ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 6, 2016
Question 1 |
1.ಚೊಚ್ಚಲ ಬ್ರಿಕ್ಸ್ ಸಿನಿಮಾ ಉತ್ಸವದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡ ಸಿನಿಮಾ ಯಾವುದು?
ತಿಥಿ | |
ಬಾಹುಬಲಿ | |
ದಿ ಬ್ಯಾಟಲ್ ಫಾರ್ ಸೆವಸ್ಟೊಪೊಲ್ | |
ಬಾಜೀರಾವ್ |
ವಿಶ್ವಮನ್ನಣೆ ಪಡೆದಿರುವ ಕನ್ನಡದ ಚಿತ್ರ “ತಿಥಿ” ಇತ್ತೀಚೆಗೆ ನವದೆಹಲಿಯಲ್ಲಿ ಮುಕ್ತಾಯಗೊಂಡ ಪ್ರಪ್ರಥಮ ಬ್ರಿಕ್ಸ್ ಸಿನಿಮಾ ಉತ್ಸವದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿತು. ಆ ಮೂಲಕ ನೂರಾರು ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ರಾಜಮೌಳಿ ನಿರ್ದೇಶನದ ತೆಲುಗಿನ ಸೂಪರ್ಹಿಟ್ ಚಿತ್ರ "ಬಾಹುಬಲಿ', ಹಿಂದಿಯ ಬಾಜೀರಾವ್ ಮಸ್ತಾನಿ ಮತ್ತು ಕೌಶಿಕ್ ಗಂಗೂಲಿ ನಿರ್ದೇಶನದ ಸಿನೆಮಾವಾಲಾ ಸೇರಿದಂತೆ ಇತರೆ ಚಿತ್ರಗಳನ್ನು ಹಿಂದಿಕ್ಕಿದೆ. ಐದು ದಿನಗಳ ಕಾಲ ನಡೆದ ಈ ಸಿನಿಮೋತ್ಸವದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಹಲವು ಸಿನಿಮಾಗಳನ್ನು ಪ್ರದರ್ಶಿಸಲಾಗಿತ್ತು. ತಿಥಿ ಚಿತ್ರವನ್ನು ರಾಮರೆಡ್ಡಿರವರು ನಿರ್ದೇಶನ ಮಾಡಿದ್ದಾರೆ. ತಿಥಿ ಚಿತ್ರ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
Question 2 |
2.ಭಾರತೀಯ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಪ್ರಾಧಿಕಾರದ(ಯುಐಡಿಎಐ) ಅರೆಕಾಲಿಕ ಅಧ್ಯಕ್ಷರಾಗಿ ಯಾರನ್ನು ನೇಮಕಮಾಡಲಾಗಿದೆ?
ಜೆ ಸತ್ಯನಾರಾಯಣ | |
ಅಮರನಾಥ್ ಸಿಂಗ್ | |
ಅಜಯ್ ಭೂಷಣ್ ಸಿಂಗ್ | |
ರಾಜೀವ್ ಜೈನ್ |
ನಿವೃತ್ತ ಐಎಎಸ್ ಅಧಿಕಾರಿ ಜೆ. ಸತ್ಯನಾರಾಯಣ ಅವರು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಪ್ರಾಧಿಕಾರ'(ಯುಐಡಿಎಐ) ಅರೆಕಾಲಿಕ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸತ್ಯನಾರಾಯಣ ರವರು ಆಂಧ್ರಪ್ರದೇಶ ಕೇಡರ್ ನ 1977 ತಂಡದ ಐಎಎಸ್ ಅಧಿಕಾರಿ. ಇವರೊಂದಿಗೆ ರಾಜೇಶ್ ಜೈನ್ ಮತ್ತು ಆನಂದ್ ದೇಶಪಾಂಡೆ ಅವರನ್ನು ಅರೆಕಾಲಿಕ ಸದಸ್ಯರನ್ನು ಕೇಂದ್ರ ಸಚಿವ ಸಂಪುಟ ನೇಮಕ ಮಾಡಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಪ್ರಾಧಿಕಾರ'(ಯುಐಡಿಎಐ) ಮೊದಲ ಅಧ್ಯಕ್ಷ ನಂದನ್ ನಿಲೇಕಣಿ 2014ರಲ್ಲಿ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಹುದ್ದೆ ತೆರವಾಗಿತ್ತು.
Question 3 |
3.ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಯಾವ ದೇಶದ ವಿರುದ್ದ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 263 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿತು?
ಪಾಕಿಸ್ತಾನ | |
ದಕ್ಷಿಣ ಆಫ್ರಿಕಾ | |
ಶ್ರೀಲಂಕಾ | |
ಇಂಗ್ಲೆಂಡ್ |
ಆಸ್ಟ್ರೇಲಿಯ ತಂಡ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 263 ರನ್ ಗಳಿಸಿ ವಿಶ್ವ ದಾಖಲೆ ಮೊತ್ತ ಗಳಿಸಿತು. ನಾಯಕ ವಾರ್ನರ್(28) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(ಔಟಾಗದೆ 145 ರನ್, 65 ಎಸೆತ, 14 ಬೌಂಡರಿ, 9 ಸಿಕ್ಸರ್)ಚೊಚ್ಚಲ ಶತಕ ಸಿಡಿಸಿ ಆಸ್ಟ್ರೇಲಿಯ ಟ್ವೆಂಟಿ-20ಯಲ್ಲಿ ಬೃಹತ್ ಮೊತ್ತ ಗಳಿಸಿದ ಮೊದಲ ತಂಡವೆಂಬ ಕೀರ್ತಿಗೆ ಭಾಜನರಾಗಲು ನೆರವಾದರು. 263 ರನ್ ಗಳಿಸಿದ ಆಸ್ಟ್ರೇಲಿಯ ತಂಡ ಶ್ರೀಲಂಕಾ 9 ವರ್ಷಗಳ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯೊಂದನ್ನು ಮುರಿಯಿತು. ಶ್ರೀಲಂಕಾ 2007ರಲ್ಲಿ ಕೀನ್ಯ ವಿರುದ್ಧ ಟ್ವೆಂಟಿ-20 ವಿಶ್ವಕಪ್ನಲ್ಲಿ 6 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತ್ತು.
Question 4 |
4. ಈ ಕೆಳಗಿನ ಯಾವ ರಾಜ್ಯ “ನುವಾಖಾಯ್ (Naukhai)” ಕೃಷಿ ಹಬ್ಬಕ್ಕೆ ಪ್ರಸಿದ್ದಿ ಹೊಂದಿದೆ?
ಆಂಧ್ರಪ್ರದೇಶ | |
ಗೋವಾ | |
ಒಡಿಶಾ | |
ಪಶ್ಚಿಮ ಬಂಗಾಳ |
ನುವಾಖಾಯ್ ಪಶ್ಚಿಮ ಒಡಿಶಾದ ಪ್ರಸಿದ್ದ ಕೃಷಿ ಹಬ್ಬ. ನುವಾಖಾಯ್ ಹಬ್ಬವನ್ನು ಈ ಋತುವಿನಲ್ಲಿ ಬೆಳೆಯಲಾದ ಭತ್ತವನ್ನು ಸ್ವಾಗತಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಕೋಸಲಿ ಕ್ಯಾಲೆಂಡರ್ ಪ್ರಕಾರ ನುವಾಖಾಯ್ ಹಬ್ಬವನ್ನು ಪ್ರತಿ ವರ್ಷ ಗಣೇಶ ಚತುರ್ಥಿ ನಂತರ ಆಚರಿಸಲಾಗುವುದು. ಪಶ್ವಿಮ ಬಂಗಾಳ ಮತ್ತು ಈ ಭಾಗಕ್ಕೆ ಹೊಂದಿಕೊಂಡಿರುವ ಒಡಿಶಾದ ಸಿಮ್ದೆಗ ಪ್ರದೇಶದಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
Question 5 |
5.ಭಾರತದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುದ್ದಿಯಲ್ಲಿದ “ತಿಹಯು (TIHAYU)” ಒಂದು ______?
ಕ್ಷಿಪ್ರವಾಗಿ ದಾಳಿಮಾಡಬಲ್ಲ ಹಡಗು | |
ಜಲಾಂತರ್ಗಾಮಿ ಯುದ್ದ ನೌಕೆ | |
ಕರಾವಳಿ ಗಸ್ತು ನೌಕೆ | |
ಯುದ್ದ ವಿಮಾನ |
ಕ್ಷಿಪ್ರವಾಗಿ ದಾಳಿಮಾಡಬಲ್ಲ ಹಡಗು “ತಿಹಯು”ವನ್ನು ಭಾರತದ ನೌಕಪಡೆಗೆ ಸೇರ್ಪಡೆಗೊಳಿಸಲಾಯಿತು. ಗಾರ್ಡನ್ ರೀಚ್ ಶಿಪ್ ಬ್ಯುಲ್ಡರ್ಸ್ ಅಂಡ್ ಎಂಜನಿಯರ್ಸ್ ಸಂಸ್ಥೆ ತಿಹಯುವನ್ನು ಅಭಿವೃದ್ದಿಪಡಿಸಿದೆ. ಅಂಡಮಾನ್ ದ್ವೀಪ ಪ್ರದೇಶವೊಂದರ ಹೆಸರನ್ನು ಇದಕ್ಕೆ ಇಡಲಾಗಿದೆ. ಮೂರು ವಾಟರ್ ಜೆಟ್ ಪ್ರೊಪಲ್ಷನ್ ಸಿಸ್ಟಂ ಅನ್ನು ಹೊಂದಿದ್ದು, ಡಿಸೇಲ್ ಎಂಜಿನ್ ಮೂಲಕ ಕಾರ್ಯನಿರ್ವಹಿಸಲಿದೆ.
Question 6 |
6.ಕೇಂದ್ರ ಸರ್ಕಾರ ಇತ್ತೀಚೆಗೆ ದೇಶದಲ್ಲಿ ಅನಿಲ ಇಂಧನದ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಯಾವ ಅಭಿಯಾನವನ್ನು ಜಾರಿಗೊಳಿಸಿದೆ?
Gas4India | |
CleanIndia | |
Gas4Change | |
GreenIndia |
ದೇಶದಲ್ಲಿ ಅನಿಲ ಇಂಧನ ಬಳಕೆಯನ್ನು ಪ್ರೇರೆಪಿಸುವ ಸಲುವಾಗಿ ಕೇಂದ್ರ ಸರ್ಕಾರ “Gas4India” ಅಭಿಯಾನವನ್ನು ಆರಂಭಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು. ಅನಿಲ ಇಂಧನ ಬಳಕೆಯಿಂದ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಮೇಲಾಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನಕ್ಕೆ ಸಾಮಾಜಿಕ ತಾಣಗಳಾದ ಟ್ವಿಟ್ಟರ್, ಫೇಸ್ಬುಕ್ ಮತ್ತು ಯು ಟ್ಯೂಬ್ ಗಳನ್ನು ಬಳಸಿಕೊಳ್ಳಲಾಗುವುದು.
Question 7 |
7.ಮಲಯಾಳಂ ಸಿನಿಮಾ ರಂಗದ ಮಹೋನ್ನತ ಪ್ರಶಸ್ತಿಯಾದ “ಜೆಸಿ ಡೇನಿಯಲ್” ಪ್ರಶಸ್ತಿಯನ್ನು 2015ನೇ ಸಾಲಿಗೆ ಯಾರಿಗೆ ನೀಡಲಾಗುವುದು?
ಎ.ಕೆ.ಬಾಲನ್ | |
ಕೆ.ಜಿ.ಜಾರ್ಜ್ | |
ಮೋಹನ್ ಲಾಲ್ | |
ಪಾರ್ವತಿ ಮೆನನ್ |
ಹಿರಿಯ ನಿರ್ದೇಶಕ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆ.ಜಿ.ಜಾರ್ಜ್ ಅವರನ್ನು 2015 ಜೆಸಿ ಡೇನಿಯಲ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕೇರಳ ಸರ್ಕಾರ ಈ ಪ್ರಶಸ್ತಿಯನ್ನು ಮಲೆಯಾಳಂ ಸಿನಿಮಾ ಕ್ಷೇತ್ರಕ್ಕೆ ಅಪಾರ ಸೇವೆ ನೀಡಿದವರಿಗೆ ನೀಡುತ್ತದೆ. ಮಲೆಯಾಂ ಸಿನಿಮಾ ರಂಗದ ಮಹೋನ್ನತ ಪ್ರಶಸ್ತಿ ಇದಾಗಿದ್ದು, ಒಂದು ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. 1970 ರಲ್ಲಿ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ ಜಾರ್ಜ್ ಇದುವರೆಗೂ 9 ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ಸ್ವಪ್ನನಾದಂ ಸಿನಿಮಾಗೆ 1997 ರಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ನೀಡಲಾಗಿದೆ.
Question 8 |
8. ಈ ಕೆಳಗಿನ ಯಾವ ದೇಶ 2017 ಜಿ-20 ರಾಷ್ಟ್ರಗಳ ಶೃಂಗಸಭಯ ಆತಿಥ್ಯವಹಿಸಲಿದೆ?
ಜರ್ಮನಿ | |
ಭಾರತ | |
ಅಮೆರಿಕಾ | |
ದಕ್ಷಿಣ ಕೊರಿಯಾ |
2016 ಜಿ-20 ರಾಷ್ಟ್ರಗಳ ಶೃಂಗಸಭೆ ಚೀನಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿತು. ಮುಂದಿನ ಜಿ-20 ಶೃಂಗಸಭೆ ಜರ್ಮನಿಯ ಹಂಬರ್ಗ್ ನಲ್ಲಿ ಜುಲೈ7-8, 2017 ರಲ್ಲಿ ನಡೆಯಲಿದೆ.
Question 9 |
9.ಪ್ರತಿಷ್ಠಿತ ಮೆರ್ಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ನ ಗೌರವ ಆಜೀವ ಸದಸ್ಯತ್ವ ಪಡೆದ ಭಾರತದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು?
ಮಿಥಾಲಿ ರಾಜ್ | |
ಪೂನಂ ರಾವತ್ | |
ಅಂಜುಮ್ ಚೋಪ್ರಾ | |
ಜೂಲನ್ ಗೋಸ್ವಾಮಿ |
ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾಗೆ ಮೆರ್ಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ನ ಗೌರವ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ. ಅಂಜುಮ್ ಪ್ರತಿಷ್ಠಿತ ಎಂಸಿಸಿ ಆಜೀವ ಸದಸ್ಯತ್ವ ಪಡೆದ ಭಾರತದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 39ರ ಹರೆಯದ ಅಂಜುಮ್ ಭಾರತದ ಪರ 12 ಟೆಸ್ಟ್, 127 ಏಕದಿನ ಹಾಗೂ 18 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕು ಅರ್ಧಶತಕಗಳಿರುವ 548 ರನ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳ ಸಹಿತ 2,856 ರನ್ ಗಳಿಸಿದ್ದಾರೆ.
Question 10 |
10.ಯಾವ ರಾಜ್ಯ ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಶೂನ್ಯ ವಸತಿರಹಿತ(Zero Homeless)ವನ್ನಾಗಿಸುವ ಸಲುವಾಗಿ “ಪ್ರಾಜೆಕ್ಟ್ ಲೈಫ್” ಯೋಜನೆಯನ್ನು ಜಾರಿಗೊಳಿಸಲಿದೆ?
ಕೇರಳ | |
ಹರಿಯಾಣ | |
ಅಸ್ಸಾಂ | |
ಬಿಹಾರ |
ಕೇರಳದ ಎಡರಂಗ ಸರಕಾರವು ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಭೂ ಮತ್ತು ವಸತಿ ರಹಿತ ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸಿ ಶೂನ್ಯ ವಸತಿ ರಹಿತ ರಾಜ್ಯವನ್ನಾಗಿ ಮಾಡಲು “ಪ್ರಾಜೆಟ್ ಲೈಫ್” ಯೋಜನೆಯನ್ನು ಅನುಷ್ಟಾನಗೊಳಿಸಲಿದೆ. ಕೇರಳ ರಾಜ್ಯದಿನವಾದ ನವೆಂಬರ್ 1 ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಯೋಜನೆಯಡಿ 4.70 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ
super question
ಧನ್ಯವಾದಗಳು ಸರ್
Yava book oduvudu sooktha