ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅವಧಿ ವಿಸ್ತರಣಗೆ ಸಂಪುಟ ಒಪ್ಪಿಗೆ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅವಧಿಯನ್ನು ಮೂರು ವರ್ಷಗಳ ಅವಧಿಗೆ ಅಂದರೆ 2017-18 ರಿಂದ 2018-19ರವರೆಗೆ ವಿಸ್ತರಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ನಿರ್ಧರಿಸಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು ಇನ್ನು ಮುಂದೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ- ರೆಮ್ಯುನರೇಟಿವ್ ಅಪ್ರೋಚಸ್ ಫಾರ್ ಅಗ್ರಿಕಲ್ಚರ್ ಅಂಡ್ ಅಲೈಡ್ ಸೆಕ್ಟರ್ ರಿಜುವಿನೇಷನ್ ‘ಆರ್ಕೆವಿವೈ–ಆರ್ಎಎಫ್ಟಿಎಎಆರ್ ಎಂದು ಮರು ನಾಮಕರಣ ಮಾಡಿ ಅನುಷ್ಟಾನಗೊಳಿಸಲಾಗುವುದು. ಪರಿಷ್ಕೃತ ಯೋಜನೆಯ ಅಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಕೊಯ್ಲಿನ ನಂತರದ ಮೂಲಸೌಕರ್ಯಗಳನ್ನು ಇನ್ನಷ್ಟು ಸುಧಾರಿಸುವುದು, ಕೃಷಿ ಸಂಬಂಧಿತ ಉದ್ಯಮವನ್ನು ಉತ್ತೇಜಿಸುವುದು ಪ್ರಮುಖ ಉದ್ದೇಶವಾಗಿದೆ.
ಪ್ರಮುಖಾಂಶಗಳು:
- ಮುಂದಿನ ಮೂರು ವರ್ಷಗಳ ಅವಧಿಗೆ (2019–20ರವರೆಗೆ) ಈ ಯೋಜನೆಗಾಗಿ ಬಜೆಟ್ನಲ್ಲಿ ₹15,722 ಕೋಟಿ ಮೀಸಲಿಡಲಾಗಿದೆ.
- ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳನ್ನು ಬಿಟ್ಟು ಉಳಿದ ರಾಜ್ಯಗಳಿಗೆ ಈ ಯೋಜನೆಗೆ 60:40ರ ಅನುಪಾತದಲ್ಲಿ ಕೇಂದ್ರ ಸರ್ಕಾರ ಅನುದಾನ ಹಂಚಿಕೆ ಮಾಡಲಿದೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಈ ಪ್ರಮಾಣ 90:10ರ ಅನುಪಾತದಲ್ಲಿರಲಿದೆ.
- ಯೋಜನೆಗೆ ವಾರ್ಷಿಕವಾಗಿ ನೀಡುವ ಅನುದಾನದ ಶೇ 50ರಷ್ಟು ಅನುದಾನವನ್ನು ಮೂಲಸೌಕರ್ಯ ಕಲ್ಪಿಸಲು ಮತ್ತು ಆಸ್ತಿ ಸೃಜಿಸಲು ಹಾಗೂ ಶೇ 30ರಷ್ಟು ಅನುದಾನವನ್ನು ಮೌಲ್ಯವರ್ಧಿತ ಉತ್ಪನ್ನಗಳ ಸಂಬಂಧಿಸಿದ ಯೋಜನೆಗಳಿಗೆ ಮೀಸಲಾಡಗುವುದು.
- ಯೋಜನೆಗೆ ವಾರ್ಷಿಕವಾಗಿ ನೀಡುವ ಅನುದಾನದ ಶೇ20ರಷ್ಟು ಮೊತ್ತವನ್ನು (ಹೆಚ್ಚುವರಿಯಾಗಿ) ಇದರ ಅಡಿಯಲ್ಲಿ ಬರುವ ರಾಷ್ಟ್ರೀಯ ಆದ್ಯತೆಗಳ ಉಪ ಯೋಜನೆಗಳಿಗಾಗಿ ಕೇಂದ್ರ ಒದಗಿಸಲಿದೆ.
- ಶೇ10ರಷ್ಟು ಮೊತ್ತವನ್ನು ಕೃಷಿ ಆಧರಿತ ಉದ್ಯಮದ ಅಭಿವೃದ್ಧಿಗೆ, ಕೌಶಲ ಅಭಿವೃದ್ಧಿ, ಕೃಷಿ ಉದ್ಯಮ ಸ್ಥಾಪಿಸುವವರಿಗೆ ಹಣಕಾಸಿನ ನೆರವು ನೀಡುವುದಕ್ಕೆ ಬಳಸಲಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು 2008-09ನೇ ಸಾಲಿನಲ್ಲಿ ಪ್ರಾರಂಭಿಸಲಾಯಿತು. ಕೃಷಿ ವಲಯವನ್ನು ಬಲಪಡಿಸಿ ವಾರ್ಷಿಕ ಶೇ 4% ಬೆಳವಣಿಗೆ ಸಾಧಿಸುವುದು ಯೋಜನೆಯ ಪ್ರಮುಖ ಉದ್ದೇಶ. ಯೋಜನೆಯು ಹನ್ನೊಂದನೇ ಪಂಚವಾರ್ಷಿಕ ಯೋಜನೆಯಿಂದ ಜಾರಿಯಲ್ಲಿದೆ. ಕೃಷಿಯಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ ಯೋಜನೆಗಳು ಮತ್ತು ಯೋಜನೆಗಳಲ್ಲಿ ಪಾಲ್ಗೊಳ್ಳುವಲ್ಲಿ ರಾಜ್ಯಗಳಿಗೆ ಗಣನೀಯ ನಮ್ಯತೆ ಮತ್ತು ಸ್ವಾಯತ್ತತೆಯನ್ನು ಇದು ಒದಗಿಸಿದೆ.
ಭಾರತ ಮತ್ತು ಕಝಾಕಿಸ್ತಾನ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸ ಪ್ರಬಲ ದೋಸ್ತಿಕ್ ಪ್ರಾರಂಭ
ಭಾರತ ಮತ್ತು ಕಝಾಕಿಸ್ತಾನ್ ನಡುವಿನ ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮ “ಪ್ರಬಲ್ ದೋಸ್ತಿಕ್ – 2017” ಹಿಮಾಚಲ ಪ್ರದೇಶದ ಬಕ್ಲೊದಲ್ಲಿ ಆರಂಭಗೊಂಡಿದೆ. ‘ಪ್ರಬಲ್ ದೋಸ್ತಿಕ್’ ಎಂದರೆ ದೃಢವಾದ ಸ್ನೇಹ ಎಂದರ್ಥ.
ಉಭಯ ದೇಶಗಳ ನಡುವೆ ನಡೆಯುತ್ತಿರುವ ಎರಡನೇ ಮಿಲಿಟರಿ ಸಮರಾಭ್ಯಾಸ ಇದಾಗಿದೆ. ಪ್ರಬಲ ದೋಸ್ತಿಕ್ ಅಭ್ಯಾಸದ ಮೊದಲ ಆವೃತಿ ಕಝಾಕಸ್ತಾನದ ಕರಗಂಡದಲ್ಲಿ ಸೆಪ್ಟೆಂಬರ್ 2016ರಲ್ಲಿ ನಡೆದಿತ್ತು.
- ಹದಿನಾಲ್ಕು ದಿನ ನಡೆಯುವ ಜಂಟಿ ತರಬೇತಿಯಲ್ಲಿ ದ್ವಿಪಕ್ಷೀಯ ಸೇನಾ ಸಂಬಂಧಗಳು ಮತ್ತು ಭಾರತ ಹಾಗೂ ಕಝಾಕಿಸ್ತಾನ್ ನಡುವೆ ಕೌಶಲ್ಯ ವಿನಿಮಯ ಮತ್ತು ಅನುಭವಗಳನ್ನು ಹಂಚಿಕೆಗಳನ್ನು ವೇದಿಕೆ ಕಲ್ಪಿಸಲಿದೆ.
- ಅಲ್ಲದೇ ಎರಡು ದೇಶಗಳ ನಡುವೆ ಸೇನಾ ಸಂಬಂಧವನ್ನು ಉತ್ತಮಗೊಳಿಸಲು ಇದು ಸಹಕಾರಿಯಾಗಲಿದೆ.
- ತರಬೇತಿಯಲ್ಲಿ ಭಾರತೀಯ ಸೇನೆಯ 11 ನೇ ಗೂರ್ಖಾ ರೈಫಲ್ಸ್ ಪಡೆಗಳು ಮತ್ತು ಕಝಾಕಿಸ್ತಾನ್ ಸೈನ್ಯದ ಸರಿ ಸಮಾನ ತುಕಡಿಗಳು ಭಾಗವಹಿಸಲಿವೆ.
- ಭಯೋತ್ಪಾದಕತೆ ಹತ್ತಿಕ್ಕುವುದು, ಒಳನುಸುಳುವಿಕೆ ತಡೆಯುವ ಕಾರ್ಯಾಚರಣೆ ಬಗ್ಗೆ ತರಭೇತಿ ನೀಡಲಾಗುವುದು.
ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳೊಂದಿಗೆ ನೈಜ ಸಮಯದ ಕಡಲ ಮಾಹಿತಿ ಹಂಚಿಕೊಳ್ಳಲು ಭಾರತ ಸಿದ್ದ
10 ಹಿಂದೂ ಮಹಾಸಾಗರ ಸಮುದ್ರ ತೀರದ 10 ರಾಷ್ಟ್ರಗಳೊಂದಿಗೆ ನೈಜ ಸಮಯದಲ್ಲಿ ಹಿಂದೂ ಮಹಾಸಾಗರದಲ್ಲಿ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲು ಭಾರತ ಸಿದ್ದವಿದೆ ಎಂದು ಭಾರತೀಯ ನೌಕಪಡೆಯ ಮುಖ್ಯಸ್ಥ ಸುನೀಲ್ ಲಂಬಾರವರು ಗೋವಾ ಮೆರಿಟೈಮ್ ಸಮಾವೇಶದಲ್ಲಿ ಹೇಳಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಅಸ್ಥಿತ್ವವನ್ನು ಹೆಚ್ಚಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಒಂದು ಪ್ರಸ್ತಾಪವನ್ನು ಮಾಡಿದೆ.
ಪ್ರಮುಖಾಂಶಗಳು:
- ವಾಣಿಜ್ಯ ಸಂಚಾರ ಮತ್ತು ಗುಪ್ತಚರ ಚಲನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಮಾಹಿತಿ ಹಂಚಿಕೆಯು ಸಾಂಪ್ರದಾಯಿಕ ಮಿಲಿಟರಿ ಉದ್ದೇಶಗಳಿಗಾಗಿ ಅಲ್ಲದಿದ್ದರು ಸಮುದ್ರದಲ್ಲಿ ಸಂಭವಿಸಬಹುದಾದ ತೊಂದರೆಗಳನ್ನು ನಿವಾರಿಸಲು ಸಹಕಾರಿಯಾಗಲಿದೆ. ಈ
- ಭಾರತ ಈಗಾಗಲೇ ಈ ವಲಯದಲ್ಲಿನ ಹಲವಾರು ರಾಷ್ಟ್ರಗಳೊಂದಿಗೆ ಈ ಸಹಕಾರ ಒಪ್ಪಂದವನ್ನು ಹೊಂದಿದ್ದ, ಬೇರೆ ರಾಷ್ಟ್ರಗಳೊಂದಿಗೆ ವಿಸ್ತರಿಸುವ ಸಲುವಾಗಿ ಮುಂದಾಗಿದೆ.
ಉತ್ತರ ಪ್ರದೇಶದಲ್ಲಿ ಭಾರತದ ಮೊದಲ ಬ್ಲಾಕ್ ಬಕ್ (Blackbuck) ಸಂರಕ್ಷಣಾ ವಲಯ
ಭಾರತದ ಮೊದಲ ಬ್ಲಾಕ್ ಬಕ್ ಸಂರಕ್ಷಣಾ ವಲಯ ಉತ್ತರ ಪ್ರದೇಶದ ಅಲಹಬಾದ್ ಬಳಿ ಸ್ಥಾಪನೆಯಾಗಲಿದೆ. ಈ ಸಂಬಂಧ ಉತ್ತರ ಪ್ರದೇಶ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದೆ. ಬ್ಲಾಕ್ ಬಕ್ ಗಳ ಸಂರಕ್ಷಣೆಗಾಗಿ ಪ್ರತ್ಯೇಕವಾಗಿ ಮೀಸಲಿಡಲಾದ ಸಂರಕ್ಷಣಾ ವಲಯ ಇದಾಗಲಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಸೆಕ್ಷನ್ 36 ಎ (1) ಮತ್ತು (2) ರಡಿ ಸಂರಕ್ಷಣಾ ವಲಯವನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಪ್ರಮುಖಾಂಶಗಳು:
- ಕಲ್ಲು ಮತ್ತು ಶುಷ್ಕ ಭೂಪ್ರದೇಶಗಳಿಗೆ ಹೆಸರುವಾಸಿಯಾಗಿರುವ ಮೆಜ ಅರಣ್ಯ ವಿಭಾಗದ 126 ಹೆಕ್ಟೇರ್ ಪ್ರದೇಶದಲ್ಲಿ ಈ ಸಂರಕ್ಷಣಾ ವಲಯನ್ನು ಸ್ಥಾಪಿಸಲಾಗುವುದು. ಸುಮಾರು 350 ಬ್ಲಾಕ್ ಬಕ್ ಗಳು ಈ ಪ್ರದೇಶದಲ್ಲಿ ಇರುವುದಾಗಿ ಅಂದಾಜಿಸಲಾಗಿದೆ.
- ಇದರಿಂದ ಬ್ಲಾಕ್ ಬಕ್ಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಲು ಸಹಾಯವಾಗಲಿದೆ. ಇದರ ಜೊತೆಗೆ ಜೀವವೈವಿಧ್ಯತೆ ಸಂರಕ್ಷಣೆ ಹಾಗೂ ಅದಕ್ಕಾಗಿ ಜನರ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ.
- ಜೊತೆಗೆ ಪರಿಸರ-ಪ್ರವಾಸೋದ್ಯಮವನ್ನು ಉತ್ತೇಜಿಸುವದರೊಂದಿಗೆ ಸ್ಥಳೀಯರಿಗೆ ಉದ್ಯೋಗದ ಅವಕಾಶಗಳು ದೊರೆಯಲಿವೆ.
ಬ್ಲಾಕ್ ಬಕ್:
ಇಂಡಿಯನ್ ಬ್ಲ್ಯಾಕ್ಬಕ್ (ಆಂಟಿಲೋಪ್ ಸೆರ್ವಿಕಾಪ್ರಾ) ಎಂಬುದು ಒಂದು ಜಿಂಕೆಯಾಗಿದ್ದು, ಅಂಟಿಲೋಪ್ ಕುಲದ ಬದುಕುಳಿದಿರುವ ಏಕೈಕ ಜೀವಿ. ಚಿರತೆಯ ನಂತರ ವೇಗವಾಗಿ ಓಡುವ ಎರಡನೇ ಪ್ರಾಣಿ ಇದಾಗಿದೆ. ಹುಲ್ಲುಗಾವಲು ಪ್ರದೇಶಗಳು ಮತ್ತು ಸ್ವಲ್ಪ ಅರಣ್ಯ ಪ್ರದೇಶಗಳಲ್ಲಿ ಬ್ಲ್ಯಾಕ್ಬಕ್ ಹೆಚ್ಚಾಗಿ ಕಾಣಬಹುದು. ನೀರು ಹೆಚ್ಚಾಗಿ ಬೇಕಾಗಿರುವುದರಿಂದ ದೀರ್ಘಕಾಲದವರೆಗೆ ನೀರು ಲಭ್ಯವಿರುವ ಪ್ರದೇಶಗಳಲ್ಲಿ ಹೆಚ್ಚು ಆದ್ಯತೆಯನ್ನು ನೀಡುತ್ತವೆ. ಇವುಗಳು ಕೇಂದ್ರ ಪಶ್ಚಿಮ ಭಾರತ (ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಮತ್ತು ಒಡಿಶಾ) ಮತ್ತು ದಕ್ಷಿಣ ಭಾರತ (ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ)ದಲ್ಲಿ ಕಂಡುಬರುತ್ತವೆ.
ವನ್ಯಜೀವಿ ಕಾಯಿದೆ-1972ರ ಭಾಗ 1 ರಲ್ಲಿ ಬ್ಲಾಕ್ ಬಕ್ ಭೇಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ರಾಜಸ್ತಾನದ ಬಿಷ್ಣೋಯ್ ಸಮುದಾಯ ಬ್ಲಾಕ್ ಬಕ್ ಮತ್ತು ಚಿಂಕಾರಗಳ ಸಂರಕ್ಷಣೆಗೆ ವಿಶ್ವಮನ್ನಣೆ ಗಳಿಸಿದೆ.
- ಗಿರೀಶ್ ಕಾರ್ನಾಡ್ ಅವರಿಗೆ 2017 ಟಾಟಾ ಲೈವ್ ಜೀವಮಾನ ಸಾಧನೆ ಪ್ರಶಸ್ತಿ: ಹಿರಿಯ ನಟ ಹಾಗೂ ನಾಟಕ ರಚನೆಗಾರ ಗಿರೀಶ್ ಕಾರ್ನಾಡ್ ಅವರಿಗೆ 2017 ಟಾಟಾ ಲಿಟರೇಚರ್ ಲೈವ್! ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿ ಲಭಿಸಿದೆ.
- ಭಾರತದ ಪಾಕಿಸ್ತಾನ ಹೈಕಮೀಷನರ್ ಆಗಿ ಅಜಯ್ ಬಿಸಾರಿಯಾ ನೇಮಕ: ಹಿರಿಯ ರಾಯಭಾರಿ ಅಜಯ್ ಬಿಸಾರಿಯಾ ಪಾಕಿಸ್ತಾನಕ್ಕೆ ಭಾರತದ ಹೈ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಗೌತಮ್ ಬಾಂಬಾವಾಲೆ ಅವರು ಚೀನಾದ ರಾಯಭಾರಿಯಾಗಿ ನೇಮಕಗೊಂಡ ಕಾರಣ ಬಿಸಾರಿಯಾ ಅವರನ್ನು ಪಾಕಿಸ್ತಾನದ ಹೈಕಮೀಷನರ್ ಆಗಿ ನೇಮಕ ಮಾಡಲಾಗಿದೆ.
usefull website
nice
Nice
This website is useful to rural and kannada medium students,nice
This is amazing website for competitive students
Comment