ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,12,13, 2016

Question 1

1. “ವನಜೀವನ್” ಬುಡಕಟ್ಟು ಜನರ ಜೀವನೋಪಾಯ ಸಂಪನ್ಮೂಲ ಕೇಂದ್ರವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗುವುದು?

A
ಒಡಿಶಾ
B
ಪಶ್ಚಿಮ ಬಂಗಾಳ
C
ಜಾರ್ಖಂಡ್
D
ಮಧ್ಯ ಪ್ರದೇಶ
Question 1 Explanation: 
ಒಡಿಶಾ:

ವಿಶ್ವಸಂಸ್ಥೆ ಅಭಿವೃದ್ದಿ ಕಾರ್ಯಕ್ರಮ (UNDP) ಮತ್ತು ರಾಷ್ಟ್ರೀಯ ಪರಿಶಿಷ್ಠ ಪಂಗಡ ಹಣಕಾಸು ಮತ್ತು ಅಭಿವೃದ್ದಿ ನಿಗಮ ಸಹಯೋಗದೊಂದಿಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯು “ವನಜೀವನ್” ಬುಡಕಟ್ಟು ಜನರ ಜೀವನೋಪಾಯ ಸಂಪನ್ಮೂಲ ಕೇಂದ್ರವನ್ನು ಒಡಿಶಾದಲ್ಲಿ ಡಿಸೆಂಬರ್ 22, 2016 ರಂದು ಉದ್ಘಾಟಿಸಲಿದೆ. ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಹಿಂದುಳಿದಿರುವ ಆರು ರಾಜ್ಯಗಳ ಆಯ್ದಾ ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗದವರ ಜೀವನೋಪಾಯ ಸಮಸ್ಯೆಗಳನ್ನು ಗುರುತಿಸುವ ಕಾರ್ಯಕ್ರಮವೇ “ವನಜೀವನ್”. ಅಸ್ಸಾಂ, ಗುಜರಾತ್, ಮಧ್ಯ ಪ್ರದೇಶ, ರಾಜಸ್ತಾನ, ಒಡಿಶಾ ಮತ್ತು ತೆಲಂಗಣ ಈ ಆರು ರಾಜ್ಯಗಳಾಗಿವೆ.

Question 2

2. ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ (150-ಅಪ್ ಪಾಯಿಂಟ್ ಮಾದರಿ)ನಲ್ಲಿ ಪ್ರಶಸ್ತಿ ಗೆದ್ದುಕೊಂಡವರು _______?

A
ಪಂಕಜ್ ಅಡ್ವಾಣಿ
B
ಪೀಟರ್ ಗಿಲ್ ಕ್ರಿಸ್ಟ್
C
ಗೀತ್ ಸೇತಿ
D
ಆದಿತ್ಯಾ ಮೆಹ್ತಾ
Question 2 Explanation: 
ಪಂಕಜ್ ಅಡ್ವಾಣಿ:

ಪಂಕಜ್ ಅಡ್ವಾಣಿ ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ 150–ಅಪ್ ಪಾಯಿಂಟ್ ಮಾದರಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯ ಕೊಠಡಿಯಲ್ಲಿ ನಡೆದ ಫೈನಲ್ನಲ್ಲಿ ಕರ್ನಾಟಕದ ಪಂಕಜ್ 151–33, 150–95, 124–150, 101–150, 150–50, 152–37, 86–150, 151–104, 150–15ರಲ್ಲಿ ಸಿಂಗಪುರದ ಪೀಟರ್ ಗಿಲ್ಕ್ರಿಸ್ಟ್ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಬಿಲಿಯರ್ಡ್ಸ್ನಲ್ಲಿ 11ನೇ ವಿಶ್ವ ಪ್ರಶಸ್ತಿಯನ್ನು ಎತ್ತಿ ಹಿಡಿದರು.

Question 3

3. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತ ಬಾಕ್ಸಿಂಗ್ ಫೆಡರೇಷನ್ನ ಕಾರ್ಯಕಾರಿ ಮಂಡಳಿಗೆ ಪುರುಷ ಬಾಕ್ಸರ್ಗಳ ಪ್ರತಿನಿಧಿಯಾಗಿ ಯಾರು ಆಯ್ಕೆಯಾಗಿದ್ದಾರೆ?

A
ಶಿವ ಥಾಪ
B
ಮನೋಜ್ ಕುಮಾರ್
C
ಅಖಿಲ್ ಕುಮಾರ್
D
ವಿಕಾಸ್ ಕೃಷ್ಣನ್
Question 3 Explanation: 
ಮನೋಜ್ ಕುಮಾರ್:

ಬಾಕ್ಸರ್ ಮನೋಜ್ ಕುಮಾರ್ ಅವರು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತ ಬಾಕ್ಸಿಂಗ್ ಫೆಡರೇಷನ್ನ ಕಾರ್ಯಕಾರಿ ಮಂಡಳಿಗೆ ಪುರುಷ ಬಾಕ್ಸರ್ಗಳ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಮನೋಜ್ ಕುಮಾರ್ ರವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಚುನಾವಣೆಯಲ್ಲಿ ಮನೋಜ್ ಅವರು 27 ಮತಗಳನ್ನು ಪಡೆದು ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

Question 4

4. ಕೇಂದ್ರ ಸರ್ಕಾರದ “ಆನ್ ಲೈನ್ ನದಿ ನೀರು ಮತ್ತು ವಾಯು ಗುಣಮಟ್ಟ ನಿರ್ವಹಣೆ ವ್ಯವಸ್ಥೆ” ಅನುಷ್ಟಾನಕ್ಕೆ ಯಾವ ತಂತ್ರಜ್ಞಾನ ಸಂಸ್ಥೆ ಕೈಜೋಡಿಸಿದೆ?

A
ಇನ್ಪೋಸಿಸ್
B
ಇಂಟೆಲ್
C
ಮೈಕ್ರೋಸಾಫ್ಟ್
D
ರಿಲಾಯನ್ಸ್
Question 4 Explanation: 
ಇಂಟೆಲ್ :

ನೀರು ಮತ್ತು ವಾಯು ಮಾಲಿನ್ಯದ ಮೇಲೆ ಸಂಶೋಧನೆ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಇಂಟೆಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ. ಒಪ್ಪಂದದಿ ನದಿ ನೀರು ಮತ್ತು ವಾಯು ಗುಣಮಟ್ಟ ನಿರ್ವಹಣೆ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು.

Question 5

5. ಈ ಕೆಳಗಿನ ಯಾರು ಅಮೆರಿಕದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ?

A
ಜಾನ್ ಕೆರ್ರಿ
B
ರೆಕ್ಸ್ ಟಿಲರ್ ಸನ್
C
ಕೇವಿನ್ ರುಡ್
D
ಸ್ಟ್ರಾನ್ ಹುಡ್
Question 5 Explanation: 
ರೆಕ್ಸ್ ಟಿಲರ್ ಸನ್:

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಉದ್ಯಮಿ ಹಾಗೂ ಎಕ್ಸಾನ್ ಮೊಬಿಲ್ ಆಯಿಲ್ ಕಂಪನಿಯ ಸಿಇಒ ರೆಕ್ಸ್ ಟಿಲರ್ಸನ್ ಅವರನ್ನು ನೇಮಕ ಮಾಡಿದ್ದಾರೆ.

Question 6

6. “ಫಾರಿನ್ ಪಾಲಿಸಿ ನಿಯತಕಾಲಿಕೆಯ 2016 ಜಾಗತಿಕ ಚಿಂತಕರು” ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಸಚಿವೆ ಯಾರು?

A
ಸುಷ್ಮಾ ಸ್ಮರಾಜ್
B
ನಿರ್ಮಲಾ ಸೀತಾರಾಮನ್
C
ಸ್ಮೃತಿ ಇರಾನಿ
D
ಉಮಾ ಭಾರತಿ
Question 6 Explanation: 
ಸುಷ್ಮಾ ಸ್ಮರಾಜ್:

ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ‘ಫಾರಿನ್ ಪಾಲಿಸಿ’ ನಿಯತಕಾಲಿಕವು ‘2016ರ ಜಾಗತಿಕ ಚಿಂತಕಿ’ ಎಂಬುದಾಗಿ ಹೆಸರಿಸಿದೆ. ಲೋಕೋಪಕಾರಿ ದಂಪತಿಗಳಾದ ಅನುಪಮ ಮತ್ತು ವಿನೀತ್ ನಾಯರ್ ರವರು ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೊಬ್ಬ ಭಾರತೀಯರಾಗಿದ್ದಾರೆ. ಸುಷ್ಮಾ ಸ್ಮರಾಜ್ ರವರನ್ನು ನಿರ್ಣಯ ಕೈಗೊಳ್ಳುವ ವಿಭಾಗದಲ್ಲಿ ಹಿಲರಿ ಕ್ಲಿಂಟನ್, ಆಂಗೇಲಾ ಮರ್ಕೆಲ್ ಮತ್ತು ಜಸ್ಟಿನ್ ಟ್ರುಡಿಯು ಸೇರಿದಂತೆ 15 ಮಂದಿ ಜಾಗತಿಕ ಚಿಂತಕರ ಸಾಲಿಗೆ ಸೇರ್ಪಡೆಗೊಳಿಸಲಾಗಿದೆ.

Question 7

7. 90ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

A
ವೈಭವ್ ಪಾಟೀಲ್
B
ಭೂಷಣ್ ಬಿಬ್ವೆ
C
ಅಕ್ಷಯ್ ಕುಮಾರ್ ಎಂ ಕಾಳೆ
D
ಆನಂದ್ ಯಾದವ್
Question 7 Explanation: 
ಪ್ರಸಿದ್ದ ಲೇಖಕ ಮತ್ತು ಡಾ. ಅಕ್ಷಯ್ ಕುಮಾರ್ ಎಂ ಕಾಳೆ
Question 8

8. “ಅಂತಾರಾಷ್ಟ್ರೀಯ ಪರ್ವತ ದಿನ (International Mountain Day)” ಯಾವ ದಿನದಂದು ಆಚರಿಸಲಾಗುತ್ತದೆ?

A
ಡಿಸೆಂಬರ್ 11
B
ಡಿಸೆಂಬರ್ 10
C
ಡಿಸೆಂಬರ್ 12
D
ಡಿಸೆಂಬರ್ 13
Question 8 Explanation: 
ಡಿಸೆಂಬರ್ 11:

ಅಂತಾರಾಷ್ಟ್ರೀಯ ಪರ್ವತ ದಿನವನ್ನು ಡಿಸೆಂಬರ್ 11 ರಂದು ಆಚರಿಸಲಾಗುತ್ತದೆ. “Mountain cultures: Celebrating diversity and strengthening identity” ಇದು ಈ ವರ್ಷ ಪರ್ವತ ದಿನದ ಧ್ಯೇಯವಾಕ್ಯ.

Question 9

9. ವಿಶ್ವದ ಅತ್ಯಂತ ಆಳದ ಮತ್ತು ಉದ್ದದ ಸಂಚಾರ ಸುರಂಗ “ಗಾತ್ಥರ್ಡ್ ಬೇಸ್ ಟನಲ್ (Gotthard Base Tunnel)” ಯಾವ ದೇಶದಲ್ಲಿದೆ?

A
ಸ್ವಿಟ್ಜರ್ಲ್ಯಾಂಡ್
B
ರಷ್ಯಾ
C
ಕೆನಡಾ
D
ಜಪಾನ್
Question 9 Explanation: 
ಸ್ವಿಟ್ಜರ್ಲ್ಯಾಂಡ್:

ವಿಶ್ವದ ಅತ್ಯಂತ ಆಳದ ಮತ್ತು ಉದ್ದದ ಸಂಚಾರ ಸುರಂಗ “ಗಾತ್ಥರ್ಡ್ ಬೇಸ್ ಟನಲ್” ಸ್ವಿಟ್ಜರ್ಲ್ಯಾಂಡ್ ನಲ್ಲಿದೆ. ಡಿಸೆಂಬರ್ 11 ರಂದು ಈ ಸಂಚಾರ ಸುರಂಗದಲ್ಲಿ ಅಧಿಕೃತವಾಗಿ ರೈಲು ಸಂಚಾರ ಆರಂಭಿಸಲಾಯಿತು. 57 ಕಿ.ಮೀ ಉದ್ದದ ಈ ಟನಲ್ ಉತ್ತರ ಮತ್ತು ದಕ್ಷಿಣ ಐರೋಪ್ಯ ನಡುವೆ ಆಲ್ಪ್ಸ್ ಪರ್ವತದಡಿ ಸಂಚಾರ ಸಂಪರ್ಕ ಕಲ್ಪಿಸುತ್ತದೆ. ಜಪಾನಿನ ಸೈಕನ್ ರೈಲು ಸುರಂಗ ಮಾರ್ಗ ಇದುವರೆಗೂ ವಿಶ್ವದ ಅತಿ ದೊಡ್ಡ ಸುರಂಗವೆನಿಸಿತ್ತು. ಇದರ ಉದ್ದ 53.9 ಕಿ.ಮೀ.

Question 10

10. ಐತಿಹಾಸಿಕ “ಚಂದ್ರಗಿರಿ ಕೋಟೆ” ಯಾವ ರಾಜ್ಯದಲ್ಲಿದೆ?

A
ಆಂಧ್ರ ಪ್ರದೇಶ
B
ತಮಿಳುನಾಡು
C
ಕರ್ನಾಟಕ
D
ಮಹಾರಾಷ್ಟ್ರ
Question 10 Explanation: 

ಚಂದ್ರಗಿರಿ ಕೋಟೆ ಆಂಧ್ರ ಪ್ರದೇಶದ ತಿರುಪತಿಯಲ್ಲಿದೆ. ಭಾರತೀಯ ಪುರಾತತ್ವ ಇಲಾಖೆಯಡಿ ಕೋಟೆಯನ್ನು ಸಂರಕ್ಷಿಸಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಇದೇ ಹೆಸರಿನ ಕೋಟೆಯನ್ನು ಕಾಣಬಹುದು.

There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-12-13.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.