ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,13,2017
Question 1 |
1. ಬಾಂದವ್ ಗಡ್ ರಾಷ್ಟ್ರೀಯ ಉದ್ಯಾನವನ (UNP) ವು ಮಧ್ಯಪ್ರದೇಶದ ಯಾವ ಜಿಲ್ಲೆಯಲ್ಲಿದೆ?
ಉಮಾರಿಯಾ ಜಿಲ್ಲೆ | |
ಶಿವಪುರಿ ಜಿಲ್ಲೆ | |
ಸತ್ನಾ ಜಿಲ್ಲೆ | |
ಹೋಶಂಗಾಬಾದ್ ಜಿಲ್ಲೆ |
ಬಾಂದವ್ ಗಡ್ ರಾಷ್ಟ್ರೀಯ ಉದ್ಯಾನವನ (UNP) ವು ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿದೆ ಮತ್ತು 105 ಚ.ಕಿ ವಿಸ್ತೀರ್ಣವನ್ನು ಹೊಂದಿದೆ. ಈ ಉದ್ಯಾನವನವು ಪ್ರಪಂಚದಲ್ಲಿ ತಿಳಿದಿರುವ ಹಾಗೆ, ಬಂಗಾಳ ಹುಲಿಗಳ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿದೆ ಮತ್ತು ಇದು ದೊಡ್ಡ ಗಾತ್ರದ ಮತ್ತು ಸುಂದರವಾದ ಕೆಲವು ಪ್ರಸಿದ್ಧ ಹುಲಿಗಳಿಗೆ ನೆಲೆಯಾಗಿದೆ.
Question 2 |
2. Reserve Bank of India (RBI) ನ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
ಬಿ ಪಿ ಕಾನುಂಗ | |
ಮೀನಾ ಹೇಮಚಂದ್ರ | |
ಉಮಾ ಶಂಕರ್ | |
ದೀಪಾಲಿ ಪಂತ್ ಜೋಶಿ |
ಉಮಾ ಶಂಕರ್ ಅವರು Reserve Bank of India (RBI) ನ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ನವೆಂಬರ್ ಕೊನೆಯ ವೇಳೆಗೆ ನಿವೃತ್ತರಾದ ಮೀನಾ ಹೇಮಚಂದ್ರ ಅವರ ಬಳಿಕ ಉಮಾ ಶಂಕರ್ ಅವರನ್ನು ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಮಾಡಲಾಯಿತು.
Question 3 |
3. ಗುರ್ದೇವ್ ಸಿಂಗ್ ಗಿಲ್ ಈ ಕೆಳಗಿನ ಯಾವ ಕ್ರೀಡೆಯ ಆಟಗಾರರು?
ಹಾಕಿ | |
ವ್ರೆಸ್ಲಿಂಗ್ | |
ಬಾಕ್ಸಿಂಗ್ | |
ಫುಟ್ಬಾಲ್ |
ಗುರ್ದೇವ್ ಸಿಂಗ್ ಗಿಲ್ ಅವರು ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕರಾಗಿದ್ದರು. ಮತ್ತು ಅವರ ಕ್ರೀಡಾಕೂಟದ ಕೊಡುಗೆಗಾಗಿ, ಕೇಂದ್ರ ಕ್ರೀಡಾ ಸಚಿವ ಕರ್ನಲ್ ರಾಜವರ್ಧನ್ ಸಿಂಗ್ ರಾಥೋರ್ ಅವರು, ಗುರ್ದೇವ್ ಸಿಂಗ್ ಗಿಲ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅವರಿಗೆ ಶಾಲ್, ಮೆಮೆಂಟೋ ಮತ್ತು ರೂ. 500000/- ನೀಡಿ ಸನ್ಮಾನಿಸಲಾಯಿತು.
Question 4 |
4. ವಿಶ್ವಸಂಸ್ಥೆಯ ‘World Economic Situation and Prospects 2018’ ರ ವರದಿಯ ಪ್ರಕಾರ, 2018ಕ್ಕೆ ಭಾರತದ GDPಯ ಬೆಳವಣಿಗೆ ಎಷ್ಟು?
7.4% | |
7.2% | |
6.7% | |
7.6 % |
ವಿಶ್ವಸಂಸ್ಥೆಯ ‘World Economic Situation and Prospects 2018’ ರ ವರದಿಯ ಪ್ರಕಾರ, 2018ಕ್ಕೆ ಭಾರತದ GDPಯ ಬೆಳವಣಿಗೆ 7.2% ಮತ್ತು 2019 ರಲ್ಲಿ 7.9% ರಷ್ಟುಬಳವಣಿಗೆಯಾಗಲಿದೆ. ಮತ್ತು ಇದು ಬಲವಾದ ಖಾಸಗಿ ಬಳಕೆ, ಸಾರ್ವಜಿನಿಕ ಹೂಡಿಕೆ ಮತ್ತು ರಚನಾ ಸುಧಾರಣೆಗೆ ಕಾರಣವಾಗುತ್ತದೆ.
Question 5 |
5. ಅಲಹಾಬಾದ್ ಕುಂಭ ಮೇಳ 2019 ಗಾಗಿ, ಹೊಸ ಬಹು ಬಣ್ಣದ ಲೋಗೊವನ್ನು ಯಾರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ?
ರಾಮ್ ನಾಯ್ಕ್ | |
ರಾಮ್ ನಾಥ್ ಕೋವಿಂದ್ | |
ಯೋಗಿ ಆದಿತ್ಯನಾಥ್ | |
ನರೇಂದ್ರ ಮೋದಿ |
ಉತ್ತರ ಪ್ರದೇಶದ ಗವರ್ನರ್ ರಾಮ್ ನಾಯ್ಕ್ ಅವರು ಅಧಿಕೃತವಾಗಿ ಲಖನೌದ ಅಲಹಾಬಾದ್ ಕುಂಭ ಮೇಳ -2019 ಗಾಗಿ ಹೊಸ ಬಹು ಬಣ್ಣದ ಲೋಗೊವನ್ನು ಡಿಸೆಂಬರ್ 12, 2017 ರಂದು ಬಿಡುಗಡೆ ಮಾಡಿದ್ದಾರೆ.
Question 6 |
6. ಭಾರತದ ಮೊದಲ Electronic Manufacturing Cluster (EMC) ಯಾವ ರಾಜ್ಯದಲ್ಲಿ ಬರುತ್ತದೆ?
ಮಣಿಪುರ | |
ತೆಲಂಗಾಣ | |
ಕೇರಳ | |
ಆಂದ್ರ ಪ್ರದೇಶ |
ಆಂದ್ರ ಪ್ರದೇಶ ಸರ್ಕಾರವು ಭಾರತದ ಮೊದಲ Electronic Manufacturing Cluster (EMC) ನ್ನು ಸ್ಥಾಪಿಸಲು ಇತ್ತೀಚೆಗೆ ಭಾರತ ಸರ್ಕಾರ (GOI)ದಿಂದ ಅನುಮೋದನೆಯನ್ನು ಪಡೆದಿದೆ. ಇದಕ್ಕಾಗಿ ಅಂದಾಜು ರೂ. 104 ಕೋಟಿ ವೆಚ್ಚ ತಗಲುವುದು ಮತ್ತು ಇದರಿಂದ ಪರೋಕ್ಷವಾಗಿ 50,000 ಕ್ಕಿಂದ ಹೆಚ್ಚು ಉದ್ಯೋಗಗಳು ಸೃಷ್ಠಿಯಾಗಲಿವೆ.
Question 7 |
7. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧವನ್ನು ಪರೀಕ್ಷಿಸಲು ಯಾವ ರಾಜ್ಯ ಸರ್ಕಾರ “Safe City Surveillance” ಯೋಜನೆಯನ್ನು ಪ್ರಾರಂಭಿಸಿದೆ?
ತಮಿಳುನಾಡು | |
ಪಂಜಾಬ್ | |
ಬಿಹಾರ | |
ರಾಜಸ್ಥಾನ |
ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧವನ್ನು ಪರೀಕ್ಷಿಸಲು ಬಿಹಾರ ಸರ್ಕಾರ “Safe City Surveillance” ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಮೊದಲು ಪಡೆದುಕೊಳ್ಳುವದು, ಪಾಟ್ನಾ ಜಿಲ್ಲೇಯಾಗಿದೆ. ಮತ್ತು ಈ ಯೋಜನೆಗೆ ಅಂದಾಜು ರೂ. 110.68 ಕೋಟಿ ವೆಚ್ಚ ತಗುಲುವುದು.
Question 8 |
8. Dredging Corporation of India (DCI)ಯ ಕೇಂದ್ರ ಕಾರ್ಯಾಲಯ ಎಲ್ಲಿದೆ?
ಹೈದರಾಬಾದ್ | |
ಚೆನೈ | |
ವಿಶಾಖಪಟ್ಟಣಂ | |
ನವ ದೆಹಲಿ |
2017 ರ ಡಿಸೆಂಬರ್ 13 ರಂದು ಹೆದ್ದಾರಿಗಳ ನಿರ್ಮಾಣ ಕಾರ್ಯಕ್ಕಾಗಿ ಮರಳನ್ನು ಸರಬರಾಜು ಮಾಡಲು Dredging Corporation of India (DCI) ಮತ್ತು National Highways Authority of India (NHAI) ಯು ಒಂದು ಒಪ್ಪಂದಕ್ಕೆ (MoU) ಸಹಿ ಮಾಡಿದೆ.
Question 9 |
9. Federation of Indian Chamber of Commerce and Industry (FICCI) 90 ನೇ AGMನ ವಿಷಯವೇನು?
ಭಾರತೀಯ ಉದ್ಯಮ ಮತ್ತು ಅದರ ಪರಿಣಾಮಗಳು | |
ಇಂಡಿಯನ್ ಬಿಜಿನೆಸ್ ಇನ್ ಎ ನ್ಯೂ ಇಂಡಿಯಾ | |
GST ಗಾಗಿ ಭಾರತೀಯ ದೃಶ್ಯಾವಳೀ | |
Demonetization ನಂತರ ಭಾರತೀಯ ಉದ್ಯಮ |
ಇಂಡಿಯನ್ ಬಿಜಿನೆಸ್ ಇನ್ ಎ ನ್ಯೂ ಇಂಡಿಯಾ
2017 ರ ಡಿಸೆಂಬರ್ 13 ರಂದು ಪ್ರಧಾನ ಮಂತ್ರಿ ನರೇಂದ್ರ ಅವರು ಹೊಸದಿಲ್ಲಿಯಲ್ಲಿ ನಡೆದ Federation of Indian Chamber of Commerce and Industry (FICCI) ವಾರ್ಷಿಕ ಸಾಮಾನ್ಯ ಸಭೆಯ (AGM) ನ 90 ನೇ ಆವೃತ್ತಿಯನ್ನು ಪ್ರಾರಂಭಿಸಿದರು.
Question 10 |
10. ತುರ್ತು ಪರಿಸ್ಥಿತಿಯಲ್ಲಿ ಜೈಲುಗಳಲ್ಲಿ ನಡೆದ ರಾಜಕೀಯ ಖೈದಿಗಳನ್ನು “ಲೋಕಂತ್ ಸೈನ್ಯನಿ” ಎಂದು ಗುರುತಿಸಲು ಯಾವ ರಾಜ್ಯ ಸರ್ಕಾರ ನಿರ್ಧರಿಸಿದೆ?
ಮಧ್ಯ ಪ್ರದೇಶ | |
ಉತ್ತರ ಪ್ರದೇಶ | |
ಒಡಿಶಾ | |
ರಾಜಸ್ಥಾನ |
1975-77 ರಲ್ಲಿ ‘ಲೋಕಂತ್ ಸೈನ್ಯನಿ’ ಎಂದು ತುರ್ತು ಪರಿಸ್ಥಿತಿಯಲ್ಲಿ ಜೈಲುಗಳಲ್ಲಿ ನಡೆದ ರಾಜಕೀಯ ಖೈದಿಗಳನ್ನು ರಾಜಸ್ಥಾನ ಸರ್ಕಾರ ಗುರುತಿಸಿದೆ.
[button link=”http://www.karunaduexams.com/wp-content/uploads/2017/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್132017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment