ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,28,2017
Question 1 |
1. ಕೇಂದ್ರ ಸರ್ಕಾರದ ಯಾವ ಸಚಿವರು ಜಾನುವರು ರೋಗದ ಮುನ್ನೆಚ್ಚರಿಕೆ (LDE ) ಮೊಬೈಲ್ ಅಪ್ಪ್ಲಿಕೇಷನನ್ನು ಪ್ರಾರಂಭಿಸಿದರು?
ನರೇಂದ್ರ ಮೋದಿ | |
ರಾಧಾ ಮೋಹನ್ ಸಿಂಗ್ | |
ರಾಜ್ನಾಥ್ ಸಿಂಗ್ | |
ನರೇಂದ್ರ ಸಿಂಗ್ ತೋಮರ್ |
ರಾಧಾ ಮೋಹನ್ ಸಿಂಗ್ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಿ ರಾಧಾ ಮೋಹನ್ ಸಿಂಗ್ ಅವರು ದೆಹಲಿಯಲ್ಲಿ ಜಾನುವಾರು ರೋಗ ಮುನ್ನೆಚ್ಚರಿಕೆ-ಮೊಬೈಲ್ ಅಪ್ಲಿಕೇಶನ್ Livestock Disease Forewarning (LDF) ಅನ್ನು ಪ್ರಾರಂಭಿಸಿದ್ದಾರೆ.
Question 2 |
2. ಪ್ರತಿಷ್ಠಿತ 2017 ರ ಹರಿಹರಾಸನಮ್ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?
ಕೆ ಜೆ ಯೆಸುದಾಸ | |
ಎಸ್ ಪಿ ಬಾಲಸುಬ್ರಮಣ್ಯಂ | |
ಕೆ ಎಸ್ ಚಿತ್ರಾ | |
ಎಂ ಜಯಚಂದ್ರ |
ಕೆ ಎಸ್ ಚಿತ್ರಾ ಹಿರಿಯ ಗಾಯಕಿ ಕೆ ಎಸ್ ಚಿತ್ರಾ ಅವರನ್ನು 2017 ರ ಹರಿಹರಾಸನಮ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದನ್ನು ಕೇರಳ ಸರಕಾರವು ನೀಡುವುದು ಮತ್ತು ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯನ್ನು ಒಳಗೊಂಡಿದೆ.
Question 3 |
3. ಅನಿಸಾ ಸಯ್ಯದ್ ಅವರು 61 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ (NSCC-2017) ಮಹಿಳಾ 25 ಮಿ ಪಿಸ್ತೂಲ್ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಅವರು ಈ ಕೆಳಗಿನ ಯಾವ ರಾಜ್ಯದವರು?
ಕೇರಳ | |
ಪಂಜಾಬ | |
ಉತ್ತರಪ್ರದೇಶ | |
ಹರಿಯಾಣ |
ಹರಿಯಾಣ ಹರಿಯಾಣದ ಅನುಭವಿ ಶೂಟರ್ ಅನಿಸಾ ಸಯ್ಯದ್ 2017ರ ಡಿಸೆಂಬರ್ 27 ರಂದು ಕೇರಳದ ತಿರುವನಂತಪುರಂನಲ್ಲಿ ನಡೆದ 61 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ (NSCC-2017) ಮಹಿಳಾ 25 ಮಿ ಪಿಸ್ತೂಲ್ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು.
Question 4 |
4. ಇತ್ತೀಚೆಗೆ ನಿಧನರಾದ ರಾಬಿ ಮಾಲಿಂಗ ಅವರು ಯಾವ ದೇಶದ ಪ್ರಸಿದ್ಧ ಸಂಗೀತಗಾರರು?
ಫ್ರಾನ್ಸ್ | |
ಇಗ್ಲೆಂಡ್ | |
ದಕ್ಷಿಣ ಆಫ್ರಿಕಾ | |
ಜರ್ಮನಿ |
ದಕ್ಷಿಣ ಆಫ್ರಿಕಾ ಪ್ರಸಿದ್ಧ ದಕ್ಷಿಣ ಆಫ್ರಿಕಾದ ಸಂಗೀತಗಾರ, ರಾಬಿ ಮಾಲಿಂಗ ಅವರು ಡಿಸೆಂಬರ್ 25, 2017 ರಂದು ನಿಧನ ಹೊಂದಿದರು. ‘ಸೊಬಾಬಿಲಿ’, ‘ಮಿಥಾಡಾ’ ಮತ್ತು ‘ಬೇಬಿ ಪ್ಲೀಸ್’ ಮುಂತಾದವು ಅವರ ಯಶಸ್ವಿ ಗೀತೆಗಳು.
Question 5 |
5. 2017 ರ ಪೀಟಾದ (PETA’s) ವರ್ಷದ ವ್ಯಕ್ತಿ ಈ ಕೆಳಗಿನವರಲ್ಲಿ ಯಾರು?
ಆರ್ ಮಾಧವನ್ | |
ಅನುಷ್ಕಾ ಶರ್ಮಾ | |
ಜಾಕ್ವೆಲಿನ್ ಫೆರ್ನಾಂಡಿಸ್ | |
ಕಪಿಲ್ ಶರ್ಮಾ |
ಅನುಷ್ಕಾ ಶರ್ಮಾ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು 2017 ರ ಪೀಟಾದ (PETA’s) ವರ್ಷದ ವ್ಯಕ್ತಿ ಎಂದು ಹೆಸರಿಸಲಾಗಿದೆ. ಪಟಾಕಿಗಳಿಂದ ನಾಯಿಗಳನ್ನು ರಕ್ಷಿಸಲು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತೋರಿದ ಪ್ರಯತ್ನಕ್ಕೆ, ಪ್ರಾಣಿ ಹಕ್ಕುಗಳ ಸಂಘಟನೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ನಿಮಲ್ಸ್ (PETA) ನಿಂದ ಈ ಗೌರವವನ್ನು ನೀಡಲಾಗಿದೆ.
Question 6 |
6. ಸಿಂಗ್ಬಮ್ ಎಲಿಫೆಂಟ್ ರಿಸರ್ವ್ (SER) ಯಾವ ರಾಜ್ಯದಲ್ಲಿದೆ?
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | |
ಕರ್ನಾಟಕ | |
ಪುದುಚೆರಿ | |
ಜಾರ್ಖಂಡ್ |
ಜಾರ್ಖಂಡ್ ಸಿಂಗ್ಬಮ್ ಎಲಿಫೆಂಟ್ ರಿಸರ್ವ್ (SER) ಪೂರ್ವ ಮತ್ತು ಪಶ್ಚಿಮ ಸಿಂಗ್ಬಮ್ ಮತ್ತು ಜಾರ್ಖಂಡ್ನ ಸರೀಕೆಲಾ-ಖರ್ಸವಾನ್ ಜಿಲ್ಲೆಗಳಲ್ಲಿದೆ ಮತ್ತು ಇದು 13,440 ಚ.ಕಿ ವಿಸ್ತೀರ್ಣವನ್ನು ಹೊಂದಿದೆ.
Question 7 |
7. 15 ನೇ ಹಣಕಾಸು ಆಯೋಗದ ಜಂಟಿ ಕಾರ್ಯದರ್ಶಿ ಹುದ್ದೆಗೆ ಯಾರನ್ನು ನೇಮಕ ಮಾಡಲಾಗಿದೆ?
ರಾಜೇಶ ರಂಜನ್ | |
ಮುಖ್ಮೆತ್ ಸಿಂಗ್ ಭಾಟಿಯಾ | |
ಗುರುಬಚನ್ ಸಿಂಗ್ | |
ಸೊಲೊಮನ್ ಯಶ್ ಕುಮಾರ್ |
ಮುಖ್ಮಿತ್ ಸಿಂಗ್ ಭಾಟಿಯಾ 1990 ರ ಬ್ಯಾಚ್ನ ಐಎಎಸ್ ಅಧಿಕಾರಿ ಮುಖ್ಮಿ ತ್ ಸಿಂಗ್ ಭಾಟಿಯಾಯವರಿಗೆ 15 ನೇ ಹಣಕಾಸು ಆಯೋಗದ ಜಂಟಿ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ. ಎನ್.ಕೆ. ಸಿಂಗ್ ಅವರ ನೇತೃತ್ವದಲ್ಲಿ 15ನೇ ಹಣಕಾಸು ಕಮಿಷನ್ ರಚನೆಯಾಯಿತು.
Question 8 |
8. ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್ (SFIO) ನ ಹೊಸ ನಿರ್ದೇಶಕರು ಯಾರು?
ನರೇಶ್ ಚಂದ್ರ | |
ನೀರಾಜ್ ಗುಪ್ತಾ | |
ಅಮರ್ದೀಪ್ ಸಿಂಗ್ ಭಾಟಿಯಾ | |
ಸುಧೀರ್ ಗಾರ್ಗ್ |
ಅಮರ್ದೀಪ್ ಸಿಂಗ್ ಭಾಟಿಯಾ 1993 ರ ಬ್ಯಾಚ್ನ ಐಎಎಸ್ ಅಧಿಕಾರಿ ಅಮರ್ದೀಪ್ ಸಿಂಗ್ ಭಾಟಿಯಾ ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್ (SFIO) ನ ಹೊಸ ನಿರ್ದೇಶಕರಾದರು.
Question 9 |
9. ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡವರು ಯಾರು?
ಆಶಿಶ್ ಉಪಾಧ್ಯಾಯ | |
ಸುಮಿತ ಮಿಶ್ರಾ | |
ಅಮಿತ್ ಮೆಹ್ತಾ | |
ಮುಖ್ಮಿತ್ ಸಿಂಗ್ ಭಾಟಿಯಾ |
ಸುಮಿತ ಮಿಶ್ರಾ 1990 ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದ ಸುಮಿತ ಮಿಶ್ರಾ ಅವರು ಐದು ವರ್ಷಗಳ ಕಾಲ ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
Question 10 |
10. ನಾಂಗ್ಬೈಲ್ಲೆಮ್ ವನ್ಯಜೀವಿ ಧಾಮ (NWS) ಯಾವ ರಾಜ್ಯದಲ್ಲಿದೆ?
ಸಿಕ್ಕಿಂ | |
ಅರುಣಾಚಲ ಪ್ರದೇಶ | |
ಮೇಘಾಲಯ | |
ಮಣಿಪುರ |
ಮೇಘಾಲಯ ನಾಂಗ್ಬೈಲ್ಲೆಮ್ ವನ್ಯಜೀವಿ ಧಾಮ (NWS) ಮೇಘಾಲಯದ ರಿ ಭೋಯ್ ಜಿಲ್ಲೆಯ ಲೈಲಾದ್ ಹಳ್ಳಿಗೆ ಸಮೀಪದಲ್ಲಿದೆ ಮತ್ತು 29 ಚ.ಕಿ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿರುವ ಪ್ರಾಣಿಗಳೆಂದರೆ ಬಂಗಾಳ ಹುಲಿ, ಕಪ್ಪು ಕರಡಿ, ಚಿರತೆ ಮತ್ತು ಅನೇಕ ರೀತಿಯ ಪಕ್ಷಿಗಳು.
[button link=”http://www.karunaduexams.com/wp-content/uploads/2018/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್282017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
T