ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,13,14,15,2017
Question 1 |
1. ಇತ್ತೀಚೆಗೆ ನಿಧನರಾದ ಡಾ. ಭಕ್ತಿ ಯಾದವ್ ರವರು ಯಾವ ರಾಜ್ಯದ ಮೊದಲ ಮಹಿಳಾ ಡಾಕ್ಟರ್ ಆಗಿದ್ದರು?
ಮಹಾರಾಷ್ಟ್ರ | |
ತಮಿಳುನಾಡು | |
ಮಧ್ಯ ಪ್ರದೇಶ | |
ಗುಜರಾತ್ |
ಮಧ್ಯಪ್ರದೇಶದ ಮೊದಲ ಮಹಿಳಾ ವೈದ್ಯೆ ಡಾ. ಭಕ್ತಿ ಯಾದವ್ (92) ರವರು ಆಗಸ್ಟ್ 14, 2017 ರಂದು ಇಂದೋರ್ನಲ್ಲಿ ನಿಧನ ಹೊಂದಿದರು. ಕಳೆದ 68 ವರ್ಷಗಳಿಂದ ಡಾ. ಯಾದವ್ ರವರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಪ್ರಸಿದ್ದರಾಗಿದ್ದರು. ಏಪ್ರಿಲ್ 2017 ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತನ್ನ ಆದರ್ಶಪ್ರಾಯ ಸೇವೆಗಳಿಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು.
Question 2 |
2. ದೇಶದ ಮೊದಲ “ರೈಲ್ವೆ ವಿಪತ್ತು ನಿರ್ವಹಣಾ ಕೇಂದ್ರ” ಯಾವ ನಗರದಲ್ಲಿ ಸ್ಥಾಪನೆಯಾಗಲಿದೆ?
ಹೈದ್ರಾಬಾದ್ | |
ಬೆಂಗಳೂರು | |
ಪುಣೆ | |
ಕೊಲ್ಕತ್ತ |
ದೇಶದ ಮೊದಲ ’ರೈಲ್ವೆ ವಿಪತ್ತು ನಿರ್ವಹಣಾ ಕೇಂದ್ರ’ ಬೆಂಗಳೂರು ಹೊರವಲಯ ಹೆಜ್ಜಾಲದಲ್ಲಿ ನಿರ್ಮಾಣವಾಗುತ್ತಿದ್ದು, ಮಂದಿನ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣವಾಗಲಿದೆ. ರೈಲು ದುರಂತದ ವಿವಿಧ ಮಾದರಿಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತದೆ. ರೈಲು ಅವಘಡಕ್ಕೆ ಒಳಗಾದಾಗ ನಡೆಸುವ ರಕ್ಷಣಾ ಕಾರ್ಯಾಚರಣೆಯನ್ನು ಇಲ್ಲಿ ನೈಜವೆಂಬಂತೆ ಕೈಗೊಳ್ಳಲಾಗುತ್ತದೆ. ಬೆಂಗಳೂರು ನಗರದಿಂದ 25 ಕಿ.ಮೀ ದೂರದಲ್ಲಿರುವ ಹೆಜ್ಜಾಲದಲ್ಲಿ ರೈಲ್ವೆ ಇಲಾಖೆಯು 3.32 ಚದರ ಕಿ.ಮೀ ಜಾಗದಲ್ಲಿ ₹44.42 ಕೋಟಿ ವೆಚ್ಚದಲ್ಲಿ ರೈಲ್ವೆ ವಿಪತ್ತು ನಿರ್ವಹಣೆ ಮತ್ತು ಸುರಕ್ಷತಾ ಗ್ರಾಮ ತಲೆ ಎತ್ತಲಿದೆ.
Question 3 |
3. ಭಾರತದ ಮೊದಲ ವಿಮಾನಯಾನ ವಿಶ್ವವಿದ್ಯಾನಿಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ?
ಗುಜರಾತ್ | |
ಉತ್ತರಪ್ರದೇಶ | |
ಜಾರ್ಖಂಡ್ | |
ಮಹಾರಾಷ್ಟ್ರ |
ಭಾರತದ ಮೊದಲ ವಿಮಾನಯಾನ ವಿಶ್ವವಿದ್ಯಾನಿಲಯವಾಗಿರುವ ರಾಜೀವ್ ಗಾಂಧಿ ರಾಷ್ಟ್ರೀಯ ವಾಯುಯಾನ ವಿಶ್ವವಿದ್ಯಾನಿಲಯವನ್ನು (ಆರ್ಜಿಎನ್ಎಯು) ಶೀಘ್ರದಲ್ಲಿಉತ್ತರಪ್ರದೇಶದ ರಾಯ್ಬರೇಲಿಯಲ್ಲಿರುವ ಫರ್ಸಾತ್ ಗಂಜ್ನಲ್ಲಿ ಉದ್ಘಾಟಿಸಲಾಗುವುದು. ವಿಮಾನಯಾನ ಅಧ್ಯಯನಗಳು, ಬೋಧನೆ, ತರಬೇತಿ ಮತ್ತು ಸಂಶೋಧನೆಗಳನ್ನು ಉತ್ತೇಜಿಸುವ ಮತ್ತು ಸೌಕರ್ಯ ಒದಗಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಕೇಂದ್ರ ನಾಗರಿಕ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಈ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿದೆ. ಏರ್ ವೈಸ್ ಮಾರ್ಷಲ್ (ನಿವೃತ್ತ) ನಳಿನ್ ಟಂಡನ್ ಅವರನ್ನು ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ.
Question 4 |
4. ಐಎನ್ಎಸ್ಎಸ್ (INSS) ಚೊಚ್ಚಲ ಇಂಟರ್ನ್ಯಾಷನಲ್ ಮೆರಿಟೈಮ್ ಸರ್ಚ್ ಮತ್ತು ರೆಸ್ಕ್ಯೂ ಎಕ್ಸ್ಪ್ರೆಸ್ಸ್ (IMMSAREX) -2017 ರ ಅಧ್ಯಕ್ಷತೆ ವಹಿಸಲಿರುವ ರಾಷ್ಟ್ರ ಯಾವುದು?
ಭಾರತ | |
ಶ್ರೀಲಂಕಾ | |
ಬಾಂಗ್ಲದೇಶ | |
ಚೀನಾ |
ನವೆಂಬರ್ 2017ರಲ್ಲಿ ನಡೆಯಲಿರುವ ಇಂಡಿಯನ್ ಓಷನ್ ನೇವಲ್ ಸಿಂಪೋಸಿಯಮ್ (IONS)ನ ಇಂಟರ್ನ್ಯಾಶನಲ್ ಮೆರಿಟೈಮ್ ಸರ್ಚ್ ಮತ್ತು ರೆಸ್ಕ್ಯೂ ಎಕ್ಸ್ಪ್ರೆಸ್ (IMMSAREX) ಅಧ್ಯಕ್ಷತೆಯನ್ನು ಬಾಂಗ್ಲದೇಶ ವಹಿಸಿಕೊಳ್ಳಲಿದೆ. ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ INOS ಸದಸ್ಯ ಮತ್ತು ವೀಕ್ಷಕ ರಾಷ್ಟ್ರಗಳ ನೌಕೆಗಳು ಮತ್ತು ವಿಮಾನಗಳು ಈ ವ್ಯಾಯಾಮದಲ್ಲಿ ಪಾಲ್ಗೊಳ್ಳಲಿವೆ. ಐಒಎನ್ಎಸ್ ಹಿಂದೂ ಮಹಾಸಾಗರದ ಕಡಲತೀರದ ರಾಷ್ಟ್ರಗಳ ಪ್ರಾದೇಶಿಕ ವೇದಿಕೆಯಾಗಿದ್ದು, ಫೆಬ್ರವರಿ 2008 ರಲ್ಲಿ ಭಾರತದಿಂದ ಪ್ರಾರಂಭಿಸಲ್ಪಟಿತು. ಇದು ಪ್ರಸ್ತುತ 23 ಸದಸ್ಯರನ್ನು ಮತ್ತು ಒಂಬತ್ತು ವೀಕ್ಷಕ ರಾಷ್ಟ್ರಗಳನ್ನು ಹೊಂದಿದೆ.
Question 5 |
5. ಈ ಕೆಳಗಿನ ಯಾವ ರಾಷ್ಟ್ರ ಭದ್ರತಾ ವಿಷಯಗಳ ಬಗ್ಗೆ 2017 ಜಿ 7 ಆಂತರಿಕ ಮಂತ್ರಿಗಳ ಸಭೆಯ ಆತಿಥ್ಯ ವಹಿಸಲಿದೆ?
ಜರ್ಮನಿ | |
ಫ್ರಾನ್ಸ್ | |
ಇಟಲಿ | |
ಸ್ಪೇನ್ |
ಇಟಲಿಯು 2017 ಅಕ್ಟೋಬರ್ ನಲ್ಲಿ ನಡೆಯಲಿರುವ ಭದ್ರತಾ ವಿಷಯಗಳ ಮೇಲೆ ಕೇಂದ್ರೀಕರಿಸಿದ ಜಿ 7 ಆಂತರಿಕ ಮಂತ್ರಿಗಳ ಶೃಂಗಸಭೆಯ ಆತಿಥ್ಯ ವಹಿಸಲಿದೆ. ಕೆನಡಾ, ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್ಡಮ್, ಜಪಾನ್ ಜಿ 7 ಪಾಲುದಾರ ರಾಷ್ಟ್ರಗಳ ಕೋರಿಕೆಯ ಮೇರೆಗೆ ಈ ಸಭೆಯನ್ನು ಆಯೋಜಿಸಲಾಗಿದೆ.
Question 6 |
6. ರಾಜ್ಯ ಸಭಾ ಟಿವಿ (RSTV) ಯ ನೂತನ ಸಿಇಓ ಆಗಿ ಯಾರು ನೇಮಕಗೊಂಡಿದ್ದಾರೆ?
ಶಶಿ ಶೇಖರ್ ವೆಂಪತಿ | |
ನಾರಾಯಣ್ ಶೌರಿ | |
ಅಮಿತ್ ಚೌಧರಿ | |
ಶೇಖರ್ ಬಾಬು |
ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶಶಿ ಶೇಖರ್ ವೆಂಪತಿ ರವರಿಗೆರಾಜ್ಯಸಭೆ ಟಿವಿ (RSTV) ಸಿಇಒ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. 2011 ರಿಂದ ರಾಜ್ಯಸಭೆ ಟಿ.ವಿ.ಯ ಸಿಇಒ ಮತ್ತು ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಗುರುಪೀಪ್ ಸಿಂಗ್ ಸಪ್ಪಲ್ ಅವರ ಉತ್ತರಾಧಿಕಾರಿಯಾಗಿ ವೆಂಪತಿ ಕಾರ್ಯನಿರ್ವಹಿಸಲಿದ್ದಾರೆ. RSTV ರಾಜ್ಯಸಭೆ ಸ್ವಾಮ್ಯಕ್ಕೆ ಒಳಪಟ್ಟಿದ್ದು, ರಾಜ್ಯಸಭೆಯಿಂದ ನಿರ್ವಹಿಸಲ್ಪಡುತ್ತದೆ. ಉಪರಾಷ್ಟ್ರಪತಿಗಳು ಇದರ ಅಧ್ಯಕ್ಷರಾಗಿದ್ದಾರೆ.
Question 7 |
7. 2017 ಬಲ್ಗೇರಿಯಾ ಓಪನ್ ಇಂಟರ್ನ್ಯಾಶನಲ್ ಸಿರೀಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತೀಯ ಶಟ್ಲರ್ ಯಾರು?
ಹೆಚ್ ಎಸ್ ಪ್ರಣಯ್ | |
ಕಿಡಂಬಿ ಶ್ರೀಕಾಂತ್ | |
ಲಕ್ಷ್ಯ ಸೇನ್ | |
ವಿ ಡಿಜು |
ಭಾರತದ ಲಕ್ಷ್ಯ್ಯ ಸೇನ್ ರವರು ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾದ ಝವೋನಿಮಿರ್ ಡರ್ಕಿನ್ಜಾಕ್ ಅವರನ್ನು 18-21, 21-12, 21-17ರಿಂದ ಸೋಲಿಸಿ 2017 ಬಲ್ಗೇರಿಯಾ ಓಪನ್ ಅಂತರರಾಷ್ಟ್ರೀಯ ಸಿರೀಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
Question 8 |
8. “ದಿ ಎಕನಾಮಿಸ್ಟ್'ಸ್ ಗ್ಲೋಬಲ್ ಲೈವ್ಬಿಲಿಟಿ ರಿಪೋರ್ಟ್-2017” ಪ್ರಕಾರ ವಿಶ್ವದ ಜೀವಿಸಲು ಯೋಗ್ಯವಾದ ನಗರವೆಂದು ಘೋಷಿಸಲ್ಪಟ್ಟ ನಗರ ಯಾವುದು?
ಬೆಂಗಳೂರು | |
ಪರ್ಥ್ | |
ಮೆಲ್ಬೋರ್ನ್ | |
ಲಂಡನ್ |
ದಿ ಎಕನಾಮಿಸ್ಟ್'ಸ್ ಗ್ಲೋಬಲ್ ಲೈವ್ಬಿಲಿಟಿ ರಿಪೋರ್ಟ್-2017” ಪ್ರಕಾರ ಮೆಲ್ಬರ್ನ್ ನಗರವು ಸತತ 7 ನೇ ವರ್ಷ ವಿಶ್ವದ ಅತಿ ಹೆಚ್ಚು ಜೀವಿಸಲು ಯೋಗ್ಯವಾದ ನಗರವೆಂದು ಘೋಷಿಸಲ್ಪಟ್ಟಿದೆ, ವಿಶ್ವದ ಟಾಪ್ ಟೆನ್ ಜೀವಿಸಲು ಯೋಗ್ಯವಾದ ನಗರಗಳೆಂದರೆ ವಿಯೆನ್ನಾ, ವ್ಯಾಂಕೂವರ್, ಟೊರೊಂಟೊ, ಕ್ಯಾಲ್ಗರಿ, ಅಡಿಲೇಡ್, ಪರ್ತ್, ಆಕ್ಲೆಂಡ್, ಹೆಲ್ಸಿಂಕಿ ಮತ್ತು ಹ್ಯಾಂಬರ್ಗ್ ಸೇರಿವೆ. ಸಮೀಕ್ಷೆಯ ಪ್ರಕಾರ, ಡಮಾಸ್ಕಸ್ 140ನೇ ಸ್ಥಾನದಲ್ಲಿದೆ,
Question 9 |
9. 2016-17ನೇ ಸಾಲಿನ NABARD ನ 'ಅತ್ಯುತ್ತಮ ಸಾಧನೆ ಪ್ರಶಸ್ತಿ'ಯನ್ನು ಯಾವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಪಡೆದುಕೊಂಡಿದೆ?
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ | |
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ | |
ತೆಲಂಗಣ ಗ್ರಾಮೀಣ ಬ್ಯಾಂಕ್ | |
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ |
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD)ನ 'ಅತ್ಯುತ್ತಮ ಸಾಧನೆ ಪ್ರಶಸ್ತಿ' ಯನ್ನು 2015-16 ಮತ್ತು 2016-17ನೇ ಸಾಲಿಗೆ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ)ಗೆ ನೀಡಲಾಗಿದೆ. ಕೆ.ವಿ.ಜಿ.ಬಿ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವದ ಬ್ಯಾಂಕ್ ಆಗಿದೆ.
Question 10 |
10. “The Adivasi Will Not Dance” ಪುಸ್ತಕದ ಲೇಖಕರು _________?
ರವೀಂದ್ರ್ ಜೈನ್ | |
ಚೇತನ್ ಭಗತ್ | |
ಹನ್ಸ್ಡಾ ಸೌವೆಂದ್ರ ಶೇಖರ್ | |
ಸುಮೀತ್ ಜೈನ್ |
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-131415-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
super sir