ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 37 - ವಿಜ್ಞಾನ

Question 1

1. ಇತರ ಆಯ್ಕೆಗಳಿಗೆ ಹೋಲಿಸಿದರೆ ಈ ಕೆಳಗಿನ ಯಾವುದು ಶಾಖದ ಉತ್ತಮ ವಾಹಕವಲ್ಲ?

A
ಬೆಳ್ಳಿ
B
ತಾಮ್ರ
C
ಸೀಸ
D
ಪಾದರಸ
Question 1 Explanation: 
ಸೀಸ

ಬೆಳ್ಳಿ ಶಾಖದ ಉತ್ತಮ ವಾಹಕವಾಗಿದೆ. ಲೋಹಗಳಲ್ಲಿ ಸೀಸವು ಶಾಖದ ಉತ್ತಮ ವಾಹಕವಲ್ಲ. ಪಾದರಸವು ಕಳಪೆ ವಾಹಕವಾಗಿದ್ದರೆ ತಾಮ್ರ ಮತ್ತು ಅಲ್ಯೂಮಿನಿಯಂ ಉತ್ತಮ ವಾಹಕವಾಗಿವೆ.

Question 2

2. ಕೆಳಗಿನವುಗಳಲ್ಲಿ ಯಾವುದು ಬಿಟುಮೆನ್ ಬಗ್ಗೆ ಸರಿಯಾದ ಹೇಳಿಕೆ ಅಲ್ಲ?

A
ಇದು ಹೆಚ್ಚು ಮಂದಗೊಳಿಸಿದ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಸಂಯುಕ್ತಗಳ ಮಿಶ್ರಣವಾಗಿದೆ
B
ಇದು ಕಾರ್ಬನ್ ಡೈಸಲ್ಫೈಡ್ ನಲ್ಲಿ ಕರಗುತ್ತದೆ
C
ಬಿಟ್ಯುಮೆನ್ ರಸಾಯಣವನ್ನು ನಿರ್ಧರಿಸಲು SARA ವಿಶ್ಲೇಷಣೆ ಬಳಸಲಾಗುತ್ತದೆ
D
ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ
Question 2 Explanation: 
ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ

ಬಿಟುಮೆನ್ ಹೆಚ್ಚು ಸ್ನಿಗ್ಧತೆಯ, ಕಪ್ಪು, ಜಿಗುಟಾದ, ಕಾರ್ಬನ್ ಡೈಸಲ್ಫೈಡ್ ನಲ್ಲಿ ಕರಗುವ ಮತ್ತು ಹೆಚ್ಚು ಸಾಂದ್ರೀಕರಿಸಿದ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೊಕಾರ್ಬನ್ ನಿಂದ ಕೂಡಿದ ದ್ರಾವಣಗಳ ಒಂದು ಮಿಶ್ರಣವಾಗಿದೆ.

Question 3

3. ಈ ಕೆಳಗಿನ ಯಾವ ಪ್ರದೇಶವನ್ನು “ಡೋಲ್ ಡ್ರಮ್ ಬೆಲ್ಟ್” ಎಂದು ಕರೆಯಬಹುದು?

A
ಧ್ರವ ಪ್ರದೇಶ
B
ಉಷ್ಣವಲಯದ ಪ್ರದೇಶ
C
ಸಮಶೀತೋಷ್ಣ ಪ್ರದೇಶ
D
ಸಮಭಾಜಕ ಪ್ರದೇಶ
Question 3 Explanation: 
ಸಮಭಾಜಕ ಪ್ರದೇಶ

ಡೋಲ್ ಡ್ರಮ್ ಎಂದರೆ ಭೂಮಧ್ಯದ ಸುತ್ತಲಿನ ಸ್ವಲ್ಪ ಉತ್ತರ ಸಮಭಾಜಕದ ಎರಡು ಮಾರುತಗಳ ನಡುವಿನ ಪ್ರದೇಶ. ಈ ಪ್ರದೇಶದಲ್ಲಿ ಭೂಮಿಗೆ ಬರುವ ಹೆಚ್ಚಿನ ಪ್ರಮಾಣದ ಸೌರ ವಿಕಿರಣವು ಭೂಮಿ ಮತ್ತು ಸಮುದ್ರದಲ್ಲಿ ತೀವ್ರವಾದ ತಾಪವನ್ನು ಉಂಟುಮಾಡುತ್ತದೆ. ಈ ತಾಪವು ಬಿಸಿಯನ್ನು, ತೇವಭರಿತ ಗಾಳಿಯನ್ನು, ಕಡಿಮೆ ಗಾಳಿಯ ಒತ್ತಡ; ಮೋಡಗಳು, ಅಧಿಕ ಆರ್ದ್ರತೆ; ಬೆಳಕು, ಗಾಳಿಯ ಬದಲಾವಣೆ ಮತ್ತು ಗುಡುಗುಗಳಂತಹ ತೀವ್ರವಾದ ಹವಾಮಾನದ ಹಲವಾರು ವಿಧಗಳನ್ನು ಹೆಚ್ಚಿಸುತ್ತದೆ. ಚಂಡಮಾರುತಗಳು ಈ ಪ್ರದೇಶದಲ್ಲಿ ಹುಟ್ಟಿಕೊಳ್ಳುತ್ತವೆ.

Question 4

4. ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?

A

ಓಡಿಶಾದಲ್ಲಿ ಭತ್ತ ಒಂದು ವಾಣಿಜ್ಯ ಬೆಳೆಯಾಗಿದೆ

B

ಕಾಫಿ ಕರ್ನಾಟಕದ ಒಂದು ಪ್ರಮುಖ ತೋಟ ಬೆಳೆಯಾಗಿದೆ

C

ಕಡಲೆಕಾಯಿ ಗುಜರಾತಿನ ಪ್ರಮುಖ ಮುಂಗಾರು ಬೆಳೆಯಾಗಿದೆ

D

ಮೇಘಾಲಯ ಭಾರತದ ಪ್ರಮುಖ ಪೈನ್ಆಪಲ್ ಉತ್ಪಾದಿಸುವ ರಾಜ್ಯವಾಗಿದೆ

Question 4 Explanation: 
ಓಡಿಶಾದಲ್ಲಿ ಭತ್ತ ಒಂದು ವಾಣಿಜ್ಯ ಬೆಳೆಯಾಗಿದೆ ಭತ್ತ ಹರಿಯಾಣ ಮತ್ತು ಪಂಜಾಬಿನ ವಾಣಿಜ್ಯ ಬೆಳೆಯಾಗಿದೆ, ಆದರೆ ಒಡಿಶಾದಲ್ಲಿ ಭತ್ತ ಜೀವನಾಧಾರಕ್ಕೆ ಅಷ್ಟೇ ಸೀಮಿತವಾಗಿದೆ. ಕಡಲೆಕಾಯಿ ಗುಜರಾತಿನ ಪ್ರಮುಖ ಮುಂಗಾರು ಬೆಳೆಯಾಗಿದೆ ಮತ್ತು ದೇಶದಲ್ಲಿ ಉತ್ಪಾದಿಸುವ ಸುಮಾರು ಅರ್ಧದಷ್ಟು ಎಣ್ಣೆ ಬೀಜಗಳನ್ನು ಇದು ಸಮನಾಗಿದೆ. ಮೇಘಾಲಯವು ಭಾರತದಲ್ಲಿ ಪೈನ್ಆಪಲ್ (ಅನಾನಸ್ ಕೊಮೊಸಸ್ (ಎಲ್) ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.

Question 5

5. ಕೆಳಗಿನವುಗಳಲ್ಲಿ ಯಾವುದು ಸಮಭಾಜಕ ಬೆಳೆಗೆ ಉದಾಹರಣೆ ಆಗಿಲ್ಲ?

A
ತೆಂಗಿನಕಾಯಿ
B
ರಬ್ಬರ್
C
ಆಯಿಲ್ ಪಾಮ್
D
ಬಾಳೆ
Question 5 Explanation: 
ಬಾಳೆ

ಬಾಳೆಹಣ್ಣು ಸಮಭಾಜಕ ಬೆಳೆಯಾಗಿಲ್ಲ. ಸಮಭಾಜಕ ಬೆಳೆಗಳಿಗೆ ಪ್ರಮುಖ ಉದಾಹರಣೆಗಳೆಂದರೆ ರಬ್ಬರ್, ಕೊಕೊ, ಮೆಣಸು, ತೆಂಗಿನಕಾಯಿ, ಆಯಿಲ್ ಪಾಮ್, ವೀಳ್ಯ ಇತ್ಯಾದಿ ಸೇರಿವೆ.

Question 6

6. ಈ ಕೆಳಗಿನವುಗಳಲ್ಲಿ ಭಾರತದ ಸ್ಥಳಾಕೃತಿ ನಕ್ಷೆಗಳನ್ನು (Topographical Maps) ಯಾವ ಸಂಸ್ಥೆ ರಚಿಸುತ್ತದೆ?

A
ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ
B
ಸರ್ವೇ ಆಫ್ ಇಂಡಿಯಾ
C
ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ
D
ಮೇಲಿನ ಯಾವುದು ಅಲ್ಲ
Question 6 Explanation: 
ಸರ್ವೇ ಆಫ್ ಇಂಡಿಯಾ
Question 7

7. ಈ ಕೆಳಗಿನ ಯಾವ ವಿಜ್ಞಾನದ ವಿಭಾಗದಿಂದ "ಸಮೂಹ ಬುದ್ಧಿಮತ್ತೆಯ (swarm intelligence)” ಆವಿಷ್ಕಾರವು ಸಾಧ್ಯವಾಗಿದೆ?

A
ಫಿನಾಲಜಿ
B
ಫ್ರೆನಾಲಜಿ
C
ಬಯೋನೊಮಿಕ್ಸ್
D
ಬಯೋನಿಕ್ಸ್
Question 7 Explanation: 
ಬಯೋನಿಕ್ಸ್

ಆವರ್ತಕ ಸಸ್ಯ ಮತ್ತು ಪ್ರಾಣಿ ಜೀವನ ಚಕ್ರದ ಘಟನೆಗಳ ಅಧ್ಯಯನ ಮತ್ತು ಹವಾಮಾನ, ಋತುಮಾನದ ವ್ಯತ್ಯಾಸಗಳು ಮತ್ತು ಆವಾಸಸ್ಥಾನದ ಅಂಶಗಳು ಹೇಗೆ ಜೀವನಚಕ್ರದ ಮೇಲೆ ಪ್ರಭಾವಿತವಾಗಿರುತ್ತದೆ ಎಂದು ತಿಳಿಸುವ ಶಾಸ್ತ್ರವೆ ಫಿನಾಲಜಿ. ಫ್ರೆನಾಲಜಿ ಪ್ರಾಥಮಿಕವಾಗಿ ಮಾನವ ತಲೆಬುರುಡೆ ಮಾಪನಗಳ ಮೇಲೆ ಕೇಂದ್ರೀಕೃತವಾಗಿದೆ, ಬಯೋನಿಕ್ಸ್ ಎಂಬುದು ಜೀವವಿಜ್ಞಾನದ ಶಾಖೆಯಾಗಿದ್ದು, ಜೀವಿಗಳು ಮತ್ತು ಅವುಗಳ ಪರಿಸರದ ನಡುವಿನ ಸಂಬಂಧಗಳಿಗೆ ಸಂಬಂಧಿಸಿರುತ್ತದೆ.

Question 8

8. ಈ ಕೆಳಗಿನ ಯಾವುದು ಪೀಡ್ಮಾಂಟ್ ಪ್ರಸ್ಥಭೂಮಿ (Piedmont plateau)ಗೆ ಉದಾಹರಣೆ ಆಗಿದೆ?

A
ಟಿಬೆಟಿಯನ್ ಪ್ರಸ್ಥಭೂಮಿ
B
ಬೋಲಿವಿಯನ್ ಪ್ರಸ್ಥಭೂಮಿ
C
ಮಾಲ್ವಾ ಪ್ರಸ್ಥಭೂಮಿ
D
ಲಡಾಖ್ ಪ್ರಸ್ಥಭೂಮಿ
Question 8 Explanation: 
ಮಾಲ್ವಾ ಪ್ರಸ್ಥಭೂಮಿ

ಪಿಡ್ಮಾಂಟ್ ಪ್ರಸ್ಥಭೂಮಿಯು ಒಂದು ಬದಿಯಲ್ಲಿ ಪರ್ವತವನ್ನು ಹೊಂದಿರುವ ಪ್ರಸ್ಥಭೂಮಿ. ಮಾಲ್ವಾ ಪ್ರಸ್ಥಭೂಮಿಯು ಪೀಡ್ಮಾಂಟ್ ಪ್ರಸ್ಥಭೂಮಿಯಾಗಿದೆ. ಅಂತಹ ಪ್ರಸ್ಥಭೂಮಿಗಳ ಇತರ ಉದಾಹರಣೆಗಳು ಅರ್ಜೆಂಟೈನಾದ ಪ್ಯಾಟಗೋನಿಯನ್ ಪ್ರಸ್ಥಭೂಮಿ, ಅಮೆರಿಕದಲ್ಲಿ ಪೀಡ್ಮಾಂಟ್ ಪ್ರಸ್ಥಭೂಮಿ ಇತ್ಯಾದಿ.

Question 9

9. ಪ್ರಾಚೀನ ಬಂದರು-ಸ್ಥಳ “ಗೋದಾವಯ” ಯಾವ ದೇಶದಲ್ಲಿದೆ?

A
ಮಲೇಷಿಯಾ
B
ಇಂಡೋನೇಷ್ಯಾ
C
ಮ್ಯಾನ್ಮಾರ್
D
ಶ್ರೀಲಂಕಾ
Question 9 Explanation: 
ಶ್ರೀಲಂಕಾ

ಗೋದಾವಯವು ಶ್ರೀಲಂಕಾದ ದಕ್ಷಿಣ ತೀರದಲ್ಲಿರುವ ಪುರಾತನ ಬಂದರು ವ್ಯಾಪಾರ ತಾಣವಾಗಿದೆ.

Question 10

10. ಭಾರತದಲ್ಲಿ ಪಾಶ್ಚಾತ್ಯ ಅಡಚಣೆಗಳು ಸಾಮಾನ್ಯವಾಗಿ ಕೆಳಗಿನ ಯಾವ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ?

A
ರಬಿ ಬೆಳೆ
B
ಖರಿಫ್ ಬೆಳೆ
C
ಝೈದ್ ಬೆಳೆ
D
ಮೇಲಿನ ಯಾವುದು ಅಲ್ಲ
Question 10 Explanation: 
ರಬಿ ಬೆಳೆ
There are 10 questions to complete.

[button link=”http://www.karunaduexams.com/wp-content/uploads/2017/10/ಕ್ವೀಜ್-37.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

8 Thoughts to “ಸಾಮಾನ್ಯ ಜ್ಞಾನ ಕ್ವೀಜ್ 37”

  1. somanagouda

    very very good web

  2. Divya

    very nice and useful questions
    we learn more thank you for this like questions

  3. jyothi.l

    Thx for website. very good information

  4. Preeti Nesarikar

    It’s useful for compitative exam

Leave a Comment

This site uses Akismet to reduce spam. Learn how your comment data is processed.