ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,2,3,2017
Question 1 |
1. ಭಾರತ ಇತ್ತೀಚೆಗೆ International Maritime Organisation Council (IMO) ಗೆ ಮರು ಚುನಾಯಿತವಾಗಿದೆ. IMOನ ಪ್ರಧಾನ ಕಚೇರಿ ಎಲ್ಲಿದೆ?
ನ್ಯೂಯಾರ್ಕ್ | |
ಬರ್ಲಿನ್ | |
ಲಂಡನ್ | |
ವಾರ್ಸಾ |
ಲಂಡನ್ ಭಾರತವು ಡಿಸೆಂಬರ್ 1, 2017 ರಂದು ಲಂಡನ್ನ ಪ್ರಧಾನ ಕಚೇರಿಯಲ್ಲಿ ನಡೆದ ಸಂಘಟನೆಯ ಸಭೆಯಲ್ಲಿ ವರ್ಗ B ಯ ಅಡಿಯಲ್ಲಿ International Maritime Organisation Council (IMO) ಗೆ ಮರು ಚುನಾಯಿತವಾಗಿದೆ. ಭಾರತೀಯ ಹೈ ಕಮಿಷನರ್, ಯು.ಕೆ ಸಿನ್ಹಾ ಅವರು ಅಸೆಂಬ್ಲಿಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಜರ್ಮನಿಯ 146 ಮತಗಳ ನಂತರದ ಸದಸ್ಯ ರಾಷ್ಟ್ರಗಳಲ್ಲಿ ಭಾರತವು ಎರಡನೇ ಅತಿ ಹೆಚ್ಚು 144 ಮತಗಳನ್ನು ಪಡೆದುಕೊಂಡಿದೆ.
Question 2 |
2. 2017 ರಲ್ಲಿ ಕೋನಾರ್ಕ್ ನೃತ್ಯ ಉತ್ಸವವು ಯಾವ ರಾಜ್ಯದಲ್ಲಿ ಪ್ರಾರಂಭವಾಯಿತು?
ಆಂದ್ರ ಪ್ರದೇಶ | |
ಒಡಿಶಾ | |
ಕೇರಳ | |
ಕರ್ನಾಟಕ |
ಡಿಸೆಂಬರ್ 1,2017 ರಂದು ಒಡಿಶಾದ ಕೋನಾರ್ಕ್ನ ಸೂರ್ಯ ದೇವಸ್ಥಾನದ ಹಿನ್ನೆಲೆಯಲ್ಲಿ ಕೋನಾರ್ಕ್ ನೃತ್ಯ ಉತ್ಸವವು ಪ್ರಾರಂಭವಾಯಿತು. ಇದು ಭಾರತದಲ್ಲಿ ನಡೆಯುವ ಅತಿ ದೊಡ್ಡ ನೃತ್ಯ ಉತ್ಸವಗಳಲ್ಲಿ ಒಂದಾಗಿದೆ.
Question 3 |
3. ಭಾರತೀಯ ಬಾಕ್ಸಿಂಗ್ಗಾಗಿ ರಾಷ್ಷ್ರೀಯ ವೀಕ್ಷಕ (National Observer) ರಾಗಿ ಯಾರು ರಾಜೀನಾಮೆ ನೀಡಿದ್ದಾರೆ?
ಅಖೀಲ್ ಕುಮಾರ್ | |
ಎಂ ಸಿ ಮೇರಿಕೋಮ್ | |
ವಿಕಾಸ್ ಕೃಷ್ಣ ಯಾದವ್ | |
ಮನ್ದೀಪ್ ಜಂಗ್ರಾ |
ಎಂ ಸಿ ಮೇರಿಕೋಮ್ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಬಾಕ್ಸರ್ ಎಂ. ಸಿ. ಮೇರಿಕೋಮ್ ತಮ್ಮ ರಾಜೀನಾಮೆಗಳನ್ನು ನ್ಯಾಷನಲ್ ಸ್ಪೋರ್ಟ್ಸ್ (National Observer) ಗೆ ಸಲ್ಲಿಸಿದ್ದಾರೆ. ಕ್ರಿಡಾ ಸಚಿವ ರಾಜವರ್ಧನ್ ಸಿಂಗ್ ರಾಠೋರ್ ಅವರು ಕ್ರಿಡಾಪಟುಗಳನ್ನು ಈ ಸ್ಥಾನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
Question 4 |
4. ಇನ್ಫೋಸಿಸ್ನ ಹೊಸ CEO ಮತ್ತು MD ಆಗಿ ಯಾರು ನೇಮಕಗೊಂಡಿದ್ದಾರೆ?
ಪ್ರವೀಣ್ ರಾವ್ | |
ವಿಶಾಲ್ ಸಿಕ್ಕ | |
ಎಸ್. ಡಿ. ಶಿಬುಲಾಲ್ | |
ಸಲೀಲ್ ಎಸ್ ಪರೇಖ್ |
ಸಲೀಲ್ ಎಸ್ ಪರೇಖ್ ಇನ್ಫೋಸಿಸ್ನ ಹೊಸ CEO ಮತ್ತು MD ಆಗಿ ಸಲೀಲ್ ಎಸ್ ಪರೇಖ್ ನೇಮಕಗೊಂಡಿದ್ದಾರೆ. ಅವರು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಮಾಸ್ಟರ್ ಆಪ್ ಇಂಜಿನಿಯರಿಂಗ್ ಪದವಿಗಳನ್ನು ಹೊಂದಿದ್ದಾರೆ. ಮತ್ತು ಬಾಂಬೆಯ Indian Institute of Technology (IIT)ಯಲ್ಲಿ ಏರೋನ್ಯಾಟಿಕಲ್ ಇಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಆಪ್ ಟೆಕ್ನಾಲಜಿ ಪದವಿ ಪಡೆದಿದ್ದಾರೆ.
Question 5 |
5. ಯಾವ ರಾಜ್ಯ ಸರ್ಕಾರವು ಅಂಗವಿಕಲ (Persons with Disabilities) ರಿಗೊಸ್ಕರ ವಿಶ್ವದ ಮೊದಲ ಐಟಿ ಕ್ಯಾಂಪಸ್ ಅನ್ನು ಸ್ಥಾಪಿಸಿತು? ಅ)ಉತ್ತರ ಪ್ರದೇಶ
ಉತ್ತರ ಪ್ರದೇಶ | |
ತೆಲಂಗಾಣ | |
ಪಂಜಾಬ್ | |
ಒಡಿಶಾ |
ತೆಲಂಗಾಣ ತೆಲಂಗಾಣ ರಾಜ್ಯ ಸರ್ಕಾರವು ವಿಶ್ವದಲ್ಲೇ ಮೊದಲ ಐಟಿ ಕ್ಯಾಂಪಸ್ ಅನ್ನು ಅಂಗವಿಕಲರಿಗೊಸ್ಕರ ಸ್ಥಾಪಿಸಿತು. World Disability Day (WDD) ಸಂದರ್ಭದಲ್ಲಿ, ರಾಜ್ಯ ಸರ್ಕಾರ ಮಾಹಿತಿ ಮತ್ತು ತಂತ್ರಜ್ಞಾನ (IT) ಶಿಬಿರವನ್ನು ಸ್ಥಾಪಿಸಲು ವಿಂಧ್ಯಾ E-Infomedia Private Limited ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
Question 6 |
6. ಉತ್ತರ ಕೊರಿಯಾದ nuclear effortsಗಳಲ್ಲಿ UN Security Council (UNSC) ನ ಸಚಿವ ಸಭೆಯನ್ನು ಯಾವ ದೇಶವು ನಡೆಸುತ್ತದೆ?
ಜಪಾನ್ | |
ಯುನೈಟೆಡ್ ಸ್ಟೇಟ್ಸ್ (US) | |
ರಷ್ಯಾ | |
ಫ್ರಾನ್ಸ್ |
ಜಪಾನ್ ಜಪಾನ್ UN Security Council (UNSC)ನ ಸಚಿವ ಸಭೆಯನ್ನು ಡಿಸೆಂಬರ್ 15 ರಂದು ನಡೆಸಲಿದೆ. ಉತ್ತರ ಕೊರಿಯಾವು ತನ್ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳನ್ನು ತಡೆಗಟ್ಟಲು ಮತ್ತು ಪರ್ಯಾಯ ದ್ವೀಪವನ್ನು ಅಣ್ವಸ್ತ್ರಗೊಳಿಸುವುದಕ್ಕೆ ಶಾಂತಿಯುತ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಗಮನಹರಿಸಲಿದೆ.
Question 7 |
7. 2017 ರ ಅಂತರರಾಷ್ಟ್ರೀಯ ದಿನದ ವಿಕಲಾಂಗತೆಯ ಧೇಯವೇನು?
ಎಲ್ಲರೂ ಸಮರ್ಥನೀಯ ಮತ್ತು ಚೇತರಿಸಿಕೊಳ್ಳುವ ಸಮಾಜದ ಕಡೆಗೆ ರೂಪಾಂತರಗೊಳ್ಳುವುದು | |
ಯೋಗ್ಯ ಕೆಲಸ | |
ನಮ್ಮ ಸ್ವಂತ ಧ್ವನಿ | |
ಎಲ್ಲರಿಗೊಸ್ಕರ ಕೆಲಸ ಮಾಡುವ ಮಾಹಿತಿ ತಂತ್ರಜ್ಞಾನ (IT) |
ಎಲ್ಲರೂ ಸಮರ್ಥನೀಯ ಮತ್ತು ಚೇತರಿಸಿಕೊಳ್ಳುವ ಸಮಾಜದ ಕಡೆಗೆ ವಿಕಲಾಂಗ(Persons with Disabilities) ವ್ಯಕ್ತಿಗಳ ಅಂತರರಾಷ್ಟ್ರೀಯ ದಿನವನ್ನು ಡಿಸೆಂಬರ್ 3 ರಂದು ಪ್ರತಿರ್ಷವೂ ಆಚರಿಸಲಾಗುತ್ತದೆ. ಸಮಾಜದ ಮತ್ತು ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿನ ಅಸಮರ್ಥತೆ ಹೊಂದಿರುವ ವ್ಯಕ್ತಿಗಳ ಹಿತಾಸಕ್ತಿ ಮತ್ತು ರಾಜಕೀಯದ ಪ್ರತಿಯೊಂದು ಅಂಶದಲ್ಲಿ ಅಸಮರ್ಥತೆಯನ್ನು ಹೊಂದಿರುವ ವ್ಯಕ್ತಿಗಳ ಪರಿಸ್ಥಿತಿ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
Question 8 |
8. ಕೀನ್ಯಾ ಗಣರಾಜ್ಯದ ಹೊಸ ಅಧ್ಯಕ್ಷರಾಗಿ ಯಾರು ಪ್ರಮಾಣವಚನ ಸ್ವೀಕರಿಸಿದರು?
ಅಬುಬಾ ಡಿಡಾ | |
ವಿಲಿಯಂ ರುಟೊ | |
ಉಹುರು ಕೆನ್ಸಾಟ್ನಾ | |
ರೈಲ್ಯಾ ಒಡಿಂಗ |
ಉಹುರು ಕೆನ್ಸಾಟ್ನಾ ಉಹುರು ಕೆನ್ಸಾಟ್ನಾ ಅವರು ಕೀನ್ಯಾ ಗಣರಾಜ್ಯದ ಅಧ್ಯಕ್ಷರ ಹುದ್ದೆಗೆ ಎರಡನೇ ಮತ್ತು ಅಂತಿಮ ಐದು ವರ್ಷಗಳ ಅವಧಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು. ಅನೇಕ ಮುಖ್ಯಸ್ಥರು ಮತ್ತು ಸಾವಿರಾರು ಬೆಂಬಲಿಗರು 28 ನೇ, ನವೆಂಬರ್ 2017 ರಂದು ರಾಜಧಾನಿ ನೈರೋಬಿಯ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Question 9 |
9. ನವ ದೆಹಲಿಯ ಷೇರು ಹಂಚಿಕೆ ಶೃಂಗಸಭೆ (S.V.S-2017)ಯ ಮುಖ್ಯ ಅತಿಥಿ ಯಾರು?
ಸುರೇಶ್ ಪ್ರಭು | |
ನರೇಂದ್ರ ಮೋದಿ | |
ಸ್ಮೃತಿ ಇರಾನಿ | |
ರಾಜ್ನಾಥ ಸಿಂಗ್ |
ಸುರೇಶ್ ಪ್ರಭು ಡಿಸೆಂಬರ್ 1 ರಂದು ಹೊಸದಿಲ್ಲಿಯಲ್ಲಿ ಷೇರು ಹಂಚಿಕೆ ಶೃಂಗಸಭೆ(S.V.S-2017) ಗೆ ಸುರೇಶ್ ಪ್ರಭು ಅವರು ಮುಖ್ಯ ಅತಿಥಿಯಾಗಿದ್ದರು. ಅವರು ಉದ್ಯಮಿ ಮತ್ತು ವಾಣಿಜ್ಯ ಕೇಂದ್ರ ಸಚಿವರಾಗಿದ್ದರು.
Question 10 |
10. ಜೆನ್ನಿ ಕಿಮ್ ಮಿಸ್ ಸುಪರ್ನ್ಯಾಷನಲ್ 2017ರ ಸ್ಪರ್ದೆಯ ಕಿರೀಟವನ್ನು ಪಡೆದಳು. ಅವರು ಯಾವ ದೇಶದವರಾಗಿದ್ದಾರೆ?
ಸರ್ಬಿಯಾ | |
ಸರ್ಬಿಯಾ | |
ಇಥಿಯೋಪಿಯಾ | |
ದಕ್ಷಿಣ ಕೊರಿಯಾ |
ದಕ್ಷಿಣ ಕೊರಿಯಾ ಪೋಲೆಂಡ್ನ ಕ್ರಿನಿಕಾ-ಝಡ್ರೋಜ್ನಲ್ಲಿ ಡಿಸೆಂಬರ್ 1, 2017 ರಂದು ನಡೆದ ಮಿಸ್ ಸುಪರ್ನ್ಯಾಷನಲ್ ಸೌಂದರ್ಯ ಸ್ಪರ್ದೆಯಲ್ಲಿ ದಕ್ಷಿಣ ಕೊರಿಯಾದ ಜೆನ್ನಿ ಕಿಮ್ ಅವಳು ವಿಜೇತಳಾಗಿ ಕಿರೀಟವನ್ನು ಪಡೆದಳು. ಅವರು ಭಾರತದ 2016ರ ಮಿಸ್ ಸುಪರ್ನ್ಯಾಷನಲ್ನ ವಿಜೇತೆಯಾದ “ಶ್ರೀನಿಧಿ ರಮೇಶ್ ಶೆಟ್ಟಿ” ಅವರಿಂದ ಕಿರೀಟವನ್ನು ಪಡೆದರು.
[button link=”http://www.karunaduexams.com/wp-content/uploads/2017/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
November full month Gk quiz and current affairs i needed
Yes.
So nice for cet
Importants.