ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 10, 2016
Question 1 |
1. ಈ ಕೆಳಗಿನ ಯಾವುದರ ಅಧ್ಯಯನಕ್ಕಾಗಿ ನಾಸಾ ಇತ್ತೀಚೆಗೆ “OSIRIS-Rex” ಬಾಹ್ಯಕಾಶ ನೌಕೆಯನ್ನು ಉಡಾಯಿಸಿತು?
ಟೈಟಾನ್ | |
ಮಂಗಳ ಗ್ರಹ | |
ಬೆನ್ನು ಕ್ಷುದ್ರಗ್ರಹ | |
ಶುಕ್ರ ಗ್ರಹ |
ಅಮೆರಿಕಾದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) “101955 ಬೆನ್ನು ಕ್ಷುದ್ರಗ್ರಹ (Bennu Asteroid)”ನ ಅಧ್ಯಯನಕ್ಕಾಗಿ “ಒಸಿರಿಸ್-ರೆಕ್ಸ್” ಬಾಹ್ಯಕಾಶ ನೌಕೆಯನ್ನು ಹಾರಿ ಬಿಟ್ಟಿದೆ. OSIRIS-Rex (Origins, Spectral Interpretation, Resource Identification, Security-Regolith Explorer) ಕ್ಷುದ್ರಗ್ರಹ ಅಧ್ಯಯನಕ್ಕಾಗಿ ಅಭಿವೃದ್ದಿಪಡಿಸಿರುವ ಅಮೆರಿಕಾದ ಮೊದಲ ಬಾಹ್ಯಕಾಶ ನೌಕೆಯಾಗಿದೆ. ಅಟ್ಲಾಸ್ V ರಾಕೆಟ್ ಬಳಸಿ ಕೇಪ್ ಕನವರೆಲ್ ಏರ್ ಫೋರ್ಸ್ ಸ್ಟೇಷನ್ ನಿಂದ ಉಡಾಯಿಸಲಾಯಿತು. ಭೂಮಿಯ ಸಮೀಪದಲ್ಲಿರುವ 101955 ಬೆನ್ನು ಕ್ಷುದ್ರಗ್ರಹದಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿ ತರುವ ಮಹತ್ವದ ಕಾರ್ಯಕ್ಕಾಗಿ ಈ ನೌಕೆಯನ್ನು ಕಳುಹಿಸಲಾಗಿದೆ. 2018 ರ ಅಂತ್ಯಕ್ಕೆ ಈ ನೌಕೆ ಕ್ಷುದ್ರಗ್ರಹವನ್ನು ತಲುಪಲಿದೆ. ಈ ಕ್ಷುದ್ರಗ್ರಹದ ಮೇಲಿನ ಮಣ್ಣು ಮತ್ತು ಧೂಳಿನ ಕಣಗಳನ್ನು ಸಂಗ್ರಹಿಸಿ ಸೌರ ಮಂಡಲದ ಉಗಮದ ಬಗ್ಗೆ ಅಧ್ಯಯನ ನಡೆಸಲಾಗುವುದು.
Question 2 |
2. 2016 ಪಂಗ್ಕೊರ್ ಡೈಲಾಗ್ ಪ್ರಶಸ್ತಿ (Pangkor Dialogue Award) ಪ್ರಶಸ್ತಿಯನ್ನು ಯಾವ ರಾಜ್ಯದ ಮುಖ್ಯಮಂತ್ರಿಗೆ ನೀಡಲಾಗಿದೆ?
ಸರ್ಬನಂದ ಸೊನೊವಾಲ್ | |
ಸರ್ಬನಂದ ಸೊನೊವಾಲ್ | |
ಟಿ ಆರ್ ಝೆಲಿಯಾಂಗ್ | |
ಪೆಮ ಖಂಡು |
ಮಲೇಷಿಯಾ ಸರ್ಕಾರ ಪ್ರಾಯೋಜಕತ್ವದ ಪಂಗ್ಕೊರ್ ಡೈಲಾಗ್ ಪ್ರಶಸ್ತಿಯನ್ನು 2016ನೇ ಸಾಲಿಗೆ ನಾಗಾಲ್ಯಾಂಡ್ ಮುಖ್ಯಮಂತ್ರಿಯಾದ ಟಿ ಆರ್ ಝೆಲಿಯಾಂಗ್ ಅವರಿಗೆ ನೀಡಲಾಗಿದೆ. ಪರಿಸರ ಸಂರಕ್ಷಣೆಗಾಗಿ ನಾಗಲ್ಯಾಂಡ್ ಜನತೆ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಮಲೇಷಿಯಾದ ಇನ್ಸ್ ಟಿಟ್ಯೂಟ್ ದರುಲ್ ರುದ್ಝಯಾನ್ ಮತ್ತು ಮಲೇಷಿಯಾ ಸರ್ಕಾರ ಜಂಟಿಯಾಗಿ ಸ್ಥಾಪಿಸಿದೆ.
Question 3 |
3. ಎರಡು ದಿನಗಳ “ಬ್ರಿಕ್ಸ್ ಆರೋಗ್ಯ ಕಾರ್ಯಾಗಾರ”ವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ?
ಬೆಂಗಳೂರು | |
ಮುಂಬೈ | |
ಕೊಲ್ಕತ್ತ | |
ನವದೆಹಲಿ |
ಕೇಂದ್ರ ಆಯುಷ್ ಇಲಾಖೆ ಮತ್ತು ವಿದೇಶಾಂಗ ಇಲಾಖೆ ಆಶ್ರಯದಲ್ಲಿ ಎರಡು ದಿನಗಳ ಬ್ರಿಕ್ಸ್ ಆರೋಗ್ಯ ಕಾರ್ಯಾಗಾರ (BRICS Wellness Workshop) ಅನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 10-11 ರಂದು ನಡೆಯಲಿರುವ ಈ ಕಾರ್ಯಾಗಾರಕ್ಕೆ ಕೇಂದ್ರ ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯ್ಕ್ ಉದ್ಘಾಟಿಸಿದರು. ಬ್ರಿಕ್ಸ್ ಕಾರ್ಯಾಗಾರಕ್ಕೆ ಪೂರಕವಾಗಿ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಶನಿವಾರದಿಂದ ಇದೇ 13ರವರೆಗೆ ಆಯುಷ್ ವಸ್ತುಪ್ರದರ್ಶನ ನಡೆಯಲಿದೆ.ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹೋಮಿಯೋಪತಿ ಹಾಗೂ ಪ್ರಕೃತಿ ಚಿಕಿತ್ಸೆ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ಆಯುಷ್ ಔಷಧಗಳು ಮತ್ತು ಔಷಧೀಯ ಸಸ್ಯಗಳ ಬಗ್ಗೆ ವಿಚಾರ ಸಂಕಿರಣಗಳೂ ನಡೆಯಲಿವೆ.
Question 4 |
4. ಭಾರತದ ಮೊದಲ “ಲೇಸರ್ ಇಂಟರ್ಫೆರೊಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ (LIGO)” ಪ್ರಯೋಗಾಲಯ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
ಕರ್ನಾಟಕ | |
ಮಹಾರಾಷ್ಟ್ರ | |
ಗುಜರಾತ್ | |
ಆಂಧ್ರ ಪ್ರದೇಶ |
ಗುರುತ್ವಾಕರ್ಷಣೆ ಅಲೆಗಳನ್ನು ಗುರುತಿಸುವ ಮಹತ್ವಾಕಾಂಕ್ಷಿ ಲೇಸರ್ ಇಂಟರ್ಫೆರೊಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ (ಲೀಗೋ) ಪ್ರಯೋಗಾಲಯವನ್ನು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಔಂಧಾದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಅಮೆರಿಕಾದ ನಂತರ ವಿಶ್ವದ ಬೇರೆ ದೇಶಗಳಲ್ಲಿ ಸ್ಥಾಪನೆಗೊಳ್ಳುತ್ತಿರುವ ಮೊದಲ ಪ್ರಯೋಗಾಲಯ ಇದಾಗಿದೆ. ಬ್ರಹ್ಮಾಂಡದಲ್ಲಿರುವ ಗುರುತ್ವಾಕರ್ಷಕ ಅಲೆಗಳನ್ನು ಗುರುತಿಸುವುದು ಮತ್ತು ಖಗೋಳ ಅಧ್ಯಯನ ಸಾಧನವಾಗಿ ಗುರುತ್ವಾಕರ್ಷಕ ಅಲೆ ವೀಕ್ಷಣಾಲಯಗಳನ್ನು ಅಭಿವೃದ್ಧಿಪಡಿಸುವುದು. ಬೆಳಕು ಮತ್ತು ಆಕಾಶವನ್ನು ಬಳಸಿಕೊಂಡು ಗುರುತ್ವಾಕರ್ಷಕ ಅಲೆಗಳ ಮೂಲವನ್ನು ಗುರುತಿಸಿ ಅರ್ಥ ಮಾಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಪ್ರಸ್ತುರ ಅಮೆರಿಕಾದ ಹ್ಯಾನ್ ಪೋರ್ಡ್, ವಾಷಿಂಗ್ಟನ್, ಲಿವಿಂಗಸ್ಟನ್ ಮತ್ತು ಲೂಸಿಯಾನದಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ಕಾರ್ಯನಿರ್ವಹಿಸುತ್ತಿವೆ.
Question 5 |
5. ಈ ಕೆಳಗಿನ ಯಾರು ಇತ್ತೀಚೆಗೆ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಜಗತ್ತಿನ ನಂ.1 ಶ್ರೀಮಂತ ವ್ಯಕ್ತಿ ಸ್ಥಾನವನ್ನು ಅಲಂಕರಿಸಿದ್ದಾರೆ?
ಅಮ್ಯಾನ್ಷಿಯೋ ಅರ್ಟೆಗಾ | |
ಕಾರ್ಲೋಸ್ ಸ್ಲಿಮ್ | |
ವಾರನ್ ಬಫೆಟ್ | |
ಮುಖೇಶ್ ಅಂಬಾನಿ |
ಸ್ಪ್ಯಾನಿಷ್ ಉದ್ಯಮಿ ಅಮ್ಯಾನ್ಷಿಯೋ ಅರ್ಟೆಗಾ ಅವರು ಬಿಲ್ ಗೇಟ್ಸ್ರನ್ನ ಹಿಂದಿಟ್ಟು ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅಮ್ಯಾನ್ಷಿಯೋ ಅವರು ಇಂಡಿಟೆಕ್ಸ್ (ಝರಾ ಕ್ಲಾಥಿಂಗ್ ಎಂದೇ ಜನಪ್ರಿಯ)ಸಂಸ್ಥಾಪಕ ಮತ್ತು ಚೇರಮನ್ ಆಗಿದ್ದಾರೆ. ಇವರ ಷೇರುಗಳ ಒಟ್ಟು ಮೌಲ್ಯ ₹5.32 ಲಕ್ಷ ಕೋಟಿ (79.5 ಬಿಲಿಯನ್ ಡಾಲರ್) ತಲುಪಿದ್ದು, ಜಗತ್ತಿನ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. 80 ವರ್ಷದ ಅರ್ಟೆಗಾ ಅವರು ಈ ಹಿಂದೆಯೇ ಯುರೋಪ್ನ ಅತಿ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದಿದ್ದರು. ಇತ್ತೀಚೆಗೆ ಷೇರು ಪೇಟೆಯಲ್ಲಿ ಅರ್ಟೆಗಾ ಅವರ ಷೇರುಗಳಲ್ಲಿ ಶೇ.2.5ರಷ್ಟು ಏರಿಕೆ ಕಾಣುವ ಮೂಲಕ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.
Question 6 |
6. 2016 ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡವರು ______?
ಅಂಜಲಿಕ್ ಕೆರ್ಬರ್ | |
ಸೆರೆನಾ ವಿಲಿಯಮ್ಸ್ | |
ಕ್ಯಾರೋಲಿನಾ ಪಿಸ್ಕೋವ | |
ಮಾರ್ಟಿನ್ ಹಿಂಗೀಸ್ |
ಜರ್ಮನಿಯ ಅಂಜಲಿಕ್ ಕೆರ್ಬರ್ ಯುಎಸ್ ಓಪನ್ನಲ್ಲಿ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ದ್ವಿತೀಯ ಶ್ರೇಯಾಂಕಿತೆ ಕೆರ್ಬರ್ 10ನೇ ಶ್ರೇಯಾಂಕಿತೆ ಝೆಕ್ ಆಟಗಾರ್ತಿ ಕ್ಯಾರೋಲಿನಾ ಪಿಸ್ಕೋವಾರನ್ನು 6-3, 4-6, 6-4 ಸೆಟ್ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು. ಮಾತ್ರವಲ್ಲ ವಿಶ್ವದ ನಂ.1 ಪಟ್ಟವನ್ನು ಏರಿದರು. ಅಂಜಲಿಕ್ ಕಳೆದ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನೂ ಜಯಿಸಿದ್ದರು. ಮೆಲ್ಬೋರ್ನ್ನಲ್ಲಿ ನಡೆದ ಈ ವರ್ಷದ ಮೊದಲ ಗ್ರಾನ್ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ರನ್ನು ಸೋಲಿಸಿ ಪ್ರಶಸ್ತಿ ಎತ್ತಿದ್ದ ಕೆರ್ಬರ್ ವಿಂಬಲ್ಡನ್ ಟೂರ್ನಿಯಲ್ಲೂ ಫೈನಲ್ಗೆ ತಲುಪಿದ್ದರು. ಆದರೆ, ಫೈನಲ್ನಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾಗೆ ಸೋತಿದ್ದರು.
Question 7 |
7. ಈ ಕೆಳಗಿನ ಯಾವುದರಲ್ಲಿ “ಟ್ರೈಕ್ಲೊಸನ್ (Triclosan)” ರಾಸಾಯನಿಕವನ್ನು ಬಳಸಲಾಗುತ್ತದೆ?
I) ಟೂಥ್ ಪೇಸ್ಟ್
II) ಟಾಲ್ಕಂ ಪೌಡರ್
III) ಹ್ಯಾಂಡ್ ವಾಶ್
IV) ಗೋಡೆ ಬಣ್ಣ
ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಆರಿಸಿ:
I & II | |
I, II & III | |
III & IV | |
ಮೇಲಿನ ಎಲ್ಲವೂ |
ಟ್ರೈಕ್ಲೊಸನ್ ಒಂದು ಆ್ಯಂಟಿ ಮೈಕ್ರೋಬಿಯಲ್ ಗುಣ ಹೊಂದಿರುವ ರಾಸಾಯನಿಕವಾಗಿದ್ದು, ನಾವು ದಿನ ನಿತ್ಯ ಬಳಸುವ ಸೋಪ್, ಟೂಥ್ ಪೇಸ್ಟ್, ಪೌಡರ್, ಹ್ಯಾಂಡ್ ವಾಶ್ ಮತ್ತು ಗೋಡೆ ಬಣ್ಣಗಳ ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಬಳಕೆಯನ್ನು ಕೈಬಿಡಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಬ್ಯಾಕ್ಟೀರಿಯಾಗಳು ಟ್ರೈಕ್ಲೊಸನ್ ಗೆ ವಿರೋಧತ್ವವನ್ನು ಬೆಳೆಸಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಅಮೆರಿಕಾದ FAO ಟ್ರೈಕ್ಲೊಸನ್ ಆಧಾರಿತ ಸೋಪ್ ಮಾರಾಟಗಳ ಮೇಲೆ ನಿಷೇಧ ಹೇರಿದೆ.
Question 8 |
8. ಈ ಕೆಳಗಿನ ಯಾವುದು ಭಾರತದ ಮೊಟ್ಟ ಮೊದಲ ಕುಲಾಂತರಿ ಸಾಸಿವೆ (Genetically Modified Mustard)ತಳಿಯ ಹೆಸರೇನು?
DMH-10 | |
DMH-11 | |
DMH-15 | |
DMH-20 |
DMH-11 ದೇಶದ ಮೊದಲ ಕುಲಾಂತರಿ ಸಾಸಿವೆ ತಳಿ. ದಿಲ್ಲಿಯ ವಿಶ್ವ ವಿದ್ಯಾನಿಲಯದಲ್ಲಿ ಮಾಜಿ ಉಪಕುಲಪತಿ ದೀಪಕ್ ಪೆಂಟಾಲ್ ಎಂಬುವವರ ನೇತೃತ್ವದಲ್ಲಿ ಇದನ್ನು ಅಭಿವೃದ್ದಿಪಡಿಸಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ತಳಿಗೆ ಅನುಮೋದನೆ ನೀಡುವ ಕುರಿತಾಗಿ ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಅನುಮತಿ ದೊರೆತರೆ ದೇಶದ ಮೊದಲ ಕುಲಾಂತರಿ ಆಹಾರ ಬೆಳೆ ಎಂಬ ಗೌರವಕ್ಕೆ ಪಾತ್ರವಾಗಲಿದೆ. ಈ ಹಿಂದೆ ಕುಲಾಂತರಿ ಬದನೆ ಅಭಿವೃದ್ದಿಪಡಿಸಲಾಗಿತ್ತಾದ್ದರೂ, ರೈತರಿಗೆ ಬೆಳೆಯಲು ಅವಕಾಶ ನೀಡಿರಲಿಲ್ಲ.
Question 9 |
9. 2016 ಬ್ರೆಜಿಲ್ ಗ್ರಾಂಡ್ ಪ್ರಿಕ್ಸ್ ಮಿಕ್ಸ್ ಡಬ್ಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಜೋಡಿ ಯಾವುದು?
ಪ್ರಣಾವ್ ಚೋಪ್ರ ಮತ್ತು ಸಿಕ್ಕಿ ರೆಡ್ಡಿ | |
ಟೊಬಿ ನ್ಗ್ ಮತ್ತು ರಾಚೆಲ್ ಹೊಂಡೆರಿಚ್ | |
ತರುಣ್ ಕೊನ ಮತ್ತು ಮನು ಅತ್ರಿ | |
ಮನು ಅತ್ರಿ ಮತ್ತು ನಂದ ಗೋಪಾಲ್ |
ಭಾರತದ ಪ್ರಣಾವ್ ಜೆರಿ ಚೋಪ್ರ ಮತ್ತು ಎನ್. ಸಿಕ್ಕಿ ರೆಡ್ಡಿ ಜೋಡಿ 2016 ಬ್ರೆಜಿಲ್ ಗ್ರಾಂಡ್ ಪ್ರಿಕ್ಸ್ ಮಿಕ್ಸ್ ಡಬ್ಬಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇವರು ಕೆನಡಾದ ಟೊಬಿ ನ್ಗ್ ಮತ್ತು ರಾಚೆಲ್ ಹೊಂಡೆರಿಚ್ ಜೋಡಿಯನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು
Question 10 |
10. “ಬಲ್ಪಕ್ರಮ್ ರಾಷ್ಟ್ರೀಯ ಉದ್ಯಾನವನ (Balpakram National Park)” ಯಾವ ರಾಜ್ಯದಲ್ಲಿದೆ?
ಮಣಿಪುರ | |
ಸಿಕ್ಕಿಂ | |
ಮೇಘಾಲಯ | |
ಅರುಣಾಚಲ ಪ್ರದೇಶ |
ಬಲ್ಪಕ್ರಮ್ ರಾಷ್ಟ್ರೀಯ ಉದ್ಯಾನವನ ಮೇಘಾಲಯದಲ್ಲಿದೆ. ಈ ಉದ್ಯಾನವನವನ್ನು ಅಮೆರಿಕಾದ ಗ್ರಾಂಡ್ ಕನ್ಯಾಯನ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಲಿಕೆ ಮಾಡಲಾಗಿದೆ. “ಲ್ಯಾಂಡ್ ಆಫ್ ಸ್ಪಿರಿಟ್” ಎಂತಲೂ ಇದನ್ನು ಕರೆಯಲಾಗುತ್ತದೆ. ಕರಡಿ, ಗೋಲ್ಡನ್ ಕ್ಯಾಟ್, ನೀರಾನೆ, ಆನೆ ಮತ್ತು ಹುಲಿಗಳಿಗೆ ಈ ಉದ್ಯಾನವನ ಆಶ್ರಯವಾಗಿದೆ.
Super…..live gk question
ಧನ್ಯವಾದಗಳು ಸರ್
Good work
Shingadisr90@gmail.com