ಕ್ವಿಜ್ ರಾಜ್ಯ , ಕೇಂದ್ರ ಸರ್ಕಾರ ಮತ್ತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ ಏಪ್ರಿಲ್-1, 2
Question 1 |
1. “ಮೌಸ್ ಲೆಮುರ್ (Mouse Lemur)” ಎಂಬ ಪ್ರಾಣಿ ಪ್ರಭೇದಗಳು ಈ ಯಾವ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ?
ಶ್ರೀಲಂಕಾ | |
ಅಂಡಮಾನ್ ಮತ್ತು ನಿಕೋಬಾರ್ | |
ಮಡಗಾಸ್ಕರ್ ದ್ವೀಪ ಪ್ರದೇಶ | |
ದಿಬುಗಾರ್ಸಿಯಾ |
Question 1 Explanation:
ಮಡಗಾಸ್ಕರ್ ದ್ವೀಪ ಪ್ರದೇಶ:
ಮೌಸ್ ಲೆಮುರ್ ಪ್ರಾಣಿ ಪ್ರಭೇದಗಳು ಮಡಗಾಸ್ಕರ್ ದ್ವೀಪ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ. ನಿಶಾಚಾರಿಗಳಾದ ಲೆಮುರ್ ಗಳು ಮಾಂಸ ಮತ್ತು ಸಸ್ಯಹಾರಿಗಳು. ಮೌಸ್ ಲೆಮುರ್ ಗಳು ಸಸ್ತನಿ ವರ್ಗಕ್ಕೆ ಸೇರಿದ ಪ್ರಾಣಿಗಳಲ್ಲಿ ಅತ್ಯಂತ ಚಿಕ್ಕಗಾತ್ರದ (2 ಗ್ರಾಂ) ಮೆದುಳನ್ನು ಹೊಂದಿರುವ ಪ್ರಾಣಿಗಳು.
Question 2 |
2. ಇವರಲ್ಲಿ ಯಾರು ಪ್ರಸ್ತುತ ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (IRDA) ನ ಮುಖ್ಯಸ್ಥರು ಆಗಿದ್ದಾರೆ?
ಟಿ. ಎಸ್. ವಿಜಯನ್ | |
ಆರ್. ಶ್ರೀನಿವಾಸನ್ | |
ಚಂದ್ರಶೇಖರ್ ಮುನ್ಷಿ | |
ಭಾರತಿ ಚಂದ್ರ |
Question 2 Explanation:
ಟಿ. ಎಸ್. ವಿಜಯನ್:
ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರದ ಈಗಿನ ಮುಖ್ಯಸ್ಥರು ಟಿ.ಎಸ್. ವಿಜಯನ್. ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರವನ್ನು 19 ನೇ ಏಪ್ರಿಲ್ 2000 ರಂದು ಸ್ಥಾಪಿಸಲಾಗಿದೆ. ದೇಶದಲ್ಲಿ ವಿಮಾ ಕ್ಷೇತ್ರವನ್ನು ಸಮಗ್ರ ರೀತಿಯಲ್ಲಿ ಅಭಿವೃದ್ದಿಪಡಿಸುವ ಸಲುವಾಗಿ ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (IRDA) ವನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ ಕಾಯಿದೆ 1999 ರ ಪ್ರಕಾರ ಸ್ಥಾಪಿಸಲಾಗಿದೆ. IRDA ಕಾಯಿದೆ ಅನ್ವಯ ಪ್ರಾಧಿಕಾರವು ಓಬ್ಬ ಅಧ್ಯಕ್ಷ, ಐದು ಪೂರ್ಣ ಅವಧಿಯ ಸದಸ್ಯರು ಹಾಗೂ ನಾಲ್ಕು ಅರೆ ಕಾಲಿಕ ಸದಸ್ಯರನ್ನು ಓಳಗೊಂಡಿದೆ. ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಮೂರು ವರ್ಷಗಳು.
Question 3 |
3. ಯಾವ ರಾಷ್ಟ್ರ 2015 ರ ಜಾಗತಿಕ ಮಾನವ ಅಭಿವೃದ್ದಿ ಸೂಚ್ಯಂಕ ಪ್ರಕಾರ ದಕ್ಷಿಣಾ ಏಷ್ಯಾ ಪ್ರದೇಶದಲ್ಲಿ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ?
ಭಾರತ | |
ಶ್ರೀಲಂಕಾ | |
ಭೂತಾನ್ | |
ನೇಪಾಳ |
Question 3 Explanation:
ಶ್ರೀಲಂಕಾ
Question 4 |
4. ಇತ್ತೀಚೆಗೆ ನಿಧನರಾದ ವಾಸ್ತುಶಿಲ್ಪಿ ‘ಡೇಮ್ ಝಹ ಹದಿದ್” ಯಾವ ದೇಶದವರು?
ಇರಾಕ್ | |
ಇರಾನ್ | |
ಬ್ರೆಜಿಲ್ | |
ಬಾಂಗ್ಲದೇಶ |
Question 4 Explanation:
ಇರಾಕ್:
ಡೇಮ್ ಝಹ ಹದಿದ್ ರವರು ಇರಾಕ್ ಮೂಲದ ಬ್ರಿಟಿಷ್ ವಾಸ್ತುಶಿಲ್ಪಿ. ವಾಸ್ತುಶಿಲ್ಪ ಕ್ಷೇತ್ರದಲ್ಲಿ ವಿಶ್ವಪ್ರಸಿದ್ದಿ ಹೊಂದಿದ್ದ ಹದಿದ್ ರವರು ಪ್ರಿಟ್ಞ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಹಾಗೂ ಮೊದಲ ಮುಸ್ಲಿಂ ವಾಸ್ತುಶಿಲ್ಪಿ. 2010 ಮತ್ತು 2011 ನೇ ಸಾಲಿನ ಸ್ಟೆರ್ಲಿಂಗ್ ಪ್ರಶಸ್ತಿಗೂ ಭಾಜನರಾಗಿದ್ದರು. 2015 ರಲ್ಲಿ ರಿಬಾ ಗೋಲ್ದ್ ಮೆಡಲ್ (RIBA Gold Medal) ಅನ್ನು ಪಡೆದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.
Question 5 |
5. ಈ ಕೆಳಗಿನ ಯಾವುದು ಸಿಕ್ಕಿಂ ರಾಜ್ಯದ ಅಧಿಕೃತ ಭಾಷೆ?
ನೇಪಾಳಿ | |
ಸಿಕ್ಕಿಮೀಸ್ | |
ಇಂಗ್ಲೀಷ್ | |
ಮೇಲಿನ ಎಲ್ಲವೂ |
Question 5 Explanation:
ಮೇಲಿನ ಎಲ್ಲವೂ
ಸಿಕ್ಕಿಂನಲ್ಲಿ ಓಟ್ಟು 11 ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಅಳವಡಿಸಿಕೊಳ್ಳಲಾಗಿದೆ ಅವುಗಳೆಂದರೆ ನೇಪಾಳಿ, ಸಿಕ್ಕಿಮೀಸ್, ಇಂಗ್ಲೀಷ್, ಹಿಂದಿ, ಲೆಪ್ಚ, ತಮಂಗ್, ಲಿಂಬು, ನೆವಾರಿ, ರಾಯ್, ಗುರುಂಗ್, ಮಗರ್ ಮತ್ತು ಸನ್ವರ್.
Question 6 |
6. ಇತ್ತೀಚೆಗೆ ನಾಲ್ಕನೇ ವಿಶ್ವ ಪರಮಾಣು ಭದ್ರತಾ ಶೃಂಗಸಭೆ (World Nuclear Security Summit) ಎಲ್ಲಿ ನಡೆಯಿತು?
ವಾಷಿಂಗ್ ಟನ್, ಯುಎಸ್ಎ | |
ಜಿನೇವಾ, ಸ್ವಿಟ್ಜರ್ಲ್ಯಾಂಡ್ | |
ಬಿಜೀಂಗ್, ಚೀನಾ | |
ನವದೆಹಲಿ, ಭಾರತ |
Question 6 Explanation:
ವಾಷಿಂಗ್ ಟನ್, ಯುಎಸ್ಎ:
ನಾಲ್ಕನೇ ವಿಶ್ವ ಪರಮಾಣು ಭದ್ರತಾ ಶೃಂಗಸಭೆಯು ಆಮೇರಿಕಾದ ರಾಜಧಾನಿ ವಾಷಿಂಗ್ ಟನ್ ನಲ್ಲಿ ಮಾರ್ಚ್ 31-ಏಪ್ರಿಲ್ 1 ರವರೆಗೆ ನಡೆಯಿತು. 2010 ರಿಂದ ಎರಡು ವರ್ಷಕ್ಕೊಮ್ಮೆ ಈ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ಮೊದಲ ಶೃಂಗಸಂಭೆಯು ವಾಷಿಂಗ್ ಟನ್, ಯುಎಸ್ಎಯಲ್ಲಿ ನಡೆದಿತ್ತು. ಈ ವರ್ಷ ನಡೆದ ಶೃಂಗಸಭೆಯಲ್ಲಿ ಭಾರತ ಸೇರಿದಂತೆ ವಿಶ್ವದ 52 ರಾಷ್ಟ್ರಗಳು ಭಾಗವಹಿಸಿದ್ದವು.
Question 7 |
7. ಈ ಕೆಳಗಿನ ಯಾವ ರಾಜ್ಯ ದೇಶದ ಮೊದಲ ಸಂಪೂರ್ಣ ಸಾವಯವ ಕೃಷಿ ರಾಜ್ಯವೆಂದು ಘೋಷಿಸಲಾಗಿದೆ?
ಗುಜರಾತ್ | |
ಕೇರಳ | |
ಸಿಕ್ಕಿಂ | |
ಮಧ್ಯ ಪ್ರದೇಶ |
Question 7 Explanation:
ಸಿಕ್ಕಿಂ:
ಈಶಾನ್ಯ ರಾಜ್ಯ ಸಿಕ್ಕಿಂ ದೇಶದ ಮೊದಲ ಸಂಪೂರ್ಣ ಸಾವಯವ ಕೃಷಿ ರಾಜ್ಯವೆಂದು ಹೆಗ್ಗಳಿಗೆ ಪಾತ್ರವಾಗಿದೆ. ಸುಮಾರು ಆರು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಪುಟ್ಟ ರಾಜ್ಯವನ್ನು ಪ್ರಧಾನಿ ಮೋದಿ ರವರು ಸಿಕ್ಕಿಂ ಭೇಟಿಯ ವೇಳೆ ಸಾವಯವ ಕೃಷಿ ರಾಜ್ಯವೆಂದು ಘೋಷಿಸಿದರು.
Question 8 |
8. ಇತ್ತೀಚಿನ ವರದಿಯೊಂದರ ಪ್ರಕಾರ ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವ್ಯಹಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
ಮೊದಲ ಸ್ಥಾನ | |
ಎರಡನೇ ಸ್ಥಾನ | |
ತೃತೀಯ ಸ್ಥಾನ | |
ನಾಲ್ಕನೇ ಸ್ಥಾನ |
Question 8 Explanation:
ನಾಲ್ಕನೇ ಸ್ಥಾನ:
ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವ್ಯಹಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತ ಆರನೇ ಸ್ಥಾನದಲ್ಲಿದ್ದು, ಎರಡು ಸ್ಥಾನ ಮೇಲೆರಿದೆ. ಅಮೇರಿಕಾ ಸಂಶೋಧನಾ ಸಂಸ್ಥೆ HIS Inc ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ತಿಳಿದುಬಂದಿದೆ. 2016-17 ನೇ ಸಾಲಿನ ಬಜೆಟ್ ನಲ್ಲಿ ಭಾರತ ರಕ್ಷಣಾ ಕ್ಷೇತ್ರಕ್ಕೆ ಕಳೆದ ಬಾರಿಗಿಂತ ಶೇ 13.7% ಹೆಚ್ಚಿನ ಅನುದಾನವನ್ನು ಹೆಚ್ಚಿಸಲಾಗಿದೆ.
Question 9 |
9. ಪ್ಲಾಯ ಸರೋವರ (Playa Lakes)ಗಳು ಯಾವ ಪ್ರದೇಶಗಳಲ್ಲಿ ಕಂಡುಬರುತ್ತವೆ?
ಮರುಭೂಮಿ | |
ಹಿಮನದಿ ಪ್ರದೇಶ | |
ಪ್ರವಾಹ ಮೈದಾನ | |
ಸುಣ್ಣಕಲ್ಲು ಪ್ರದೇಶ |
Question 9 Explanation:
ಮರುಭೂಮಿ:
ಪ್ಲಾಯ ಸರೋವರಗಳು ಮರುಭೂಮಿ ಪ್ರದೇಶದಲ್ಲಿ ಕಂಡುಬರುತ್ತವೆ.
Question 10 |
10. ಈ ಕೆಳಗಿನ ಯಾವ ನದಿ ಥಾರ್ ಮರುಭೂಮಿಯಲ್ಲಿ ಹರಿಯುತ್ತದೆ?
ಸರಸ್ವತಿ | |
ಲೂನಿ | |
ರಾವಿ | |
ತಪತಿ |
Question 10 Explanation:
ಲೂನಿ:
ಲೂನಿ ನದಿ ರಾಜಸ್ಥಾನದ ಅರಾವಳಿ ಬೆಟ್ಟಸಾಲುಗಳ ಪುಷ್ಕರ್ ಕಣಿವೆಯಲ್ಲಿ ಉಗಮಗೊಂಡು ಥಾರ್ ಮರುಭೂಮಿಯ ದಕ್ಷಿಣಾ ಭಾಗದಲ್ಲಿ ಹರಿದು ಗುಜರಾತ್ ನ ರನ್ ಆಫ್ ಕಚ್ ನಲ್ಲಿ ಕೊನೆಗೊಳ್ಳುತ್ತದೆ. ಸಾಗರಮತಿ ಎಂತಲೂ ಕರೆಯಲ್ಪಡುವ ಈ ನದಿಯೂ ಸರಿ ಸುಮಾರು 495 ಕಿ.ಮೀ ಉದ್ದದ ನದಿ.
There are 10 questions to complete.