ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,22,23,24,2017
Question 1 |
1. ಮೊದಲ BIMSTEC ವಿಪತ್ತು ನಿರ್ವಹಣೆ ವ್ಯಾಯಾಮ -2017 (BIMSTEC DMEX-2017) ಅನ್ನು ಆಯೋಜಿಸಲಿರುವ ದೇಶ _________?
ಬಾಂಗ್ಲದೇಶ | |
ಭಾರತ | |
ನೇಪಾಳ | |
ಶ್ರೀಲಂಕಾ |
ಅಕ್ಟೋಬರ್ 10-13, 2017 ರಿಂದ ದೆಹಲಿಯಲ್ಲಿ ಮೊದಲ 'BIMSTEC ವಿಪತ್ತು ನಿರ್ವಹಣಾ ವ್ಯಾಯಾಮ- 2017' (BIMSTEC DMEX-2017) ನಡೆಯಲಿದೆ. BIMSTEC ಗುಂಪಿನ ಎಲ್ಲಾ 7 ರಾಷ್ಟ್ರಗಳ ಪ್ರತಿನಿಧಿಗಳಾದ - ಬಾಂಗ್ಲಾದೇಶ, ಭೂತಾನ್, ಭಾರತ, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ.
Question 2 |
2. ಯಾವ ರಾಜ್ಯ ಸರ್ಕಾರ ಸಾರ್ವಜನಿಕರಿಗೆ 'ಪೀಪಲ್ ಫಸ್ಟ್' ಎಂಬ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ?
ತೆಲಂಗಣ | |
ಕೇರಳ | |
ಆಂಧ್ರ ಪ್ರದೇಶ | |
ಕರ್ನಾಟಕ |
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ರವರು ವಿಜಯವಾಡದಲ್ಲಿ 'ಪೀಪಲ್ ಫಸ್ಟ್' ಮೊಬೈಲ್ ಅಪ್ಲಿಕೇಶನ್ಗೆ ಚಾಲನೆ ನೀಡಿದರು. ಇದು ನಾಗರಿಕರಿಗೆ ಇತ್ತೀಚಿನ ಯೋಜನೆಗಳು ಮತ್ತು ಸರ್ಕಾರದ ಸೇವೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಿದೆ. ಬಳಕೆದಾರರು ತಮ್ಮ ದೂರುಗಳನ್ನು ನೋಂದಾಯಿಸಲು ಅಪ್ಲಿಕೇಶನ್ ಅನ್ನು ಬಳಸಬಹುದು.
Question 3 |
3. ಉತ್ತರಖಂಡದ ಸ್ವಚ್ಚ ಭಾರತ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವ ಬಾಲಿವುಡ್ ನಟ ಯಾರು?
ಅಕ್ಷಯ್ ಕುಮಾರ್ | |
ಶಾರೂಖ್ ಖಾನ್ | |
ಅಮಿತಾಬ್ ಬಚ್ಚನ್ | |
ಅಮಿರ್ ಖಾನ್ |
ಬಾಲಿವುಡ್ ನಟ ಅಕ್ಷಯ್ ಕುಮಾರ್ ರವರು ಉತ್ತರಾಖಂಡದ ಸ್ವಚ್ಚ ಭಾರತ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಅಕ್ಷಯ್ ಕುಮಾರ್ ಉತ್ತರ ಪ್ರದೇಶ ಸರ್ಕಾರದ ಸ್ವಚ್ಛತ ಕಾರ್ಯದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದರು.
Question 4 |
4. 2017 UNHCR ನನ್ಸೆನ್ ರೆಫ್ಯೂಜೀ(Nansen Refugee) ಪ್ರಶಸ್ತಿಗೆ ಆಯ್ಕೆಯಾಗಿರುವ ಝನ್ನಾಹ್ ಮುಸ್ತಾಫಾ ಯಾವ ದೇಶದವರು?
ಈಜಿಪ್ಟ್ | |
ನೈರೋಜಿ | |
ನೈಜೀರಿಯಾ | |
ಉಗಾಂಡ |
ನೈಜೀರಿಯಾದ ವಕೀಲ ಮತ್ತು ಶಿಕ್ಷಕನಾದ ಝನ್ನಾಹ್ ಮುಸ್ತಾಫಾ ಅವರಿಗೆ 2017 ರ ಯುಎನ್ ಹೈಕಮಿಷನ್ ಫಾರ್ ರೆಫ್ಯೂಜೀಸ್ (UNHCR) ನನ್ಸೆನ್ ರೆಫ್ಯೂಜೆಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇಶದಲ್ಲಿ ಬಂಡಾಯ ಪೀಡಿತ ಮಕ್ಕಳಿಗೆ ಸಹಾಯ ಮಾಡಲು ಹಾಗೂ ಮಧ್ಯಸ್ಥಿಕೆ ವಹಿಸಲು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೊಕೊ ಹರಮ್ ಹಿಂಸಾಚಾರದ ಕೇಂದ್ರವಾದ ಮೈದುಗುರಿಯಲ್ಲಿನ ಮುಸ್ತಫಾ ಅವರ “ದಿ ಫ್ಯೂಚರ್ ಪ್ರೌಸ್ ಇಸ್ಲಾಮಿಕ್ ಫೌಂಡೇಷನ್ ಸ್ಕೂಲ್” ಈಗ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಿದೆ.
Question 5 |
5. “ಇಂಟರ್ನ್ಯಾಷನಲ್ ಟೆಕ್ಸ್ಟೈಲ್ ಮತ್ತು ಅಪ್ಯಾರಲ್ ಫೇರ್" 6 ನೇ ಆವೃತ್ತಿ “ವಸ್ತ್ರಾ-2017" ಯಾವ ನಗರದಲ್ಲಿ ನಡೆಯಲಿದೆ?
ಬೆಂಗಳೂರು | |
ಜೈಪುರ | |
ಭೂಪಾಲ್ | |
ಮಧುರೈ |
Question 6 |
6. ಭಾರತದ ಮೊದಲ ಎಲೆಕ್ಟ್ರಿಕ್ ಬಸ್ ಸೇವೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
ತಮಿಳುನಾಡು | |
ತೆಲಂಗಣ | |
ಹಿಮಾಚಲ ಪ್ರದೇಶ | |
ಪಂಜಾಬ್ |
ದೇಶದ ಮೊದಲ ವಿದ್ಯುತ್ ಬಸ್ ಸೇವೆಗೆ ಹಿಮಾಚಲ ಪ್ರದೇಶದ ಮನಾಲಿ ಸಮೀಪದ ರೋಹ್ಟಂಗ್ ಪಾಸ್, ಪ್ರವಾಸಿ ತಾಣದಲ್ಲಿ ಪ್ರಾರಂಭಿಸಲಾಗಿದೆ. ಗೋಲ್ಡ್ಸ್ಟೋನ್ ಇನ್ಫ್ರಾಟೆಚ್ ನಿರ್ಮಿಸಿದ ವಿದ್ಯುತ್ ಬಸ್ಗಳು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ನಿಂದ ಪ್ರಮಾಣೀಕರಿಸಲ್ಪಟ್ಟಿವೆ. ಪ್ರತಿ ಎಲೆಕ್ಟ್ರಿಕ್ ಬಸ್ 30 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸಂಪೂರ್ಣವಾಗಿ ಚಾರ್ಜ್ ಮಾಡಲಾದ ಬ್ಯಾಟರಿಗಳೊಂದಿಗೆ 200 ಕಿ.ಮೀ ಚಲಿಸಲಿವೆ.
Question 7 |
7. ಈ ಕೆಳಗಿನ ಯಾವ ಭಾರತದ ಚಲನಚಿತ್ರ 2018 ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ?
ನ್ಯೂಟನ್ | |
ಬಾಹುಬಲಿ | |
ಟಾಯ್ಲೆಟ್: ಏಕ್ ಪ್ರೇಮ್ ಕಥಾ | |
ಲಾಸ್ಟ್ ಬಸ್ |
ರಾಜ್ ಕುಮಾರ್ ರಾವ್ ಅಭಿನಯಿಸಿರುವ ಚಲನಚಿತ್ರ “ನ್ಯೂಟನ್” 2018 ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಅಮಿತ್ ಮಾಸುರ್ಕರ್ ನಿರ್ದೇಶನದ ನ್ಯೂಟನ್ ಸಿನೆಮಾವನ್ನು ಮನೀಶ್ ಮುಂದ್ರ ನಿರ್ಮಾಣ ಮಾಡಿದ್ದು, ಬಾಲಿವುಡ್ ನ ಪ್ರಖ್ಯಾತ ಬ್ಯಾನರ್ “ದೃಶ್ಯ ಫಿಲಮ್ಸ್” ಅಡಿಯಲ್ಲಿ ಈ ಚಿತ್ರವನ್ನು ಹೊರತರಲಾಗಿತ್ತು.
Question 8 |
8. ಈ ಕೆಳಗಿನ ಯಾವ ರಾಜ್ಯದಲ್ಲಿ “ಪ್ರಧಾನ ಮಂತ್ರಿ LPG ಪಂಚಾಯತ್” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು?
ರಾಜಸ್ತಾನ | |
ಗುಜರಾತ್ | |
ಮಧ್ಯ ಪ್ರದೇಶ | |
ಜಾರ್ಖಂಡ್ |
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ರವರು ಸೆಪ್ಟೆಂಬರ್ 23 ರಂದು ಗುಜರಾತಿನ ಗಾಂಧಿನಗರ ಜಿಲ್ಲೆಯ ಮೋಟಾ ಇಶನ್ಪುರ್ ಗ್ರಾಮದಲ್ಲಿ ಪ್ರಧಾನ್ ಮಂತ್ರಿ LPG ಪಂಚಾಯತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಪಕ್ರಮ ಇದಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಪಿಜಿ ಸಂಪರ್ಕಗಳನ್ನು ವಿತರಿಸಲು ಜಾರಿಗೆ ತರಲಾಗಿದೆ. ಎಲ್ಪಿಜಿ ಪಂಚಾಯತ್ ಉದ್ದೇಶವು ಶುದ್ಧ ಇಂಧನವನ್ನು ಸರಿಯಾಗಿ ಬಳಸುವುದು ಮತ್ತು ಅದರ ಅನೇಕ ಪ್ರಯೋಜನಗಳನ್ನು ಎಲ್ಪಿಜಿ ಬಳಕೆದಾರರಲ್ಲಿ ಅರಿವು ಮೂಡಿಸುವುದು ಆಗಿದೆ. ಯೋಜನೆಯಡಿಯಲ್ಲಿ ಮುಂದಿನ ಒಂದುವರೆ ವರ್ಷಗಳಲ್ಲಿ ದೇಶಾದ್ಯಂತ ಒಂದು ಲಕ್ಷ ಎಲ್ಪಿಜಿ ಪಂಚಾಯತ್ಗಳನ್ನು ಸಕ್ರಿಯಗೊಳಿಸಲಾಗುವುದು.
Question 9 |
9. ಜಂಟಿ ಮಿಲಿಟರಿ ಅಭ್ಯಾಸ "ಪಾಂಡ-ಕಾಂಗರೂ 2017" ಆಸ್ಟ್ರೇಲಿಯಾ ಮತ್ತು ಯಾವ ದೇಶದನಡುವೆ ನಡೆಯಿತು?
ಫಿಲಿಫೈನ್ಸ್ | |
ಥಾಯ್ಲೆಂಡ್ | |
ಚೀನಾ | |
ಇಂಡೋನೇಷಿಯಾ |
ಜಂಟಿ ಮಿಲಿಟರಿ ತರಬೇತಿ "ಪಾಂಡ-ಕಾಂಗರೂ 2017" ಚೀನಾ ಮತ್ತು ಆಸ್ಟ್ರೇಲಿಯಾದ ಸೇನಾ ಪಡೆಗಳ ನಡುವೆ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ರಾಜಧಾನಿಯಾದ ಕುನ್ಮಿಂಗ್ನಲ್ಲಿ ಸೆಪ್ಟೆಂಬರ್ 10 ರಿಂದ 20 ರವರೆಗೆ ನಡೆಯಿತು.
Question 10 |
10. ಡಾಬರ್ ಇಂಡಿಯಾವು ಆನ್ಲೈನ್ ಆಯುರ್ವೇದ ಮಾರುಕಟ್ಟೆಗಾಗಿ ಯಾವ ಇ-ಕಾಮರ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿದೆ?
ಫ್ಲಿಪ್ ಕಾರ್ಟ್ | |
ಅಮೆಜಾನ್ ಇಂಡಿಯಾ | |
ಸ್ನಾಪ್ ಡೀಲ್ | |
ಇ-ಬೇ |
[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್2223242017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
i like this prossecess
nice experience