ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,9,10,2017
Question 1 |
1. 2017 ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಧ್ಯೇಯವಾಕ್ಯ ________?
ಆರೋಗ್ಯಕ್ಕಾಗಿ ಯೋಗ | |
ಕ್ಷೇಮಕ್ಕಾಗಿ ಯೋಗ | |
ಸಂತೋಷಕ್ಕಾಗಿ ಯೋಗ | |
ದೇಹಕ್ಕಾಗಿ ಯೋಗ |
ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ರವರು ನವದೆಹಲಿಯಲ್ಲಿ 3ನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಅಕ್ಟೋಬರ್ 10, 2017 ರಂದು ಚಾಲನೆ ನೀಡಿದರು. ಈ ವರ್ಷದ ಸಮ್ಮೇಳನದ ಥೀಮ್ "ಯೋಗಕ್ಷೇಮಕ್ಕಾಗಿ ಯೋಗ". ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲಾಗುತ್ತದೆ. 44 ದೇಶಗಳ 500 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ,
Question 2 |
2. ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅಭಿವೃದ್ಧಿಪಡಿಸಿದ್ದಕ್ಕಾಗಿ ಈ ಕೆಳಗಿನವರುಗಳಲ್ಲಿ ಮೂವರು ವಿಜ್ಞಾನಿಗಳಿಗೆ ಈ ಬಾರಿಯ ರಸಾಯನ ವಿಜ್ಞಾನ ನೊಬೆಲ್ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆಯದವರನ್ನು ಗುರುತಿಸಿ?
ಜಾಕಸ್ ಡಬೊಚೆಟ್ | |
ಜೋಯಾಚಿಮ್ ಫ್ರ್ಯಾಂಕ್ | |
ರಿಚರ್ಡ್ ಹೆಂಡರ್ಸನ್ | |
ಹೆನ್ರಿ ಸ್ಟೀಫನ್ |
ಸ್ವಿಟ್ಜರ್ಲೆಂಡ್ನ ಜಾಕಸ್ ಡಬೊಚೆಟ್, ಅಮೆರಿಕದ ಜೋಯಾಚಿಮ್ ಫ್ರ್ಯಾಂಕ್ ಮತ್ತು ಬ್ರಿಟನ್ನ ರಿಚರ್ಡ್ ಹೆಂಡರ್ಸನ್ ಅವರು ಈ ಬಾರಿಯ ರಸಾಯನ ವಿಜ್ಞಾನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅಭಿವೃದ್ಧಿಪಡಿಸಿದ್ದಕ್ಕಾಗಿ ಈ ಮೂವರು ವಿಜ್ಞಾನಿಗಳನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ‘ಈ ಮೂವರು ವಿಜ್ಞಾನಿಗಳು ಕ್ರೈಯೋ-ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅಥವಾ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ.
Question 3 |
3. ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಅಕ್ಟೋಬರ್ 8 | |
ಅಕ್ಟೋಬರ್ 9 | |
ಅಕ್ಟೋಬರ್ 10 | |
ಅಕ್ಟೋಬರ್ 11 |
ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಮಾನಸಿಕ ಆರೋಗ್ಯಕ್ಕೆ ಬೆಂಬಲವಾಗಿ ಪ್ರಯತ್ನಗಳನ್ನು ಒಟ್ಟುಗೂಡಿಸಲು ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ (WMHD) ಅನ್ನು ಆಚರಿಸಲಾಗುತ್ತದೆ. 2017 ಥೀಮ್ "ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ" ಆಗಿದೆ.
Question 4 |
4. ಕೆಳಗಿನವುಗಳಲ್ಲಿ ಯಾವುದು ಅಂತರಾಷ್ಟ್ರೀಯ ಜಾಹೀರಾತು ಸಂಘ (ಐಎಎ) ಪ್ರಕಾರ ಆಹಾರ ವಲಯದಲ್ಲಿ ಭಾರತದ ಅತ್ಯುತ್ತಮ FMCG ಕಂಪನಿ ಎಂದು ಹೆಸರಿಸಲ್ಪಟ್ಟಿದೆ?
ಎಂಟಿಆರ್ | |
ಅಮೂಲ್ | |
ಐಟಿಸಿ | |
ಪಾರ್ಲೆ |
ಅಮುಲ್ ಬ್ರ್ಯಾಂಡ್ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ ಲಿಮಿಟೆಡ್ (ಜಿಸಿಎಂಎಂಎಫ್), ಆಹಾರ ಉದ್ಯಮದಲ್ಲಿ ಭಾರತದ ಅತ್ಯುತ್ತಮ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಂಸಿಜಿ) ಕಂಪನಿ ಎಂದು ಅಂತರರಾಷ್ಟ್ರೀಯ ಜಾಹೀರಾತು ಸಂಘ (ಐಎಎ) ಗುರುತಿಸಿದೆ. ಅಕ್ಟೋಬರ್ 9 ರಂದು ಮುಂಬೈನಲ್ಲಿ ಅಮೂಲ್ ಗೆ 5ನೇ ಐಎಎ ಲೀಡರ್ಶಿಪ್ ಪ್ರಶಸ್ತಿಯನ್ನು ನೀಡಲಾಯಿತು.
Question 5 |
5. ಭಾರತ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (Film and Television Institute of India) ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಅನುಪಮ್ ಖೇರ್ | |
ಮಣಿರತ್ನಂ | |
ಕರಣ್ ಜೋಹರ್ | |
ರಿಷಿ ಕಪೂರ್ |
ಭಾರತ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (Film and Television Institute of India) ನೂತನ ಅಧ್ಯಕ್ಷರಾಗಿ ಬಾಲಿವುಡ್ ನಟ ಅನುಪಮ್ ಖೇರ್ ಆಯ್ಕೆಯಾಗಿದ್ದಾರೆ. 65 ವರ್ಷದ ಬಾಲಿವುಡ್ ನಟ ಅನುಪಮ್ ಖೇರ್, ಗಜೇಂದ್ರ ಚೌಹಣ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಗಜೇಂದ್ರ ಚೌಹಣ್ ಅವರು ಜೂನ್ 9, 2015 ರಿಂದ ಎಫ್.ಟಿ.ಟಿ.ಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
Question 6 |
6. ವಿಶ್ವಬ್ಯಾಂಕಿನ ಸೌತ್ ಏಷ್ಯನ್ ಎಕಾನಮಿಕ್ ಫೋಕಸ್ ವರದಿಯ ಪ್ರಕಾರ 2018ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಎಷ್ಟಿರಲಿದೆ?
6.9% | |
7.0% | |
7.1% | |
7.2% |
Question 7 |
7. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವಿಶ್ವ ಆರ್ಥಿಕ ಹೊರನೋಟ ಪ್ರಕಾರ 2018ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಎಷ್ಟು?
5.7% | |
6.1% | |
6.7% | |
7,0% |
Question 8 |
8. ಸಾರ್ವಜನಿಕ ಆಡಳಿತ, ಶೈಕ್ಷಣಿಕ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಶ್ರೇಷ್ಠತೆಗಾಗಿ 2017 ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ರಮೇಶ್ ಅರವಿಂದ್ | |
ಕೈಲಾಸ್ ಸತ್ಯಾರ್ಥಿ | |
ಬಿಂದೇಶ್ವರ್ ಪಾಠಕ್ | |
ಕುಶ್ವಂತ್ ಸಿಂಗ್ |
ರಾಷ್ಟ್ರಪತಿ, ಶ್ರೀ ರಾಮ್ ನಾಥ್ ಕೋವಿಂದ್ ಅವರು ಸಾರ್ವಜನಿಕ ಆಡಳಿತ, ಶೈಕ್ಷಣಿಕ ಮತ್ತು ನಿರ್ವಹಣೆಗಾಗಿ ಶ್ರೇಷ್ಠತೆಗಾಗಿ 2017 ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು ಡಾ. ಬಿಂದೇಶ್ವರ್ ಪಾಠಕ್ ರವರಿಗೆ ನೀಡಿದರು. ಬಿಂದೇಶ್ವರ ಪಾಠಕ್ ಸುಲಭ್ ಅಂತರರಾಷ್ಟ್ರೀಯ ಸಂಸ್ಥಾಪಕರಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಕಡಿಮೆ ವೆಚ್ಚದ ಮತ್ತು ಸೂಕ್ತವಾದ ಶೌಚಾಲಯ ತಂತ್ರಜ್ಞಾನ ಸುಲಭ ಶೌಚಾಲಯ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ್ದಾರೆ.
Question 9 |
9. ಹಿರಿಯ ನಾಗರಿಕ ಆರೋಗ್ಯ ವಿಮಾ ಯೋಜನೆ (SCHIS) ಅನ್ನು ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದೆ?
ಹಿಮಾಚಲ ಪ್ರದೇಶ | |
ಜಾರ್ಖಂಡ್ | |
ಪಂಜಾಬ್ | |
ಕೇರಳ |
Question 10 |
10. ಜಂಟಿ ಮಿಲಿಟರಿ ತರಬೇತಿ ಅಭ್ಯಾಸ "ಮಿತ್ರ ಶಕ್ತಿ 2017" ಭಾರತ ಮತ್ತು ಯಾವ ದೇಶದ ನಡುವೆ ಆರಂಭವಾಗಿದೆ?
ರಷ್ಯಾ | |
ಆಸ್ಟ್ರೇಲಿಯಾ | |
ಶ್ರೀಲಂಕಾ | |
ಮಾರಿಷಸ್ |
5 ನೇ ಭಾರತ-ಶ್ರೀಲಂಕಾ ಜಂಟಿ ಮಿಲಿಟರಿ ತರಬೇತಿ "ಮಿತ್ರಶಕ್ತಿ 2017" ಮಹಾರಾಷ್ಟ್ರದ ಔಂಧ್ ಮಿಲಿಟರಿ ನಿಲ್ದಾಣದಲ್ಲಿ ಪ್ರಾರಂಭವಾಗಿದೆ. ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗಳು (ಸಿಟಿಒ) ತರಭೇತಿಯ ಪ್ರಮುಖ ಭಾಗವಾಗಿದೆ.
[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್9102017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Good questions
Super
Comment
suresh k valaballari
Comment
Excellent, very useful questions