ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-29,30, 2016
Question 1 |
1.ಗೋವಾದಲ್ಲಿ ಮುಕ್ತಾಯಗೊಂಡ 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಸ್ವರ್ಣ ಮಯೂರ ಪ್ರಶಸ್ತಿ ಗೆದ್ದುಕೊಂಡ ಸಿನಿಮಾ ಯಾವುದು?
ಅಲ್ಲಮ | |
ಡಾಟರ್ | |
ಕೋರ್ಟ್ | |
ರೌಫ್ |
ಇರಾನ್ನ ಸಿನಿಮಾ ನಿರ್ದೇಶಕ ರೆಜಾ ಮೀರ್ಕರೀಮಿ ಅವರ ‘ಡಾಟರ್’ ಚಲನಚಿತ್ರಕ್ಕೆ 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಸ್ವರ್ಣ ಮಯೂರ ಪ್ರಶಸ್ತಿ ಲಭಿಸಿದೆ. ಈ ವರ್ಷದ ಆರಂಭದಲ್ಲಿ ನಡೆದ ಮಾಸ್ಕೊ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ‘ಡಾಟರ್’ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ.ಈ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ₹40 ಲಕ್ಷ ನಗದು, ಪಾರಿತೋಷಿಕ ಮತ್ತು ಪ್ರಮಾಣಪತ್ರ ನೀಡಲಾಗುವುದು. ‘ಡಾಟರ್’ ದಕ್ಷಿಣ ಇರಾನ್ನಲ್ಲಿ ನಡೆಯುವ ಕುಟುಂಬವೊಂದರ ಕತೆ. ಆತ್ಮೀಯ ಗೆಳತಿಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಕಿಯೊಬ್ಬಳು ತನ್ನ ಕಟ್ಟುನಿಟ್ಟಿನ ತಂದೆಯ ಅನುಮತಿ ಪಡೆಯದೆ ಟೆಹರಾನ್ಗೆ ಹೋಗುವುದರ ಸುತ್ತ ಸಿನಿಮಾ ಸಾಗುತ್ತದೆ. ಅರ್ಧ ದಿನದಲ್ಲಿ ವಾಪಸ್ ಮನೆಗೆ ಬರಬಹುದೆಂದು ಯೋಚಿಸಿ ಅವಳು ಹೋಗುತ್ತಾಳೆ. ಆದರೆ ಹಿಂದಿರುಗುವಾಗ ವಾತಾವರಣ ಸಂಪೂರ್ಣವಾಗಿ ಮಂಜು ಮುಸುಕುತ್ತದೆ. ಆಕೆಯ ಎಲ್ಲ ಯೋಜನೆಗಳೂ ತಲೆಕೆಳಗಾಗುತ್ತವೆ. ‘ಡಾಟರ್’ನಲ್ಲಿ ಕಟ್ಟುನಿಟ್ಟು ತಂದೆಯ ಪಾತ್ರ ಮಾಡಿದ ಇರಾನ್ನ ನಟ ಫರ್ಹದ್ ಅಸ್ಲಾನಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಗೆ ರಜತ ಮಯೂರ ಮತ್ತು ₹10 ಲಕ್ಷ ನಗದು ಬಹುಮಾನ ಇದೆ.
Question 2 |
2. ಅಬುಧಾಬಿ ಫಾರ್ಮೂಲಾ-1 ರೇಸ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡವರು ___________?
ಸೆಬಾಸ್ಟಿಯನ್ ವೆಟಲ್ | |
ಲೇವಿಸ್ ಹ್ಯಾಮಿಲ್ಟನ್ | |
ನಿಕೊ ರೊಸ್ಬರ್ಗ್ | |
ಕ್ರಿಸ್ಟೋಫರ್ ಜಾನ್ |
ಅಬುಧಾಬಿ ಗ್ರ್ಯಾನ್ಪ್ರಿ ಫಾರ್ಮುಲಾ–1 ಮರ್ಸಿಡೀಸ್ ತಂಡದ ಲೇವಿಸ್ ಹ್ಯಾಮಿಲ್ಟನ್ ರವರು ಚಾಂಪಿಯನ್ ಆಗಿ ಹೊರಹೊಮ್ಮಿದರು.
Question 3 |
3. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ‘ಅತ್ಯುತ್ತಮ ಬಾಕ್ಸರ್’ ಪ್ರಶಸ್ತಿ”ಗೆ ಆಯ್ಕೆಯಾಗಿರುವ ಭಾರತದ ಬಾಕ್ಸರ್ ಯಾರು?
ವಿಕಾಸ್ ಕೃಷ್ಣ | |
ದೇವೆಂದ್ರೊ ಸಿಂಗ್ | |
ಮನೋಜ್ ಕುಮಾರ್ | |
ಜಿತೇಂದ್ರ ಕುಮಾರ್ |
ಭಾರತದ ಪ್ರಸಿದ್ದ ಬಾಕ್ಸರ್ ವಿಕಾಸ್ ಕೃಷ್ಣ ಅವರನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಅತ್ಯುತ್ತಮ ಬಾಕ್ಸರ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವಿಕಾಸ್ ಅವರು ಏಷ್ಯನ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಡಿಸೆಂಬರ್ 20 ರಂದು ನಡೆಯುವ ಎಐಬಿಎ 70ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ನೀಡುವುದಾಗಿ ಬಾಕ್ಸಿಂಗ್ ಸಂಸ್ಥೆ ಹೇಳಿದೆ.
Question 4 |
4. ಹಾಂಕಾಂಗ್ ಓಪನ್ ಸೂಪರ್ ಸರಣೆ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳೆಯರ ಮತ್ತು ಪರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?
ತೈ ಜು ಯಿಂಗ್ ಮತ್ತು ಸಮೀರ್ ವರ್ಮಾ | |
ಪಿ ವಿ ಸಿಂಧೂ ಮತ್ತು ಸಮೀರ್ ವರ್ಮಾ | |
ತೈ ಜು ಯಿಂಗ್ ಮತ್ತು ಕಾ ಲಾಂಗ್ ಆಂಗಸ್ | |
ಪಿ ವಿ ಸಿಂಧೂ ಮತ್ತು ಕಾ ಲಾಂಗ್ ಆಂಗಸ್ |
ಹಾಂಕಾಂಗ್ ಓಪನ್ ಸೂಪರ್ ಸರಣೆ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳೆಯರ ವಿಭಾಗದದಲ್ಲಿ ಚೀನಾದ ತೈ ಜು ಯಿಂಗ್ ರವರು ಭಾರತದ ಪಿ ವಿ ಸಿಂಧೂ ರವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ಪುರುಷರ ವಿಭಾಗದಲ್ಲಿ ಭಾರತದ ಸಮೀರ್ ವರ್ಮಾ ಅವರು 14–21, 21–10, 11–21ರಲ್ಲಿ ಸ್ಥಳೀಯ ಆಟಗಾರ ಕಾ ಲಾಂಗ್ ಆಂಗಸ್ಗೆ ಶರಣಾದರು.
Question 5 |
5. ಈ ಕೆಳಗಿನ ಯಾರನ್ನು ಮಿಲಿಟರಿ ಕಾರ್ಯಾಚರಣೆಯ ಮಹಾ ನಿರ್ದೇಶಕರಾಗಿ ಇತ್ತೀಚೆಗೆ ನೇಮಿಸಲಾಗಿದೆ?
ಸಮೀರ್ ಆಚಾರ್ಯ | |
ಸುಧೀರ್ ರಾವೋತ್ | |
ಎ. ಕೆ. ಭಟ್ | |
ಸುದರ್ಶನ್ ಜೈನ್ |
ಮಿಲಿಟರಿ ಕಾರ್ಯಾಚರಣೆಯ ಮಹಾ ನಿರ್ದೇಶಕರಾಗಿ ಲೆಫ್ಟಿನೆಂಟ್ ಜನರಲ್ ಎ.ಕೆ.ಭಟ್ ಅವರನ್ನು ನೂತನವಾಗಿ ನೇಮಿಸಲಾಗಿದೆ. ಗೂರ್ಖಾ ರೆಜಿಮೆಂಟ್ ಅಧಿಕಾರಿಯಾಗಿರುವ ಭಟ್ ಅವರು ಪ್ರಸ್ತುತ ಸೇನಾ ಮುಖ್ಯ ಕಚೇರಿಯಲ್ಲಿ ದೂರುಗಳು ಮತ್ತು ಸಲಹಾ ಮಂಡಳಿಯಲ್ಲಿ ಮುಖ್ಯಸ್ಥರಾಗಿದ್ದಾರೆ.
Question 6 |
6. ವಿಶ್ವದ ಮೊದಲ ಉಪ್ಪು ಸಹಿಷ್ಣುತೆ ಸಸ್ಯ (Hypophytes) ತೋಟವನ್ನು ಯಾವ ರಾಜ್ಯದಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು?
ತಮಿಳುನಾಡು | |
ಗುಜರಾತ್ | |
ರಾಜಸ್ತಾನ | |
ಮಹಾರಾಷ್ಟ್ರ |
ವಿಶ್ವದ ಮೊದಲ ಉಪ್ಪು ಸಹಿಷ್ಣುತೆ ಸಸ್ಯ (Hypophytes) ತೋಟವನ್ನು ತಮಿಳುನಾಡಿನ ಕರಾವಳಿ ತೀರದ ವೇದಾರಣ್ಯಂ ಬಳಿ ಉದ್ಘಾಟಿಸಲಾಯಿತು. ವಿಶ್ವದಲ್ಲೆ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ತೋಟ ನಿರ್ಮಿಸಲಾಗಿದ್ದು, ಮಾರಿಷಸ್ ಅಧ್ಯಕ್ಷ ಅಮಿನ ಗರಿಭ್ ಫಕಿಂ ಈ ತೋಟವನ್ನು ವಿಡಿಯೋ ಸಂವಾದ ಮೂಲಕ ಉದ್ಘಾಟಿಸಿದರು.
Question 7 |
7. ಏಷ್ಯಾದ ಮೊದಲ ಮತ್ತು ಅತಿ ಉದ್ದದ ಸೈಕಲ್ ಹೆದ್ದಾರಿ ಯಾವ ರಾಜ್ಯದಲ್ಲಿದೆ?
ಕರ್ನಾಟಕ | |
ಉತ್ತರ ಪ್ರದೇಶ | |
ತಮಿಳುನಾಡು | |
ಆಂಧ್ರ ಪ್ರದೇಶ |
ಏಷ್ಯಾದ ಮೊದಲ ಮತ್ತು ಉದ್ದದ ಸೈಕಲ್ ಹೆದ್ದಾರಿಯನ್ನು ಉತ್ತರ ಪ್ರದೇಶದಲ್ಲಿ ಉದ್ಘಾಟಿಸಲಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರವರು ಸೈಕಲ್ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ. ಇದು ಭಾರತದ ಮೊದಲ ಸೈಕಲ್ ಹೆದ್ದಾರಿ ಸಹ ಆಗಿದೆ. 207 ಕಿ.ಮೀ ಉದ್ದದ ಸೈಕಲ್ ಹೆದ್ದಾರಿ ಆಗ್ರಾ ಮತ್ತು ಇಟಾವದ ಸಿಂಹ ಸಫಾರಿಯನ್ನು ಸಂಪರ್ಕಿಸಲಿದೆ.
Question 8 |
8. ಫಾರ್ಮೂಲಾ -1 ರೇಸ್ ನಲ್ಲಿ ವಿಶ್ವಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡವರು ಯಾರು?
ನಿಕೊ ರೊಸ್ಬರ್ಗ್ | |
ಸರ್ಜಿಯೊ ಪೆರೆಜ್ | |
ಲೇವಿಸ್ ಹ್ಯಾಮಿಲ್ಟನ್ | |
ಸೆಬಾಸ್ಟಿಯನ್ ವೆಟಲ್ |
ಮರ್ಸಿಡೀಸ್ ತಂಡದ ಚಾಲಕ ನಿಕೊ ರೋಸ್ ಬರ್ಗ್ ಅವರು ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿದ್ದಾರೆ. ಅಬುದಾಬಿನಲ್ಲಿ ನಡೆದ ಋತುವಿನ ಕೊನೆಯ ರೇಸ್ ಅಬುಧಾಬಿ ಗ್ರ್ಯಾನ್ಪ್ರಿ ಫಾರ್ಮುಲಾ–1 ರೇಸ್ನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಜರ್ಮನಿಯ ಚಾಲಕ ಈ ಸಾಧನೆ ಮಾಡಿದರು. ಇಲ್ಲಿ ಪ್ರಶಸ್ತಿ ಗೆದ್ದರೂ ಕೂಡಾ ಮರ್ಸಿಡೀಸ್ ತಂಡದ ಲೇವಿಸ್ ಹ್ಯಾಮಿಲ್ಟನ್ ಅವರಿಗೆ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಆಗಲಿಲ್ಲ.
Question 9 |
9. ಈ ಕೆಳಗಿನ ನೋಟು ಮುದ್ರಣ ಸಂಸ್ಥೆಗಳನ್ನು ಗಮನಿಸಿ:
I) ಮೈಸೂರು
II) ಸಲ್ಬೊನಿ
III) ನಾಸಿಕ್
IV) ದೇವಸ್
ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಮುದ್ರಣ ಸಂಸ್ಥೆಗಳು ಯಾವುವು?
I & II | |
III & IV | |
I, II & III | |
I, II, III & IV |
ದೇಶದ ನಾಲ್ಕು ನೋಟು ಮುದ್ರಣ ಸಂಸ್ಥೆಗಳ ಪೈಕಿ ಮೈಸೂರು ಮತ್ತು ಸಲ್ಬೊನಿ ಸಂಸ್ಥೆಗಳ ಭಾರತೀಯ ರಿಸರ್ವ್ ಬ್ಯಾಂಕ್ ಒಡೆತನದಲ್ಲಿವೆ. ನಾಸಿಕ್ ಮತ್ತು ದೇವಸ್ ಮುದ್ರಣ ಸಂಸ್ಥೆಗಳು ಕೇಂದ್ರ ಸರ್ಕಾರದ ಓಡೆತನದಲ್ಲಿವೆ.
Question 10 |
10. ಇತ್ತೀಚೆಗೆ ಕುಡಿಯುವ ನೀರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾಲಿನ್ಯಕಾರಕಗಳನ್ನು ಗುರುತಿಸಿ:
I) ಅರ್ಸೆನಿಕ್
II) ಫ್ಲೂರೈಡ್
III) ಯುರೇನಿಯಂ
IV) ಸಾರ್ಬಿಟಲ್
ಸರಿಯಾದ ಉತ್ತರಗಳನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಆಯ್ಕೆಮಾಡಿ:
I & II | |
I, II & III | |
II & IIII | |
I, II, III & IV |
ಅರ್ಸೆನಿಕ್ ಮತ್ತು ಪ್ಲೂರೈಡ್ ಕುಡಿಯುವ ನೀರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾನಿಕಾರಕ ರಾಸಾಯನಿಕಗಳಾಗಿವೆ. ಹಣ್ಣಿನ ತೋಟಗಳಿಂದ ಹರಿದು ಬರುವ ನೀರು ಅರ್ಸೆನಿಕ್ ನ ಪ್ರಮುಖ ಮೂಲವಾದರೆ, ರಸಗೊಬ್ಬರ ಮತ್ತು ಅಲ್ಯೂಮಿನಿಯಂ ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ನೀರು ಪ್ಲೂರೈಡ್ ಗೆ ಕಾರಣವಾಗಿದೆ.
[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-29.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
thank you so much for ur valualbe effort and support.which help us to learn things in easy way .and help us to guess type of question whcu may arrives in the exam.