ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,27,28,29,2017
Question 1 |
1. 2017 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?
ಪಿ ವಿ ಸಿಂಧು | |
ನೋಜೊಮಿ ಒಕುಹರಾ | |
ಕಿಮ್ ಕ್ಸಿಯಾಮಿ | |
ಕ್ಸಿನ್ ಒಕುಹರಾ |
ಜಪಾನಿನ ಬ್ಯಾಡ್ಮಿಂಟನ್ ತಾರೆ ನೋಜೊಮಿ ಒಕುಹರಾ ರವರು 12-21, 21-17, 21-10 ಅಂತರದಿಂದ ಭಾರತದ ಪಿ ವಿ ಸಿಂಧು ಅವರನ್ನು ಸೋಲಿಸಿ 2017 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Question 2 |
2. 2017 ಫಾರ್ಮುಲಾ 1 ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಯಾರು?
ಸೆಬಾಸ್ಟಿಯನ್ ವೆಟ್ಟಲ್ | |
ಲೇವಿಸ್ ಹ್ಯಾಮಿಲ್ಟನ್ | |
ಮ್ಯಾಕ್ಸ್ ವರ್ಸಟ್ಪನ್ | |
ಡೆನಿಯಲ್ ರೆಕ್ಕಿಯಾರ್ಡೊ |
Question 3 |
3. ಈ ಕೆಳಗಿನ ಯಾವ ದೇಶ 2017 ಹಿಂದೂ ಮಹಾಸಾಗರ ಸಮ್ಮೇಳನದ(ಐಓಸಿ) ವನ್ನು ಆಯೋಜಿಸುತ್ತಿದೆ?
ಪಾಕಿಸ್ತಾನ | |
ಭಾರತ | |
ಶ್ರೀಲಂಕಾ | |
ಬಾಂಗ್ಲದೇಶ |
ಶ್ರೀಲಂಕಾದ ಕೊಲೊಂಬೊದಲ್ಲಿ 2017 ಹಿಂದೂ ಮಹಾಸಾಗರ ಸಮ್ಮೇಳನ ಆಗಸ್ಟ್ 31 ರಂದು ನಡೆಯಲಿದೆ. ಈ ಸಮ್ಮೇಳನದ ಥೀಮ್ "ಶಾಂತಿ, ಪ್ರಗತಿ ಮತ್ತು ಸಮೃದ್ಧತೆ". ಭಾರತದಿಂದ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
Question 4 |
4. ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರಾಗಿ ಈ ಮುಂದಿನ ಯಾರು ನೇಮಕಗೊಂಡಿದ್ದಾರೆ?
ದೀಪಕ್ ಮಿಶ್ರಾ | |
ಚೂಡಾಮಣಿ | |
ಭಕ್ತವತ್ಸಲಂ | |
ಶೇಖರ್ ಗುಪ್ತಾ |
ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಮಿಶ್ರಾ ರವರು 13 ತಿಂಗಳ ಕಾಲ ಹುದ್ದೆಯಲ್ಲಿ ಇರಲಿದ್ದಾರೆ.
Question 5 |
5. ಈಶಾನ್ಯ ಭಾರತದ ಮೊದಲ 100% ಕಂಪ್ಯೂಟರ್ ಸಾಕ್ಷರತಾ ಗ್ರಾಮವೆನಿಸಿರುವ “ನಂಗ್ಥಾಂಗ್ ತಂಪಕ್” ಯಾವ ರಾಜ್ಯದಲ್ಲಿದೆ?
ಮಣಿಪುರ | |
ಸಿಕ್ಕಿಂ | |
ನಾಗಲ್ಯಾಂಡ್ | |
ಅಸ್ಸಾಂ |
ಮಣಿಪುರದ ನಂಗ್ಥಾಂಗ್ ಟ್ಯಾಂಪಾಕ್ ಗ್ರಾಮ ಈಶಾನ್ಯ ಭಾರತದ ಮೊದಲ 100% ಕಂಪ್ಯೂಟರ್ ಸಾಕ್ಷರತಾ ಗ್ರಾಮವಾಗಿ ಮಾರ್ಪಟ್ಟಿದೆ. ಕೇರಳದ ಚಾಮರಾವಂ ಗ್ರಾಮ ಭಾರತದ ಮೊದಲ 100% ಕಂಪ್ಯೂಟರ್ ಸಾಕ್ಷರತಾ ಗ್ರಾಮವಾಗಿದೆ.
Question 6 |
6. ವಿಶ್ವದ ಮೊದಲ ಹವಾಗುಣ-ಸ್ಮಾರ್ಟ್ ಹಿಮ ಚಿರತೆ ಯೋಜನೆಯನ್ನು ಯಾವ ದೇಶವು ಪ್ರಾರಂಭಿಸಿದೆ?
ನೇಪಾಳ | |
ರಷ್ಯಾ | |
ಮಂಗೋಲಿಯಾ | |
ಭಾರತ |
ಅಳಿವಿನಂಚಿನಲ್ಲಿರುವ ಹಿಮ ಚಿರತೆ ಮತ್ತು ಅದರ ಆವಾಸಸ್ಥಾನವನ್ನು ರಕ್ಷಿಸಲು ನೇಪಾಳ ಸರ್ಕಾರ ಪ್ರಪಂಚದ ಮೊದಲ ಹವಾಗುಣದ-ಸ್ಮಾರ್ಟ್ ಹಿಮ ಚಿರತೆ ನಿರ್ವಹಣೆ ಯೋಜನೆಯನ್ನು ಪ್ರಾರಂಭಿಸಿದೆ.
Question 7 |
7. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 27 | |
ಆಗಸ್ಟ್ 28 | |
ಆಗಸ್ಟ್ 29 | |
ಆಗಸ್ಟ್ 30 |
ಭಾರತದ ಖ್ಯಾತ ಮಾಜಿ ಹಾಕಿ ಆಟಗಾರ ಧ್ಯಾನ್ ಚಂದ್ ರವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಪ್ರತಿವರ್ಷ ಆಗಸ್ಟ್ 29 ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರಧಾನ ಮಾಡಲಿದ್ದಾರೆ.
Question 8 |
8. ಯಾವ ರಾಜ್ಯ / ಕೇಂದ್ರಾಡಳಿತ ಪ್ರದೇಶದ ಪೊಲೀಸ್ "ಯುವ" ಎಂಬ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
ಹರಿಯಾಣ ಪೊಲೀಸ್ | |
ದೆಹಲಿ ಪೊಲೀಸ್ | |
ಗುಜರಾತ್ ಪೊಲೀಸ್ | |
ಕರ್ನಾಟಕ ಪೊಲೀಸ್ |
ಪ್ರಧಾನ್ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ ದೆಹಲಿ ಪೊಲೀಸ್ ಉಪಕ್ರಮ “ಯುವ” ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಉದ್ಘಾಟಿಸಿದ್ದಾರೆ. ಈ ಉಪಕ್ರಮಕ್ಕಾಗಿ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಮತ್ತು ಕಾನ್ಫಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಯೊಂದಿಗೆ ದೆಹಲಿ ಪೊಲೀಸರು ಒಪ್ಪಂದ ಮಾಡಿಕೊಂಡಿದ್ದಾರೆ.
Question 9 |
9. ಗೋಬಿಂದೋಬಾಗ್ ಭತ್ತ ಇತ್ತೀಚೆಗೆ ಭೌಗೋಳಿಕ ಗುರುತು (ಜಿಐ) ಸ್ಥಾನವನ್ನು ಪಡೆದುಕೊಂಡಿದೆ. ಈ ಭತ್ತವನ್ನು ಪ್ರಮುಖವಾಗಿ ಯಾವ ರಾಜ್ಯದಲ್ಲಿ ಬೆಳೆಯಲಾಗುತ್ತದೆ?
ಸಿಕ್ಕಿಂ | |
ಒಡಿಶಾ | |
ಪಶ್ಚಿಮ ಬಂಗಾಳ | |
ತೆಲಂಗಣ |
ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯ ಗೋಬಿಂದೋಬಾಗ್ ಭತ್ತ ಇತ್ತೀಚೆಗೆ ಭೌಗೋಳಿಕ ಗುರುತು (ಜಿಐ) ಪಡೆದಿದೆ. GI ಟ್ಯಾಗ್ ಪಡೆದಿರುವ ಪರಿಣಾಮವಾಗಿ, ಇತರ ಪ್ರದೇಶಗಳ ಭತ್ತ ಅಥವಾ ಇತರ ವಿಧದ ಭತ್ತವನ್ನು 'ಗೋಬಿಂದೋಬಾಗ್' ಎಂದು ಬ್ರಾಂಡ್ ಮಾಡಲು ಸಾಧ್ಯವಿಲ್ಲ. ಬರ್ದ್ವಾನ್ (ಈಗ ಪೂರ್ವ ಮತ್ತು ಪಶ್ಚಿಮ ಬರ್ದ್ವಾನ್ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ) ಪ್ರದೇಶವನ್ನು ಬಂಗಾಳದ ಭತ್ತದ ಕಣಜ ಎಂದು ಕರೆಯಲಾಗುತ್ತದೆ.
Question 10 |
10. ಭಾರತ ಮತ್ತು ಯಾವ ದೇಶ ದೀಪಾವಳಿಯನ್ನು ವಸ್ತುವಿಷಯವನ್ನಾಗಿ ಆಧಾರಿಸಿ ಅಂಚೆಚೀಟಿಗಳನ್ನು ಜಂಟಿಯಾಗಿ ಹೊರತರಲಿದೆ?
ಕೆನಡಾ | |
ಅಮೆರಿಕ | |
ಫ್ರಾನ್ಸ್ | |
ಬ್ರೆಜಿಲ್ |
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಭಾರತ ಮತ್ತು ಕೆನಡಾ ದೀಪಾವಳಿ ವಿಷಯದಲ್ಲಿ ಎರಡು ಸ್ಮರಣಾರ್ಥ ಅಂಚೆಚೀಟಿಗಳನ್ನು ಜಂಟಿಯಾಗಿ ವಿತರಿಸಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದೆ. ಜಂಟಿ ಅಂಚೆಚೀಟಿಗಳನ್ನು ಸೆಪ್ಟೆಂಬರ್ 21, 2017 ರಂದು ಬಿಡುಗಡೆ ಮಾಡಲಾಗುವುದು, ಎರಡು ದೇಶಗಳ ಅಂಚೆ ಇಲಾಖೆಗಳ ನಡುವೆ ಒಪ್ಪಂದ ಮಾಡಿಕೊಂಡಿದೆ.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್2728292017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Anand group