ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,7,8,9,2017
Question 1 |
1. ಯಾವ ದೇಶವು ಈಸ್ಟರ್ನ್ ಎಕನಾಮಿಕ್ ಫೋರಮ್ (Eastern Economic Forum -2017) ಆಯೋಜಿಸುತ್ತಿದೆ?
ಚೀನಾ | |
ರಷ್ಯಾ | |
ಜಪಾನ್ | |
ಪಾಕಿಸ್ತಾನ |
ಈಸ್ಟರ್ನ್ ಎಕನಾಮಿಕ್ ಫೋರಮ್ (ಇಇಎಫ್) ರಷ್ಯಾದ ವ್ಲಾಡಿವೋಸ್ಟಾಕ್ನಲ್ಲಿ ಸೆಪ್ಟೆಂಬರ್ 6-7, 2017 ರಂದು ಪ್ರಾರಂಭವಾಯಿತು. ಯುಎಸ್, ಜಪಾನ್, ಚೀನಾ, ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಸೇರಿದಂತೆ ಕನಿಷ್ಠ 24 ದೇಶಗಳ ಪ್ರತಿನಿಧಿಗಳು ಈ ಸಭೆಗೆ ಹಾಜರಾಗುತ್ತಿವೆ. ಭಾರತದಿಂದ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ರವರು ಫೋರಂನಲ್ಲಿ ಭಾಗವಹಿಸಲಿದ್ದಾರೆ.
Question 2 |
2. ಆಸ್ಟ್ರೇಲಿಯಾ ಬ್ಯಾಸ್ಕೆಟ್ ತಂಡಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಭಾರತೀಯ ಆಟಗಾರ ಯಾರು?
ಯಶ್ವಿಂದರ್ ಸಿಂಗ್ | |
ಅಮೃತ್ ಪಾಲ್ ಸಿಂಗ್ | |
ರಾಕೇಶ್ ವರ್ಮ | |
ಅರುಣ್ ಶೌರಿ |
ಭಾರತೀಯ ಬ್ಯಾಸ್ಕೆಟ್ ಬಾಲ್ ತಂಡದ ನಾಯಕನಾಗಿರುವ ಅಮೃತ್ಪಾಲ್ ಸಿಂಗ್ ಅವರು ಆಸ್ಟ್ರೇಲಿಯನ್ ನ್ಯಾಷನಲ್ ಬ್ಯಾಸ್ಕೆಟ್ಬಾಲ್ ಲೀಗ್ (ಎನ್ಬಿಎಲ್) ತಂಡಕ್ಕೆ ಆಯ್ಕೆಯಾದ ಮೊದಲ ಭಾರತೀಯ-ಸಂಜಾತ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಭಾರತೀಯ ಬ್ಯಾಸ್ಕೆಟ್ಬಾಲ್ ಕ್ಷೇತ್ರದ ಅದ್ಭುತ ಸಾಧನೆಯಾಗಿದೆ.
Question 3 |
3. ಜಂಟಿ ಮಿಲಿಟರಿ ತರಬೇತಿ ವ್ಯಾಯಾಮ "ಯುದ್ದ್ ಅಭ್ಯಾಸ-2017" ಭಾರತ ಮತ್ತು ಯಾವ ದೇಶದ ನಡುವೆ ನಡೆಯಲಿದೆ?
ಜಪಾನ್ | |
ನೇಪಾಳ | |
ಅಮೆರಿಕ | |
ರಷ್ಯಾ |
ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಮಿಲಿಟರಿ ತರಭೇತಿ ವ್ಯಾಯಾಮ "ಯುದ್ದ್ ಅಭ್ಯಾಸ - 2017" ಸೆಪ್ಟೆಂಬರ್ 14 ರಿಂದ 27 ರವರೆಗೆ ಬೇಸ್ ಲೆವಿಸ್ ಮ್ಯಾಕ್ಕ್ಯಾರ್ಡ್, ವಾಷಿಂಗ್ಟನ್, ಅಮೆರಿಕಾದಲ್ಲಿ ನಡೆಯಲಿದೆ. ಈ ವ್ಯಾಯಾಮವು ಉಭಯ ದೇಶಗಳ ನಡುವಿನ ಅತಿ ದೊಡ್ಡ ಮಿಲಿಟರಿ ಅಭ್ಯಾಸವಾಗಿದೆ.
Question 4 |
4. “How India Sees the World: Kautilya to the 21st Century” ಪುಸ್ತಕದ ಲೇಖಕರು _________?
ಶ್ಯಾಮ್ ಶರಣ್ | |
ಅಶೋಕ್ ಸಿಂಗ್ | |
ಅಪೂರ್ವ ಸಿಂಧಿ | |
ಶರಣ್ ಶರ್ಮಾ |
Question 5 |
5. ಭಾರತದ ಮೊದಲ ಹೈಪರ್ಲೂಪ್ ಯೋಜನೆ ಯಾವ ರಾಜ್ಯದಲ್ಲಿ ಬರಲಿದೆ?
ಆಂಧ್ರ ಪ್ರದೇಶ | |
ಕರ್ನಾಟಕ | |
ತೆಲಂಗಣ | |
ಕೇರಳ |
ಭಾರತದ ಮೊದಲ ಹೈಪರ್ಲೋಪ್ ಯೋಜನೆಯು ಆಂಧ್ರಪ್ರದೇಶದಲ್ಲಿ ವಿಜಯವಾಡ ಮತ್ತು ಅಮರಾವತಿಯ ನಗರ ಕೇಂದ್ರಗಳ ನಡುವೆ ಸ್ಥಾಪನೆಯಾಗಲಿದೆ. ಇದರಡಿ ಐದು ನಿಮಿಷಗಳಲ್ಲಿ ಕೇವಲ 35 ಕಿ.ಮೀ ದೂರವನ್ನು ಕ್ರಮಿಸಬಹುದು. ಆಂಧ್ರ ಪ್ರದೇಶದ ಎಕನಾಮಿಕ್ ಡೆವಲಪ್ಮೆಂಟ್ ಬೋರ್ಡ್ (ಎಪಿ-ಇಡಿಬಿ) ಯೋಜನೆಯ ಅಭಿವೃದ್ಧಿಗಾಗಿ ಹೈಪರ್ಲೋಪ್ ಟ್ರಾನ್ಸ್ಪೋರ್ಟೇಷನ್ ಟೆಕ್ನಾಲಜೀಸ್ (ಎಚ್ಟಿಟಿ) ನೊಂದಿಗೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಮಾಡಿದೆ.
Question 6 |
6. ಅಂತಾರಾಷ್ಟ್ರೀಯ ಸಾಕ್ಷರತೆ ದಿವಸವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಸೆಪ್ಟೆಂಬರ್ 7 | |
ಸೆಪ್ಟೆಂಬರ್ 8 | |
ಸೆಪ್ಟೆಂಬರ್ 9 | |
ಸೆಪ್ಟೆಂಬರ್ 10 |
ವ್ಯಕ್ತಿಗಳು, ಸಮಾಜ ಮತ್ತು ಸಮುದಾಯಗಳಿಗೆ ಸಾಕ್ಷರತೆಯ ಮಹತ್ವವನ್ನು ಒತ್ತಿಹೇಳಲು ಸೆಪ್ಟೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ 'ಲಿಟರಸಿ ಇನ್ ಎ ಡಿಜಿಟಲ್ ವರ್ಲ್ಡ್' ಆಗಿದೆ.
Question 7 |
7. ಈ ಕೆಳಗಿನ ಯಾರು “ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ”ದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ?
ಸುಂದರ್ ಕುಲಕರ್ಣಿ | |
ಹರಿಪ್ರೀತ್ ಸಿಂಗ್ | |
ವಿವೇಕ್ ಗೋಯೆಂಕ | |
ರಜನೀಶ್ ಮಲ್ಹೋತ್ರ |
ಪ್ರೆಸ್ ಗ್ರೂಪ್ CMD ವಿವೇಕ್ ಗೋಯೆಂಕಾ ಅವರನ್ನು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ನೂತನ ಅಧ್ಯಕ್ಷರಾಗಿ ಚುನಾಯಿಸಲಾಗಿದೆ. ಮನೋರಮಾ ಆಡಳಿತದ ಹಿರಿಯ ಸಹಾಯಕ ಸಂಪಾದಕ ಮತ್ತು ಸದಸ್ಯರಾದ ರಿಯಾದ್ ಮಾಥ್ಯೂ ಅವರ ಉತ್ತರಾಧಿಕಾರಿಯಾಗಿ ಗೋಯೆಂಕ ನೇಮಕಗೊಂಡಿದ್ದಾರೆ. ದಿ ಹಿಂದೂದ ಮಾಜಿ ಸಂಪಾದಕ ಎನ್. ರವಿ ಅವರು ಪಿಟಿಐಯ ಹೊಸ ಉಪಾಧ್ಯಕ್ಷರಾಗಿ ಏಕಕಾಲದಲ್ಲಿ ಆಯ್ಕೆಯಾಗಿದ್ದಾರೆ.
Question 8 |
8. ಭಿಂಡವಾಸ್ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
ಗುಜರಾತ್ | |
ಹರಿಯಾಣ | |
ಪಂಜಾಬ್ | |
ಮಿಜೋರಾಂ |
Question 9 |
9. ಯಾವ ಟೆಲಿಕಾಂ ಸಂಸ್ಥೆ ಮುಕ್ತ ಮೊಬೈಲ್ ವ್ಯಾಲೆಟ್ “ಸ್ಪೀಡ್ ಪೇ” ಜಾರಿಗೊಳಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ಬಿಎಸ್ಎನ್ಎಲ್ | |
ಏರ್ಟೆಲ್ | |
ಐಡಿಯಾ | |
ವೊಡಾಫೋನ್ |
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ದೇಶದ 10 ರಾಜ್ಯಗಳಲ್ಲಿ ಮುಕ್ತ ಮೊಬೈಲ್ ವ್ಯಾಲೆಟ್ “ಸ್ಪೀಡ್ ಪೇ” ಅನ್ನು ಜಾರಿಗೆ ತರಲು ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದಡಿಯಲ್ಲಿ, ಬಿಎಸ್ಎನ್ಎಲ್ ಪಂಜಾಬ್, ಚಂಡೀಗಢ (ಯುಟಿ), ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಉತ್ತರಖಂಡದಲ್ಲಿ ಸ್ಪೀಡ್ ಪೇ” ಸೇವೆಗಳನ್ನು ವಿಸ್ತರಿಸಲಿದೆ.
Question 10 |
10. ಸರಕು ಮತ್ತು ಸೇವಾ ತೆರಿಗೆ ನೆಟ್ವರ್ಕ್ (GSTN)ನ ನೂತನ ಮಧ್ಯಂತರ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
ಅಮಿತ್ ಭಟ್ಟಚಾರ್ಯ | |
ಕುಲದೀಪ್ ಆಚಾರ್ಯ್ | |
ಅಜಯ್ ಭೂಷಣ್ ಪಾಂಡೆ | |
ರಾಮನಾಥ್ ಸಿಂಗ್ |
ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಸಿಇಒ ಅಜಯ್ ಭೂಷಣ್ ಪಾಂಡೆ ರವರನ್ನು ಸರಕು ಮತ್ತು ಸೇವಾ ತೆರಿಗೆ ನೆಟ್ವರ್ಕ್ನ ಮಧ್ಯಂತರ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. GSTN ಕೇಂದ್ರ, ರಾಜ್ಯಗಳು ಮತ್ತು ಸರ್ಕಾರೇತರ ಹಣಕಾಸು ಸಂಸ್ಥೆಗಳ ಒಡೆತನದ ಲಾಭರಹಿತ ಸಂಸ್ಥೆಯಾಗಿದ್ದು, ಸರಕು ಮತ್ತು ಸೇವಾ ತೆರಿಗೆಗೆ ಇನ್ಫರ್ಮೇಷನ್ ಟೆಕ್ನಾಲಜಿ (ಐಟಿ) ಬೆನ್ನೆಲುಬನ್ನು ನಿರ್ಮಿಸಲು ಕಾರಣವಾಗಿದೆ.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್7892017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Good job. It’s very helpful for us