ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 38

Question 1

1. ಕೆಳಗಿನವುಗಳಲ್ಲಿ ಯಾವುದರ ಹರಡುವಿಕೆಯನ್ನು ನಿಯಂತ್ರಿಸಲು ಆಸ್ಟ್ರೇಲಿಯಾ ಸಮೂಹ (Australia Group)ವನ್ನು ಸ್ಥಾಪಿಸಲಾಯಿತು?

A
ಖಂಡಾಂತರ ಕ್ಷಿಪಣಿಗಳು
B
ಪರಮಾಣು ಶಸ್ತ್ರಾಸ್ತ್ರಗಳು
C
ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳು
D
ಪರಮಾಣು, ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳು
Question 1 Explanation: 
ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳು

ಆಸ್ಟ್ರೇಲಿಯಾ ಸಮೂಹ 1985 ರಲ್ಲಿ ಸ್ಥಾಪಿತವಾದ ಅನೌಪಚಾರಿಕ ರಾಷ್ಟ್ರಗಳ ಗುಂಪಾಗಿದ್ದು ರಾಸಾಯನಿಕ ಮತ್ತು ಜೈವಿಕ ಆಯುಧಗಳ ಹರಡುವಿಕೆಯನ್ನು ಕಡಿಮೆ ಮಾಡಲು ಸ್ಥಾಪಿಸಲಾಗಿದೆ.

Question 2

2. ಈ ಕೆಳಗಿನವುಗಳಲ್ಲಿ ಯಾವುದು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲುಟಿಒ) ಗೆ ಸಂಬಂಧಿಸಿಲ್ಲ?

A
ಮಲ್ಟಿಫೈಬರ್ ಒಪ್ಪಂದ
B
ವ್ಯಾಪಾರ ಮತ್ತು ಸೇವೆಗಳ ಸಾಮಾನ್ಯ ಒಪ್ಪಂದ
C
ಬಂಡವಾಳದ ಮೇಲೆ ಬಹುಪಕ್ಷೀಯ ಒಪ್ಪಂದ
D
ಕೃಷಿ ಒಪ್ಪಂದ
Question 2 Explanation: 
ಬಂಡವಾಳದ ಮೇಲೆ ಬಹುಪಕ್ಷೀಯ ಒಪ್ಪಂದ

WTO ದ ಮೂಲಭೂತ ಕಾರ್ಯವು ಇವುಗಳನ್ನು ಒಳಗೊಂಡಿದೆ 1. ಮಲ್ಟಿಫೈಬರ್ ಅಗ್ರಿಮೆಂಟ್ (ಎಂಎಫ್ಎ) 2. ಅಗ್ರಿಮೆಂಟ್ ಆನ್ ಅಗ್ರಿಕಲ್ಚರ್ (ಎಒಎ), ವ್ಯಾಪಾರ ಸಂಬಂಧಿತ ಹೂಡಿಕೆ ಕ್ರಮಗಳು(ಟ್ರೈಮ್ಸ್), ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳು (ಟ್ರಿಸ್), ವ್ಯಾಪಾರ ಮತ್ತು ಸಾಮಾನ್ಯ ಸೇವೆಗಳ ಒಪ್ಪಂದ (ಜಿಎಟಿಎಸ್). ಹೂಡಿಕೆಯ ಮೇಲಿನ ಬಹುಪಕ್ಷೀಯ ಒಪ್ಪಂದ.

Question 3

3. ಬರ್ನ್ ಸಮಾವೇಶ (Berne Convention) ಈ ಕ್ಷೇತ್ರಕ್ಕೆ ಸಂಬಂಧಿಸಿದೆ _________?

A
ವನ್ಯಜೀವಿಗಳ ರಕ್ಷಣೆ
B
ಯುದ್ಧಗಳ ಸಂತ್ರಸ್ತರಿಗೆ ರಕ್ಷಣೆ
C
ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ
D
ಮಾನವ ಹಕ್ಕುಗಳ ರಕ್ಷಣೆ
Question 3 Explanation: 
ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ

ಬರ್ನ್ ಸಮಾವೇಶ 1886ರಲ್ಲಿ ಜಾರಿಗೆ ಬಂದಿದೆ. ಸಾಹಿತ್ಯ ಮತ್ತು ಕಲಾತ್ಮಕ ಕಾರ್ಯಗಳ ರಕ್ಷಣೆಗಾಗಿ ಇರುವ ಅಂತಾರಾಷ್ಟ್ರೀಯ ಒಪ್ಪಂದ ಇದಾಗಿದೆ.

Question 4

4. ಅಂತರ್ಜಾಲ ತಂತ್ರಜ್ಞಾನವನ್ನು ಬಳಸಿ ಲಕ್ಷಾಂತರ ಆಫ್ರಿಕನ್ನರಿಗೆ ಶಿಕ್ಷಣ ನೀಡುವ ಭಾರತದ ಪ್ರಯತ್ನಗಳು ಕೆಳಗಿನ ಯಾವುದರ ಅಡಿಯಲ್ಲಿ ಬರುತ್ತದೆ?

A
ಟ್ರ್ಯಾಕ್-I ರಾಜತಾಂತ್ರಿಕತೆ
B
ಟ್ರ್ಯಾಕ್-II ರಾಜತಾಂತ್ರಿಕತೆ
C
ಟ್ರ್ಯಾಕ್ -III ರಾಜತಾಂತ್ರಿಕತೆ
D
ಟ್ರ್ಯಾಕ್ IV ರಾಜತಾಂತ್ರಿಕತೆ
Question 4 Explanation: 
ಟ್ರ್ಯಾಕ್ IV ರಾಜತಾಂತ್ರಿಕತೆ

ಟ್ರ್ಯಾಕ್ IV ರಾಜತಾಂತ್ರಿಕತೆ ಎರಡು ರಾಜ್ಯಗಳ ನಡುವೆ ಸಾಮಾಜಿಕ-ಸಾಂಸ್ಕೃತಿಕ, ವೈಜ್ಞಾನಿಕ, ಪರಿಸರ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

Question 5

5. ಯಾವ ದೇಶದಲ್ಲಿ ಬಿಕಿನಿ ದಿನವನ್ನು ಆಚರಿಸಲಾಗುತ್ತದೆ?

A
ಜಪಾನ್
B
ಅಮೆರಿಕ
C
ಕೆನಡಾ
D
ಫ್ರಾನ್ಸ್
Question 5 Explanation: 
ಫ್ರಾನ್ಸ್

ಮಾರ್ಚ್ 1, 1954 ರಂದು ಜಲಜನಕ ಬಾಂಬ್ ಸ್ಫೋಟಕ್ಕೆ ಬಲಿಯಾದವರ ನೆನಪಿಗಾಗಿ ಜಪಾನ್ ನಲ್ಲಿ ಬಿಕಿನಿ ದಿನವನ್ನು ಆಚರಿಸಲಾಗುತ್ತದೆ. ಅಮೆರಿಕದ ವಿಕಿರಣಶೀಲ ಬೂದಿಯು ಬಿಕಿನಿ ಅಟಾಲ್ ಸಮೀಪದ ಮೀನುಗಾರಿಕಾ ಹಡಗುಗಳ ಮೇಲೆ ಬಿದ್ದು ಉಂಟಾದ ಸ್ಪೋಟದ ನೆನಪಿಗಾಗಿ ಈ ಹೆಸರನ್ನು ಇಡಲಾಗಿದೆ.

Question 6

6. ಇತಿಹಾಸದಲ್ಲಿ ದಾಖಲಾದ ಕಡಿಮೆ ಅವದಿಯ ಯುದ್ಧವು ಯಾವ ಎರಡು ಸಾರ್ವಭೌಮ ರಾಷ್ಟ್ರಗಳ ನಡುವೆ ನಡೆಯಿತು?

A
ಯುಕೆ ಮತ್ತು ಫ್ರಾನ್ಸ್
B
ಡೆನ್ಮಾರ್ಕ್ ಮತ್ತು ಯುಕೆ
C
ಯುಕೆ ಮತ್ತು ಜಂಜಿಬಾರ್
D
ಇಟಲಿ ಮತ್ತು ಫ್ರಾನ್ಸ್
Question 6 Explanation: 
ಯುಕೆ ಮತ್ತು ಜಂಜಿಬಾರ್

ಆಗಸ್ಟ್ 27, 1896 ರಂದು 9.02 ರಿಂದ 9.40 ರವರೆಗೆ ಯುನೈಟೆಡ್ ಕಿಂಗ್ಡಮ್ ಮತ್ತು ಜಂಜಿಬಾರ್ (ಇದು ಈಗ ಟಾಂಜಾನಿಯಾ ಭಾಗವಾಗಿದೆ) ನಡುವೆ ನಡೆದ ಯುದ್ದವು ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯ ಯುದ್ಧವಾಗಿತ್ತು. ರಿಯರ್ ಅಡ್ಮಿರಲ್ ಹ್ಯಾರಿ ಹೋಲ್ಡ್ಸವರ್ತ್ ರಾವ್ಸನ್ (1843 -1910) ರವರು ಸ್ವಯಂ-ನೇಮಕವಾದ ಜಾಂಜಿಬಾರ್ನ ಸುಲ್ತಾನನಾದ ಸೈದ್ ಖಲೀದ್ ರಿಗೆ ತನ್ನ ಅರಮನೆಯನ್ನ ಸ್ಥಳಾಂತರಿಸಿ ಮತ್ತು ಶರಣಾಗತಿಯಾಗುವಂತೆ ಅಂತಿಮ ನಿಲುವನ್ನು ನೀಡಿದ್ದರು.

Question 7

7. ಒಲಿಂಪಿಕ್ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದ ಸ್ವತಂತ್ರ ಭಾರತದ ಮೊದಲ ಭಾರತೀಯ ಕ್ರೀಡಾಪಟು ಯಾರು?

A
ಧ್ಯಾನ್ ಚಂದ್
B
ಕೆ ಡಿ ಜಾಧವ್
C
ಪ್ರೀತಿಪಾಲ್ ಸಿಂಗ್
D
ಹರಿಶ್ಚಂದ್ರ ಬಿರಾಜ್ದರ್
Question 7 Explanation: 
ಕೆ ಡಿ ಜಾಧವ್

ಖಶಬಾ ದಾದಾಸಾಹೇಬ್ ಜಾಧವ್ (1926-1984) 1952ರ ಹೆಲ್ಸಿಂಕಿಯ ಬೇಸಿಗೆ ಒಲಿಂಪಿಕ್ ನ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದರು ಮತ್ತು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿದರು.

Question 8

8. ಪ್ರಜಾಪ್ರಭುತ್ವವನ್ನು "ಜನತೆಯ ಸರ್ಕಾರ, ಜನರಿಂದ ಮತ್ತು ಜನರಿಗಾಗಿ" ಎಂದು ಯಾರು ವ್ಯಾಖ್ಯಾನಿಸಿದ್ದಾರೆ?

A
ಅಬ್ರಹಾಂ ಲಿಂಕನ್
B
ಪ್ಲೇಟೊ
C
ಅರಿಸ್ಟಾಟಲ್
D
ರಸ್ಕಿನ್
Question 8 Explanation: 
ಅಬ್ರಹಾಂ ಲಿಂಕನ್

ಅಬ್ರಹಾಂ ಲಿಂಕನ್ ಅವರು ಪ್ರಜಾಪ್ರಭುತ್ವವನ್ನು " ಜನತೆಯ ಸರ್ಕಾರ, ಜನರಿಂದ ಮತ್ತು ಜನರಿಗಾಗಿ " ಎಂದು ವ್ಯಾಖ್ಯಾನಿಸಿದ್ದರೆ.

Question 9

9. ಅರ್ಜೆಂಟೀನಾದ ಅಧಿಕೃತ ಭಾಷೆ ___________?

A
ಪೋರ್ಚುಗೀಸ್
B
ಫ್ರೆಂಚ್
C
ಸ್ಪ್ಯಾನಿಷ್
D
ಡಚ್
Question 9 Explanation: 
ಸ್ಪಾನಿಷ್

ಅರ್ಜೆಂಟೀನಾ, ಬೊಲಿವಿಯಾ, ಚಿಲಿ ಕೊಲಂಬಿಯಾ, ಕೋಸ್ಟ ರಿಕಾ, ಕ್ಯೂಬಾ, ಡೊಮಿನಿಕನ್ ರಿಪಬ್ಲಿಕ್, ಈಕ್ವೆಡಾರ್, ಎಲ್ ಸಾಲ್ವಡಾರ್, ಈಕ್ವಟೋರಿಯಲ್ ಗಿನಿಯಾ, ಗ್ವಾಟೆಮಾಲಾ, ಹೊಂಡುರಾಸ್, ಮೆಕ್ಸಿಕೋ, ನಿಕರಾಗುವಾ, ಪನಾಮ, ಪರಾಗ್ವೆ, ಪೆರು, ಸ್ಪೇನ್, ಉರುಗ್ವೆ ಮತ್ತು ವೆನೆಜುವೆಲಾ ಸೇರಿದಂತೆ 20 ದೇಶಗಳಲ್ಲಿ ಸ್ಪ್ಯಾನಿಷ್ ಅಧಿಕೃತ ಭಾಷೆಯಾಗಿದೆ.

Question 10

10. ಶಟ್-ಅಲ್-ಅರಬ್ ಪ್ರದೇಶದ ವಿವಾದವು ಆಧುನಿಕ ವಿಶ್ವ ಇತಿಹಾಸದಲ್ಲಿ ಯಾವ ಮುಂದಿನ ಯುದ್ಧಗಳಿಗೆ ದಾರಿಯಾಯಿತು?

A
ಅರಬ್-ಇಸ್ರೇಲಿ ಸಂಘರ್ಷ
B
ಇರಾನ್-ಇರಾಕ್ ಯುದ್ಧ
C
ರುಸ್ಸೋ-ಪರ್ಷಿಯನ್ ಯುದ್ಧ
D
ಗಲ್ಫ್ ಯುದ್ಧ
Question 10 Explanation: 
ಇರಾನ್-ಇರಾಕ್ ಯುದ್ಧ

ಶಟ್-ಅಲ್-ಅರಬ್ ಪ್ರದೇಶವು ಇರಾನ್-ಇರಾಕ್ ಯುದ್ಧದ ಪ್ರಮುಖ ವಿಷಯವಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/10/ಕ್ವೀಜ್-38.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಕ್ವೀಜ್ 38”

  1. veerendrakumar

    super kpsc quiz

  2. Rakshith Kumar

    So good

Leave a Comment

This site uses Akismet to reduce spam. Learn how your comment data is processed.