ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,31,2017
Question 1 |
1. ಉತ್ತರ ಪ್ರದೇಶದ ಹೊಸ ಪೊಲೀಸ್ ಜನರಲ್ ಡೈರೆಕ್ಟರ್ ಯಾರು?
ಒ ಪಿ ಸಿಂಗ್ | |
ಟಿ.ಎಸ್ ಜೋಶಿ | |
ಆನಂದ್ ಗುಪ್ತಾ | |
ಅರವಿಂದ್ ಕುಮಾರ್ |
ಉತ್ತರ ಪ್ರದೇಶದ ಕ್ಯಾಡ್ರೆ ಯ 1993 ರ ಬ್ಯಾಚ್ನ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಸಿಂಗ್ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಾಗಿದ್ದಾರೆ. ಅವರ ಅಧಿಕಾರಾವಧಿಯು ಡಿಸೆಂಬರ್ 31, 2017 ರಂದು ಕೊನೆಗೊಂಡಿದೆ.
Question 2 |
2. ವಿಶ್ವ ಬ್ಲಿಟ್ಜ್ ಚೆಸ್ ಚ್ಯಾಂಪಿಯನ್ಶಿಪ್-2017 ರಲ್ಲಿ ಯಾವ ಭಾರತೀಯ ಗ್ರ್ಯಾಂಡ್ಮಾಸ್ಟರ್ ಕಂಚಿನ ಪದಕವನ್ನು ಗೆದ್ದಿದ್ದಾರೆ?
ಪಿ ಹರಿಕೃಷ್ಣ | |
ಸೂರ್ಯ ಶೇಖರ್ ಗಂಗೂಲಿ | |
ವಿದಿತ್ ಗುಜ್ರಾತಿ | |
ವಿಶ್ವನಾಥನ್ ಆನಂದ್ |
ವಿಶ್ವನಾಥನ್ ಆನಂದ್ ಇಂಡಿಯನ್ ಚೆಸ್ ಗ್ರ್ಯಾಂಡ್ಮಾಸ್ಟರ್ ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ರಿಯಾದ್ನಲ್ಲಿ ನಡೆದ 2017 ರ ವಿಶ್ವ ಬ್ಲಿಟ್ಜ್ ಚೆಸ್ ಚ್ಯಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪದಕವನ್ನು ಗೆದ್ದಿದ್ದಾರೆ.
Question 3 |
3. 2017 ರ ವರ್ಷದ ಗ್ಲೋಬ್ ಸಾಸ್ರ್ನ (Soccer’s) ಅತ್ಯುತ್ತಮ ಆಟಗಾರ ಪ್ರಶಸ್ತಿಯು ಯಾರಿಗೆ ಲಭಿಸಿದೆ?
ಲಿಯೋನಲ್ ಮೆಸ್ಸಿ | |
ರಾಡೆಮೆಲ್ ಫಾಲ್ಕವೋ | |
ಕ್ರಿಸ್ಟಿಯಾನೋ ರೋನಾಲ್ಡೋ | |
ಫ್ರಾಂಕ್ ರೈಬೆರಿ |
ಕ್ರಿಸ್ಟಿಯಾನೋ ರೋನಾಲ್ಡೋ ರಿಯಲ್ ಮ್ಯಾಡ್ರಿಡ್ ತಾರೆ ಕ್ರಿಸ್ಟಿಯಾನೋ ರೋನಾಲ್ಡೋ ಅವರನ್ನು 2017 ರಲ್ಲಿ ಸಾಸ್ರ್ನ (Soccer’s) ಅತ್ಯುತ್ತಮ ಆಟಗಾರನೆಂದು ಹೆಸರಿಸಿದೆ. ಅವರು ಒಟ್ಟಾರೆ ಈ ಪ್ರಶಸ್ತಿಯನ್ನು 4 ನೇ ಬಾರಿಗೆ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಅವರು ದುಬೈನಲ್ಲಿ ಇಟಲಿಯ ಅಲೆಸ್ಸಾಂಡ್ರೋ ಡೆಲ್ ಪಿಯೆರೂರಿಂದ ಪಡೆದರು.
Question 4 |
4. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು, ‘ಮೊದಲ ಫ್ಲ್ಯಾಗ್ ಹೊಸ್ಟಿಂಗ್ ದಿನದ’ 74 ನೇ ವಾರ್ಷಿಕೋತ್ಸವವನ್ನು ಯಾವ ದಿನದಂದು ಆಚರಿಸಿದೆ?
ಡಿಸೆಂಬರ್ 28 | |
ಡಿಸೆಂಬರ್ 31 | |
ಡಿಸೆಂಬರ್ 28 | |
ಡಿಸೆಂಬರ್ 29 |
ಡಿಸೆಂಬರ್ 31 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ಮೊದಲ ಫ್ಲ್ಯಾಗ್ ಹೊಸ್ಟಿಂಗ್ ದಿನದ 74 ನೇ ವಾರ್ಷಿಕೋತ್ಸವವನ್ನು ಡಿಸೆಂಬರ್ 31 ರಂದು ಆಚರಿಸದೆ. ಲೆಪ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ ಜೋಸಿ ಪೋರ್ಟ್ ಬ್ಲೇರ್ ಜಿಮ್ಖಾನಾ ಮೈದಾನದಲ್ಲಿ ನಡೆದ ಮುಖ್ಯ ಕಾರ್ಯದಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿದರು. ಈ ಸಂದರ್ಭದಲ್ಲಿ, ಲೆಪ್ಟಿನೆಂಟ್ ಗವರ್ನರ್ ಭಾರತೀಯ ರಾಷ್ಟ್ರೀಯ ಸೇನೆಯ ಸದಸ್ಯರನ್ನು ಮತ್ತು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ನ ಹಿರಿಯ ಐಲ್ಯಾಂಡರ್ಗಳನ್ನು ಸನ್ಮಾನಿಸಿದರು.
Question 5 |
5. ಭಾರತೀಯ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ICCR) ನ ಹೊಸ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
ವಿನಯ್ ಸಹಸ್ರಬುದ್ಧೆ | |
ಎಂ. ಜೆ ಅಕ್ಬರ್ | |
ಕೈಲಾಶ್ ವಿಜಯವರ್ಜಿಯ | |
ಲೋಕೇಶ್ ಚಂದ್ರ |
ವಿನಯ್ ಸಹಸ್ರಬುದ್ಧೆ ಮಹಾರಾಷ್ಟ್ರದ ಬಿಜೆಪಿ ನಾಯಕ ಮತ್ತು ರಾಜ್ಯಸಭ ಸಂಸದ ವಿನಯ್ ಸಹಸ್ರಬುದ್ಧೆ ಅವರು ಭಾರತೀಯ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ICCR) ನ ಹೊಸ ಅಧ್ಯಕ್ಷರಾಗಿ ನೇಮಕಗೊಂಡರು.
Question 6 |
6. ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ ನಿಮ್ಹಾನ್ಸ್ (NIMHANS) ಯಾವ ನಗರದಲ್ಲಿದೆ?
ಕೊಲ್ಕತ್ತಾ | |
ಕೊಚ್ಚಿ | |
ಬೆಂಗಳೂರು | |
ನವ ದೆಹಲಿ |
ಬೆಂಗಳೂರು ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ ನಿಮ್ಹಾನ್ಸ್ (NIMHANS) ಎಂಬುದು ಕರ್ನಾಟಕದ ಬೆಂಗಳೂರಿನಲ್ಲಿರುವ ಒಂದು ವೈದ್ಯಕೀಯ ಸಂಸ್ಥೆಯಾಗಿದೆ. ಇದು ದೇಶದಲ್ಲಿ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನದ ಶಿಕ್ಷಣದ ಉನ್ನತ ಕೇಂದ್ರವಾಗಿದೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ, ಇದು ತುಂಬ ಸುದ್ದಿಯಲ್ಲಿದೆ ಏಕೆಂದರೆ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು NIMHANS ನ 22 ನೇ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡರು ಮತ್ತು ಡಿಸೆಂಬರ್ 30, 2017 ರಂದು 150 ಪದವಿ ವಿದ್ಯಾರ್ಥಿಗಳಿಗೆ ಡಿಗ್ರಿ ಮತ್ತು ಪ್ರಶಸ್ತಿಗಳನ್ನು ನೀಡಿದರು.
Question 7 |
7. ಯುನೈಟೆಡ್ ಸ್ಟೇಟ್ಸ್ನ ನಂತರ, UNESCO ನಿಂದ ವಾಪಸಾತಿಯನ್ನು ಅಧಿಕೃತವಾಗಿ ಯಾವ ದೇಶವು ದೃಢಪಡಿಸಿದೆ?
ಸೌದಿ ಅರೇಬಿಯಾ | |
ರಷ್ಯಾ | |
ಯು.ಎ.ಇ | |
ಇಸ್ರೇಲ್ |
ಇಸ್ರೇಲ್ ಯುನೈಟೆಡ್ ಸ್ಟೇಟ್ಸ್ನ ನಂತರ, UNESCO ನಿಂದ ವಾಪಸಾತಿಯನ್ನು ಅಧಿಕೃತವಾಗಿ ಇಸ್ರೇಲ್ ದೃಢಪಡಿಸಿದೆ. UNESCO ನ ಮುಖ್ಯಸ್ಥ ಆಡ್ರೆ ಅಝಲೆ, ಇಸ್ರೆಲ್ ಡಿಸೆಂಬರ್ 31, 2018 ರಂದು ಹೊರಡಲಿದೆ ಎಂದು ಅಧಿಕೃತವಾಗಿ ತಿಳಿಸಿದರು.
Question 8 |
8. ಪತ್ತೇದಾರಿ ಕಾದಂಬರಿಗಳ ಲೇಖಕ ಸ್ಯೂ ಗ್ರಾಪ್ಟನ ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರು ಯಾವ ದೇಶದವರು?
ಫ್ರಾನ್ಸ್ | |
ಯುನೈಟೆಡ್ ಸ್ಟೇಟ್ಸ್ | |
ಇಟಲಿ | |
ಜರ್ಮನಿ |
ಯುನೈಟೆಡ್ ಸ್ಟೇಟ್ಸ್ ಪತ್ತೇದಾರಿ ಕಾದಂಬರಿಗಳ ಲೇಖಕ ಸ್ಯೂ ಗ್ರಾಪ್ಟನ್ (77) ಅವರು ಡಿಸೆಂಬರ್ 28, 2017 ರಂದು ಕ್ಯಾಲಿಪೋರ್ನೀಯಾದ ಸಾಂಟಾ ಬಾರ್ಬರಾದಲ್ಲಿ ನಿಧನ ಹೊಂದಿದರು. ಅವರು ವರ್ಣಮಾಲೆಯ ಕಾದಂಬರಿಗಳನ್ನು 1982 ರಲ್ಲಿ ಪ್ರಾರಂಭಿಸಿದ್ದರು.
Question 9 |
9. 61 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆ (NSCC-2017) ರಲ್ಲಿ ಪುರುಷರ ಹಿರಿಯ 50 ಮಿ ಪಿಸ್ತೂಲ್ ಸಮಾರಂಭದಲ್ಲಿ ಯಾರು ಚಿನ್ನವನ್ನು ಪಡೆದರು?
ಓಂ ಪ್ರಕಾಶ್ ಮಿಥರ್ವಾಲ್ | |
ಜಿತು ರಾಯ್ | |
ಅರ್ಜುನ್ ಸಿಂಗ್ ಚೀಮಾ | |
ಓಂಕರ್ ಸಿಂಗ್ |
ಜಿತು ರಾಯ್ ಶೂಟಿಂಗ್ನಲ್ಲಿ ಭಾರತೀಯ ಮಾರ್ಕ್ಸ್ಮನ್ ಜಿತು ರಾಯ್ ಅವರು ಪುರುಷರ 50 ಮೀಟರ್ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡರು, ಅವರು 61 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ (NSCC-2017) ತಿರುವನಂತಪುರಂನಲ್ಲಿ ನಡೆದ ಪುರುಷರ ಹಿರಿಯ 50 ಮಿ ಪಿಸ್ತೂಲ್ ಸಮಾರಂಭದಲ್ಲಿ ಚಿನ್ನವನ್ನು ಪಡೆದರು
Question 10 |
10. ನಾಂಗ್ಬೈಲ್ಲೆಮ್ ವನ್ಯಜೀವಿ ಧಾಮ (NWS) ಯಾವ ರಾಜ್ಯದಲ್ಲಿದೆ?
ಸಿಕ್ಕಿಂ | |
ಅರುಣಾಚಲ ಪ್ರದೇಶ | |
ಮೇಘಾಲಯ | |
ಮಣಿಪುರ |
ಮೇಘಾಲಯ ನಾಂಗ್ಬೈಲ್ಲೆಮ್ ವನ್ಯಜೀವಿ ಧಾಮ (NWS) ಮೇಘಾಲಯದ ರಿ ಭೋಯ್ ಜಿಲ್ಲೆಯ ಲೈಲಾದ್ ಹಳ್ಳಿಗೆ ಸಮೀಪದಲ್ಲಿದೆ ಮತ್ತು 29 ಚ.ಕಿ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿರುವ ಪ್ರಾಣಿಗಳೆಂದರೆ ಬಂಗಾಳ ಹುಲಿ, ಕಪ್ಪು ಕರಡಿ, ಚಿರತೆ ಮತ್ತು ಅನೇಕ ರೀತಿಯ ಪಕ್ಷಿಗಳು.
[button link=”http://www.karunaduexams.com/wp-content/uploads/2018/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್312017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Nice