ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,7,8,2017
Question 1 |
1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
I) ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ ಗೆ 2017 ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ
II) ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ ಕೇಂದ್ರ ಕಚೇರಿ ಜೂರಿಚ್ ನಲ್ಲಿದೆ
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
2017 ನೊಬೆಲ್ ಶಾಂತಿ ಪ್ರಶಸ್ತಿ ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ ಗೆ (ICAN) ಲಭಿಸಿದೆ. 2007ರಲ್ಲಿ ವಿಯೆನ್ನಾದಲ್ಲಿ ಅಧಿಕೃತವಾಗಿ ತನ್ನ ಕಾರ್ಯಚಟುವಟಿಕೆಯನ್ನು ಐಕ್ಯಾನ್ ಆರಂಭಿಸಿತು. ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ ಕೇಂದ್ರ ಕಚೇರಿ ಜಿನೇವಾದಲ್ಲಿದೆ.
Question 2 |
2. ಮಹಾತ್ಮ ಗಾಂಧಿಯವರ ಹತ್ಯೆಯ ಮರು ತನಿಖೆಯನ್ನು ಕೋರಿ ಸಲ್ಲಿಸಿದ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಯಾರನ್ನು ಅಮಿಕಸ್ ಕ್ಯುರಿ (amicus curiae) ಯೆಂದು ನೇಮಕ ಮಾಡಿದೆ?
ಅಮ್ರೆಂದರ್ ಶರಣ್ | |
ಸುರೇಂದ್ರ ಸಿಂಗ್ | |
ಕೃಷ್ಣ ದೀಕ್ಷಿತ್ | |
ಅಮಿತಾಬ್ ಗುಪ್ತ |
ಮಹಾತ್ಮ ಗಾಂಧಿಯವರ ಹತ್ಯೆಯನ್ನು ಮರು ತನಿಖೆ ನಡೆಸುವಂತೆ ಸಲ್ಲಿಸಿಲಾದ ಅರ್ಜಿಯ ಮೇರೆಗೆ ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮ್ರೆಂದರ್ ಶರಣ್ ಅವರನ್ನು ಅಮಿಕಸ್ ಕ್ಯುರಿಯಾ ಎಂದು ಸುಪ್ರೀಂ ಕೋರ್ಟ್ ನೇಮಿಸಿದೆ. ಮುಂಬೈ ಮೂಲದ ಅಭಿನವ ಭಾರತ ಟ್ರಸ್ಟಿನ ಸಂಶೋಧಕರಾದ ಪಂಕಜ್ ಪಡ್ನಾವಿಸ್ ರವರು ಮಹಾತ್ಮ ಗಾಂಧಿ ರವರ ಹತ್ಯೆಯನ್ನು ಮರು ತನಿಖೆ ಮಾಡುವಂತೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.
Question 3 |
3. 2017 ಅರ್ಥಶಾಸ್ತ್ರ ವಿಜ್ಞಾನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರೊ.ರಿಚರ್ಡ್ ಎಚ್ ಥೇಲರ್ ಯಾವ ದೇಶದವರು?
ಜಪಾನ್ | |
ಅಮೆರಿಕ | |
ಬ್ರಿಟನ್ | |
ಫ್ರಾನ್ಸ್ |
2017ನೇ ಸಾಲಿನ ಅರ್ಥಶಾಸ್ತ್ರ ವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ಅಮೆರಿಕದ ಪ್ರೊ.ರಿಚರ್ಡ್ ಎಚ್ ಥೇಲರ್ ಅವರಿಗೆ ನೀಡಲಾಗಿದೆ. ‘ಬಿಹೇವಿಯರಲ್ ಎಕನಾಮಿಕ್ಸ್’ (ತೆಗೆದುಕೊಳ್ಳುವ ನಿರ್ಣಯ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ) ಸಂಬಂಧಿಸಿದ ಕೊಡುಗೆಯನ್ನು ಪರಿಗಣಿಸಿ ರಿಚರ್ಡ್ ಎಚ್ ಥೇಲರ್ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Question 4 |
4. ಜರ್ಮನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕ್ರಾಸ್ ಆಫ್ ದ ಆರ್ಡರ್ ಆಫ್ ಮೆರಿಟ್' ಅನ್ನು ಯಾವ ಭಾರತೀಯ ವ್ಯಕ್ತಿಗೆ ನೀಡಲಾಗಿದೆ?
ಮದನ್ ಚಂದ್ರ | |
ರಾಜೇಶ್ ನಾಥ್ | |
ಲಕ್ಷಿ ಶ್ರೀನಿವಾಸನ್ | |
ಜಗದೀಶ್ ರಾವ್ |
ವಿಡಿಎಂಎ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ನಾಥ್ ರವರಿಗೆ 'ಕ್ರಾಸ್ ಆಫ್ ದಿ ಆರ್ಡರ್ ಆಫ್ ಮೆರಿಟ್' ನೀಡಲಾಗಿದೆ. ಜರ್ಮನ್ ನಲ್ಲಿ ಸೇವೆಗಳಿಗಾಗಿ ವ್ಯಕ್ತಿಗಳಿಗೆ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವ ಇದಾಗಿದೆ. ಬುಂಡೆಸ್ವೆರ್ಡಿಯನ್ಸ್ಕ್ರೆಜ್ ಅಥವಾ ಫೆಡರಲ್ ಕ್ರಾಸ್ ಆಫ್ ಮೆರಿಟ್ ಎಂದೂ ಕರೆಯಲ್ಪಡುವ ಈ ಪ್ರಶಸ್ತಿಯನ್ನು 1951 ರಲ್ಲಿ ಸ್ಥಾಪಿಸಲಾಯಿತು.
Question 5 |
5. ಈ ಕೆಳಗಿನ ಯಾರು 2017 ಚೀನಾ ಓಪನ್ ಟೆನ್ನಿಸ್ ಟೂರ್ನಮೆಂಟಿನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು?
ರಾಫೆಲ್ ನಡಾಲ್ | |
ರೋಜರ್ ಫೆಡರರ್ | |
ಆಂಡ್ರಿ ಮುರ್ರೆ | |
ನೊವಾಕ್ ಜೊಕೊವಿಕ್ |
ಸ್ಪ್ಯಾನಿಷ್ ವೃತ್ತಿಪರ ಟೆನಿಸ್ ಆಟಗಾರ ರಾಫೆಲ್ ನಡಾಲ್ ರವರು 2017 ಚೀನಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ನಿಕ್ ಕಿರ್ಗಿಯೋಸ್ ರವರನ್ನು 6-2, 6-1 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
Question 6 |
6. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಮಾತಾ ಅಮೃತಾನಂದಮಯಿ ಮಠ ಯೋಜನೆ 'ಜೀವಾಮೃತಂ' ಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಿದರು?
ಕರ್ನಾಟಕ | |
ಕೇರಳ | |
ಮಹಾರಾಷ್ಟ್ರ | |
ಉತ್ತರ ಪ್ರದೇಶ |
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮಾತಾ ಅಮೃತಾನಂದಮಯಿ ಮಠ ಯೋಜನೆ 'ಜೀವಾಮೃತಂ' ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಚಾಲನೆ ನೀಡಿದರು. 5000 ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ನೀಡಲು ಶುದ್ದೀಕರಿಸುವ ವ್ಯವಸ್ಥೆ ಇದಾಗಿದೆ.
Question 7 |
7. ದೂರದ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿಯನ್ನು ಒದಗಿಸಲು ಯಾವ ರಾಜ್ಯ ಸರ್ಕಾರವು 'ಸೌರ ಬ್ರೀಫ್ಕೇಸ್' ಅನ್ನು ಪ್ರಾರಂಭಿಸಿದೆ?
ರಾಜಸ್ತಾನ | |
ಮಧ್ಯ ಪ್ರದೇಶ | |
ಉತ್ತರಖಂಡ | |
ಜಾರ್ಖಂಡ್ |
ಉತ್ತರಖಂಡ ಸರ್ಕಾರ ಮತ್ತು ಚಾರಿಟಬಲ್ ಫಂಡಿಂಗ್ ಏಜೆನ್ಸಿ 'ಸ್ವಾನ್ ಕಲ್ಚರಲ್ ಸೆಂಟರ್ ಮತ್ತು ಫೌಂಡೇಶನ್' ರಾಜ್ಯದ ದೂರ ಪ್ರದೇಶಗಳಿಗೆ ವಿದ್ಯುತ್ ಒದಗಿಸಲು ಕೇದಾರನಾಥ ಧಾಮದಲ್ಲಿ 'ಸೌರ ಬ್ರೀಫ್ಕೇಸ್' ಅನ್ನು ಬಿಡುಗಡೆ ಮಾಡಿವೆ.
Question 8 |
8. ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸೇರ್ಪಡೆಗೊಳಿಸಿದ ಭಾರತದ ಮೊದಲ ರಾಜ್ಯ ಯಾವುದು?
ಕೇರಳ | |
ಪಶ್ಚಿಮ ಬಂಗಾಳ | |
ರಾಜಸ್ತಾನ | |
ಗುಜರಾತ್ |
ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ರಾಜಸ್ಥಾನವಾಗಿದೆ. IGNOU ಸಹಭಾಗಿತ್ವದಲ್ಲಿ, ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಕಾಲೇಜುಗಳಿಗೆ ಉದ್ಯಮಶೀಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ 16 ಕೋರ್ಸುಗಳನ್ನು ಸಿದ್ಧಪಡಿಸಿದೆ. ಯೋಜನೆಯಡಿ, 12 ಪ್ರಮಾಣಪತ್ರಗಳು ಮತ್ತು 4 ಡಿಪ್ಲೊಮಾ ಕೋರ್ಸುಗಳನ್ನು ನಡೆಸಲಾಗುವುದು ಮತ್ತು ಪ್ರತಿ ಕಾಲೇಜು ಐದು ಕೋರ್ಸುಗಳನ್ನು ಆಯ್ಕೆ ಮಾಡಬೇಕು.
Question 9 |
9. ಯಾವ ಐಐಟಿ ಸಂಸ್ಥೆ ಡಿಜಿಟಲ್ ಅಕಾಡೆಮಿಗಾಗಿ ಸ್ಯಾಮ್ ಸಂಗ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ಐಐಟಿ- ದೆಹಲಿ | |
ಐಐಟಿ - ಖರಗ್ಪುರ | |
ಐಐಟಿ –ಬಾಂಬೆ | |
ಐಐಟಿ- ಮದ್ರಾಸ್ |
ಐಟಿ-ಖರಗ್ಪುರ್ ಸಂಸ್ಥೆಯು ಕ್ಯಾಂಪಸ್ನಲ್ಲಿನ ಡಿಜಿಟಲ್ ಅಕಾಡೆಮಿಯ ಸ್ಥಾಪನೆಗೆ ಸ್ಯಾಮ್ಸಂಗ್ ಇಂಡಿಯಾ ಜೊತೆಗೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಮಾಡಿದೆ.
Question 10 |
10. ಸರಿಸ್ಕ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
ರಾಜಸ್ತಾನ | |
ಅಸ್ಸಾಂ | |
ಕೇರಳ | |
ಮಣಿಪುರ |
[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್782017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ಸೂಪರ ಪ್ರಶ್ನೆಪತ್ರಿಕೆ