ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,1,2,2017

Question 1

1. ಪ್ರತಿಷ್ಠಿತ “ಇಂಟರ್ನ್ಯಾಷನಲ್ ಬಿಸಿನೆಸ್ ಪರ್ಸನ್ ಆಫ್ ದಿ ಇಯರ್” ಪ್ರಶಸ್ತಿಯನ್ನು ಪಡೆದುಕೊಂಡ ಭಾರತೀಯ ಉದ್ಯಮಿ ಯಾರು?

A
ರಾಜೇಶ್ ಕನ್ನಾ
B
ಗೌತಮ್ ಕುಲಕರ್ಣಿ
C
ಬಿರೇಂದ್ರ ಸಸ್ಮಾಲ್
D
ಉಮೇಶ್ ಚಂದ್ರ
Question 1 Explanation: 
ಬಿರೇಂದ್ರ ಸಸ್ಮಾಲ್

ಘಾನಾ ಮೂಲದ ಭಾರತೀಯ ವಾಣಿಜ್ಯೋದ್ಯಮಿಯಾದ ಬಿರೇಂದ್ರ ಸಸ್ಮಾಲ್ ಅವರು ಲಂಡನಿನ ಏಷಿಯಾ ಅಚೀವರ್ಸ್ ಪ್ರಶಸ್ತಿಗಳಲ್ಲಿ ಪ್ರತಿಷ್ಠಿತ ಇಂಟರ್ನ್ಯಾಷನಲ್ ಬಿಸಿನೆಸ್ ಪರ್ಸನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Question 2

2. ಈ ಕೆಳಗಿನ ಯಾರು “ಸಶಸ್ತ್ರ ಸೀಮಾ ಬಲ (SSB)” ದ ನೂತನ ನಿರ್ದೇಶಕ ಜನರಲ್ (ಡಿಜಿ) ಆಗಿ ನೇಮಕಗೊಂಡಿದ್ದಾರೆ?

A
ಅಮಿತ್ ಕಿರಣ್
B
ಶೇಖರ್ ಬಸು
C
ಆರ್ ಕೆ ಮಿಶ್ರಾ
D
ರಮಣ್ ಮಹರ್ಷಿ
Question 2 Explanation: 
ಆರ್ ಕೆ ಮಿಶ್ರಾ

ಉತ್ತರ ಪ್ರದೇಶದ 1984 ಬ್ಯಾಚ್ ಐಪಿಎಸ್ ಅಧಿಕಾರಿ, ರಜನಿ ಕಾಂತ್ ಮಿಶ್ರಾ ರವರು ಸಶಸ್ತ್ರ ಸೀಮಾ ಬಲದ ನೂತನ ನಿರ್ದೇಶಕ ಜನರಲ್ (ಡಿ.ಜಿ) ಆಗಿ ನೇಮಕಗೊಂಡಿದ್ದಾರೆ.

Question 3

3. ಅಂತಾರಾಷ್ಟ್ರೀಯ ಹಿರಿಯರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಸೆಪ್ಟೆಂಬರ್ 29
B
ಸೆಪ್ಟೆಂಬರ್ 30
C
ಅಕ್ಟೋಬರ್ 1
D
ಅಕ್ಟೋಬರ್ 2
Question 3 Explanation: 
ಅಕ್ಟೋಬರ್ 1

ಅಂತಾರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಅಕ್ಟೋಬರ್ 1, 2017 ರಂದು ಆಚರಿಸಲಾಗುತ್ತಿದೆ. ಹಿರಿಯರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. 2017ರ ಥೀಮ್ Stepping into the Future: Tapping the Talents, Contributions and Participation of Older Persons in Society”.

Question 4

4. ವಿಶ್ವ ಸರ್ಕಾರ ಶೃಂಗಸಭೆ (World Government Summit) 6 ನೇ ಆವೃತ್ತಿಯ ಆತಿಥ್ಯ ವಹಿಸುವ ರಾಷ್ಟ್ರ ಯಾವುದು?

A
ಇರಾನ್
B
ಮೆಕ್ಸಿಕೊ
C
ಯುಎಇ
D
ಆಸ್ಟ್ರೇಲಿಯಾ
Question 4 Explanation: 
ಯುಎಇ

ವಿಶ್ವ ಸರ್ಕಾರ ಶೃಂಗಸಭೆಯ (WHS) ಆರನೇ ಆವೃತ್ತಿ ಫೆಬ್ರವರಿ 11 ರಿಂದ 13, 2018 ಯುಎಇ ದುಬೈನಲ್ಲಿ ನಡೆಯಲಿದೆ. ಭಾರತವು ಈ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಲಿದೆ.

Question 5

5. ಮಹಾತ್ಮಾ ಗಾಂಧಿಯವರ ಜನ್ಮದಿನೋತ್ಸವದ ಅಂಗವಾಗಿ ಬಾಲ್ಯ ವಿವಾಹ ಮತ್ತು ವರದಕ್ಷಿಣೆ ವಿರುದ್ಧ ರಾಜ್ಯ ವ್ಯಾಪ್ತಿ ಅಭಿಯಾನವನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

A
ಹರಿಯಾಣ
B
ಗುಜರಾತ್
C
ಬಿಹಾರ
D
ರಾಜಸ್ತಾನ
Question 5 Explanation: 
ಬಿಹಾರ

ಮಹಾತ್ಮ ಗಾಂಧಿಯವರ ಜನ್ಮದಿನೋತ್ಸವದ ಸಂದರ್ಭದಲ್ಲಿ ಬಾಲ್ಯ ವಿವಾಹ ಮತ್ತು ವರದಕ್ಷಿಣೆ ವಿರುದ್ಧ ಬಿಹಾರ ಸರಕಾರವು ರಾಜ್ಯದಾದ್ಯಂತ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಅಥವಾ 21 ವರ್ಷಕ್ಕಿಂತ ಕೆಳಗಿರುವ ಹುಡುಗನನ್ನು ವಿವಾಹವಾಗಲು ಅಥವಾ ವರದಕ್ಷಿಣೆ ಪಡೆಯಲು ಪಾಲ್ಗೊಳ್ಳಬಾರದೆಂದು ಜನರಿಂದ ಪ್ರತಿಜ್ಞೆ ಪಡೆಯಲಾಗುವುದು.

Question 6

6. ಕಾರ್ಲಾಪತ್ ವನ್ಯಜೀವಿ ಧಾಮ (Karlapat Wildlife Sanctuary) ಯಾವ ರಾಜ್ಯದಲ್ಲಿದೆ?

A
ಪಶ್ಚಿಮ ಬಂಗಾಳ
B
ಒಡಿಶಾ
C
ಹಿಮಾಚಲ ಪ್ರದೇಶ
D
ಪಂಜಾಬ್
Question 6 Explanation: 
ಒಡಿಶಾ
Question 7

7. ಈ ಕೆಳಗಿನ ಯಾರಿಗೆ ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್' ನ ಗೌರವ ಸದಸ್ಯತ್ವ ನೀಡಲಾಯಿತು?

A
ಚಿ ಸು ಕೃಷ್ಣಸೆಟ್ಟಿ
B
ಕಲ್ಯಾಣಿ ಭಾರ್ಗವ್
C
ರಾಜೀವ್ ಶುಕ್ಲಾ
D
ಮನೋಹರ್ ಜೋಶಿ
Question 7 Explanation: 
ಚಿ ಸು ಕೃಷ್ಣಸೆಟ್ಟಿ

ಲಲಿತಕಲಾ ಅಕಾಡೆಮಿ ಮುಖ್ಯಸ್ಥರೂ ಆದ ಹಿರಿಯ ಕಲಾವಿದ ಚಿ.ಸು.ಕೃಷ್ಣಸೆಟ್ಟಿ ಅವರಿಗೆ 'ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್' ನ ಗೌರವ ಸದಸ್ಯತ್ವ ನೀಡಲಾಗಿದೆ. ಝುಬಿನ್ ಮೆಹ್ತಾ, ಬಾನ್ ಕಿ ಮೂನ್ ಮುಂತಾದ 84 ಗಣ್ಯರು ಮತ್ತು ಕಲಾವಿದರು ಈವರೆಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತದಿಂದ ಸತೀಶ್ ಗುಜ್ರಾಲ್, ಓ.ಪಿ.ಶರ್ಮ ಅವರ ನಂತರ ಈ ಗೌರವವನ್ನು ಪಡೆದಿರುವ ಮೂರನೆಯವರು ಕೃಷ್ಣಸೆಟ್ಟಿ.

Question 8

8. 3ನೇ ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆ 2017-2031 (NWAP) ಅನ್ನು ಯಾವ ಸಮಿತಿ ಸಿದ್ದಪಡಿಸಿದೆ?

A
ಜೆ ಸಿ ಕಲಾ ಸಮಿತಿ
B
ರವೀಂದ್ರ ಕಠಾರಿ ಸಮಿತಿ
C
ಕಿರಣ್ ರಾವತ್ ಸಮಿತಿ
D
ಉಮೇಶ್ ಚೆಂಗಲ ಸಮಿತಿ
Question 8 Explanation: 
ಜೆ ಸಿ ಕಲಾ ಸಮಿತಿ

3ನೇ ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆ 2017-2031 ಅನ್ನು ಇತ್ತೀಚೆಗೆ ನವದೆಹಲಿಯ ಜಾಗತಿಕ ವನ್ಯಜೀವಿ ಕಾರ್ಯಕ್ರಮ ಸಮ್ಮೇಳನದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಡಾ. ಹರ್ಷವರ್ಧನ್ ರವರು ಅನಾವರಣಗೊಳಿಸಿದರು. ಈ ಕ್ರಿಯಾಯೋಜನೆಯನ್ನು ತಯಾರಿಸುವ ಸಲುವಾಗಿ 12 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಚಿವಾಲಯದ ಮಾಜಿ ಕಾರ್ಯದರ್ಶಿ JC ಕಲಾ ಸಮಿತಿಯ ಅಧ್ಯಕ್ಷರಾಗಿದ್ದರು.

Question 9

9. ದೇಶದಲ್ಲಿ ವಿಪತ್ತು ನಿರ್ವಹಣೆಯನ್ನು ಒದಗಿಸಲು ಬಿಎಸ್ಎನ್ಎಲ್ ಸಂಸ್ಥೆಯು ವಿಹಾನ್ ನೆಟ್ವರ್ಕ್ಸ್ ಲಿಮಿಟೆಡ್ (ವಿಎನ್ಎಲ್) ಸಹಭಾಗಿತ್ವದಲ್ಲಿ ಯಾವ ಸೇವೆಯನ್ನು ಪ್ರಾರಂಭಿಸಲಿದೆ?

A
ಅಲರ್ಟ್ 111
B
ರಿಲೀಫ್ 123
C
ಪ್ರೊಟೆಕ್ಟ್ 123
D
ರೆಸ್ಕ್ಯೂ 111
Question 9 Explanation: 
ರಿಲೀಫ್ 123

ಭಾರತದಲ್ಲಿ ವಿಪತ್ತು ನಿರ್ವಹಣೆ ಒದಗಿಸಲು "ರಿಲೀಫ್ 123" ಸೇವೆಯನ್ನು ಪ್ರಾರಂಭಿಸಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ವಿಹಾನ್ ನೆಟ್ವರ್ಕ್ಸ್ ಲಿಮಿಟೆಡ್ (ವಿಎನ್ಎಲ್) ಒಡಂಬಡಿಕೆ ಒಪ್ಪಂದಕ್ಕೆ ಸಹಿ ಮಾಡಿವೆ. "

Question 10

10. ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿ ಯಾರು?

A
ವೇದಾ ಕೃಷ್ಣಮೂರ್ತಿ
B
ರಾಯ್ನ ಸಿಂಗ್
C
ನಿವೇದಿತಾ
D
ಕಿಶೋರಿ ಜೈನ್
Question 10 Explanation: 
ರಾಯ್ನ ಸಿಂಗ್
There are 10 questions to complete.

[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,1,2,2017”

  1. veerendra

    I LIKE THIS KARUNADU EXAMS

  2. Thanks sir
    ಇದರಿಂದ ನಮಗೆ ಬಹಳಾನುಕುಲವಗಿದೆ

  3. nandinimaheh

    Very useful for the competitive exams.

Leave a Comment

This site uses Akismet to reduce spam. Learn how your comment data is processed.