ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,1,2,3,2017
Question 1 |
1. 2017 ಅಂತಾರಾಷ್ಟ್ರೀಯ ಹಿಂದೂ ಸಮ್ಮೇಳನ ಯಾವ ದೇಶದಲ್ಲಿ ನಡೆಯಿತು?
ನೇಪಾಳ | |
ಮಾರಿಷಸ್ | |
ಶ್ರೀಲಂಕಾ | |
ಭಾರತ |
2017 ಅಂತಾರಾಷ್ಟ್ರೀಯ ಹಿಂದೂ ಸಮ್ಮೇಳನ 3 ದಿನಗಳ ಕಾಲ ನೇಪಾಳದ ಕಠ್ಮಂಡುವಿನಲ್ಲಿ ನಡೆಯಿತು. ‘Emerging spiritualism: Renaissance of Hinduism’ ಇದು ಈ ವರ್ಷದ ಥೀಮ್. ಕಠ್ಮಂಡುವನ್ನು ಜಾಗತಿಕ ಹಿಂದೂ ರಾಜಧಾನಿಯನ್ನಾಗಿ ಮಾಡುವುದು ಸಮ್ಮೇಳನದ ಗುರಿ ಆಗಿತ್ತು. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಯುಎಸ್ ಮತ್ತು ಯುಕೆ ಸೇರಿದಂತೆ ವಿವಿಧ ದೇಶಗಳ ಸುಮಾರು 500 ಹಿಂದೂ ವಿದ್ವಾಂಸರು, ಧಾರ್ಮಿಕ ನಾಯಕರು, ಹಿಂದೂ ಕಾರ್ಯಕರ್ತರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
Question 2 |
2. ಈ ಕೆಳಗಿನ ಯಾರು “ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ)” ನ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
ಅನಿತ ಕಾರ್ವಾಲ್ | |
ಶುಭ ಕಿರಣ್ | |
ಡೇವಿಡ್ ಮ್ಯಾಥು | |
ಸುರೇಶ್ ಚಂದ್ರ |
ಗುಜರಾತ್-ಕೇಡರ್ ಐಎಎಸ್ ಅಧಿಕಾರಿ ಅನಿತಾ ಕಾರ್ವಾಲ್ ಅವರು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ)ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ, ಇವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ (ಮಾನವ ಸಂಪನ್ಮೂಲ) ಆಗಿದ್ದಾರೆ.
Question 3 |
3. ಬಾಂಡ್ಲಾ ವನ್ಯಜೀವಿ ಧಾಮ (Bondla Wildlife Sanctuary) ಯಾವ ರಾಜ್ಯದಲ್ಲಿದೆ?
ಗೋವಾ | |
ತಮಿಳುನಾಡು | |
ಗುಜರಾತ್ | |
ಅಸ್ಸಾಂ |
Question 4 |
4. ಈ ಕೆಳಗಿನ ಯಾವ ನಗರದಲ್ಲಿ ಬ್ರಿಕ್ಸ್-2017 ಶೃಂಗಸಭೆ ನಡೆಯಲಿದೆ?
ಮಾಸ್ಕೋ | |
ಬೀಜಿಂಗ್ | |
ಕ್ಸಿಯಾಮೆನ್ | |
ಬ್ರಸಿಲಿಯ |
ಬ್ರಿಕ್ಸ್ ಶೃಂಗಸಭೆಯ 9ನೇ ಆವೃತ್ತಿ ಸೆಪ್ಟೆಂಬರ್ 3, 2017 ರಂದು ಪೂರ್ವ ಚೀನಾದ ಫುಜಿಯನ್ ಪ್ರಾಂತ್ಯದ ಕ್ಸಿಯಾಮೆನ್ ನಲ್ಲಿ ನಡೆಯಲಿದೆ. "BRICS: ಪ್ರಕಾಶಮಾನವಾದ ಮುಂದಿನ ಭವಿಷ್ಯಕ್ಕಾಗಿ ಬಲವಾದ ಪಾಲುದಾರಿಕೆ (“BRICS: Stronger Partnership for a Brighter Future”)" ಇದು ಈ ಶೃಂಗಸಭೆಯ ಧ್ಯೇಯವಾಕ್ಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Question 5 |
5. ಸಿಂಗಪುರದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ವ್ಯಕ್ತಿ ಯಾರು?
ಸೀತಾರಾಮನ್ | |
ಜೆ. ವೈ. ಪಿಳೈ | |
ಕೆ. ಪಿ. ಶರ್ಮಾ | |
ಆರ್ ವಿ ಸಿಂಗ್ |
ಭಾರತೀಯ ಮೂಲದ ಜೆ.ಪಿ ಪಿಳ್ಳೈ ರವರು ಸಿಂಗಪುರದ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಟೋನಿ ಟಾನ್ ಕೆಂಗ್ ಯಾಮ್ ರವರ ಆರು ವರ್ಷಗಳ ಅಧಿಕಾರ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಪಿಳ್ಳೈ ರವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
Question 6 |
6. ಯುನೆಸ್ಕೋದ ಪ್ರತಿಷ್ಟಿತ ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಸೇರ್ಪಡೆಗೊಂಡ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಯಾವ ನಗರ ಭಾಜನವಾಗಿದೆ?
ಅಹ್ಮದಾಬಾದ್ | |
ಹಂಪಿ | |
ಮೈಸೂರು | |
ಕೊಲ್ಕತ್ತ |
ಗುಜರಾತಿನ ಅಹ್ಮದಾಬಾದ್ ನಗರವನ್ನು ಪ್ರತಿಷ್ಟಿತ ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು,ಈ ಪಟ್ಟಿಗೆ ಸೇರಿದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಅಹ್ಮದಾಬಾದ್ ಭಾಜನವಾಗಿದೆ. ಪೊಲ್ಯಾಂಡ್ ನ ಕಾರ್ಲೋದಲ್ಲಿ ನಡೆದ ಯುನೆಸ್ಕೋದ ವಿಶ್ವ ಪರಂಪರೆ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಿಶ್ವ ಪರಂಪರೆ ನಗರಗಳ ಪಟ್ಟಿಯಲ್ಲಿ ಈಗಾಗಲೇ ಪ್ಯಾರಿಸ್, ವಿಯೆನ್ನಾ, ಕೈರೋ, ಬ್ರಸೆಲ್ಸ್, ರೋಮ್ ಮತ್ತು ಎಡಿನ್ಬರ್ಗ್ ನಗರಗಳಿದ್ದು, ಇದೀಗ ಗುಜರಾತ್ ನ ಐತಿಹಾಸಿಕ ಗೋಡೆ ನಗರಿ ಕೂಡ ಸೇರ್ಪಡೆಯಾಗುತ್ತಿರುವುದು ಭಾರತದ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ. ಇನ್ನು ನೇಪಾಳದ ಭಕ್ತಪುರ ಮತ್ತು ಶ್ರೀಲಂಕಾದ ಗಾಲೆ ಕೂಡ ವಿಶ್ವಪರಂಪರೆ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
Question 7 |
7. ಭಾರತದ ನೂತನ ರಕ್ಷಣಾ ಸಚಿವರಾಗಿ ನೇಮಕಗೊಂಡಿರುವ ನಿರ್ಮಲಾ ಸೀತಾರಾಮನ್ ರವರು ಯಾವ ರಾಜ್ಯದಿಂದ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದಾರೆ?
ಮಧ್ಯ ಪ್ರದೇಶ | |
ಕರ್ನಾಟಕ | |
ತೆಲಂಗಣ | |
ತಮಿಳುನಾಡು |
'ನಿರ್ಮಲಾ ಸೀತಾರಾಮನ್' ರವರು ಭಾರತದ ನೂತನ ರಕ್ಷಣಾ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಸೀತಾರಾಮನ್ ರವರು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ. ಸೀತಾರಾಮನ್ ರವರು ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರು.
Question 8 |
8. ಮಹೇಂದ್ರ ಸಿಂಗ್ ಧೋನಿ ರವರು 100 ಸ್ಟಂಪ್ ಮಾಡಿದ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆ ಬರೆದರು. ಯಾವ ತಂಡದ ವಿರುದ್ದ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಲಾಯಿತು?
ವೆಸ್ಟ್ ಇಂಡೀಸ್ | |
ಇಂಗ್ಲೆಂಡ್ | |
ಶ್ರೀಲಂಕಾ | |
ಆಸ್ಟ್ರೇಲಿಯಾ |
ಲಂಕಾ ವಿರುದ್ಧ ನಡೆದ ಕೊನೆ ಏಕದಿನ ಪಂದ್ಯದಲ್ಲಿ ಚಾಹಲ್ ಬೌಲಿಂಗ್ನಲ್ಲಿ ಅಕಿಲಾ ಧನಂಜಯ್ ಅವರ ವಿಕೆಟ್ ಸ್ಟಂಪಿಂಗ್ ಮಾಡುವ ಮೂಲಕ 100 ಸ್ಟಂಪ್ ಮಾಡಿದ ಏಕೈಕ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಎಂ. ಎಸ್. ಧೋನಿ ಪಾತ್ರರಾಗಿದ್ದಾರೆ.
Question 9 |
9. 2017 ಇಟಾಲಿಯನ್ ಫಾರ್ಮ್ಯುಲಾ ಒನ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?
ಸೆಬಾಸ್ಟಿಯನ್ ವೆಟಲ್ | |
ಲೇವಿಸ್ ಹ್ಯಾಮಿಲ್ಟನ್ | |
ಡೆನಿಯಲ್ ರಿಕ್ಕಿಯಾರ್ಡೊ | |
ನಿಕೊ ರೋಸ್ಬರ್ಗ್ |
Question 10 |
10. ಈ ಕೆಳಗಿನ ಯಾರು ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
ಡೇವಿಡ್ ಸ್ಮಿತ್ | |
ಕೆನ್ನೆತ್ ಜಸ್ಟರ್ | |
ರಿಚರ್ಡ್ ವರ್ಮಾ | |
ಹ್ಯಾರೀಸ್ ಜೇಮ್ಸ್ |
ಕೆನ್ನೆತ್ ಐ ಜಸ್ಟರ್ ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕೆನ್ನೆತ್ ರವರು ಶ್ವೇತಭವನದಲ್ಲಿ ನ್ಯಾಷನಲ್ ಇಕನಾಮಿಕ್ ಕೌನ್ಸಿಲ್ನ ಉಪನಿರ್ದೇಶಕರಾಗಿದ್ದಾರೆ. ಜನವರಿ 20, 2017 ರಿಂದ ಈ ಹುದ್ದೆ ತೆರವಾಗಿದೆ. ಜಸ್ಸರ್ ಭಾರತ-ಯುಎಸ್ ಸಂಬಂಧಗಳ ಬಲವಾದ ಬೆಂಬಲಿಗರಾಗಿದ್ದಾರೆ ಮತ್ತು ನಾಗರಿಕ ಪರಮಾಣು ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್-1-232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Tnk u