವೃತ್ತಿ ಹೊಂದುವವರಿಗೆ ಜಾಗತಿಕ ಮಾನದಂಡವನ್ನು ಒದಗಿಸುವುದು.

Question 3

3. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಆಂಡ್ರಾಯ್ಡ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಯಾವ ತಂತ್ರಜ್ಞಾನ ದೈತ್ಯದೊಂದಿಗೆ ಪ್ರಾರಂಭಿಸಿದೆ?

A
ಗೂಗಲ್
B
ಮೈಕ್ರೋಸಾಪ್ಟ್
C
ಫೇಸ್ ಬುಕ್
D
ಐಬಿಎಮ್
Question 3 Explanation: 
ಗೂಗಲ್

ಆಂಡ್ರಾಯ್ಡ್ ಮತ್ತು ವೆಬ್ ಪ್ಲಾಟ್ಫಾರ್ಮ್ನಲ್ಲಿ ಮೊಬೈಲ್ ಅಭಿವೃದ್ಧಿ ತರಬೇತಿ ನೀಡಲು ಮತ್ತು ಭಾರತದಲ್ಲಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪರಿಸರ ವ್ಯವಸ್ಥೆಯ ಗುಣಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಮತ್ತು ಗೂಗಲ್ ಇಂಡಿಯಾ ಆಂಡ್ರಾಯ್ಡ್ ಸ್ಕಿಲ್ ಡೆವಲಪ್ಮೆಂಟ್ ಪ್ರೋಗ್ರಾಂ ಅನ್ನು ಪ್ರಾರಂಭಿಸಿವೆ.

Question 4

4. "ನಮಮಿ ಗಂಗೆ ಜಾಗ್ರತಿ ಯಾತ್ರೆ" ಎಂಬ ಹೊಸ ಜಾಗೃತಿ ಅಭಿಯಾನವನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

A
ಉತ್ತರ ಪ್ರದೇಶ
B
ಪಶ್ಚಿಮ ಬಂಗಾಳ
C
ಬಿಹಾರ್
D
ಉತ್ತರಖಂಡ್
Question 4 Explanation: 
ಉತ್ತರ ಪ್ರದೇಶ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗೀ ಆದಿತ್ಯನಾಥ್ ಅವರು ರಾಜ್ಯದ ರಾಜಧಾನಿ ಲಕ್ನೋದಲ್ಲಿ ಅಧಿಕೃತ ನಿವಾಸದಿಂದ ನಮಮಿ ಗಂಗೆ ಜಾಗ್ರತಿ ಯಾತ್ರೆ ಎಂಬ ಹೊಸ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಗಂಗಾ ನದಿ ತೀರದಲ್ಲಿ ಶುಚಿತ್ವವನ್ನು ಕೇಂದ್ರೀಕರಿಸುವುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶ. ಈ ಅಭಿಯಾನ ಸುಮಾರು 1,025 ಕಿ.ಮೀ. ಒಟ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಸೆಪ್ಟೆಂಬರ್ 6, 2017 ರಂದು ಸಮಾಪ್ತಿಯಾಗುತ್ತದೆ.

Question 5

5. ಮರಣ ಹೊಂದಿದ ಸೈನಿಕನ ಪತ್ನಿಗೆ ಯಾವ ಸಂಸದೀಯ ಸಮಿತಿಯು ಇತ್ತೀಚೆಗೆ 100% ಪಿಂಚಣಿಯನ್ನು ಶಿಫಾರಸು ಮಾಡಿದೆ?

A
ಕೆ ಪಿ ಸಕ್ಸೆನಾ ಸಮಿತಿ
B
ಬಿ ಸಿ ಖಂಡೂರಿ ಸಮಿತಿ
C
ಪಿ ಸಿ ಚಾಕೂ ಸಮಿತಿ
D
ಖೇಹರ್ ಸಮಿತಿ
Question 5 Explanation: 
ಬಿ ಸಿ ಖಂಡೂರಿ ಸಮಿತಿ

ಮೇಜರ್ ಜನರಲ್ (ನಿವೃತ್ತ) ಬಿ ಸಿ ಖಂಡೂರಿ ನೇತೃತ್ವದ ಸಂಸದೀಯ ಸಮಿತಿಯು ಇತ್ತೀಚೆಗೆ ತನ್ನ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ವರದಿಯಲ್ಲಿ, ಮರಣ ಹೊಂದಿದ ಸೈನಿಕನ ವಿಧವೆಗೆ 100% ಪಿಂಚಣಿಯನ್ನು ಶಿಫಾರಸು ಮಾಡಿದೆ, ಇದರಿಂದಾಗಿ ಆಕೆ ತನ್ನ ಕುಟುಂಬದ ಆರೈಕೆಯನ್ನು ಮಾಡಬಹುದು.

Question 6

6. 2017 UEFA ಸೂಪರ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಗೆದ್ದ ತಂಡ ಯಾವುದು?

A
ರಿಯಲ್ ಮ್ಯಾಡ್ರಿಡ್
B
ಬಾರ್ಸಿಲೋನ
C
ಮ್ಯಾಂಚೆಸ್ಟರ್ ಯುನೈಟೆಡ್
D
ಚೆಲ್ಸಿಯ
Question 6 Explanation: 
ರಿಯಲ್ ಮ್ಯಾಡ್ರಿಡ್
Question 7

7. ಮಂಡ್ಲ ಸಸ್ಯ ಪಳೆಯುಳಿಕೆ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

A
ಮಹಾರಾಷ್ಟ್ರ
B
ಮಧ್ಯ ಪ್ರದೇಶ
C
ರಾಜಸ್ತಾನ
D
ಗುಜರಾತ್
Question 7 Explanation: 
ಮಧ್ಯ ಪ್ರದೇಶ
Question 8

8. ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ (OUP) ಇತ್ತೀಚೆಗೆ ಕೆಳಗಿನ ಯಾವ ಭಾರತೀಯ ಭಾಷೆಗಳಲ್ಲಿ ಆನ್ಲೈನ್ ನಿಘಂಟನ್ನು ಬಿಡುಗಡೆ ಮಾಡಿದೆ?

A
ತಮಿಳು ಮತ್ತು ಮಲೆಯಾಳಂ
B
ಕನ್ನಡ ಮತ್ತು ತೆಲುಗು
C
ತಮಿಳು ಮತ್ತು ಗುಜರಾತಿ
D
ಮಲೆಯಾಳಂ ಮತ್ತು ಮರಾಠಿ
Question 8 Explanation: 
ತಮಿಳು ಮತ್ತು ಗುಜರಾತಿ

ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ (OUP) ಇತ್ತೀಚೆಗೆ ತಮಿಳು ಮತ್ತು ಗುಜರಾತಿ ಭಾಷೆಗಳಲ್ಲಿ ಆನ್ಲೈನ್ ನಿಘಂಟನ್ನು ಬಿಡುಗಡೆ ಮಾಡಿದೆ. ಆಕ್ಸ್ಫರ್ಡ್ ಗ್ಲೋಬಲ್ ಲ್ಯಾಂಗ್ವೇಜ್ (ಒಜಿಎಲ್) ಉಪಕ್ರಮದ ಒಂದು ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ.

Question 9

9. 2017 ಅಂತಾರಾಷ್ಟ್ರೀಯ ಜೈವಿಕ ಡೀಸೆಲ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಆಗಸ್ಟ್ 9
B
ಆಗಸ್ಟ್ 10
C
ಆಗಸ್ಟ್ 11
D
ಆಗಸ್ಟ್ 12
Question 9 Explanation: 
ಆಗಸ್ಟ್ 10

ಅಂತಾರಾಷ್ಟ್ರೀಯ ಜೈವಿಕ ಡೀಸೆಲ್ ದಿನವನ್ನು ಆಗಸ್ಟ್ 10 ರಂದು ಪ್ರತಿವರ್ಷ ಆಚರಿಸಲಾಗುತ್ತದೆ. ಜೈವಿಕ ಇಂಧನಗಳ ಬಳಕೆಗೆ ಕರೆ ನೀಡುವ ಗುರಿಯನ್ನು ಹೊಂದಿದೆ. 1893 ರ ವರ್ಷದಲ್ಲಿ ಕಡಲೆಕಾಯಿ ಎಣ್ಣೆಯಿಂದ ಎಂಜಿನ್ ಅನ್ನು ನಡೆಸಿದ ಸರ್ ರುಡಾಲ್ಫ್ ಡೀಸೆಲ್ ನಡೆಸಿದ ಸಂಶೋಧನೆಯ ಪ್ರಯೋಗಾರ್ಥ ಈ ದಿನವನ್ನು ಜೈವಿಕ ಡಿಸೇಲ್ ದಿನವನ್ನಾಗಿ ಆಚರಿಸಲಾಗುತ್ತಿದೆ.

Question 10

10. ಭಾರತದ 13ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ವೆಂಕಯ್ಯನಾಯ್ಡು ರವರು ಯಾವ ರಾಜ್ಯದವರು?

A
ತೆಲಂಗಣ
B
ಆಂಧ್ರ ಪ್ರದೇಶ
C
ತಮಿಳುನಾಡು
D
ಮಧ್ಯ ಪ್ರದೇಶ
Question 10 Explanation: 
ಆಂಧ್ರ ಪ್ರದೇಶ

ಮಾಜಿ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ರವರು ಆಗಸ್ಟ್ 13, 2017 ರಂದು ಭಾರತದ 13 ನೇ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ರವರು ಪ್ರಮಾಣ ವಚನ ಭೋದಿಸಿದರು. ನಾಯ್ಡು ರವರು 1949 ಜುಲೈ 1 ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚವತಪಾಲೆಮ್ನಲ್ಲಿ ಜನಿಸಿದರು. ದೇಶದ ಎರಡನೆಯ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾಗುವುದಕ್ಕೆ ಮುಂಚಿತವಾಗಿ, ಶ್ರೀ ನಾಯ್ಡು ಅವರು ಹಲವಾರು ಸ್ಥಾನಗಳನ್ನು ಹೊಂದಿದ್ದರು. ಅವರು 2002 ರಿಂದ 2004 ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಅವರು ಗ್ರಾಮೀಣಾಭಿವೃದ್ಧಿ ಕೇಂದ್ರ ಸಚಿವರಾಗಿದ್ದರು. ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ, ನಾಯ್ಡು ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-9-10-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.