ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,4,5,6,2017
Question 1 |
1. ಈ ಕೆಳಗಿನ ಯಾವ ಸಂಸ್ಥೆ 2018-23 ಐಪಿಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ?
ಸ್ಟಾರ್ ಇಂಡಿಯಾ | |
ಸೋನಿ | |
ಟೆನ್ ಸ್ಪೋರ್ಟ್ಸ್ | |
ರಿಲಾಯನ್ಸ್ ಜಿಯೊ |
2018-23 ಐಪಿಎಲ್ ಪ್ರಸಾರ ಹಕ್ಕಿನ ಜವಾಬ್ದಾರಿಯನ್ನು ಸ್ಟಾರ್ ಇಂಡಿಯಾ ಪಾಲಾಗಿದೆ. ಮುಂದಿನ 5 ವರ್ಷಗಳ ಪ್ರಸಾರದ ಹಕ್ಕಿಗಾಗಿ ಸ್ಟಾರ್ ಇಂಡಿಯಾವು 16,347.50 ರೂ.ಗಳನ್ನು ವ್ಯಯಿಸಿ ಡಿಜಿಟಲ್ ಹಾಗೂ ವಿಶ್ವದಾದ್ಯಂತ ಪ್ರಸಾರ ಮಾಡುವ ಹಕ್ಕನ್ನು ಪಡೆದುಕೊಂಡಿದೆ.
Question 2 |
2. ದ್ವೈವಾರ್ಷಿಕ ಜಂಟಿ ಕಡಲ ನೌಕಾಪಡೆ ಅಭ್ಯಾಸ "SLINEX 2017" ಭಾರತ ಮತ್ತು ಯಾವ ದೇಶದ ನಡುವೆ ನಡೆಯಲಿದೆ?
ಚೀನಾ | |
ಸಿಂಗಪುರ | |
ಶ್ರೀಲಂಕಾ | |
ಇಂಡೋನೇಷಿಯಾ |
ದ್ವೈವಾರ್ಷಿಕ ಭಾರತ ಮತ್ತು ಶ್ರೀಲಂಕಾ ನಡುವಿನ ಕಡಲ ನೌಕಪಡೆ ಅಭ್ಯಾಸ “SLINEX 2017” ಸೆಪ್ಟೆಂಬರ್ 7 ರಿಂದ 14 ರವರೆಗೆ ನಡೆಯಲಿದೆ. ಸರಿ ಸುಮಾರು 368 ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿಗಳು ಈ ವ್ಯಾಯಾಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶ್ರೀಲಂಕಾ ನೌಕಾಪಡೆಯ ಕಡಲಾಚೆಯ ಗಸ್ತು ಹಡಗುಗಳು, ಎಸ್ಎಲ್ಎನ್ಎಸ್ ಸಯುರ ಮತ್ತು ಸಾಗರ ಈ ವ್ಯಾಯಾಮದಲ್ಲಿ ಪಾಲ್ಗೊಳ್ಳಲು ವಿಶಾಖಪಟ್ಟಣದ ಬಂದರಿಗೆ ಆಗಮಿಸಿವೆ.
Question 3 |
3. ಕೆಳಗಿನ ಯಾವ ವಿಮಾನ ನಿಲ್ದಾಣ ಇಂಧನ ನಿರ್ವಹಣೆಗಾಗಿ ರಾಷ್ಟ್ರೀಯ “ಉತ್ಕೃಷ್ಟತ” ಪ್ರಶಸ್ತಿ ಪಡೆದುಕೊಂಡಿದೆ?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | |
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | |
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | |
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ |
ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಂಧನ ನಿರ್ವಹಣೆಗಾಗಿ ರಾಷ್ಟ್ರೀಯ ಉತ್ಕೃಷ್ಟತೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಾನ್ಫರೆನ್ಸ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಇಂಧನ ಸಂರಕ್ಷಣೆ ಕಡೆಗೆ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ತಮ್ಮ ದೈನಂದಿನ ಕಾರ್ಯಾಚರಣೆಗಳಲ್ಲಿ ಉತ್ತಮ ಅಭ್ಯಾಸಗಳನ್ನು ಮತ್ತು ತಾಂತ್ರಿಕ ಪ್ರಗತಿಯನ್ನು ಅಳವಡಿಸಿಕೊಳ್ಳುವ ಮೂಲಕ ಇಂಧನ ದಕ್ಷತೆಯ ಉಪಕ್ರಮಗಳಲ್ಲಿ ತೊಡಗಿರುವ ಕಂಪೆನಿಗಳನ್ನು ಗುರುತಿಸಲು ಈ ಸಮಾವೇಶವನ್ನು ಆಯೋಜಿಸಲಾಗುತ್ತದೆ.
Question 4 |
4. ಈ ಕೆಳಗಿನ ಯಾವ ರಾಜ್ಯದಲ್ಲಿ “ಜಲ್ದಪರ ರಾಷ್ಟ್ರೀಯ ಉದ್ಯಾನವನ” ಇದೆ?
ಒಡಿಶಾ | |
ಪಶ್ಚಿಮ ಬಂಗಾಳ | |
ಸಿಕ್ಕಿಂ | |
ಅಸ್ಸಾಂ |
ಉತ್ತರ ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಟೊರ್ಸಾ ನದಿಯ ದಂಡೆಯ ಮೇಲೆ ಜಲ್ದಪರ ರಾಷ್ಟ್ರೀಯ ಉದ್ಯಾನವನ ನೆಲೆಗೊಂಡಿದೆ. ಇದು ಚಿರತೆ, ಆನೆ, ಸಾಂಬಾರ್, ಬಾರ್ಕಿಂಗ್ ಜಿಂಕೆ, ಮಚ್ಚೆಯುಳ್ಳ ಜಿಂಕೆ, ಮುಂತಾದ ವನ್ಯಜೀವಿಗಳಿಗೆ ಆಶ್ರಯ ಒದಗಿಸಿದೆ.
Question 5 |
5. ಜಾಗತಿಕ ನಾಯಕತ್ವಕ್ಕಾಗಿ “ಪ್ಲಸ್ ಅಲೆಯನ್ಸ್ ಪ್ರಶಸ್ತಿ”ಯನ್ನು ಯಾರಿಗೆ ನೀಡಲಾಗಿದೆ?
ಎನ್ ಆರ್ ನಾರಾಯಣ ಮೂರ್ತಿ | |
ಅಜೀಂ ಪ್ರೇಮ್ ಜಿ | |
ಮುಖೇಶ್ ಅಂಬಾನಿ | |
ಅನಿಲ್ ಅಂಬಾನಿ |
ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಮುಂಬೈ ಮೂಲದ ವಿಜ್ಞಾನಿ ವೀಣಾ ಸಹಾಜ್ವಾಲಾ ಅವರಿಗೆ ಪ್ಲುಸ್ ಅಲೈಯನ್ಸ್ ಪ್ರಶಸ್ತಿಯನ್ನು ನೀಡಲಾಗಿದೆ. ಸಂಶೋಧನಾ ನಾವೀನ್ಯತೆ, ಶಿಕ್ಷಣ ನಾವೀನ್ಯತೆ, ಜಾಗತಿಕ ನಾಯಕತ್ವವನ್ನು ಗುರುತಿಸುವ ಪ್ರತಿಷ್ಠಿತ ಗೌರವ ಪ್ರಶಸ್ತಿ ಇದಾಗಿದೆ. ಮೂರ್ತಿ ಅವರಿಗೆ ಜಾಗತಿಕ ನಾಯಕತ್ವಕ್ಕಾಗಿ ಪ್ಲುಸ್ ಅಲೈಯನ್ಸ್ ಪ್ರಶಸ್ತಿ ನೀಡಲಾದರೆ ವೀಣಾ ಸಹಾಜ್ವಾಲಾ ಅವರಿಗೆ ಶಿಕ್ಷಣ ನಾವೀನ್ಯತೆಗಾಗಿ ನೀಡಲಾಗಿದೆ.
Question 6 |
6. ರಾಷ್ಟ್ರೀಯ ಪೌಷ್ಠಿಕ ತಂತ್ರ (National Nutritional Strategy)ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
i) ರಾಷ್ಟ್ರೀಯ ಪೌಷ್ಠಿಕ ತಂತ್ರವನ್ನು ನೀತಿ ಆಯೋಗ ಆರಂಭಿಸಿದೆ
II) ಹೈದ್ರಾಬಾದಿನಲ್ಲಿ ರಾಷ್ಟ್ರೀಯ ಪೌಷ್ಠಿಕ ತಂತ್ರಕ್ಕೆ ಚಾಲನೆ ನೀಡಲಾಯಿತು
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ನೀತಿ ಆಯೋಗ ಇತ್ತೀಚೆಗೆ ರಾಷ್ಟ್ರೀಯ ಪೌಷ್ಠಿಕ ತಂತ್ರಕ್ಕೆ ಹೊಸ ದೆಹಲಿಯಲ್ಲಿ ಚಾಲನೆ ನೀಡಿತು. ಅಪೌಷ್ಠಿಕ ಮುಕ್ತ ಭಾರತವನ್ನಾಗಿಸುವುದು ಇದರ ಪ್ರಮುಖ ಗುರಿ. ಹಸಿರು ಕ್ರಾಂತಿ ಪಿತಾಮಹ ಡಾ ಎಂ ಎಸ್ ಸ್ವಾಮಿನಾಥನ್ ಮತ್ತು ನೀತಿ ಆಯೋಗ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ರಾಷ್ಟ್ರೀಯ ಪೌಷ್ಠಿಕ ತಂತ್ರಕ್ಕೆ ಚಾಲನೆ ನೀಡಿದರು.
Question 7 |
7. ಆಸ್ಟ್ರೇಲಿಯಾ ಪ್ರವಾಸೋದ್ಯಮಕ್ಕೆ ರಾಯಭಾರಿಯಾಗಿ ನೇಮಕಗೊಂಡಿರುವ ಬಾಲಿವುಡ್ ನಟಿ ಯಾರು?
ಕತ್ರಿನಾ ಕೈಫ್ | |
ಪರಿನೀತಿ ಚೋಪ್ರಾ | |
ಪ್ರಿಯಾಂಕ ಚೋಪ್ರಾ | |
ಐಶ್ವರ್ಯ ರೈ |
ಬಾಲಿವುಡ್ ನಟಿ ಪರಿನೀತಿ ಚೋಪ್ರಾ ರವರು ಆಸ್ಟ್ರೇಲಿಯಾ ಪ್ರವಾಸೋದ್ಯಮದ ಮೊದಲ ಭಾರತೀಯ ಮಹಿಳಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
Question 8 |
8. ಯಾವ ದೇಶ 2019 ಕಾಮನ್ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ಷಿಪ್ ಆಯೋಜಿಸಲಿದೆ?
ಚೀನಾ | |
ಭಾರತ | |
ರಷ್ಯಾ | |
ಮಲೇಷಿಯಾ |
2019 ಕಾಮನ್ವೆಲ್ತ್ (ಯುವ, ಜೂನಿಯರ್ ಮತ್ತು ಹಿರಿಯ) ವೆಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ಆತಿಥ್ಯವನ್ನು ಭಾರತ ವಹಿಸಲಿದೆ.
Question 9 |
9. ಸೂರ್ಯನ ಬೆಳಕಿನಿಂದ ಇಂಧನವನ್ನು ಸೃಷ್ಟಿಸಲು ಕೃತಕ ಎಲೆಗಳನ್ನು ಅಭಿವೃದ್ಧಿಪಡಿಸಿದ ಭಾರತೀಯ ಸಂಸ್ಥೆ ಯಾವುದು?
CSIR | |
DRDO | |
ISRO | |
BHEL |
ಪುಣೆಯಲ್ಲಿನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಸಂಶೋಧಕರು (ಸಿಎಸ್ಐಆರ್) ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯವು ಕೃತಕ ಎಲೆಗಳನ್ನು ಅಭಿವೃದ್ಧಿಪಡಿಸಿದೆ. ಇದು ಸೂರ್ಯನ ಬೆಳಕನ್ನು ಹೀರಿಕೊಂಡು ಜಲಜನಕ ಇಂಧನವನ್ನು ಸೃಷ್ಟಿಸಲಿದೆ. ಇದರಿಂದ ಭವಿಷ್ಯದಲ್ಲಿ ಪರಿಸರ ಸ್ನೇಹಿ ಕಾರುಗಳಿಗೆ ಇಂಧನ ದೊರಕುವುದು ಸುಲಭವಾಗಲಿದೆ.
Question 10 |
10. ದೇಶದಲ್ಲಿ ಪ್ರಮುಖ ದತ್ತಾಂಶ ಸಂರಕ್ಷಣಾ ಸಮಸ್ಯೆಗಳನ್ನು ಗುರುತಿಸಲು ಕೇಂದ್ರ ಸರ್ಕಾರವು ಯಾವ ಪರಿಣಿತ ಸಮಿತಿಯನ್ನು ರಚಿಸಿದೆ?
ಬಿ ಎನ್ ಕೃಷ್ಣ ಸಮಿತಿ | |
ರಾಕೇಶ್ ಶರ್ಮಾ ಸಮಿತಿ | |
ಅಮಿತ್ ಗುಪ್ತಾ ಸಮಿತಿ | |
ನರೇಶ್ ಚಂದ್ರ ಸಮಿತಿ |
ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಭಾರತದಲ್ಲಿ ಪ್ರಮುಖ ದತ್ತಾಂಶ ಸಂರಕ್ಷಣೆಯ ಸಮಸ್ಯೆಗಳನ್ನು ಗುರುತಿಸಲು ತಜ್ಞ ಸಮಿತಿ ರಚನೆಯಾಗಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಸಮಿತಿಯು ವರದಿಯನ್ನು ಸಲ್ಲಿಸಿದ ನಂತರ, ಮಾಹಿತಿ ಸಂರಕ್ಷಣೆಗೆ ಕಾನೂನು ರೂಪಿಸುವ ಸಾಧ್ಯತೆಯಿದೆ ಎಂದು ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್4562017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
So nice