ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,11,2017

Question 1

1. ಮುಂಬೈಯಲ್ಲಿ “ವಿ ವಿಮೆನ್” (We The Women) ಕಾರ್ಯಕ್ರಮವನ್ನು ಯಾವ ಸಾಮಾಜಿಕ ಜಾಲತಾಣವು ಪ್ರಾರಂಭಿಸಿತು?

A
ಇನ್ಸ್ಟಾಗ್ರಾಮ
B
ಟ್ವಿಟರ್
C
ಫೇಸ್ಬುಕ್
D
ಸ್ಕೈಪ್
Question 1 Explanation: 
ಫೇಸ್ಬುಕ್

ನಮ್ಮ ಸಮಾಜದಲ್ಲಿ ಮಹಿಳಾ ಮಹತ್ವದ ಕೊಡುಗೆಗಳನ್ನು ಬಲಪಡಿಸಲು ಮತ್ತು ಗುರುತಿಸಲು 2017ರ ಡಿಸೆಂಬರ್ 9 ರಂದು ಮಹಾರಾಷ್ಟ್ರದ, ಮುಂಬೈನಲ್ಲಿ “ವಿ ವಿಮೆನ್” (We The Women) ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣವಾದ ‘ಫೇಸ್ಬುಕ್’ ಪ್ರಾರಂಭಿಸಿತು.

Question 2

2. MSME ಗಳಿಗಾಗಿ ಸಾರ್ವಜನಿಕ ಮಂತ್ರಿಮಂಡಲದ “MSME ಸಂಬಂಧ್” ಅನ್ನು ಕೆಳಗಿನ ಯಾವ ಕೇಂದ್ರ ಸಚಿವರು ಪ್ರಾರಂಭಿಸಿದ್ದಾರೆ?

A
ಸುರೇಶ್ ಪ್ರಭು
B
ಅರುಣ್ ಜೇಟ್ಲಿ
C
ಗಿರಿರಾಜ್ ಸಿಂಗ್
D
ಡಿ.ವಿ ಸದಾನಂದ ಗೌಡ
Question 2 Explanation: 
ಗಿರಿರಾಜ್ ಸಿಂಗ್

MSME ಗಳಿಗಾಗಿ ಸಾರ್ವಜನಿಕ ಮಂತ್ರಿಮಂಡಲದ “MSME ಸಂಬಂಧ್” ಅನ್ನು ಡಿಸೆಂಬರ್ 8, 2017ರಂದು ನವ ದೆಹಲಿಯಲ್ಲಿ, ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಅವರು ಪ್ರಾರಂಭಿಸಿದ್ದಾರೆ.

Question 3

3. ಘನ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು UNEP ಪಟ್ಟಿಯಿಂದ ಅಲ್ಲಪ್ಪುಝಾವನ್ನು ಅಗ್ರ 5 ಜಾಗತಿಕ ನಗರಗಳಲ್ಲಿ ಸೇರಿಸಲ್ಪಟ್ಟಿದೆ. ಇದು ಯಾವ ರಾಜ್ಯದಲ್ಲಿದೆ?

A
ಕರ್ನಾಟಕ
B
ತಮಿಳುನಾಡು
C
ಕೇರಳ
D
ಗೋವಾ
Question 3 Explanation: 
ಕೇರಳ

ಘನ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು UNEP ಪಟ್ಟಿಯಿಂದ ಅಲ್ಲಪ್ಪುಝಾವನ್ನು ಅಗ್ರ 5 ಜಾಗತಿಕ ನಗರಗಳಲ್ಲಿ ಸೇರಿಸಲ್ಪಟ್ಟಿದೆ. ಈ ಅಲ್ಲಪ್ಪುಝಾವು ಭಾರತದ ಕೇರಳ ರಾಜ್ಯದಲ್ಲಿದೆ.

Question 4

4. ಭಾರತೀಯ DNA fingerprinting ನ ತಂದೆಯಾದ ಲಾಲ್ಜಿ ಸಿಂಗ್ ಇತ್ತೀಚ್ಚೆಗೆ ನಿಧನಹೊಂದಿದ್ದಾರೆ. ಅವರು ಈ ಕೆಳಗಿನ ಯಾವ ರಾಜ್ಯದವರು?

A
ಕರ್ನಾಟಕ
B
ಉತ್ತರ ಪ್ರದೇಶ
C
ಕೇರಳ
D
ಗೋವಾ
Question 4 Explanation: 
ಉತ್ತರ ಪ್ರದೇಶ

ಭಾರತೀಯ DNA fingerprinting ನ ತಂದೆಯಾದ ಲಾಲ್ಜಿ ಸಿಂಗ್ ಇತ್ತೀಚ್ಚೆಗೆ ನಿಧನಹೊಂದಿದ್ದಾರೆ. ಅವರು ಉತ್ತರ ಪ್ರದೇಶದವರಾಗಿದ್ದರು. ಅವರು ಡಿಸೆಂಬರ್ 10, 2017 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಿಧನ ಹೊಂದಿದ್ದಾರೆ

Question 5

5. 2018ರ ಯೂತ್ ಒಲಿಂಪಿಕ್ ಗೇಮ್ಸ್ (YOG) ಗಾಗಿ ತನ್ನ ಮಹಿಳಾ ಕೋಟಾ ಸ್ಥಾನವನ್ನು ಪಡೆದುಕೊಂಡ ಮೆಹುಲಿ ಘೋಷ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದವರು?

A
ಸ್ಪ್ರಿಂಟ್
B
ವ್ರೆಸ್ಲಿಂಗ್
C
ಶೂಟಿಂಗ್
D
ಬಾಕ್ಸಿಂಗ್
Question 5 Explanation: 
ಶೂಟಿಂಗ್

ಭಾರತದ ಶೂಟರ್ ಗಳಾದ ಮೆಹುಲಿ ಘೋಷ್ ಮತ್ತು ತುಷಾರ್ ಮಾನೆ ಅವರು 2018 ರ ಯೂತ್ ಒಲಿಂಪಿಕ್ ಗೇಮ್ಸ್ (YOG) ಗೆ ಮಹಿಳಾ ಮತ್ತು ಪುರುಷರ ಕೋಟಾ ಸ್ಥಳಗಳನ್ನು ಭದ್ರಪಡಿಸಿಕೊಂಡಿದ್ದಾರೆ. ಅವರು ಜಪಾನ್ ನ ವಾಕೊ ಸಿಟಿಯಲ್ಲಿ ನಡೆದ 10 ನೇ ಏಷ್ಯನ್ ಚಾಂಪಿಯನ್ಷಿಪ್ನ 10M ರೈಫಲ್/ಪಿಸ್ತೂಲ್ನಲ್ಲಿ ಬಂಗಾರ ಮತ್ತು ಕಂಚು ಗೆಲ್ಲುವ ಮೂಲಕ ಈ ಸ್ಥಳಗಳನ್ನು ಭದ್ರಪಡಿಸಿಕೊಂಡಿದ್ದಾರೆ.

Question 6

6. Hockey World League (HWL-2017) ಪಂದ್ಯಾವಳಿಯಲ್ಲಿ ಯಾವ ದೇಶದ ತಂಡ ಕಂಚಿನ ಪದಕವನ್ನು ಗೆದ್ದಿದೆ?

A
ಜರ್ಮನಿ
B
ಭಾರತ
C
ಇಟಲಿ
D
ನೇಪಾಳ
Question 6 Explanation: 
ಭಾರತ

Hockey World League (HWL-2017) ಪಂದ್ಯಾವಳಿಯಲ್ಲಿ ಭಾರತದ ರಾಷ್ಟ್ರೀಯ ಹಾಕಿ ತಂಡವು ಕಂಚಿನ ಪದಕವನ್ನು ಗೆದ್ದಿದೆ. ಭಾರತವು, ಜರ್ಮನಿಯನ್ನು 2-1 ರಿಂದ ಒಡಿಶಾದ ಭುವನೇಶ್ವರನಲ್ಲಿ ಡಿಸೆಂಬರ್ 11, 2017 ರಲ್ಲಿ ಸೋಲಿಸುವ ಮೂಲಕ ಕಂಚಿನ ಪದಕವನ್ನು ಪಡೆದುಕೊಂಡಿದೆ.

Question 7

7. ಮೇಘಾಲಯದಲ್ಲಿ Liquified Petroleum Gas (LPG) bottling plant ನ್ನು ಸ್ಥಾಪಿಸಲು ಎಷ್ಟು ಮೊತ್ತವನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ?

A
ರೂ.75 ಕೋಟಿ
B
ರೂ.65 ಕೋಟಿ
C
ರೂ.85 ಕೋಟಿ
D
ರೂ95 ಕೋಟಿ
Question 7 Explanation: 
ರೂ.75 ಕೋಟಿ

ಮೇಘಾಲಯದಲ್ಲಿ Liquified Petroleum Gas (LPG) bottling plant ನ್ನು ಸ್ಥಾಪಿಸಲು ರೂ.75 ಕೋಟಿಯಷ್ಟು ಮೊತ್ತವನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ. ಶಿಲ್ಲಾಂಗ್ನ ಅಸ್ತಿತ್ವದಲ್ಲಿರುವ ಸೈಟ್ ನಲ್ಲಿ ಹೊಸ ಬಾಟಲಿಂಗ್ ಘಟಕವನ್ನು ನಿರ್ಮಿಸಲಾಗುವುದು.

Question 8

8. The Palpur-Kuno Wildlife Sanctuary (PKWLS) ಯು ಮಧ್ಯಪ್ರದೇಶದ ಯಾವ ಜಿಲ್ಲೆಯಲ್ಲಿದೆ?

A
ಬಾಲತ್ ಜಿಲ್ಲೆ
B
ಬಾಲಾಘಾಟ್ ಜಿಲ್ಲೆ
C
ಹೋಶಂಗಾಬಾದ್ ಜಿಲ್ಲೆ
D
ಶಿಯೋಪುರ್ ಜಿಲ್ಲೆ
Question 8 Explanation: 
ಶಿಯೋಪುರ್ ಜಿಲ್ಲೆ

Palpur-Kuno Wildlife Sanctuary (PKWLS) ಯು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿದೆ ಮತ್ತು ಇದು 900 ಚ.ಕಿ ಪ್ರದೇಶದಲ್ಲಿದೆ. ಇದು ಕಾಥಿಯಾವರ್-ಗಿರ್ ಶುಷ್ಕ ಪತನಶೀಲ ಕಾಡುಗಳಂತೆಯೇ ಇದರ ಪರಿಸರವು ಹೊಂದಿಕೊಂಡಿದೆ.

Question 9

9. World Trade Organization (WTO) ನ 11ನೇ ಮಂತ್ರಿಯ ಸಮಾವೇಶದಲ್ಲಿ ಭಾರತೀಯ ನಿಯೋಗವನ್ನು ಯಾರು ಮುನ್ನಡೆಸುತ್ತಿದ್ದಾರೆ?

A
ಸುರೇಶ ಪ್ರಭು
B
ನರೇಂದ್ರ ಮೋದಿ
C
ರಾಧಾ ಮೋಹನ್ ಸಿಂಗ್
D
ನರೇಂದ್ರ ಸಿಂಗ್ ತೋಮರ್
Question 9 Explanation: 
ಸುರೇಶ ಪ್ರಭು

World Trade Organization (WTO) ನ 11ನೇ ಮಂತ್ರಿಯ ಸಮಾವೇಶದಲ್ಲಿ ಭಾರತೀಯ ನಿಯೋಗವನ್ನು ಸುರೇಶ ಪ್ರಭು ಅವರು ಮುನ್ನಡೆಸುತ್ತಿದ್ದಾರೆ. 164 ಸದಸ್ಯರ World Trade Organization (WTO) ನ 11ನೇ ಮಂತ್ರಿಯ ಸಮಾವೇಶವು ಡಿಸೆಂಬರ್ 10, 2017 ರಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿ ಪ್ರಾರಂಭವಾಗಿದೆ.

Question 10

10. ‘ಟ್ರಕೋಮಾದಿಂದ ಮುಕ್ತವಾಗಿ’ ಎಂದು ಭಾರತವು ಘೋಷಿಸಿದೆ. ಈ ಟ್ರಕೋಮಾದಿಂದ ಮಾನವನ ಯಾವ ಭಾಗದಲ್ಲಿ ಸಾಂಕ್ರಾಮಿಕ ಬ್ಯಾಕ್ಟೀರಿಯಾದ ಸೋಂಕು ತಗಲುವುದು?

A
ಕಿವಿ
B
ಕಣ್ಣು
C
ಮೂಗು
D
ಕುತ್ತಿಗೆ
Question 10 Explanation: 
ಕಣ್ಣು

‘ಟ್ರಕೋಮಾದಿಂದ ಮುಕ್ತವಾಗಿ’ ಎಂದು ಭಾರತವು ಘೋಷಿಸಿದೆ. ಈ ಟ್ರಕೋಮಾದಿಂದ ಮಾನವನ ಕಣ್ಣಿನ ಭಾಗದಲ್ಲಿ ಸಾಂಕ್ರಾಮಿಕ ಬ್ಯಾಕ್ಟೀರಿಯಾದ ಸೋಂಕು ತಗಲುವುದು. ಇದು ಮುಚ್ಚಳಗಳ ಒಳಗಿನ ಮೇಲ್ಮೈಯಲ್ಲಿ ಉರಿಯುತ್ತಿರುವ ಕಣಕಣವನ್ನು ಉಂಟುಮಾಡುತ್ತದೆ.

There are 10 questions to complete.

[button link=”http://www.karunaduexams.com/wp-content/uploads/2017/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್112017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,11,2017”

  1. Sachin Godekar

    ಕೆ ಎ ಎಸ ಓದು ಪುಸ್ತಕಗಳು ಓದು ಸಲಹೆಯನ್ನು ನನ್ನಗೆ ತಿಳಿಸಿ ಸರ ನಿಮ್ಮಯಲ್ಲಿ ವಿನ್

    1. Sachin Godekar

      Comment

Leave a Comment

This site uses Akismet to reduce spam. Learn how your comment data is processed.