ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನ-33

Question 1

1. ದೇಶದ ಮೊದಲ ಕೃಷಿ ಬೆಲೆ ಮುನ್ಸೂಚನೆ ಮಾದರಿ ಅಭಿವೃದ್ದಿಪಡಿಸಲು ರಾಜ್ಯ ಸರ್ಕಾರ ಯಾವ ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A
ಗೂಗಲ್
B
ಮೈಕೋಸಾಫ್ಟ್
C
ಇನ್ಪೋಸಿಸ್
D
ವಿಪ್ರೊ
Question 1 Explanation: 
ಮೈಕೋಸಾಫ್ಟ್

ಕರ್ನಾಟಕ ಸರ್ಕಾರವು ರೈತರು, ಅಧಿಕಾರಿಗಳು ಮತ್ತು ಇತರ ಪಾಲುದಾರರಿಗೆ ಮುಂಚಿತವಾಗಿ ಮಾರುಕಟ್ಟೆಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಐಟಿ ಉಪಕರಣಗಳನ್ನು ಬಳಸಿಕೊಂಡು ವಿಶಿಷ್ಟವಾದ "ಕೃಷಿ ಬೆಲೆ ಮುನ್ಸೂಚನಾ ಮಾದರಿ" ಅನ್ನು ಅಭಿವೃದ್ಧಿಪಡಿಸಲು ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಇಂಡಿಯಾದ ಜೊತೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಮಾಡಿದೆ. ಪ್ರಸ್ತಾವಿತ ಉಪಕ್ರಮವು ದೇಶದಲ್ಲೆ ಮೊದಲನೆಯದು.

Question 2

2. ಈ ಕೆಳಗಿನ ರಾಸಾಯನಿಕಗಳನ್ನು ಗಮನಿಸಿ:

I) ಸಿಲ್ವರ್ ಅಯೋಡಿಡ್

II) ಪೋಟಾಷಿಯಂ ಅಯೋಡಿಡ್

III) ಡ್ರೈ ಐಸ್

ಮೇಲಿನ ಯಾವ ರಾಸಾಯನಿಕಗಳನ್ನು ಕೃತಕ ಮೋಡ ಬಿತ್ತನೆಯಲ್ಲಿ ಬಳಸಲಾಗುತ್ತದೆ?

A
I ಮಾತ್ರ
B
II ಮಾತ್ರ
C
I & II ಮಾತ್ರ
D
ಮೇಲಿನ ಎಲ್ಲವು
Question 2 Explanation: 
ಮೇಲಿನ ಎಲ್ಲವು

ಮೋಡದ ಬಿತ್ತನೆಗೆ ಬಳಸುವ ರಾಸಾಯನಿಕಗಳಲ್ಲಿ ಸಿಲ್ವರ್ ಅಯೋಡಿಡ್, ಪೊಟ್ಯಾಸಿಯಮ್ ಅಯೋಡಿಡ್ ಮತ್ತು ಒಣ ಐಸ್ (ಘನ ಕಾರ್ಬನ್ ಡೈಆಕ್ಸೈಡ್) ಸೇರಿವೆ. ಲಿಕ್ವಿಡ್ ಪ್ರೋಪೇನ್, ಅನಿಲದೊಳಗೆ ವಿಸ್ತರಿಸಲ್ಪಡುತ್ತದೆ, ಇದನ್ನು ಕೂಡ ಬಳಸಲಾಗುತ್ತದೆ.

Question 3

3. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಕರ್ನಾಟಕ “ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ”ವನ್ನು ಗದಗದಲ್ಲಿ ಸ್ಥಾಪಿಸಲಾಗಿದೆ

II) ವಿಶ್ವವಿದ್ಯಾಲಯದ ಸ್ಥಾಪನೆ ಬಗ್ಗೆ ವರದಿ ನೀಡಲು ಶ್ರೀ ವಿಜಯ ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 3 Explanation: 
ಹೇಳಿಕೆ ಎರಡು ಮಾತ್ರ

ವಿಶ್ವವಿದ್ಯಾಲಯದ ಸ್ಥಾಪನೆ ಬಗ್ಗೆ ವರದಿ ನೀಡಲು ಶ್ರೀ ಎಸ್ ವಿ ರಂಗನಾಥ್, ಐಎಎಸ್, ನಿವೃತ್ತ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತ್ತು.

Question 4

4. ಕೇಂದ್ರ ಮಾನವ ಸಂಪನ್ಮೂಲ ಬಿಡುಗಡೆಗೊಳಿಸಿದ ಸ್ವಚ್ಚತಾ ಶ್ರೇಣಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕದ ವಿದ್ಯಾಸಂಸ್ಥೆ ಯಾವುದು?

A
ಕೆಎಲ್ಇ, ಬೆಳಗಾವಿ
B
ಸಿದ್ದಗಂಗಾ ಮಠ, ತುಮಕೂರು
C
ಬಿಜಿಎಸ್, ಆದಿಚುಂಚನಗಿರಿ
D
ಜೆಎಸ್ಎಸ್, ಮೈಸೂರು
Question 4 Explanation: 
ಕೆಎಲ್ಇ, ಬೆಳಗಾವಿ

ಸುಂದರ ಮತ್ತು ಸುಸಜ್ಜಿತ ಕ್ಯಾಂಪಸ್ ಹೊಂದಿರುವ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಚ್ಛತಾ ಶ್ರೇಣಿ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ ಕೆಎಲ್ ಇ ವಿದ್ಯಾಸಂಸ್ಥೆ ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ರಾಷ್ಟ್ರಮಟ್ಟದಲ್ಲಿ ಈ ಸಂಸ್ಥೆ 4ನೇ ಸ್ಥಾನವನ್ನು ಪಡೆದುಕೊಂಡಿದೆ.ವಿದ್ಯಾರ್ಥಿಗಳು ಶೌಚಗೃಹದ ಸರಾಸರಿ, ಅಡುಗೆ ಕೋಣೆ ಸ್ವಚ್ಛತೆ, ಹರಿಯುವ ನೀರಿನ ಲಭ್ಯತೆ, ಶೌಚಗೃಹ ಮತ್ತು ಅಡುಗೆ ಕೋಣೆಯಲ್ಲಿ ಆಧುನಿಕ ವಸ್ತುಗಳು, ಕ್ಯಾಂಪಸ್ನಲ್ಲಿನ ಹಸಿರಿನ ಪ್ರಮಾಣ, ವಸತಿಗೃಹ ಮತ್ತು ಶೈಕ್ಷಣಿಕ ಕಟ್ಟಡಗಳಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಅನುಸರಿಸಲಾಗುತ್ತಿರುವ ತಂತ್ರ, ನೀರು ಪೂರೈಕೆ ವ್ಯವಸ್ಥೆ ಜತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ತೊಡಗಿಸಿಕೊಂಡಿರುವುದನ್ನು ಆಧರಿಸಿ ಶ್ರೇಣಿ ನೀಡಲಾಗುತ್ತದೆ.

Question 5

5. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

I) ಮೈಸೂರಿನ ಐತಿಹಾಸಿಕ ಲಲಿತ ಮಹಲ್ ಪ್ಯಾಲೇಸ್ ಹೊಟೇಲ್ ಅನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿದೆ

II) ಲಲಿತ ಮಹಲ್ ಪ್ಯಾಲೇಸ್ ಹೋಟೆಲನ್ನು 1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದರು

III) ಭಾರತ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ನಿರ್ವಹಿಸುತ್ತಿರುವ ರಾಜ್ಯದ ಏಕೈಕ ಹೋಟೆಲ್ ಇದಾಗಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 5 Explanation: 
I, II & III

ಮೈಸೂರಿನ ಐತಿಹಾಸಿಕ ಲಲಿತ ಮಹಲ್ ಪ್ಯಾಲೇಸ್ ಹೊಟೇಲ್ ನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಈ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿರ್ವಹಣೆ ಮಾಡುತ್ತಿದ್ದವು. ಈಗ ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕೆ ಹೋಟೇಲನ್ನು ಹಸ್ತಾಂತರಿಸಲಾಗುತ್ತದೆ. ITDC ರಾಜ್ಯದಲ್ಲಿ ನಿರ್ವಹಿಸುತ್ತಿರುವ ಏಕೈಕ ಹೋಟೆಲ್

Question 6

6. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ

I) ಕರ್ನಾಟಕದ ತನ್ವಿ ಜಗದೀಶ್ ರವರು ಗಾಲ್ಫ್ ಕ್ರೀಡೆಗೆ ಸಂಬಂಧಿಸಿದ್ದಾರೆ

II) ಇತ್ತೀಚೆಗೆ ಇವರಿಗೆ ಅಮೆರಿಕದ ಗ್ರೋಮ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿದ ಕೋಡ್ ಮೂಲಕ ಗುರುತಿಸಿ:

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 6 Explanation: 
ಹೇಳಿಕೆ ಎರಡು ಮಾತ್ರ

ದೇಶದ ಖ್ಯಾತ ಸರ್ಫರ್ ಹಾಗೂ ಸ್ಟ್ಯಾಂಡ್ ಅಪ್ ಪೆಡ್ಲರ್ ಮಂಗಳೂರಿನ ತನ್ವಿ ಜಗದೀಶ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಬಾಜನರಾಗಿದ್ದಾರೆ.ಅಮೆರಿಕದ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೊ ಸರ್ಫ್ ಕನೆಕ್ಟ್ ಸಂಘಟನೆ ಕ್ರೀಡಾ ಸಾಧಕರಿಗೆ ನೀಡುವ ಗ್ರೋಮ್ ಆಫ್ ದಿ ಇಯರ್ ಪ್ರಶಸ್ತಿಗೆ ತನ್ವಿ ಜಗದೀಶ್ ಆಯ್ಕೆಯಾಗಿದ್ದಾರೆ. ಈ ಮೂಲಕ ತನ್ವಿ ಜಗದೀಶ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಸ್ಟ್ಯಾಂಡ್ ಅಪ್ ಪೆಡ್ಲರ್ ಎನಿಸಿದ್ದಾರೆ.

Question 7

7. ಕರ್ನಾಟಕದ ಈ ಕೆಳಗಿನ ಯಾವ ಜಿಲ್ಲೆಯಲ್ಲಿ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆಯನ್ನು ಕಾಣಬಹುದು?

A
ಉತ್ತರ ಕನ್ನಡ
B
ದಕ್ಷಿಣ ಕನ್ನಡ
C
ಚಿಕ್ಕಮಗಳೂರು
D
ಶಿವಮೊಗ್ಗ
Question 7 Explanation: 
ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೇಂದ್ರ್ತೀರ್ಥ ದಕ್ಷಿಣ ಭಾರತದ ಬಿಸಿನೀರ ಬುಗ್ಗೆ ಎನಿಸಿದೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಬಂದಾರು ಬಿಸಿನೀರ ಚಿಲುಮೆ ಪತ್ತೆ ಆಗಿದೆ. ಈ ಬಿಸಿನೀರ ಚಿಲುಮೆ ಸುಮಾರು 100-150 ವರ್ಷಗಳಷ್ಟು ಹಿಂದಿನದ್ದಾಗಿರಬಹುದೆಂದು ಅಂದಾಜಿಸಲಾಗಿದೆ.

Question 8

8. ಬೆಂಗಳೂರನ್ನು ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯಾಗಿ ಪರಿವರ್ತಿಸಲು ಸರ್ಕಾರ ಈ ಕೆಳಗಿನ ಯಾವ ನೀತಿಯನ್ನು ಜಾರಿಗೆ ತಂದಿದೆ?

A
ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ-2017
B
ವಿದ್ಯುತ್ ವಾಹನ ಮತ್ತು ಹಸಿರು ಇಂಧನ ನೀತಿ-2017
C
ವಿದ್ಯುತ್ ವಾಹನ ಮತ್ತು ಇಂಧನ ಬಳಕೆ ನೀತಿ-2017
D
ಮೇಲಿನ ಯಾವುದು ಅಲ್ಲ
Question 8 Explanation: 
ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ-2017

ರಾಜ್ಯ ಸರ್ಕಾರ ಬೆಂಗಳೂರನ್ನು ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯಾಗಿ ಪರಿವರ್ತಿಸಲು ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ-2017ಯನ್ನು ಜಾರಿಗೆ ತಂದಿದೆ. ಇದರಡಿ ಪರಿಸರಸ್ನೇಹಿ ವಾಹನ ಬಳಕೆಗೆ ಪ್ರೋತ್ಸಾಹಿಸುವ ಜತೆಗೆ ರಾಜ್ಯಕ್ಕೆ 31,000 ಕೋಟಿ ರೂ. ಬಂಡವಾಳ ಆಕರ್ಷಿಸಿ 55,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.

Question 9

9. ಇತ್ತೀಚೆಗೆ ನಿಧನರಾದ “ಕುಬಣೂರು ಶ್ರೀಧರರಾವ್” ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?

A
ಸಾಹಿತ್ಯ
B
ಯಕ್ಷಗಾನ
C
ವಿಜ್ಞಾನ
D
ಕ್ರೀಡೆ
Question 9 Explanation: 
ಯಕ್ಷಗಾನ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಪೈಕಿ ನಾಲ್ಕನೇ ಮೇಳದ ಪ್ರಧಾನ ಭಾಗವತರಾದ ಕುಬಣೂರು ಶ್ರೀಧರ ರಾವ್ ನಿಧನರಾದರು. ಯಕ್ಷಗಾನ ವಿಷಯಗಳ ಮಾಸಪತ್ರಿಕೆ ‘ಯಕ್ಷಪ್ರಭಾ’ದ ಸಂಪಾದಕರಾಗಿ 22 ವರ್ಷ ಕೆಲಸ ಮಾಡಿದ್ದಾರೆ.

Question 10

10. ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

I) ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ತಾಲೂಕುಗಳನ್ನು ಹೊಂದಿದೆ

II) ವಿಜಯಪುರ ಜಿಲ್ಲೆ ಎರಡನೇ ಅತಿ ಹೆಚ್ಚು ತಾಲೂಕುಗಳನ್ನು ಹೊಂದಿರುವ ಜಿಲ್ಲೆ

ಸರಿಯಾದ ಉತ್ತರವನ್ನು ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ:

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 10 Explanation: 
ಎರಡು ಹೇಳಿಕೆ ಸರಿ
There are 10 questions to complete.

[button link=”http://www.karunaduexams.com/wp-content/uploads/2017/09/ರಾಜ್ಯ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-33.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

6 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -33”

  1. vittal Mankani

    Comment

    1. Lakshmana T JADHAV

      Thank you all.

  2. Asif

    Thank you karunadu

Leave a Comment

This site uses Akismet to reduce spam. Learn how your comment data is processed.