ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,10,11,12,2017
Question 1 |
1. 2018 -ಟೈಮ್ಸ್ ಹೈಯರ್ ಎಜುಕೇಶನ್ ಜಗತ್ತಿನ ವಿಶ್ವವಿದ್ಯಾಲಯಗಳ ಶ್ರೇಯಾಂಕದ ಪ್ರಕಾರ ಭಾರತದ ಯಾವ ವಿಶ್ವವಿದ್ಯಾನಿಲಯವನ್ನು ಉನ್ನತ ವಿಶ್ವವಿದ್ಯಾನಿಲಯ ಎಂದು ಹೆಸರಿಸಲಾಗಿದೆ?
IISc ಬೆಂಗಳೂರು | |
ಐಐಟಿ ಬಾಂಬೆ | |
ಐಐಟಿ ಖರಗಪುರ | |
ಐಐಟಿ ದೆಹಲಿ |
ಟೈಮ್ಸ್ ಹೈಯರ್ ಎಜುಕೇಶನ್ ಬಿಡುಗಡೆ ಮಾಡಿದ 2018 ಜಗತ್ತಿನ ವಿಶ್ವವಿದ್ಯಾಲಯದ ಶ್ರೇಯಾಂಕದಲ್ಲಿ (WUR), ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಭಾರತದ ಅತ್ಯುನ್ನತ ವಿಶ್ವವಿದ್ಯಾಲಯ ಎಂದು ಗುರುತಿಸಲಾಗಿದೆ. ನಂತರದ ಸ್ಥಾನದಲ್ಲಿ ಐಐಟಿ-ಬಾಂಬೆ, ಐಐಟಿ-ದೆಹಲಿ, ಐಐಟಿ-ಕಾನ್ಪುರ್ ಮತ್ತು ಐಐಟಿ-ಖರಗ್ಪುರ ಇವೆ. ಜಾಗತಿಕವಾಗಿ, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ಶ್ರೇಯಾಂಕಗಳಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ, ನಂತರದ ಸ್ಥಾನದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯಗಳು ಸೇರಿವೆ.
Question 2 |
2. 2017 ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಯಾರು?
ರಫೆಲ್ ನಡಾಲ್ | |
ರಫೆಲ್ ನಡಾಲ್ | |
ನೊವಾಕ್ ಜೊಕೊವಿಕ್ | |
ಆಂಡಿ ಮುರ್ರೆ |
ಸ್ಪ್ಯಾನಿಷ್ ವೃತ್ತಿಪರ ಟೆನ್ನಿಸ್ ಆಟಗಾರ ರಫೆಲ್ ನಡಾಲ್ 2017 ಪುರುಷರ ಸಿಂಗಲ್ಸ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯನ್ನು ಗೆದ್ದುಕೊಂಡಿದ್ದಾರೆ. ಮೊದಲ ಬಾರಿಗೆ ಗ್ರಾಂಡ್ ಸ್ಲಾಮ್ ಫೈನಲ್ ಪಂದ್ಯ ತಲುಪಿದ್ದ ಕೆವಿನ್ ಆಂಡರ್ಸನ್ ಅವರನ್ನು 6-3, 6-3, 6-4 ಸೆಟ್ಗಳಿಂದ ಸೋಲಿಸಿ ರಫೆಲ್ ನಡಾಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದು ನಡಾಲ್ ರವರ 16ನೆಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮತ್ತು ವೃತ್ತಿಜೀವನದ 3ನೇ ಯುಎಸ್ ಓಪನ್ ಪ್ರಶಸ್ತಿಯಾಗಿದೆ.
Question 3 |
3. ಪ್ರತಿಷ್ಠಿತ ಪ್ರೊಫೆಸರ್ ಎನ್ ಆರ್ ಮಾಧವ ಮೆನನ್ ಅತ್ಯುತ್ತಮ ಕಾನೂನು ಶಿಕ್ಷಕ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಸಂತೋಷ್ ಥಾಣೆ | |
ವಿಕ್ರಂ ರಾಣೆ | |
ತಹಿರ್ ಮಹಮೂದ್ | |
ಎ ವಿ ರೊಹತಂಗಿ |
ಪ್ರಸಿದ್ಧ ನ್ಯಾಯವಾದಿ ಡಾ.ತಹಿರ್ ಮಹಮೂದ್ ರವರಿಗೆ ಪ್ರತಿಷ್ಠಿತ ಪ್ರೊಫೆಸರ್ ಎನ್.ಆರ್. ಮಾಧವ ಮೆನನ್ ಅತ್ಯುತ್ತಮ ಕಾನೂನು ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗಿದೆ. ಕಾನೂನು ಶಿಕ್ಷಣ ಮತ್ತು ಕಾನೂನು ವೃತ್ತಿಯಲ್ಲಿ ವಿಶೇಷ ಸೇವೆಗಳನ್ನು ಗುರುತಿಸಿ ಹೊಸದೆಹಲಿಯ ಮೆನನ್ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಅಡ್ವೊಕಸಿ ಟ್ರೈನಿಂಗ್ (ಮಿಲಾಟ್) ಮತ್ತು ಸೊಸೈಟಿ ಆಫ್ ಇಂಡಿಯನ್ ಲಾ ಸಂಸ್ಥೆ ಆಯೋಜಿಸಿದ್ದ 9ನೇ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
Question 4 |
4. 2017 ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?
ಮ್ಯಾಡಿಸನ್ ಕೀಸ್ | |
ಸ್ಲೋಯೆನ್ ಸ್ಟೀಫನ್ಸ್ | |
ಸೆರೆನಾ ವಿಲಿಯಮ್ಸ್ | |
ಅಂಜೆಲಿಕ್ ಕಿರ್ಬರ್ |
ಮ್ಯಾಡಿಸನ್ ಕೀಸ್ ಅವರನ್ನು ಮಣಿಸಿ ಸ್ಲೋಯೆನ್ ಸ್ಟೀಫನ್ಸ್ ಈ ಸಾಲಿನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಆಶಸ್ತಿಯನ್ನು ಮುಡಿಗೇರಿಸಿಕೊಂಡರು.
Question 5 |
5. ಕರಾವಳಿ ಸವೆತದಿಂದಾಗಿ ಕಣ್ಮರೆಯಾದ “ಪರಾಲಿ I ದ್ವೀಪ” ಯಾವ ರಾಜ್ಯ/ಕೇಂದ್ರಾಡಳಿತದ ಭಾಗವಾಗಿತ್ತು?
ಲಕ್ಷದ್ವೀಪ | |
ಅಂಡಮಾನ್ ಮತ್ತು ನಿಕೋಬಾರ್ | |
ಕೇರಳ | |
ಕರ್ನಾಟಕ |
ಲಕ್ಷದ್ವೀಪದಲ್ಲಿನ 'ಪ್ಯಾರಾಲಿ ಐ ದ್ವೀಪ' ಕರಾವಳಿ ಕೊರೆತದಿಂದ ಶೇ.100% ನಷ್ಟು ಕಣ್ಮರೆಯಾಗಿದೆ ಎಂದು ಹೇಳಲಾಗಿದೆ.
Question 6 |
6. ಅಸ್ಸೋಚ್ಯಾಮ್ ನಡೆಸಿದ ಸಮೀಕ್ಷೆಯ ಪ್ರಕಾರ ಉತ್ಪಾದನಾ ಶ್ರೇಷ್ಠತೆಗಳಲ್ಲಿ (Manufacturing Excellence) ಯಾವ ರಾಜ್ಯವು ಅಗ್ರಸ್ಥಾನ ಪಡೆದಿದೆ?
ಕರ್ನಾಟಕ | |
ಕೇರಳ | |
ಗುಜರಾತ್ | |
ಮಧ್ಯ ಪ್ರದೇಶ |
Question 7 |
7. 2017 U-16 ದಕ್ಷಿಣ ಏಷ್ಯಾ ಬ್ಯಾಸ್ಕೆಟ್ಬಾಲ್ (SABA) ಚಾಂಪಿಯನ್ಷಿಪ್ ಅನ್ನು ಯಾವ ದೇಶದ ಗೆದ್ದುಕೊಂಡಿತು?
ನೇಪಾಳ | |
ಬಾಂಗ್ಲದೇಶ | |
ಭಾರತ | |
ಶ್ರೀಲಂಕಾ |
ಭಾರತ ತಂಡ 2017 U-16 ದಕ್ಷಿಣ ಏಷ್ಯಾ ಬ್ಯಾಸ್ಕೆಟ್ಬಾಲ್ (SABA) ಚಾಂಪಿಯನ್ಷಿಪ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
Question 8 |
8. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ)ದ ಚೊಚ್ಚಲ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತಿದೆ?
ಪ್ರಕಾಶ್ ಪಡುಕೋಣೆ | |
ಪಿ ಗೋಪಿಚಂದ್ | |
ಸೈನಾ ನೆಹ್ವಲ್ | |
ಪಿ ವಿ ಸಿಂಧು |
ಭಾರತದ ಖ್ಯಾತ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಅವರು ಬ್ಯಾಡ್ಮಿಂಟನ್ ಕ್ರೀಡೆಗೆ ನೀಡಿರುವ ಸಮೃದ್ಧ ಕೊಡುಗೆಗಾಗಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಸ್ಥಾಪಿಸಿದ ಮೊದಲ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಈ ಪ್ರಶಸ್ತಿಯು 10 ಲಕ್ಷ ರೂ. ನಗದು ಬಹುಮಾನ ಮತ್ತು ಉಲ್ಲೇಖ ಒಳಗೊಂಡಿದೆ, ಪಡುಕೋಣೆ ಅವರಿಗೆ 1972ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 1982ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
Question 9 |
9. ಜಂಟಿ ದ್ವಿಪಕ್ಷೀಯ ವಾಯುಪಡೆ ವ್ಯಾಯಾಮ "ಶಹೀನ್ VI" ಪಾಕಿಸ್ತಾನ ಮತ್ತು ಯಾವ ದೇಶದ ನಡುವೆ ಪ್ರಾರಂಭಗೊಂಡಿದೆ?
ರಷ್ಯಾ | |
ಚೀನಾ | |
ಇಸ್ರೇಲ್ | |
ಇರಾನ್ |
Question 10 |
10. 2017 ಗ್ಲೋಬಲ್ ಫೈನಾನ್ಶಿಯಲ್ ಸೆಂಟರ್ಸ್ ಇಂಡೆಕ್ಸ್ (ಜಿಎಫ್ಎಫ್ಐ)ನಲ್ಲಿ ಅಗ್ರಸ್ಥಾನ ಪಡೆದುಕೊಂಡ ನಗರ ಯಾವುದು?
ಟೊಕಿಯೋ | |
ಲಂಡನ್ | |
ಶಾಂಘೈ | |
ಸಿಂಗಪುರ |
2017 ಗ್ಲೋಬಲ್ ಫೈನಾನ್ಶಿಯಲ್ ಸೆಂಟರ್ಸ್ ಇಂಡೆಕ್ಸ್ (ಜಿಎಫ್ಎಫ್ಐ)ನಲ್ಲಿ ಲಂಡನ್ ವಿಶ್ವದ ಅಗ್ರ ಆರ್ಥಿಕ ಕೇಂದ್ರವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈ ಸೂಚ್ಯಂಕವು Z /Yen ಗ್ರೂಪ್ನಿಂದ ಪ್ರಕಟಿಸಲ್ಪಟ್ಟಿದೆ, ಸೂಚ್ಯಂಕದಲ್ಲಿ ನ್ಯೂಯಾರ್ಕ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂಬೈ ಸೂಚ್ಯಂಕದಲ್ಲಿ ಸ್ಥಾನಪಡೆದ ಭಾರತದ ಏಕೈಕ ನಗರವಾಗಿದ್ದು 60 ನೇ ಸ್ಥಾನ ಪಡೆದಿದೆ.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್1011122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
It’s good