ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,18,19,20,2017
Question 1 |
1. ಈ ಕೆಳಕಂಡ ಯಾವ ಸರಕು ವಿನಿಮಯ ಸಂಸ್ಥೆ, ಭಾರತದಲ್ಲಿ ಪ್ರಪ್ರಥಮವಾಗಿ ಚಿನ್ನದ ರೂಪದಲ್ಲಿ ಸರಕು ಅವಕಾಶವನ್ನು ಒದಗಿಸಿದೆ?
ಇಂಡಿಯನ್ ಕಮಾಡಿಟಿ ಎಕ್ಸ್ ಚೇಂಜ್ ಲಿ. | |
ನ್ಯಾಷನಲ್ ಸ್ಪಾಟ್ ಎಕ್ಸ್ ಚೇಂಜ್ ಲಿ. | |
ನ್ಯಾಷನಲ್ ಕಮಾಡಿಟಿ & ಡಿರೈವಿಟಿಸ್ ಎಕ್ಸ್ ಚೇಂಜ್ ಲಿ. | |
ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ಆಫ್ ಇಂಡಿಯಾ |
(ವಿವರಣೆ:- ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ಆಫ್ ಇಂಡಿಯಾ ಇದೇ ಪ್ರಥಮವಾಗಿ ಚಿನ್ನದ ರೂಪದಲ್ಲಿ ಸರಕು ಅವಕಾಶವನ್ನು ಪ್ರಾರಂಭಿಸಿದೆ. ಇದರಿಂದ ತನ್ನ ಪಾಲುದಾರರಿಗೆ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಹೊಸ ಅವಕಾಶವನ್ನು ನೀಡಿದೆ.)
Question 2 |
2. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಹಿಳಾ ವಿರೋಧಿ ಲಿಂಗ ಪಕ್ಷಪಾತ ಧೋರಣೆಯನ್ನು ಕೊನೆಗಾಣಿಸಲು ಈ ಕೆಳಕಂಡ ಯಾವ ಆನ್ ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ?
#IsupportWoman | |
#IamThatWoman | |
#IStandWoman | |
#IamForWoman |
(ವಿವರಣೆ:- ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಹಿಳಾ ವಿರೋಧಿ ಲಿಂಗ ಪಕ್ಷಪಾತ ಧೋರಣೆಯನ್ನು ಕೊನೆಗಾಣಿಸಲು #IamThatWoman ಎಂಬ ಆನ್ ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ. ಈ ಮೂಲಕ ಮಹಿಳೆಯರು ‘ಮಹಿಳೆಯರಿಂದ’ ‘ಮಹಿಳೆಯರಿಗಾಗಿ’ ಎಂಬ ಅಂಶವನ್ನು ತೋರ್ಪಡಿಸಲಾಗುತ್ತದೆ ಅಲ್ಲದೆ ಮಹಿಳೆಯರು ಮಹಿಳೆಯರಿಗಾಗಿ ಮಾಡಿದ ಹಲವಾರು ಮಹತ್ತರವಾದ ಕೊಡುಗೆಗಳನ್ನು ಸ್ಮರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.)
Question 3 |
3. 2017 ನೇ ಸಾಲಿನ ‘ಮ್ಯಾನ್ ಬೂಕರ್ ಪ್ರಶಸ್ತಿ’ ಯನ್ನು ಯಾರಿಗೆ ನೀಡಲಾಗಿದೆ?
ಜಾರ್ಜ್ ಸಾಂಡರ್ | |
ಅಲೆಸ್ಟರ್ ಜುಕೇಮನ್ | |
ಅಬ್ದುಲ್ ರಶೀದ್ | |
ಸ್ಯಾಡಿ ಸ್ಮಿತ್ |
(ವಿವರಣೆ:- ಅಮೆರಿಕಾದ ಬರಹಗಾರರಾದ ಜಾರ್ಜ್ ಸಾಂಡರ್ ರವರು 2017 ನೇ ಸಾಲಿನ ‘ಮ್ಯಾನ್ ಬೂಕರ್ ಪ್ರಶಸ್ತಿ’ ಯನ್ನು ಮುಡಿಗೇರಿಸಿಕೊಂಡಿದ್ದಾರೆ, ಈ ಪ್ರಶಸ್ತಿ ತಮ್ಮ ಪ್ರಥಮ ಕಾದಂಬರಿ “ಲಿಂಕನ್ ಇನ್ ದಿ ಬಾರ್ಡೋ” ಗಾಗಿ ಲಭಿಸಿದೆ. ಬ್ರಿಟನ್ ನ್ನಿನ ಪ್ರತಿಷ್ಠಿತ ಇಂಗ್ಲೀಷ್ ಭಾಷಾ ಸಾಹಿತ್ಯ ಪುರಸ್ಕಾರ ಪಡೆದ ಎರಡನೇ ಅಮೆರಿಕನ್ ಬರಹಗಾರ ಎಂಬ ಹೆಗ್ಗಳಿಕೆಗೆ ಜಾರ್ಜ್ ಸಾಂಡರ್ ರವರು ಪಾತ್ರರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತ ಕಾದಂಬರಿ ಅಮೆರಿಕದ ಮಾಜಿ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ತಮ್ಮ 11 ವರ್ಷದ ಮಗನನ್ನು ಕಳೆದುಕೊಂಡ ಸಂದರ್ಭವನ್ನು ವಿವರಿಸುವ ಕಾಂದಂಬರಿಯಾಗಿದೆ. 2016 ರಲ್ಲಿ ಅಮೆರಿಕಾದ ಸಾಹಿತಿ ಪೌಲ್ ಬೀಟ್ಟಿ ಈ ಪ್ರಶಸ್ತಿಯನ್ನು ಪಡೆದಿದ್ದರು.)
Question 4 |
4. ‘ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ’ ವನ್ನು ಎಂದು ಆಚರಿಸಲಾಗುತ್ತದೆ?
ಅಕ್ಟೋಬರ್ 2 | |
ಅಕ್ಟೋಬರ್ 12 | |
ಅಕ್ಟೋಬರ್ 17 | |
ಅಕ್ಟೋಬರ್ 20 |
(ವಿವರಣೆ:- ವಿಶ್ವದಾದ್ಯಂತ ಬಡತನ ನಿರ್ಮೂಲನೆ ಮಾಡಲು ಮತ್ತು ವಿಶ್ವದಾದ್ಯಂತ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನರಲ್ಲಿ ಈ ಬಗ್ಗೆ ಅರಿವು ಮೂಡಿಲು ಪ್ರತಿವರ್ಷ ಅಕ್ಟೋಬರ್ 17 ರಂದು ‘ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ’ ವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆ ಈ ದಿನಾಚರಣೆಯ ನಿರ್ಣಯವನ್ನು 1992 ರ ತನ್ನ ಜನರಲ್ ಅಸೆಂಬ್ಲಿಯಲ್ಲಿ ಕೈಗೊಂಡಿದ್ದು, ಈ ವರ್ಷ 25 ನೇ ವರ್ಷಾಚರಣೆಯಾಗಿದೆ.)
Question 5 |
5. ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ಕೆಳಕಂಡ ಯಾವ ಇ-ಕಾಮರ್ಸ್ ಕಂಪನಿ ಕೇಂದ್ರ ಜವಳಿ ಸಚಿವಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ?
ಫ್ಲಿಪ್ ಕಾರ್ಟ್ | |
ಅಮೆಜಾನ್ | |
ಅಜಿಯೋ | |
ಮಿಂತ್ರ |
(ವಿವರಣೆ:- ನೇಕಾರರನ್ನು ಮತ್ತು ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಇ-ಕಾಮರ್ಸ್ ಕಂಪನಿ ಮಿಂತ್ರ ಕೇಂದ್ರ ಜವಳಿ ಸಚಿವಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಆನ್ ಲೈನ್ ಮುಖಾಂತರ ಮಾರಾಟ ಮಾಡಲು ಮತ್ತು ಹೊಸ ಗ್ರಾಹಕ/ಅವಕಾಶಗಳನ್ನು ಆವಿಷ್ಕರಿಸಲು ಸಹಾಯ ಮಾಡಲಿದೆ.)
Question 6 |
6. ವರ್ಲ್ಡ್ ವ್ರೆಸ್ಲಿಂಗ್ ಎಂಟರ್ ಟೈನ್ಮೆಂಟ್ (World Wrestling Entertainment (WWE) ನೊಂದಿಗೆ ಒಪ್ಪಂದ ಮಾಡಿಕೊಂಡ ಭಾರತದ ಮೊಟ್ಟಮೊದಲ ಮಹಿಳಾ ಕುಸ್ತಿಪಟು ಯಾರು?
ಕವಿತಾ ದೇವಿ | |
ಮೇರಿ ಕೋಮ್ | |
ಸಾಕ್ಷಿ ಮಲಿಕ್ | |
ಗೀತಾ ಪೋಗಟ್ |
(ವಿವರಣೆ:- ಹರಿಯಾಣದ ಕುಸ್ತಿಪಟು ಕವಿತಾ ದೇವಿ ವರ್ಲ್ಡ್ ವ್ರೆಸ್ಲಿಂಗ್ ಎಂಟರ್ ಟೈನ್ಮೆಂಟ್ (World Wrestling Entertainment (WWE) ನೊಂದಿಗೆ ಒಪ್ಪಂದ ಮಾಡಿಕೊಂಡ ಭಾರತದ ಮೊಟ್ಟಮೊದಲ ಮಹಿಳಾ ಕುಸ್ತಿಪಟು.)
Question 7 |
7. ಭಾರತೀಯ ರಿಸರ್ವ್ ಬ್ಯಾಂಕ್ ನ ಆರ್ಥಿಕ ವರ್ಷ 2018 ರ ಪರಿಷ್ಕೃತ ಮಾರ್ಗಸೂಚಿಯನ್ವಯ, ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳಿಗೆ ಶೇಕಡ ಎಷ್ಟು ಬಡ್ಡಿ ದರವನ್ನು ನಿಗದಿಪಡಿಸಿದೆ?
ಶೇ. 6 | |
ಶೇ. 6.5 | |
ಶೇ. 7 | |
ಶೇ. 7.5 |
(ವಿವರಣೆ:- ಭಾರತೀಯ ರಿಸರ್ವ್ ಬ್ಯಾಂಕ್ ನ ಆರ್ಥಿಕ ವರ್ಷ 2018 ರ ಪರಿಷ್ಕೃತ ಮಾರ್ಗಸೂಚಿಯನ್ವಯ, ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳಿಗೆ ದೀನ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಬ್ಯಾಂಕ್ ಗಳು ಶೇ. 7 ಬಡ್ಡಿ ದರದಲ್ಲಿ ಅನುದಾನ ನೀಡಲಿವೆ. ಈ ಮಾರ್ಗಸೂಚಿಗಳನ್ನು 21 ಸಾರ್ವಜನಿಕ ಬ್ಯಾಂಕ್ ಗಳು ಮತ್ತು 19 ಖಾಸಗಿ ಬ್ಯಾಂಕ್ ಗಳು ಅಳವಡಿಸಿಕೊಳ್ಳಲಿವೆ.)
Question 8 |
8. ಈ ಕೆಳಕಂಡ ಯಾವ ರಾಜ್ಯ ಸರ್ಕಾರ ರೈತರಿಗಾಗಿ “ಭಾವಾಂತರ ಭುಗ್ತಾನ್ ಯೋಜನೆ” (Bhavantar Bhugtan Yojna) ಯನ್ನು ಪ್ರಾರಂಭಿಸಿದೆ?
ಬಿಹಾರ | |
ಮಧ್ಯಪ್ರದೇಶ | |
ಪಂಜಾಬ್ | |
ಹರಿಯಾಣ |
(ವಿವರಣೆ:- ಮಧ್ಯಪ್ರದೇಶ ಸರ್ಕಾರ ತನ್ನ ರಾಜ್ಯದ ರೈತಾಪಿ ವರ್ಗಕ್ಕಾಗಿ “ಭಾವಾಂತರ ಭುಗ್ತಾನ್ ಯೋಜನೆ” (Bhavantar Bhugtan Yojna) ಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಟ ದರವನ್ನು ರಾಜ್ಯ ಸರ್ಕಾರವೇ ಪಾವತಿಸಲಿದೆ. ಈ ಯೋಜನೆಯ ಲಾಭ ಪಡೆಯಲು ರೈತರು ನಿಗದಿತ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಟ ಮಾಡಬೇಕಾಗುತ್ತದೆ ಮತ್ತು ಅಧಿಕೃತ ರಸೀದಿಯನ್ನು ಹೊಂದಿರಬೇಕಾಗುತ್ತದೆ.)
Question 9 |
9. ಭಾರತದಲ್ಲಿ ‘ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನ’ ವನ್ನು ಎಂದು ಆಚರಿಸಲಾಗುತ್ತಿದೆ?
ಅಕ್ಟೋಬರ್ 12 | |
ಅಕ್ಟೋಬರ್ 16 | |
ಅಕ್ಟೋಬರ್ 20 | |
ಅಕ್ಟೋಬರ್ 21 |
(ವಿವರಣೆ:- ಸೇವೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸಲು ಪ್ರತಿ ವರ್ಷ ಅಕ್ಟೋಬರ್ 21 ರಂದು ಭಾರತದಲ್ಲಿ ‘ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನ’ ವನ್ನು ಆಚರಿಸಲಾಗುತ್ತಿದೆ. )
Question 10 |
10. ರಾಜ್ಯಸಭಾ ಟಿವಿ ಯ ಪ್ರಧಾನ ಸಂಪಾದಕ ಹುದ್ದೆಗೆ ಅಭ್ಯರ್ಥಿಯನ್ನು ನೇಮಕ ಮಾಡಲು ಯಾವ ಸಮಿತಿಯನ್ನು ರಚಿಸಲಾಗಿದೆ?
ಲಾಲ್ ಕೃಷ್ಣ ಅಡ್ವಾನಿ ಸಮಿತಿ | |
ಶಶಿತರೂರ್ ಸಮಿತಿ | |
ಸೂರ್ಯ ಪ್ರಕಾಶ್ ಸಮಿತಿ | |
ರಾಹುಲ್ ಶ್ರೀವತ್ಸವ ಸಮಿತಿ |
(ವಿವರಣೆ:- ಪ್ರಸಾರ ಭಾರತಿ ಅಧ್ಯಕ್ಷರಾದ ಸೂರ್ಯ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ರಾಜ್ಯಸಭಾ ಟಿವಿ ಯ ಪ್ರಧಾನ ಸಂಪಾದಕ ಹುದ್ದೆಗೆ ಅಭ್ಯರ್ಥಿಯನ್ನು ನೇಮಕ ಮಾಡಲು 5 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.)
[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್1819202017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
Jaganur
Comment
I’m very satisfied really great.
You done Super work sir,it’s very helpful.