ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,16,17,2017

Question 1

1. ‘ವಿಶ್ವ ಆಹಾರ ದಿನ’ ವನ್ನಾಗಿ ಯಾವ ದಿನಾಂಕದಂದು ಆಚರಿಸಲಾಗುತ್ತದೆ?

A
ಅಕ್ಟೋಬರ್ 16
B
ಅಕ್ಟೋಬರ್ 14
C
ಅಕ್ಟೋಬರ್ 24
D
ಅಕ್ಟೋಬರ್ 26
Question 1 Explanation: 
ಅಕ್ಟೋಬರ್ 16

(ವಿವರಣೆ:- ವಿಶ್ವ ಆಹಾರ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್ 16 ರಂದು ಆಚರಿಸಲಾಗುತ್ತದೆ. 1945 ರಲ್ಲಿ ವಿಶ್ವ ಸಂಸ್ಥೆಯ Food and Agriculture Organisation ಸ್ಥಾಪನೆಯಾದ ನೆನಪಿಗಾಗಿ ಮತ್ತು ಹಸಿವಿನಿಂದ ಬಳಲುತ್ತಿರುವವರ ಹಾಗು ಆಹಾರ ಭದ್ರತೆ ಮತ್ತು ಪೌಷ್ಠಿಕ ಆಹಾರದ ಬಗ್ಗೆ ಜಗತ್ತಿನ ಗಮನ ಸೆಳೆಯುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.)

Question 2

2. ಜಾಕ್ಸನ್ ಸಿಂಗ್ ತೌನೋಜಮ್ ಎಂಬ ಕ್ರೀಡಾಪಟು ಇತ್ತೀಚೆಗೆ ಈ ಕೆಳಕಂಡ ಯಾವ ಕ್ರೀಡೆಯಲ್ಲಿ ದಾಖಲೆ ಬರೆದರು?

A
ಆರ್ಚರಿ
B
ಹಾಕಿ
C
ಫುಟ್ ಬಾಲ್
D
ಬ್ಯಾಡ್ಮಿಂಟನ್
Question 2 Explanation: 

(ವಿವರಣೆ:- ಭಾರತದಲ್ಲಿ ಇದೇ ಮೊದಲ ಬಾರಿಗೆ ಫಿಫಾ (FIFA) U-17 ವರ್ಷದೊಳಗಿನವರ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗಳು ನಡೆಯುತ್ತಿದ್ದು, ಭಾರತದ ಜಾಕ್ಸನ್ ಸಿಂಗ್ ತೌನೋಜಮ್ U-17 ವರ್ಷದೊಳಗಿನವರ ವಿಶ್ವಕಪ್ ಫುಟ್ ಬಾಲ್ ಪಂದ್ಯದಲ್ಲಿ ಭಾರತದ ಪರವಾಗಿ ಪ್ರಥಮ ಗೋಲ್ ಗಳಿಸಿ ದಾಖಲೆ ನಿರ್ಮಿಸಿದರು. ಈ ಗೋಲ್ ಭಾರತ ಮತ್ತು ಕೊಲಂಬಿಯ ನಡುವಿನ ಪಂದ್ಯದಲ್ಲಿ ದಾಖಲಾಯಿತು.)

Question 3

3. ವಿಧಾನಸಭೆಯಲ್ಲಿ ಶಾಸಕರು ತಮ್ಮ ಪ್ರಶ್ನೆಗಳನ್ನು ಮತ್ತು ಗಮನ ಸೆಳೆಯುವ ಸೂಚಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಅವಕಾಶ ಕಲ್ಪಿಸಿದ ಭಾರತದ ಮೊಟ್ಟಮೊದಲ ರಾಜ್ಯ ಯಾವುದು?

A
ಗುಜರಾತ್
B
ರಾಜಸ್ಥಾನ
C
ಮಹಾರಾಷ್ಟ್ರ
D
ಕರ್ನಾಟಕ
Question 3 Explanation: 

(ವಿವರಣೆ:- ವಿಧಾನಸಭೆಯಲ್ಲಿ ಶಾಸಕರು ತಮ್ಮ ಪ್ರಶ್ನೆಗಳನ್ನು ಮತ್ತು ಗಮನ ಸೆಳೆಯುವ ಸೂಚಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಅವಕಾಶ ಕಲ್ಪಿಸಿದ ಭಾರತದ ಮೊಟ್ಟಮೊದಲ ರಾಜ್ಯ ರಾಜಸ್ಥಾನ. ರಾಜಸ್ಥಾನ ಸರ್ಕಾರದ ಈ ನಡೆಯಿಂದ ಮಾನವ ಶ್ರಮ, ಸಮಯ ಉಳಿತಾಯದ ಜೊತೆಗೆ ಕಾಗದ ರಹಿತ ವಿಧಾನಸಭಾ ಅಧಿವೇಶನದ ಕಡೆಗೆ ಹೆಜ್ಜೆ ಇಟ್ಟಂತಾಗುತ್ತದೆ. ಅಲ್ಲದೆ ಅತೀ ತುರ್ತಾಗಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಹಾಯವಾಗಿಲಿದೆ)

Question 4

4. ಆರನೇ ಆವೃತ್ತಿಯ ವಾರ್ಷಿಕ ಎಲ್.ಎನ್.ಜಿ. (Liquefied Natural Gas) ಉತ್ಪಾದಕರ ಗ್ರಾಹಕರ ಸಮ್ಮೇಳನ ಎಲ್ಲಿ ಆಯೋಜನೆಗೊಂಡಿತ್ತು?

A
ಚೀನಾ
B
ನಮೀಬಿಯಾ
C
ಸೌದಿ ಅರೆಬಿಯಾ
D
ಜಪಾನ್
Question 4 Explanation: 

(ವಿವರಣೆ:- ಜಪಾನಿನ ಟೋಕಿಯೋದಲ್ಲಿ ಆರನೇ ಆವೃತ್ತಿಯ ವಾರ್ಷಿಕ ಎಲ್.ಎನ್.ಜಿ. (Liquefied Natural Gas) ಉತ್ಪಾದಕರ ಗ್ರಾಹಕರ ಸಮ್ಮೇಳನ ಆಯೋಜಿಸಲಾಗಿತ್ತು. ಭಾರತ ಮತ್ತು ಜಪಾನ್ ನಡುವೆ ಇಂಧನ ಬಳಕೆ ಮತ್ತು ಹಂಚಿಕೆ ಸಂಬಂಧ ಮಾತುಕತೆ ನಡೆಸಲಾಯಿತು. ಈ ಸಮ್ಮೇಳದಲ್ಲಿ ಖತಾರ್, ನೈಜೀರಿಯಾ, ಬಾಂಗ್ಲಾದೇಶ, ಜಪಾನ್, ಭಾರತ ಸೇರಿದಂತೆ ಹಲವಾರು ದ್ರವೀಕೃತ ನೈಸರ್ಗಿಕ ಅನಿಲ ಉತ್ಪಾದಕ ಮತ್ತು ಗ್ರಾಹಕ ದೇಶಗಳು ಭಾಗವಹಿಸದ್ದವು.)

Question 5

5. 2017 ರ ಶಾಂಗೈ ಮಾಸ್ಟರ್ಸ್ ಟೆನ್ನಿಸ್ ಟೂರ್ನಿಯ ಪಂದ್ಯಾವಳಿಯ ವಿಜೇತರು ಯಾರು?

A
ಆಂಡ್ರೂ ಮರ್ರೆ
B
ಡಾಮ್ನಿಕ್ ತೀಮ್
C
ರೋಜರ್ ಫೆಡರರ್
D
ರಾಫೆಲ್ ನಡಾಲ್
Question 5 Explanation: 
ರೋಜರ್ ಫೆಡರರ್
Question 6

6. ಅಖಿಲ ಭಾರತ ಗವರ್ನರ್ಸ್ ಗೋಲ್ಡ್ ಕಪ್ ಫುಟ್ ಬಾಲ್ ಪಂದ್ಯಾವಳಿ-2017 ಪ್ರಶಸ್ತಿಯನ್ನು ಯಾವ ಫುಟ್ ಬಾಲ್ ತಂಡ ಪಡೆಯಿತು?

A
ಪಾರ್ಥ ಚಕ್ರ
B
ದೆಹಲಿ ಡೈನಮೋಸ್
C
ಹಿಂದೂಸ್ಥಾನ್ ಈಗಲ್ಸ್
D
ಮೋಹನ್ ಬಾಗನ್
Question 6 Explanation: 
ಮೋಹನ್ ಬಾಗನ್
Question 7

7. ದಿ ಆಯುಷ್ (AYUSH) ಫೆಸ್ಟಿವಲ್ ಆಫ್ ಸ್ಟಾಂಪ್ಸ್ 2017 ಅನ್ನು ಈ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ಚೆನ್ನೈ
B
ಪಣಜಿ
C
ಬೆಂಗಳೂರು
D
ಕೋಲ್ಕತ್ತಾ
Question 7 Explanation: 

(ವಿವರಣೆ:- ದಿ ಆಯುಷ್ (AYUSH) ಫೆಸ್ಟಿವಲ್ ಆಫ್ ಸ್ಟಾಂಪ್ಸ್ 2017 ಅನ್ನು ಪಣಜಿ ನಗರದಲ್ಲಿ ಆಯೋಜಿಸಲಾಗಿತ್ತು. ಗೋವಾ ಅಂಚೆ ವೃತ್ತ, ಭಾರತೀಯ ಅಂಚೆ ಇಲಾಖೆ ಮತ್ತು ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜನರಲ್ಲಿ ಅಂಚೆ ಚೀಟಿ ಸಂಗ್ರಹದ ಅಭ್ಯಾಸವನ್ನು ಉತ್ತೇಜಿಸುವುದು ಮತ್ತು ಆರೋಗ್ಯಕರ ಜೀವನ ನಡೆಸಲು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.)

Question 8

8. ಭಾರತದಲ್ಲಿ ಪ್ರಪ್ರಥಮವಾಗಿ ಅಖಿಲ ಭಾರತ ಆಯುರ್ವೇದ ಸಂಸ್ಥೆ (All India Institute of Ayurveda (AIIA) ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?

A
ತಿರುವನಾಂತಪುರಂ
B
ಗೌಹಾಟಿ
C
ದೆಹಲಿ
D
ಚೆನ್ನೈ
Question 8 Explanation: 

(ವಿವರಣೆ:- ರಾಷ್ಟ್ರೀಯ ಆಯುರ್ವೇದ ದಿನವಾದ 17 ನೇ ಅಕ್ಟೋಬರ್ ರಂದು ಭಾರತದ ಪ್ರಪ್ರಥಮ ಅಖಿಲ ಭಾರತ ಆಯುರ್ವೇದ ಸಂಸ್ಥೆ (All India Institute of Ayurveda (AIIA) ಯನ್ನು ದೆಹಲಿಯಲ್ಲಿ ಸ್ಥಾಪಿಸಲಾಗಿದೆ. ಅತ್ಯಂತ ಪ್ರಾಚೀನ ವೈದ್ಯಕೀಯ ವಿದ್ಯೆಯಾದ ಆಯುರ್ವೇದವನ್ನು ನೂತನ ವೈಜ್ಞಾನಿಕ ಸಲಕರಣೆಗಳೊಂದಿಗೆ ಸಮ್ಮಿಳಿತಗೊಳಿಸಿ ಚಿಕಿತ್ಸೆ ನೀಡುವುದು ಇದರ ಉದ್ದೇಶವಾಗಿದೆ.)

Question 9

9. ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ತ್ರಿದಳ ಸಶಸ್ತ್ರ ಪಡೆಗಳ ಜಂಟಿ ಸಮರಾಭ್ಯಾಸ “ಇಂದ್ರ (INDRA)-2017” ಯಾವ ದೇಶಗಳ ನಡುವೆ ಜರುಗಿತು?

A
ಭಾರತ-ರಷ್ಯಾ
B
ಭಾರತ-ಅಮೆರಿಕಾ
C
ಭಾರತ-ಆಫ್ರಿಕಾ
D
ಭಾರತ-ಆಸ್ಟ್ರೇಲಿಯ
Question 9 Explanation: 

(ವಿವರಣೆ:- ಇದೇ ಮೊದಲ ಬಾರಿಗೆ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ಅಂತರರಾಷ್ಟ್ರೀಯ ತ್ರಿದಳ ಸಶಸ್ತ್ರ ಪಡೆಗಳ ಜಂಟಿ ಸಮರಾಭ್ಯಾಸ “ಇಂದ್ರ (INDRA)-2017” ಭಾರತ ಮತ್ತು ರಷ್ಯಾ ನಡುವೆ ಜರುಗಿತು. ಈ ಸಮರಾಭ್ಯಾಸದಲ್ಲಿ ಮೂರೂ ಸಶಸ್ತ್ರ ಪಡೆಗಳು ತಮ್ಮ ಕೌಶಲ್ಯ, ರಣತಂತ್ರ ಮತ್ತು ಇತರೆ ವಿಷಯಗಳನ್ನು ಎರಡೂ ದೇಶಗಳ ನಡುವೆ ಪರಸ್ಪರ ಹಂಚಿಕೆ ಮಾಡಿಕೊಳ್ಳಲಾಯಿತು.)

Question 10

10. ‘ಬಿಯಾಡ್ ದಿ ಡ್ರೀಮ್ ಗರ್ಲ್ (Beyond the Dream Girl)’ ಪುಸ್ತಕದ ಕರ್ತೃ ಯಾರು?

A
ರಾಮ್ ಕಮಲ್ ಮುಖರ್ಜಿ
B
ಕರಣ್ ಜೋಹರ್
C
ಜಾವೆದ್ ಅಖ್ತರ್
D
ಬಾಲಕೃಷ್ಣ
Question 10 Explanation: 
ರಾಮ್ ಕಮಲ್ ಮುಖರ್ಜಿ
There are 10 questions to complete.

[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್16172017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.