ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,23,2017

Question 1

1. ರಾಷ್ಟ್ರೀಯ ರೈತರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಡಿಸೆಂಬರ್ 23
B
ಡಿಸೆಂಬರ್ 21
C
ಡಿಸೆಂಬರ್ 24
D
ಡಿಸೆಂಬರ್ 22
Question 1 Explanation: 
ಡಿಸೆಂಬರ್ 23

ಭಾರತದ ಸಾಮಾಜಿಕ-ಆರ್ಥಿಕ ಬೆಳವಣಿಗೆಯಲ್ಲಿ ರೈತರ ಪಾತ್ರವನ್ನು ಗುರುತಿಸಲು ಮತ್ತು ದಿವಂಗತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನದ ಪ್ರಯುಕ್ತ ಪ್ರತಿ ವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಭಾರತದಲ್ಲಿ ಆಚರಿಸಲಾಗುತ್ತದೆ.

Question 2

2. ಈ ಕೆಳಗಿನ ಯಾವ ರಾಜ್ಯವು ಅಂತರರಾಷ್ಟ್ರೀಯ ಕಾಫಿ ಉತ್ಸವದ 7ನೇ ಆವೃತ್ತಿ (IICF-2018) ಯನ್ನು ಆಯೋಜಿಸುವುದು?

A
ಸಿಕ್ಕಿಂ
B
ಕೇರಳ
C
ಕರ್ನಾಟಕ
D
ಒಡಿಶಾ
Question 2 Explanation: 
ಕರ್ನಾಟಕ

ಭಾರತವು ಅಂತರರಾಷ್ಟ್ರೀಯ ಕಾಫಿ ಉತ್ಸವದ 7ನೇ ಆವೃತ್ತಿ (IICF-2018) ಯನ್ನು ಕರ್ನಾಟಕದ ಬೆಂಗಳೂರಿನಲ್ಲಿ ಜನವರಿ 16, 2018 ರಂದು ಆಯೋಜಿಸುವುದು. ಈ ಉತ್ಸವವನ್ನು ಇಂಡಿಯಾ ಕಾಫಿ ಟ್ರಸ್ಟ್ ಮತ್ತು ಕರ್ನಾಟಕದ ಕಾಫಿ ಬೋರ್ಡ್ ಆಯೋಜಿಸುತ್ತವೆ

Question 3

3. ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಭಾರತದಲ್ಲಿ ಯಾವ ದಿನದಂದು ಆಚರಿಸಲಾಗುತ್ತದೆ?

A
ಡಿಸೆಂಬರ್ 20
B
ಡಿಸೆಂಬರ್ 22
C
ಡಿಸೆಂಬರ್ 23
D
ಡಿಸೆಂಬರ್ 24
Question 3 Explanation: 
ಡಿಸೆಂಬರ್ 22

ರಾಷ್ಟ್ರೀಯ ಗಣಿತ ದಿನಾಚರಣೆಯನ್ನು, ಡಿಸೆಂಬರ್ 22 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಗಣಿತದ ಪ್ರತಿಭೆ ಶ್ರೀನಿವಾಸ ರಾಮನುಜನ್ ಅವರ ಜನ್ಮದಿನೋತ್ಸವವನ್ನು ಸ್ಮರಿಸಿಕೊಳ್ಳಲು ಮತ್ತು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಲು ಆಚರಿಸಲಾಗುತ್ತದೆ. 2012 ರಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನವೆಂದು ಘೋಷಿಸಿದ್ದರು.

Question 4

4. ರಿಪಬ್ಲಿಕ ಆಫ್ ಪೆರುಗೆ ಭಾರತದ ಹೊಸ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ?

A
ಟಿ.ಪಿ ಸೀತಾರಾಮ್
B
ಎಮ್. ಸುಬ್ಬರಾಯುಡು
C
ಜೈದೀಪ್ ಸರ್ಕಾರ್
D
ನವ್ತೆಜ್ ಸರ್ನಾ
Question 4 Explanation: 
ಎಮ್. ಸುಬ್ಬರಾಯುಡು

1994 ರ ಬ್ಯಾಚ್ನ ಇಂಡಿಯನ್ ಫಾರಿನ್ ಸರ್ವಿಸ್ (IFS) ಅಧಿಕಾರಿ ಎಮ್. ಸುಬ್ಬರಾಯುಡು ರಿಪಬ್ಲಿಕ ಆಫ್ ಪೆರುಗೆ ಭಾರತದ ಹೊಸ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ, ಅವರು ವಿದೇಶಾಂಗ ಸಚಿವಾಲಯದಲ್ಲಿ (MEA) ಜಂಟಿ ಕಾರ್ಯದರ್ಶಿಯಾಗಿದ್ದಾರೆ.

Question 5

5. ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (NCC) ಯ ಹೊಸ ಡೈರೆಕ್ಟರ್ ಜನರಲ್ (DG) ಆಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?

A
ಬಿ.ಎಸ್ ನೆಗಿ
B
ಮನೋಜ್ ಕುಮಾರ್ ಉನ್ನಿ
C
ಬಿ ಎಸ್ ಸಹರಾತ್
D
ಎನ್. ಪಿ. ಎಸ್ ಹೈರಾ
Question 5 Explanation: 
ಬಿ ಎಸ್ ಸಹರಾತ್

ಲೆಪ್ಟಿನೆಂಟ್ ಜನರಲ್ ಬಿ ಎಸ್ ಸಹರಾತ್ ಅವರು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (NCC) ಯ ಹೊಸ ಡೈರೆಕ್ಟರ್ ಜನರಲ್ (DG) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇಂಡಿಯನ್ ಮಿಲಿಟರಿ ಅಕ್ಯಾಡೆಮಿಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

Question 6

6. ಪ್ರಖ್ಯಾತ ಗಾಯಕರಾದ ಜಟಿಲೆಶ್ವರ ಮುಖ್ಯೋಪಾಧ್ಯಾಯ ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರು ಯಾವ ರಾಜ್ಯದವರು?

A
ಗೋವಾ
B
ಅಸ್ಸಾಂ
C
ಪಶ್ಚಿಮ ಬಂಗಾಳ
D
ಒಡಿಶಾ
Question 6 Explanation: 
ಪಶ್ಚಿಮ ಬಂಗಾಳ

ಬೆಂಗಾಲಿಯ ಪ್ರಖ್ಯಾತ ಗಾಯಕರಾದ ಜಟಿಲೆಶ್ವರ ಮುಖ್ಯೋಪಾಧ್ಯಾಯ ಅವರು ಬಂಗಾಳದ ಕೋಲ್ಕತ್ತಾದಲ್ಲಿ ಡಿಸೆಂಬರ್ 21, 2017 ರಂದು ನಿಧನ ಹೊಂದಿದರು. ಅವರು 70-80ರ ದಶಕದಲ್ಲಿ ಬಂಗಾಳಿ ಸಂಗೀತವನ್ನು ಶ್ರೀಮಂತಗೊಳಿಸಿದ್ದರು.

Question 7

7. ಪಾರ್ವತಿ ಅರ್ಗಾ ಪಕ್ಷಿಧಾಮ (PABS) ಈ ಕೆಳಗಿನ ಯಾವ ರಾಜ್ಯದಲ್ಲಿದೆ?

A
ಬಿಹಾರ
B
ಮಧ್ಯ ಪ್ರದೇಶ
C
ಉತ್ತರ ಪ್ರದೇಶ
D
ಜಾರ್ಖಂಡ್
Question 7 Explanation: 
ಉತ್ತರ ಪ್ರದೇಶ

ಪಾರ್ವತಿ ಅರ್ಗಾ ಪಕ್ಷಿಧಾಮ (PABS)ವು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿದೆ. ಇದು 10.84 ಚ.ಕಿ. ವಿಸ್ತೀರ್ಣವನ್ನು ಹೊಂದಿದೆ. ಮತ್ತು 212 ಪ್ರಭೇದಗಳ ಅಂಜಿಯೋಸ್ಪೆರ್ಮಗಳಿಗೆ ನೆಲೆಯಾಗಿದೆ.

Question 8

8. 32 ನೇ ಭಾರತೀಯ ಎಂಜಿನಿಯರಿಂಗ್ ಕಾಂಗ್ರೆಸ್ (IEC-2017) ಅನ್ನು ಯಾವ ನಗರವು ಆಯೋಜಿಸಿದೆ?

A
ಕೊಲ್ಕತ್ತಾ
B
ಚೆನ್ನೈ
C
ಕೊಚ್ಚಿ
D
ನವ ದೆಹಲಿ
Question 8 Explanation: 
ಚೆನ್ನೈ

32 ನೇ ಭಾರತೀಯ ಎಂಜಿನಿಯರಿಂಗ್ ಕಾಂಗ್ರೆಸ್ (IEC-2017) ಅನ್ನು ಡಿಸೆಂಬರ್ 21 ರಿಂದ 23 ರವರೆಗೆ ತಮಿಳುನಾಡಿನ ಚೆನ್ನೈನಲ್ಲಿ ಆಯೋಜಿಸಲಾಯಿತು.

Question 9

9. ಇರಾನ್ಯಾಹ್ ಉದ್ವಾಡ ಉತ್ಸವ ( Iranshah Udvada Utsav (IUU-2017))ದ 2ನೇ ಆವೃತ್ತಿಯನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗಿದೆ?

A
ಮಹಾರಾಷ್ಟ್ರ
B
ಗುಜರಾತ್
C
ಅರುಣಾಚಲ್ ಪ್ರದೇಶ
D
ರಾಜಸ್ಥಾನ
Question 9 Explanation: 
ಗುಜರಾತ್

ಪಾರ್ಸಿ ಸಮುದಾಯದ ಸಾಂಸ್ಕೃತಿಕ ಹಬ್ಬವಾದ ಇರಾನ್ಯಾಹ್ ಉದ್ವಾಡ ಉತ್ಸವ ( Iranshah Udvada Utsav (IUU-2017)) ದ 2ನೇ ಆವೃತ್ತಿಯನ್ನು ಗುಜರಾತ್ನ್ಬಲ್ಲಿ 2017ರ ಡಿಸೆಂಬರ್ 23 ರಂದು ಆಯೋಜಿಸಲಾಗಿದೆ.

Question 10

10. ಗಂಗಾ ಗ್ರಾಮ ಸ್ವಚ್ಛತಾ ಸಮ್ಮೇಲನ್ (GGSS-2017)ನಲ್ಲಿ ಯಾವ ಯೋಜನೆಯನ್ನು ಕೇಂದ್ರ ಸರ್ಕಾರವು ಪ್ರಾರಂಭಿಸಿದೆ?

A
ಗಂಗೇ ಮಹಾದೇವ್
B
ಗಂಗಾ ಗ್ರಾಮ್
C
ಗಂಗೆ ಸ್ವಚ್ಛತಾ ಅಭಿಯಾನ್
D
ನಮಾಮಿ ಗಂಗೆ
Question 10 Explanation: 
ಗಂಗಾ ಗ್ರಾಮ್

2017 ರ ಡಿಸೆಂಬರ್ 23 ರಂದು ಹೊಸದಿಲ್ಲಿ ಗಂಗಾ ಗ್ರಾಮ್ ಸ್ವಚ್ಛತಾ ಸಮ್ಮೇಲನ್ (GGSS-2017)ನಲ್ಲಿ ಕೇಂದ್ರ ಸರ್ಕಾರವು ಔಪಚಾರಿಕವಾಗಿ “ಗಂಗಾ ಗ್ರಾಮ್” ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಗಂಗಾ ನದಿಯ ಸ್ವಚ್ಛತೆಯ ಬಗ್ಗೆ ಗಮನಹರಿಸಲಾಗುವುದು.

There are 10 questions to complete.

[button link=”http://www.karunaduexams.com/wp-content/uploads/2018/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,23,2017”

Leave a Comment

This site uses Akismet to reduce spam. Learn how your comment data is processed.