ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,26,2017
Question 1 |
1. ರಾಷ್ಟ್ರೀಯ ಶುಗರ್ ಇನ್ಸ್ಟಿಟ್ಯೂಟ್ (NSY) ಯಾವ ರಾಜ್ಯದಲ್ಲಿದೆ?
ಉತ್ತರ ಪ್ರದೇಶ | |
ಒಡಿಶಾ | |
ಜಾರ್ಖಂಡ್ | |
ಮದ್ಯಪ್ರದೇಶ |
ಉತ್ತರ ಪ್ರದೇಶದ ಕಾನ್ಪುರನಲ್ಲಿ ರಾಷ್ಟ್ರೀಯ ಶುಗರ್ ಇನ್ಸ್ಟಿಟ್ಯೂಟ್ (NSI) ಇದೆ. ಇದು ಸಂಶೋಧನೆ, ತರಬೇತಿ ಮತ್ತು ಸಲಹಾ ಸೇವೆ, ಸಕ್ಕರೆ ಮತ್ತು ಅಲೈಡ್ ಉದ್ಯಮ, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಕಾರ್ಯಗಳನ್ನೊಳಗೊಂಡಿದೆ. ಸಕ್ಕರೆ ರಸಾಯನ ಶಾಸ್ತ್ರ, ಹಾಗೂ ಸಕ್ಕರೆ ತಂತ್ರಜ್ಞಾನ, ತಾಂತ್ರಿಕ ಶಿಕ್ಷಣ ಮತ್ತು ತರಬೇತಿ ನೀಡುತ್ತದೆ. ಇದು ಸಕ್ಕರೆ ಮತ್ತು ಸಂಬಂಧಿತ ಕೈಗಾರಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳಿಗೆ ನೆರವನ್ನು ನೀಡುತ್ತದೆ.
Question 2 |
2. “ದಿ ವೇ ಐ ಸೀ ಇಟ್: ಎ ಗೌರಿ ಲಂಕೇಶ ರೀಡರ್” ಎಂಬ ಪುಸ್ತಕದ ಸಂಪಾದಕರು ಯಾರು?
ಚಂದನ್ ಗೌಡ | |
ಚಕ್ರವರ್ತಿ ಚಂದ್ರಚಾಡ್ | |
ಪಿ ಲಂಕೇಶ | |
ಅಬ್ದುಸ್ಸಲಂ ಪುಥಿಗೆ |
“ದಿ ವೇ ಐ ಸೀ ಇಟ್: ಎ ಗೌರಿ ಲಂಕೇಶ ರೀಡರ್” ಎಂಬ ಪುಸ್ತಕವನ್ನು ಲೇಖಕ ಮತ್ತು ಸಮಾಜಶಾಸ್ತ್ರಜ್ಞ ಚಂದನ್ ಗೌಡ ಅವರು ಸಂಪಾದಿಸಿದ್ದಾರೆ. 5 ಸೆಪ್ಟೆಂಬರ್ 2017ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಗೌರಿ ಲಂಕೇಶ ಅವರ ಮನೆಯ ಮುಂದೆ ಅಪರಿಚಿತ ವ್ಯಕ್ತಿಗಳು ಗುಂಡು ಹೊಡೆದು ಕೊಲೆ ಮಾಡಿದರು. ಗೌರಿ ಲಂಕೇಶ್ ಇಚ್ಛೆಯಂತೆ ಅವರ ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾನ ಮಾಡಲಾಗಿದೆ. ಈ ಪುಸ್ತಕವನ್ನು ಮುಂಬೈ ಪ್ರೆಸ್ ಕ್ಲಬ್ನಲ್ಲಿ 2017ರ ಡಿಸೆಂಬರ್ 22 ರಂದು ಬಿಡುಗಡೆ ಮಾಡಲಾಯಿತು.
Question 3 |
3. ಯಾವ ಕೇಂದ್ರ ಸಚಿವ ಸಂಪುಟ ಬೀಚ್ ಕ್ಲೀನ್-ಅಪ್ಗಾಗಿ ಪೈಲಟ್ ಯೋಜನೆ “ಬ್ಲೂ ಫ್ಲಾಗ್” ಅನ್ನು ಪ್ರಾರಂಬಿಸಿದೆ?
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ | |
ಮಾಹಿತಿ ಮತ್ತು ಪ್ರಸಾರ ಸಚಿವಾಲಯ | |
ಕಮ್ಯುನಿಕೇಷನ್ಸ್ ಸಚಿವಾಲಯ | |
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ |
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕಡಲತೀರವನ್ನು ಸ್ವಚ್ಛಗೊಳಿಸುವಿಕೆ ಮತ್ತು ಅಭಿವೃದ್ಧಿಗಾಗಿ ಪೈಲಟ್ ಯೋಜನೆ, “ಬ್ಲೂ ಫ್ಲಾಗ್” ಅನ್ನು ಪ್ರಾರಂಬಿಸಿದೆ. ಕಡಲತೀರದ ಸ್ವಚ್ಛತೆ, ಪರಿಷ್ಕರಣೆ ಮತ್ತು ಮೂಲ ಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.
Question 4 |
4. ಪ್ರವಾಸೋದ್ಯಮ ಸಹಕಾರವನ್ನು ಹೆಚ್ಚಿಸಲು ದಕ್ಷಿಣ ಕೋರಿಯಾದೊಂದಿಗೆ ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಸಹಿ ಹಾಕಿದೆ?
ಮಿಜೋರಾಮ್ | |
ಕೇರಳ | |
ತಮಿಳುನಾಡು | |
ಉತ್ತರ ಪ್ರದೇಶ |
ಪ್ರವಾಸೋದ್ಯಮ, ಕೌಶಲ್ಯ ಅಭಿವೃದ್ಧಿ, ಸಂಸ್ಕೃತಿ ಮತ್ತು ಕೃಷಿ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಉತ್ತರ ಪ್ರದೇಶ ಸರ್ಕಾರ 2017ರ ಡಿಸೆಂಬರ್ 23 ರಂದು ದಕ್ಷಿಣ ಕೊರಿಯಾದೊಂದಿಗೆ ಅಂಡರ್ಸ್ಟ್ಯಾಂಡಿಂಗ್ ಆಫ್ ಮೆಮೊರಿಡಮ್ (MoU) ಗೆ ಸಹಿ ಹಾಕಿದೆ. ಇದಕ್ಕಾಗಿ, ದಕ್ಷಿಣ ಕೊರಿಯಾದ ಗಿಮ್ಹಾ ನಗರದ ನಿಯೋಗವು ಲಕ್ನೌದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಭೇಟಿಯಾಗಿ ಎರಡು ದೇಶಗಳ ನಡುವಿನ ಸಹಕಾರ ಸುಧಾರಿಸಲು ಮಾರ್ಗಗಳನ್ನು ಚರ್ಚಿಸಿದೆ.
Question 5 |
5. “ಸೀ ಬ್ರಿಡ್ಜ್ “ ನ ಭಾರತದ ಮೊದಲ ರನ್ವೇ ಯಾವ ರಾಜ್ಯದಲ್ಲಿ ಏರ್ಪಡಲಿದೆ?
ಆಂದ್ರ ಪ್ರದೇಶ | |
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | |
ಕರ್ನಾಟಕ | |
ಲಕ್ಷದ್ವೀಪ |
Question 6 |
6. ವಿಶ್ವದ ಅತಿ ಎತ್ತರದ ಮತ್ತು ಉದ್ದದ ಗಾಜಿನ ಸೇತುವೆ ಯಾವ ದೇಶದಲ್ಲಿದೆ?
ಜಪಾನ್ | |
ಉತ್ತರ ಕೊರಿಯಾ | |
ದಕ್ಷಿಣ ಕೊರಿಯಾ | |
ಚೀನಾ |
ವಿಶ್ವದ ಅತಿ ಎತ್ತರದ ಮತ್ತು ಉದ್ದದ ಗಾಜಿನ ಸೇತುವೆ ಚೀನಾದ ಷಿಜಾಝವಾಂಗ್ನಲ್ಲಿದೆ. ಈ ಸೇತುವೆಯು 488 ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿದೆ. ಇದು ಪಿಂಗ್ಸಾನ್ ಕೌಂಟಿಯಲ್ಲಿನ ಹಾಂಗ್ಯಾಗು ಸೀನಿಕ್ ಏರಿಯಾದ ಎರಡು ಕಡಿದಾದ ಬಂಡೆಗಳ ನಡುವಿನ ಕಣಿವೆಯಲ್ಲಿ 218 ಮೀಟರ್ ಎತ್ತರದಲ್ಲಿದೆ.
Question 7 |
7. ತಮಿಳುನಾಡು ನೀರಾವರಿ ಕೃಷಿ ಆಧುನೀಕರಣ ಯೋಜನೆಗೆ ವಿಶ್ವ ಬ್ಯಾಂಕ್ನೊಂದಿಗೆ ಎಷ್ಟು ಪ್ರಮಾಣದ ಸಾಲ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ?
$ 414 ಮಿಲಿಯನ್ | |
$ 318 ಮಿಲಿಯನ್ | |
$ 520 ಮಿಲಿಯನ್ | |
$ 333 ಮಿಲಿಯನ್ |
$ 318 ಮಿಲಿಯನ್
ತಮಿಳುನಾಡು ನೀರಾವರಿ ಕೃಷಿ ಆಧುನೀಕರಣ ಯೋಜನೆಗೆ ವಿಶ್ವ ಬ್ಯಾಂಕ್ನೊಂದಿಗೆ $ 318 ಮಿಲಿಯನ್ ಸಾಲ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಿದೆ. ಕೃಷಿಯ ತಂತ್ರಜ್ಞಾನಗಳನ್ನು ಉತ್ತೇಜಿಸಲು, ನೀರಿನ ನಿರ್ವಹಣೆ ಪದ್ಧತಿಗಳನ್ನು ಸುಧಾರಿಸಲು ಮತ್ತು ಮಾರುಕಟ್ಟೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಲ್ಲಿ ಬಹುಪಾಲ ಸಣ್ಣ ಮತ್ತು ಅತೀ ಕಡಿಮೆ, ಸುಧಾರಿತ ಮತ್ತು ಆಧುನಿಕ ಟ್ಯಾಂಕ್ ನೀರಾವರಿ ವ್ಯವಸ್ಥೆಗಳ ಪ್ರಯೋಜನವನ್ನು ಸುಮಾರು 500,000 ರೈತರು ಪಡೆಯು ನಿರೀಕ್ಷೆಯಿದೆ.
Question 8 |
8. ರಾಜ್ಯದಲ್ಲಿ ಬಡವರಿಗೆ “ ಪ್ರಕಾಶ್ ಹೈ ತೊ ವಿಕಾಸ್ ಹೈ” ಎಂಬ ಉಚಿತ ಗೃಹೋಪಯೋಗಿ ವಿದ್ಯುತ್ ಸಂಪರ್ಕ ಯೋಜನೆಯನ್ನು ಯಾವ ರಾಜ್ಯ ಪ್ರಾರಂಭಿಸಿದೆ?
ಹರಿಯಾಣ | |
ಉತ್ತರ ಪ್ರದೇಶ | |
ಪಂಜಾಬ್ | |
ರಾಜಸ್ತಾನ |
ಮಾಜಿ ಪ್ರಧಾನಿ ಅಟಲ್ ಬಿಜಾರಿ ವಾಜಪೇಯಿ ಅವರ ಜನ್ಮದಿನವನ್ನು ಗುರುತಿಸಲು ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ಬಡವರಿಗೆ ಉಚಿತ ಮನೆಯ ವಿದ್ಯತ್ ಸಂಪರ್ಕ ಯೋಜನೆಯಾದ “ ಪ್ರಕಾಶ್ ಹೈ ತೊ ವಿಕಾಸ್ ಹೈ” ಅನ್ನು ಆರಂಭಿಸಿದೆ. ಆರಂಭದಲ್ಲಿ, ಮಥುರಾ ಜಿಲ್ಲೆಯ ಎರಡು ಗ್ರಾಮಗಳಾದ ಲೋಹಾಬಾನ್ ಮತ್ತು ಗೌಸಾನವನ್ನು 100% ವಿದ್ಯುದೀಕರಣಕ್ಕೆ ಒಳಪಡಿಸಲಾಗಿದೆ.
Question 9 |
9. ಹಿರಿಯ ನಟ ಪಾರ್ಥ ಮುಖ್ಯೋಪಾಧ್ಯಾಯ ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರು ಯಾವ ರಾಜ್ಯದವರು?
ಕರ್ನಾಟಕ | |
ಒಡಿಶಾ | |
ಪಶ್ಚಿಮ ಬಂಗಾಳ | |
ಅರುಣಾಚಲ ಪ್ರದೇಶ |
ಪಶ್ಚಿಮ ಬಂಗಾಳ ಚಲನಚಿತ್ತ ನಟ ಪಾರ್ಥ ಮುಖ್ಯೋಪಾಧ್ಯಾಯ (70) ಅವರು ಬಂಗಾಳದ ಕೊಲ್ಕತ್ತಾದಲ್ಲಿ ನಿಧನ ಹೊಂದಿದರು. ಅವರು ಅಥಿತಿ, ಬಾಲಿಕಾ ಬಾಹು, ಅಮರ್ ಪೃಥ್ವಿ, ಬಾಗ್ಬಂದಿರ್ ಖೇಲಾ, ಅಗ್ನಿಸ್ಟಾರ್ ಮುಂತಾದ ಬಂಗಾಳಿ ಶಾಸ್ತ್ರೀಯಗಳಲ್ಲಿ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Question 10 |
10. 2018 ರ ಏಷಿಯನ್-ಇಂಡಿಯಾ ಪ್ರವಾಸಿ ಭಾರತೀಯ ದಿವಸ್ (PBD) ಅನ್ನು ಯಾವ ದೇಶವು ಆಯೋಜಿಸುವುದು?
ಮಲೆಷ್ಯಾ | |
ಸಿಂಗಾಪುರ್ | |
ಭಾರತ | |
ಇಂಡೋನೇಷ್ಯಾ |
2018 ರ ಏಷಿಯನ್-ಇಂಡಿಯಾ ಪ್ರವಾಸಿ ಭಾರತೀಯ ದಿವಸ್ (PBD) ಅನ್ನು ಸಿಂಗಾಪುರ್ದಲ್ಲಿ ಜನವರಿ 7, 2018 ರಂದು ಭಾರತ ಮತ್ತು ಏಷಿಯಾನ್ ನಡುವಿನ 25 ವರ್ಷಗಳ ಆಯಕಟ್ಟಿನ ಪಾಲುದಾರಿಕೆಯನ್ನು ಚರ್ಚಿಸುವುದಕ್ಕಾಗಿ ಆಯೋಜಿಸಲಾಗುವುದು.
[button link=”http://www.karunaduexams.com/wp-content/uploads/2018/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್262017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Sine information thank you so much