“ಹೈ ರಿಸ್ಕ್ ಪ್ರೆಗ್ನೆನ್ಸಿ ಪೋರ್ಟಲ್” ಆರಂಭಿಸಿದ ದೇಶದ ಮೊದಲ ರಾಜ್ಯ ಹರಿಯಾಣ
ಹರಿಯಾಣ ಸರ್ಕಾರ “ಹೈ ರಿಸ್ಕ್ ಪ್ರೆಗ್ನೆನ್ಸಿ (ಎಚ್ಆರ್ಪಿ) ಪೋರ್ಟಲ್ (High Risk Pregnancy Portal)” ಅನ್ನು ಪ್ರಾರಂಭಿಸಿದ್ದು, ಇಂತಹ ಪೋರ್ಟಲ್ ಜಾರಿಗೆ ತಂದ ದೇಶದ ಮೊದಲ ರಾಜ್ಯವೆನಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ನೀತಿ ಅಯೋಗ ಇದೊಂದು ಉತ್ತಮ ಕ್ರಮವೆಂದು ಬಣ್ಣಿಸಿದೆ.
ಪೋರ್ಟಲ್ ಬಗ್ಗೆ:
ಈ ವಿನೂತನ ವೆಬ್ ಅಪ್ಲಿಕೇಶನ್ ಹೆರಿಗೆಯಾದ 42 ದಿನಗಳ ವರೆಗೆ ಹೆಚ್ಚು ತೊಂದರೆಯಲ್ಲಿರುವ ಗರ್ಭಿಣಿ ಮಹಿಳೆಯರನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ, ಇದರಿಂದ ಗರ್ಭೀಣಿಯರು ಉತ್ತಮ ಆರೋಗ್ಯ ಹಾರೈಕೆಯನ್ನು ಪಡೆಯಲು ಅನುಕೂಲವಾಗಲಿದೆ. ಈ ಪೋರ್ಟಲ್ ನಿಂದ ಹೆಚ್ಚು-ಅಪಾಯಕಾರಿ ಗರ್ಭಿಣಿ ಪ್ರಕರಣಗಳನ್ನು ತಳಮಟ್ಟದಲ್ಲಿ ಮುಂಚಿತವಾಗಿ ಗುರುತಿಸುವುದಲ್ಲದೇ, ಆಸ್ಪತ್ರೆಗಳಿಗೆ ಸಕಾಲದಲ್ಲಿ ದಾಖಲಿಸಲು ಸುಲಭವಾಗಲಿದೆ.
ಹಿನ್ನಲೆ:
ಅಪಾಯಕಾರಿ ಗರ್ಭಧಾರಣೆಯ ಪ್ರಕರಣಗಳನ್ನು ಗುರುತಿಸಲು “ಹೈ ರಿಸ್ಕ್ ಪ್ರೆಗ್ನೆನ್ಸಿ” ನಿಯಮವನ್ನು ನವೆಂಬರ್, 2017 ರಿಂದ ರಾಜ್ಯದಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ಈ ಉಪಕ್ರಮವು ತಾಯಿಯಂದಿರ ಮರಣ ಪ್ರಮಾಣ (MMR), ಶಿಶು ಮರಣ ಪ್ರಮಾಣ (IMR) ಮತ್ತು ಗರ್ಭಪಾತದಂತಹ ಪ್ರಕರಣಗಳನ್ನು ತಡೆಯಲು ರೂಪಿಸಲಾಗಿದೆ.
ಗಲ್ಲು ಶಿಕ್ಷೆಗಿಂತ ಪರ್ಯಾಯ ಮಾರ್ಗ ಸದ್ಯಕ್ಕಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರ
ಮರಣದಂಡನೆ ಶಿಕ್ಷೆ ವಿಧಿಸಿದಾಗ ಗಲ್ಲುಶಿಕ್ಷೆ ಬದಲಾಗಿ ನೋವುರಹಿತ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಖೈದಿಗಳಿಗೆ ಗಲ್ಲುಶಿಕ್ಷೆ ಹೊರತಾಗಿ ಪ್ರಸ್ತುತ ಬೇರೆ ಯಾವುದೇ ಪರ್ಯಾಯ ವಿಧಾನವಿಲ್ಲವೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.
ಪರಾಮರ್ಶೆ ಅಗತ್ಯವೇನು?
ಅಪರಾಧಿಯು ಶಾಂತಿಯಿಂದ ಮತ್ತು ನೋವು ರಹಿತವಾಗಿ ಸಾಯಬೇಕು ಹಾಗೂ ಸಾವಿನ ಸಂದರ್ಭದಲ್ಲೂ ಮಾನವರ ಘನತೆಯನ್ನು ಗೌರವಿಸಬೇಕು ಎಂದು ಸುಪ್ರೀಂಕೋರ್ಟ್ ಭಾವಿಸಿತ್ತು. ಅಲ್ಲದೆ, ಗಲ್ಲುಶಿಕ್ಷೆ “ಅನಾಗರಿಕ, ಅಮಾನವೀಯ ಮತ್ತು ಕ್ರೂರ”ವಾದ ಶಿಕ್ಷೆ ವಿಧಾನ ಮತ್ತು ಇದು “ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್ (ಇಸಿಒಸಿಒಸಿ)” ಅಳವಡಿಸಿಕೊಂಡ ನಿರ್ಣಯಗಳಿಗೆ ವಿರುದ್ದ ಸಹ ಆಗಿದೆ. ಆದ್ದರಿಂದ ಗಲ್ಲುಶಿಕ್ಷೆಯ ಬದಲಿಗೆ ಪರ್ಯಾಯವಾದ ಶಿಕ್ಷೆಯ ಬಗ್ಗೆ ಚಿಂತಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಹಿನ್ನಲೆ:
ಮರಣ ಸಮಯದಲ್ಲಿ ಖೈದಿಗಳು ನರಳುವುದನ್ನು ತಡೆಯಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ರಿಟ್ ಅರ್ಜಿಯನ್ನು ಸಲ್ಲಿಸಿ ಮನವಿ ಮಾಡಲಾಗಿತ್ತು. ಮನವಿಯಲ್ಲಿ ಅವನ ಅಥವಾ ಅವಳ ಜೀವನ ಅಂತ್ಯದ ಸಮಯದಲ್ಲಿ ನೋವನ್ನು ಅನುಭವಿಸುವಂತೆ ಒತ್ತಾಯಿಸಬಾರದು ಎಂಬುದು ಅರ್ಜಿದಾರರ ವಾದ. ಒಬ್ಬ ವ್ಯಕ್ತಿಯನ್ನು ಮರಣದಂಡನೆಗೆ ನೇಣು ಹಾಕಿದಾಗ, ಅವನ ಘನತೆ ನಾಶವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿದಾರರು ಸಂವಿಧಾನದ 21ನೇ ವಿಧಿಯನ್ನು (ಜೀವಿಸುವ ಹಕ್ಕು) ಸಹ ಉಲ್ಲೇಖಿಸಿದ್ದಾರೆ ಮತ್ತು ಖೈದಿಗಳ ಸಾವು ಕೂಡ ಘನತೆಯಿಂದ ಹಾಗೂ ನೋವು ರಹಿತವಾಗಿರಬೇಕು ಎಂದು ವಿವರಿಸಲಾಗಿದೆ.
ಮರಣದಂಡನೆಯ ಸಂವಿಧಾನಾತ್ಮಕತೆ:
ಮರಣ ದಂಡನೆಯ ಸಂವಿಧಾನ ಮಾನ್ಯತೆಯು ದೀನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು 1980 ರಲ್ಲಿ ಬಚ್ಚನ್ ಸಿಂಗ್ ಕೇಸ್ನಲ್ಲಿ ಸೇರಿದಂತೆ ಈಗಾಗಲೇ ಸುಪ್ರೀಂಕೋರ್ಟ್ನಿಂದ ಈಗಾಗಲೇ ಮಾನ್ಯತೆ ಪಡೆದಿದೆ. ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ನ ಸೆಕ್ಷನ್ 354 (5)ರಡಿ ಗಲ್ಲುಶಿಕ್ಷೆಯನ್ನು ಕೋರ್ಟ್ ಎತ್ತಿಹಿಡಿದಿದೆ.
ಕಾನೂನು ಆಯೋಗದ ಅವಲೋಕನಗಳು:
ಕಾನೂನು ಆಯೋಗ ತನ್ನ 187ನೆಯ ವರದಿಯಲ್ಲಿ ಗಲ್ಲುಶಿಕ್ಷೆ ಮೂಲಕ ಮರಣದಂಡನೆ ವಿಧಾನವನ್ನು ಈಗಾಗಲೇ ಅನೇಕ ದೇಶಗಳು ರದ್ದುಗೊಳಿಸಿದ್ದು, ಗಲ್ಲುಶಿಕ್ಷೆ ಬದಲಾಗಿ ವಿದ್ಯುತ್ ಶಾಕಿಂಗ್, ಮಾರಕ ಚುಚ್ಚುಮದ್ದನ್ನು ಬಳಸುತ್ತಿವೆ ಎಂದು ವರದಿ ನೀಡಿದೆ. ಗಲ್ಲುಶಿಕ್ಷೆ ನಿಸ್ಸಂದೇಹವಾಗಿ ತೀವ್ರವಾದ ಚಿತ್ರಹಿಂಸೆ ಮತ್ತು ನೋವಿನಿಂದ ಕೂಡಿದೆ ಎಂದು ಆಯೋಗ ಹೇಳಿದೆ.
ಬ್ರಿಟನ್ ನಲ್ಲಿ “ಮೈಕ್ರೋಬೀಡ್ಸ್ (Microbeads)” ಮೇಲೆ ನಿಷೇಧ
ಮೈಕ್ರೋಬೀಡ್ಗಳನ್ನು ಒಳಗೊಂಡಿರುವ ಉತ್ಪನ್ನಗಳ ತಯಾರಿಕೆಯ ಮೇಲೆ ಬ್ರಿಟನ್ ನಿಷೇಧವನ್ನು ಹೇರಿದ್ದು, ಜನವರಿ 9 ರಿಂದ ಜಾರಿಗೆ ಬಂದಿದೆ. ತಯಾರಕರು ಇನ್ನು ಮುಂದೆ ಕಾಸ್ಮೆಟಿಕ್ ಮತ್ತು ಪರ್ಸನಲ್ ಕೇರ್ ಉತ್ಪನ್ನಗಳಲ್ಲಿ (ಸ್ಕ್ರಬ್ಸ್, ಶವರ್ ಜೆಲ್ ಮತ್ತು ಟೂತ್ ಪೇಸ್ಟ್) ಮೈಕ್ರೋಬೀಡ್ಸ್ ಗಳನ್ನು ಬಳಸುವಂತಿಲ್ಲ.
ಆದರೆ ಈ ನಿಷೇಧವು ಸನ್ಸ್ಕ್ರೀನ್ ಮತ್ತು ಮೇಕ್ಅಪ್ ಹೊರತಾಗಿದೆ. ಈ ಉತ್ಪನ್ನಗಳಲ್ಲಿ ಮೈಕ್ರೋಬೀಡ್ಗಳನ್ನು ಬಳಸಲು ಅನುಮತಿಸಲಾಗಿದೆ.
ಮೈಕ್ರೋಬೀಡ್ಸ್:
ಮೈಕ್ರೋಬೀಡ್ಸ್ ಗಳು ಅನೇಕ ಸೌಂದರ್ಯ ಉತ್ಪನ್ನಗಳಲ್ಲಿ ಕಂಡುಬರುವ ಸಣ್ಣ ಸಣ್ಣ ಪ್ಲಾಸ್ಟಿಕ್ ತುಂಡುಗಳಾಗಿವೆ, ಉದಾಹರಣೆಗೆ ಎಫ್ಫೋಲಿಯಾಟಿಂಗ್ ಸ್ಕ್ರಬ್ಗಳು, ಟೂತ್ ಪೇಸ್ಟ್ ಗಳಲ್ಲಿ ಇವುಗಳನ್ನು ಕಾಣಬಹುದು.
ಮೈಕ್ರೋಬೀಡ್ಸ್ ನಿಂದ ಪರಿಸರದ ಮೇಲಾಗುವ ತೊಂದರೆಗಳು:
ಅಧ್ಯಯನದ ಪ್ರಕಾರ ಮೈಕ್ರೋಬೀಡ್ಸ್ ಗಳು ಸ್ನಾನಗೃಹದಿಂದ ಸಮುದ್ರವನ್ನು ಸೇರಬಲ್ಲವು. ಲಕ್ಷಾಂತರ ಪುಟ್ಟ ಪುಟ್ಟ ಪ್ಲಾಸ್ಟಿಕ್ಗಳು ವಿಶ್ವದ ಸಾಗರಗಳು, ಸರೋವರಗಳು ಮತ್ತು ನದಿ ಮುಖಜ ಪ್ರದೇಶಗಳನ್ನು ಸೇರ್ಪಡೆಗೊಂಡು ಸಾಗರದಲ್ಲಿ ಜೀವವೈವಿಧ್ಯತೆಗೆ ಹಾನಿ ಮಾಡುತ್ತವೆ. ಅಲ್ಲದೇ ಮೈಕ್ರೋಬೀಡ್ಸ್ ಗಳು ಆಹಾರ ಸರಪಳಿಯನ್ನು ಸೇರಿ ವಿಷಯುಕ್ತಗೊಳಿಸುತ್ತವೆ.
- ಅಮೆರಿಕಾ, ನ್ಯೂಜಿಲ್ಯಾಂಡ್, ಕೆನಡಾ ಸೇರಿದಂತೆ ಐರೋಪ್ ಖಂಡದ ಅನೇಕ ರಾಷ್ಟ್ರಗಳಲ್ಲಿ ಮೈಕ್ರೋಬೀಡ್ಸ್ ಬಳಕೆ ಮೇಲೆ ನಿಷೇಧ ಹೇರಲಾಗಿದೆ.
ಬಿಹಾರದ ವಿವಿಧ ಸರಕಾರಿ ಕಟ್ಟಡಗಳ ಗೋಡೆಗಳ ಮೇಲೆ ಇಲ್ಲಿನ ಪ್ರಸಿದ್ದ ಮಧುಬನಿ ಜಾನಪದ ಚಿತ್ರಕಲೆಯನ್ನು ಚಿತ್ರಿಸಲು ಬಿಹಾರ ಸರ್ಕಾರ ಮುಂದಾಗಿದೆ. ಪ್ರವಾಸಿಗರಿಗೆ ಬಿಹಾರದ ಸಂಸ್ಕೃತಿಯೊಂದಿಗೆ ವರ್ಣಚಿತ್ರಗಳನ್ನು ಹೇಗೆ ಸಂಯೋಜಿಸಲಾಗಿದೆ ಎಂಬುದರ ಬಗ್ಗೆ ಅನುಭವವನ್ನು ನೀಡುವುದು ಈ ಕಲ್ಪನೆಯ ಹಿಂದಿನ ಉದ್ದೇಶ.
ಮಧುಬನಿ ಕಲೆ:
- ಮಧುಬನಿಕಲೆ ಅಥವ ಮಿಥಿಲ ಚಿತ್ರಕಲೆ ಭಾರತದ ಚಿತ್ರಕಲಾ ಶೈಲಿಗಳಲ್ಲಿ ಒಂದಾಗಿದೆ. ಬಿಹಾರ್ ರಾಜ್ಯದ ಮಿಥಿಲ ಪ್ರದೇಶದಲ್ಲಿ, ಭಾರತದ ಪಕ್ಕದಲ್ಲಿರುವ ನೆಪಾಳದ ತೆರಾಯಿನಲ್ಲಿ ಈ ಕಲೆ ಕಂಡು ಬರುತ್ತದೆ. ಚಿತ್ರಗಳನ್ನು ನೈಸರ್ಗಿಕ ವರ್ಣಗಳು ಮತ್ತು ವರ್ಣದ್ರವ್ಯಗಳನ್ನು ಬಳಸಿ, ಬೆರಳುಗಳು, ಕೊಂಬೆಗಳನ್ನು, ಕುಂಚ, ಮುಳ್ಳು-ಪೆನ್ನುಗಳು, ಮತ್ತು ಬೆಂಕಿ ಪೊಟ್ಟಣದ ಕಡ್ಡಿಯನ್ನು ಉಪಯೊಗಿಸಿ ಮಾಡಲಾಗುತ್ತದೆ.
- ಭರ್ನಿ, ಕಟ್ಚ್ನಿ, ತಂತ್ರಿಕ್, ಗಾಡ್ನಾ ಮತ್ತು ಕೋಬಾರ್ ಮಧುಬನಿ ಚಿತ್ರಕಲೆಯ ವಿವಿಧ ಶೈಲಿಗಳು. ಇವುಗಳನ್ನು ಐತಿಹಾಸಿಕವಾಗಿ ಜಾತಿ ಪದ್ದತಿಯ ಮೇಲುವರ್ಗದ ಮಹಿಳೆಯರಿಂದ ಮಾತ್ರ ಚಿತ್ರಿಸಲಾಗುವುದು,
ನ್ಯಾಷನಲ್ ಟ್ರಸ್ಟ್ ಕಾಯಿದೆ-1999 ತಿದ್ದುಪಡಿಗೆ ಕೇಂದ್ರ ಸಂಪುಟ ಒಪ್ಪಿಗೆ
ಆಟಿಸಂ, ಸೆರೆಬ್ರಲ್ ಪ್ಲಾಸಿ, ಬುದ್ದಿಮಾಂದ್ಯರು ಮತ್ತು ಬಹುವಿಧದ ಅಂಗವಿಕಲತೆಯಿಂದ ಬಳಲುತ್ತಿರುವ ಜನರ ಕಲ್ಯಾಣ ರಾಷ್ಟ್ರೀಯ ಟ್ರಸ್ಟ್ ಕಾಯಿದೆ-1999 ರ ಸೆಕ್ಷನ್ 4(1) ಮತ್ತು ಸೆಕ್ಷನ್ 5(1)ಕ್ಕೆ ತಿದ್ದುಪಡಿ ತರಲು ಕೇಂದ್ರ ಸಂಪುಟ ಅನುಮತಿ ನೀಡಿದೆ. ಟ್ರಸ್ಟ್ ನ ಮುಖ್ಯಸ್ಥರು ಮತ್ತು ಸದಸ್ಯರ ಅವಧಿಯನ್ನು ಮೂರು ವರ್ಷದ ಅವಧಿಗೆ ನಿಗದಿಪಡಿಸಿ ಅವಧಿಯಲ್ಲಿರುವವರು ದೀರ್ಘಕಾಲದ ವರೆಗೆ ಹುದ್ದೆಯಲ್ಲಿ ಮುಂದುವರೆಯುವದಕ್ಕೆ ಕಡಿವಾಣ ಹಾಕುವುದು ತಿದ್ದುಪಡಿಯ ಉದ್ದೇಶವಾಗಿದೆ.
ತಿದ್ದುಪಡಿಯ ಅವಶ್ಯಕತೆ?
ರಾಷ್ಟ್ರೀಯ ಟ್ರಸ್ಟ್ ಕಾಯಿದೆ, 1999 ರ ಸೆಕ್ಷನ್ 4 (1) ರ ಪ್ರಕಾರ, ಅಧ್ಯಕ್ಷರು ಅಥವಾ ರಾಷ್ಟ್ರೀಯ ಟ್ರಸ್ಟ್ ಮಂಡಳಿಯ ಸದಸ್ಯರು ಮೂರು ವರ್ಷಗಳ ಅವಧಿಯ ನಂತರವೂ ಉತ್ತರಾಧಿಕಾಗಿ ನೇಮಕ ಆಗುವವರೆಗೆ ಅಧಿಕಾರದಲ್ಲಿ ಮುಂದುವರೆಯಬಹುದಾಗಿದೆ. ಕಾಯಿದೆ ಸೆಕ್ಷನ್ 5 (1) ರ ಪ್ರಕಾರ ಟ್ರಸ್ಟ್ ಅಧ್ಯಕ್ಷರು ರಾಜೀನಾಮೆ ನೀಡಿದಾಗ ಅವರ ಉತ್ತರಾಧಿಕಾರಿಯನ್ನು ಸರ್ಕಾರದಿಂದ ನೇಮಕ ಮಾಡುವ ತನಕ ಅವರು ಅಧಿಕಾರದಲ್ಲಿ ಮುಂದುವರಿಯಬಹುದು. ಇದರಿಂದ ಸೂಕ್ತ ಉತ್ತರಾಧಿಕಾರಿ ನೇಮಕ ಆಗುವವರೆಗೂ ಅಧ್ಯಕ್ಷರು ದೀರ್ಘಕಾಲ ಹುದ್ದೆಯಲ್ಲಿ ಇರಬಹುದಾಗಿದೆ.
ರಾಷ್ಟ್ರೀಯ ಟ್ರಸ್ಟ್:
ರಾಷ್ಟ್ರೀಯ ಟ್ರಸ್ಟ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ, ವಿಕಲಚೇತನರ ಸಬಲೀಕರಣ ಇಲಾಖೆ, ಅಡಿಯಲ್ಲಿ ಒಂದು ಶಾಸನಬದ್ಧ ಸಂಸ್ಥೆಯಾಗಿದೆ. ವಿಕಲಚೇತನರು ಮತ್ತು ಅವರ ಕುಟುಂಬದವರ ಸಾಮರ್ಥ್ಯದ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸುವುದು, ಅವರ ಹಕ್ಕುಗಳನ್ನು ಪೂರ್ಣಗೊಳಿಸುವುದು, ಅವರ ಬೆಳವಣಿಗೆಗೆ ಸೂಕ್ತ ಪರಿಸರ ಸೃಷ್ಠಿಸುವ ಉದ್ದೇಶಕ್ಕಾಗಿ ರಾಷ್ಟ್ರೀಯ ಟ್ರಸ್ಟ್ ಅನ್ನು ಸ್ಥಾಪಿಸಲಾಯಿತು.
ರಾಷ್ಟ್ರೀಯ ಟ್ರಸ್ಟ್ ಕರ್ತವ್ಯ:
ರಾಷ್ಟ್ರೀಯ ಟ್ರಸ್ಟ್ ಕಾನೂನು ಮತ್ತು ಕಲ್ಯಾಣ ಸಂಬಂಧಿತ ಎರಡು ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ/ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಲೋಕಲ್ ಲೆವೆಲ್ ಕಮಿಟಿ (ಎಲ್ಎಲ್ ಸಿ) ಮೂಲಕ ಕಾನೂನು ಸಲಹೆ ಕರ್ತವ್ಯವನ್ನು ಒದಗಿಸುತ್ತಿದೆ. ಯೋಜನೆಗಳು ಮತ್ತು ಚಟುವಟಿಕೆಗಳ ಮೂಲಕ ಕಲ್ಯಾಣ ಕರ್ತವ್ಯಗಳನ್ನು ನೆರವೇರಿಸಲಾಗುತ್ತದೆ.
ಸಂಸದರ ಪ್ರದೇಶ ಅಭಿವೃದ್ದಿ ಯೋಜನೆ ಮುಂದುವರೆಸಲು ಸಂಪುಟ ಒಪ್ಪಿಗೆ
ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಯನ್ನು 14ನೇ ಹಣಕಾಸು ಯೋಜನೆ ಅಂತ್ಯದ ವರೆಗೆ ಅಂದರೆ 31.03.2020ರ ವರೆಗೆ ಮುಂದುವರೆಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆ (MPLAD)
ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಯನ್ನು 1993ರಲ್ಲಿ ಜಾರಿಗೆ ತರಲಾಗಿದೆ. ಬಾಳಿಕೆ ಬರುವ ಸಮುದಾಯ ಆಸ್ತಿಗಳ ಸೃಷ್ಟಿಗಾಗಿ ಮತ್ತು ಸ್ಥಳೀಯ ಮೂಲಭೂತ ಸೌಕರ್ಯಗಳ ಆಧಾರದ ಮೇಲೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಸಂಸದರು ಕಾಮಗಾರಿಗಳನ್ನು ಶಿಫಾರಸು ಮಾಡಲು ಯೋಜನೆಯನ್ನು ಜಾರಿಗೆ ತರಲಾಗಿದೆ.
- ಸ್ಥಳೀಯ ಅಗತ್ಯತೆಗಳ ಆಧಾರದ ಮೇಲೆ ಮತ್ತು ಸಾರ್ವಜನಿಕರ ಬಳಕೆಗೆ ಯಾವಾಗಲೂ ಲಭ್ಯವಾಗುವಂತ ಕಾಮಗಾರಿಗಳಿಗೆ ಯೋಜನೆಯಡಿಯಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗುವುದು. ಕುಡಿಯುವ ನೀರು, ಸಾರ್ವಜನಿಕ ಆರೋಗ್ಯ, ಶಿಕ್ಷಣ, ನೈರ್ಮಲ್ಯ, ರಸ್ತೆಗಳು ಮುಂತಾದವುಗಳನ್ನು ರಾಷ್ಟ್ರೀಯ ಆದ್ಯತೆಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಯೋಜನೆಯಡಿಯಲ್ಲಿ ಆದ್ಯತೆ ನೀಡಲಾಗಿದೆ.
- ಹಣವನ್ನು ನೇರವಾಗಿ ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಲಾಗುತ್ತದೆ. ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಹಣವು ಬಿಡುಗಡೆ ವರ್ಷ ಖರ್ಚು ಆಗದಿದ್ದರೆ ವ್ಯರ್ಥವಾಗುವುದಿಲ್ಲ ಬದಲಿಗೆ ಮುಂದಿನ ವರ್ಷದಲ್ಲಿ ಬಳಸಬಹುದು.
ಕಾಮಗಾರಿ ಶಿಫಾರಸ್ಸು:
ಲೋಕಸಭಾ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಕೆಲಸಗಳನ್ನು ಶಿಫಾರಸು ಮಾಡಬಹುದು. ರಾಜ್ಯಸಭೆಯ ಚುನಾಯಿತ ಸದಸ್ಯರು ತಾವು ಆಯ್ಕೆಯಾದ ರಾಜ್ಯದಲ್ಲಿ ಎಲ್ಲಿಯಾದರೂ ಶಿಫಾರಸು ಮಾಡಬಹುದು. ಲೋಕಸಭೆಯ ಮತ್ತು ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸದಸ್ಯರು ದೇಶದಲ್ಲಿ ಎಲ್ಲಿಯಾದರೂ ಅನುಷ್ಠಾನಕ್ಕಾಗಿ ಕೆಲಸಗಳನ್ನು ಆಯ್ಕೆ ಮಾಡಬಹುದು.
ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಮತ್ತಷ್ಟು ಸಡಿಲ
ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯಲ್ಲಿ ಹಲವಾರು ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದಲ್ಲಿ ವ್ಯವಹಾರವನ್ನು ಸುಲಭವಾಗಿಸಲು ಮತ್ತು ಸರಳಗೊಳಿಸುವ ಉದ್ದೇಶದಿಂದ ಎಫ್ಡಿಐ ನೀತಿಯನ್ನು ಉದಾರೀಕರಣಗೊಳಿಸಲಾಗಿದೆ. ಇದರಿಂದ ವಿದೇಶಿ ನೇರ ಬಂಡವಾಳ ಹೂಡಿಕೆ ಒಳಹರಿವು ಹೆಚ್ಚಾಗಲಿದ್ದು, ಹೂಡಿಕೆ, ಆದಾಯ ಮತ್ತು ಉದ್ಯೋಗಗಳ ಬೆಳವಣಿಗೆಗೆ ಕಾರಣವಾಗಲಿದೆ.
ಪ್ರಮುಖ ಬದಲಾವಣೆಗಳು:
- ಆಟೋಮ್ಯಾಟಿಕ್ ರೂಟ್ನಡಿ ಬರುವ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ.100ರಷ್ಟು ಎಫ್ಡಿಐ ಅವಕಾಶ.
- ನಿರ್ಮಾಣ ಕ್ಷೇತ್ರದಲ್ಲಿ ಶೇ 100 ರಷ್ಟು ಎಫ್ಡಿಐ ಅವಕಾಶ
- ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ಇಂಡಿಯಾದಲ್ಲಿ ಶೇ.49ರಷ್ಟು ಹೂಡಿಕೆ ಮಾಡಲು ವಿದೇಶಿ ವೈಮಾನಿಕ ಕಂಪೆನಿಗಳಿಗೆ ಅವಕಾಶ.
- ವೈದ್ಯಕೀಯ ಉಪಕರಣಗಳು ವ್ಯಾಖ್ಯಾನಕ್ಕೆ ತಿದ್ದುಪಡಿ
ಅಟೋಮ್ಯಾಟಿಕ್ ರೂಟ್?
ಆಟೋಮ್ಯಾಟಿಕ್ ವಿಧದಲ್ಲಿ ಹೆಚ್ಚಿನ ನಿಬಂಧನೆಗಳು ಇರುವುದಿಲ್ಲ. ಇದರಲ್ಲಿ, ವಿದೇಶಿ ಹೂಡಿಕೆದಾರರು ಅಥವಾ ಭಾರತದ ಕಂಪನಿ ಇಲ್ಲಿ ಹೂಡಿಕೆ ಮಾಡಲು ಆರ್ಬಿಐ ಅಥವಾ ಸರಕಾರದ ಅನುಮತಿ ಪಡೆಯಬೇಕಾಗಿಲ್ಲ. ಆದರೆ, ಸರಕಾರದ ಒಪ್ಪಿಗೆಯ ವಿಧದಲ್ಲಿ, ಇಲ್ಲಿ ಬಂಡವಾಳ ಹೂಡಬೇಕೆಂದರೆ, ವಿದೇಶಿ ಹೂಡಿಕೆದಾರರು ಸರಕಾರದಿಂದ ಪೂರ್ವಾನುಮತಿ ಪಡೆಯಬೇಕು.
ಟ್ರಾನ್ಸ್ಪೋರ್ಟ್ ಫಾರ್ ಲಂಡನ್ (TFL) ಜೊತೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಟ್ರಾನ್ಸ್ಪೋರ್ಟ್ ಫಾರ್ ಲಂಡನ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. TFL ಪರಿಣಿತಿಯೊಂದಿಗೆ ದೇಶದ ಸಾರ್ವಜನಿಕ ಸಾರಿಗೆ ವಿನ್ಯಾಸವನ್ನು ಪುನರುಜ್ಜೀವನಗೊಳಿಸಲು ಉದ್ದೇಶದಿಂದ ಒಡಂಬಡಿಕೆ ಒಪ್ಪಂದಕ್ಕೆ ಸಹಿಹಾಕಲಾಗಿದೆ.
ಪ್ರಸ್ತಾವಿತ ಒಡಂಬಡಿಕೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಸಮರ್ಥನೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ರಚಿಸುವ ಮೂಲಕ ಪ್ರಯಾಣಿಕರ ಸಾಮರ್ಥ್ಯವನ್ನು ವೃದ್ಧಿಸಲು ಸಹಾಯ ಮಾಡಲಿದೆ.
ಸಾರ್ವಜನಿಕ ಸಾರಿಗೆಯಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚಿಸುವುದು ಮತ್ತು ಡಿಜಿಟಲ್ ವಹಿವಾಟು ಮೂಲಕ ಟಿಕೆಟ್ ವಿತರಣಿ ಉತ್ತೇಜಿಸುವುದು ಒಪ್ಪಂದ ಭಾಗವಾಗಿದೆ.
ಆಧಾರ್ ಸೋರಿಕೆ ತಡೆಗೆ ವರ್ಚುಯಲ್ ಐಡಿ
ಆಧಾರ್ ನೋಂದಣಿ ಸಂದರ್ಭದಲ್ಲಿ ಸಂಗ್ರಹಿಸಲಾಗಿರುವ ನೋಂದಣಿದಾರರ ವೈಯಕ್ತಿಕ ವಿವರಗಳ ಸುರಕ್ಷತೆಗಾಗಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ‘ಪರ್ಯಾಯ ಗುರುತು ಸಂಖ್ಯೆ’ಯ (ವರ್ಚ್ಯುವಲ್ ಐಡಿ) ವಿನೂತನಪರಿಕಲ್ಪನೆಯನ್ನು ರೂಪಿಸಿದೆ.
ಪರ್ಯಾರ ಗುರುತು ಸಂಖ್ಯೆ:
ಆಧಾರ್ ಸಂಖ್ಯೆ ಹೊಂದಿರುವವರು ಯುಐಡಿಎಐ ವೆಬ್ಸೈಟ್ ನಿಂದ 16 ಸಂಖ್ಯೆಗಳ ಪರ್ಯಾಯ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬಹುದು. ಬಯೊಮೆಟ್ರಿಕ್ ವಿವರಗಳನ್ನು ಒಳಗೊಂಡಿರುವ ಈ ಗುರುತಿನ ಸಂಖ್ಯೆಯನ್ನು ಮೊಬೈಲ್ಗೆ ಆಧಾರ್ ಜೋಡಣೆಗೆ ಬಳಸಬಹುದು. ಹಾಗೆಯೇ, ಆಧಾರ್ ಜೋಡಣೆ ಮಾಡಬೇಕಿರುವ ವಿವಿಧ ಸೇವೆಗಳಿಗೂ ಇದನ್ನು ನೀಡಬಹುದು. ಅಲ್ಲದೆ, ಗುರುತು, ಭಾವಚಿತ್ರ, ವಿಳಾಸ ದೃಢೀಕರಣಕ್ಕೂ ಇದನ್ನು ಬಳಸಬಹುದು. ಈ ಹೊಸ ವ್ಯವಸ್ಥೆಯಿಂದಾಗಿ ವಿವಿಧ ಸೇವೆಗಳಿಗೆ ಜನರು ತಮ್ಮ ಆಧಾರ್ ಸಂಖ್ಯೆಯನ್ನು ನೀಡಬೇಕಾಗಿಲ್ಲ.
ಸೀಮಿತ ವೈಯಕ್ತಿಕ ವಿವರ: ಪರ್ಯಾಯ ಗುರುತಿನ ಸಂಖ್ಯೆಯ ಜೊತೆಗೆ ‘ಸೀಮಿತ– ವೈಯಕ್ತಿಕ ವಿವರ’ (ಲಿಮಿಟೆಡ್ ಕೆವೈಸಿ) ಎಂಬ ಮತ್ತೊಂದು ಪರಿಕಲ್ಪನೆಯನ್ನೂ ಯುಐಡಿಎಐ ರೂಪಿಸಿದೆ. ಈ ವ್ಯವಸ್ಥೆಯಲ್ಲಿ ನಿರ್ದಿಷ್ಟ ಸೇವೆ ಒದಗಿಸುವ ಸಂಸ್ಥೆಗಳಿಗೆ ಅಗತ್ಯಕ್ಕೆ ಬೇಕಾದಷ್ಟೇ ವಿವರಗಳನ್ನು ಪ್ರಾಧಿಕಾರ ನೀಡಲಿದೆ.
ಜಾರಿ ಯಾವಾಗ?
ಪರ್ಯಾಯ ಗುರುತಿನ ಸಂಖ್ಯೆ ವ್ಯವಸ್ಥೆ 2018ರ ಮಾರ್ಚ್ 1ರಿಂದ ಜಾರಿಗೆ ಬರಲಿದೆ. ವಿವಿಧ ಸೇವೆಗಳನ್ನು ನೀಡುವ ಎಲ್ಲ ಸಂಸ್ಥೆಗಳು ಜೂನ್ 1ರಿಂದ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯ.
ಕೃಪೆ: ಪ್ರಜಾವಾಣಿ
ರಾಷ್ಟ್ರೀಯ ಯುವ ಉತ್ಸವವನ್ನು ಜನವರಿ 12 ರಂದು ಆಚರಿಸಲಾಗುತ್ತದೆ, ಭಾರತದ ಯುವಪೀಳಿಗೆಯ ಐಕಾನ್ ಎನಿಸಿರುವ ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವ ಉತ್ಸವವನ್ನು ಆಯೋಜಿಸಲಾಗುತ್ತದೆ.
ರಾಷ್ಟ್ರೀಯ ಯುವ ಉತ್ಸವ ದೇಶದಲ್ಲೇ ಅತಿ ದೊಡ್ಡ ಯುವ ಉತ್ಸವವಾಗಿದೆ. ಉತ್ತರ ಪ್ರದೇಶದ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಈ ಉತ್ಸವವನ್ನು ಗೌತಮ್ ಬುದ್ಧ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸುತ್ತಿದೆ.
ಈ ವರ್ಷದ ಥೀಮ್: ಸಂಕಲ್ಪ್ ಸೇ ಸಿದ್ದಿ
- ಇದು 22ನೇ ರಾಷ್ಟ್ರೀಯ ಯುವ ಉತ್ಸವ. ಮೊದಲನೆ ರಾಷ್ಟ್ರೀಯ ಯುವ ಉತ್ಸವವನ್ನು 1995ರಲ್ಲಿ ಭೋಪಾಲ್ನಲ್ಲಿ ನಡೆಸಲಾಯಿತು.
- ಇದೇ ಮೊದಲ ಬಾರಿಗೆ ನ್ಯಾಷನಲ್ ಕ್ಯಾಪಿಟಲ್ ರೀಜನ್ (NCR)ನಲ್ಲಿ ರಾಷ್ಟ್ರೀಯ ಯುವ ಉತ್ಸವವನ್ನು ಆಯೋಜಿಸಲಾಗುತ್ತಿದೆ.
- ಗಿನ್ನಿಸ್ ದಾಖಲೆಗೆ ಮಾತುಂಗ ರೈಲ್ವೆ ಸ್ವೇಷನ್: ಮುಂಬೈನ ಉಪನಗರ ಮಾತುಂಗ ರೈಲ್ವೆ ನಿಲ್ದಾಣಕ್ಕೆ ಎಲ್ಲ ಮಹಿಳಾ ಸಿಬ್ಬಂದಿಯೇ ನೇಮಕಗೊಂಡಿದ್ದು, ಈ ನಿಲ್ದಾಣ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿದೆ. ಇಲ್ಲಿನ ಎಲ್ಲ ಸಿಬ್ಬಂದಿಯೂ ಮಹಿಳೆಯರೇ ಆಗಿದ್ದು, ಈ ಸಾಧನೆ ಮಾಡಿದ ದೇಶದ ಮೊಲದ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಮಾತುಂಗ ರೈಲ್ವೆ ನಿಲ್ದಾಣ ಪಾತ್ರವಾಗಿತ್ತು.
- ಅಂತಾರಾಷ್ಟ್ರೀಯ ಧರ್ಮ-ಧಮ್ಮ ಸಮಾವೇಶ: 4ನೇ ಅಂತಾರಾಷ್ಟ್ರೀಯ “ಧರ್ಮ-ಧಮ್ಮ ಸಮಾವೇಶವನ್ನು ಇತ್ತೀಚೆಗೆ ನಳಂದ ಜಿಲ್ಲೆಯ ರಾಜಗೀರ್ ನಲ್ಲಿ ಉದ್ಘಾಟಿಸಲಾಯಿತು. ಅಸಿಯಾನ್-ಇಂಡಿಯಾ ಡೈಲಾಗ್ ಪಾರ್ಟನರ್ಷಿಪ್ ನ 25ನೇ ವರ್ಷದ ಸ್ಮರಣಾರ್ಥ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಂಘಟಕರು: ನಳಂದ ವಿಶ್ವವಿದ್ಯಾಲಯ, ಸೆಂಟರ್ ಫಾರ್ ಸ್ಟಡಿ ಆಫ್ ರಿಲೀಜನ್ ಅಂಡ್ ಸೊಸೈಟಿಯ ಸಹಯೋಗದೊಂದಿಗೆ, ಇಂಡಿಯಾ ಫೌಂಡೇಶನ್, ವಿದೇಶಾಂಗ ಸಚಿವಾಲಯ ಮತ್ತು ವಿಯೆಟ್ನಾಂ ಬೌದ್ಧ ವಿಶ್ವವಿದ್ಯಾನಿಲಯವು ಸಮ್ಮೇಳನವನ್ನು ಆಯೋಜಿಸುತ್ತಿದೆ.
- ಗೋವಾ ಹಕ್ಕಿ ಉತ್ಸವ: ಎರಡನೇ ಗೋವಾ ಹಕ್ಕಿ ಉತ್ಸವ ಜನವರಿ 12 ರಿಂದ 14 ರವರೆಗೆ ಕೊಟಿಕೊವೊ ವನ್ಯಜೀವಿ ಅಭಯಾರಣ್ಯ, ಕ್ಯಾನಕೋನಾದಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ ದೇಶದ ಅಗ್ರಗಣ್ಯ ಪರಿಸರವಾದಿಗಳು, ಛಾಯಾಚಿತ್ರಗ್ರಾಹಕರು ಮತ್ತು ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಕೋಟಿಗವೊ ವನ್ಯಜೀವಿ ಧಾಮವನ್ನು 1968 ರಲ್ಲಿ ಸ್ಥಾಪಿಸಲಾಯಿತು. ಇದು ಗೋವಾದ ಎರಡನೇ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ.
Excellent
Nice informations
I’m so happy. This type of information I cannot seen
I’m happy for your information
Super
Comment
Comment
Super
Superb
Super sir Pls update daily current affaires sir
Its very ussefull information for competitive exams
Super
Thanks for the information
Super thanks For The Information All Exams Useful
nice information
ಸರ್ ಪೆಬ್ರವರಿ,ಮಾರ್ಚ,ಏಪ್ರೀಲ್ ಪ್ರಚಲಿತ ಘಟನೆ update ಮಾಡಿ.
Comment
Your blesess
Your blessings
It’s really useful
Comment
Website stop aagideyaa
Comment
Super
thnk u so much spadha spoorthi
such a good and usefull app for preparing C E T
Comment
Comment