ನಾಸಾದಿಂದ GOLD  ಮತ್ತು ICON ಮಿಷನ್

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಭೂಮಿಯ ಮೇಲಿನ 60 ಮೈಲುಗಳಷ್ಟು (96 ಕಿ.ಮೀ.) ಪ್ರದೇಶವನ್ನು ಅನ್ವೇಷಿಸಲು GOLD ಮತ್ತು ICON ಎಂಬ ಎರಡು ಮಿಷನ್ ಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಜನವರಿ 2018 ರಲ್ಲಿ Global-scale Observations of the Limb and Disk (GOLD) ಅನ್ನು ಮತ್ತು Ionospheric Connection Explorer (ICON) ಅನ್ನು ಈ ವರ್ಷದ ಕೊನೆಯ ಭಾಗದಲ್ಲಿ ಆರಂಭಿಸಲಿದೆ.

ಮಿಷನ್ ಬಗ್ಗೆ:

GOLD & ICON ಮಿಷನ್ ಗಳು ವಾತಾವರಣದ ಅಯಾನುಗೋಳವನ್ನು ಅಧ್ಯಯನ ನಡೆಸಲು ವಿನ್ಯಾಸಗೊಳಿಸಲಾಗುತ್ತಿದೆ. ಅಯಾನುಗೋಳವು ಮಧ್ಯಗೋಳದ ನಂತರ ಇರುವ ವಾತಾವರಣದ ಪದರವಾಗಿದೆ. ಇದು ಅಯಾನು ಅಥವಾ ಆವೇಶಭರಿತ ಕಣಗಳಿಂದ ಆಗಿದೆ. ಆದ್ದರಿಂದ ರೇಡಿಯೂ ಪ್ರಸರಣಕ್ಕೆ ಈ ವಲಯ ಸಹಕರಿಸುತ್ತದೆ. ಇದರಿಂದ ವಿಮಾನಗಳು, ಹಡಗುಗಳು ಮತ್ತು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ ಉಪಗ್ರಹಗಳನ್ನು ಸುಲಭವಾಗಿ ಕಾರ್ಯನಿರ್ವಹಿಸಬಹುದಾಗಿದೆ.

ಮಿಷನ್ ಉದ್ದೇಶ:

ಚಂಡಮಾರುತಗಳು ಮತ್ತು ಭೂಕಾಂತೀಯ ಬಿರುಗಾಳಿಗಳಿಗೆ ಪ್ರತಿಕ್ರಿಯೆಯಾಗಿ ಮೇಲಿನ ವಾತಾವರಣವು ಹೇಗೆ ಬದಲಾಗುತ್ತದೆ ಎಂಬುದನ್ನು ಅಧ್ಯಯ ಮಾಡುವುದು ಮಿಷನ್ ಉದ್ದೇಶ. ಭೂಮಿಯ ಮೇಲಿನ ವಾಯುಮಂಡಲವು ಭೂಕಾಂತೀಯ ಬಿರುಗಾಳಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಸಹ GOLD ಸಂಶೋಧನೆ ನಡೆಸಲಿದೆ.

ಸುರೇಶ್ ಪ್ರಭು ಅಧ್ಯಕ್ಷತೆಯಲ್ಲಿ ಕೌನ್ಸಿಲ್ ಫಾರ್ ಟ್ರೇಡ್ ಡೆವಲಪ್ಮೆಂಟ್ ಅಂಡ್ ಪ್ರೋಮೋಷನ್  ಸಭೆ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ರವರು ಇತ್ತೀಚೆಗೆ “ಕೌನ್ಸಿಲ್ ಫಾರ್ ಟ್ರೇಡ್ ಡೆವೆಲಪ್ಮೆಂಟ್ ಅಂಡ್ ಪ್ರಮೋಷನ್” ನ 3 ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೌನ್ಸಿಲ್ ಫಾರ್ ಟ್ರೇಡ್ ಡೆವಲಪ್ಮೆಂಟ್ ಅಂಡ್ ಪ್ರೋಮೋಷನ್:

ವಿದೇಶಿ ವ್ಯಾಪಾರ ನೀತಿ ಹೇಳಿಕೆ 2015-20 ರ ನಿಬಂಧನೆಗಳ ಅನುಸಾರ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ ಸಚಿವ ನೇತೃತ್ವದಲ್ಲಿ ಕೌನ್ಸಿಲ್ ಫಾರ್ ಟ್ರೇಡ್ ಡೆವಲಪ್ಮೆಂಟ್ ಅಂಡ್ ಪ್ರೋಮೋಷನ್ ಅನ್ನು 2015 ಜುಲೈನಲ್ಲಿ ಸ್ಥಾಪಿಸಲಾಗಿದೆ.

ಉದ್ದೇಶ:

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಮಾತುಕತೆಯನ್ನು ಆಯೋಜಿಸುವ ಮೂಲಕ ಅಂತರರಾಷ್ಟ್ರೀಯ ವ್ಯಾಪಾರ ಸುಗಮಗೊಳಿಸುವುದು ಮತ್ತು ದೇಶದ ರಫ್ತುಗಳನ್ನು ಉತ್ತೇಜಿಸುವಲ್ಲಿ ರಾಜ್ಯಗಳು ಸಕ್ರಿಯ ಭಾಗವಹಿಸಲು ಚೌಕಟ್ಟನ್ನು ರೂಪಿಸುವುದು.

ರಚನೆ:

ವಾಣಿಜ್ಯ ಮತ್ತು ಕೈಗಾರಿಕೆಗಳ ರಾಜ್ಯ ಸಚಿವರಗಳು, ಸಂಬಂಧಪಟ್ಟ ಕೇಂದ್ರ ಇಲಾಖೆಗಳು / ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಇತರ ರಫ್ತು ಸಂಬಂಧಿತ ಸಂಸ್ಥೆಗಳು / ವ್ಯಾಪಾರ ಸಂಸ್ಥೆಗಳ ಮುಖ್ಯಸ್ಥರು ಮಂಡಳಿಯ ಸದಸ್ಯರಾಗಿದ್ದಾರೆ.

ಕೇಂದ್ರೀಯ ಜಲ ಆಯೋಗಕ್ಕೆ ಸಿಬಿಐಪಿ ವಿಶೇಷ ಪ್ರಶಸ್ತಿ

ಕೇಂದ್ರೀಯ ಜಲ ಆಯೋಗಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಇರಿಗೇಷನ್ ಅಂಡ್ ಪವರ್ (ಸಿಬಿಐಪಿ) ವಿಶೇಷ ಸಾಧನೆ ಪ್ರಶಸ್ತಿ 2018 ಲಭಿಸಿದೆ. ದೊಡ್ಡ ಅಣೆಕಟ್ಟುಗಳ ಬಾಳಿಕೆ ಮತ್ತು ಸುರಕ್ಷತೆಗಾಗಿ ಈ ಪ್ರಶಸ್ತಿ ಲಭಿಸಿದೆ.

            ವಿಶ್ವ ಬ್ಯಾಂಕಿನ ನೆರವಿನಿಂದ ಅಣೆಕಟ್ಟಿನ ಪುನರ್ವಸತಿ ಮತ್ತು ಸುಧಾರಣೆ ಯೋಜನೆ (DRIP) ಮೂಲಕ ಭಾರತದ ಅತಿದೊಡ್ಡ ಅಣೆಕಟ್ಟುಗಳ ಬಾಳಿಕೆ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಕೇಂದ್ರೀಯ ಜಲ ಆಯೋಗ (ಸಿಡಬ್ಲ್ಯೂಸಿ) ನೀಡಿದ ಕೊಡುಗೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

DRIP?

ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಜಲ ಸಂಪನ್ಮೂಲ ಸಚಿವಾಲಯ ಆರು ಅಣೆಕಟ್ಟು ಪುನರ್ವಸತಿ ಮತ್ತು ಅಭಿವೃದ್ಧಿ ಯೋಜನೆ (ಡ್ರಿಪ್) ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದು ಆರು ವರ್ಷಗಳ ಯೋಜನೆಯಾಗಿದೆ. ಕೇಂದ್ರೀಯ ಜಲ ಆಯೋಗದ ಕೇಂದ್ರ ಅಣೆಕಟ್ಟು ಸುರಕ್ಷತಾ ಸಂಸ್ಥೆ, ಈ ಯೋಜನೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆ ಮಾಡುತ್ತಿದೆ.

            ಕೇರಳ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ 223 ಅಣೆಕಟ್ಟುಗಳ ಪುನರ್ವಸತಿ ಮತ್ತು ಸುಧಾರಣೆಗೆ ಯೋಜನೆಯನ್ನು ಜಾರಿಗೊಳಿಸಲಾಯಿತು. ಉತ್ತರಾಖಂಡ್ ಮತ್ತು ಜಾರ್ಖಂಡ್ ಯೋಜನೆಗೆ ಸೇರ್ಪಡೆಗೊಳ್ಳುವ ಮೂಲಕ ಅಣೆಕಟ್ಟುಗಳ ಸಂಖ್ಯೆ 250ಕ್ಕೆ ಏರಿಕೆಯಾಯಿತು. ಅಣೆಕಟ್ಟು ಸುರಕ್ಷತೆಗೆ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸುವುದು,  ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಅಣೆಕಟ್ಟಿನ ಸುರಕ್ಷತೆ ಮೌಲ್ಯಮಾಪನ ಮತ್ತು ಅನುಷ್ಠಾನಕ್ಕೆ ಸಾಂಸ್ಥಿಕ ಸಂಸ್ಥೆಗಳು, ದೇಶದ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಸಾಮರ್ಥ್ಯಗಳನ್ನು ಸುಧಾರಿಸುವುದು ಯೋಜನೆಯ ಗುರಿ.

ಕೇಂದ್ರೀಯ ಜಲ ಆಯೋಗ:

ಕೇಂದ್ರೀಯ ಜಲ ಆಯೋಗವು ಜಲ ಸಂಪನ್ಮೂಲಗಳ ಕ್ಷೇತ್ರದಲ್ಲಿ ಭಾರತದ ಪ್ರಮುಖ ತಾಂತ್ರಿಕ ಸಂಸ್ಥೆಯಾಗಿದ್ದು, ಪ್ರಸ್ತುತ ಇದು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ, ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಹಕ್ಕಿ ಜ್ವರದ ಆತಂಕ

ಬೆಂಗಳೂರು ನಗರದ ದಾಸರಹಳ್ಳಿಯಲ್ಲಿ ಹಕ್ಕಿ ಜ್ವರ ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಪಶುಪಾಲನಾ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳು ಮುಂದುವರಿಸಿದ್ದು, ಕೇಂದ್ರ ಸರ್ಕಾರದ ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿ ವಿವಿಧ ಕೋಳಿಗಳ ಮಾದರಿಗಳನ್ನು ಪರೀಕ್ಷಿಸಿದೆ. ಸೋಂಕಿತ ಕೋಳಿ ಪೂರೈಸಿದ ಫಾರ್ಮ್ಗಳಿಂದ ಸಂಗ್ರಹಿಸಿದ್ದ 200 ಕೋಳಿಗಳ 12 ಮಾದರಿಗಳನ್ನು ಕೇಂದ್ರ ತಜ್ಞರ ತಂಡವು ಹೆಬ್ಬಾಳದ ಪಶುವೈದ್ಯಕೀಯ ಸಂಸ್ಥೆಯ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದು, ಸೋಂಕು ದೃಢಪಟ್ಟಿಲ್ಲ.

ಹಕ್ಕಿ ಜ್ವರ:

ಏವಿಯನ್ ಫ್ಲೂ ಅಥವಾ ಹಕ್ಕಿ ಜ್ವರ ಪಕ್ಷಿಗಳ ಸಾಂಕ್ರಾಮಿಕ ವೈರಾಣು ರೋಗವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಗಂಭೀರ ರೋಗವನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿದೆ. ಹೆಚ್ಚಿನ ಇನ್ಫ್ಲುಯೆನ್ಸ ವೈರಸ್ಗಳು ಮಾನವರಲ್ಲಿ ಸೋಂಕು ತರದಿದ್ದರು ಸಹ, A(H5N1) ಮತ್ತು A(H7N9) ಗಳು ಮಾನವರಲ್ಲಿ ರೋಗವನ್ನು ಉಂಟು ಮಾಡಬಲ್ಲದಾಗಿವೆ.

ರೋಗದ ಲಕ್ಷಣ:

ಜ್ವರ, ಕೆಮ್ಮು, ಗಂಟಲು ನೋವು, ಸ್ನಾಯು, ದೇಹ ನೋವು, ವಾಕರಿಕೆ ತೀವ್ರವಾದ ಉಸಿರಾಟದ ತೊಂದರೆಗಳು, ನ್ಯುಮೋನಿಯಾ, ಮತ್ತು ತೀವ್ರವಾದ ಉಸಿರಾಟ ತೊಂದರೆ.

ಅಸಿಯಾನ್-ಭಾರತ (ASEAN-INDIA) ಪ್ರವಾಸಿ ಭಾರತೀಯ ದಿವಸ

ವಾರ್ಷಿಕ ಅಸಿಯಾನ್ ಭಾರತ ಪ್ರವಾಸಿ ಭಾರತೀಯ ದಿವಾಸ್ ಅನ್ನು ಸಿಂಗಪುರದಲ್ಲಿ ಆಚರಿಸಲಾಗುತ್ತಿದೆ. ಸಿಂಗಪುರ ಮತ್ತು ಭಾರತದ ಪ್ರಮುಖ ನಾಯಕರು ಮತ್ತು ಉದ್ಯಮಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಆಗ್ನೇಯ ಏಷ್ಯಾದ ಅಭಿವೃದ್ದಿಗೆ ಭಾರತೀಯ ವಲಸೆ ಸಮುದಾಯದ ಕೊಡುಗೆ ಕುರಿತು ಚರ್ಚಿಸಲಾಗುವುದು.

ಕಾರ್ಯಕ್ರಮದ ಉದ್ದೇಶ: “ಭಾರತ ಮತ್ತು ಆಗ್ನೇಯ ಏಷ್ಯಾದ ನಡುವಿನ ಪ್ರಾಚೀನ ಮಾನವ, ಕಡಲ, ಸಾಂಸ್ಕೃತಿಕ, ವಾಣಿಜ್ಯ ಮತ್ತು ಧಾರ್ಮಿಕ ಸಂಬಂಧಗಳನ್ನು” ಪ್ರದರ್ಶಿಸುವುದು ಮತ್ತು ಎರಡು ಪ್ರದೇಶಗಳ ನಡುವೆ ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಹಕಾರವನ್ನು ಉತ್ತೇಜಿಸುವುದು.

ಥೀಮ್: “ಏನ್ಶಿಯಂಟ್ ರೂಟ್, ನ್ಯೂ ಜರ್ನಿ: ಡಯಾಸ್ಪೋರಾ ಇನ್ ದಿ ಡೈನಾಮಿಕ್ ಅಸಿನ್-ಇಂಡಿಯಾ ಪಾರ್ಟ್ನರ್ಶಿಪ್.

ಕಾರ್ಯಕ್ರಮದ ಮಹತ್ವ:

ಭಾರತ-ಅಸಿಯಾನ್ ಡೈಲಾಗ್ ಪಾರ್ಟನರ್ಷಿಪ್ನ 25ನೇ ವಾರ್ಷಿಕೋತ್ಸವದ ಸಮಯದಲ್ಲೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ನವದೆಹಲಿಯಲ್ಲಿ ಭಾರತ-ಅಸಿಯಾನ್ ಡೈಲಾಗ್ ಪಾರ್ಟನರ್ಷಿಪ್ ಶೃಂಗಸಭೆ ಜನವರಿ 25 ರಂದು ನಡೆಯಲಿದೆ. ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಅಸಿಯಾನ್ ನಾಯಕರನ್ನು ಮುಖ್ಯ ಅತಿಥಿಗಳಾಗಿ ಭಾರತದಿಂದ ಆಹ್ವಾನಿಸಲಾಗಿದೆ.

ಪ್ರವಾಸಿ ಭಾರತೀಯ ದಿವಸ:

ಭಾರತ ಅಭಿವೃದ್ಧಿಗೆ ವಿದೇಶಿ ಭಾರತೀಯ ಸಮುದಾಯದ ಕೊಡುಗೆಗಳನ್ನು ಗುರುತಿಸಲು ಪ್ರವಾಸಿ ಭಾರತೀಯ ದಿವಸವನ್ನು (ಪಿಬಿಡಿ) ಪ್ರತಿವರ್ಷ ಜನವರಿ 9 ರಂದು ಆಚರಿಸಲಾಗುತ್ತದೆ. 1915 ಜನವರಿ 9 ರಂದು ಮಹಾತ್ಮಾ ಗಾಂಧಿ ರವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದರು. ಆದ್ದರಿಂದ ಈ ದಿನವನ್ನು ಪ್ರವಾಸಿ ಭಾರತೀಯ ದಿವಸವೆಂದು ಆಚರಿಸಲು ನಿರ್ಧರಿಸಲಾಯಿತು.

ಚೂರು ಪಾರು:

  • ಲ್ಯಾಟೆ ಲೆವಿ (Latte Lavy): ಬಿಸಾಡಬಹುದಾದ ಕಾಫಿ ಕಪ್ ಬಳಕೆಯನ್ನು ತಡೆಯಲು ಬ್ರಿಟನ್ “ಲ್ಯಾಟೆ ತೆರಿಗೆ” ಯನ್ನು ಜಾರಿಗೆ ತಂದಿದೆ. ಮಾರಾಟವಾಗುವ ಪ್ರತಿ ಕಾಫಿಗೆ 50 ಸೆಂಟ್ಗಳಷ್ಟು ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮರುಬಳಕೆ ಮಾಡಬಹುದಾದ ಕಾಫಿ ಕಪ್ಗಳನ್ನು ಬಳಸಲು ಜನರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಬ್ರಿಟನ್ ನಲ್ಲಿ ಪ್ರತಿ ನಿಮಿಷ 500 ಕಾಫಿ ಕಪ್ಗಳನ್ನು ಎಸೆಯಲಾಗುತ್ತದೆ. ಹೆಚ್ಚಿನ ಕಪ್ಗಳು ಪ್ಲ್ಯಾಸ್ಟಿಕ್ ಅಥವಾ ಪಾಲಿಎಥಿಲೀನ್ನೊಂದಿಗೆ ಲ್ಯಾಮಿನೇಟ್ ಆಗಿರುವ ಕಾರಣ ಮರುಬಳಕೆ ಮಾಡಲಾಗುವುದಿಲ್ಲ.

  • ಅರುಣಾಚಲ ಪ್ರದೇಶದಲ್ಲಿ ದೇಶದ ಎರಡನೇ FTII : ಕೇಂದ್ರ ಸರ್ಕಾರವು ಅರುಣಾಚಲ ಪ್ರದೇಶದಲ್ಲಿ ದೇಶದ ಎರಡನೇ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್” ಸ್ಥಾಪಿಸಲಿದೆ. ಭಾರತದ ಮೊದಲ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ (ಎಫ್ಟಿಐಐ) ಅನ್ನು ಪುಣೆಯಲ್ಲಿ ಸ್ಥಾಪಿಸಲಾಗಿದೆ. ಇದು ಮಾಹಿತಿ ಮತ್ತು ಪ್ರಸರಣ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ.

3 Thoughts to “ಪ್ರಚಲಿತ ವಿದ್ಯಮಾನಗಳು -ಜನವರಿ,9,10,2018”

  1. rameshradder

    Comment

Leave a Comment

This site uses Akismet to reduce spam. Learn how your comment data is processed.