ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,5,6,2017
Question 1 |
1. ಸಾರ್ಕ್ ರಾಷ್ಟ್ರಗಳ ಸ್ಪೀಕರ್ ಮತ್ತು ಸಂಸದರ 8ನೇ ಸಮ್ಮೇಳನದ ಆತಿಥ್ಯವಹಿಸಿರುವ ನಗರ ಯಾವುದು?
ಕೊಲೊಂಬೊ | |
ನವದೆಹಲಿ | |
ಕಠ್ಮಂಡು | |
ಡಾಕಾ |
ಸಾರ್ಕ್ ಸ್ಪೀಕರ್ ಮತ್ತು ಸಂಸದರ 8ನೇ ಸಮ್ಮೇಳನ ಶ್ರೀಲಂಕಾದ ಕೊಲಂಬೊದಲ್ಲಿ ಅಕ್ಟೋಬರ್ 4, 2017 ರಿಂದ ಪ್ರಾರಂಭವಾಗಿದೆ, ಶ್ರೀಲಂಕಾದ ಅಧ್ಯಕ್ಷ ಮೈಥ್ರಿಪಾಲ ಸಿರಿಸೇನಾ ಅವರು ಉದ್ಘಾಟಿಸಿರು. 3 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಭಾರತದ ನಿಯೋಗದ ನೇತೃತ್ವವಹಿಸಿದ್ದಾರೆ.
Question 2 |
2. ___________ ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ?
ಅಕ್ಟೋಬರ್ 3 | |
ಅಕ್ಟೋಬರ್ 4 | |
ಅಕ್ಟೋಬರ್ 5 | |
ಅಕ್ಟೋಬರ್ 6 |
ವಿಶ್ವ ಶಿಕ್ಷಕರ ದಿನವನ್ನು ಪ್ರತಿವರ್ಷ ಅಕ್ಟೋಬರ್ 5ರಂದು ಆಚರಿಸಲಾಗುತ್ತದೆ. 2017 ಥೀಮ್ Teaching in Freedom, Empowering Teachers”.
Question 3 |
3. ಈ ಕೆಳಗಿನ ಯಾರಿಗೆ 2017ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿ ಲಭಿಸಿದೆ?
ಜಾರ್ಜ್ ಸೌಂದರ್ಸ್ | |
ಕಝುವೊ ಇಶಿಗುರೊ | |
ಡೇವಿಡ್ ರೌಟ್ಸ್ | |
ಹೆಲೆನ್ ಕ್ಲಾರ್ಕ್ |
ಬ್ರಿಟಿಷ್ ಬರಹಗಾರ ಕಝುವೊ ಇಶಿಗುರೊ ರವರಿಗೆ ಸಾಹಿತ್ಯಕ್ಕಾಗಿ 2017 ನೊಬೆಲ್ ಪ್ರಶಸ್ತಿ ಲಭಿಸಿದೆ. ಇಶಿಗುರೊ ಎಂಟು ಪುಸ್ತಕಗಳನ್ನು ಬರೆದಿದ್ದಾರೆ. 40ಕ್ಕೂ ಹೆಚ್ಚು ಭಾಷೆಗಳಿಗೆ ಅವರ ಪುಸ್ತಕಗಳನ್ನು ಅನುವಾದಿಸಲಾಗಿದೆ. ಅವರ ಅತ್ಯಂತ ಪ್ರಸಿದ್ಧ ಕಾದಂಬರಿಗಳಾದ "ದಿ ರಿಮೇನ್ಸ್ ಆಫ್ ದ ಡೇ" ಮತ್ತು "ನೆವರ್ ಲೆಟ್ ಮಿ ಗೋ" ಚಲನಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. “1989 ರಲ್ಲಿ ದಿ ರಿಮೇನ್ಸ್ ಆಫ್ ದಿ ಡೇ” ಗಾಗಿ ಬೂಕರ್ ಪ್ರಶಸ್ತಿಯನ್ನು ಗೆದಿದ್ದಾರೆ.
Question 4 |
4. ದಿವ್ಯಾಂಗರಿಗಾಗಿ ಭಾರತದ ಮೊದಲ ಕೈಗಾರಿಕ ತರಭೇತಿ ಸಂಸ್ಥೆ ಯಾವ ರಾಜ್ಯದಲ್ಲಿ ಸ್ಥಾಪನೆ ಆಗಲಿದೆ?
ಉತ್ತರ ಪ್ರದೇಶ | |
ಜಾರ್ಖಂಡ್ | |
ಅಸ್ಸಾಂ | |
ಹರಿಯಾಣ |
ಅಸ್ಸಾಂನಲ್ಲಿ ದಿವ್ಯಾಂಗರಿಗಾಗಿ ಭಾರತದ ಮೊದಲ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಸ್ಥಾಪನೆಯಾಗಲಿದೆ. ಇತ್ತೀಚೆಗೆ, ಅಸ್ಸಾಂನ ಬೊರ್ಬೂರಾದಲ್ಲಿರುವ ದಿಬ್ರುಗಢ್ ನಲ್ಲಿ ಐಟಿಐ ಈ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸಲಾಯಿತು.
Question 5 |
5. ಇತ್ತೀಚೆಗೆ “ಉಖ್ನಾ ಖುರೆಲುಖ್” ರವರು ಯಾವ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?
ಕೀನ್ಯಾ | |
ಉಗಾಂಡ | |
ಮಂಗೋಲಿಯಾ | |
ನೈಜೀರಿಯಾ |
ಅಕ್ಟೋಬರ್ 4, 2017 ರಂದು ಉಖ್ನಾ ಖುರೆಲುಖ್ ರವರು ಮೊಂಗೋಲಿಯಾದ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಮೊಂಗೋಲಿಯದ ಪ್ರಧಾನ ಮಂತ್ರಿ ಸರ್ಕಾರದ ಮುಖ್ಯಸ್ಥರು ಮತ್ತು ಮೊಂಗೊಲಿಯನ್ ಕ್ಯಾಬಿನೆಟ್ ಮುಖ್ಯಸ್ಥರಾಗಿರುತ್ತಾರೆ. ಪ್ರಧಾನ ಮಂತ್ರಿಯನ್ನು ಮಂಗೋಲಿಯಾ ಅಧ್ಯಕ್ಷರು ನೇಮಕ ಮಾಡುತ್ತಾರೆ,
Question 6 |
6. ಚೊಚ್ಚಲ ಆಸಿಯಾನ್-ಇಂಡಿಯಾ ಸಂಗೀತ ಉತ್ಸವವನ್ನು ಯಾವ ನಗರದಲ್ಲಿ ಆಯೋಜಿಸುಲಾಗುತ್ತಿದೆ?
ಬೆಂಗಳೂರು | |
ಹೈದ್ರಾಬಾದ್ | |
ನವದೆಹಲಿ | |
ಪುಣೆ |
ಪ್ರಪ್ರಥಮ ಆಸಿಯಾನ್-ಇಂಡಿಯಾ ಸಂಗೀತ ಉತ್ಸವ ದೆಹಲಿಯ ಪುರನಾ ಖಿಲಾದಲ್ಲಿ ಅಕ್ಟೋಬರ್ 6, 2017 ರಂದು ಪ್ರಾರಂಭವಾಗಿದೆ. ಆಸಿಯಾನ್-ಇಂಡಿಯಾ ಸಂಬಂಧದ 25 ನೇ ವಾರ್ಷಿಕೋತ್ಸವವನ್ನು ಆಚರಿಸಲು 3 ದಿನದ ಉತ್ಸವವನ್ನು ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಯೋಜಿಸಿದೆ.
Question 7 |
7. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಇತ್ತೀಚೆಗೆ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಿದರು. ಈ ಕೆಳಗಿನ ಯಾವ ರಾಜ್ಯ ಮತ್ತು ರಾಜ್ಯಪಾಲರ ಜೋಡಿ ಸರಿಯಾಗಿಲ್ಲ?
ಮೇಘಾಲಯ – ಬನ್ವಾರಿಲಾಲ್ ಪ್ರಸಾದ್ | |
ತಮಿಳುನಾಡು – ಬಿ ಡಿ ಮಿಶ್ರಾ | |
ಅಸ್ಸಾಂ – ಜಗದೀಶ್ ಮುಖಿ | |
ಬಿಹಾರ್ – ಸತ್ಯಪಾಲ್ ಮಲಿಕ್ |
ತಮಿಳುನಾಡು ರಾಜ್ಯಪಾಲರಾಗಿ ಬನ್ವಾರಿಲಾಲ್ ಪುರೋಹಿತ್ ರವರನ್ನು ನೇಮಕ ಮಾಡಲಾಗಿದೆ. ಬ್ರಿಗೇಡಿಯರ್ ಬಿ ಡಿ ಮಿಶ್ರಾ ರವರು ಅರುಣಾಚಲ ಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
Question 8 |
8. ಬಿಪಿಎಲ್ ಕುಟುಂಬಗಳಿಗೆ 'ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ' ಎಂಬ ಸಮೂಹ ವಿವಾಹ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
ಹಿಮಾಚಲ ಪ್ರದೇಶ | |
ಉತ್ತರ ಪ್ರದೇಶ | |
ಗುಜರಾತ್ | |
ರಾಜಸ್ತಾನ |
ಉತ್ತರ ಪ್ರದೇಶ ಸರ್ಕಾರವು 'ಮುಖ್ಯಮಂತ್ರಿ ಸಾಮೂಹಿಕ ವಿವಾಹಾ ಯೋಜನೆ' ಎಂಬ ಸಮೂಹ ವಿವಾಹ ಯೋಜನೆಯನ್ನು ಪ್ರಾರಂಭಿಸಿದೆ. ಇದರಡಿ ಪ್ರತಿ ದಂಪತಿಗಳಿಗೆ ರಾಜ್ಯ ಸರ್ಕಾರ 35 ಸಾವಿರ ರೂ.ಗಳನ್ನು ಖರ್ಚು ಮಾಡಲಿದೆ. ಮೊಬೈಲ್ ಮತ್ತು ಗೃಹಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ಕೊಡಲಾಗುವುದು. ಯೋಜನೆಯ ಪ್ರಕಾರ ವಧುಗಳ ಹೆತ್ತವರು ಉತ್ತರ ಪ್ರದೇಶದ ನಿವಾಸಿಗಳಾಗಿರಬೇಕು ಮತ್ತು ಈ ಯೋಜನೆಯ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಬಿಪಿಎಲ್ ಕುಟುಂಬಗಳಿಗೆ ಸೇರಿರಬೇಕು. ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕನಿಷ್ಟ 10 ಜೋಡಿಗಳು ಇರಬೇಕು.
Question 9 |
9. ಇತ್ತೀಚೆಗೆ ನಿಧನರಾದ “ಕುಂದನ್ ಷಾ” ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?
ಪತ್ರಿಕೋದ್ಯಮ | |
ವಿಜ್ಞಾನ | |
ಸಿನಿಮಾ | |
ಸಾಹಿತ್ಯ |
ಖ್ಯಾತ ಸಿನಿಮಾ ನಿರ್ದೇಶಕ ಕುಂದನ್ ಷಾ ನಿಧನರಾದರು. ಷಾ ನಿರ್ದೇಶನದ "ಜಾನೆ ಬಿ ದೋ ಯಾರೊ" ಮತ್ತು ರೊಮ್ಯಾಂಟಿಕ್ ಪ್ಲೇ "ಕಭಿ ಹಾನ್ ಕಭಿ ನಾ" ಚಿತ್ರಗಳು ಅವರಿಗೆ ಅಪಾರ ಮನ್ನಣೆ ತಂದುಕೊಟ್ಟಿತ್ತು. 1983 ರ ವಿಡಂಬನಾತ್ಮಕ ಹಾಸ್ಯ ಚಿತ್ರ 'ಜಾನೆ ಭಿ ದೋ ಯಾರೊ' ನಿರ್ದೇಶನಕ್ಕೆ ಷಾ ಪ್ರಥಮ ಚಿತ್ರ ನಿರ್ದೇಶನಕ್ಕಾಗಿ ನೀಡುವ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದರು.
Question 10 |
10. ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಭಾಗದ ಜನರ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಯಾರ ನೇತೃತ್ವದಲ್ಲಿ ಅಧ್ಯಯನ ತಂಡವನ್ನು ರಚಿಸಿದೆ?
ಮಧುಕರ್ ಗುಪ್ತಾ | |
ನವೀನ್ ಚರಣ್ | |
ಆರ್ ಕೆ ಮಿಶ್ರಾ | |
ರೀನಾ ಮಿತ್ರ |
ಜಮ್ಮು ಮತ್ತು ಕಾಶ್ಮೀರದಲ್ಲಿನ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರಕಾರವು ಒಂದು ಅಧ್ಯಯನದ ತಂಡವನ್ನು ರಚಿಸಿದೆ. ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ರೀನಾ ಮಿತ್ರಾ ತಂಡದ ನೇತೃತ್ವವನ್ನು ವಹಿಸಿದ್ದಾರೆ ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ,
[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್562017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ