ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನ-34

Question 1

1. ರಾಜ್ಯದ ಯಾವ ಜಿಲ್ಲಾ ಪಂಚಾಯತಿಗೆ ಇಂಡಿಯಾ ಟೈಮ್ಸ್ ಗ್ರೂಪ್ ನೀಡುವ 2017ರ ಸಫಾಯಿಗಿರಿ ಪ್ರಶಸ್ತಿ ಲಭಿಸಿದೆ?

A
ಚಿತ್ರದುರ್ಗ
B
ಕಲಬುರ್ಗಿ
C
ಚಿಕ್ಕಬಳ್ಳಾಪುರ
D
ಬಳ್ಳಾರಿ
Question 1 Explanation: 
ಕಲಬುರ್ಗಿ

ಕಲಬುರ್ಗಿ ಜಿಲ್ಲಾ ಪಂಚಾಯಿತಿಯು ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಕೈಗೊಂಡಿರುವ ಶೌಚಾಲಯ ನಿರ್ಮಾಣ ಆಂದೋಲನಕ್ಕೆ ಇಂಡಿಯಾ ಟೈಮ್ಸ್ ಗ್ರೂಪ್ ನೀಡುವ 2017ರ ಸಫಾಯಿಗಿರಿ ಪ್ರಶಸ್ತಿ ಲಭಿಸಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಟಾಯ್ಲೆಟ್ ಏಕ್ ಪ್ರೇಮ ಕಥಾ’ ಚಿತ್ರದ ನಾಯಕಿ ಭೂಮಿ ಪಡ್ನೇಕರ್ ಪ್ರಶಸ್ತಿ ಪ್ರದಾನ ಮಾಡಿದರು.

Question 2

2. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ರಂಗಯ್ಯನದುರ್ಗ ಅರಣ್ಯ ಪ್ರದೇಶ ಬಳ್ಳಾರಿ ಜಿಲ್ಲೆಯಲ್ಲಿದೆ

II) ಅಳಿವಿನ ಅಂಚಿನಲ್ಲಿರುವ ಕೊಂಡುಕುರಿ ವನ್ಯಜೀವಿಗೆ ಈ ಅರಣ್ಯ ಪ್ರದೇಶ ನೆಲೆಯಾಗಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 2 Explanation: 
ಹೇಳಿಕೆ ಎರಡು ಮಾತ್ರ

ರಂಗಯ್ಯನದುರ್ಗ ಅರಣ್ಯ ಪ್ರದೇಶ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿದೆ. ವಿಶ್ವದಲ್ಲೇ ಅಳಿವಿನ ಅಂಚಿನಲ್ಲಿರುವ ಕೊಂಡುಕುರಿ ವನ್ಯಜೀವಿಗೆ ಈ ಅರಣ್ಯ ಪ್ರದೇಶ ನೆಲೆಯಾಗಿದೆ. ರಂಗಯ್ಯನದುರ್ಗ ಪ್ರದೇಶದ 77.23 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕುರುಚಲು ಅರಣ್ಯದಲ್ಲಿ ಶತಮಾನಗಳಿಂದ ನೆಲೆ ಕಂಡುಕೊಂಡಿರುವ ಅಪರೂಪದ ಕೊಂಡುಕುರಿ ಸಂತತಿ ಇಂದು ವಿನಾಶದ ಅಂಚಿನಲ್ಲಿದೆ. ತಾಲ್ಲೂಕು ಸೇರಿದಂತೆ ಏಷ್ಯಾದ ಕೆಲವೇ ಆವಾಸ ಸ್ಥಾನಗಳಲ್ಲಿ ಈ ಸಂತತಿ ವಿರಳವಾಗಿದೆ. ಕೊಂಡುಕುರಿ ಮಾತ್ರವಲ್ಲದೆ ಕೃಷ್ಣಮೃಗ, ಕರಡಿ, ಚಿರತೆ, ಚಿಪ್ಪುಹಂದಿ, ಹೈನಾ, ಮುಳ್ಳುಹಂದಿ, ತೋಳ, ಗುಳ್ಳೆನರಿ, ಪುನುಗು ಬೆಕ್ಕು ಮುಂತಾದ ಪ್ರಾಣಿಗಳು ಮತ್ತು ಅಪಾಯದ ಅಂಚಿನಲ್ಲಿರುವ ದೊರವಾಯನ ಹಕ್ಕಿ (ಗ್ರೇಟ್ ಇಂಡಿಯನ್ ಬಸ್ಟಾರ್ಡ್) ಹಾಗೂ ನೂರಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳಿಗೆ ಇದು ಆಶ್ರಯ ತಾಣವಾಗಿದೆ. ಕಮರ, ಉದೇದ್ದು, ಶ್ರೀಗಂಧ ಆಲೆ, ಪಚಾಲೆ, ಬೆಟ್ಟದ ನೆಲ್ಲಿ ಹೀಗೆ ನೂರಾರು ಜಾತಿಯ ಸಸ್ಯ ಸಂಕುಲ ಇಲ್ಲಿ ಹರಡಿಕೊಂಡಿದೆ.

Question 3

3. ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ಪ್ರೋ. ಗೋವಿಂದ್ ರಾಜ್
B
ಎಚ್ ಎಸ್ ದೊರೆಸ್ವಾಮಿ
C
ಎಚ್ ಎನ್ ನಾಗಮೋಹನ್ ದಾಸ್
D
ಬಿ ಟಿ ಲಲಿತ ನಾಯಕ್
Question 3 Explanation: 
ಎಚ್ ಎಸ್ ದೊರೆಸ್ವಾಮಿ

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು ರೂ 5 ಲಕ್ಷ ನಗದು ಒಳಗೊಂಡಿದೆ. ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯ್ಕೆ ಸಮಿತಿ ದೊರೆಸ್ವಾಮಿ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಿತ್ತು.

Question 4

4. ಪ್ರಸಕ್ತ ಸಾಲಿನ ರಾಜ್ಯಮಟ್ಟದ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಗೆ ಈ ಕೆಳಗಿನ ಯಾರನ್ನು ಆಯ್ಕೆ ಮಾಡಲಾಗಿದೆ?

A
ತಿಪ್ಪೇಸ್ವಾಮಿ
B
ಗುರುಮೂರ್ತಿ ನಾಯಕ್
C
ರಾಮಚಂದ್ರಪ್ಪ
D
ಕುಮಾರಸ್ವಾಮಿ
Question 4 Explanation: 
ತಿಪ್ಪೇಸ್ವಾಮಿ

ಹಿರಿಯ ರಾಜಕಾರಣಿ ಮಾಜಿ ಸಚಿವ, ವಾಲ್ಮೀಕಿ ಗುರುಪೀಠ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ, ಚಳ್ಳಕೆರೆಯ ಮಾಜಿ ಸಚಿವ ತಿಪ್ಪೇಸ್ವಾಮಿ ಅವರನ್ನು ಪ್ರಸಕ್ತ ಸಾಲಿನ ರಾಜ್ಯಮಟ್ಟದ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ನಾಲ್ಕು ದಶಕಗಳ ರಾಜಕೀಯ ಹೋರಾಟ, ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ, ತಿಪ್ಪೇಸ್ವಾಮಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Question 5

5. ಇತ್ತೀಚೆಗೆ ನಿಧನರಾದ “ಚಿಟ್ಟಾಣಿ ರಾಮಚಂದ್ರ ಹೆಗಡೆ” ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?

A
ಯಕ್ಷಗಾನ
B
ತುಳು ಸಾಹಿತ್ಯ
C
ಸಿನಿಮಾ
D
ವಿಜ್ಞಾನ
Question 5 Explanation: 
ಯಕ್ಷಗಾನ

ಪ್ರಸಿದ್ಧ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನರಾದರು. ಜನವರಿ ೧, ೧೯೩೩ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಜನಿಸಿದ್ದರು. ಜನವರಿ ೧, ೧೯೩೩ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಜನಿಸಿದ್ದ ಅವರು ೨ನೇ ತರಗತಿಗೆ ಶಾಲೆ ಬಿಟ್ಟಿದ್ದರು. ೭ನೇ ವರ್ಷದಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ್ದ ಅವರು ಬಡಗುತಿಟ್ಟಿನ ಶೈಲಿಯ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದರು.

Question 6

6. ಕೋಟ ಡಾ.ಶಿವರಾಮ ಕಾರಂತರ ಹೆಸರಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ನೀಡುವ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕೆಳಗಿನ ಯಾರಿಗೆ ನೀಡಲಾಗಿದೆ?

A
ಡಾ ಶಿವರಾಜ್ ಕುಮಾರ್
B
ಪ್ರಕಾಶ್ ರಾಜ್
C
ದತ್ತಣ್ಣ
D
ದ್ವಾರಕೀಶ್
Question 6 Explanation: 
ಪ್ರಕಾಶ್ ರಾಜ್

ಕೋಟ ಡಾ.ಶಿವರಾಮ ಕಾರಂತರ ಹೆಸರಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ನೀಡುವ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ನಟ ಪ್ರಕಾಶ್ ರೈ ಅವರಿಗೇ ನೀಡಲಾಗಿದೆ.

Question 7

7. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ:

I) ರಾಜ್ಯದ ಮೊದಲ ಎದೆಹಾಲಿನ ಬ್ಯಾಂಕನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ

II) ಅಮಾರ ಎದೆಹಾಲು ಪ್ರತಿಷ್ಠಾನದ ಸಹಯೋಗದೊಂದಿಗೆ ಫೋರ್ಟಿಸ್ ಆಸ್ಪತ್ರೆ ಈ ಬ್ಯಾಂಕನ್ನು ಸ್ಥಾಪಿಸಿದೆ.

ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 7 Explanation: 
ಎರಡು ಹೇಳಿಕೆ ಸರಿ

ಫೋರ್ಟಿಸ್ ಲಾಫೆಮೆ ಮಕ್ಕಳ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಎದೆಹಾಲಿನ ಬ್ಯಾಂಕ್ಗೆ ಪ್ರಾರಂಭಗೊಂಡಿದೆ. ಅಮಾರ ಎದೆಹಾಲು ಪ್ರತಿಷ್ಠಾನದ ಸಹಯೋಗದೊಂದಿಗೆ ಫೋರ್ಟಿಸ್ ಆಸ್ಪತ್ರೆ ಈ ಬ್ಯಾಂಕನ್ನು ಸ್ಥಾಪಿಸಿದೆ. ‘ಎದೆಹಾಲನ್ನು ವ್ಯರ್ಥ ಮಾಡದೆ, ದಾನ ಮಾಡಿ’ ಎಂಬ ಘೋಷವಾಕ್ಯವನ್ನು ಬ್ಯಾಂಕ್ ಹೊಂದಿದೆ.

Question 8

8. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ‘ರಾಷ್ಟ್ರೀಯ ಹೈನೋದ್ಯಮ ಶ್ರೇಷ್ಠತಾ’ ಪುರಸ್ಕಾರ ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ದೊರೆತಿದೆ

II) ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಎರಡು ಡೇರಿಗಳಿಗೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಕ್ವಾಲಿಟಿ ಮಾರ್ಕ್ ನೀಡಲಾಗಿದೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 8 Explanation: 
ಎರಡು ಹೇಳಿಕೆ ಸರಿ

ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ತನ್ನ ಸಂಸ್ಥಾಪನಾ ದಿನದ ಅಂಗವಾಗಿ ಸ್ಥಾಪಿಸಿರುವ ‘ರಾಷ್ಟ್ರೀಯ ಹೈನೋದ್ಯಮ ಶ್ರೇಷ್ಠತಾ’ ಪುರಸ್ಕಾರ ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ದೊರೆತಿದೆ. ದಕ್ಷಿಣ ಭಾರತದಲ್ಲಿ ಆಯ್ಕೆಯಾದ ಏಕೈಕ ಹಾಲು ಒಕ್ಕೂಟ ಇದಾಗಿದೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಎರಡು ಡೇರಿಗಳಿಗೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಕ್ವಾಲಿಟಿ ಮಾರ್ಕ್ ಲಭಿಸಿದೆ.

Question 9

9. ಈ ಕೆಳಗಿನವುಗಳನ್ನು ಗಮನಿಸಿ:

I) ಯೂರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್

II) ಏಷಿಯನ್ ಇನ್ಫ್ರಾಸ್ಟ್ರಕ್ಷರ್ ಇನ್ವೆಸ್ಟ್ಮೆಂಟ್ ಬ್ಯಾಂಕ್

III) ಏಷ್ಯಾ ಅಭಿವೃದ್ದಿ ಬ್ಯಾಂಕ್

IV) ವಿಶ್ವ ಬ್ಯಾಂಕ್

ಬೆಂಗಳೂರು ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಅನುಷ್ಠಾನಕ್ಕೆ ಮೇಲಿನ ಯಾವುವು ಆರ್ಥಿಕ ನೆರವು ನೀಡಲಿವೆ?

A
I & II
B
II & III
C
I & III
D
ಮೇಲಿನ ಎಲ್ಲವೂ
Question 9 Explanation: 
I & II

ಬೆಂಗಳೂರು ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಅನುಷ್ಠಾನಕ್ಕಾಗಿ ಯೂರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಇಐಬಿ) ಜತೆಗೆ ಕೇಂದ್ರ ಸರ್ಕಾರ ₹ 2,290 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಮೆಟ್ರೊ ಎರಡನೇ ಹಂತದ ಯೋಜನೆಗೆ ಇಐಬಿ (ಒಟ್ಟು ₹ 3,817 ಕೋಟಿ) ಮತ್ತು ಏಷಿಯನ್ ಇನ್ಫ್ರಾಸ್ಟ್ರಕ್ಷರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ಗಳು (₹ 2,290 ಕೋಟಿ) ಆರ್ಥಿಕ ನೆರವು ಒದಗಿಸಲಿದೆ.

Question 10

10. ಈ ಕೆಳಗಿನ ನದಿಗಳಲ್ಲಿ ಕಾವೇರಿ ನದಿಯ ಉಪನದಿಗಳು ಯಾವುವು?

I) ಲೋಕಪಾವನಿ

II) ಶಿಂಷಾ

III) ವೀರವೈಷ್ಣವಿ

IV) ಅರ್ಕಾವತಿ

ಸರಿಯಾದ ಉತ್ತರಗಳನ್ನು ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ:

A
I & II
B
II & III
C
III & IV
D
I, II, III & IV
Question 10 Explanation: 
I, II, III & IV
There are 10 questions to complete.

[button link=”http://www.karunaduexams.com/wp-content/uploads/2017/10/ರಾಜ್ಯ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-34.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

6 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -34”

  1. Dushyanth MS

    Sir answer kotila

    1. Hanamanta police patil

      Supre

  2. Yallappa upparatti

    Fully satisfied

    1. Madivala r pujari

      Comment

Leave a Comment

This site uses Akismet to reduce spam. Learn how your comment data is processed.