ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,1,2,2022

Question 1
ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಈ ಕೆಳಗಿನ ಯಾವ ನಗರದಲ್ಲಿ “ಮೇಜರ್ ಧ್ಯಾನ್‍ಚಂದ್ ಕ್ರೀಡಾ ವಿಶ್ವವಿದ್ಯಾಲ”ಯಕ್ಕೆ ಶಂಕುಸ್ಥಾಪನೆ ನೇರವೇರಿಸಿದರು?
A
ಭೂಪಾಲ್
B
ಮೀರತ್
C
ಆಗ್ರಾ
D
ಸೂರತ್
Question 1 Explanation: 

ಮೀರತ್ ಪ್ರಧಾನಿ ನರೇಂದ್ರ ಮೋದಿ ರವರು ಉತ್ತರ ಪ್ರದೇಶದ ಮೀರತ್ ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕು ಸ್ಥಾಪನೆ ಮಾಡಿದರು. ಸುಮಾರು 700 ಕೋಟಿ ರೂಪಾಯಿಗಳ ವೆಚ್ಚದಲ್ಲಿ 91 ಎಕರೆ ಪ್ರದೇಶದಲ್ಲಿ ಈ ವಿಶ್ವವಿದ್ಯಾಲಯ ತಲೆ ಎತ್ತಲಿದೆ. ಪ್ರತಿ ವರ್ಷ ಸುಮಾರು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲಿದ್ದಾರೆ.

Question 2
ಯಾವ ದೇಶದಲ್ಲಿ ರಸ್ತೆ ಮತ್ತು ರೈಲ್ವೆ ಎರಡೂ ಮಾರ್ಗದಲ್ಲಿ ಚಲಿಸುವ ವಿಶ್ವದ ಮೊದಲ ಡ್ಯುಯಲ್-ಮೋಡ್ ವಾಹನಕ್ಕೆ ಚಾಲನೆ ನೀಡಲಾಯಿತು?
A
ಆಮೆರಿಕ
B
ಇಟಲಿ
C
ಜಪಾನ್
D
ಸ್ಪೇನ್
Question 2 Explanation: 

ಜಪಾನ್ ಜಪಾನಿನ ಕೈಯೊ ನಗರದಲ್ಲಿ ವಿಶ್ವದ ಮೊದಲ ಡ್ಯುಯಲ್ ಮೋಡ್ ವಾಹನ ಸೇವೆಯನ್ನು ಆರಂಭಿಸಿದೆ. ಡಿಎಂಇ ಎಂದು ಕರೆಯಲಾಗುವ ಮಿನಿ ಬಸ್ ರೀತಿಯ ಈ ವಾಹನವನ್ನು ರಸ್ತೆ ಮತ್ತು ರೈಲ್ವೆ ಹಳಿ ಮೇಲೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

Question 3
ನೀತಿ ಆಯೋಗ ಇತ್ತೀಚೆಗೆ ಬಿಡುಗಡೆಗೊಳಿಸಿದ “ಆರೋಗ್ಯ ಕಾರ್ಯಕ್ಷಮತೆ ಸೂಚ್ಯಂಕ”ದಲ್ಲಿ ಕ್ರಮವಾಗಿ ಮೊದಲು ಮತ್ತು ಕೊನೆಯ ಸ್ಥಾನವನ್ನುಗಳಿಸಿರುವ ರಾಜ್ಯಗಳು ಯಾವುವು?
A
ಕೇರಳ ಮತ್ತು ಉತ್ತರ ಪ್ರದೇಶ
B
ಕೇರಳ ಮತ್ತು ಬಿಹಾರ
C
ಪಂಜಾಬ್ ಮತ್ತು ಉತ್ತರ ಪ್ರದೇಶ
D
ಕರ್ನಾಟಕ ಮತ್ತು ಅಸ್ಸಾಂ
Question 3 Explanation: 

ಕೇರಳ ಮತ್ತು ಉತ್ತರ ಪ್ರದೇಶ ನೀತಿ ಆಯೋಗವು 2019-20 ರ ರಾಜ್ಯ ಆರೋಗ್ಯ ಸೂಚ್ಯಂಕದ ನಾಲ್ಕನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. "ಆರೋಗ್ಯಕರ ರಾಜ್ಯಗಳು, ಪ್ರಗತಿಶೀಲ ಭಾರತ" ಎಂಬ ಶೀರ್ಷಿಕೆಯಡಿ ವರದಿಯು ಆರೋಗ್ಯದ ಫಲಿತಾಂಶಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾರ್ಯಕ್ಷಮತೆ ಮತ್ತು ಅವುಗಳ ಒಟ್ಟಾರೆ ಸ್ಥಿತಿಯ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೇಯಾಂಕವನ್ನು ನೀಡುತ್ತದೆ. ದೊಡ್ಡ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನದಲ್ಲಿದ್ದು ಉತ್ತರಪ್ರದೇಶ ಕಡೆಯ ಸ್ಥಾನದಲ್ಲಿದೆ. ಚಿಕ್ಕ ರಾಜ್ಯಗಳ ಪೈಕಿ ಮಿಜೋರಾಮ್ ಮೊದಲ ಸ್ಥಾನದಲ್ಲಿದ್ದು ನಾಗಾಲ್ಯಾಂಡ್ ಕಡೆಯ ಸ್ಥಾನದಲ್ಲಿದೆ. ಕರ್ನಾಟಕ 9ನೇ ಸ್ಥಾನದಲ್ಲಿದೆ.

Question 4
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ “ಗ್ರಾಮ ಉಜಾಲ ಯೋಜನೆ” ಯಾವುದಕ್ಕೆ ಸಂಬಂಧಿಸಿದೆ?
A
ಗ್ರಾಮೀಣ ವಿಭಾಗದಲ್ಲಿ ಕಡಿಮೆ ದರದಲ್ಲಿ ಎಲ್ಇಡಿ ಬಲ್ಬ್ ವಿತರಿಸುವುದು
B
ಗೋಬರ್ ಗ್ಯಾಸ್ ನಿರ್ಮಾಣಕ್ಕೆ ಸಬ್ಸಿಡಿ ನೀಡುವುದು
C
ಎಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ವಿತರಣೆ
D
ಬಡಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದು
Question 4 Explanation: 

ಗ್ರಾಮ ಉಜಾಲ ಯೋಜನೆ(Gram Ujala Yojana)ಯಡಿ ಕೇಂದ್ರ ಸರಕಾರ ಕೇವಲ 10 ರೂ.ಗೆ ಒಂದು ಎಲ್ಇಡಿ ಬಲ್ಬ್(LED Bulb) ನೀಡುತ್ತಿದೆ. ಈ ಬಲ್ಬ್ಗಳನ್ನು ಸರ್ಕಾರಿ ಕಂಪನಿ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ನೀಡುತ್ತದೆ.

Question 5
ಈ ಕೆಳಗಿನ ಯಾವ ದೇಶ “ಬ್ರಿಕ್ಸ್ (BRICS) ನ್ಯೂ ಡೆವೆಲಪ್ಮೆಂಟ್ ಬ್ಯಾಂಕಿ”ನ ನೂತನ ಸದಸ್ಯ ರಾಷ್ಟ್ರವಾಗಲಿದೆ?
A
ಕೆನಡ
B
ಬ್ರೆಜಿಲ್
C
ಕೀನ್ಯಾ
D
ಈಜಿಪ್ಟ್
Question 5 Explanation: 

ಈಜಿಪ್ಟ್ ಬ್ರಿಕ್ಸ್ ನ್ಯೂ ಅಭಿವೃದ್ಧಿ ಬ್ಯಾಂಕ್ (NDB) ಈಜಿಪ್ಟ್ ಅನ್ನು ತನ್ನ ಹೊಸ ಸದಸ್ಯ ರಾಷ್ಟ್ರವೆಂದು ಸೇರಿಸುವುದಾಗಿ ಘೋಷಿಸಿದೆ. NDB ಅನ್ನು 2015 ರಲ್ಲಿ BRICS ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಿಂದ ಸ್ಥಾಪಿಸಲಾಯಿತು.

Question 6
“Better Health Smoke Free” ಅಭಿಯಾನ ಆರಂಭಿಸಿದ ದೇಶ_______?
A
ನಾರ್ವೆ
B
ನೆದರ್ಲ್ಯಾಂಡ್
C
ಆಸ್ಟ್ರೇಲಿಯಾ
D
ಯುಕೆ
Question 6 Explanation: 

ಯುಕೆ UK ಸರ್ಕಾರವು 'ಉತ್ತಮ ಆರೋಗ್ಯ ಹೊಗೆ-ಮುಕ್ತ' ಅಭಿಯಾನದ ಹೆಸರಿನ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಧೂಮಪಾನಿಗಳು ಧೂಮಪಾನವನ್ನು ತ್ಯಜಿಸುವಂತೆ ಒತ್ತಾಯಿಸುವುದು ಅಭಿಯಾನದ ಉದ್ದೇಶ.

Question 7
ಯಾವ ದೇಶ ಪರಮಾಣು ಸಮ್ಮಿಲನ ತಂತ್ರದಡಿ ಕೃತಕ ಸೂರ್ಯ ಸೃಷ್ಠಿಸಲು ಮುಂದಾಗಿದೆ?
A
ಫ್ರಾನ್ಸ್
B
ಚೀನಾ
C
ಇಟಲಿ
D
ಚಿಲಿ
Question 7 Explanation: 

ಚೀನಾ ಕೃತಕ ಸೂರ್ಯನನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಚೀನಾ ಇತ್ತೀಚೆಗೆ ಪರಮಾಣು ಸಮ್ಮಿಲನ ಪ್ರಯೋಗವನ್ನು ನಡೆಸಿದೆ. ಈ ಪ್ರಯೋಗವನ್ನು ಹೆಫೀ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್ನಲ್ಲಿ ನಡೆಸಲಾಗಿದೆ. ಎಕ್ಸ್ಪಿರಿಮೆಂಟಲ್ ಅಡ್ವಾನ್ಸಡ್ ಸೂಪರ್ ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಪ್ರಯೋಗದ ಮೂಲಕ ಕೃತಕ ಸೂರ್ಯನನ್ನು ಸೃಷ್ಟಿಸಲಾಗಿದೆ.

Question 8
ಪ್ರಧಾನಿ ನರೇಂದ್ರ ಮೋದಿ ರವರು ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದ “ರೇಣುಕಾಜಿ ಅಣೆಕಟ್ಟು ಯೋಜನೆ” ಯಾವ ರಾಜ್ಯಕ್ಕೆ ಸಂಬಂಧಿಸಿದೆ?
A
ಹಿಮಾಚಲ ಪ್ರದೇಶ
B
ಉತ್ತರ ಪ್ರದೇಶ
C
ಬಿಹಾರ
D
ಗುಜರಾತ್
Question 8 Explanation: 

ಹಿಮಾಚಲ ಪ್ರದೇಶ ಪ್ರಧಾನಮಂತ್ರಿಯವರು ರೇಣುಕಾಜಿ ಅಣೆಕಟ್ಟು ಯೋಜನೆಗೆ ಹಿಮಾಚಲ ಪ್ರದೇಶದಲ್ಲಿ ನೆರವೇರಿಸಿದರು. ಸುಮಾರು 7000 ಕೋಟಿ ರೂ. ವೆಚ್ಚದಲ್ಲಿ 40 ಮೆಗಾವ್ಯಾಟ್ ಯೋಜನೆ ನಿರ್ಮಾಣವಾಗಲಿದೆ. ಇದರಿಂದ ವಾರ್ಷಿಕ ಸುಮಾರು 500 ದಶಲಕ್ಷ ಕ್ಯೂಬಿಕ್ ಮೀಟರ್ ನೀರು ಪಡೆಯಲು ಸಾಧ್ಯವಾಗಲಿದೆ.

Question 9
ಇತ್ತೀಚೆಗೆ ನಿಧನರಾದ ಮ್ಯಾನ್ ಬೂಕರ್ ಪ್ರಶಸ್ತಿ ವಿಜೇತೆ “ಕೆರಿ ಹುಲ್ಮೆ” ಯಾವ ದೇಶದವರು?
A
ನ್ಯೂಜಿಲ್ಯಾಂಡ್
B
ಅಮೆರಿಕ
C
ಜಪಾನ್
D
ಚೀನಾ
Question 9 Explanation: 

ನ್ಯೂಜಿಲ್ಯಾಂಡ್ ಮ್ಯಾನ್ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದ ಕಾದಂಬರಿಗಾರ್ತಿ ಕೆರಿ ಹುಲ್ಮೆ ನಿಧನರಾದರು. ತಮ್ಮ ಮೊದಲ ಕಾದಂಬರಿ “ದಿ ಬೋನ್ ಪೀಪಲ್’ಗೆ 1984ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದಿದ್ದರು.

Question 10
ಇತ್ತೀಚೆಗೆ ಸುದ್ದಿಯಲ್ಲಿದ್ದ “ಮಹಾರಾಜ ಪರಮಹಂಸ ದೇವಸ್ಥಾನ” ಯಾವ ದೇಶದಲ್ಲಿದೆ?
A
ಪಾಕಿಸ್ತಾನ
B
ಇಂಡೋನೇಷಿಯಾ
C
ನೇಪಾಳ
D
ಶ್ರೀಲಂಕಾ
Question 10 Explanation: 

ಪಾಕಿಸ್ತಾನ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತೆರಿ ಗ್ರಾಮದಲ್ಲಿ “ಮಹಾರಾಜ ಪರಮಹಂಸ ದೇವಸ್ಥಾನ”ವಿದೆ. ಇತ್ತೀಚೆಗೆ ರೂ 3.3 ಕೋಟಿ ವೆಚ್ಚದಲ್ಲಿ ಈ ದೇವಸ್ಥಾನವನ್ನು ನವೀಕರಿಸಿದ್ದು, ಹಿಂದೂ ಭಕ್ತಾದಿಗಳಿಗೆ ಪ್ರವೇಶ ನೀಡಲಾಗಿತ್ತು.

There are 10 questions to complete.

Leave a Comment

This site uses Akismet to reduce spam. Learn how your comment data is processed.