ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,3,4,2017
Question 1 |
1. ಇತ್ತೀಚೆಗೆ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ತೆರೆದಿರುವ “ಬೆಂಘಾಜಿ” ಬಂದರು ಆಫ್ರಿಕಾದ ಯಾವ ದೇಶದಲ್ಲಿದೆ?
ಘಾನ | |
ಲಿಬಿಯಾ | |
ನೈಜೀರಿಯಾ | |
ಸೂಡನ್ |
ಲಿಬಿಯಾದ ಬೆಂಘಾಜಿ ಬಂದರನ್ನುಸೆಪ್ಟೆಂಬರ್ 30, 2017 ರಂದು ಮೂರು ವರ್ಷಗಳ ನಂತರ ಅಧಿಕೃತವಾಗಿ ತೆರೆಯಲಾಯಿತು. 2011ರ ಕ್ರಾಂತಿಯ ನಂತರ ಈ ಬಂದರನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.
Question 2 |
2. ಹಿಂದುಳಿದ ವರ್ಗಗಳ (ಒಬಿಸಿ) ಉಪ ವರ್ಗೀಕರಣವನ್ನು ಪರಿಶೀಲಿಸುವ ಸಲುವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನೇಮಿಸಿರುವ ಆಯೋಗದ ಅಧ್ಯಕ್ಷರು ಯಾರು?
ಜಿ ರೋಹಿಣಿ | |
ಸುಶೀಲಕಾಂತ್ | |
ರಂಜಿತ್ ಬ್ಯಾನರ್ಜಿ | |
ಅಮಿತಾ ಪ್ರಸಾದ್ |
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಇತ್ತೀಚೆಗೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಉಪ-ವರ್ಗೀಕರಣವನ್ನು ಪರಿಶೀಲಿಸುವ ಸಲುವಾಗಿ ಆಯೋಗವನ್ನು ನೇಮಿಸಿದ್ದಾರೆ. ಜಸ್ಟಿಸ್ (ನಿವೃತ್ತಿ) ಜಿ. ರೋಹಿಣಿ ಆಯೋಗದ ಅಧ್ಯಕ್ಷರಾಗಿದ್ದಾರೆ. ಆಯೋಗವು 12 ವಾರಗಳಲ್ಲಿ ವರದಿ ಸಲ್ಲಿಸಲಿದೆ. ಕೇಂದ್ರೀಯ ಪಟ್ಟಿಯಲ್ಲಿ ಸೇರಿಸಿದಂತಹ ವರ್ಗಗಳಿಗೆ ಸಂಬಂಧಿಸಿದಂತೆ ಒಬಿಸಿಗಳ ವರ್ಗದಲ್ಲಿ ಸೇರಿರುವ ಜಾತಿಗಳ ಅಥವಾ ಸಮುದಾಯಗಳ ನಡುವೆ ಮೀಸಲಾತಿಯ ಲಾಭಗಳನ್ನು ವಿತರಿಸುವ ವ್ಯಾಪ್ತಿಯನ್ನು ಆಯೋಗವು ಪರಿಶೀಲಿಸುತ್ತದೆ.
Question 3 |
3. 2017 ವಿಶ್ವಸಂಸ್ಥೆಯ “ವಿಶ್ವ ಆವಾಸಸ್ಥಾನ ದಿನ (WHD)” ಥೀಮ್ ______?
Housing for All | |
Housing Policies: Affordable Homes | |
Housing for Sustainable Development | |
Housing and Growth |
2017 ವಿಶ್ವ ಆವಾಸಸ್ಥಾನ ದಿನ (WHD)ವನ್ನು ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ. 2017 ಥೀಮ್ "ವಸತಿ ನೀತಿಗಳು: ಕೈಗೆಟುಕಬಲ್ಲ ಮನೆಗಳು (Housing Policies: Affordable Homes)" ಆಗಿದೆ. ವಿಶ್ವಸಂಸ್ಥೆಯು (ಯುಎನ್) ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರ ಅಧಿಕೃತವಾಗಿ ವಿಶ್ವ ಆವಾಸಸ್ಥಾನ ದಿನ ಎಂದು ಗೊತ್ತುಪಡಿಸಿದೆ.
Question 4 |
4. ಮೊದಲ ಬಾರಿಗೆ ಭಾರತ ಮತ್ತು ನೆರೆಯ ಯಾವ ದೇಶ ಜಾಗತಿಕವಾಗಿ ಗುರುತಿಸಲ್ಪಟ್ಟ ವಿಧಾನವನ್ನು ಬಳಸಿಕೊಂಡು ಜಂಟಿ ಹುಲಿ ಗಣತಿಯನ್ನು ನಡೆಸಲಿವೆ?
ಚೀನಾ | |
ಶ್ರೀಲಂಕಾ | |
ನೇಪಾಳ | |
ಮ್ಯಾನ್ಮಾರ್ |
ಇದೇ ಮೊದಲ ಬಾರಿಗೆ ನೇಪಾಳ ಮತ್ತು ಭಾರತವು ತಮ್ಮ ರಾಷ್ಟ್ರೀಯ ಉದ್ಯಾನವನಗಳು, ಅರಣ್ಯ ಪ್ರದೇಶ ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ವಿಧಾನವನ್ನು ಬಳಸಿಕೊಂಡು ನವೆಂಬರ್ 2017 ರಿಂದ ಕ್ಯಾಮೆರಾ ಟ್ಯಾಪಿಂಗ್ ವಿಧಾನದಲ್ಲಿ ಜಂಟಿ ಹುಲಿ ಗಣತಿಯನ್ನು ನಡೆಸಲಿವೆ. ಚಿತ್ವಾನ್ ರಾಷ್ಟ್ರೀಯ ಉದ್ಯಾನವನ ಮತ್ತು ಪಾರ್ಸಾ ವನ್ಯಜೀವಿ ವಲಯ ಪ್ರದೇಶ ಇವು ನೇಪಾಳದಲ್ಲಿ ಹುಲಿಗಳ ಆವಾಸಸ್ಥಾನಗಳಾಗಿವೆ, ಇವು ಬಿಹಾರದ ಬಾಲ್ಮಿಕಿ ಹುಲಿ ಸಂರಕ್ಷಿತ ಪ್ರದೇಶದ ಸಮೀಪದಲ್ಲಿವೆ. ಅಂತೆಯೇ, ನೇಪಾಳದ ಬಾರ್ಡಿಯಾ ರಾಷ್ಟ್ರೀಯ ಉದ್ಯಾನವನವು ಭಾರತದ ಕತರ್ಣಿಘಾಟ್ ವನ್ಯಜೀವಿ ಅಭಯಾರಣ್ಯಕ್ಕೆ ಸಮೀಪದಲ್ಲಿದೆ.
Question 5 |
5. ಕೇಂದ್ರ ಪರಿಸರ ಸಚಿವಾಲಯ “SECURE ಹಿಮಾಲಯ ಯೋಜನೆ”ಯನ್ನು ಈ ಕೆಳಗಿನ ಯಾವ ಸಂಸ್ಥೆಯ ಸಹಯೋಗದೊಂದಿಗೆ ಆರಂಭಿಸಿದೆ?
ವಿಶ್ವಬ್ಯಾಂಕ್ | |
ಯುಎನ್ ಡೆವೆಲಪ್ಮೆಂಟ್ ಪ್ರೋಗ್ರಾಂ | |
ಯುನೆಸ್ಕೋ | |
ವಿಶ್ವಸಂಸ್ಥೆ |
ಕೇಂದ್ರ ಪರಿಸರ ಸಚಿವ ಡಾ. ಹರ್ಷ ವರ್ಧನ್ ಅವರು ನವದೆಹಲಿಯಲ್ಲಿ ಜಾಗತಿಕ ವನ್ಯಜೀವಿ ಕಾರ್ಯಕ್ರಮ (ಜಿಡಬ್ಲ್ಯುಪಿ) ಸಮಾವೇಶದಲ್ಲಿ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಯುಎನ್ಡಿಪಿ) ಸಹಯೋಗದೊಂದಿಗೆ ಸೆಕ್ಯೂರ್ ಹಿಮಾಲಯ ಯೋಜನೆಗೆ ಚಾಲನೆ ನೀಡಿದರು. 6-ವರ್ಷಗಳ ಯೋಜನೆಯ ಉದ್ದೇಶವು ನಿರ್ದಿಷ್ಟ ಭೂದೃಶ್ಯಗಳಿಗೆ ಮೀಸಲಾದ ಉನ್ನತ ಮಟ್ಟದ ಹಿಮಾಲಯ ಪರಿಸರ ವ್ಯವಸ್ಥೆಯ ಜೀವನೋಪಾಯ, ಸಂರಕ್ಷಣೆ, ಸಮರ್ಥನೀಯ ಬಳಕೆ ಮತ್ತು ಪುನಃಸ್ಥಾಪನೆ ಮಾಡುವುದು. ಇದು ಚಿತಾಂಗ್ (ಜಮ್ಮು ಮತ್ತು ಕಾಸ್ಮಿರ್), ಲಾಹೌಲ್ - ಪಾಂಗಿ ಮತ್ತು ಕಿನ್ನೌರ್ (ಹಿಮಾಚಲ ಪ್ರದೇಶ), ಗಂಗೋತ್ರಿ - ಗೋವಿಂದ ಮತ್ತು ಪಿಥೋರಘರ್ (ಉತ್ತರಾಖಂಡ್) ದಾರ್ಮಾ - ಬೈನ್ಸ್ ವ್ಯಾಲಿ ಮತ್ತು ಕಾಂಚನ್ಜುಂಗಾ - ಅಪ್ಪರ್ ಟೀಸ್ತಾ ವ್ಯಾಲಿ (ಸಿಕ್ಕಿಂ) ಒಳಗೊಂಡಿದೆ. ಹಿಮ ಚಿರತೆ ಮತ್ತು ಇತರ ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು ಅವುಗಳ ಆವಾಸಸ್ಥಾನಗಳ ರಕ್ಷಣೆಗೆ ಯೋಜನೆ ಗಮನ ಹರಿಸಲಿದೆ. ಆ ಪ್ರದೇಶದಲ್ಲಿನ ಜನರ ಜೀವನೋಪಾಯವನ್ನು ಭದ್ರಪಡಿಸುವುದು ಮತ್ತು ವನ್ಯಜೀವಿ ಅಪರಾಧವನ್ನು ಕಡಿಮೆ ಮಾಡಲು ಜಾರಿಗೊಳಿಸುವಿಕೆಯನ್ನು ಖಚಿತಪಡಿಸಲಿದೆ.
Question 6 |
6. ಈ ಕೆಳಗಿನ ಯಾರು ವಿಶ್ವ ಆರೋಗ್ಯ ಸಂಸ್ಥೆ (WHO)ಯ ಉಪ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಮೊದಲಿಗರು ಎನಿಸಿದ್ದಾರೆ?
ಸೌಮ್ಯ ಸ್ವಾಮಿನಾಥನ್ | |
ರೇಣುಕಾ ಶರ್ಮಾ | |
ಸುರೇಖಾ ಕುಲಕರ್ಣಿ | |
ಸಂಜನಾ ಸಿಂಗ್ |
ಪ್ರಸ್ತುತ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ಡೈರೆಕ್ಟರ್ ಜನರಲ್ (ಡಿಜಿ) ಆಗಿರುವ ಡಾ ಸೌಮ್ಯ ಸ್ವಾಮಿನಾಥನ್ ರವರು ವಿಶ್ವ ಆರೋಗ್ಯ ಸಂಸ್ಥೆ (WHO)ಯ ಉಪ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ. ಡಾ. ಸ್ವಾಮಿನಾಥನ್ ಅವರು ಶಿಶುವೈದ್ಯರಾಗಿದ್ದಾರೆ ಮತ್ತು ಕ್ಷಯರೋಗ ಮತ್ತು HIV ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಇವರು ಖ್ಯಾತ ತಳಿವಿಜ್ಞಾನಿ ಮತ್ತು ಹಸಿರು ಕ್ರಾಂತಿಯ ಪಿತಾಮಹ ಎಂಎಸ್ ಸ್ವಾಮಿನಾಥನ್ ಅವರ ಪುತ್ರಿ.
Question 7 |
7. ಈ ಮುಂದಿನ ಯಾರು ಭಾರತೀಯ ಸ್ಟೇಟ್ ಬ್ಯಾಂಕಿನ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?
ಅರುಣ್ ಕುಮಾರ್ | |
ಸಂದೀಪ್ ಭಾರ್ಗವ್ | |
ರಜನೀಶ್ ಕುಮಾರ್ | |
ಶೈಲಜಾ ಕುಲಕರ್ಣಿ |
ಭಾರತೀಯ ಸ್ಟೇಟ್ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ರಜನೀಶ್ ಕುಮಾರ್ ನೇಮಕವಾಗಿದ್ದಾರೆ. ಅರುಂಧತಿ ಭಟ್ಟಾಚಾರ್ಯ ಅವರ ಅಧಿಕಾರಾವಧಿ ಕೊನೆಗೊಂಡಿದ್ದು, ಅವರ ಸ್ಥಾನಕ್ಕೆ ರಜನೀಶ್ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
Question 8 |
8. ರೈನರ್ ವೀಸ್, ಬೆರ್ರಿ ಸಿ ಬೆರಿಷ್ ಮತ್ತು ಕಿಪ್ ಎಸ್ ಥೋರ್ನ್ ಅವರಿಗೆ 2017 ಭೌತಶಾಸ್ತ್ರ ನೊಬೆಲ್ ಅನ್ನು ಯಾವ ಸಂಶೋಧನೆಗಾಗಿ ನೀಡಲಾಗಿದೆ?
ಗುರುತ್ವಾಕರ್ಷಕ ತರಂಗಗಳ ಸಂಶೋಧನೆ | |
ಅಣು ಗಡಿಯಾರ ಸಂಶೋಧನೆ | |
ಬೆಳಕಿನ ತರಂಗ ಸಂಶೋಧನೆ | |
ಕ್ರಯೋಜನಿಕ್ ವಿಭಾಗದಲ್ಲಿ ಸಂಶೋಧನೆ |
ಗುರುತ್ವಾಕರ್ಷಣ ಅಲೆಗಳ ಸಂಶೋಧನೆಗಾಗಿ ಅಮೆರಿಕದ ಖಭೌತ ವಿಜ್ಞಾನಿಗಳಾದ ಬ್ಯಾರಿ ಬ್ಯಾರಿಶ್, ಕಿಪ್ ಥೋರ್ನ್ ಮತ್ತು ರೈನರ್ ವೈಸ್ಸ್ ಅವರು ನೊಬೆಲ್ ಭೌತವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬ್ರಹ್ಮಾಂಡದಲ್ಲಿನ ಕಪ್ಪು ರಂಧ್ರಗಳ ಪರಸ್ಪರ ಡಿಕ್ಕಿ ಅಥವಾ ಅವುಗಳ ಸ್ಫೋಟದಿಂದ ಉಂಟಾಗುವ ಗುರುತ್ವಾಕರ್ಷಣ ಅಲೆಗಳ ಕುರಿತ ಸಂಶೋಧನೆಗೆ ಮೂವರಿಗೂ ಈ ಗೌರವ ಸಂದಿದೆ.
Question 9 |
9. ವಿಶ್ವ ಪ್ರಾಣಿ ದಿನ (World Animal Day) ಯಾವ ದಿನದಂದು ಆಚರಿಸಲಾಗುತ್ತದೆ?
ಅಕ್ಟೋಬರ್ 3 | |
ಅಕ್ಟೋಬರ್ 4 | |
ಅಕ್ಟೋಬರ್ 5 | |
ಅಕ್ಟೋಬರ್ 6 |
ವಿಶ್ವದಾದ್ಯಂತ ಪ್ರತಿ ವರ್ಷ ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ದಿನ (WAD)ವನ್ನು ಆಚರಿಸಲಾಗುತ್ತದೆ.
Question 10 |
10. ಈಶಾನ್ಯ ಭಾರತ ಪ್ರದೇಶದಲ್ಲಿ ನೀರಿನ ಸಂಪನ್ಮೂಲಗಳ ಸರಿಯಾದ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಯಾವ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ?
ಪ್ರಮೋದ್ ನಾಯಕ್ ಸಮಿತಿ | |
ರಾಜೀವ್ ಕುಮಾರ್ ಸಮಿತಿ | |
ಸುರೇಶ್ ಕುಮಾರ್ ಸಮಿತಿ | |
ಶ್ರೀನಿವಾಸ್ ರಾವ್ ಸಮಿತಿ |
ಈಶಾನ್ಯ ಪ್ರದೇಶದಲ್ಲಿ ನೀರಿನ ಸಂಪನ್ಮೂಲಗಳ ಸರಿಯಾದ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿದೆ. ಸಮಿತಿ ನೇತೃತ್ವದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ನೇತೃತ್ವ ವಹಿಸಲಿದ್ದಾರೆ. ಸಮಿತಿಯು ಜಲವಿದ್ಯುತ್, ಕೃಷಿ, ಜೈವಿಕ ವೈವಿಧ್ಯ ಸಂರಕ್ಷಣೆ, ಪ್ರವಾಹ ಹಾನಿ, ಒಳನಾಡಿನ ನೀರು ಸಾರಿಗೆ, ಅರಣ್ಯ, ಮೀನುಗಾರಿಕೆ ಮತ್ತು ಪರಿಸರ ಪ್ರವಾಸೋದ್ಯಮದ ರೂಪದಲ್ಲಿ ಸೂಕ್ತವಾದ ನೀರಿನ ನಿರ್ವಹಣೆಯ ಪ್ರಯೋಜನಗಳನ್ನು ಸರಳೀಕರಿಸುವಲ್ಲಿ ಅಧ್ಯಯನ ನಡೆಸಲಿದೆ ಉನ್ನತ ಮಟ್ಟದ ಸಮಿತಿಯು ಜೂನ್ 2018 ರೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.
[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್342017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Thnx sir….