ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,9,10,2017

Question 1

1. ಯಾವ ದೇಶವು “ಬೋಧಿ ಪರ್ವ: BIMSTEC Festival of Buddhist Heritage” ಅನ್ನು ಆಯೋಜಿಸುತ್ತಿದೆ?

A
ನೇಪಾಳ
B
ಚೀನಾ
C
ಭಾರತ
D
ಮ್ಯಾನ್ಮಾರ್
Question 1 Explanation: 
ಭಾರತ

BIMSTEC ನ 20 ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ, ಡಿಸೆಂಬರ್ 8 ರಿಂದ 10, 2017 ರ ವರೆಗೆ “ಬೋಧಿ ಪರ್ವ: BIMSTEC Festival of Buddhist Heritage” ಅನ್ನು ಭಾರತವು ಆಯೋಜಿಸುತ್ತಿದೆ. ಈ ಉತ್ಸವದ ಉದ್ದೇಶವು, BIMSTEC ನ ಶ್ರೀಮಂತ ಮತ್ತು ಸಾಮಾನ್ಯ ಪರಂಪರೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಹೆಚ್ಚಿಸುವುದಾಗಿದೆ. ಇದನ್ನು ಸಾಂಸ್ಕೃತಿಕ ರಾಜ್ಯ ಸಚಿವರಾದ ಡಾ, ಮಹೇಶ್ ಶರ್ಮಾ ಅವರು ಉದ್ಘಾಟಿಸಿದರು.

Question 2

2. ಭಾರತದ ಮೊದಲ ಮೋಬೈಲ್ ಆಹಾರ ಪರೀಕ್ಷಾ ಪ್ರಯೋಗಾಲಯವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?

A
ಗೋವಾ
B
ಉತ್ತರ ಪ್ರದೇಶ
C
ಪಂಜಾಬ್
D
ಮಹಾರಾಷ್ಟ್ರ
Question 2 Explanation: 
ಗೋವಾ

ಭಾರತದ ಮೊದಲ ಮೋಬೈಲ್ ಆಹಾರ ಪರೀಕ್ಷಾ ಪ್ರಯೋಗಾಲಯವನ್ನು ಗೋವಾದಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ಆಹಾರ ಸುರಕ್ಷತೆಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದನ್ನು 2017ರ ಡಿಸೆಂಬರ್ 10 ರಂದು ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರಿಂದ ಅಧಿಕೃತವಾಗಿ ಪ್ರಾರಂಭಿಸಲಾಗಿದೆ.

Question 3

3. 2017ರ ಆದಿವಾಸಿ ಮಹೋತ್ಸವವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?

A
ಒಡಿಶಾ
B
ಕೇರಳ
C
ಮಣಿಪುರ
D
ಛತ್ತೀಸ್ಗಢ
Question 3 Explanation: 
ಛತ್ತೀಸ್ಗಢ

ಎರಡು ದಿನಗಳ ಆದಿವಾಸಿ ಮಹೋತ್ಸವವನ್ನು ಚತ್ತೀಸ್ಗಢದ ರಾಯಪುರನಲ್ಲಿ ಡಿಸೆಂಬರ್ 10, 2017 ರಂದು ಕೇಂದ್ರ ರಾಜ್ಯದ ಶ್ರೀಮಂತ ಮತ್ತು ವೈವಿಧ್ಯಮಯ ಬುಡಕಟ್ಟು ಸಂಪ್ರದಾಯಗಳನ್ನು ಪ್ರದರ್ಶಿಸಲು ಪ್ರಾರಂಭಿಸಲಾಗಿದೆ. ಇದನ್ನು ಯೂನಿಯನ್ ಬುಡಕಟ್ಟು ವ್ಯವಹಾರಳ ಸಚಿವ ಜುವಾಲ್ ಓರಮ್ ಮತ್ತು ಮುಖ್ಯಮಂತ್ರಿ ಡಾ. ರಾಮನ್ ಸಿಂಗ್ ಉದ್ಘಾಟಿಸಿದರು.

Question 4

4. ASEAN India Connectivity Summit (AICS) ಅನ್ನು ಆಯೋಜಿಸುವ ನಗರ ಯಾವುದು?

A
ಜೈಪುರ
B
ಇಂದೋರ್
C
ನವ ದೆಹಲಿ
D
ಕಾನ್ಪುರ್
Question 4 Explanation: 
ನವ ದೆಹಲಿ

ASEAN India Connectivity Summit (AICS) ಅನ್ನು ನವ ದೆಹಲಿಯಲ್ಲಿ ಡಿಸೆಂಬರ್ 11, 2017 ರಿಂದ ನಡೆಸಲಾಗುತ್ತದೆ. ಎರಡು ದಿನದ ಶೃಂಗಸಭೇಯ ವಿಷಯವು “Powering Digital and Physical Linkages for Asia in the 21st Century” ಯಾಗಿದೆ.

Question 5

5. 2017ರ ವಿಶ್ವ ಮಾನವ ಹಕ್ಕುಗಳ ದಿನದ (WHRD) ವಿಷಯ ಯಾವುದು?

A

ಇಂದು ಬೇರೊಬ್ಬರ ಹಕ್ಕುಗಳಿಗಾಗೆ ಎದ್ದುನಿಲ್ಲುವುದು.

B

ಸಮಾನತೆ, ನ್ಯಾಯ ಮತ್ತು ಮಾನವ ಘನತೆಗಾಗಿ ನಾವು ಎದ್ದು ನಿಲ್ಲುತ್ತೇವೆ.

C

ಮಾನವ ಹಕ್ಕುಗಳಿಗಾಗಿ ಎದ್ದು ನಿಲ್ಲುವುದು.

D

ಯಾವಾಗಲೂ ನಮ್ಮ ಹಕ್ಕುಗಳು, ನಮ್ಮ ಸ್ವಾತಂತ್ರ್ಯಗಳು

Question 5 Explanation: 

ಸಮಾನತೆ, ನ್ಯಾಯ ಮತ್ತು ಮಾನವ ಘನತೆಗಾಗಿ ನಾವು ಎದ್ದು ನಿಲ್ಲುತ್ತೇವೆ.

1948 ರಲ್ಲಿ ವಿಶ್ವಸಂಸ್ಥಯ ಜನರಲ್ ಅಸೆಂಬ್ಲಿ (UNGA) ಯು ಪ್ಯಾರಿಸ್ನಲ್ಲಿನ ಪ್ಯಾಲೈಸ್ ಡಿ ಚೈಲೊಟ್ನಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿತು. ಇದನ್ನು ಪ್ರತಿವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ ಮತ್ತು ಇದು ಪ್ರತಿ ವ್ಯಕ್ತಿಯ ಸಮಾನ ಘನತೆ ಮತ್ತು ಮೌಲ್ಯವನ್ನು ಸ್ಥಾಪಿಸುತ್ತದೆ.

Question 6

6. ಕಾಚಗುಡ ರೈಲ್ವೇ ನಿಲ್ದಾಣವು ಭಾರತದ ಮೊದಲ Energy-Efficient ‘A1 Category’ ನಿಲ್ದಾಣವೆಂದು ಘೋಷಿಸಲಾಗಿದೆ. ಇದು ಯಾವ ನಗರದಲ್ಲಿದೆ?

A
ಕೊಲ್ಕತ್ತಾ
B
ಕೊಚ್ಚಿ
C
ಹೈದರಾಬಾದ್
D
ಚೆನೈ
Question 6 Explanation: 
ಹೈದರಾಬಾದ್

ಹೈದರಾಬಾದ್ನ ಕಾಚುಗುಡ ರೈಲ್ವೇ ನಿಲ್ದಾಣವು ಭಾರತದ ಮೊದಲ Energy-Efficient ‘A1 Category’ ನಿಲ್ದಾಣವೆಂದು ಘೋಷಿಸಲಾಗಿದೆ ಇದನ್ನು ಭಾರತೀಯ ರೈಲ್ವೆಯ ದಕ್ಷಿಣ ಮಧ್ಯ ರೈಲ್ವೆ (SCR) ವಲಯವು ನಿರ್ವಹಿಸುತ್ತದೆ.

Question 7

7. ಸಾತ್ಪುರಾ ರಾಷ್ಟ್ರೀಯ ಉದ್ಯಾನ (SNP) ವು ಮಧ್ಯಪ್ರದೇಶದ ಯಾವ ಜಿಲ್ಲೆಯಲ್ಲಿದೆ?

A
ಇಂದೋರ್ ಜಿಲ್ಲೆ
B
ಚಿಂದ್ವಾರಾ ಜಿಲ್ಲೆ
C
ಹೋಶಂಗಾಬಾದ್ ಜಿಲ್ಲೆ
D
ಜಬಲ್ಪುರ್ ಜಿಲ್ಲೆ
Question 7 Explanation: 
ಹೋಶಂಗಾಬಾದ್ ಜಿಲ್ಲೆ

ಸಾತ್ಪುರಾ ರಾಷ್ಟ್ರೀಯ ಉದ್ಯಾನ (SNP) ವು ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯಲ್ಲಿದೆ ಮತ್ತು 524 ಚ.ಕಿ ಗಳಷ್ಟು ವ್ಯಾಪಿಸಿದೆ. ಇದು ಜೀವವೈವಿಧ್ಯದಲ್ಲಿ ಅತ್ಯಂತ ಶ್ರೀಮಂತವಾಗಿದೆ. ಇದು ಚಿರತೆ, ಸಾಂಬಾರ್, ಚಿಟಲ್, ಮುಳ್ಳುಹಂದಿ, ಹಾರುವ ಅಳಿಲು, ನೀಲ್ಗೆ , ಟಂಡು ಮತ್ತು ಹುಲ್ಲು, ಔಷಧೀಯ ಸಸ್ಯಗಳನ್ನು ಒಳಗೊಂಡಿದೆ.

Question 8

8. ಯಾವ ದೇಶವು 42 ನೇ participating State of Wassenaar Arrangement ಆಗಿ ಮಾರ್ಪಟ್ಟಿದೆ?

A
ಭಾರತ
B
ಆಸ್ಟ್ರೇಲಿಯಾ
C
ಜಪಾನ್
D
ಲಾಟ್ವಿಯಾ
Question 8 Explanation: 
ಭಾರತ

2017 ರ ಡಿಸೆಂಬರ್ 8 ರಂದು ವಿಯೆನ್ನಾದಲ್ಲಿ ಆಂತರಿಕ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಭಾರತವು 42 ನೇ ‘participating State of Wassenaar Arrangement’ ಆಗಿ ಮಾರ್ಪಟ್ಟಿದೆ. ಇದು ರಾಷ್ಟ್ರದ ರಕ್ಷಣಾ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸದಸ್ಯತ್ವವನ್ನು ಮತ್ತು ಉನ್ನತ- ತಂತ್ರಜ್ಞಾನದ ಸಂಬಂಧಗಳನ್ನು ಕಲ್ಪಿಸುತ್ತದೆ.

Question 9

9. ಭಾರತದ ಮಹಿಳಾ ಬಾಕ್ಸಿಂಗ್ಗೆ ಪ್ರದರ್ಶನ ನಿರ್ದೇಶಕರಾಗಿ ನೇಮಕಗೊಂಡ ರಫೇಲೆ ಬರ್ಗಮಾಸ್ಕೊ ಅವರು ಯಾವ ದೇಶದವರು?

A
ರಷ್ಯಾ
B
ಜಪಾನ್
C
ಇಟಲಿ
D
ಜರ್ಮನಿ
Question 9 Explanation: 
ಇಟಲಿ

ಹಿರಿಯ ಮಹಿಳಾ ಬಾಕ್ಸಿಂಗಾಗಿ ಇಟಾಲಿಯನ್ ತರಬೇತುದಾರರಾದ ರಫೇಲೆ ಬರ್ಗಮಾಸ್ಕೊ ಅವರನ್ನು ಕಾರ್ಯಕ್ಷಮತೆಯ ನಿರ್ದೇಶಕರಾಗಿ ನೇಮಕಮಾಡಲಾಗಿದೆ. ಇತ್ತೀಚೆಗೆ 2017 ರಲ್ಲಿ ನಡೆದ AIBA ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತವು ಅತ್ಯುತ್ತಮ ಪದಕಗಳನ್ನು ಪಡೆದ ದೇಶವಾಗಿದೆ. ಗುವಾಹಟಿಯಲ್ಲಿ ನಡೆದ ವಿಶ್ವ ಮಹಿಳಾ ಯುವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವು ಚಿನ್ನದ ಪದಕವನ್ನು ಪಡೆದಿದೆ.

Question 10

10. ಸಾರಿಗೆ ಯೋಜನೆಗಳಲ್ಲಿ ತಾಂತ್ರಿಕ ಸಹಕಾರಕ್ಕಾಗಿ German firm GIZ ನೊಂದಿಗೆ ಈ ಕೆಳಗಿನ ಯಾವ ಒಕ್ಕೂಟ ಇಲಾಖೆಯು ಒಪ್ಪಂದಕ್ಕೆ ಸಹಿ ಹಾಕಿದೆ?

A
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
B
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
C
ಗ್ರಾಮೀಣಾಭಿವೃದ್ಧಿ ಸಚಿವಾಲಯ
D
ಕುಡಿಯು ನೀರು ಮತ್ತು ನೈರ್ಮಲ್ಯ ಸಚಿವಾಲಯ
Question 10 Explanation: 

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

ಕೊಯಮತ್ತೂರು, ಭುವನೇಶ್ವರ ಮತ್ತು ಕೊಚ್ಚಿಗಳಲ್ಲಿ ಸಾರಿಗೆ ಯೋಜನೆಗಳ ಅನುಷ್ಠಾನದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಯೂನಿಯನ್ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (MoHUA) ವು ಜರ್ಮನ್ ಸಂಸ್ಥೆ GIZ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

There are 10 questions to complete.

[button link=”http://www.karunaduexams.com/wp-content/uploads/2017/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್9102017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,9,10,2017”

Leave a Comment

This site uses Akismet to reduce spam. Learn how your comment data is processed.