ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,5 2016
Question 1 |
1. “ಡಿಯಾಮರ್-ಭಾಷ ಅಣೆಕಟ್ಟು (Diamer-Bhasha Dam)” ಯಾವ ಎರಡು ದೇಶಗಳ ನಡುವಿನ ವಿವಾದತ್ಮಕ ಯೋಜನೆಯಾಗಿದೆ?
ಭಾರತ-ಪಾಕಿಸ್ತಾನ | |
ಪಾಕಿಸ್ತಾನ-ಆಪ್ಘಾನಿಸ್ತಾನ | |
ಭಾರತ-ಬಾಂಗ್ಲದೇಶ | |
ಭಾರತ-ಚೀನಾ |
ಡಿಯಾಮರ್–ಬಾಷಾ’ ಅಣೆಕಟ್ಟೆ ಯೋಜನೆ ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದತ್ಮಕ ಯೋಜನೆಯಾಗಿದೆ. ಪಾಕಿಸ್ತಾನ ಈ ಅಣೆಕಟ್ಟನ್ನು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್–ಬಲ್ಟಿಸ್ತಾನ ಪ್ರಾಂತ್ಯದಲ್ಲಿ ಸಿಂಧು ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದೆ. 4500 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿಯನ್ನೂ ಈ ಯೋಜನೆ ಹೊಂದಿದೆ. ಇತ್ತೀಚೆಗೆ ‘ಡಿಯಾಮರ್–ಬಾಷಾ’ ಅಣೆಕಟ್ಟೆ ಯೋಜನೆಯ ಆರ್ಥಿಕ ಪ್ರಸ್ತಾವಕ್ಕೆ ಪ್ರಧಾನಿ ನವಾಜ್ ಷರೀಫ್ ಅವರು ಅನುಮೋದನೆ ನೀಡಿದ್ದಾರೆ.
Question 2 |
2. ಈ ಕೆಳಗಿನ ಯಾರು ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ?
ದೀಪಕ್ ಮಿಶ್ರಾ | |
ರಂಜನ್ ಗೊಗಯ್ | |
ಮದನ್ ಲೊಕುರ್ | |
ಜೆ ಎಸ್ ಖೇಹರ್ |
ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಜೆ ಎಸ್ ಖೇಹರ್ ರವರು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಜನವರಿ 4, 2017 ರಂದು ರಾಷ್ಟ್ರಪತಿರವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೆ ಎಸ್ ಖೇಹರ್ ರವರು ಸುಪ್ರೀಂಕೋರ್ಟ್ನ 44ನೇ ಮುಖ್ಯನ್ಯಾಯಾಧೀಶರಾಗಲಿದ್ದಾರೆ. ಜನವರಿ 4, 2017 ರಿಂದ ಆಗಸ್ಟ್ 4, 2017ರವರೆಗೆ ಇವರು ಕಾರ್ಯನಿರ್ವಹಿಸಲಿರುವರು. ಖೇಹರ್ ರವರು ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶರಾಗಲಿರುವ ಐದನೇ ಸಿಖ್ ವ್ಯಕ್ತಿ.
Question 3 |
3. ಟೈಮ್ಸ್ ನಿಯತಕಾಲಿಕೆ “2016ನೇ ಸಾಲಿನ ವರ್ಷದ ವ್ಯಕ್ತಿ” ಸಮೀಕ್ಷೆಯಲ್ಲಿ ವರ್ಷದ ವ್ಯಕ್ತಿಯಾಗಿ ಗೌರವಕ್ಕೆ ಯಾರು ಪಾತ್ರರಾಗಿದ್ದಾರೆ?
ಡೋನಾಲ್ಡ್ ಟ್ರಂಪ್ | |
ನರೇಂದ್ರ ಮೋದಿ | |
ಮಾರ್ಕ್ ಜೂಕರ್ ರ್ಬಗ್ | |
ಹಿಲರಿ ಕ್ಲಿಂಟನ್ |
ಟೈಮ್ ನಿಯತಕಾಲಿಕೆ '2016ನೇ ಸಾಲಿನ ವರ್ಷದ ವ್ಯಕ್ತಿ' ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಷದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಟೈಮ್ ನಿಯತಕಾಲಿಕ ಓದುಗರ ಮತಗಳನ್ನು ಆಧರಿಸಿ ಈ ಗೌರವ ನೀಡಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಮೋದಿಯವರು ಶೇ. 18 ಮತಗಳನ್ನು ಗಳಿಸಿದ್ದಾರೆ. ಅದೇ ವೇಳೆ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್ಬರ್ಗ್ (ಶೇ.2) ಮತ್ತು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್(ಶೇ.4) ಮತಗಳಿಸಿದ್ದಾರೆ ಎಂದು ಟೈಮ್ ಹೇಳಿದೆ.
Question 4 |
4. ಮೊಟ್ಟಮೊದಲ “ಅಂತಾರಾಷ್ಟ್ರೀಯ ಗೀತಾ ಮಹೋತ್ಸವ”ಯಾವ ರಾಜ್ಯದಲ್ಲಿ ಆರಂಭಗೊಂಡಿದೆ?
ಹರಿಯಾಣ | |
ಮಧ್ಯಪ್ರದೇಶ | |
ಪಶ್ಚಿಮ ಬಂಗಾಳ | |
ತೆಲಂಗಣ |
ಚೊಚ್ಚಲ ಅಂತಾರಾಷ್ಟ್ರೀಯ ಗೀತಾ ಮಹೋತ್ಸವಕ್ಕೆ ಹರಿಯಾಣದ ಕುರುಕ್ಷೇತ್ರದಲ್ಲಿ ಆರಂಭಗೊಂಡಿದೆ. ಡಿಸೆಂಬರ್ 6 ರಿಂದ ಐದು ದಿನಗಳ ಕಾಲ ಈ ಮಹೋತ್ಸವ ನಡೆಯಲಿದೆ. ವಿವಿಧ ದೇಶಗಳ ವಿವಿಧ ಧರ್ಮಗಳ ವಿದ್ವಾಂಸರು ಮತ್ತು ಕಲಾವಿದರು ಅನೇಕ ಆಧ್ಯಾತ್ಮಿಕ ನಾಯಕರು ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಮಹೋತ್ಸವದಲ್ಲಿ ಒಂದೇ ದಿನ 18 ಸಾವಿರ ವಿದ್ಯಾರ್ಥಿಗಳು ಅಷ್ಠದಶ್ ಶ್ಲೋಕವನ್ನು ಪಠಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಿದ್ದಾರೆ.
Question 5 |
5. ಭಾರತೀಯ ನೌಕಪಡೆ ಮತ್ತು ರಾಯಲ್ ನೌಕಪಡೆಯ ನಡುವಿನ ವಾರ್ಷಿಕ ದ್ವಿಪಕ್ಷೀಯ ಕಡಲ ವ್ಯಾಯಾಮ “ಕೊಂಕಣ್ 16 ಅಭ್ಯಾಸ (Exercise Konkan 16) ಎಲ್ಲಿ ಆರಂಭಗೊಂಡಿದೆ?
ವಿಶಾಖಪಟ್ಟಣ | |
ಕೊಚ್ಚಿ | |
ಮುಂಬೈ | |
ಕಾರವಾರ |
“ಎಕ್ಸರ್ಸೈಸ್ ಕೊಂಕಣ-16” ಭಾರತೀಯ ನೌಕಪಡೆ ಮತ್ತು ರಾಯಲ್ ನೌಕಪಡೆ (ಯುಕೆ) ನಡುವಿನ 16ನೇ ವಾರ್ಷಿಕ ದ್ವಿಪಕ್ಷೀಯ ಕಡಲ ವ್ಯಾಯಾಮ ಮುಂಬೈನಲ್ಲಿ ಆರಂಭಗೊಂಡಿತು. 2004 ರಿಂದ ಉಭಯ ದೇಶಗಳ ನಡುವೆ ಈ ಸಮರಭ್ಯಾಸ ನಡೆಯುತ್ತಿದೆ. ಎರಡು ಹಂತಗಳಲ್ಲಿ ಈ ಅಭ್ಯಾಸ ನಡೆಯಲಿದ್ದು, ಮೊದಲ ಹಂತ ಡಿಸೆಂಬರ್ 5 ರಿಂದ 9ರವರೆಗೆ ಮುಂಬೈನಲ್ಲಿ ನಡೆಯಲಿದೆ. ಎರಡನೇ ಹಂತ “ಲೈವ್ ಎಕ್ಸರ್ಸೈಸ್ (Livex)” ಗೋವಾದಲ್ಲಿ 12 ರಿಂದ 16 ರವರೆಗೆ ನಡೆಯಲಿದೆ.
Question 6 |
6. ಈ ಕೆಳಗಿನ ಯಾರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ?
ಒ. ಪನ್ನೀರ್ ಸೆಲ್ವಂ | |
ಶಶಿಕಲಾ ನಟರಾಜನ್ | |
ಪಡಿಯಪ್ಪನ್ ತಂಗವೇಲು | |
ಪಳನಿಮುತ್ತು |
ಒ. ಪನ್ನೀರ್ ಸೆಲ್ವಂ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪನ್ನಿರ್ ಸೆಲ್ವಂ ಅವರು ಎಐಎಡಿಎಂಕೆ ಶಾಸಕರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
Question 7 |
7. ಚಹಾ ತೋಟದ ಕಾರ್ಮಿಕರಿಗೆ ವೈಯುಕ್ತಿಕ ಬ್ಯಾಂಕ್ ಖಾತೆ ಮೂಲಕ ವೇತನ ಪಾವಸಿದ ದೇಶದ ಮೊದಲ ಜಿಲ್ಲೆ ಯಾವುದು?
ಡಾರ್ಜಲಿಂಗ್ | |
ಚಿಕ್ಕಮಗಳೂರು | |
ಹೈಲಕಂಡಿ | |
ಮಣ್ಣಪುರಂ |
ಅಸ್ಸಾಂನ ಹೈಲಕಂಡಿ ಜಿಲ್ಲೆಯ ಚಹಾ ತೋಟದ ಕಾರ್ಮಿಕರಿಗೆ ವೈಯುಕ್ತಿಕ ಬ್ಯಾಂಕ್ ಖಾತೆ ಮೂಲಕ ವೇತನ ಪಾವಸಿದ್ದು ಆ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಜಿಲ್ಲೆ ಎನಿಸಿದೆ. ಪ್ಲಾಂಟೇಷನ್ ಕಾರ್ಮಿಕರಿಗೆ ಕಡ್ಡಾಯವಾಗಿ ಡಿಸೆಂಬರ್ 15ರೊಳಗೆ ಬ್ಯಾಂಕ್ ಖಾತೆ ಮೂಲಕ ವೇತನ ಪಾವತಿಸುವಂತೆ ರಾಜ್ಯ ಸರ್ಕಾರ ಗಡುವು ನೀಡಿತ್ತು. ಆದರೆ ಗಡುವಿನ ಅವಧಿಯೊಳಗೆ ಜಿಲ್ಲೆಯ ಚಹಾ ತೋಟದ ಕಾರ್ಮಿಕರಿಗೆ ಬ್ಯಾಂಕ್ ಖಾತೆ ಮೂಲಕ ಹಣ ಪಾವತಿ ಮಾಡಲಾಗಿದೆ.
Question 8 |
8. 2016 ಹೀರೊ ವಿಶ್ವ ಚಾಲೆಂಜ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದ ಹಿಡೆಕಿ ಮತ್ಸುಯುಮಾ ಯಾವ ದೇಶದವರು?
ಜಪಾನ್ | |
ಫಿಲಿಫೈನ್ಸ್ | |
ಚೀನಾ | |
ರಷ್ಯಾ |
ಜಪಾನ್ನ ಹಿಡೆಕಿ ಮತ್ಸುಯುಮಾ ಅವರು 2016 ಹೀರೊ ವಿಶ್ವ ಚಾಲೆಂಜ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಬೆನಿ ಗಾಲ್ಫ್ ಕ್ಲಬ್ನಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಮತ್ಯುಯುಮಾ ಅವರಿಗೆ ಸ್ವೀಡನ್ನ ಗಾಲ್ಫರ್, ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿರುವ ಹೆನ್ರಿಕ್ ಸ್ಟೆನ್ಸನ್ ಅವರಿಂದ ತೀವ್ರ ಪೈಪೋಟಿ ಎದುರಾಗಿತ್ತು. ಇದರ ನಡುವೆಯೂ 65, 67 ಮತ್ತು 73ನೇ ಸುತ್ತುಗಳಲ್ಲಿ ಪಾರಮ್ಯ ಮೆರೆದ ಜಪಾನ್ನ ಗಾಲ್ಫರ್ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.
Question 9 |
9. ಯಾವ ಇ-ಕಾರ್ಮಸ್ ಸಂಸ್ಥೆ ಜಾಗತಿಕ ಸ್ಟಾರ್ಟ್ ಆಫ್ ಕಾರ್ಯಕ್ರಮ “ಲಾಂಚ್ ಪ್ಯಾಡ್ (Launch Pad)” ಅನ್ನು ಭಾರತದಲ್ಲಿ ಆರಂಭಿಸಿದೆ?
ಫ್ಲಿಪ್ ಕಾರ್ಟ್ | |
ಸ್ನಾಪ್ ಡೀಲ್ | |
ಅಮೆಜಾನ್ | |
ಶಾಪ್ ಕ್ಲೂ |
ಇ-ಕಾರ್ಮಸ್ ದಿಗ್ಗಜ ಅಮೆಜಾನ್ ಜಾಗತಿಕ ಸ್ಟಾರ್ಟ್ ಆಫ್ ಕಾರ್ಯಕ್ರಮ “ಲಾಂಚ್ ಪ್ಯಾಡ್”ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಯೋಜನೆಯಡಿ ಭಾರತದ ಸ್ಟಾರ್ಟ್ ಆಫ್ ಗಳು ತಮ್ಮ ಉತ್ಪನ್ನಗಳನ್ನು ಅಮೆಜಾನ್ ಮೂಲಕ ಮಾರಾಟ ಮಾಡಬಹುದಾಗಿದೆ.
Question 10 |
10. “ಹೂವರ್ ಅಣೆಕಟ್ಟನ್ನು (Hoover Dam)” ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ನೈಲ್ ನದಿ | |
ಕೊಲೊರಡೊ ನದಿ | |
ರೈನೆ ನದಿ | |
ನೈಲ್ ನದಿ |
ಹೂವರ್ ಅಣೆಕಟ್ಟನ್ನು ಕೊಲೊರಡೊ ನದಿಗೆ ಅಮೆರಿಕಾದ ಅರಿಜೊನಾ ಮತ್ತು ನೆವಡ ರಾಜ್ಯಗಳ ಗಡಿ ಭಾಗದಲ್ಲಿ ನಿರ್ಮಿಸಲಾಗಿದೆ.
[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-5.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Too usefull questions…. Thanks
Super questions…
Malraddi@gmail.com
State:-karnataka
Dist:-vijayapur
Tq:-indi
Village:-dhulkhed
Airea:-haralayya colony
thanks s