ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 2, 2016
Question 1 |
1.ಫ್ರಾನ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ನೈಟ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಫ್ರೆಂಚ್ ಲಿಜ್ಹನ್ ಆಫ್ ಹಾನರ್ Knight of the National Order of the French Legion of Honour)” ಯಾರಿಗೆ ನೀಡಲಾಗಿದೆ?
ರತನ್ ಟಾಟಾ | |
ಕಿರಣ್ ಮಜುಂದಾರ್ ಷಾ | |
ಮುಖೇಶ್ ಅಂಬಾನಿ | |
ಅಜೀಂ ಪ್ರೇಮ್ ಜಿ |
ಬಯೋಕಾನ್ ಲಿಮಿಟೆಡ್ ಮುಖ್ಯಸ್ಥೆ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಕಿರಣ್ ಮಜುಂದಾರ್ ಷಾ ಅವರಿಗೆ ಫ್ರಾನ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ನೈಟ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಫ್ರೆಂಚ್ ಲಿಜ್ಹನ್ ಆಫ್ ಹಾನರ್” ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಬಯೋಸೈನ್ಸ್ ಮತ್ತು ಸಂಶೋಧನೆಗೆ ಇವರು ನೀಡಿರುವ ಜಾಗತಿಕ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಪ್ರಶಸ್ತಿಯನ್ನು ಫ್ರೆಂಚ್ ಅಧ್ಯಕ್ಷರು ಈ ವರ್ಷದ ಕೊನೆಯಲ್ಲಿ ಪ್ರಧಾನ ಮಾಡಲಿದ್ದಾರೆ. ಈ ಹಿಂದೆ ಈ ಪ್ರಶಸ್ತಿಯನ್ನು ಪಡೆದ ಭಾರತೀಯರೆಂದರೆ ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ನಂದಿತಾ ದಾಸ್ ಶಾರೂಖ್ ಖಾನ್ ಮತ್ತು ಶಿವಾಜಿ ಗಣೇಶನ್.
Question 2 |
2.ಲೊನಲ್ವ ಇಂಟರ್ ನ್ಯಾಷನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾ (Lonavla International Film Festival of India) ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
ಗಿರೀಶ್ ಕಾರ್ನಾಡ್ | |
ಮಣಿರತ್ನಂ | |
ಗೋವಿಂದ್ ನಿಹಲನಿ | |
ವಿ.ಕೆ.ಮೂರ್ತಿ |
ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರು ತನ್ನ ಸಮಕಾಲೀನ ಚಿತ್ರ ನಿರ್ದೇಶಕ ಗೋವಿಂದ್ ನಿಹಲನಿ ಅವರಿಗೆ ಲೊನಲ್ವ ಇಂಟರ್ ನ್ಯಾಷನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿದರು. ನಿಲಹನಿ ಅವರ “ಆಕ್ರೋಶ್” ಮತ್ತು “ಅರ್ಧ್ ಸತ್ಯ” ಅಪಾರ ಜನಮನ್ನಣೆ ಗಳಿಸಿದ ಸಿನಿಮಾಗಳಾಗಿವೆ.
Question 3 |
3.ಈ ಕೆಳಗಿನ ಯಾವ ನಟನನ್ನು ಆಸ್ಕರ್ ಜೀವಮಾನ ಸಾಧನೆ (Lifetime Achievement) ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ?
ಜಾಕಿ ಚಾನ್ | |
ಜಾನಿ ಡೆಪ್ | |
ರಾಬರ್ಟ್ ಡಿ ನಿರೊ | |
ರಸ್ಸೆಲ್ ಕ್ರೌ |
ಮಾರ್ಷಲ್ ಆರ್ಟ್ಸ್ ಕಲೆಗಾರ, ಚಿತ್ರ ನಿರ್ದೇಶಕ ಮತ್ತು ಪ್ರಸಿದ್ದ ನಟ ಜಾಕಿಚಾನ್ ಅವರನ್ನು ಪ್ರತಿಷ್ಠಿತ ಆಸ್ಕರ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗೆ ಆಸ್ಕರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಚಾನ್ ಅವರಿಗೆ ನೀಡಲಾಗುತ್ತಿದೆ. ಚಾನ್ ಅವರನ್ನು 2016 ಗವರ್ನಸ್ ಪ್ರಶಸ್ತಿಗೂ ಆಯ್ಕೆಮಾಡಲಾಗಿದೆ. ಜಾಕಿಚಾನ್ ಸೇರಿದಂತೆ ಸಂಕಲನಕಾರ ಅನ್ನೇವಿ ಕೋಟ್ಸ್ , ಆವರಣ ನಿರ್ದೇಶಕ ಲೀನ್ ಸ್ಟಾರ್ ಮಾಸ್ಟರ್ ಮತ್ತು ನಿರ್ಮಾಪಕ ಫೆಡ್ರಿಕ್ ವೈಸ್ಮೆನ್ ಅವರಿಗೆ ಅಸ್ಕರ್ ಪ್ರಶಸ್ತಿ ನೀಡಲು ಯುಎಸ್ ಫಿಲಂ ಅಕಾಡೆಮಿ ನಿರ್ಧರಿಸಿದೆ. ಜಾಕಿಚಾನ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು , ವಿಶೇಷವಾಗಿ ಮಾರ್ಷಲ್ ಸಿನಿಮಾಗಳಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ. ಪ್ರಮುಖ ಚಿತ್ರಗಳಾದ ಹವರ್, ಕುಂಗ್ಫು ಫಾಂಡ ಮತ್ತುಕರಾಟೆ ಕಿಡ್ ಮೊದಲಾದ ಸಿನಿಮಾಗಳು ವಿಶ್ವಾದ್ಯಂತ ಹೆಚ್ಚು ಪ್ರಸಿದ್ಧಿಯಾಗಿವೆ. ಪ್ರಶಸ್ತಿಯನ್ನು ನವೆಂಬರ್ ನಲ್ಲಿ ವಿತರಿಸಲಾಗುವುದು. ಚಾನ್ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ನಟರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
Question 4 |
4.ಮಾಜಿ ರಾಜ್ಯಸಭಾ ಸದಸ್ಯ ನವಜೋತ್ ಸಿಂಗ್ ಸಿಧು ರವರು ಸ್ಥಾಪಿಸಿರುವ ಹೊಸ ರಾಜಕೀಯ ಪಕ್ಷದ ಹೆಸರೇನು?
ಪಂಜಾಬ್ ಆದ್ಮಿ | |
ಪಂಜಾಬ್ ಪೀಪಲ್ ಪಾರ್ಟಿ | |
ಅವಾಜ್ ಇ ಪಂಜಾಬ್ | |
ಪಂಜಾಬ್ ಜನ್ ವಿಮೋಚನ್ |
ಮಾಜಿ ಕ್ರಿಕೆಟರ್ ಮತ್ತು ಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಅವರು ಅವಾಜ್ ಇ ಪಂಜಾಬ್ ಹೆಸರಿನ ಹೊಸ ರಾಜಕೀಯ ಪಕ್ಷಕ್ಕೆ ನಾಂದಿ ಹಾಡಿದ್ದಾರೆ. ಮುಂದಿನ ವಾರ ಪಕ್ಷಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಪಂಜಾಬಿನ ಅಸೆಂಬ್ಲಿ ಚುನಾವಣೆಯಲ್ಲಿ ಹೊಸ ಪಕ್ಷ ಸಕ್ರಿಯವಾಗಿ ಭಾಗವಹಿಸಲಿದೆ.
Question 5 |
5.ಇತ್ತೀಚೆಗೆ ನಿಧನರಾದ “ಇಸ್ಲಾಮ್ ಕರಿಮೊವ್ (Islam Karimov)” ಅವರು ಯಾವ ದೇಶದ ಅಧ್ಯಕ್ಷರಾಗಿದ್ದರು?
ಉಜ್ಬೇಕಿಸ್ತಾನ | |
ತುರ್ಜಕಿಸ್ತಾನ | |
ಸೂಡಾನ್ | |
ಇರಾನ್ |
ಪಾರ್ಶ್ವವಾಯುವಿಗೆ ಒಳಗಾಗಿದ್ದ ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಮ್ ಕರಿಮೊವ್ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.. ಕರಿಮೊವ್ 1989ರಿಂದ ಆರಂಭದಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯಸ್ಥನಾಗಿ ನಂತರ 1991ರಿಂದ ನೂತನ ಸ್ವತಂತ್ರ ರಿಪಬ್ಲಿಕ್ನ ಅಧ್ಯಕ್ಷರಾಗಿ ಉಝ್ಬೆಕಿಸ್ತಾನವನ್ನು ಆಳಿದ್ದಾರೆ. ಉಜ್ಬೇಕಿಸ್ತಾನ ಹತ್ತಿ ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ನೈಸರ್ಗಿಕ ಅನಿಲ ಮತ್ತು ಚಿನ್ನ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ.
Question 6 |
6.ದಕ್ಷಿಣ ಆಫ್ರಿಕಾದ ಪ್ರಖ್ಯಾತ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಅವರ ಆತ್ಮಚರಿತ್ರೆ ______?
Cricket My Fever | |
AB The Autobiography | |
Cricket for Ever | |
My Life Without Cricket |
“AB The Autobiography” ದಕ್ಷಿಣ ಆಫ್ರಿಕಾದ ಪ್ರಖ್ಯಾತ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಅವರ ಆತ್ಮಚರಿತ್ರೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಈ ಪುಸ್ತಕ ಮುಂದಿನ ವಾರದಲ್ಲಿ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ.
Question 7 |
7.ಈ ಕೆಳಗಿನ ಯಾರು “ರಾಷ್ಟ್ರೀಯ ವನ್ಯಜೀವಿ ಮಂಡಳಿ (The National Board for Wildlife)”ನ ಅಧ್ಯಕ್ಷರಾಗಿರುತ್ತಾರೆ?
ಪ್ರಧಾನ ಮಂತ್ರಿ | |
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ | |
ಕೇಂದ್ರ ಗೃಹ ಮಂತ್ರಿ | |
ಸಂಪುಟ ಕಾರ್ಯದರ್ಶಿ |
ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಂದು ಶಾಸನಬದ್ದ ಸಂಸ್ಥೆಯಾಗಿದ್ದು, ವನ್ಯಜೀವಿ ಸಂರಕ್ಷಣ ಕಾಯಿದೆ-1972 ರಡಿ ಸ್ಥಾಪಿಸಲಾಗಿದೆ. ರಾಷ್ಟ್ರೀಯ ಉದ್ಯಾನವನ ಮತ್ತು ಅಭಯಾರಣ್ಯದಲ್ಲಿ ವನ್ಯಜೀವಿ ಸಂಬಂಧಿಸಿದ ಯೋಜನೆ ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಹೊಣೆಗಾರಿಕೆ ಈ ಸಂಸ್ಥೆಯದು. ಭಾರತದ ಪ್ರಧಾನ ಮಂತ್ರಿಗಳು ಈ ಮಂಡಳಿಯ ಅಧ್ಯಕ್ಷರಾಗಿದ್ದು, ಕೇಂದ್ರ ಪರಿಸರ ಸಚಿವರು ಇದರ ಉಪಾಧ್ಯಕ್ಷರಾಗಿದ್ದಾರೆ. ಜೊತೆಗೆ 47 ಸದಸ್ಯರನ್ನು ಈ ಮಂಡಳಿ ಒಳಗೊಂಡಿದೆ.
Question 8 |
8.ಸುಮಾರು 3.7 ಬಿಲಿಯನ್ ವರ್ಷಗಳಷ್ಟು ಹಳೆಯದಾದ ಸ್ಟ್ರೊಮೊಟೊಲೈಟ್ ಪಳಿಯುಳಿಕೆಗಳನ್ನು ವಿಜ್ಞಾನಿಗಳು ಇತ್ತೀಚೆಗೆ ಎಲ್ಲಿ ಪತ್ತೆಹಚ್ಚಿದ್ದಾರೆ?
ನ್ಯೂಜಿಲ್ಯಾಂಡ್ | |
ಗ್ರೀನ್ ಲ್ಯಾಂಡ್ | |
ಫಿಲಿಫೈನ್ಸ್ | |
ಮೆಕ್ಸಿಕೊ |
ಜಗತ್ತೀನ ಅತ್ಯಂತ ಹಳೆಯದಾದ ಅಂದರೆ ಸುಮಾರು 3.7 ಬಿಲಿಯನ್ ವರ್ಷಗಳಷ್ಟು ಹಳೆಯದಾದ ಸ್ಟ್ರೊಮೊಟೊಲೈಟ್ ಪಳಿಯುಳಿಕೆಗಳನ್ನು ವಿಜ್ಞಾನಿಗಳು ಗ್ರೀನ್ ಲ್ಯಾಂಡ್ ನಲ್ಲಿ ಪತ್ತೆಹಚ್ಚಿದ್ದಾರೆ. ಹಿಮಚ್ಛಾದಿತ ಗ್ರೀನ್‌ಲ್ಯಾಂಡ್‌ನ ಅಂಚಿನಲ್ಲಿರುವ ವಿಶ್ವದ ಅತ್ಯಂತ ಹಳೆಯ ಸಂಚಿತ ಶಿಲೆಗಳಾದ ಇಸುವಾ ಹಸಿರುಶಿಲಾ ಪಟ್ಟಿ (Isua Greenstone Belt)ಯ ನಡುವೆ ಪತ್ತೆಹಚ್ಚಲಾಗಿದೆ. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದ್ದ 22 ಕೋಟಿ ವರ್ಷಗಳ ಹಿಂದಿನ ಪಳೆಯುಳಿಕೆಗಳು, ಇದುವರೆಗೆ ಭೂಮಿ ಮೇಲೆ ಕಂಡು ಬಂದಿದ್ದ ಅತ್ಯಂತ ಹಳೆಯ ಪಳೆಯುಳಿಕೆಯಾಗಿದ್ದವು. ಸ್ಟ್ರೊಮಾಟೊಲೈಟ್ ಪಳೆಯುಳಿಕೆ ಎಂದರೆ ಸೂಕ್ಷ್ಮಾಣು ಜೀವಿ, ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳ (ಸಯನೊಬ್ಯಾಕ್ಟೀರಿಯಾ) ಗುಂಪುಗಳಿಂದ ಸೃಷ್ಟಿಯಾಗಿರುವ, ಪದರಗಳನ್ನು ಹೊಂದಿರುವ ಶಿಲಾರಚನೆ.
Question 9 |
9.ವಿಶ್ವದ ಅತಿದೊಡ್ಡ ಕಬ್ಬಿಣ ಅದಿರು ಗಣಿ “ಕರಜಸ್ ಗಣಿ (Carajas Mine)” ಯಾವ ದೇಶದಲ್ಲಿದೆ?
ಆಸ್ಟ್ರೇಲಿಯಾ | |
ಬ್ರೆಜಿಲ್ | |
ಮೆಕ್ಸಿಕೊ | |
ಜರ್ಮನಿ |
ಬ್ರೆಜಿಲ್ ನ ಪ್ಯಾರ ರಾಜ್ಯದಲ್ಲಿರುವ ಕರಜಸ್ ಗಣಿ ವಿಶ್ವದ ಅತಿದೊಡ್ಡ ಕಬ್ಬಿಣ ಅದಿರು ಗಣಿಯಾಗಿದೆ.
Question 10 |
10.ರಾಜ್ಯ ನಾಗರಿಕ ಸೇವಾ ಆಯೋಗದ ಯಾವುದೇ ಸದಸ್ಯರನ್ನು ನೇಮಕ ಮಾಡುವ ಮತ್ತು ವಜಾ ಮಾಡುವ ಅಧಿಕಾರ ಕ್ರಮವಾಗಿ ಯಾರಿಗಿದೆ?
ರಾಜ್ಯಪಾಲ, ರಾಷ್ಟ್ರಪತಿ | |
ರಾಜ್ಯಪಾಲ, ರಾಜ್ಯಪಾಲ | |
ರಾಷ್ಟ್ರಪತಿ, ರಾಜ್ಯಪಾಲ | |
ರಾಷ್ಟ್ರಪತಿ, ರಾಷ್ಟ್ರಪತಿ |
ರಾಜ್ಯ ನಾಗರಿಕ ಸೇವಾ ಆಯೋಗದ ಯಾವುದೇ ಸದಸ್ಯರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ಆದರೆ ರಾಷ್ಟ್ರಪತಿಗಳು ಸುಪ್ರೀಂಕೋರ್ಟ್ ವರದಿ ಮೇರಿಗೆ ಸದಸ್ಯರನ್ನು ವಜಾಗೊಳಿಸುವ ಅಧಿಕಾರ ಹೊಂದಿದ್ದಾರೆ.
ಧನ್ಯವಾದಗಳು ಸರ್
ತುಂಬಾ ಉಪಯುಕ್ತ ಪ್ರಶ್ನೋತ್ತರಗಳು, ಧನ್ಯವಾದಗಳು ಸರ್
EXCELLENT SELECTION OF QUESTIONS WITH EXPLAINED ANSWERS. GOOD WORK
ತುಂಬಾ ಸಫಲ ಪರಿಶ್ರಮ ಸರ್..
Good qustion