ಆತ್ಮೀಯ ಓದುಗರೇ,
ಪಂಚಾಯತ್ ಅಭಿವೃದ್ದಿ ಅಧಿಕಾರಿ/ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಕನ್ನಡ ಪತ್ರಿಕೆ ಸಲುವಾಗಿ ಕರುನಾಡುಎಗ್ಸಾಂ ತಂಡ ಕನ್ನಡ ವ್ಯಾಕರಣ ಬಗ್ಗೆ ಪರೀಕ್ಷೆಗೆ ಉಪಯುಕ್ತವಾಗುವ ಮಾಹಿತಿಯನ್ನು ಇಲ್ಲಿ ನೀಡಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಕನ್ನಡ ಪ್ರಶ್ನೆಗಳನ್ನು ಪ್ರಕಟಿಸಲಾಗುವುದು.
ಯಾವುದೇ ಭಾಷೆಯನ್ನ ವ್ಯಾಕರಣದ ಸಹಾಯವಿಲ್ಲದೇ ಶುದ್ದವಾಗಿ ಮಾತನಾಡುವುದು, ಬರೆಯುವುದು ಸಾಧ್ಯವಿಲ್ಲ. ಆಗಾಗಿ ವ್ಯಾಕರಣ ಕಲಿಯುವುದು ಅತ್ಯಂತ ಅವಶ್ಯಕವಾಗಿದೆ. ವ್ಯಾಕರಣವದ ಅಧ್ಯಯನವನ್ನು ಕನ್ನಡ ವರ್ಣಮಾಲೆಯಿಂದ ತಿಳಿದುಕೊಳ್ಳೊಣ. [ಹಂತಹಂತವಾಗಿ ಪ್ರಕಟಿಸಲಾಗುವುದು]
ಕನ್ನಡ ವರ್ಣಮಾಲೆ
ವರ್ಣಮಾಲೆ: ಕನ್ನಡ ಭಾಷೆಯ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ. ವರ್ಣಮಾಲೆಯನ್ನು ಸ್ವರಗಳು, ವ್ಯಂಜನಗಳು ಮತ್ತು ಯೋಗವಾಹಕಗಳೆಂದು ವಿಂಗಡಿಸಲಾಗಿದೆ.
ಸ್ವರಗಳು: ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತಾರೆ. ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ. ಒಟ್ಟು ಸ್ವರಗಳ ಸಂಖ್ಯೆ 13. ಸ್ವರಗಳನ್ನು ಮತ್ತೆ ಹ್ರಸ್ವ ಸ್ವರ, ದೀರ್ಘ ಸ್ವರ ಮತ್ತು ಪ್ಲುತ ಸ್ವರವೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
- ಹ್ರಸ್ವ ಸ್ವರ: ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನ್ನಲಾಗುತ್ತದೆ. ಒಟ್ಟು ಆರು ಹ್ರಸ್ವ ಸ್ವರಗಳಿವೆ. ಉದಾ: ಅ ಇ ಉ ಋ ಎ ಒ.
- ದೀರ್ಘ ಸ್ವರ: ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎಂದು ಕರೆಯಲಾಗುವುದು. ಒಟ್ಟು 7 ದೀರ್ಘಸ್ವರಗಳಿವೆ. ಉದಾ: ಆ ಈ ಊ ಏ ಓ ಐ ಔ
- ಪ್ಲುತ ಸ್ವರ: ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ. ಬೇರೆಯವರನ್ನು ಕರೆಯುವಾಗ ಪ್ಲುತ ಸ್ವರಗಳು ಬರುತ್ತವೆ. ಉದಾ: ಅಮ್ಮಾ, ಅಕ್ಕಾ ಕ್+ಅ, ಮ್+ಅ.
ಸಂಧ್ಯಾಕ್ಷರಗಳು: 4 ವರ್ಣಗಳಾದ ಏ, ಐ, ಒ, ಔ ಸಂಧ್ಯಾಕ್ಷರಗಳಾಗಿವೆ.
ವ್ಯಂಜನಗಳು: ಸ್ವರಗಳಿಂದ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಳನ್ನು ವ್ಯಂಜನಗಳು ಎನ್ನುತ್ತಾರೆ. ವರ್ಣಮಾಲೆಯಲ್ಲಿ ಕ ಯಿಂದ ಳ ವರೆಗೆ ಒಟ್ಟು 34 ಅಕ್ಷರಗಳಿದ್ದು, ಇವುಗಳನ್ನು ವ್ಯಂಜನಗಳು ಎನ್ನುತ್ತಾರೆ. ವ್ಯಂಜನಗಳನ್ನು ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನವೆಂದು ವಿಂಗಡಿಸಲಾಗಿದೆ.
ವರ್ಗೀಯ ವ್ಯಂಜನಾಕ್ಷರಗಳು: ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎನ್ನಲಾಗುತ್ತದೆ. ಒಟ್ಟು 25 ವರ್ಗೀಯ ವ್ಯಂಜನಾಕ್ಷರಗಳಿವೆ. ಉದಾ: ಕ ವರ್ಗ – ಕ ಖ ಗ ಘ ಙ, ಚ ವರ್ಗ – ಚ ಛ ಜ ಝ ಞ, ಟ ವರ್ಗ – ಟ ಠ ಡ ಢ ಣ, ತ ವರ್ಗ – ತ ಥ ದ ಧ ನ, ಪ ವರ್ಗ– ಪ ಫ ಬ ಭ ಮ.
- ವರ್ಗೀಯ ವ್ಯಂಜನಾಕ್ಷರಗಳನ್ನು ಮತ್ತೆ ಮೂರು ವಿಧಗಳಾಗಿ ಅಂದರೆ ಅಲ್ಪ ಪ್ರಾಣಾಕ್ಷರಗಳು, ಮಹಾ ಪ್ರಾಣಾಕ್ಷರಗಳು ಮತ್ತು ಅನುನಾಸಿಕಾಕ್ಷರಗಳೆಂದು ವಿಂಗಡಿಸಲಾಗಿದೆ.
- ಅಲ್ಪ ಪ್ರಾಣಾಕ್ಷರಗಳು(10): ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ. ಉದಾಹರಣೆ ಕ, ಚ, ಟ, ತ, ಪ, ಗ, ಜ, ಡ, ದ, ಬ.
- ಮಹಾ ಪ್ರಾಣಾಕ್ಷರಗಳು(10): ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ. ಉದಾಹರಣೆ ಖ, ಛ ,ಠ, ಧ, ಫ, ಘ, ಝ, ಢ, ಧ, ಭ.
- ಅನುನಾಸಿಕಾಕ್ಷರಗಳು (5): ಮೂಗಿನ ಸಹಾಯದಿಂದುಚ್ಚರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ. ಉದಾಹರಣೆ ಙ, ಞ, ಣ, ನ, ಮ.
ಅವರ್ಗೀಯ ವ್ಯಂಜನಾಕ್ಷರಗಳು: ಯಾವುದೇ ಗುಂಪಿಗೆ ಸೇರಿರದ ಅಕ್ಷರಗಳನ್ನು ಅವರ್ಗೀಯ ವ್ಯಂಜನಾಕ್ಷರಗಳೆಂದು ಕರೆಯಲಾಗುತ್ತದೆ. ಉದಾಹರಣೆ ಯ, ರ, ಲ, ವ, ಶ, ಷ, ಸ ,ಹ, ಳ. ಒಟ್ಟು 9 ಅಕ್ಷರಗಳು
ಯೋಗವಾಹಗಳು: ಅಂ ಅಃ ಗಳನ್ನು ಯೋಗವಾಹಕಗಳೆನ್ನುತ್ತಾರೆ. ಯೋಗವಾಹಕಗಳಲ್ಲಿ ಮತ್ತೆ ಎರಡು ವಿಧಗಳನ್ನು ಕಾಣಬಹುದು. ಅವುಗಳೆಂದರೆ ಅನುಸ್ವಾರ (ಂ) ಮತ್ತು ವಿಸರ್ಗ (ಃ)
ಸಂಯುಕ್ತಾಕ್ಷರ: ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ/ಒತ್ತಕ್ಷರ ಎಂದು ಕರೆಯಲಾಗುತ್ತದೆ. ಸಂಯುಕ್ತಾಕ್ಷರಗಳನ್ನು ಎರಡು ವಿಧಗಳಿವೆ. ಅವುಗಳೆಂದರೆ ಸಜಾತೀಯ ಮತ್ತು ವಿಜಾತೀಯ ಸಂಯುಕ್ತಾಕ್ಷರ.
- ಸಜಾತೀಯ ಸಂಯುಕ್ತಕ್ಷರ: ಒಂದು ವ್ಯಂಜನಕ್ಕೆ ಅದೇ ವ್ಯಂಜನಾಕ್ಷರ ಸೇರಿದರೆ ಅದು ಸಜಾತೀಯ ಸಂಯುಕ್ತಕ್ಷರ. ಉದಾಹರಣೆ: ಅಪ್ಪ, ಅಮ್ಮ, ಅಕ್ಕ, ಹಗ್ಗ
- ವಿಜಾತೀಯ ಸಂಯುಕ್ತಕ್ಷರ: ಒಂದು ವ್ಯಂಜನಕ್ಕೆ ಬೇರೆ ವ್ಯಂಜನಾಕ್ಷರ ಸೇರಿದರೆ ಅದು ವಿಜಾತೀಯ ಸಂಯುಕ್ತಕ್ಷರ. ಉದಾಹರಣೆ: ಅಗ್ನಿ, ಪುಸ್ತಕ, ಶಬ್ದ
ಸಂಧಿಗಳು
ಸಂಧಿ ಎಂದರೆ ಉಚ್ಚಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎನ್ನಲಾಗುವುದು. ಸಂಧಿ ಕಾರ್ಯಾಗಳಾಗುವ ಸನ್ನಿವೇಶಗಳು ಎರಡು ಬಗ್ಗೆ ಇದ್ದು ಅವುಗಳೆಂದರೆ ಸ್ವರ ಸಂಧಿ ಮತ್ತು ವ್ಯಂಜನ ಸಂಧಿ. ಸಂಧಿಗಳನ್ನು ಕನ್ನಡ ಸಂಧಿ ಮತ್ತು ಸಂಸ್ಕೃತ ಸಂಧಿ ಎಂದು ವಿಂಗಡಿಸಲಾಗಿದೆ.
- ಸ್ವರ ಸಂಧಿ: ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ. ಉದಾಹರಣೆ ಊರನ್ನು=ಊರು + ಅನ್ನು
- ವ್ಯಂಜನ ಸಂಧಿ: ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದರೆ ಅದು ವ್ಯಂಜನ ಸಂಧಿ. ಉದಾಹರಣೆ: ಮಳೆಗಾಲ= ಮಳೆ+ಗಾಲ, ಬೆಟ್ಟದಾವರೆ=ಬೆಟ್ಟ+ ತಾವರೆ.
ಕನ್ನಡ ಸಂಧಿ: ಲೋಪ ಸಂಧಿ, ಆಗಮ ಸಂಧಿ, ಆದೇಶ ಸಂಧಿ ಮತ್ತು ಪ್ರಕೃತಿ ಭಾವ ಸಂಧಿ ಕನ್ನಡ ಸಂಧಿಯಾಗಿವೆ.
- ಲೋಪ ಸಂಧಿ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು
- ಉದಾ: ಊರನ್ನು- ಊರು+ ಅನ್ನು (ಉ ಕಾರ ಲೋಪ), ಅವರೆಲ್ಲ- ಅವರು+ಎಲ್ಲ (ಎ ಕಾರ ಲೋಪ), ಹಣದಾಸೆ – ಹಣದ + ಆಸೆ (ಅ ಕಾರ ಲೋಪ), ನಿನಗಲ್ಲದೆ – ನಿನಗೆ + ಅಲ್ಲದೆ (ಎ ಕಾರ ಲೋಪ), ಅಲ್ಲೊಂದು – ಅಲ್ಲಿ + ಒಂದು (ಇ ಕಾರ ಲೋಪ), ಊರಲ್ಲಿ – ಊರು + ಅಲ್ಲಿ (ಉ ಕಾರ ಲೋಪ).
- ಆಗಮ ಸಂಧಿ: ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೇಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು. ಆಗಮ ಸಂಧಿಯಲ್ಲಿ ಯ ಕಾರ ಮತ್ತು ವ ಕಾರ ಸಂಧಿ ಎಂಬ ವಿಧಗಳಿವೆ.
- ಉದಾ (ಯ ಕಾರ): ಮನೆಯಿಂದ= ಮನೆ + ಇಂದ, ಮಗುವನ್ನು= ಮಗು + ವನ್ನು, ಕೆರೆಯನ್ನು = ಕೆರೆ + ಅನ್ನು ಕಾಯದೆ = ಕಾ + ಅದೆ.
- ಉದಾ (ವ ಕಾರ): ಮಗುವಿಗೆ= ಮಗು + ಇಗೆ, ಹೂವಿದು= ಹೂ + ಇದು, ಗೋವಿಗೆ= ಗೋ + ಇಗೆ.
- ಆದೇಶ ಸಂಧಿ: ಸಂಧಿ ವೇಳೆ ಒಂದು ವ್ಯಂಜನದ ಜಾಗಕ್ಕೆ ಮತ್ತೊಂದು ವ್ಯಂಜನ ಬಂದರೆ ಅದು ಆದೇಶ ಸಂಧಿ ಉದಾಹರಣೆ: ಬೆಟ್ಟದಾವರೆ=ಬೆಟ್ಟ+ ತಾವರೆ, ಮಳೆಗಾಲ=ಮೆಳೆ+ಕಾಲ
- ಪ್ರಕೃತಿ ಭಾವ ಸಂಧಿ: ಸಂಧಿ ಕಾರ್ಯ ನಡೆಯದಿರುವುದಕ್ಕೆ ಪ್ರಕೃತಿ ಭಾವ ಸಂಧಿ ಎನ್ನಲಾಗುವುದು. ಉದಾಹರಣೆ: ಅಪ್ಪ ಇಲ್ಲಿ ಬಾ, ಅಣ್ಣ ಓಡಿಬಾ ಇತ್ಯಾದಿ.
ಸಂಸ್ಕೃತ ಸಂಧಿಗಳ ವಿಧಗಳು: ಇದರಲ್ಲಿ ಎರಡು ಬಗೆಯ ಸಂಧಿಗಳನ್ನು ನೋಡಬಹುದಾಗಿದೆ. ಸಂಸ್ಕೃತ ಸ್ವರ ಸಂಧಿ ಮತ್ತು ಸಂಸ್ಕೃತ ವ್ಯಂಜನ ಸಂಧಿ.
ಸಂಸ್ಕೃತ ಸ್ವರ ಸಂಧಿ: ಸವರ್ಣ ದೀರ್ಘ ಸಂಧಿ, ಗುಣ ಸಂಧಿ, ವೃದ್ದಿ ಸಂಧಿ ಮತ್ತು ಯಣ್ ಸಂಧಿ ಸಂಸ್ಕೃತ ಸ್ವರ ಸಂಧಿಯಾಗಿವೆ.
- ಸವರ್ಣ ದೀರ್ಘ ಸಂಧಿ: ಪೂರ್ವಪದದ ಕಡೆಯಲ್ಲಿ ಅ, ಆ, ಇ, ಈ, ಉ, ಊ ಸ್ವರಗಳಿದ್ದು, ಉತ್ತರ ಪದದ ಪ್ರಾರಂಭದಲ್ಲಿ ಅದೇ ಸ್ವರಗಳು ಬಂದರೆ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘ ಸ್ವರವು ಆದೇಶವಾಗಿ ಬರುವುದಕ್ಕೆ ಸವರ್ಣದೀರ್ಘ ಸಂಧಿ ಎನ್ನುವರು. ಉದಾ: ವಿದ್ಯಾಭ್ಯಾಸ= ವಿದ್ಯಾ + ಅಭ್ಯಾಸ, ಗಿರೀಶ = ಗಿರಿ + ಈಶ, ಗುರೂಪೇಶ= ಗುರು + ಉಪದೇಶ, ಶುಭಾಶಯ = ಶುಭಾ + ಆಶಯ
- ಗುಣ ಸಂಧಿ: ಅ, ಆ ಕಾರಗಳ ಮುಂದೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಏ” ಕಾರವೂ. ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಓ” ಕಾರವೂ, ಋ ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ “ಅರ್” ಕಾರವೂ ಆದೇಶವಾಗಿ ಬಂದರೆ ಅಂತಹ ಸಂಧಿಯನ್ನು “ಗುಣಸಂಧಿ” ಎಂದು ಕರೆಯಲಾಗುತ್ತದೆ. ಉದಾಹರಣೆ: ಚಂದ್ರೋದಯ= ಚಂದ್ರ + ಉದಯ (ಅ+ಉ=ಓ), ದೇವರ್ಷಿ= ದೇವ+ಋಷಿ (ಅ+ಋ=ಆರ್). ಸಪ್ತರ್ಷಿ, ಸುರೇಂದ್ರ, ದೇವೆಂದ್ರ ಇತ್ಯಾದಿ ಗುಣ ಸಂಧಿಯಾಗಿವೆ.
- ವೃದ್ಧಿ ಸಂಧಿ :ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಐ” ಕಾರವೂ. ಓ, ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಔ” ಕಾರವೂ ಆದೇಶವಾಗಿ ಬರುತ್ತದೆ ಇದಕ್ಕೆ ವೃದ್ಧಿ ಸಂಧಿ ಎನ್ನುವರು.
ಉದಾ: ಏಕೈಕ = ಏಕ + ಏಕ, ವನೌಷಧಿ = ವನ + ಔಷಧಿ, ಜನೈಕ್ಯ = ಜನ + ಐಕ್ಯ ಸಿದ್ಧೌಷಧ, ಲೋಕೈಕವೀರ, ಅಷ್ಟೈಶ್ವರ್ಯ. - ಯಣ್ ಸಂಧಿ: ಇ, ಈ ಕಾರಗಳ ಮುಂದೆ ಅ, ಆ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಯ್” ಕಾರವೂ. ಉ, ಊ ಕಾರಗಳಿಗೆ “ವ್” ಕಾರವೂ ಋ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು.
ಉದಾಹರಣೆ: ಕೋಟ್ಯಾಧೀಶ=ಕೋಟೆ+ಆಧೀಶ, ಗುರ್ವಾಜ್ಞೆ=ಗುರು+ಆಜ್ಞೆ, ಪ್ರತ್ಯುತ್ತರ = ಪ್ರತಿ + ಉತ್ತರ, ಮನ್ವಂತರ = ಮನು + ಅಂತರ, ಜಾತ್ಯಾತೀತ = ಜಾತಿ + ಅತೀತ, ಮಾತ್ರಂಶ=ಮಾತೃ + ಅಂಶ, ಅತ್ಯವಸರ.
ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು: ಜಶ್ತ್ವ ಸಂಧಿ, ಶ್ಚುತ್ವ ಸಂಧಿ ಮತ್ತು ಅನುನಾಸಿಕ ಸಂಧಿ ಸಂಸ್ಕೃತ ವ್ಯಂಜನ ಸಂಧಿಯಾಗಿವೆ.
- ಜಶ್ತ್ವ ಸಂಧಿ: ಪೂರ್ವ ಪದದ ಕೊನೆಯಲ್ಲಿರುವ ಕ, ಚ, ಟ, ತ, ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ವ್ಯಂಜನಾಕ್ಷರಗಳಾದ ಗ, ಜ, ಡ, ದ, ಬ ಗಳು ಆದೇಶವಾಗಿ ಬರುವುದಕ್ಕೆ ಜಶ್ತ್ವ ಸಂಧಿ ಎಂದು ಎನ್ನುವರು. ಉದಾಹರಣೆ: ವಾಗ್ದೇವಿ=ವಾಕ್+ದೇವಿ, ಅಜಂತ=ಅಜ್+ಅಂತ, ಜಗದೀಶ್ವರ=ಜಗತ್+ಈಶ್ವರ, ವಾಗೀಶ=ವಾಕ್+ಈಶ
- ಶ್ಚುತ್ವ ಸಂಧಿ: ಸಂಧಿ ಕಾರ್ಯ ನಡೆದಾಗ ಪೂರ್ವಪದದ ಕೊನೆಯಲ್ಲಿ ಸ ಕಾರವಾಗಲೀ ತ ಕಾರ ವರ್ಗದ ಯಾವುದಾದರೂ ವರ್ಣವಾಗಲೀ ಇದ್ದರೆ ಆ ವರ್ಣಗಳಿಗೆ ಶ ಕಾರ ಅಥವಾ ಚ ವರ್ಗದ ಯಾವುದಾದರೂ ವರ್ಣಪರವಾದರೆ ಸ ಕಾರಕ್ಕೆ ಶ ಕಾರವೂ ತ ಕಾರಕ್ಕೆ ಚ ವರ್ಗವೂ ಆದೇಶವಾಗಿ ಬರುವುದು ಇವುಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂಧಿ ಎಂದು ಹೆಸರು. ಉದಾಹರಣೆ: ಉಡ್ಡಯನ=ಉತ್+ಡಯನ, ಸಜ್ಜನ = ಸತ್ + ಜನ, ಚಲಚಿತ್ರ = ಚಲತ್ + ಚಿತ್ರ, ಶರಶ್ಚಂದ್ರ = ಶರತ್ + ಚಂದ್ರ ಜಗಜ್ಯೋತಿ.
- ಅನುನಾಸಿಕ ಸಂಧಿ: ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ನ ಣ ಮ ಗಳು ಆದೇಶವಾಗಿ ಬರುವುದಕ್ಕೆ ಅನುನಾಸಿಕ ಸಂಧಿ ಎಂದು ಹೆಸರು. ಉದಾಹರಣೆ: ಷಣ್ಮುಖ=ಷಟ್+ಮುಖ, ಚಿನ್ಮಯ=ಚಿತ್+ಮಯ, ವಾಙ್ಮಯ = ವಾಕ್ + ಮಯ, ಚಿನ್ಮೂರ್ತಿ = ಚಿತ್ + ಮೂರ್ತಿ, ತನ್ಮಯ = ತತ್ + ಮಯಸನ್ಮಾನ.
ನಾಮಪದ
ನಾವು ಮಾತನಾಡುವ ಮಾತುಗಳಲ್ಲಿ ಅನೇಕ ಬಗೆಯ ಶಬ್ದಗಳಿರುತ್ತವೆ. ಆ ಶಬ್ದಗಳಿಗೆ ನಾವು ಬೇರೆ ಬೇರೆ ಹೆಸರು ಕೊಟ್ಟಿರುತ್ತೇವೆ. ಅಂದರೆ ಒಂದೊಂದು ಜಾತೀಯ ಶಬ್ದಗಳನ್ನು ಒಂದೊಂದು ಗುಂಪು ಮಾಡಿ ವ್ಯಾಕರಣದಲ್ಲಿ ಹೇಳುತ್ತೇವೆ. ಉದಾಹರಣೆಗೆ ಈ ಕೆಳಗಿನ ಮಾತುಗಳಲ್ಲಿಯ ಶಬ್ದಗಳನ್ನು ನೋಡಿರಿ.
- ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು.
- ರೈತರು ಕಷ್ಟದಿಂದ ಬೆಳೆಯನ್ನು ಬೆಳೆಯುವರು.
ಈ ವಾಕ್ಯಗಳಲ್ಲಿ:-
- ಆತನು, ಮನೆಯನ್ನು, ಒಕ್ಕಲಿಗರು, ಕಷ್ಟದಿಂದ, ಬೆಳೆಯನ್ನು–ಇವೆಲ್ಲ ನಾಮಪದಗಳು.
- ಕಟ್ಟಿದನು, ಬೆಳೆಯುವರು–ಇವು ಕ್ರಿಯಾಪದಗಳು.
- ಚೆನ್ನಾಗಿ – ಎಂಬುದು ಅವ್ಯಯ.
ಹೀಗೆ ನಾವು ಆಡುವ ಮಾತುಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ಮಾಡುತ್ತೇವೆ.
(ಅ) ನಾಮಪದ (ಆ) ಕ್ರಿಯಾಪದ (ಇ) ಅವ್ಯಯ ಇವೆ ಆ ಮೂರು ಗುಂಪುಗಳು
ಮನೆಯನ್ನು | ಮನೆಯದೆಸೆಯಿಂದ |
ಮನೆಯಿಂದ | ಮನೆಯ |
ಮನೆಗೆ | ಮನೆಯಲ್ಲಿ |
ಇವೆಲ್ಲ `ನಾಮಪದಗಳು‘. ಈ ಪದಗಳಲ್ಲೆಲ್ಲ `ಮನೆ‘ ಎಂಬುದು ಮೂಲರೂಪ. ಈ ಮೂಲರೂಪವಾದ ಮನೆ ಎಂಬ ಶಬ್ದವನ್ನು ನಾಮಪದದ ಮೂಲರೂಪ ಅಥವಾ ನಾಮಪ್ರಕೃತಿ ಎನ್ನುತ್ತೇವೆ.
ಕಟ್ಟಿದನು,** ಕಟ್ಟುವನು, ಕಟ್ಟುತ್ತಾನೆ, ಕಟ್ಟಿದರು, ಕಟ್ಟನು, ಕಟ್ಟುವಳು, ಕಟ್ಟಲಿ-ಇವೆಲ್ಲ ಕ್ರಿಯಾಪದಗಳು. ಇವುಗಳಿಗೆ ಮೂಲರೂಪ, ಕಟ್ಟು ಎಂಬುದು. ಈ ಕಟ್ಟು ಎಂಬ ಮೂಲರೂಪವು ಕ್ರಿಯಾಪದದ ಮೂಲರೂಪ. ಇದಕ್ಕೆ ಧಾತು ಎಂಬ ಇನ್ನೊಂದು ಹೆಸರುಂಟು.
ಚೆನ್ನಾಗಿ, ನೆಟ್ಟಗೆ, ಮೆಲ್ಲಗೆ ಮತ್ತು ಆದರೆ – ಇಂಥ ಕೆಲವು ಶಬ್ದಗಳು ಭಾಷೆಯಲ್ಲಿ ಬರುತ್ತವೆ. ಇವುಗಳು ಒಂದೇ ರೂಪವಾಗಿರುತ್ತವೆ. ನಾಮಪದ ಕ್ರಿಯಾಪದಗಳಂತೆ ಬೇರೆ ಬೇರೆ ರೂಪವನ್ನು ಹೊಂದುವುದಿಲ್ಲ. ಇವು ಬೇರಾವ ಮೂಲರೂಪದಿಂದಲೂ ಹುಟ್ಟಿಲ್ಲ. ಇವೇ ಮೂಲರೂಪಗಳು. ಇವುಗಳನ್ನು ಅವ್ಯಯವೆಂದು ಕರೆಯಬಹುದು. ಹೀಗೆ ನಾವಾಡುವ ಮಾತುಗಳು, ಪದದ ಮೂರು ಗುಂಪುಗಳಾದ ನಾಮಪದಗಳು, ಕ್ರಿಯಾಪದಗಳು ಇಲ್ಲವೆ ಅವ್ಯಯಗಳಾಗಿರುತ್ತವೆ; ಇವುಗಳಲ್ಲಿ ಈಗ ನಾಮಪದಗಳ ವಿಚಾರವಾಗಿ ತಿಳಿಯೋಣ.
ನಾಮಪದ
ಪದ ಎಂದರೆ ಮೂಲರೂಪ ಪ್ರಕೃತಿವೊಂದಕ್ಕೆ ಪ್ರತ್ಯಯ ಹತ್ತಿದ ರೂಪ. ಈ ಕೆಳಗೆ ನೋಡಿರಿ:-
ನಾಮ ಪ್ರಕೃತಿ | + | ನಾಮವಿಭಕ್ತಿಪ್ರತ್ಯಯ | = | ನಾಮಪದ |
ಮನೆ | + | ಉ | = | ಮನೆಯು |
ಕಲ್ಲು | + | ಅನ್ನು | = | ಕಲ್ಲನ್ನು |
ಹೊಲ | + | ಇಂದ | = | ಹೊಲದಿಂದ |
ನೆಲ | + | ಕ್ಕೆ | = | ನೆಲಕ್ಕೆ |
ಶಾಲೆ | + | ಅಲ್ಲಿ | = | ಶಾಲೆಯಲ್ಲಿ |
ಇಲ್ಲಿ ಮನೆ, ಕಲ್ಲು, ಹೊಲ, ನೆಲ, ಶಾಲೆ-ಮೊದಲಾದವು ನಾಮಪ್ರಕೃತಿಗಳು. ಉ, ಅನ್ನು, ಇಂದ, ಕ್ಕೆ, ಅಲ್ಲಿ-ಇವೆಲ್ಲ ನಾಮವಿಭಕ್ತಿಪ್ರತ್ಯಯಗಳು. ಮನೆಯು, ಕಲ್ಲನ್ನು, ಹೊಲದಿಂದ, ನೆಲಕ್ಕೆ ಶಾಲೆಯಲ್ಲಿ-ಇವೆಲ್ಲ ನಾಮಪದಗಳು
ನಾಮಪ್ರಕೃತಿ:-ನಾಮಪದದ ಮೂಲರೂಪವಾಗಿಯೂ, ಕ್ರಿಯೆಯ ಅರ್ಥವನ್ನು ಕೊಡದೆಯೂ ಇರುವ ಶಬ್ದವೇ ನಾಮಪ್ರಕೃತಿಯೆನಿಸುವುದು. ಇವಕ್ಕೆ ಪ್ರಾತಿಪದಿಕಗಳು ಎಂಬ ಹೆಸರೂ ಉಂಟು.
ಉದಾಹರಣೆಗೆ:-ಮರ, ನೆಲ, ಮಣ್ಣು, ಉಪ್ಪು, ಹೂವು, ಬಳ್ಳಿ, ಕಾಯಿ, ಅಡವಿ, ನಗರ, ಪಟ್ಟಣ, ಜನ, ಹೆಣ್ಣು, ಗಂಡು, ಹುಡುಗ, ಶಿಶು, ಬಾಲಕ, ಮಂಚ, ಪುಸ್ತಕ, ಬಳಪ, ಸುಣ್ಣ, ಬಣ್ಣ, ಕಟ್ಟಿಗೆ, ದನ,-ಇತ್ಯಾದಿ.
- ಪದ:-ಪ್ರಕೃತಿಗಳಿಗೆ ಪ್ರತ್ಯಯಗಳು ಸೇರಿ ಪದ ಗಳೆನಿಸುವುವು.
- ನಾಮಪದ:-ನಾಮಪ್ರಕೃತಿಗಳಿಗೆ ನಾಮವಿಭಕ್ತಿ ಪ್ರತ್ಯಯಗಳು ಸೇರಿ ನಾಮಪದ ಗಳೆನಿಸುವುವು.
ವಿಭಕ್ತಿಪ್ರತ್ಯಯ:- ಸ್ವತಂತ್ರವಾಗಿ ಅರ್ಥವಿಲ್ಲದೆ, ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆ ಬೇರೆ ಅರ್ಥವನ್ನುಂಟುಮಾಡುವ ಉ, ಅನ್ನು, ಇಂದ, ಗೆ, ಕ್ಕೆ, ದೆಸೆಯಿಂದ, ಅ, ಅಲ್ಲಿ, ಏ, ಇರಾ, ಈ, ಆ, ಇತ್ಯಾದಿಗಳಿಗೆ ವಿಭಕ್ತಿಪ್ರತ್ಯಯಗಳೆನ್ನುವರು.
ಉದಾಹರಣೆಗೆ:-
ನಾಮಪ್ರಕೃತಿ | + | ನಾಮವಿಭಕ್ತಿಪ್ರತ್ಯಯ | = | ನಾಮಪದ |
ಹುಡುಗ | + | ಉ | = | ಹುಡುಗನು |
ಮಂಚ | + | ಅನ್ನು | = | ಮಂಚವನ್ನು |
ಬಟ್ಟೆ | + | ಇಂದ | = | ಬಟ್ಟೆಯಿಂದ |
ದನ | + | ಕ್ಕೆ | = | ದನಕ್ಕೆ |
ಮುದುಕ | + | ದೆಸೆಯಿಂದ | = | ಮುದುಕನ ದೆಸೆಯಿಂದ |
ಅಕ್ಕ | + | ಅ | = | ಅಕ್ಕನ |
ತಾಯಿ | + | ಅಲ್ಲಿ | = | ತಾಯಿಯಲ್ಲಿ |
ತಂದೆ | + | ಏ | = | ತಂದೆಯೇ |
ರಾಮ | + | ಆ | = | ರಾಮಾ |
ಮೇಲಿನ ಈ ನಾಮಪ್ರಕೃತಿಗಳಲ್ಲಿ ಹಲವಾರು ರೀತಿಯ ಶಬ್ದಗಳಿವೆ. ಮನುಷ್ಯರ, ಪ್ರಾಣಿಗಳ, ವಸ್ತುಗಳ-ಇತ್ಯಾದಿ ಅನೇಕ ಬಗೆಯ ಶಬ್ದಗಳಿರುವುದನ್ನು ಗಮನಿಸಿರಿ. ಇನ್ನೂ ಅನೇಕ ಬಗೆಯ ಶಬ್ದಗಳಿವೆ.
ನಾಮಪ್ರಕೃತಿಗಳು
೧. ಸಹಜವಾದ ನಾಮಪ್ರಕೃತಿಗಳು | ೨. ಸಾಧಿತ (ನಿಷ್ಪನ್ನ)ಗಳಾದ ನಾಮಪ್ರಕೃತಿಗಳು |
(i) ಮನುಷ್ಯರ ಹೆಸರನ್ನು ಹೇಳುವಂಥವು | (i) ಎರಡು ಮೂರು ಪದಗಳು ಸೇರಿ ಒಂದು ಪದವಾಗುವ ಸಮಾಸಗಳು |
(ii) ಪ್ರಾಣಿಗಳ ಹೆಸರು ಹೇಳುವಂಥವು | (ii) ಕ್ರಿಯಾಪ್ರಕೃತಿ (ಧಾತು)ಯಿಂದ ಹುಟ್ಟಿದ ಕೃದಂತ ನಾಮಪ್ರಕೃತಿಗಳು |
(iii) ವಸ್ತುಗಳ ಗುಣ, ಸ್ವಭಾವಗಳನ್ನು ಹೇಳುವಂಥವು | (iii) ತದ್ಧಿತಪ್ರತ್ಯಯ ಸೇರಿ ಉಂಟಾದ ತದ್ಧಿತಾಂತ ನಾಮಪ್ರಕೃತಿಗಳು |
(iv) ಕಾಲ, ಸ್ಥಾನ, ಅಳತೆ, ದಿಕ್ಕು, ಸಂಖ್ಯೆಗಳನ್ನು ಸೂಚಿಸುವ ಶಬ್ದಗಳು |
ಈ ಮೇಲೆ ಸೂಚಿಸಿದಂತೆ ನಾಮಪ್ರಕೃತಿಗಳು ಮುಖ್ಯವಾಗಿ ಎರಡು ಬಗೆಯವು:
(ಅ) ಸಹಜ ನಾಮಪ್ರಕೃತಿಗಳು (ಆ) ಸಾಧಿತಗಳಾದ ಸಮಾಸ, ಕೃದಂತ, ತದ್ಧಿತಾಂತಗಳು.
ಸಹಜ ನಾಮಪ್ರಕೃತಿಗಳು_
ಉದಾಹರಣೆಗೆ:-
ಹೊಲ, ನೆಲ, ಜನ, ಮನೆ, ಮರ, ಕಲ್ಲು, ಪೂರ್ವ, ಮೂಡಣ, ಎರಡು, ಕರಿದು, ದೊಡ್ಡ, ಸಣ್ಣ-ಇತ್ಯಾದಿಗಳು.
ಸಾಧಿತ (ನಿಷ್ಪನ್ನ) ನಾಮಪ್ರಕೃತಿಗಳು_
(i) ಸಮಾಸಗಳು-ಮಳೆಗಾಲ, ದೊಡ್ಡಮರ, ಹೆಬ್ಬಾಗಿಲು, ಮುಕ್ಕಣ್ಣ, ಇಕ್ಕೆಲ, ಹೆಜ್ಜೇನು, ಹೆದ್ದೊರೆ-ಮುಂತಾದವು.
(ii) ಕೃದಂತಗಳು-ಮಾಡಿದ, ಮಾಡುವಿಕೆ, ಮಾಟ, ಓಟ, ಓದುವ, ಓದಿದ, ತಿನ್ನುವ, ಇತ್ಯಾದಿಗಳು.
(iii) ತದ್ಧಿತಾಂತಗಳ-ಒಕ್ಕಲಿಗ, ಗಾಣಿಗ, ಹಾವಾಡಿಗ, ಮೋಸಗಾರ, ಒಕ್ಕಲುಗಿತ್ತಿ, ಜಾಣೆ, ದೊಡ್ಡತನ, ಮಾಲೆಗಾರ-ಇತ್ಯಾದಿಗಳು.
ಮೇಲೆ ವಿವರಿಸಿರುವ ಸಮಾಸ, ಕೃದಂತ, ತದ್ಧಿತಾಂತಗಳನ್ನು ಮುಂದಿನ ಬೇರೆ ಬೇರೆ ಅಧ್ಯಾಯಗಳಲ್ಲಿ ವಿವರವಾಗಿ ತಿಳಿಯುವಿರಿ. ಈಗ ಸಹಜ ನಾಮಪ್ರಕೃತಿ, ವಿಭಕ್ತಿಪ್ರತ್ಯಯ, ನಾಮಪದಗಳ ವಿಚಾರ ತಿಳಿಯೋಣ.
ನಾಮವಾಚಕಪ್ರಕೃತಿಗಳಲ್ಲಿ ಮುಖ್ಯವಾಗಿ: (೧) ವಸ್ತುವಾಚಕಗಳು, (೨) ಗುಣವಾಚಕಗಳು, (೩) ಸಂಖ್ಯಾವಾಚಕಗಳು, (೪) ಸಂಖ್ಯೇಯವಾಚಕಗಳು, (೫) ಭಾವನಾಮಗಳು, (೬) ಪರಿಮಾಣವಾಚಕಗಳು, (೭) ಪ್ರಕಾರವಾಚಕಗಳು, (೮) ದಿಗ್ವಾಚಕಗಳು, (೯) ಸರ್ವನಾಮಗಳು – ಎಂದು ಅನೇಕ ಗುಂಪು ಮಾಡಬಹುದು.
ವಸ್ತುವಾಚಕಗಳು: ವಸ್ತುಗಳ ಹೆಸರನ್ನು ಹೇಳುವ ಶಬ್ದಗಳೆಲ್ಲ ವಸ್ತುವಾಚಕಗಳು.
ಉದಾಹರಣೆಗೆ:- ಚೇತನವುಳ್ಳ ವಸ್ತುಗಳು-ಮನುಷ್ಯ, ಹೆಂಗಸು, ಬಸವ, ಕೃಷ್ಣ, ಮುದುಕ, ಎತ್ತು, ಎಮ್ಮೆ, ನರಿ, ನಾಯಿ-ಮುಂತಾದವು.
ಚೇತನವಿಲ್ಲದ ವಸ್ತುಗಳು-ಕಲ್ಲು, ಮರ, ನೆಲ, ಜಲ, ಎಲೆ, ಹೂ, ಹಣ್ಣು, ಕಾಯಿ, ಬೆಟ್ಟ, ಅಡವಿ, ಮಠ, ಮನೆ, ಶಾಲೆ,-ಮುಂತಾದವು.
ಈ ವಸ್ತುವಾಚಕಗಳನ್ನು (೧) ರೂಢನಾಮ, (೨) ಅಂಕಿತನಾಮ, (೩) ಅನ್ವರ್ಥಕನಾಮ – ಎಂದು ಮೂರು ವಿಭಾಗ ಮಾಡಬಹುದು.
(೧) ರೂಢನಾಮ – ರೂಢಿಯಿಂದ ಬಂದ ಸಾಮಾನ್ಯವಾಚಕಗಳು ರೂಢನಾಮಗಳು.
ಉದಾಹರಣೆಗೆ: – ನದಿ, ಪರ್ವತ, ಮನುಷ್ಯ, ಹೆಂಗಸು, ಹುಡುಗ, ಪಟ್ಟಣ, ದೇಶ-ಇತ್ಯಾದಿಗಳು.
ಇಲ್ಲಿ ಬಂದಿರುವ ನದಿ ಇತ್ಯಾದಿ ಶಬ್ದಗಳು ಎಲ್ಲ ನದಿಗಳಿಗೂ ಅನ್ವಯಿಸುವ ಸಾಮಾನ್ಯವಾಚಕಗಳು.
(೨) ಅಂಕಿತನಾಮ–ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತ ನಾಮಗಳು.
ಉದಾಹರಣೆಗೆ:-ಗಂಗಾ, ಬ್ರಹ್ಮಪುತ್ರಾ, ಕಾವೇರಿ, ಹಿಮಾಲಯ, ವಿಂದ್ಯಾದ್ರಿ, ರಾಮ, ಕೃಷ್ಣ, ಶಂಕರ, ರಂಗ, ಸಾವಿತ್ರಿ, ಬೆಂಗಳೂರು, ಭಾರತ, ಕರ್ನಾಟಕ, ಆಲ, ಬೇವು-ಇತ್ಯಾದಿಗಳು (ಇವೆಲ್ಲ ರೂಢನಾಮಗಳಿಗೆ ಇಟ್ಟ ಹಸರುಗಳೇ ಆಗಿವೆ).
(೩) ಅನ್ವರ್ಥಕನಾಮ–ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥಕ ನಾಮಗಳು. ಉದಾಹರಣೆಗೆ:-ಕುಂಟ, ಹೆಳವ, ಕಿವುಡ, ವ್ಯಾಪಾರಿ, ವಿದ್ವಾಂಸ, ರೋಗಿ, ಯೋಗಿ-ಇತ್ಯಾದಿಗಳು.
ಗುಣವಾಚಕಗಳು: ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕಗಳೆನಿಸುವುವು ಉದಾಹರಣೆಗೆ:-ದೊಡ್ಡ, ಚಿಕ್ಕ, ಕಿರಿದು, ಒಳ್ಳೆಯ, ಕೆಟ್ಟದು, ಬಿಳಿದು, ಕರಿದು, ಹೊಸದು, ಹಳೆಯ, ಪಿರಿದು, ಹಿರಿದು, ಕಿರಿದು, ಎಳದು-ಮೊದಲಾದವು.
ಈ ಕೆಳಗಿನ ವಾಕ್ಯಗಳನ್ನು ಗಮನಿಸಿರಿ_
(೧) ಕೆಂಪುಬಟ್ಟೆಯನ್ನು ತಂದನು.
(೨) ದೊಡ್ಡ ಕಲ್ಲು ಇದೆ.
(೩) ಚಿಕ್ಕಮಕ್ಕಳು ಇರುತ್ತಾರೆ.
(೪) ಹಳೆಯ ಅಕ್ಕಿ ಬೇಕು
ಮೇಲಿನ ವಾಕ್ಯಗಳಲ್ಲಿ ಕೆಂಪು ಎಂಬುದು ಬಟ್ಟೆಯ ಬಣ್ಣದ ಗುಣವನ್ನೂ, ದೊಡ್ಡ ಎಂಬುದು ಕಲ್ಲಿನ ರೀತಿಯನ್ನೂ, ಚಿಕ್ಕ ಎಂಬುದು ಮಕ್ಕಳ ರೀತಿಯನ್ನೂ, ಹಳೆಯ ಎಂಬುದು ಅಕ್ಕಿಯ ಗುಣವನ್ನೂ, ಕರಿಯ ಎಂಬುದು ನಾಯಿಯ ಬಣ್ಣದ ರೀತಿಯನ್ನೂ ತಿಳಿಸುವ ಶಬ್ದಗಳು. ಇವುಗಳಿಗೆ ವಿಶೇಷಣಗಳೆಂದೂ ಹೆಸರು.
ಈ ವಿಶೇಷಣಗಳೆಲ್ಲ ಯಾವುದಕ್ಕೆ ಹೇಳಿದೆಯೋ ಅಂಥ ಶಬ್ದಗಳು ವಿಶೇಷ್ಯಗಳು.
ವಿಶೇಷಣ | ವಿಶೇಷ್ಯ |
ಕರಿಯ | ನಾಯಿ |
ದೊಡ್ಡ | ಕಲ್ಲು |
ಚಿಕ್ಕ | ಮಗು |
ಇಲ್ಲಿ ಕರಿಯ, ದೊಡ್ಡ, ಚಿಕ್ಕ ಈ ಶಬ್ದಗಳೆಲ್ಲ ವಿಶೇಷಣಗಳು. ನಾಯಿ, ಕಲ್ಲು, ಮಗು ಇತ್ಯಾದಿ ಶಬ್ದಗಳೆಲ್ಲ ವಿಶೇಷ್ಯಗಳೆನಿಸುವುವು.
ಸಂಖ್ಯಾವಾಚಕಗಳು :ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲ ಸಂಖ್ಯಾವಾಚಕಗಳು ಉದಾಹರಣೆಗೆ:-ಒಂದು, ಎರಡು, ಹತ್ತು, ಸಾವಿರ, ಲಕ್ಷ-ಇತ್ಯಾದಿಗಳು.
ಸಂಖ್ಯೇಯವಾಚಕಗಳು: ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳೆಲ್ಲ ಸಂಖ್ಯೇಯವಾಚಕಗಳೆನಿಸುವುವು.ಮೂವರು ಮಕ್ಕಳು, ನಾಲ್ವರು ಶಾಸ್ತ್ರಿಗಳು, ಐವರು ವಿದ್ಯಾರ್ಥಿಗಳು-ಎಂಬ ಈ ವಾಕ್ಯಗಳಲ್ಲಿ ಮೂವರು, ನಾಲ್ವರು, ಐವರು ಮೊದಲಾದ ಶಬ್ದಗಳು ಈ ಲೆಕ್ಕದ ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ತಿಳಿಸುತ್ತದಲ್ಲವೆ? ಇಂಥ ಶಬ್ದಗಳಿಂದ ಸಂಖ್ಯೆಯೂ, ವಸ್ತುಗಳೂ ತಿಳಿವಳಿಕೆಗೆ ಬರುತ್ತವೆ. ಉದಾಹರಣೆಗೆ:-
ಸಂಖ್ಯೆ | ಸಂಖ್ಯೇಯ |
ಮೂರು | ಮೂವರು, ಮೂರನೆಯ |
ಎರಡು | ಇಬ್ಬರು, ಎರಡನೆಯ |
ಐದು | ಐವರು, ಐದನೆಯ |
ಭಾವನಾಮಗಳು: ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳೆಲ್ಲ ಭಾವನಾಮಗಳೆನಿಸುವುವು.
ಬಿಳಿದರ ಭಾವ – ಬಿಳುಪು (ತದ್ಧಿತಾಂತ ಭಾವನಾಮ)
ಕರಿದರ ಭಾವ – ಕಪ್ಪು (ತದ್ಧಿತಾಂತ ಭಾವನಾಮ)
ಹಿರಿದರ ಭಾವ – ಹಿರಿಮೆ (ತದ್ಧಿತಾಂತ ಭಾವನಾಮ)
ಪಿರಿದರ ಭಾವ – ಪೆರ್ಮೆ=(ಹೆಮ್ಮೆ) (ತದ್ಧಿತಾಂತ ಭಾವನಾಮ)
ನೋಡುವುದರ ಭಾವ – ನೋಟ (ಕೃದಂತ ಭಾವನಾಮ)
ಮಾಡುವುದರ ಭಾವ – ಮಾಟ (ಕೃದಂತ ಭಾವನಾಮ)
ಕೊಡುವುದರ ಭಾವ – ಕೂಟ (ಕೃದಂತ ಭಾವನಾಮ)
ಇದರ ಹಾಗೆ-ಬೆಳ್ಪು (ಹಳೆಗನ್ನಡ), ಕರ್ಪು (ಹಳೆಗನ್ನಡ), ಕೆಂಪು=ಕೆಚ್ಚನೆಯದರ ಭಾವ, ಪೆಂಪು (ಹಳೆಗನ್ನಡ) ಇವನ್ನೂ ತಿಳಿಯಬಹುದು.
ಪರಿಮಾಣ ವಾಚಕಗಳು: ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ – ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳೆನಿಸುವುವು. (೧) ಅಷ್ಟು ದೊಡ್ಡ ಕಲ್ಲು (೨) ಇಷ್ಟು ಜನರ ಗುಂಪು (೩) ಎಷ್ಟು ಕಾಸುಗಳು? – ಇತ್ಯಾದಿ ವಾಕ್ಯಗಳಲ್ಲಿ ಅಷ್ಟು, ಇಷ್ಟು, ಎಷ್ಟು – ಇತ್ಯಾದಿ ಶಬ್ದಗಳು ಒಂದು ಗೊತ್ತಾದ ಅಳತೆ, ಸಂಖ್ಯೆಯನ್ನು ಹೇಳುವುದಿಲ್ಲ, ಅಂದರೆ ನಿರ್ದಿಷ್ಟಪಡಿಸಿದ ಅಳತೆ, ಸಂಖ್ಯೆ ಇಲ್ಲಿ ಇಲ್ಲ. ಇಂಥ ಶಬ್ದಗಳು ಕೇವಲ ಪರಿಮಾಣಗಳನ್ನು ಮಾತ್ರ ತಿಳಿಸುತ್ತವೆ. ಇಂಥ ಶಬ್ದಗಳನ್ನೇ ಪರಿಮಾಣ ವಾಚಕಗಳು ಎನ್ನುತ್ತಾರೆ. ಉದಾಹರಣೆಗೆ:-ಅಷ್ಟು, ಇಷ್ಟು, ಹಲವು, ಕೆಲವು, ಅನಿತು, ಇನಿತು, ಎನಿತು, ಪಲವು-ಇತ್ಯಾದಿಗಳು. ಪರಿಮಾಣಕ್ಕೆ:- ಹಲವು ದಿನಗಳು, ಕೆಲವು ಊರುಗಳು-ಇತ್ಯಾದಿ. ಗಾತ್ರಕ್ಕೆ:- ಗುಡ್ಡದಷ್ಟು, ಆನೆಯಷ್ಟು, ಪಲ್ಲದನಿತು-ಇತ್ಯಾದಿ.ಅಳತೆಗೆ:- ಅಷ್ಟು ದೂರ, ಇಷ್ಟು ಪುಸ್ತಕಗಳು-ಇತ್ಯಾದಿ.
ಪ್ರಕಾರವಾಚಕಗಳು: ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ ಅಹುದು.(೧) ಅಂಥ ಮನುಷ್ಯನುಂಟೇ? (೨) ಅಂತಹ ವಿಚಾರ ಬೇಡ. (೩) ಎಂಥ ಬಣ್ಣ. (೪) ಇಂಥವರೂ ಉಂಟೇ? – ಇತ್ಯಾದಿ ವಸ್ತುಗಳ ಸ್ಥಿತಿ, ರೀತಿಗಳನ್ನು ತಿಳಿಸುತ್ತವೆ. ಉದಾಹರಣೆಗೆ:- ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ, ಎಂಥ, ಅಂಥವನು, ಅಂಥವಳು, ಅಂಥದು, ಅಂತಹನು, ಇಂತಹನು, ಅಂತಹುದು-ಇತ್ಯಾದಿ.
ದಿಗ್ವಾಚಕಗಳು: ದಿಕ್ಕುಗಳು (ನಿಟ್ಟುಗಳ) ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳೆ ನಿಸುವುವು. ಉದಾಹರಣೆಗೆ:- ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ವಾಯುವ್ಯ, ಆಗ್ನೇಯ, ನೈಋತ್ಯ, ಮೂಡಲು, ತೆಂಕಲು, ಬಡಗಲು, ಪಡುವಲು, ಆಚೆ, ಈಚೆ-ಇತ್ಯಾದಿಗಳು.
ಸರ್ವನಾಮಗಳು: ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅವನ್ನು ಬೋಧಿಸುವ (ಸೂಚಿಸುವ) ಶಬ್ದಗಳೆಲ್ಲ ಸರ್ವನಾಮಗಳೆನಿಸುವುವು.ಶ್ರೀರಾಮನು ಕಾಡಿಗೆ ಹೋದನು. ಅವನ ಸಂಗಡ ಸೀತಾಲಕ್ಷ್ಮಣರೂ ಹೊರಟರು. ಅವರು ಅಲ್ಲಿ ಪರ್ಣಶಾಲೆಯಲ್ಲಿ ವಾಸಿಸುತ್ತಿದ್ದರು.ಈ ವಾಕ್ಯಗಳಲ್ಲಿ ಅವನ ಸಂಗಡ ಎಂದರೆ ರಾಮನ ಸಂಗಡ ಎಂದು ಅರ್ಥ. ಅವರು ಅಲ್ಲಿ ಎಂದರೆ ರಾಮಲಕ್ಷ್ಮಣಸೀತೆಯರು ಆ ಕಾಡಿನಲ್ಲಿ ಎಂದು ಅರ್ಥ. ಅವನು, ಅವರು, ಅಲ್ಲಿ ಇತ್ಯಾದಿ ಶಬ್ದಗಳು ನಾಮಪದಗಳ ಸ್ಥಾನದಲ್ಲಿ ಬಳಸುವ ಬೇರೊಂದು ಬಗೆಯ ಶಬ್ದಗಳು. ಹೀಗೆ ಸರ್ವ ವಸ್ತುವಾಚಕಗಳ ಸ್ಥಾನದಲ್ಲೂ ಅವಕ್ಕೆ ಬದಲಾಗಿ ಕೆಲವು ಬೇರೆ ಬಗೆಯ ಶಬ್ದಗಳನ್ನು ಪ್ರಯೋಗಿಸುತ್ತೇವೆ. ಇಂಥ ಶಬ್ದಗಳೇ ಸರ್ವನಾಮಗಳು. ಉದಾಹರಣೆಗೆ:- ಅದು, ಇದು, ಯಾವುದು, ಎಲ್ಲಾ (ಎಲ್ಲ), ಏನು, ಅವನು, ಇವನು, ಯಾವನು, ಅವಳು, ಇವಳು, ಯಾವಳು, ತಾನು, ತಾವು, ನೀನು, ನೀವು, ಆವುದು, ಆರು. ಮೇಲಿನ ಉದಾಹರಣೆಗಳಲ್ಲಿ ಬಂದಿರುವ ಸರ್ವನಾಮಗಳನ್ನು ಮೂರು ಭಾಗ ಮಾಡಬಹುದು.
- ಪುರುಷಾರ್ಥಕ ಸರ್ವನಾಮಗಳು.
- ಪ್ರಶ್ನಾರ್ಥಕ ಸರ್ವನಾಮಗಳು.
- ಆತ್ಮಾರ್ಥಕ ಸರ್ವನಾಮಗಳು.
೧. ಪುರುಷಾರ್ಥಕ ಸರ್ವನಾಮಗಳು: ಉದಾಹರಣೆ
(i) | ನಾನು-ನಾವು ಇವು ಉತ್ತಮ ಪುರುಷ ಸರ್ವನಾಮಗಳು. | |
(ii) | ನೀನು-ನೀವು ಇವು ಮಧ್ಯಮ ಪುರುಷ ಸರ್ವನಾಮಗಳು. | |
(iii) | ಅವನು-ಅವರು
ಅವಳು-ಅವರು ಅದು-ಅವು |
ಇವು ಪ್ರಥಮ ಪುರಷ ಸರ್ವನಾಮಗಳು |
೨. ಪ್ರಶ್ನಾರ್ಥಕ ಸರ್ವನಾಮಗಳು ಉದಾಹರಣೆಗೆ:- ಯಾವುದು, ಏನು, ಏತರದು, ಆವುದು, ಏನು, ಏನ್ ಇತ್ಯಾದಿಗಳು ಪ್ರಶ್ನಾರ್ಥಕ ಸರ್ವನಾಮಗಳು. (ಇವೆಲ್ಲ ಪ್ರಶ್ನೆಗೆ ಸಂಬಂಧಿಸಿದ ಸರ್ವನಾಮ ಶಬ್ದಗಳಾದ್ದರಿಂದ ಹಾಗೆ ಹೆಸರು).
೩. ಆತ್ಮಾರ್ಥಕ ಸರ್ವನಾಮಗಳು ಉದಾಹರಣೆಗೆ:- ತಾನು-ತಾವು ಇವುಗಳನ್ನು ಆತ್ಮಾರ್ಥಕ ಸರ್ವನಾಮಗಳೆಂದು ಹೇಳುವುದು ವಾಡಿಕೆ.
ಸಮಾಸ
ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು ‘ಸಮಾಸ’ ವೆನ್ನಲಾಗುತ್ತದೆ. ಉದಾ: ‘ಕೆಂಪಾದ ತಾವರೆ’ ಎಂಬಲ್ಲಿ, ಕೆಂಪು – ತಾವರೆ ಪದಗಳು ಕೂಡಿ, ‘ಕೆಂದಾವರೆ’ ಎಂಬ ಸಮಸ್ತ ಪದವಾಗುತ್ತದೆ. ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು ‘ವಿಗ್ರಹ’ ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, ‘ವಿಗ್ರಹವಾಕ್ಯ’ ಎನ್ನಲಾಗುತ್ತದೆ. “ಸಮಸ್ತ ಪದವನ್ನು ಬಿಡಿಸಿ ಬರೆಯುವುದನ್ನು ವಿಗ್ರಹ ವಾಕ್ಯ ಎನ್ನುವರು”.
ಸಮಾಸದ ವಿಧಗಳು:
- ತತ್ಪುರುಷ ಸಮಾಸ
- ಕರ್ಮಧಾರೆಯ ಸಮಾಸ
- ದ್ವಿಗು ಸಮಾಸ
- ಅಂಶಿ ಸಮಾಸ
- ದ್ವಂದ್ವ ಸಮಾಸ
- ಬಹುವ್ರೀಹಿ ಸಮಾಸ
- ಕ್ರಿಯಾ ಸಮಾಸ
- ಗಮಕ ಸಮಾಸ
ತತ್ಪುರುಷ ಸಮಾಸ
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.ಉದಾ:ಮರದ + ಕಾಲ = ಮರಗಾಲ, ಬೆಟ್ಟದ + ತಾವರೆ = ಬೆಟ್ಟದಾವರೆ, ಕೈ + ತಪ್ಪು = ಕೈತಪ್ಪು, ಹಗಲಿನಲ್ಲಿ + ಕನಸು = ಹಗಲುಗನಸು.
ಕರ್ಮಧಾರೆಯ ಸಮಾಸ
ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.ಉದಾಹರಣೆ ಹೊಸದು + ಕನ್ನಡ = ಹೊಸಗನ್ನಡ, ಹಿರಿದು + ಜೇನು = ಹೆಜ್ಜೇನು, ಕಿರಿಯ + ಗೆಜ್ಜೆ = ಕಿರುಗೆಜ್ಜೆ, ಕೆಂದುಟಿ, ಚಿಕ್ಕಮಗು, ಸಿಡಿಮದ್ದು, ಪಂದತಿ ಇತ್ಯಾದಿ.
ದ್ವಿಗು ಸಮಾಸ
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ. ಉದಾಹರಣೆ: ಒಂದು + ಕಣ್ಣು = ಒಕ್ಕಣ್ಣು, ಎರಡು + ಬಗೆ = ಇಬ್ಬಗೆ, ಸಪ್ತ + ಸ್ವರ = ಸಪ್ತಸ್ವರ, ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು ಇತ್ಯಾದಿ.
ಅಂಶಿ ಸಮಾಸ
ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು.”ಅಂಶವೆಂದರೆ ‘ಭಾಗ’ ಅಥವಾ ‘ಅವಯವ’. ಉದಾಹರಣೆ: ತಲೆಯ + ಮುಂದು = ಮುಂದಲೆಬೆರಳಿನ + ತುದಿ = ತುದಿಬೆರಳು ಕರೆಯ + ಒಳಗು = ಒಳಗೆರೆಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ
ದ್ವಂದ್ವ ಸಮಾಸ
ಎರಡು ಅಥವಾ ಹೆಚ್ಚು ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.ಉದಾಹರಣೆ: ಕೆರೆಯೂ + ಕಟ್ಟಿಯೂ + ಬಾವಿಯೂ = ಕೆರೆ ಕಟ್ಟೆ ಬಾವಿಗಳು, ಕಾಫಿಯೂ + ತಿಂಡಿಯೂ = ಕಾಫಿ-ತಿಂಡಿ, ಬೆಟ್ಟವೂ + ಗುಡ್ಡವೂ = ಬೆಟ್ಟಗುಡ್ಡಗಳು, ಅಣ್ಣನು + ತಮ್ಮನು= ಅಣ್ಣತಮ್ಮಂದಿರು
ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ ಇತ್ಯಾದಿ.
ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.ಉದಾಹರಣೆ: ಮೂರು+ಕಣ್ಣು+ಉಳ್ಳವ=ಮುಕ್ಕಣ್ಣ, ಶಾಂತಿಯ+ಖನಿಯಾಗಿರುವನು+ಯಾವನೋ=ಶಾಂತಿಖನಿ,ಸಹಸ್ರ+ಅಕ್ಷಿಗಳು+ಯಾರಿಗೋ=ಸಹಸ್ರಾಕ್ಷ,ಪಂಕದಲ್ಲಿ+ಜನಿಸಿದ್ದು+ಯಾವುದೊ=ಪಂಕಜ, ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ ಇತ್ಯಾದಿ.
ಕ್ರಿಯಾ ಸಮಾಸ
“ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ”.ಉದಾಹರಣೆ: ಸುಳ್ಳನ್ನು+ಆಡು=ಸುಳ್ಳಾಡು, ಕಣ್ಣನ್ನು+ತೆರೆ=ಕಣ್ದೆರೆ, ವಿಷವನ್ನು+ಕಾರು =ವಿಷಕಾರು, ಕೈಯನ್ನು +ಮುಗಿ=ಕೈಮುಗಿ ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು ಇತ್ಯಾದಿ.
ಗಮಕ ಸಮಾಸ
ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು.ಉದಾಹರಣೆ: ಸರ್ವನಾಮಕ್ಕೆ:ಅವನು +ಹುಡುಗ=ಆ ಹುಡುಗ, ಇವಳು +ಹುಡುಗಿ=ಈಹುಡುಗಿ,ಯಾವುದು+ಮರ=ಯಾವಮರ,ಕೃಂದತಕ್ಕೆ,ಮಾಡಿದುದು+ಅಡುಗೆ=ಮಾಡಿದಡುಗೆ,ತೂಗುವುದು+ತೊಟ್ಟಿಲು=ತೂಗುವತೊಟ್ಟಿಲು, ಉಡುವುದು+ದಾರ=ಉಡುದಾರ, ಸುಡುಗಾಡು, ಬೆಂದಡಿಗೆ, ಕಡೆಗೋಲು, ಗುಣವಾಚಕಕ್ಕೆ, ಹಸಿಯದು +ಕಾಯಿ=ಹಸಿಯಕಾಯಿ, ಹಳೆಯದು+ಕನ್ನಡ=ಹಳೆಗನ್ನಡ, ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು, ಸಂಖ್ಯೆಗೆ, ನೂರು +ಹತ್ತು =ನೂರಹತ್ತು, ಮೂವತ್ತು+ಆರು=ಮೂವತ್ತಾರು, ಮೂವತ್ತು, ಹೆಪ್ಪತ್ತು, ಇಪ್ಪತೈದು.
ಲಿಂಗಗಳು
‘ಒಂದು ನಾಮಪ್ರಕೃತಿ’ ಯಾವ ಜಾತಿಗೆ ಸೇರಿದೆ ಎಂಬುದನ್ನು ಹೇಳುವುದೇ ಲಿಂಗವೆಂದು ಹೆಸರು. ಲಿಂಗಗಳಲ್ಲಿ ಮುಖ್ಖವಾಗಿ ಮೂರು ವಿಧಗಳುಂಟು ಅವುಗಳೆಂದರೆ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ.
ಪುಲ್ಲಿಂಗ:
ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ. ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬಥೃವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು. ಉದಾಹರಣೆ: ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ, ಇತ್ಯಾದಿ
ಸ್ತ್ರೀಲಿಂಗ:
‘ಸ್ತೀಯನ್ನು ಕುರಿತು ಹೇಳುವ ಶಬ್ದಗಳೇ ಸ್ತೀಲಿಂಗ’. ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ಹೆಂಗಸು ಎಂಬ ಅರ್ಥ ಹೊಳೆಯುವುದೋ ಅದ ಸ್ತೀಲಿಂಗ.ಉದಾಹರಣೆ: ರಾಣಿ, ರಾಧೆ, ತಾಯಿ, ಅಕ್ಕ, ತಂಗಿ, ಚಲುವೆ, ಅರಸಿ, ಚಿಕ್ಕಮ್ಮ ಇತ್ಯಾದಿ.
ನಪುಂಸಕ ಲಿಂಗ:
ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು-ಗಂಡಸು ಎರಡೂ ಅಲ್ಲದ ಅಥ್ರ ವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕ ಲಿಂಗ ಎನಿಸುವುದು. ಪುಲ್ಲಿಂಗವೂ ಅಲ್ಲದ, ಸ್ತೀಲಿಂಗವೂ ಅಲ್ಲದ ಲಿಂಗಗಳು ನಪುಂಸಕ ಲಿಂಗಗಳಾಗಿವೆ. ಉದಾ:- ಮನೆ, ನೆಲ, ಬೆಂಕಿ, ಹೊಲ, ಗದ್ದೆ, ತೋಟ, ಮರ, ಆಕಾಶ, ಬಂಗಾರ ಇತ್ಯಾದಿ.
ಲಿಂಗಗಳ ಅನ್ಯ ವಿಧಗಳು:
ಪುನ್ನಪುಂಸಕಲಿಂಗಗಳು: ಎಲ್ಲಾ ಗ್ರಹವಾಚಕ ಶಬ್ದಗಳನ್ನು ಪುಲ್ಲಿಂಗ, ಹಾಗೂ ನಪುಂಸಕ ಲಿಂಗದಂತೆಯೂ ಪ್ರಯೋಗದಲ್ಲಿ ಬಳಸುತ್ತೇವೆ. ಆದ್ದರಿಂದ ಇವನ್ನು ಪುನ್ನಪುಂಸಕ ಲಿಂಗಗಳೆಂದು ಕರೆಯುತ್ತೇವೆ. ಉದಾಹರಣೆ: ಸೂರ್ಯ ಚಂದ್ರ ಶನಿ ಮಂಗಳ, ಇತ್ಯಾದಿ. ಚಂದ್ರ ಮೂಡಿತು – ನಪುಂಸಕ ಲಿಂಗ, ಚಂದ್ರ ಮೂಡಿದನ– ಪುಲಿಂಗ, ಶನಿಯು ಕಾಡುತ್ತದ – ನಪುಂಸಕ ಲಿಂಗ, ಶನಿಯು ಕಾಡಿದನು – ಪುಲಿಂಗ, ಸೂರ್ಯ ಉದಯವಾಯಿತು- ನಪುಂಸಕ ಲಿಂಗ ,ಸೂರ್ಯ ಉದಯವಾದನು – ಪುಲಿಂಗ.
ಸ್ತ್ರೀ ನಪುಂಸಕ ಲಿಂಗಗಳು: ನಾಮಪದಗಳು ಸಂಧಭ ಕ್ಕನುಗುಣವಾಗಿ ಸ್ತೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತೇವೆ ಆದುದರಿಂದ ಇದಕ್ಕೆ ಸ್ತೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ. ಉದಾಹರಣೆ: ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತೀ,ಸರಸ್ವತಿ, ಕೃಪೆ ಮಾಡಿತು, ಸ್ತೀ ನಪುಂಸಕ ಲಿಂಗಸರಸ್ವತಿ, ಕೃಪ ಮಾಡಿದಳು, ಸ್ತೀ,ಹುಡುಗಿ, ಓಡುತ್ತದೆ, ಸ್ತೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತೀ.
ವಚನಗಳು:
ಸಾಹಿತ್ಯದ ದೃಷ್ಷಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ. ಆದರೆ ವ್ಯಾಕರಣದ ದೃ಼ಷ್ಠಯಲ್ಲಿ ವಚನ ಎಂದರೆ ” ಸಂಖ್ಯೆ” ಎಂದರ್ಥ.ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು. ಅವುಗಳೆಂದರೆ ಏಕವಚನ ಬಹುವಚನ.
- ಏಕವಚನ : “ಒಬ್ಬ ವ್ಯಕ್ತಿ, ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ಬಗಳಿಗೆ ಏಕವಚನ ಎಂದು ಕರೆಯಲಾಗಿದೆ. ಉದಾ : ಅರಸು, ನೀನು, ಮನೆ , ನಾನು, ಮರ, ಕವಿ , ತಂದೆ, ತಾಯಿ, ರಾಣಿ, ಊರು, ಇತ್ಯಾದಿ
- ಬಹುವಚನ : “ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು. ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು, ರಾಣಿಯರು, ಊರುಗಳು ಇತ್ಯಾದಿ.
ವಿಭಕ್ತಿ ಪ್ರತ್ಯಯಗಳು
ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ. ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ. ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು” ಅಥವಾ “ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ. ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ. ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು. ವಿಭಕ್ತಿ ಪ್ರತ್ಯಯಗಳ ವಿಧಗಳು :ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟುವಿಧಗಳಿವೆ.
ವಿಭಕ್ತಿಯಹೆಸರು | ಪ್ರತ್ಯಯ |
ಪ್ರಥಮವಿಭಕ್ತಿ | ಉ |
ದ್ವಿತೀಯವಿಭಕ್ತಿ | ಅನ್ನು |
ತೃತೀಯವಿಭಕ್ತಿ | ಇಂದ |
ಚತುರ್ಥಿವಿಭಕ್ತಿ | ಗೆ ಇಗೆ |
ಪಂಚಮಿವಿಭಕ್ತಿ | ದೆಸೆಯಿಂದ |
ಷಷ್ಠಿವಿಭಕ್ತಿ | ಅ |
ಸಪ್ತಮಿವಿಭಕ್ತಿ | ಅಲ್ಲಿ |
ಸಂಭೋಧನವಿಭಕ್ತಿ | ಮ ಏ |
ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟುವಿಭಕ್ತಿಗಳು ಕಾರಕಾರ್ಥಗಳು ಪ್ರತ್ಯಯಗಳು
- ಪ್ರಥಮ ಕತೃರ್ಥ ಉ
- ದ್ವಿತೀಯ ಕರ್ಮಾರ್ಥ ಅನ್ನು
- ತೃತೀಯ ಕರಣಾರ್ಥ ಇಂದ
- ಚತುರ್ಥೀ ಸಂಪ್ರಧಾನ ಗೆ
- ಪಂಚಮಿ ಅಪಧಾನ ದೆಸೆಯಿಂದ
- ಷಷ್ಠಿ ಸಂಭಂಧ ಅ
- ಅಪ್ತಮಿ ಅಧಿಕರಣ ಅಲ್ಲಿ
- ಸಂಬೋಧನ ಅಭಿಮುಖೀ ಏ. ಆಕರಣಹಳಗನ್ನಡ ವಿಭಕ್ತಿ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯ ರೂಪಗಳು
· ಪ್ರಥಮಾ ಮ್ ಮ್ ರಾಮಂ
· ದ್ವಿತೀಯಾ ಅಮ್ ರಾಮನಂ
· ತೃತೀಯ ಇಮ್ ರಾಮನಿಂ
· ಚತುರ್ಥೀ ಗೆ ರಾಮಂಗೆ
· ಪಂಚಮಿ ಅತ್ತಣಿಂ ರಾಮನತ್ತಣಿಂ
· ಷಷ್ಠಿ ಅ ರಾಮನ
· ಸಪ್ತಮಿ ಒಳ್ ರಾಮನೊಳ್
ಕ್ರಿಯಾ ಪದ ಪ್ರಕರಣ:
“ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ” ಅಥವಾ “ಒಂದು ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.”
ಉದಾ :ದೀಪವು ಉರಿಯುತ್ತದೆ. ಹಸುವು ಹಾಲನ್ನು ಕೊಡುತ್ತದೆ. ತಾಯಿಯು ಅಡುಗೆಯನ್ನು ಮಾಡುತ್ತಾಳೆ. ಅಣ್ಣ ಊಟವನ್ನು ಮಾಡುವ್ನು.ದೇವರು ಒಳ್ಳೆದನ್ನು ಮಾಡಲಿ.
ಮೇಲಿನ ಉದಾಹರಣೆಗಳಲ್ಲಿ ಗೆರೆ ಎಳೆದಿರುವ ಪದಗಳೆಲ್ಲವೂ ಕ್ರಿಯೆಯ ಅರ್ಥವನ್ನು ಸೂಚಿಸುವ ಶಬ್ದಗಳಾಗಿರುವುದತಿಂದ ಕ್ತಿಯಾಪದಗಳು ಎನಿಸುತ್ತದೆ. ಮೇಲಿನ ಶಬ್ದಗಳಲಿ “ಉರಿ ಕೊಡು ಮಾಡು” ಎಂಬ ಶಬ್ಧ ಕ್ರಿಯೆಯ ಅರ್ಥಕೊಡುವ ಮೂಲ ರೂಪವಾಗಿದೆ..ಧಾತು ಅಥವಾ ಕ್ರಿಯಾ ಪ್ರಕೃತಿ“
ಕ್ರಿಯಾ ಪದದ ಮೂಲ ರೂಪಕ್ಕೆ ಧಾತು/ಕ್ರಿಯಾಪ್ರಕೃತಿ ಎಂದು ಹೆಸರು ”ಅಥವಾ“ಕ್ರಿಯಾರ್ಥವನ್ನು ಕೂಡುವುದಾಗೆಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ/ಧಾತು ಎಂದು ಎಂದು ಹೆಸರು”ಧಾತುಗಳಿಗೆ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ. ಉದಾಹರಣೆ: ಧಾತು + ಪ್ರತ್ಯಯ + ಕ್ರಿಯಾಪದ, ಮಾಡು + ತ್ತಾನೆ + ಮಾಡುತ್ತಾನೆ, ಯತ್ನ + ಇಸು + ಯತ್ನಿಸು, ಕನ್ನಡ + ಇಸು + ಕನ್ನಡಿಸು, ಭಾವ + ಇಸು + ಭಾವಿಸು, ರಕ್ಷ + ಇಸು + ರಕ್ಷಿಸು, ಓಡು +ತ್ತಾನೆ + ಓಡುತ್ತಾನೆ.
ಧಾತುಗಳ ವಿಧಗಳು:
ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ ಅವುಗಳೆಂದರೆ ಮೂಲಧಾತು (ಸಹಜ) ಗಳು ಮತ್ತು ಸಾಧಿತ ಧಾತುಗಳು.
ಮೂಲ ಧಾತುಗಳು :
“ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು” ಉದಾಹರಣೆ: ಮಾಡು, ಹೋಗು , ಬರು, ನಡೆ, ನೋಡು, ಓದು, ಹುಟ್ಟು, ಅಂಜು, ಸುತ್ತು, ಬಿತ್ತು , ಹೊಗಳು , ತೆಗಳು , ಎಳೆ , ಸೆಳೆ ತಿಳಿ , ಅರಿ , ಸುರಿ, ಅರಸು, ಸೆಳೆ, ಇತ್ಯಾದಿ. ಮೂಲಧಾತು + ಪ್ರತ್ಯಯ =ಕ್ರಿಯಾಪದ, ಮಾಡು + ತ್ತಾನೆ =ಮಾಡುತ್ತಾನೆ, ನೋಡು + ಇಸು =ನೋಡಿಸು, ತಿನ್ನು +ತ್ತಾನೆ = ತಿನ್ನುತ್ತಾಳೆ
ಸಾಧಿತ ಧಾತುಗಳು :
“ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ , ಅನುಕರಣ ಶಬ್ಧಗಳ ಮೇಲೆ ‘ಇಸು’ ಪ್ರತ್ಯಯ ಸೇರಿದಾಗ ಸಾಧಿತ ಧಾತುಗಳೆನಿಸುತ್ತವೆ.”ಇವಕ್ಕೆ ಪ್ರತ್ಯಯಾಂತ ಧಾತು ಎಂತಲೂ ಕರೆಯುತ್ತಾರೆ.
ಉದಾಹರಣೆ: ನಾಮಪ್ರಕೃತಿ + ಪ್ರತ್ಯಯ + ಸಾಧಿತ ಧಾತು,
ಅಬ್ಬರ + ಇಸು + ಅಬ್ಬರಿಸು
ಕಳವಳ + ಇಸು + ಕಳವಳಿಸು
ಕನ್ನಡ + ಇಸು + ಕನ್ನಡಿಸು
ಚಿತ್ರ + ಇಸು + ಚಿತ್ರಿಸು
ಸ್ತುತಿ + ಇಸು + ಸುತ್ತಿಸು
ಸಿದ್ದಿ + ಇಸು + ಸಿದ್ದಿಸು
ಓಲಗ + ಇಸು + ಓಲಗಿಸು
ಮಲಗು + ಇಸು + ಮಲಗಿಸು
ಪ್ರೀತಿ +ಇಸು + ಪ್ರೀತಿಸು
ರಕ್ಷ + ಇಸು + ರಕ್ಷಿಸು
ಧಗಧಗ + ಇಸು + ಧಗಧಗಿಸು
ಥಳ ಥಳ + ಇಸು + ಥಳ ಥಳಿಸು
ಭಾವ ಸೂಚಕಗಳಾದ ಸಂಸ್ಕೃತ ಶಬ್ದಗಳು “ಇಸು” ಪ್ರತ್ತಯಯಗಳನ್ನು ಹೊಂದಿ ಸಾಧಿತ ಧಾತುಗಳಾಗುತ್ತವೆ.
ಉದಾಹರಣೆ: ಯತ್ತಿಸಯ, ಸ್ತುತಿಸು, ಜಯಿಸು, ಲೇಪಿಸು, ಶೋಕಿಸು, ಭಾವಿಸು, ಇತ್ಯಾದಿ ಎಲ್ಲ ಧಾತುಗಳಿಗೂ ಪ್ರೇರಣಾರ್ಥಕದಲ್ಲಿ ‘ಇಸು’ ಪ್ರತ್ಯಯ ಸೇರುತ್ತದೆ. ಇವಕ್ಕೆ ಪ್ರೇರಣಾರ್ಥಕ ಧಾತುಗಳು ಎಂದು ಹೆಸರು. ಪ್ರೇರಣೆ ಎಂದು “ಇನೋಬ್ಬರಿಂದ ಕೆಲಸ ಮಾಡಿಸುವುದು” ಉದಾ : ಮೂಡಿಸು ಕಲಿಸು, ಬರೆಯಿಸು, ನುಡಿಸು ಹೇಳಿಸು, ಇತ್ಯಾದಿ. ಸಕರ್ಮಕ ಧಾತುಗಳು ಮತ್ತು ಅಕರ್ಮಕ ಧಾತುಗಳು ಎಂಬ ವಿಧಗಳುಂಟು.
ಸಕರ್ಮಕ ಧಾತುಗಳು: ಅರ್ಥಪೂರ್ತಿಗಾಗಿ ಅರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ ಸಕರ್ಮಕ ಧಾತು ಎಂದು ಹೆಸರು”
“ಈ ಸಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದ ಏನನ್ನು ಎಂಬ ಪ್ರಶ್ನೆಯು ಉದ್ಬವಿಸುತ್ತದೆ. ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೂಚಿಸಲು ವನ್ನು ಉಪಯೋಗಿಸಲಾಗುತ್ತದೆ.
ಉದಾಹರಣೆ:
ಕರ್ತೃಪದ | ಪರ್ಮಪದ | ಕ್ರಿಯಾಪದ |
ರಾಮನ್ನು | ಮರವನ್ನು | ಕಡಿಯುತ್ತಾನೆ |
ಭೀಮನ್ನು | ಬಕಾಸುನನ್ನು | ಕೊಂದನು |
ದೇವರು | ಲೋಕವನ್ನು | ರಕ್ಷಿಸುವನ್ನು |
ಶಿಲ್ಪಿಗಳು | ಗುಡಿಯನ್ನು | ಕಟ್ಟಿದರು |
ವಿದ್ಯಾರ್ಥಿಗಳು | ಪಾಠವನ್ನು | ಓದಿದರು |
ಹುಡುಗರು | ಕೆಲಸವನ್ನು | ಮಾಡುತ್ತಾರೆ |
ಅನೇಕರು | ನದಿಯನ್ನು | ದಾಟಿದರು |
ಸಾಧುಗಳು | ದೇವರನ್ನು | ನಂಬುತ್ತಾರೆ |
ಅಕರ್ಮಕ ಧಾತುಗಳು:
ಕರ್ಮಪದದ ಅಪೇಕ್ಷೆಯಿಲ್ಲದೇ ಪೂಣಾರ್ಥವನ್ನು ಕೊಡಲು ಸಮ್ಥವಾದ ಧಾತುಗಳನ್ನು ಅಕರ್ಮಕ ಧಾತು ಎಂದುಕರೆಯುತ್ತೇವೆ.
ಈ ಅಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದಕ್ಕೆ ಉದ್ಬವಿಸುವ ಪ್ರಶ್ನೆಗೆ ಉತ್ತರವನ್ನು ಸೂಚಿಸಲು ಕರ್ಮಪದವನ್ನು ಪ್ರಯೋಗ ಮಾಡಲಾಗುವುದಿಲ್ಲ.
ಉದಾಹರಣೆ:
ಕರ್ತೃಪದ | ಕ್ರಿಯಾಪದ | ಧಾತು |
ಮಗು | ಹುಟ್ಟಿತು | ಹುಟ್ಟು |
ರಾಮನು | ಬಂದನು | ಬಂದ |
ಮಳೆ | ಬೀಳುತ್ತದೆ | ಬೀಳು |
ಮಗುವು | ಅಳುತ್ತಿದೆ | ಅಳು |
ಕೂಸು | ಮಲಗಿತು | ಮೊಲಗು |
ರಾಮನು | ಓಡಿದನ್ನು | ಓಡು |
ಆಕಾಶ | ಹೊಳೆಯುತ್ತಿದೆ | ಹೊಳೆ |
ಅವನು | ಬದುಕಿದನು | ಬದುಕು |
ಕಳ್ಳರು | ಹೆದರಿದರು | ಹೆದರು |
ಅವರು | ಸೇರಿದರು | ಸೇರು |
ಇವಳು | ನೆನೆದಳು | ನೆನೆ |
ಹುಡುಗರು | ಓದಿದರು | ಓದು |
ಕರ್ತೃ ಪದ:
ಕ್ರಿಯೆಯ ಕೆಲಸವನ್ನು ಯಾರು ಮಾಡಿದರು / ಯಾವುದು ಮಾಡಿತು ಎಂದು ತಿಳಿಸುವ ಪದವನ್ನು ಕರ್ತೃಪದವೆಂದು ಕರೆಯುವರು.
ಕರ್ಮ ಪದ:
ಕ್ರಿಯಾ ಪದದ ಅರ್ಥವನ್ನು ಪೂರ್ತಿಗೊಳಿಸುವ ಪದಗಳಿಗೆ ಕರ್ಮಪದಗಳೆಂದು ಹೆಸರು.”
ಕ್ರಿಯಾ ಪದ:
ಕೆಲಸವನ್ನು ಹೇಳುವ ಪದವನ್ನು ಕ್ರಿಯಾಪದವೆಂದು ಕರೆಯುವರು.
ಕ್ರಿಯಾ ರೂಪಗಳು :
“ಕ್ರಿಯಾ ರೂಪಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು ಅವುಗಳೆಂದರೆ:
- ಕಾಲರೂಪಗಳು
- ಅರ್ಥ ರೂಪಗಳು
ಕಾಲರೂಪಗಳು:
ವರ್ತಮಾನ,ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿ ಕಂಡುಬರುವ ಕ್ರಿಯೆಗಳ ಸನ್ನಿವೇಶಗಳನ್ನು ತಿಳಿಸುವ ರೂಪಗಳಿಗೆ ಕಾಲರೂಪಗಳು ಎನ್ನಲಾಗಿದೆ. ಪ್ರತಿಯೊಂದು ಕಾಲಗಳಲ್ಲಿ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕಾಲರೂಪಗಳಾಗುತ್ತವೆ. ಕಾಲ ರೂಪಗಳ ವಿಧಗಳು :ಕಾಲ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು. ಅವುಗಳೆಂದರೆ
- ವರ್ತಮಾನ ಕಾಲ
- ಭೂತ ಕಾಲ
- ಭವಿಷ್ಯತ್ ಕಾಲ
ವರ್ತಮಾನ ಕಾಲದ ಕ್ರಿಯಾರೂಪ:
“ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚುಸುವ ಕ್ರಿಯಾಪದವು ವರ್ತಮಾನ ಕಾಲದ ಕ್ರಿಯಾಪದವೆನಿಸುವುದು.”
ವರ್ತಕಾಲದಲ್ಲಿ ಧಾತುವಿಗೂ , ಅಖ್ಯಾತ ಪ್ರತ್ಯಯಕ್ಕೂ ನಡುವೆ “ಉತ್ತ” ಎಂಬ ಕಾಲ ಸೂಚಕ ಪ್ರತ್ಯಯವೂ ಉರುವುದು.
ಉದಾಹರಣೆ: ಧಾತು + ಕಾ.ಸೂ + ಅಖ್ಯಾತ =ಕ್ರಿಯಾಪದ
ಹೊಗು + ಉತ್ತ + ಆಳೆ = ಹೋಗುತ್ತಾಳೆ – ತ್ತಾರೆ
ಹೋಗು + ಉತ್ತ + ಆದೆ = ಹೋಗುತ್ತದೆ – ತ್ತವೆ
ಹೋಗು +ಉತ್ತ + ಈಯ = ಹೋಗುತ್ತೀಯೆ – ತ್ತೀರಿ
ಹೋಗು + ಉತ್ತ + ಏನೆ = ಹೋಗುತ್ತೇನೆ – ತ್ತೇವೆ
ಭೂತ ಕಾಲ ಕ್ರಿಯಾರೂಪ :
ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ “ದ” ಎಂಬ ಕಾಲ ಸೂಚಕ ಪ್ರತ್ಯಯವು ಬರುವುದು.ಉದಾಹರಣೆ:
ತಿಳಿ– ಇದು ಒಂದು ಧಾತು ಶಬ್ಧಧಾತು + ಕಾ . ಸೂ ಪ್ರ + ಅಖ್ಯಾತ ಪ್ರ = ಕ್ರಿಯಾಪದ ಏ. ವ ಬಹುವಚನ
ತಿಳಿ + ದ + ಅನು = ತಿಳಿದನು ತಿಳಿದರುತಿಳಿ + ದ + ಅಳು = ತಿಳಿದಳು ತಿಳಿದರು
ತಿಳಿ + ದ + ಇತು = ತಿಳಿಯಿತು ತಿಳಿದವುತಿಳಿ + ದ + ಎ = ತಿಳಿದೆ ತಿಳಿದಿರಿ
ತಿಳಿ + ದ + ಎನು = ತಿಳಿದೆನು ತಿಳಿದೆವು
ಭವಿಷ್ಯತ್ ಕಾಲದ ಕ್ರಿಯಾರೂಪ:
ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ .ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ “ವ” ಅಥವ “ಉವ” ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.ಉದಾಹರಣೆ:
ಕೊಡು – ಇದು ಒಂದು ಧಾತು ಶಬ್ಧಧಾತು + ಕಾ .ಸೂ + ಅಖ್ಯಾತ = ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏ.ವಚನ ಬಹುವಚನ ಕೊಡು + ವ + ಅನು = ಕೊಡುವನು ಕೊಡುವರು
ಕೊಟು + ವ + ಅಳು = ಕೊಡುವಳು ಕೊಡುವರು
ಕೊಡು + ವ + ಅದು = ಕೊಡುವುದು ಕೊಡುವುದು
ಕೊಡು + ವ + ಎ = ಕೊಡುವೆ ಕೊಡುವಿರಿ
ಕೊಡು + ವ + ಎನು = ಕೊಡುವೆನು ಕೊಡುವೆವು.
ಅರ್ಥರೂಪಗಳು:
“ಕ್ರಿಯಾಪದಗಳು ಕಾಲ ರೂಪಗಳನ್ನು ಹೊಂದುವುದಲ್ಲದೆ ಅರ್ಥ ರೂಪಗಳನ್ನು ಹೊಂದಿರುತ್ತವೆ .ಅರ್ಥ ರೂಪಗಳಲ್ಲಿ ಧಾತುವಿಗೆ ಅಖ್ಯಾತ ಪ್ರತ್ಯಯ ಗಳು ನೇರವಾಗಿ ಸೇರಿಕೊಳ್ಳುತ್ತವೆ .”“ಅರ್ಥರೂಪಗಳು, ಆಜ್ಞೆ, ಹಾರೈಕೆ , ನಿಷೇಧ, ಸಂಶಯ ಮುಂತಾದ ಅರ್ಥಗಳನ್ನು ಸೂಚಿಸುತ್ತವೆ.” ಅರ್ಥರೂಪಗಳ ವಿಧಗಳು ಅರ್ಥ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು ಅವುಗಳೆಂದರೆ ವಿದ್ಯರ್ಥಕ ರೂಪ, ನಿಷೇಧಾರ್ಥಕ ರೂಪ ಮತ್ತು ಸಂಭಾವನಾರ್ಥಕ ರೂಪ.
ವಿಧ್ಯರ್ಥಕ ರೂಪ :
ವಿಧಿ ಎಂದರೆ “ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”
ಉದಾಹರಣೆ:
ಧಾತು + ಅಖ್ಯಾತ ಪ್ರತ್ಯಯ = ವಿಧ್ಯರ್ಥಕ ಕ್ರಿಯಾ
ಹೋಗು + ಅಲಿ = ಹೋಗಲಿಬರೆ + ಇರಿ = ಬರೆಯಿರಿ
ಹೋಗು + ಓಣ = ಹೋಗೋಣ
ಬರೆ + ಓಣ = ಬರೆಯೋಣ
ಉದಾಹರಣೆ:
ಕಣ್ಣು ಕಾಣದ ಮುದುಕನಿಗೆ ಭಕ್ಷೆ ನೀಡಿ ತಾಯಿ – ಕೋರಿಕೆ
ಅವರು ಪಾಠವನ್ನು ಓದಲಿ – ಅಜ್ಞೆ
ಅವನು ಹಾಳಾಗಿ ಹೋಗಲಿ – ಅಪ್ಪಣೆ
ಅವನಿಗೆ ಜಯವಾಗಲಿ – ಹಾರೈಕೆ.
ನಿಷೇಧಾರ್ಥಕ ರೂಪ:
ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.
ಉದಾಹರಣೆ:
ಧಾತು + ಅ. ಪ್ರತ್ಯಯ + ನಿಷೇದಾರ್ಥಕ ಕ್ರಿಯಾರೂಪ
ಹೋಗು + ಅಳು + ಹೋಗಳು
ಬರೆ + ಅನು + ಬರೆಯನು
ಮಾಡು + ಎವು + ಮಾಡೆವು
ಕುಡಿ + ಅಳು + ಕುಡಿಯಳು
ಮಾಡು + ಅದು + ಮಾಡದು
ಸಂಭಾವನಾರ್ಥಲ ಕ್ರಿಯಾಪದ:
ಸಂಭಾವನಾರ್ಥ ಎಂದರೆ ಸಂಶಯ/ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ/ ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗ “ಆನು” “ಆಳು” “ಏನು” ಈತು, ಈಯೆ, ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.
ಉದಾಹರಣೆ:
ಧಾತು + ಅಖ್ಯಾತ ಪ್ರ = ಸಂಭಾವನಾರ್ಥಕ ರೂಪ
ಮಾಡು + ಆನು = ಮಾಡಾನು
ಬರೆ + ಆನು = ಬರೆದಾನು
ಕುಡಿ + ಏನು = ಕುಡಿದೇನು
ಬರೆ + ಏವು = ಬರೆದೇವು
ಕುಡಿ + ಏವು = ಕುಡಿದೇವು
ಮಾಡು + ಈತು = ಮಾಡೀತು
ತಿಳಿ + ಆನು = ತಿಳಿದಾನು
ಅಖ್ಯಾತ ಪ್ರತ್ಯಯಗಳು:
“ಪುರುಷ, ವಚನ, ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುವಿಗೆ ಸೇರುವ ಪ್ರತ್ಯಯಗಳಿಗೆ ಅಖ್ಯಾತ ಪ್ರತ್ಯಯಗಳೆಂದು ಹೆಸರು. ಕ್ರಿಯಾ ಪದದ ರೂಪಗಳು, ರೂಪ ಹಾಗೂ ಕೆಲಸಕ್ಕೆ ಅನುಗುಣವಾಗಿ ಕ್ರಿಯಾಪದಗಳು ಬಳಕೆಯಾಗುತ್ತವೆ.ಅವುಗಳು ಈ ಕೆಳಕಂಡಂತಿವೆ.
- ಪೂರ್ಣ ಕ್ರಿಯಾಪದಗಳು
- ಸಾಪೇಕ್ಷ ಕ್ರಿಯಾಪದಗಳು
- ಸಂಯುಕ್ತ ಕ್ರಿಯಾಪದಗಳು.
ಪೂರ್ಣಕ್ರಿಯಾಪದಗಳು:
ಕಾಲ, ರೂಪ, ಅರ್ಥಗಳನ್ನು ಹೊಂದಿರುವ ಕ್ರಿಯಾಪದಗಳು ವಾಕ್ಯಗಳ ಅರ್ಥವನ್ನು ಪೂರ್ಣಗೊಳಿಸುತ್ತವೆ ಇಂತಹ ಕ್ರಿಯಾ ಪದಗಳಿಗೆ ಪೂರ್ಣಕ್ರಿಯಾಪದ ಎಂದು ಹೆಸರು. ಉದಾಹರಣೆ : ಪದ್ಮಾವತಿಯು ತಿಂಡಿಯನ್ನು ತಿಂದಳು.
ಸಾಪೇಕ್ಷ ಕ್ರಿಯಾ ಪದಗಳು:
ತಮ್ಮ ಅರ್ಥವನ್ನು ಮುಗಿಸುವುದಕ್ಕೆ ಬೇರೊಂದು ಕ್ರಿಯಾ ಪದಗಳು ಎಂದು ಹೆಸರು. ಉದಾಹರಣೆ: ಕನಕದಾಸರು ದೇವರ ನಾಮವನ್ನು ಹಾಡುತ್ತಾ ಭಿಕ್ಷೆ ಬೀಡುತ್ತಾರೆ.
ಸಂಯುಕ್ತ ಪದಗಳು:“ಎರಡು / ಹಲವು ಧಾತುಗಳ ಬೇರೆ ಬೇರೆ ಕ್ರಿಯಾ ರೂಪಗಳು ಸೇರಿ ಆಗುವ ಕ್ರಿಯಾಪದಕ್ಕೆ ” ಸಂಯುಕ್ತ ಕ್ರಿಯಾಪದ” ಎಂದು ಹೆಸರು.
[button link=”http://www.karunaduexams.com/wp-content/uploads/2016/09/ಗ್ರಾ-ಪಂ-ಅ-ಅಧಿಕಾರಿ-ಮತ್ತು-ಕಾರ್ಯದರ್ಶಿ-ಗ್ರೇಡ್-1-ಕನ್ನಡ-ವ್ಯಾಕರಣ-3.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ಕರ್ತರಿ ಪ್ರಯೋಗ :
ಕ್ರಿಯಾ ಪದವು ವಾಕ್ಯಗಳಲ್ಲಿ ಕರ್ತೃಪದವನ್ನು ಪ್ರಧಾನವಾಗಿ ಅನುಸರಿಸುತ್ತಿದ್ದರೆ ಅದನ್ನು ಕರ್ತರಿ ಪ್ರಯೋಗ ಎಂದು ಕರೆಯುತ್ತೇವೆ.ಉದಾಹರಣೆ:ಕರ್ತೃಪದ ಕರ್ಮಪದ ಕ್ರಿಯಾಪದ ರಾಮನು ರಾವಣನನ್ನು ಕೊಂದನು.ಈ ಉದಾ ಯಲ್ಲಿ “ಕೊಂದನು” ಎಂಬ ಕ್ರಿಯಾಪದವು “ರಾಮನು” ಎಂಬ ಕರ್ತೃ ಪದವನ್ನು ಅನುಸರಿಸಿದೆ. ಕರ್ತರಿ ಪ್ರಯೋಗವು ಯಾವಾಗಲೂ ಆದಿಯಲ್ಲಿ ಕರ್ತೃ ಪದವನ್ನು ಮಧ್ಯದಲ್ಲಿ ಕರ್ಮಪದವನ್ನು ಅಂತ್ಯದಲ್ಲಿ ಕ್ರಿಯಾಪದವನ್ನು ಒಳಗೊಂದಿರುತ್ತದೆ. ಕರ್ತೃ ಪದವು ಪ್ರಧಮವಿಭಕ್ತಿಯಿಂದ ಕೂಡದ್ದು.ಕರ್ಮ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿರುತ್ತದೆ.ಕ್ರಿಯಾ ಪದವು ಕ್ರಿಯೆಯನ್ನು ಸೂಚಿಸುತ್ತದೆ.
ಉದಾಹರಣೆ: ರಾಮನು ರಾವಣನನ್ನು ಕೊಂದನು
ನಾನು ಕವಿತೆಯನ್ನು ಬರೆಯುತ್ತೇನೆ
ಸೀತೆಯು ಹಣ್ಣನ್ನು ತಿಂದಳು
ಮಳೆಯು ಇಳೆಯನ್ನು ತಣಿಸಿತು
ರಾಮನು ಸೇತುವೆಯನ್ನು ಕಟ್ಟಿದನು
ಭೀಮನು ಬಕಾಸುರನನ್ನು ಕೊಂದನು
ಅಣ್ಣನು ನನ್ನನ್ನು ಕೊಂದನು
ಕರ್ಮಣಿ ಪ್ರಯೋಗ:
ಕರ್ಮಪದವನ್ನು ಅನುಸರಿಸಿ ಕ್ರಿಯಾಪದ ಪ್ರಯೋಗವಾಗಿರುವುದಕ್ಕೆ ಕರ್ಮಣಿ ಪ್ರಯೋಗ ಎಂದು ಹೆಸರು. ಉದಾಹರಣೆ:
ಕರ್ಮಪದ ಕರ್ತೃಪದ ಕ್ರಿಯಾಪದ ರಾವಣನು ರಾಮನಿಂದ ಕೊಲ್ಲಲ್ಪಟ್ಟನು. ಈ ಉದಾಹರಣೆಯಲ್ಲಿ “ರಾವಣನು” ಎಂಬ ಕರ್ಮಪದವು ಪ್ರಧಾನವಾಗಿದೆ ಹಾಗೂ ಪ್ರಥಮ ವಿಭಕ್ತಿಯಿಂದ ಕೂಡಿದೆ. ರಾಮನಿಂದ ಎಂಬ ಕರ್ತೃ ಪದವು ಕರ್ತೃ ಪದವು ತೃತೀಯ ವಿಭಕ್ತಿಯಿಮದ ಕೂಡಿದೆ.
ಕರ್ಮಣಿ ಪ್ರಯೋಗದ ಲಕ಼ಣಗಳು:
- ಕರ್ತರಿ ಪ್ರಯೋಗದಲ್ಲಿ ಕರ್ತೃಪದವು ವಿಭಕ್ತಿಯನ್ನು ಅಂತ್ಯವಾಗಿ ಹೊಂದಿರುತ್ತದೆ.
- ಕರ್ತರಿ ಪ್ರಯೋಗದಲ್ಲಿ ಕರ್ಮವಾಗಿದ್ದ ಪದವು ಕರ್ಮವಾಗಿದ್ದ ಪದವು ಕರ್ಮಣಿ ಪ್ರಯೋಗದಲ್ಲಿ ಪ್ರಥಮ ವಿಭಕ್ತಿಯನ್ನು ಅಂತ್ಯವಾಗಿ ಉಳ್ಳ ಕರ್ತೃ ಸ್ಥಾನವನ್ನು ಪಡೆಯುತ್ತದೆ.
- ಕರ್ತೃ ಪದವು ಕರ್ಮಣಿ ಪ್ರಯೋಗದಲ್ಲಿ ತ್ರತಿಯಾ ವಿಭಕ್ತಿಯಿಂದ ಕೂಡಿದ್ದು ಮಧ್ಯದಲ್ಲಿ ಬಂದಿರುತ್ತದೆ.
- ಕ್ರಿಯಾಪದವು ಅಂತ್ಯದಲ್ಲಿ ಬಂದು ಇದೂ ಧಾತುವಿಗೂ ಅಖ್ಯಾತ ಪ್ರತ್ಯಯಕ್ಕೂ ನದುವೆ “ಅಲ್ಪದು” ಎಮಬುದು ಸೇರುತ್ತದೆ.
- ಕ್ರೀಯಾಪದವು ಲಿಂಗ, ವಚನ, ಪುರುಷಗಳನ್ನು, ಅನುಸರಿಸುತ್ತದೆ.
ಉದಾಹರಣೆ:
- ರಾವಣನು ರಾಮನಿಂದ ಕೊಲ್ಲಲ್ಪಟ್ಟನು
- ಕವಿತೆಯು ನನ್ನಿಂದ ಬರೆಯಲ್ಪಟ್ಟಿತ್ತು
- ಹಣ್ಣು ಸೀತೆಯಿಂದ ತಿನ್ನಲ್ಪಟ್ಟಿತ್ತು
- ಇಳೆಯು ಮಳೆಯಿಂದ ತಣಿಯಲ್ಪಟ್ಟಿತ್ತು
- ಸೇತುವೆಯು ರಾಮನಿಂದ ಕಟ್ಟಲ್ಪಟ್ಟಿತ್ತು
- ಬಕಾಸುರನು ಭೀಮನಿಂದ ಕೊಲ್ಲಲ್ಪಟ್ಟಿತ್ತು
- ನಾನು ಅಣ್ಣನಿಂದ ಕರೆಯಲ್ಪಟ್ಟನು
- ಪುಸ್ತಕವು ಮಕ್ಕಳಿಂದ ಓದಲ್ಪಟ್ಟಿತು.
ಕಾಲ ಪಲ್ಲಟ:
ಒಂದೂ ಕಾಲದ ಕ್ರೀಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಆಥಾವ ಕಾಲ ಬದಲಾವಣೆ ಎನ್ನುವರು.ಉದಾಹರಣೆ ನಾನು ಮುಂದಿನ ವರ್ಷ ಮೇಲುಕೋಟೆ ಜಾತ್ರೆಗೆ ಹೋಗುತೇನೆ. ಮೇಲಿನ ಉದಾಹರಣೆ “ಹೋಗುತ್ತೇನೆ” ಎಂಬ ಕ್ರೀಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ.
ಉದಾಹರಣೆ:
- ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ.
ಛಂದಸ್ಸು
ಛಂದಸ್ಸು ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ. ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ ಅವುಗಳೆಂದರೆ ಪ್ರಾಸ, ಯತಿ ಮತ್ತು ಗಣ.
ಪ್ರಾಸ:
ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.
ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ.
ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ. ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ.
ಯತಿ:
ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.
ಗಣ:
ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಮಾತ್ರಾಗಣ, ಅಕ್ಷರಗಣ ಮತ್ತು ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.
ಮಾತ್ರಾಗಣ:
ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.
ಮಾತ್ರೆ:
ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.
ಲಘು:
ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು (U) ಎನ್ನುವರು.
ಗುರು:
ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( – ) ಎಂದು ಕರೆಯುವರು.
ಪ್ರಸ್ತಾರ:
ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.
ಅಕ್ಷರಗಣಗಳು
ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ. ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.
ಅಕ್ಷರಗಣಗಳಲ್ಲಿ ಒಟ್ಟು ಎಂಟು ವಿಧಗಳಿವೆ.
ಯಗಣ
ಮಗಣ
ತಗಣ
ರಗಣ
ಜಗಣ
ಭಗಣ
ನಗಣ
ಸಗಣ
ಯಮಾತಾರಾಜಭಾನಸಲಗಂ ಸೂತ್ರ: ಅಕ್ಷರಗಣಗಳನ್ನು ಯಮಾತಾರಾಜಭಾನ ಸಲಗಂ ಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆ.
ಗಣಗಳನ್ನು ಗುರುತಿಸುವ ಪದ್ಯ
ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ.
ಗುರು ಲಘು ಮೂರಿರೆ ಮ – ನ – ಗಣ
ಗುರು ಲಘು ಮೊದಲಲ್ಲಿ ಬರಲು ಭ – ಯ – ಗಣಮೆಂಬರ್
ಗುರು ಲಘು ನಡುವಿರೆ ಜ – ರ – ಗಣ
ಗುರು ಲಘು ಕೊನೆಯಲ್ಲಿ ಬರಲು ಸ – ತ – ಗಣಮಕ್ಕುಂ
ವೃತ್ತಗಳು
ಅಕ್ಷರಗಣದ ಛಂದಸ್ಸನ್ನು ವೃತ್ತ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರತಿ ಪದ್ಯವೂ ನಾಲ್ಕು ಸಾಲುಗಳಿರುತ್ತವೆ. ಆದಿಪ್ರಾಸ ಕಡ್ಢಾಯವಾಗಿ ಬರುತ್ತದೆ. ಕನ್ನಡದಲ್ಲಿ ಪ್ರಸಿದ್ಧವಾಗಿ ಆರು ವೃತ್ತಗಳು ಬಳಕೆಯಲ್ಲಿವೆ. ಅವನ್ನು ಖ್ಯಾತಕರ್ಣಾಟಕ ವೃತ್ತಗಳೆಂದು ಕರೆಯುತ್ತಾರೆ. ಅವು ”ಉತ್ಪಲ ಮಾಲಾ ವೃತ್ತ” ”ಚಂಪಕಮಾಲಾವೃತ್ತ” ”ಶಾರ್ದೂಲವಿಕ್ರೀಡಿತ ವೃತ್ತ” ”ಮತ್ತೇಭವಿಕ್ರೀಡಿತ ವೃತ್ತ ”ಸ್ರಗ್ಧರಾ ವೃತ್ತ” ”ಮಹಾಸ್ರಗ್ಧರಾ ವೃತ್ತ”.
ಅಂಶಗಣ
ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಂಶಗಣ.ಇದನ್ನು ನಾಗವರ್ಮನು “ಕರ್ಣಾಟಕ ವಿಷಯಜಾತಿ” ಎಂದೂ ಹಾಗೇ ಜಯಕೀರ್ತಿಯು “ಕರ್ಣಾಟಕವಿಷಯಭಾಷಾಜಾತಿ” ಎಂದೂ ಕರೆದಿದ್ದಾರೆ. ಇದು ಅಪ್ಪಟ ದೇಸೀ ಛಂದಸ್ಸಿನ ಪ್ರಕಾರವಾಗಿದೆ. ಒಂದು ಅಂಶ ಎಂದರೆ ಒಂದು ಮಾತ್ರಾ ಕಾಲವೂ ಆಗಬಹುದು, ಅಥವಾ ಎರಡು ಮಾತ್ರಾಕಾಲವೂ ಆಗಬಹುದು. ಗಣದ ಆರಂಭದಲ್ಲಿ ಮಾತ್ರ ಎರಡು ಮಾತ್ರೆಗಳಿಗೆ ಒಂದು ಅಂಶವನ್ನು ಪರಿಗಣಿಸಬೇಕು.
ಉದಾಹರಣೆ: “ಕವಿತೆ” ಈ ಶಬ್ದದಲ್ಲಿ ಎರಡು ಅಂಶಗಳಾಗುತ್ತವೆ. ‘ಕವಿ’ ಎಂಬುದು ಒಂದು ಅಂಶವಾದರೆ ‘ತೆ’ ಎಂಬುದು ಇನ್ನೊಂದು ಅಂಶವಾಗುತ್ತದೆ, ಇದರಲ್ಲಿ ಮೂರು ವಿಧ. ಅವನ್ನು ಬ್ರಹ್ಮಗಣ,ವಿಷ್ಣುಗಣ,ರುದ್ರಗಣ ಎಂದು ಕರೆಯುವರು.
ವಿ.ಸೂ: ಗು-ಗುರು, ಲ-ಲಘು,ಅಲ್ಪವಿರಾಮ(,)ದಿಂದ ಅಂಶಗಳನ್ನು ಬೇರ್ಪಡಿಸಿದೆ.
ಬ್ರಹ್ಮಗಣದಲ್ಲಿ ಎರಡು ಅಂಶಗಳಿರುತ್ತವೆ. ಅವು ಈ ನಾಲ್ಕು ರೀತಿಯಲ್ಲಿಯೂ ಇರಬಹುದು ಗುಗು,ಗು,ಲ, ಲಲ,ಗು ಲಲ,ಲ. ಹಾಗೆಯೇ ವಿಷ್ಣುಗಣದಲ್ಲಿ ಮೂರು ಅಂಶಗಳು ಇರುತ್ತವೆ. ಅವುಗಳ ವಿಧಗಳು ಹೀಗಿವೆ:
- ಗು,ಲ,ಲ
- ಗು,ಗು,ಲ
- ಗು,ಗು,ಗು
- ಗು,ಲ,ಗು
- ಲಲ,ಗು,ಗು
- ಲಲ,ಗು,ಲ
- ಲಲ,ಲ,ಗು
- ಲಲ,ಲ,ಲ
ಹಾಗೆಯೇ ರುದ್ರಗಣದಲ್ಲಿ ನಾಲ್ಕು ಅಂಶಗಳಿರುತ್ತವೆ, ಅವುಗಳ ವಿಧಗಳನ್ನೂ ಹೀಗೆ ತೋರಿಸಬಹುದು
1.ಗು,ಲ,ಲ,ಲ
2.ಗು,ಗು,ಲ,ಲ
3.ಗು,ಗು,ಗು,ಲ
4.ಗು,ಗು,ಗು,ಗು
5.ಗು,ಲ,ಗು,ಲ
6.ಗು,ಲ,ಲ,ಗು
7.ಗು,ಗು,ಲ,ಗು
8.ಗು,ಲ,ಗು,ಗು,ಇತ್ಯಾದಿ,
ಕನ್ನಡ ಛಂಧೋಗ್ರಂಥಗಳ ಪರಿಚಯ:
· ಕವಿರಾಜ ಮಾರ್ಗ:
ನೃಪತುಂಗನ ಆಸ್ಥಾನದಲ್ಲಿದ್ದ “ಶ್ರೀವಿಜಯ’ನಿಂದ ರಚಿಸಲ್ಪಟ್ಟಿತು.ಇದರ ಕಾಲ ಕ್ರಿ.ಶ. 850 ಇದು ಅಲಂಕಾರಿಕ ಗ್ರಂಥವಾದರೂ ವ್ಯಾಕರಣ ಮತ್ತು ಛಂದಸ್ಸುಗಳ ಕೆಲ ಅಂಶಗಳನ್ನು ಪ್ರಸ್ತಾಪಿಸಿದೆ.ಇಲ್ಲಿ ಯತಿ ವಿಚಾರ, ಛಂದೋಭಂಗ, ಗುರು ಲಘು ದೋಷಗಳು ಪ್ರಾಸ ವಿಚಾರ ಮೊದಲಾದವನ್ನು ತಿಳಿಸುತ್ತದೆ.
· ಗುಣಗಾಂಕಿಯಂ:
ಜೈನ ಲಾಕ್ಷಣಿಕನಾದ “ಅಮೃತ ಸಾಗರ”ಎಂಬುವನಿಂದ ರಚಿತವಾದ “ಯಾಪ್ಪರುಂಗ ಲಕ್ಕಾರಿಹೈ” ಎಂಬ ಛಂದೋಗ್ರಂಥವೊಂದು ತಮಿಳು ಭಾಷೆಯಲ್ಲಿದೆ.ಇದು 11ನೇ ಶತಮಾನಕ್ಕಿಂತ ಹಿಂದೆ ರಚಿತವಾಗಿರಬಹುದೆಂದು ತಿಳಿಯಲಾಗಿದೆ. ಇದಕ್ಕೆ ಚೈನವ್ಯಾಖ್ಯಾತೃವಂದ “ಗುಣಸಾಗರನೆಂಬುವನು” ಒಂದು ವ್ಯಾಖ್ಯಾನವನ್ನು ಬರೆದಿದ್ದಾನೆ.
ಷಟ್ಪದಿ
ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸುಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ.೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದ ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.
ಕನ್ನಡ ಸಾಹಿತ್ಯದಲ್ಲಿ ಷಟ್ಪದಿ:
ಕನ್ನಡ ಕಾವ್ಯದಲ್ಲಿ ಷಟ್ಪದಿಗಳನ್ನು ರಾಘವಾಂಕನು ಬಳಕೆಗೆ ತಂದನು. ಹಳಗನ್ನಡ ಸಾಹಿತ್ಯದಲ್ಲಿ ಕಂದ, ಖ್ಯಾತ ಕರ್ನಾಟಕ ವೃತ್ತಗಳು, ಹೇರಳವಾಗಿದ್ದರೆ ನಡುಗನ್ನಡ ಕಾಲದ ಸಾಹಿತ್ಯದಲ್ಲಿ ಷಟ್ಪದಿಗೆ ಮೊದಲ ಸ್ಥಾನ. ಕುಮಾರವ್ಯಾಸನ ‘ಗದುಗಿನ ಭಾರತ’ವೆಂದೆ ಪ್ರಸಿದ್ಧವಾಗಿರುವ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶಕವಿಯ ಜೈಮಿನಿ ಭಾರತ ಇವೆರಡೂ ಷಟ್ಪದಿ ಕಾವ್ಯಗಳೆ. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿ.
ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು ಇವು:
ಶರ
ಕುಸುಮ
ಭೋಗ
ಭಾಮಿನೀ
ವಾರ್ಧಕ
ಪರಿವರ್ಧಿನೀ
ಇವುಗಳಲ್ಲಿ ಭಾಮಿನೀ ಷಟ್ಪದಿ ಜನಪ್ರಿಯ. ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಪಾದ(ಅಂದರೆ ಸಾಲು)ಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಮೂರುಗಣಗಳೂ ಮತ್ತು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಎರಡು ಗಣಗಳಿರುತ್ತವೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:
ವೇದ ಪುರುಷನ | ಸುತನ ಸುತನ ಸ
ಹೋದರನ ಹೆ|ಮ್ಮಗನ ಮಗನ ತ
ಳೋದರಿಯ ಮಾ|ತುಳನ ಮಾವನ|ನತುಳಭುಜಬಲ|ದಿ
ಕಾದು ಗೆಲಿದನ|ನಣ್ಣನವ್ವೆಯ
ನಾದಿನಿಯ ಜಠ|ರದಲಿ ಜನಿಸಿದ
ನಾದಿಮೂರುತಿ | ಸಲಹೊ ಗದುಗಿನ | ವೀರನಾರಯ|ಣ
ರಗಳೆಗಳು
ರಗಳೆ ಹಳೆ ಕನ್ನಡ ಕಾವ್ಯದ ಛಂದಸ್ಸಿನ ಒಂದು ಪ್ರಕಾರ. ಈ ಛಂದಸ್ಸಿನಲ್ಲಿ ಹರಿಹರನಾದಿಯಾಗಿ ಅನೇಕ ಕವಿಗಳು ಕಾವ್ಯರಚನೆ ಮಾಡಿದ್ದಾರೆನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಅನಿಯಮಿತ ಪಾದಸಂಖ್ಯೆಗಳೂ ಆದಿ ಅಥವಾ ಅಂತ್ಯ ಪ್ರಾಸಗಳೂ ಎಲ್ಲಾ ರಗಳೆಗಳಿಗೂ ಸಾಮಾನ್ಯ ಅಂಶಗಳು. ಇದರಲ್ಲಿ ಮೂರು ಮುಖ್ಯವಿಧಗಳನ್ನು ಕಾಣಬಹುದು.
- ಉತ್ಸಾಹ ರಗಳೆ
- ಮಂದನಿಲರಗಳೆ
- ಲಲಿತ ರಗಳೆ
ಉತ್ಸಾಹ ರಗಳೆ
ಇದರಲ್ಲಿ ಮುಖ್ಯವಾಗಿ ಮೂರು ಮಾತ್ರೆಗಳಂತೆ ಗಣ ವಿಂಗಡನೆಯಾಗುತ್ತದೆ. ಇದರಲ್ಲಿಯೂ ಹಲವು ಪ್ರಕಾರಗಳಿವೆ.
ಒಂದು ಪ್ರಕಾರದಲ್ಲಿ “೩+೩+೩+೩” ಮಾತ್ರೆಗಳಂತೆ ಗಣವಿಂಗಡನೆಯಾಗುವುದು. ಇನ್ನೊಂದು ಪ್ರಕಾರದಲ್ಲಿ “೩+೩+೩+ಗುರು” ಮಾತ್ರೆಗಳಂತೆ ಗಣವಿಂಗಡನೆಯಾಗುವುದುಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ.
ಸಾಮಾನ್ಯನಿಯಮದಂತೆ ಯಾವಗಣವೂ ಮೊದಲಲ್ಲಿ ಲಘು ಹಾಗೂ ಅನಂತರ ಗುರು ಇರುವ (U _) ವಿನ್ಯಾಸ ಹೊಂದಿರುವುದಿಲ್ಲ.
ಮಂದನಿಲ ರಗಳೆ
ಇದರಲ್ಲಿಯೂ ಹಲವು ಪ್ರಕಾರಗಳಿವೆ. ಮೊದಲನೆಯ ಪ್ರಕಾರದಲ್ಲಿ ಆದ್ಯಂತ ಪ್ರಾಸನಿಯಮಗಳ ಜೊತೆಯಲ್ಲಿ ಪ್ರತಿಪಾದದಲ್ಲಿಯೂ ನಾಲ್ಕು ಮಾತ್ರೆಯ ನಾಲ್ಕು ಗಣಗಳಿರುತ್ತವೆ.ಅಂದರೆ ಗಣವಿಭಾಗದಲ್ಲಿ “೪+೪+೪+೪” ಎಂಬ ವಿನ್ಯಾಸವಿರುತ್ತದೆ. ಇನ್ನೊಂದು ಪ್ರಕಾರದಲ್ಲಿ ಮೂರು ಮತ್ತು ಐದು ಮಾತ್ರೆಗಳ ಗಣಗಳು ಎರಡು ಬಾರಿ ಪುನರಾವರ್ತನೆಯಾಗುತ್ತವೆ.
ಅಂದರೆ ಗಣವಿಭಾಗದಲ್ಲಿ “೩+೫+೩+೫” ಎಂಬ ವಿನ್ಯಾಸವಿರುತ್ತದೆ. ಈ ವಿಧಗಳಲ್ಲಿಯೂ ಕೂಡ ಮೊದಲು ಲಘು, ಅನಂತರ ಗುರು ಇರುವ ಗಣವಿನ್ಯಾಸ ಬರಬಾರದು. ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ.
ಲಲಿತರಗಳೆ
ಇದರಲ್ಲಿಯೂ ಬೇರೆ ಬೇರೆ ವಿಧಗಳಿದ್ದರೂ ಮುಖ್ಯವಾಗಿ ನಾಲ್ಕು ಪಂಚಮಾತ್ರಾಗಣಗಳಿಂದ ಕೂಡಿರುತ್ತದೆ.
ಎಲ್ಲ ರಗಳೆಗಳ ನಿಯಮದಂತೆ ಇದರಲ್ಲಿಯೂ ಯಾವಗಣದಲ್ಲಿಯೂ ಮೊದಲು ಲಘು, ಅನಂತರ ಗುರು ಇರುವಂತಹ (U _ UU ಅಥವಾ U _ _)ವಿನ್ಯಾಸವಿರಬಾರದು
[button link=”http://www.karunaduexams.com/wp-content/uploads/2016/09/ಗ್ರಾ-ಪಂ-ಅ-ಅಧಿಕಾರಿ-ಮತ್ತು-ಕಾರ್ಯದರ್ಶಿ-ಗ್ರೇಡ್-1-ಕನ್ನಡ-ವ್ಯಾಕರಣ-4.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ತತ್ಸಮ-ತದ್ಬವ
ಯಾವುದೇ ದೇಶದ ಭಾಷೆಯಾಗಲಿ, ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯತ್ತಾ, ಆಯಾ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ. ನಾವಾಡುವ ಕನ್ನಡ ಭಾಷೆಯಲ್ಲೂ ಈ ತತ್ತ್ವಕ್ಕನುಗುಣವಾಗಿ ಅನೇಕ ಶಬ್ದಗಳು ಸೇರಿವೆ. ನಮ್ಮ ಕನ್ನಡ ಶಬ್ದಗಳೂ ಕೂಡ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ. ಭಾಷೆಗಳು ಹೀಗೆ ಕೊಡುಕೊಳ್ಳುವ ವ್ಯವಹಾರದಿಂದ ಬೆಳೆಯುತ್ತವೆ. ಬೇರೆ ಭಾಷೆಗಳಿಂದ ಹೀಗೆ ಶಬ್ದಗಳನ್ನು ಸೇರಿಸಿಕೊಂಡರೂ ತನ್ನ ಮೂಲ ಶಬ್ದಗಳನ್ನು ಮಾತ್ರ ಕೈಬಿಡಬಾರದು. ಅವೂ ಇರಬೇಕು; ಪರಭಾಷಾ ಶಬ್ದಗಳೂ ಇರಬೇಕು. ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು. ಈ ಕೆಳಗಿನ ಒಂದು ಉದಾಹರಣೆಯನ್ನು ಗಮನಿಸಿರಿ:-
“ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು.”
ಈ ವಾಕ್ಯವು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದಗಳ ಜೊತೆಗೆ ಬೇರೆ ಬೇರೆ ಭಾಷೆಗಳ ಶಬ್ದಗಳೂ ಇದರಲ್ಲಿ ಹೆಚ್ಚಾಗಿವೆ.
(i) ಮೋಟಾರು – ಇದು ಇಂಗ್ಲೀಷ್ ಭಾಷೆಯಿಂದ ಬಂದ ಶಬ್ದ.
(ii) ಜಬರ್ದಸ್ತ್ – ಇದು ಹಿಂದೀ ಭಾಷೆಯಿಂದ ಬಂದ ಶಬ್ದ.
(iii) ಜೀವನ ಮುಖ್ಯ – ಈ ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು.
(iv) ಓಡಾಡು, ಗುರಿ, ನಾವು, ತಿಳಿಯಬೇಕು – ಇವು ಕನ್ನಡ ಭಾಷೆಯ ಶಬ್ದಗಳು.
ಅಲ್ಲದೆ-ಅಲ್ಲಿ, ಇಂದ, ಇನ, ಇಗೆ, ಉ-ಇತ್ಯಾದಿ ಕನ್ನಡ ಪ್ರತ್ಯಯಗಳು ಇಂಗ್ಲೀಷ್, ಹಿಂದಿ, ಸಂಸ್ಕೃತ ಶಬ್ದಗಳ ಮುಂದೆ ಬಂದು, ಅವನ್ನು ಕನ್ನಡ ಶಬ್ದಗಳನ್ನಾಗಿ ಮಾಡಿವೆ.
ಮೇಲಿನ ಉದಾಹರಣೆಯಿಂದ ನಮ್ಮ ಕನ್ನಡ ಭಾಷೆಯಲ್ಲಿ ಪರ ಭಾಷೆಯ ಶಬ್ದಗಳು ಸೇರಿಕೊಂಡಿವೆ ಎಂಬುದು ಗೊತ್ತಾಗುವುದು. ನಮ್ಮ ಕನ್ನಡ ಭಾಷೆ ದ್ರಾವಿಡ ವರ್ಗಕ್ಕೆ ಸೇರಿದ ಭಾಷೆಯೆಂದು ತಿಳಿದಿದ್ದೀರಿ. ಸಂಸ್ಕೃತ ಭಾಷೆ ಆರ್ಯರ ಭಾಷೆ. ಆರ್ಯರಿಗೂ ದ್ರಾವಿಡರಿಗೂ ಬಹು ಪ್ರಾಚೀನ ಕಾಲದಿಂದಲೇ ಸಂಬಂಧ ಬೆಳೆದು, ಅವರಾಡುತ್ತಿದ್ದ ಸಂಸ್ಕೃತ-ಪ್ರಾಕೃತ ಭಾಷೆಗಳ ಶಬ್ದಗಳು ವಿಶೇಷವಾಗಿ ಅಂದಿನಿಂದಲೇ ಸೇರುತ್ತ ಬಂದವು. ಅನಂತರ ಬೇರೆ ಬೇರೆ ವಿದೇಶೀಯರ ಸಂಪರ್ಕದಿಂದ, ಪಾರ್ಸಿ ಭಾಷಾ ಶಬ್ದಗಳೂ, ಇಂಗ್ಲೀಷ್, ಪೋರ್ಚುಗೀಸ್ ಭಾಷಾಶಬ್ದಗಳೂ ಸೇರಿಹೋದವು. ಹೀಗೆ ಬೇರೆ ಬೇರೆ ಭಾಷೆಗಳಿಂದ ಬಂದ ಶಬ್ದಗಳಾವುವು? ನಮ್ಮ ಅಚ್ಚಗನ್ನಡ ಭಾಷಾಶಬ್ದಗಳಾವುವು? ಎಂಬುದನ್ನು ಸ್ಥೂಲವಾಗಿ ತಿಳಿಯಬಹುದು.
ಅಚ್ಚಗನ್ನಡ ಶಬ್ದಗಳನ್ನು ದೇಶ್ಯ ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು ಅನ್ಯದೇಶ್ಯ ಶಬ್ದಗಳೆನ್ನುತ್ತೇವೆ. ಅಲ್ಲದೆ ಸಂಸ್ಕೃತ-ಪ್ರಾಕೃತ ಶಬ್ದಗಳನೇಕವನ್ನು ಕನ್ನಡಭಾಷೆಯ ಗುಣಕ್ಕನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದ ಮತ್ತು ಹೆಚ್ಚಿನ ವ್ಯತ್ಯಾಸಗಳಿಂದ ಮಾರ್ಪಡಿಸಿಕೊಂಡು, ಅವಕ್ಕೆ ತದ್ಭವಗಳು ಎಂಬ ಹೆಸರಿಟ್ಟಿದ್ದೇವೆ. ಕೆಲವು ಸಂಸ್ಕೃತ ಶಬ್ದಗಳನ್ನು ಯಾವ ವ್ಯತ್ಯಾಸವನ್ನೂ ಮಾಡದೆ ಅದೇ ಅರ್ಥದಲ್ಲಿ ಉಪಯೋಗಿಸುತ್ತೇವೆ. ಅವನ್ನು ತತ್ಸಮಗಳು ಎನ್ನುತ್ತೇವೆ. ಈಗ ಈ ಎಲ್ಲಾ ದೇಶ್ಯ, ಅನ್ಯದೇಶ್ಯ, ತತ್ಸಮ, ತದ್ಭವಗಳ ವಿಚಾರವಾಗಿ ಸ್ಥೂಲವಾಗಿ ತಿಳಿದುಕೊಳ್ಳೋಣ.
ದೇಶ್ಯ ಅಚ್ಚಗನ್ನಡ ಶಬ್ದಗಳು
ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ, ಹೋಗು, ಹೊಗು, ಬರು, ತಿನ್ನು, ಒಂದು, ಎರಡು, ನೂರು, ಹೆಚ್ಚು, ಕಡಿಮೆ, ಮೆಲ್ಲಗೆ, ಚೆನ್ನಾಗಿ, ತಿಳಿವಳಿಕೆ, ನಡೆವಳಿಕೆ, ನೀರು, ಮೀನು, ಬಾನು, ಬೋನ, ಅರಸು, ಹುಡುಕು, ಅಗಿ, ಅಲರು, ಅರೆ, ನುರಿ, ಉಡು, ತೊಡು, ಕೈ, ಕಾಲು, ಬಾಯಿ, ಕಣ್ಣು, ತಲೆ, ಕಿವಿ, ಮೂಗು, ಕೆನ್ನೀರು, ಬೆನ್ನೀರು, ಬೆಚ್ಚಗೆ, ತಣ್ಣಗೆ, ಕಮ್ಮಗೆ, ಸಣ್ಣ, ದೊಡ್ಡ, ಬಿಳಿದು, ಕರಿದು, ಹಿರಿದು, ಜೇನು, ತುಪ್ಪ, ಹಾಲು, ಮೊಸರು, ಮಜ್ಜಿಗೆ, ಅವು, ಕರು, ಆಕಳು, ತುರು, ನೆರೆ, ಸೇರು, ಕಾರು, ಹೀರು, ಸೋರು, ಸಾರು, ಹುಳಿ, ಹುರುಳಿ, ಹುಲ್ಲು, ರಾಗಿ, ಜೋಳ, ಬೆಲ್ಲ, ಎಳ್ಳು, ಎಣ್ಣೆ, ಬೆಣ್ಣೆ -ಇತ್ಯಾದಿಗಳು.
ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು:
ಭೂಮಿ, ಪೃಥ್ವಿ, ನದಿ, ಆರ್ಯ, ಅನಾರ್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ, ಲಕ್ಷ್ಮಣ, ಭರತ, ಶತೃಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ, ಅಂಗವಿಕಲ, ಸಂಗ, ಸಂಗಮ, ಸಮಾಗಮ, ದೇವತಾ, ಯಾತ್ರಾ, ದೇವಾಲಯ, ಋಷಿ, ಮುನಿ, ಋಣ, ಋತು, ವೇದ, ಪುರಾಣ, ಶಾಸ್ತ್ರ, ಶಾಸ್ತ್ರೀ, ಆಗಮ, ಉಪನಿಷತ್ತು, ಅರಣ್ಯ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಪಂಚ, ತ್ರಯ, ದಶ, ಏಕ, ಅಷ್ಟ, ಸಪ್ತ, ಆದಿತ್ಯವಾರ, ಸೋಮವಾರ, ಮಂಗಳವಾರ, ಬುಧವಾರ, ನಕ್ಷತ್ರ, ಗ್ರಹ, ಗೃಹ, ಗೃಹಿಣೀ, ಗೃಹಸ್ಥ, ಬ್ರಹ್ಮಚಾರಿ, ವಿದ್ಯಾರ್ಥಿ, ಅನ್ನ, ಪಕ್ವಾನ್ನ, ತೀರ್ಥ, ಅಸಾಧ್ಯ, ಅಶಕ್ಯ, ಅಶಕ್ತ, ಅಶಕ್ತಿ, ನಿಶ್ಶಕ್ತಿ, ವಿಶೇಷ, ಜ್ಞಾನ, ವಿದ್ಯಾ, ವಿದ್ಯಾರ್ಜನೆ, ಶಾಲಾ, ವಿಶ್ವವಿದ್ಯಾಲಯ, ಘಟಿಕಾ, ಘಟಿಕೋತ್ಸವ, ವಿವಾಹ, ಲಗ್ನ, ಲಗ್ನಪತ್ರ, ಪುತ್ರ, ಮಿತ್ರ, ಕಳತ್ರ, ಆಗಮ, ಆದೇಶ, ಲೋಪ, ಅಗ್ರಹಾರ, ಪುರ, ಪುರಿ, ನಗರ, ಗ್ರಾಮ, ಅಧಿಕಾರ, ಮಂತ್ರಿ, ರಾಜನ್, ರಾಣಿ, ಚಕ್ರವರ್ತಿ, ಸಾಮಂತ, ಮಂಡಲೇಶ್ವರ, ಸಾಮ್ರಾಜ್ಯ, ಚಕ್ರಾಧಿಪತ್ಯ, ಶಬ್ದ, ಅಕ್ಷರ, ಪದ, ಪ್ರಕೃತಿ, ವಾಕ್ಯ, ಗ್ರಂಥ, ಸಂಪುಟ, ಮತ, ಧರ್ಮ, ಮೋಕ್ಷ, ಸ್ವರ್ಗ, ನರಕ, ವಿಷಯ, ಅಧ್ಯಾಯ, ಪ್ರಕರಣ, ಪರಿಚ್ಛೇದ, ಆಮ್ಲಜನಕ, ಜಲಜನಕ, ವಿಮಾನ, ಆಕಾಶ, ಫಲ, ಫಲಾಹಾರ, ಗಂಧ, ಚಂದನ, ಲೇಪನ, ಕುಂಕುಮ, ಶಿರ, ಹಸ್ತ, ಪಾದ, ನೇತ್ರ, ಮುಖ, ದಂತ, ಪಂಙ್ತಿ, ನಕ್ಷೆ, ಲೇಖನ, ಲೇಖ, ಪತ್ರ, ಶತ್ರು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ನೈಋತ್ಯ, ಆಗ್ನೇಯ, ಈಶಾನ್ಯ, ವಾಯುವ್ಯ, ಆಕಾಶ, ಗಗನ, ವಾಯು, ವಾಯುಮಂಡಲ, ಜಗತ್, ಮಹಾ, ಉನ್ನತ, ಶಿಖರ, ರಾಶಿ, ಪುಂಜ, ಪುಷ್ಪ, ಪತ್ರಾವಳಿ, ಫಲಾವಳಿ, ಫಲ, ಭೋಜನ, ಭುಂಜನ, ಸರ್ಪ, ಉರಗ, ಔಷಧ, ವೈದ್ಯ, ಆಯುಷ್ಯ, ವರ್ಷ, ಯುಗ, ಶತ, ಶತಮಾನ, ಶತಕ, ವರ್ತಮಾನ, ಸಂಗ್ರಹ, ಯುದ್ಧ, ಗದಾ, ದಂಡ, ಬಾಣ, ಬಾಣಪ್ರಯೋಗ, ಧನು, ದರಿದ್ರ, ದೀನ, ದಲಿತ, ಮಾರ್ಗ, ಮಧ್ಯ, ಧೂಲಿ, ದ್ವಾರ, ಗುಹಾ, ಸಹಸ್ರ, ಪಾಡ್ಯಮೀ, ಏಕಾದಶೀ, ದ್ವಾದಶೀ, ದೀಕ್ಷಾ, ದೈನ್ಯ, ದಿನಾಂಕ, ಸ್ಮಾರಕ, ಪಕ್ಷ, ತಿಥಿ, ಪಂಚಾಂಗ, ಪಂಚಾಲ, ದ್ರೌಪದಿ, ಧೃತರಾಷ್ಟ್ರ, ಕಾವೇರಿ, ಕೃಷ್ಣಾ, ಗೋದಾವರಿ, ನರ್ಮದಾ, ಬ್ರಹ್ಮಪುತ್ರಾ, ಗಂಗಾ, ಯಮುನಾ, ಸರಸ್ವತಿ, ಶಿವ, ವಿಷ್ಣು, ಬ್ರಹ್ಮ, ಮಹೇಶ, ಈಶ್ವರ, ನಶ್ವರ -ಇತ್ಯಾದಿ.
ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು
ಅರ್ಜಿ, ಕಚೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ್ಕಾರ, ರೈತ, ಸಲಾಮು, ಕಾನೂನು, ಜಮೀನು, ಬದಲಾವಣೆ, ಚುನಾವಣೆ, ಮಂಜೂರು, ಹುಕುಂ, ದರ್ಬಾರು, ಅಸಲಿ, ನಕಲಿ, ರಸ್ತೆ, ಕುರ್ಚಿ, ಜಮೀನ್ದಾರ್, ಗುಲಾಮ, ಖಾಜಿ, ಸುಬೇದಾರ್, ದಪೇದಾರ್, ಹವಾಲ್ದಾರ್, ದಾಖಲ್, ದುಕಾನ್, ಅಮಲ್ದಾರ್, ಸವಾರ, ದವಾಖಾನೆ, ಕಾಗದ, ಬಂದೂಕ, ಹುಜೂರು, ಖಾವಂದ್, ಜನಾಬ್, ಮಹಲ್, ಕಿಲ್ಲಾ-ಮುಂತಾದವುಗಳು.
(೩) ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು
ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ್ಮೋನಿಯಂ, ಬೆಂಚ್, ಪ್ಲೇಗು, ಮೈಲು, ಪೋಲೀಸ್, ಪೋಸ್ಟ್, ಕಾರ್ಡು, ಕವರು, ಟಿಕೆಟ್, ಹೊಟೆಲ್, ಚೇರಮನ್, ರೂಂ, ಸ್ಕೂಲ್, ಕಾಲೇಜ್, ಯೂನಿವರ್ಸಿಟಿ, ರಿಕಾರ್ಡ್, ಆಕ್ಸಿಜನ್, ಹೈಡ್ರೋಜನ್, ಆಸಿಡ್, ಫ಼ೀಸ್, ರಿಜಿಸ್ಟರ್, ಫರ್ನಿಚರ್, ಜೈಲ್, ಡ್ರೆಸ್, ಬೂಟ್ಸ್, ಪುಟ್ಪಾತ್, ಬೈಸ್ಕಲ್, ಸ್ಕೂಟರ್, ಜಾಮಿಟ್ರಿ, ಮಿಷನ್, ಡಿಗ್ರಿ, ಡಾಕ್ಟರ್, ಪ್ಲಾನ್, ಬ್ರೆಡ್, ಕಾಫೀ, ಟೀ, ಬೋರ್ಡ್, ಪೆಟ್ರೋಲ್, ಲೈಟ್, ಎಲೆಕ್ಟ್ರಿಕ್, ಡಿಪಾರ್ಟ್ಮೆಂಟ್, ಗವರ್ನಮೆಂಟ್, ಅಪಾಯಿಂಟ್ಮೆಂಟ್, ಆರ್ಡರ್, ಪ್ರೈಮರಿ, ಮಿಡಲ್, ನರ್ಸರಿ, ಹೈಸ್ಕೂಲ್, ಅಗ್ರಿಕಲ್ಚರ್, ಸೋಪ್, ಹ್ಯಾಂಡ್ಬಿಲ್, ಬುಕ್, ನೋಟ್ಸ್, ಪೇಜ್, ಎಸ್.ಎಸ್.ಎಲ್.ಸಿ., ಬಿ.ಎ., ಎಂ.ಎ., ಎಲ್ಎಲ್.ಬಿ., ಆನರ್ಸ್, ಮಾಷ್ಟರ್, ಲೆಕ್ಚರರ್, ಪ್ರೊಫೆಸರ್, ರೀಡರ್, ಲೈಬ್ರರಿ, ಪ್ರೆಸ್, ಡ್ರೈವರ್, ನಂಬರ್, ಮಾರ್ಕ್ಸ್, ಪಾಸ್, ಫೇಲ್, ಸೈನ್ಸ್, ಅಡ್ವಾನ್ಸ್, ಮ್ಯಾಪ್, ಸಿನೆಮಾ, ಫಿಲ್ಮ್, ಸರ್ಟಿಫೀಕೇಟ್, ಲೀವ್, ಎಜ್ಯುಕೇಷನ್, ಕಾಂಗ್ರೇಸ್, ಪಾರ್ಟಿ, ಕ್ರಿಕೆಟ್, ಪುಟ್ಬಾಲ್, ವಾಲಿಬಾಲ್, ಹಾಕಿ, ಟ್ರೈನಿಂಗ್, ಕ್ರಾಪ್ಕಟಿಂಗ್, ಡಿಸ್ಟ್ರಿಕ್ಟ್, ಸರ್ಕಲ್, ಸೊಸೈಟಿ, ಮಿಲ್, ಪೆನ್ಸಿಲ್, ಪೆನ್, ಇಂಕ್, ಬಾಟಲ್, ಸ್ಪೀಡ್, ಸ್ವಿಚ್, ಲೈಟ್, ಬಲ್ಬ್-ಇತ್ಯಾದಿಗಳು.
ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು
ಅಲಮಾರು, ಸಾಬೂನು, ಪಾದ್ರಿ, ಮೇಜು-ಇತ್ಯಾದಿಗಳು.
ಸಂಸ್ಕೃತದಿಂದ ತಮ್ಮ ಮೂಲರೂಪವನ್ನು ವ್ಯತ್ಯಾಸಮಾಡಿಕೊಂಡು ಕನ್ನಡಕ್ಕೆ ಬಂದ ಶಬ್ದಗಳು
ವಿಶೇಷ:-ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆ ಹೊಂದಿದವು, ಹೆಚ್ಚು ಬದಲಾವಣೆ ಹೊಂದಿದವು ಎಂದು ಎರಡು ಭಾಗ ಮಾಡಬಹುದು.
(i) ಅಲ್ಪಸ್ವಲ್ಪ ಬದಲಾವಣೆ ಹೊಂದಿ ಬಂದವುಗಳು:
ಉದಾಹರಣೆಗೆ:- ಸೀತೆ, ಲಕ್ಷ್ಮಿ, ಮಾಲೆ, ದೇವತೆ, ರಾಜ, ಮಹ, ಯಶ, ಬೃಹತ್ತು, ಮಹತ್ತು, ವಿಪತ್ತು, ವಿಯತ್ತು, ಸರಿತ್ತು-ಇತ್ಯಾದಿಗಳು.
(ii) ಹೆಚ್ಚು ಬದಲಾವಣೆ ಹೊಂದಿ ಬಂದವುಗಳು:
ಉದಾಹರಣೆಗೆ:- ಸಕ್ಕರೆ, ಸಾವಿರ, ಬಸವ, ಸಂತೆ, ಪಟಕ, ಸರ, ತಾಣ, ದೀವಿಗೆ, ಬತ್ತಿ, ಬಸದಿ, ನಿಚ್ಚ, ಕಜ್ಜ, ಅಂಚೆ, ಕಂತೆ, ಅಜ್ಜ, ಕವಳ-ಇತ್ಯಾದಿಗಳು.
ತತ್ಸಮಗಳು–ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಶಬ್ದಗಳು ತತ್ಸಮಗಳು. ತತ್ ಎಂದರೆ ಅದಕ್ಕೆ, ಸಮ ಎಂದರೆ ಸಮಾನವಾದುದು–ಇಲ್ಲಿ ಅದಕ್ಕೆ ಎಂದರೆ ಸಂಸ್ಕೃತಕ್ಕೆ ಸಮಾನ (ಎಂದು ಅರ್ಥ) ಇವನ್ನು ಕೆಲವರು ಸಮಸಂಸ್ಕೃತ ಗಳೆಂದೂ ಕರೆಯುವರು (ಕನ್ನಡಕ್ಕೂ ಸಂಸ್ಕೃತಕ್ಕೂ ಇವು ಸಮಾನರೂಪಗಳೆಂದು ತಾತ್ಪರ್ಯ). ಅಲ್ಲದೆ ತದ್ಭವ ಶಬ್ದಗಳ ಸಂಸ್ಕೃತ ರೂಪಗಳನ್ನು ತತ್ಸಮ ಗಳೆಂದೇ ಕರೆಯುವುದು ರೂಢಿಗೆ ಬಂದಿದೆ.
ಉದಾಹರಣೆಗೆ:- ರಾಮ, ಭೀಮ, ಕಾಮ, ವಸಂತ, ಸೋಮ, ಚಂದ್ರ, ಸೂರ್ಯ, ಗ್ರಹ, ಕರ್ತೃ, ಶತ್ರು, ಸ್ತ್ರೀ, ಶ್ರೀ, ವನ, ಮಧು, ಕಮಲ, ಭುವನ, ಭವನ, ಶಯನ, ಶ್ರುತಿ, ಸ್ಮೃತಿ, ಶುದ್ಧಿ, ಸಿದ್ಧಿ, ಕವಿ, ಕಾವ್ಯ, ರವಿ, ಗಿರಿ, ಲಿಪಿ, ಪಶು, ಶಿಶು, ರಿಪು, ಭಾನು, ಯತಿ, ಮತಿ, ಪತಿ, ಗತಿ-ಇತ್ಯಾದಿ.
(೨೮) ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲಿ, ಪೂರ್ಣ ವಿಕಾರವನ್ನಾಗಲಿ, ಹೊಂದಿ ಬಂದಿರುವ ಶಬ್ದಗಳನ್ನು ತದ್ಭವಗಳೆಂದು ಕರೆಯುವರು (ತತ್ ಎಂದರೆ ಅದರಿಂದ ಎಂದರೆ ಸಂಸ್ಕೃತದಿಂದ ಭವ ಎಂದರೆ ಹುಟ್ಟಿದ ಅಥವಾ ನಿಷ್ಪನ್ನವಾದ ಎಂದು ಅರ್ಥ).
(ಅಲ್ಪಸ್ವಲ್ಪ ವಿಕಾರ ಹೊಂದಿದ ಶಬ್ದಗಳನ್ನು ಸಮಸಂಸ್ಕೃತ ಎಂದು ಕರೆಯುವುದೂ ವಾಡಿಕೆ)
ಉದಾಹರಣೆಗೆ:- ಮಾಲೆ, ಸೀತೆ, ಉಮೆ, ವೀಣೆ, ಅಜ್ಜ, ಬಂಜೆ, ಸಿರಿ, ಬಾವಿ, ದನಿ, ಜವನಿಕೆ, ನಿದ್ದೆ, ಗಂಟೆ, ಜೋಗಿ, ರಾಯ, ಕೀಲಾರ, ಪಟಕ, ಸಂತೆ, ಪಕ್ಕ, ಪಕ್ಕಿ, ಚಿತ್ತಾರ, ಬಟ್ಟ, ಆಸೆ, ಕತ್ತರಿ-ಇತ್ಯಾದಿ.
(i) ಅಲ್ಪಸ್ವಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಬಂದಿರುವ ಸಂಸ್ಕೃತ ಶಬ್ದಗಳ ಪಟ್ಟಿ:-
ಸಂಸ್ಕೃತ ರೂಪ | ವ್ಯತ್ಯಾಸ ರೂಪ | ಸಂಸ್ಕೃತ ರೂಪ | ವ್ಯತ್ಯಾಸ ರೂಪ |
ದಯಾ | ದಯೆ, ದಯ | ಗ್ರೀವಾ | ಗ್ರೀವೆ, ಗ್ರೀವ |
ಕರುಣಾ | ಕರುಣೆ, ಕರುಣ | ಶಮಾ | ಶಮೆ |
ನಾರೀ | ನಾರಿ | ವಧ | ವಧೆ |
ನದೀ | ನದಿ | ಅಭಿಲಾಷ | ಅಭಿಲಾಷೆ |
ವಧೂ | ವಧು | ಪ್ರಶ್ನ | ಪ್ರಶ್ನೆ |
ಸರಯೂ | ಸರಯು | ಉದಾಹರಣೆ | ಉದಾಹರಣೆ |
ಸ್ವಯಂಭೂ | ಸ್ವಯಂಭು | ಸರಸ್ವತೀ | ಸರಸ್ವತಿ |
ಮಾಲಾ | ಮಾಲೆ | ಲಕ್ಷ್ಮೀ | ಲಕ್ಷ್ಮಿ |
ಸೀತಾ | ಸೀತೆ | ಗೌರೀ | ಗೌರಿ |
ಬಾಲಾ | ಬಾಲೆ | ಭಾಮಿನೀ | ಭಾಮಿನಿ |
ಲೀಲಾ | ಲೀಲೆ | ಕಾಮಿನೀ | ಕಾಮಿನಿ |
ಗಂಗಾ | ಗಂಗೆ | ಕುಮಾರೀ | ಕುಮಾರಿ |
ನಿಂದಾ | ನಿಂದೆ | ಗೋದಾವರೀ | ಗೋದಾವರಿ |
ಶಾಲಾ | ಶಾಲೆ | ಕಾವೇರೀ | ಕಾವೇರಿ |
ರಮಾ | ರಮೆ | ಶಾಸ್ತ್ರೀ | ಶಾಸ್ತ್ರಿ |
ಉಮಾ | ಉಮೆ | ಭಿಕ್ಷಾ | ಭಿಕ್ಷಾ, ಭಿಕ್ಷೆ |
ದಮಾ | ದಮೆ | ಯಾತ್ರಾ | ಯಾತ್ರೆ |
ಕ್ಷಮಾ | ಕ್ಷಮೆ | ಜ್ವಾಲಾ | ಜ್ವಾಲೆ |
ಆಶಾ | ಆಶೆ | ರೇಖಾ | ರೇಖೆ |
ಸಂಸ್ಥಾ | ಸಂಸ್ಥೆ | ಮುದ್ರಾ | ಮುದ್ರೆ |
ನಿದ್ರಾ | ನಿದ್ರೆ | ದ್ರಾಕ್ಷಾ | ದ್ರಾಕ್ಷೆ |
ಯವನಿಕಾ | ಯವನಿಕೆ | ಮಾತ್ರಾ | ಮಾತ್ರೆ |
ದ್ರೌಪದೀ | ದ್ರೌಪದಿ | ಶಾಖಾ | ಶಾಖೆ |
ವೇಳಾ | ವೇಳೆ | ವಾಲುಕಾ | ವಾಲುಕ |
ಭಾಷಾ | ಭಾಷೆ | ಗಾಂಧಾರೀ | ಗಾಂಧಾರಿ |
-ಇತ್ಯಾದಿಗಳು |
ಮೇಲಿನ ಎಲ್ಲ ಉದಾಹರಣೆಗಳಲ್ಲಿ ಮುಖ್ಯವಾಗಿ ಸಂಸ್ಕೃತದ ಆ ಕಾರಂತ ಶಬ್ದಗಳು ಎ ಕಾರಾಂತಗಳಾಗಿವೆ (ಮಾಲಾ-ಮಾಲೆ ಇತ್ಯಾದಿ); ಕೆಲವು ಅ ಕಾರಾಂತಗಳೂ ಎ ಕಾರಂತಗಳಾಗಿವೆ (ವಧ-ವಧೆ); ಕೆಲವು ದೀರ್ಘಾಂತಗಳು ಹ್ರಸ್ವಾಂತಗಳಾಗಿವೆ (ಲಕ್ಷ್ಮೀ-ಲಕ್ಷ್ಮಿ); ಕೆಲವು ಆಕಾರಂತಗಳು ಅಕಾರಾಂತಗಳಾಗಿಯೂ ಆಗಿವೆ (ದಯಾ-ದಯ); ಹೀಗೆ ಸ್ಥೂಲವಾಗಿ ತಿಳಿಯಬಹುದು. ಹೀಗೆ ಅಲ್ಪಸ್ವಲ್ಪ ವ್ಯತ್ಯಾಸಗೊಂಡ ಮೇಲೆ ಇವು ಕನ್ನಡದ ಪ್ರಕೃತಿಗಳಾಗುವುವು. ಇವುಗಳ ಮೇಲೆ ಕನ್ನಡದ ಪ್ರತ್ಯಯಗಳನ್ನು ಹಚ್ಚಬಹುದು. (ಇಂಥವನ್ನೇ ಸಮ ಸಂಸ್ಕೃತಗಳೆಂದು ಕೆಲವರು ಕರೆಯುವರೆಂದು ಹಿಂದೆ ತಿಳಿಸಿದೆ).
(ii) ಶಬ್ದದ ಕೊನೆಯಲ್ಲಿರುವ ಋಕಾರವು ಅ ಅರ ಎಂದು ವ್ಯತ್ಯಾಸಗೊಳ್ಳುವುವು. ಕೆಲವು ಎಕಾರಾಂತಗಳೂ ಆಗುವುವು. ಅನಂತರ ಕನ್ನಡ ಪ್ರಕೃತಿಗಳಾಗುವುವು.
ಸಂಸ್ಕೃತ ರೂಪ | ವ್ಯತ್ಯಾಸ ರೂಪ | ಸಂಸ್ಕೃತ ರೂಪ | ವ್ಯತ್ಯಾಸ ರೂಪ |
ಕರ್ತೃ | ಕರ್ತ, ಕರ್ತಾರ | ನೇತೃ | ನೇತಾರ |
ದಾತೃ | ದಾತ, ದಾತಾರ | ಸವಿತೃ | ಸವಿತಾರ |
ಪಿತೃ | ಪಿತ, ಪಿತರ | ಭರ್ತೃ | ಭರ್ತಾರ |
ಮಾತೃ | ಮಾತೆ | ಹೋತೃ | ಹೋತಾರ |
(iii) ಕೆಲವು ನಕಾರಾಂತ ಶಬ್ದಗಳು ಕೊನೆಯ ನಕಾರವನ್ನು ಲೋಪ ಮಾಡಿಕೊಂಡು ಕನ್ನಡ ಪ್ರಕೃತಿಗಳಾಗುವುವು.
ಸಂಸ್ಕೃತ ರೂಪ | ವ್ಯತ್ಯಾಸ ರೂಪ | ಸಂಸ್ಕೃತ ರೂಪ | ವ್ಯತ್ಯಾಸ ರೂಪ |
ರಾಜನ್ | ರಾಜ | ಬ್ರಹ್ಮನ್ | ಬ್ರಹ್ಮ |
ಕರಿನ್ | ಕರಿ | ಪುರೂರವನ್ | ಪುರೂರವ |
ಆತ್ಮನ್ | ಆತ್ಮ | ಯುವನ್ | ಯುವ |
ಧಾಮನ್ | ಧಾಮ | ಮೂರ್ಧನ್ | ಮೂರ್ಧ |
(iv) ಕೆಲವು ವ್ಯಂಜನಾಂತ ಶಬ್ದಗಳು ಕೊನೆಯ ವ್ಯಂಜನವನ್ನು ಲೋಪ ಮಾಡಿಕೊಂಡಾಗಲೀ ಅಥವಾ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರದೊಡನಾಗಲೀ ವ್ಯತ್ಯಾಸಗೊಂಡು ಕನ್ನಡ ಪ್ರಕೃತಿಗಳಾಗುತ್ತವೆ.
ಸಂಸ್ಕೃತ ರೂಪ ಬದಲಾವಣೆಯಾದ ರೂಪಗಳು
ಧನಸ್ | ಧನು | ಧನುಸ್ಸು | (ಸ್ + ಉ) |
ಶಿರಸ್ | ಶಿರ | ಶಿರಸ್ಸು | (ಸ್ + ಉ) |
ಯಶಸ್ | ಯಶ | ಯಶಸ್ಸು | (ಸ್ + ಉ) |
ಮನಸ್ | ಮನ | ಮನಸ್ಸು | (ಸ್ + ಉ) |
ತೇಜಸ್ | ತೇಜ | ತೇಜಸ್ಸು | (ಸ್ + ಉ) |
ವಯಸ್ | ವಯ | ವಯಸ್ಸು | (ಸ್ + ಉ) |
ಪಯಸ್ | ಪಯ | ಪಯಸ್ಸು | (ಸ್ + ಉ) |
ಶ್ರೇಯಸ್ | ಶ್ರೇಯ | ಶ್ರೇಯಸ್ಸು | (ಸ್ + ಉ) |
(v) ಕೆಲವು ಸಂಸ್ಕೃತದ ಪ್ರಥಮಾವಿಭಕ್ತ್ಯಂತ ಏಕವಚನಗಳು ತಮ್ಮ ಕೊನೆಯ ವ್ಯಂಜನದೊಡನೆ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರ ಸೇರಿಸಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.
ಸಂಸ್ಕೃತದಲ್ಲಿ ಪ್ರಥಮಾ ಏಕವಚನದ ರೂಪ | ವಿಕಾರಗೊಂಡ ರೂಪ |
ಪ್ರತಿಪತ್ | ಪ್ರತಿಪತ್ತು |
ಕ್ಷುತ್ | ಕ್ಷುತ್ತು |
ಸಂಪತ್ | ಸಂಪತ್ತು |
ವಿಯತ್ | ವಿಯತ್ತು |
ವಿಪತ್ | ವಿಪತ್ತು |
ದಿಕ್ | ದಿಕ್ಕು |
ತ್ವಕ್ಕು | ತ್ವಕ್ |
ವಾಕ್ | ವಾಕ್ಕು |
ಸಮಿತ್ | ಸಮಿತ್ತು |
(vi) ಸಂಸ್ಕೃತದ ಪ್ರಥಮಾವಿಭಕ್ತಿಯ ಬಹುವಚನಾಂತವಾಗಿರುವ ಕೆಲವು ಪುಲ್ಲಿಂಗ ವ್ಯಂಜನಾಂತ ಶಬ್ದಗಳು ತಮ್ಮ ಕೊನೆಯ ವಿಸರ್ಗವನ್ನು ಲೋಪಮಾಡಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.
ಪ್ರಥಮಾ ವಿಭಕ್ತಿ ಬಹುವಚನ ರೂಪ | ವಿಕಾರ ರೂಪ |
ವಿದ್ವಾಂಸಃ – | ವಿದ್ವಾಂಸ |
ಹನುಮಂತಃ – | ಹನುಮಂತ |
ಶ್ವಾನಃ – | ಶ್ವಾನ |
ಭಗವಂತಃ – | ಭಗವಂತ |
ಶ್ರೀಮಂತಃ – | ಶ್ರೀಮಂತ |
(vii) ಸಂಸ್ಕೃತದ ಕೆಲವು ವ್ಯಂಜನಾಂತ ಶಬ್ದಗಳು ಆ ವ್ಯಂಜನದ ಮುಂದೆ, ಒಂದು ಅ ಕಾರದೊಡನೆ ಅಂದರೆ ಅಕಾರಾಂತಗಳಾಗಿ ಕನ್ನಡದ ಪ್ರಕೃತಿಗಳಾಗುತ್ತವೆ.
ವ್ಯಂಜನಾಂತ ಸಂಸ್ಕೃತ ಶಬ್ದ | ವಿಕಾರಗೊಂಡ ರೂಪ |
ದಿವ್ | ದಿವ |
ಚತುರ್ | ಚತುರ |
ಬುಧ್ | ಬುಧ |
ಕುಕುಭ್ | ಕುಕುಭ |
ವೇದವಿದ್ | ವೇದವಿದ |
ಸಂಪದ್ | ಸಂಪದ |
ಮರುತ್ | ಮರುತ |
ಗುಣಭಾಜ್ | ಗುಣಭಾಜ |
ಈ ಮೇಲೆ ಇದುವರೆಗೆ ಹೇಳಿದ ಸಂಸ್ಕೃತದಿಂದ ಕನ್ನಡಕ್ಕೆ ಬರುವ ಶಬ್ದಗಳು ಕೊನೆಯಲ್ಲಿ ಅಲ್ಪಸ್ವಲ್ಪ ವಿಕಾರಹೊಂದಿದ ಬಗೆಗೆ ಸ್ಥೂಲವಾಗಿ ತಿಳಿದಿದ್ದೀರಿ. ಇವನ್ನು ಅಲ್ಪಸ್ವಲ್ಪ ವಿಕಾರವನ್ನು ಕೊನೆಯಲ್ಲಿ ಹೊಂದಿದ ತದ್ಭವ ಶಬ್ದಗಳೆಂದು ಹೇಳಬೇಕು (ಇವನ್ನು ಕೆಲವರು ಸಮಸಂಸ್ಕೃತ ಎಂದೂ ಹೇಳುವರೆಂದು ಹಿಂದೆ ತಿಳಿಸಿದೆ).
ಈಗ ಶಬ್ದದ ಮೊದಲು, ಮಧ್ಯದಲ್ಲಿಯೂ ಹೆಚ್ಚಾಗಿ ವಿಕಾರ ಹೊಂದಿದ ಅನೇಕ ಶಬ್ದಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ.
(viii) ಸಂಸ್ಕೃತದಲ್ಲಿ ಶ, ಷ ಗಳನ್ನು ಹೊಂದಿರುವ ಶಬ್ದಗಳು ಕನ್ನಡದಲ್ಲಿ ಸಕಾರವಾಗಿರುವ, ಮತ್ತು ಯಕಾರಕ್ಕೆ ಜಕಾರ ಬಂದಿರುವ ತದ್ಭವ ಶಬ್ದಗಳು (ಕನ್ನಡ ಪ್ರಕೃತಿಗಳು) ಆಗುತ್ತವೆ.
ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ |
ಶಶಿ | ಸಸಿ | ಔಷಧ | ಔಸದ | ಯೋಧ | ಜೋದ |
ಶಂಕಾ | ಸಂಕೆ | ಶೇಷಾ | ಸೇಸೆ | ಯುದ್ಧ | ಜುದ್ದ |
ಶಾಂತಿ | ಸಾಂತಿ | ಮಷಿ | ಮಸಿ | ಯವಾ | ಜವೆ |
ಆಕಾಶ | (i) ಆಗಸ (ii) ಆಕಾಸ |
ಪಾಷಾಣ | ಪಾಸಾಣ | ವಿದ್ಯಾ | ಬಿಜ್ಜೆ |
ಯಶ | ಜಸ | ವಂಧ್ಯಾ | ಬಂಜೆ | ||
ಶಿರ | ಸಿರ | ಯವನಿಕಾ | ಜವನಿಕೆ | ಧ್ಯಾನ | ಜಾನ |
ಕಲಶ | ಕಳಸ | ಯಮ | ಜವ | ಯತಿ | ಜತಿ |
ಶೂಲ | ಸೂಲ | ಕಾರ್ಯ | ಕಜ್ಜ | ಯಂತ್ರ | ಜಂತ್ರ |
ಶುಚಿ | ಸುಚಿ | ಯೌವನ | ಜವ್ವನ | ಯುಗ | ಜುಗ |
ಅಂಕುಶ | ಅಂಕುಸ | ಯಾತ್ರಾ | ಜಾತ್ರೆ | ಯುಗ್ಮ | ಜುಗುಮ |
ಶುಂಠಿ | ಸುಂಟಿ | ಯೋಗಿನ್ | ಜೋಗಿ | ವಿದ್ಯಾಧರ | ಬಿಜ್ಜೋದರ |
ಪಶು | ಪಸು | ರಾಶಿ | ರಾಸಿ | ಉದ್ಯೋಗ | ಉಜ್ಜುಗ |
ಹರ್ಷ | ಹರುಸ | ಶಾಣ | ಸಾಣೆ | ಸಂಧ್ಯಾ | ಸಂಜೆ |
ವರ್ಷ | ವರುಸ | ಪರಶು | ಪರಸು | ದ್ಯೂತ | ಜೂಜು |
ಭಾಷಾ | ಬಾಸೆ | ದಿಶಾ | ದೆಸೆ | ||
ವೇಷ | ವೇಸ | ದಶಾ | ದಸೆ |
(ix) ವರ್ಗದ ಪ್ರಥಮಾಕ್ಷರಗಳಿಂದ ಕೂಡಿದ ಅನೇಕ ಸಂಸ್ಕೃತ ಶಬ್ದಗಳು ಅದೇ ವರ್ಗದ ಮೂರನೆಯ ವರ್ಣಗಳಾಗುತ್ತವೆ. ಅವು ಇಂಥ ಸ್ಥಾನದಲ್ಲಿಯೇ ಇರಬೇಕೆಂಬ ನಿಯಮವಿಲ್ಲ.
ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ |
ಡಮರುಕ | ಡಮರುಗ | ಸೂಚಿ | ಸೂಜಿ | ಜಾತಿ | ಜಾದಿ |
ಆಕಾಶ | ಆಗಸ | ವಚಾ | ಬಜೆ | ವಸತಿ | ಬಸದಿ |
ದೀಪಿಕಾ | ದೀವಿಗೆ | ಕಟಕ | ಕಡಗ | ಚತುರ | ಚದುರ |
ಮಲ್ಲಿಕಾ | ಮಲ್ಲಿಗೆ | ಅಟವಿ | ಅಡವಿ | ಭೂತಿ | ಬೂದಿ |
ಪೈತೃಕ | ಹೈತಿಗೆ | ತಟ | ತಡ | ದೂತಿ | ದೂದಿ |
(x) ಸಂಸ್ಕೃತದಲ್ಲಿ ಮಹಾಪ್ರಾಣಾಕ್ಷರಗಳಿಂದ ಕೂಡಿದ ಅನೇಕ ಅಕ್ಷರಗಳು ಅಲ್ಪಪ್ರಾಣಗಳಾಗಿ ಕನ್ನಡ ಪ್ರಕೃತಿಗಳಾಗುತ್ತವೆ.
ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ |
ಛಂದ | ಚಂದ | ಘಟಕ | ಗಡಗೆ | ಧನ | ದನ |
ಛಾಂದಸ | ಚಾಂದಸ | ಘೋಷಣಾ | ಗೋಸಣೆ | ಧೂಪ | ದೂಪ |
ಛವಿ | ಚವಿ | ಗೋಷ್ಠಿ | ಗೊಟ್ಟಿ | ನಿಧಾನ | ನಿದಾನ |
ಕಂಠಿಕಾ | ಕಂಟಿಕೆ | ಘೂಕ | ಗೂಗೆ | ಧೂಸರ | ದೂಸರ |
ಶುಂಠಿ | ಸುಂಟಿ | ಅರ್ಘ | ಅಗ್ಗ | ಧೂಳಿ | ದೂಳಿ |
ಫಾಲ | ಪಾಲ | ಝಟತಿ | ಜಡಿತಿ | ವಿಧಿ | ಬಿದಿ |
ಫಣಿ | ಪಣಿ | ಢಕ್ಕೆ | ಡಕ್ಕೆ | ಕುಸುಂಭ | ಕುಸುಬೆ |
ಘಂಟಾ | ಗಂಟೆ | ರೂಢಿ | ರೂಡಿ |
(xi) ಸಂಸ್ಕೃತದ ಕೆಲವು ಖಕಾರವುಳ್ಳ ಶಬ್ದಗಳು ಗಕಾರಗಳಾಗಿ ಛಕಾರದ ಒತ್ತಿನಿಂದ ಕೂಡಿದ ಅಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿ ಠಕಾರವು ಡಕಾರವಾಗಿ, ಛಕಾರವು ಸಕಾರವಾಗಿಯೂ, ಥಕಾರವು ದಕಾರವಾಗಿಯೂ ಮತ್ತು ಟಕಾರವಾಗಿಯೂ, ಹಕಾರವಾಗಿಯೂ ರೂಪಾಂತರ ಹೊಂದಿ ಕನ್ನಡ ಪ್ರಕೃತಿಗಳಾಗುತ್ತವೆ.
ಉದಾಹರಣೆಗಳು:
ಖಕಾರ ಗಕಾರವಾಗುವುದಕ್ಕೆ | ಛಕಾರವು ಸಕಾರವಾಗಿರುವುದಕ್ಕೆ | ಠಕಾರ ಡಕಾರವಾದುದಕ್ಕೆ | |||
ಮುಖ | ಮೊಗ | ಛುರಿಕಾ | ಸುರಿಗೆ | ಕುಠಾರ | ಕೊಡಲಿ |
ವೈಶಾಖ | ಬೇಸಗೆ | ಛತ್ರಿಕಾ | ಸತ್ತಿಗೆ | ಮಠ | ಮಡ |
ಥಕಾರವು ದಕಾರವಾದುದಕ್ಕೆ | ಥಕಾರವು ಟಕಾರವಾದುದಕ್ಕೆ | ಥಕಾರವು ಹಕಾರವಾದುದಕ್ಕೆ | |||
ವೀಥಿ | ಬೀದಿ | ಗ್ರಂಥಿ | ಗಂಟು | ಗಾಥೆ | ಗಾಹೆ |
ಛಕಾರದ ಒತ್ತಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿದುದಕ್ಕೆ | |
ಇಚ್ಛಾ | ಇಚ್ಚೆ |
(xii) ಇನ್ನೂ ಅನೇಕ ವಿಕಾರ ರೂಪಗಳನ್ನು ಈ ಕೆಳಗೆ ಗಮನಿಸಿರಿ:-
ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ | |
ಕಪಿಲೆ | ಕವಿಲೆ | ಕುರುಂಟ | ಗೋರಟೆ | |
ತ್ರಿಪದಿ | ತಿವದಿ | ಮಾನುಷ್ಯ | ಮಾನಸ | |
ಪಿಶುನ | ಹಿಸುಣ | ಮರೀಚ | ಮೆಣಸು | |
ಪಿಪ್ಪಲಿ | ಹಿಪ್ಪಲಿ | ಅನ್ಯಾಯ | ಅನ್ನೆಯ | |
ಪಾದುಕಾ | ಹಾವುಗೆ | ಸಾಹಸ | ಸಾಸ | |
ಪರವಶ | ಹರವಸ | ಗಹನ | ಗಾನ | |
ಕಬಳ | ಕವಳ | ಕುಕ್ಕುಟ | ಕೋಳಿ | |
ಸಿಬಿಕಾ | ಸಿವಿಗೆ | ನಿಷ್ಠಾ | ನಿಟ್ಟೆ | |
ವಶಾ | ಬಸೆ | ಅಮೃತ | ಅಮರ್ದು | |
ವಂಚನಾ | ಬಂಚನೆ | ಅಂಗುಷ್ಠ | ಉಂಗುಟ | |
ವಸಂತ | ಬಸಂತ | ಪಿಷ್ಟ | ಹಿಟ್ಟು | |
ವೀಣಾ | ಬೀಣೆ | ಇಷ್ಟಕಾ | ಇಟ್ಟಿಗೆ | |
ವೀರ | ಬೀರ | ಕೂಷ್ಮಾಂಡ | ಕುಂಬಳ | |
ವಾಲ | ಬಾಲ | ದಾಡಿಮ | ದಾಳಿಂಬೆ | |
ಶ್ರವಣ | ಸವಣ | ತೃತೀಯಾ | ತದಿಗೆ | |
ಪ್ರಸರ | ಪಸರ | ಚತುರ್ಥೀ | ಚೌತಿ | |
ಪತಿವ್ರತೆ | ಹದಿಬದೆ | ವರ್ಧಮಾನ | ಬದ್ದವಣ
(ಔಡಲ) |
|
ವೇತ್ರ | ಬೆತ್ತ | |||
ಸೂತ್ರಿಕಾ | ಸುತ್ತಿಗೆ | ವಿನಾಯಕ | ಬೆನಕ | |
ವೃಷಭ | ಬಸವ | ಸುರಪರ್ಣೀ | ಸುರಹೊನ್ನೆ | |
ವ್ಯಾಘ್ರ | ಬಗ್ಗ | ಮರುವಕ | ಮರುಗ | |
ರಕ್ಷಾ | ರಕ್ಕೆ | ಸರ್ವ | ಸಬ್ಬ | |
ಪಕ್ಷ | ಪಕ್ಕ | ಶ್ರೀಖಂಡ | ಸಿರಿಕಂಡ | |
ಲಕ್ಷ | ಲಕ್ಕ | ವೀರಶ್ರೀ | ಬೀರಸಿರಿ | |
ಅಕ್ಷರ | ಅಕ್ಕರ | ಅಂದೋಲಿಕಾ | ಅಂದಣ | |
ಭಿಕ್ಷಾ | ಬಿಕ್ಕೆ | ಬಾಹುವಲಯ | ಬಾಹುಬಳೆ | |
ಕ್ಷಪಣ | ಸವಣ | ತ್ರಿಗುಣ | ತಿಗುಣ | |
ಕ್ಷಾರ | ಕಾರ | ತ್ರಿವಳಿ | ತಿವಳಿ | |
ಯಮಳ | ಜವಳ | ವಲ್ಲಿ | ಬಳ್ಳಿ | |
ಚರ್ಮ | ಸಮ್ಮ | ವಸತಿ | ಬಸದಿ | |
ಚರ್ಮಕಾರ | ಸಮ್ಮಕಾರ | ಶೀರ್ಷಕ | ಸೀಸಕ | |
ಶಿಲ್ಪಿಗ | ಚಿಪ್ಪಿಗ | ವರ್ತಿ | ಬತ್ತಿ | |
ಶಷ್ಕುಲಿ | ಚಕ್ಕುಲಿ | ಕರ್ತರಿ | ಕತ್ತರಿ | |
ಹಂಸ | ಅಂಚೆ | ಶರ್ಕರಾ | ಸಕ್ಕರೆ | |
ತುಳಸಿ | ತೊಳಚಿ | ಕರ್ಕಶ | ಕಕ್ಕಸ | |
ಕಾಂಸ್ಯ | ಕಂಚು | ರಾಕ್ಷಸ | ರಕ್ಕಸ | |
ನಿತ್ಯ | ನಿಚ್ಚ | ಅರ್ಕ | ಎಕ್ಕ | |
ವಿಸ್ತಾರ | ಬಿತ್ತರ | ದ್ರೋಣಿ | ದೋಣಿ | |
ವ್ಯವಸಾಯ | ಬೇಸಾಯ | ಭ್ರಮರ | ಬವರ | |
ಶಯ್ಯಾ | ಸಜ್ಜೆ | ಪ್ರಭಾ | ಹಬೆ | |
ಜಟಾ | ಜಡೆ | ಪ್ರಣಿತೆ | ಹಣತೆ | |
ತೈಲಿಕ | ತೆಲ್ಲಿಗ | ಪುಸ್ತಕ | ಹೊತ್ತಗೆ | |
ಇಳಾ | ಎಳೆ | ಕುಸ್ತುಂಬರ | ಕೊತ್ತುಂಬರಿ | |
ಸ್ಪರ್ಶ | ಪರುಸ | ಬ್ರಹ್ಮ | ಬೊಮ್ಮ | |
ಸ್ಪಟಿಕ | ಪಳಿಗೆ | ರತ್ನ | ರನ್ನ | |
ಶ್ಮಶಾನ | ಮಸಣ | ಪ್ರಜ್ವಲ | ಪಜ್ಜಳ | |
ತಾಂಬೂಲ | ತಂಬುಲ | ಬಿಲ್ವಪತ್ರ | ಬೆಲ್ಲವತ್ತ | |
ಆರಾಮ | ಅರವೆ | ಕನ್ಯಕಾ | ಕನ್ನಿಕೆ | |
ಬಂಧೂಕ | ಬಂದುಗೆ | ಮೃತ್ಯು | ಮಿಳ್ತು | |
ಗೋಧೂಮ | ಗೋದುವೆ | ಕಾವ್ಯ | ಕಬ್ಬ | |
ಬರ್ಭೂರ | ಬೊಬ್ಬುಳಿ | ದಂಷ್ಟ್ರ | ದಾಡೆ | |
ಪ್ರಯಾಣ | ಪಯಣ | ಕಹಳಾ | ಕಾಳೆ | |
ದ್ವಿತೀಯಾ | ಬಿದಿಗೆ | ಋಷಿ | ರಿಸಿ | |
ಅಶೋಕ | ಅಸುಗೆ | ಮೃಗ | ಮಿಗ | |
ಉದ್ಯೋಗ | ಉಜ್ಜುಗ | ಭೃಂಗಾರ | ಬಿಂಗಾರ | |
ಸಂಜ್ಞಾ | ಸನ್ನೆ | ಪ್ರಗ್ರಹ | ಹಗ್ಗ | |
ಯಜ್ಞಾ | ಜನ್ನ | ಆಶ್ಚರ್ಯ | ಅಚ್ಚರಿ | |
ಕ್ರೌಂಚ | ಕೊಂಚೆ | ಸ್ವರ್ಗ | ಸಗ್ಗ | |
ಸುಧಾ | ಸೊದೆ | ಜ್ಯೋತಿಷ | ಜೋಯಿಸ | |
ಭುಜಂಗ | ಬೊಜಂಗ | ಅಮಾವಾಸ್ಯಾ | ಅಮಾಸೆ | |
ಕೌಪೀನ | ಕೋವಣ | ಧ್ವನಿ | ದನಿ | |
ಮಯೂರ | ಮೋರ | ಜ್ವರ | ಜರ | |
ಗೂರ್ಜರ | ಗುಜ್ಜರ | ಸರಸ್ವತಿ | ಸರಸತಿ | |
ಆರ್ಯ | ಅಜ್ಜ | ವರ್ಧಕಿ | ಬಡಗಿ | |
ವ್ಯವಹಾರ | ಬೇಹಾರ | ಕಾಷ್ಠ | ಕಡ್ಡಿ | |
ನಿಯಮ | ನೇಮ | ಚತುರ್ದಂತ | ಚೌದಂತ | |
ಪತ್ತನ | ಪಟ್ಟಣ | ದೃಷ್ಟಿ | ದಿಟ್ಟ | |
ಅತಸೀ | ಅಗಸೆ | ದಿಶಾಬಲಿ | ದೆಸೆಬಲಿ | |
ತ್ವರಿತ | ತುರಿಹ | ಏಕಶರ | ಎಕ್ಕಸರ | |
ಆಜ್ಞೆ | ಆಣೆ | ಚತುಷ್ಕ | ಚೌಕ | |
ಶಾಣ | ಸಾಣೆ | ಚತುರ್ವೇದಿ | ಚೌವೇದಿ | |
ಜೀರಿಕಾ | ಜೀರಿಗೆ | ಸಹದೇವ | ಸಾದೇವ | |
ವಿಜ್ಞಾನ | ಬಿನ್ನಣ | ಸಹವಾಸಿ | ಸಾವಾಸಿ | |
ಕಲಮಾ | ಕಳವೆ | ಮಹಾಪಾತಕ | ಮಾಪಾತಕ | |
ಕಂಬಲ | ಕಂಬಳಿ | ಪಂಜರಪಕ್ಷಿ | ಹಂಜರವಕ್ಕಿ | |
ಅರ್ಗಲ | ಅಗುಳಿ | ದಿಶಾಬಲಿ | ದೆಸೆವಲಿ | |
ಕುದ್ದಾಲ | ಗುದ್ದಲಿ | ರತ್ನಮಣಿ | ರನ್ನವಣಿ | |
ದ್ಯೂತ | ಜೂಜು | ಅಂತಃಪುರ | ಅಂತಪುರ | |
ಗ್ರಂಥಿ | ಗಂಟು | ಅಚ್ಚಮಲ್ಲಿಕಾ | ಅಚ್ಚಮಲ್ಲಿಗೆ | |
ಕುಕ್ಷಿ | ಕುಕ್ಕೆ | ಅಕ್ಷರಮಾಲಾ | ಅಕ್ಕರಮಾಲೆ | |
ಚರ್ಮಪಟ್ಟಿಕಾ | ಚಮ್ಮಟಿಗೆ | ಕ್ಷೀರಾಗಾರಾ | ಕೀಲಾರ | |
ದೇವಕುಲ | ದೇಗುಲ | ಗೂಢಾಗಾರ | ಗೂಡಾರ | |
ದೀಪಾವಳಿಕಾ | ದೀವಳಿಗೆ |
ಹೀಗೆ ಅನೇಕ ಸಂಸ್ಕೃತ-ಪ್ರಾಕೃತ ಭಾಷಾಶಬ್ದಗಳು ಕನ್ನಡಕ್ಕೆ ಬರುವಾಗ ರೂಪಾಂತರ ಹೊಂದಿ ಬರುವುದನ್ನು ಇದುವರೆಗೆ ಸ್ಥೂಲವಾಗಿ ಹೇಳಲಾಗಿದೆ.
ಇದುವರೆಗೆ ಸಂಸ್ಕೃತದ ಅನೇಕ ಶಬ್ದಗಳು ರೂಪಾಂತರ ಹೊಂದಿ ಕನ್ನಡಕ್ಕೆ ಬಂದ ಬಗೆಗೆ ತಿಳಿದಿರುವಿರಿ. ಕನ್ನಡದ ಅನೇಕ ಶಬ್ದಗಳು ಕಾಲಕಾಲಕ್ಕೆ ರೂಪಾಂತರ ಹೊಂದಿವೆ.
ಹಳೆಗನ್ನಡದ ಅನೇಕ ಶಬ್ದಗಳು ಈಗಿನ ಕನ್ನಡದಲ್ಲಿ (ಹೊಸಗನ್ನಡದಲ್ಲಿ) ರೂಪಾಂತರ ಹೊಂದಿ ಪ್ರಯೋಗವಾಗುತ್ತಿವೆ. ಅವುಗಳ ಬಗೆಗೆ ಈಗ ಸ್ಥೂಲವಾಗಿ ಮುಖ್ಯವಾದ ಕೆಲವು ಅಂಶಗಳನ್ನು ನೀವು ಅವಶ್ಯ ತಿಳಿಯಬೇಕು.
(೧) ಪಕಾರಾದಿಯಾದ ಅನೇಕ ಶಬ್ದಗಳು ಹಕಾರಾದಿಯಾಗುತ್ತವೆ.
ಹಳಗನ್ನಡ | ಹೊಸಗನ್ನಡ | ಹಳಗನ್ನಡ | ಹೊಸಗನ್ನಡ |
ಪಾಲ್ | ಹಾಲು | ಪಂಬಲಿಸು | ಹಂಬಲಿಸು |
ಪಾವ್ | ಹಾವು | ಪಣೆ | ಹಣೆ |
ಪಾಸು | ಹಾಸು | ಪರಡು | ಹರಡು |
ಪರಿ | ಹರಿ | ಪರದ | ಹರದ |
ಪರ್ಬು | ಹಬ್ಬು | ಪಲವು | ಹಲವು |
ಪೊರಳ್ | ಹೊರಳು | ಪಲ್ಲಿಲಿ | ಹಲ್ಲಿಲ್ಲದ |
ಪೊಳೆ | ಹೊಳೆ | ಪಲ್ಲಿಲಿವಾಯ್ | ಹಲ್ಲಿಲದ ಬಾಯಿ |
ಪೊರೆ | ಹೊರೆ | ಪವ್ವನೆ | ಹವ್ವನೆ |
ಪೂ | ಹೂ | ಪಳ್ಳ | ಹಳ್ಳ |
ಪನಿ | ಹನಿ | ಪಕ್ಕಿ | ಹಕ್ಕಿ |
ಪಿಂಡು | ಹಿಂಡು | ಪಗೆ | ಹಗೆ |
ಪತ್ತು | ಹತ್ತು | ಪೊರಮಡು | ಹೊರಹೊರಡು |
ಪುಲಿ | ಹುಲಿ | ಪೆರ್ಚು | ಹೆಚ್ಚು |
ಪಣ್ | ಹಣ್ಣು | ಪುಗು | ಹುಗು |
ಪಂದೆ | ಹಂದೆ | ಪೊಗು | ಹೊಗು |
ಪಂದರ | ಹಂದರ | ಪಿಂಗು | ಹಿಂಗು |
ಪಗಲ್ | ಹಗಲು | ಪಿಂತೆ | ಹಿಂದೆ |
ಪಂದಿ | ಹಂದಿ | ಪಳಿ | ಹಳಿ |
ಪಂದೆ | ಹಂದೆ | ಪೋಳ್ | ಹೋಳು |
ಪೊಸ | ಹೊಸ | ಪಲ್ಲಿ | ಹಲ್ಲಿ |
ಪೋಗು | ಹೋಗು | ಪಲ್ | ಹಲ್ಲು |
ಪರ್ಚು | ಹಂಚು | ಪಸಿ | ಹಸಿ |
ಪರಸು | ಹರಸು | ಪಸುರ್ | ಹಸುರು |
ಪೀರ್ | ಹೀರು | ಪಾಡು | ಹಾಡು |
ಪುದುಗು | ಹುದುಗು | ಪುರ್ಬು | ಹುಬ್ಬು |
ಪಿರಿಯ | ಹಿರಿಯ | ಪರ್ಬು | ಹಬ್ಬು |
ಪದುಳ | ಹದುಳ | ಪೆರ್ಮೆ | ಹೆಮ್ಮೆ |
ಪರ್ದು | ಹದ್ದು | ಪಿರಿದು | ಹಿರಿದು |
ಪರ್ಬುಗೆ | ಹಬ್ಬುವಿಕೆ |
ಮೇಲಿನ ಉದಾಹರಣೆಗಳಲ್ಲಿ ಕೆಲವು ಕಡೆ ಅಂತ್ಯದಲ್ಲಿರುವ ಲ್ ವ್ ಎಂಬ ವ್ಯಂಜನಾಂತ ಶಬ್ದಗಳು ಉಕಾರಾಂತಗಳಾಗಿರುವುದನ್ನು ಗಮನಿಸಿರಿ. (ಉದಾ:- ಪಾಲ್-ಹಾಲು, ಪಾವ್-ಹಾವು__ಇತ್ಯಾದಿ)
ಈಗ ಕೊನೆಯ ವ್ಯಂಜನಗಳು ಯಾವ ಯಾವ ವ್ಯತ್ಯಾಸ ಹೊಂದುತ್ತವೆಂಬುದನ್ನು ತಿಳಿಯಿರಿ.
(೨) ನ, ಣ, ಲ, ರ, ಳ ವ್ಯಂಜನಗಳು ಅಂತ್ಯದಲ್ಲಿ ಉಳ್ಳ ಕೆಲವು ಶಬ್ದಗಳು ಉಕಾರಾಂತಗಳಾಗುತ್ತವೆ. ಕೆಲವು ಇದೇ ಇನ್ನೊಂದು ವ್ಯಂಜನದಿಂದ ಕೂಡಿ ದ್ವಿತ್ವ (ಒತ್ತಕ್ಷರ) ಗಳೆನಿಸುತ್ತವೆ. ಯಕಾರಾಂತಗಳು ಇಕಾರಾಂತಗಳಾಗುತ್ತವೆ ಮತ್ತು ದ್ವಿತ್ವವುಳ್ಳ ವುಗಳಾಗುತ್ತವೆ.
ಉದಾಹರಣೆಗೆ:-
(i) ನಕಾರಾಂತವು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದೊಡನೆ ಉಕಾರಾಂತ ವಾಗುವುದಕ್ಕೆ:-
ನಾನ್-ನಾನು | ನೀನ್-ನೀನು |
ಏನ್-ಏನು | ಅವನ್-ಅವನು |
ಆನ್-ಆನು | ತಿನ್-ತಿನ್ನು |
ಸೀನ್-ಸೀನು | ಪೊನ್-ಪೊನ್ನು (ಹೊನ್ನು) |
ತಾನ್-ತಾನು | ಎನ್-ಎನ್ನು |
(ii) ಣಕಾರಾಂತಗಳು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದಿಂದ ಕೂಡಿದ ಉಕಾರಾಂತಗಳಾಗುವುದಕ್ಕೆ:-
ಕಣ್-ಕಣ್ಣು | ಪುಣ್-ಹುಣ್ಣು |
ಉಣ್-ಉಣ್ಣು | ಪಣ್-ಹಣ್ಣು |
ಮಣ್-ಮಣ್ಣು | ಮಾಣ್-ಮಾಣು |
ಪೆಣ್-ಹೆಣ್ಣು | ಕಾಣ್-ಕಾಣು |
(iii) ಲಕಾರಂತ ಶಬ್ದಗಳು ದ್ವಿತ್ವದಿಂದ ಕೂಡಿ ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವವಿಲ್ಲದೆ ಉಕಾರಾಂತಗಳಾಗುವುದಕ್ಕೆ
ಬಿಲ್-ಬಿಲ್ಲು | ಅರಲ್-ಅರಲು | ಸೊಲ್-ಸೊಲ್ಲು |
ನಿಲ್-ನಿಲ್ಲು | ಸೋಲ್-ಸೋಲು | ಕಾಲ್-ಕಾಲು |
ಕಲ್-ಕಲ್ಲು | ಒರಲ್-ಒರಲು | ಪಾಲ್-ಪಾಲು |
ಪುಲ್-ಹುಲ್ಲು | ಜೋಲ್-ಜೋಲು | ಸಿಡಿಲ್-ಸಿಡಿಲು |
ಕೊಲ್-ಕೊಲ್ಲು | ನೂಲ್-ನೂಲು | ಅರಿಲ್-ಅರಿಲು |
ಮಡಿಲ್-ಮಡಿಲು | ಪೋಲ್-ಪೋಲು | ನರಲ್-ನರಲು |
ಬಳಲ್-ಬಳಲು | ಚಲ್-ಚಲ್ಲು |
(iv) ಳಕಾರಾಂತಗಳಾದ ಶಬ್ದಗಳು ಉಕಾರಾಂತಗಳಾಗುವುದಕ್ಕೆ ಮತ್ತು ಇನ್ನೊಂದು ಳಕಾರದೊಡನೆ ಉಕಾರಾಂತಗಳಾಗುವುದಕ್ಕೆ
ಮರಳ್-ಮರಳು | ಉಗುಳ್-ಉಗುಳು | ಉರುಳ್-ಉರುಳು |
ಮರುಳ್-ಮರುಳು | ತಳ್-ತಳ್ಳು | ಪೊರಳ್-ಪೊರಳು |
ಸೀಳ್-ಸೀಳು | ಮುಳ್-ಮುಳ್ಳು | ನುಸುಳ್-ನುಸುಳು |
ತಾಳ್-ತಾಳು | ಜೊಳ್-ಜೊಳ್ಳು | ಕೂಳ್-ಕೂಳು |
ಮುಸುಳ್-ಮುಸುಳು | ಪುರುಳ್-ಹುರುಳು | ಕೇಳ್-ಕೇಳು |
ಒರಳ್-ಒರಳು | ಆಳ್-ಆಳು | ಪಾಳ್-ಹಾಳು |
ಅರಳ್-ಅರಳು | ಬಗುಳ್-ಬಗುಳು (ಬೊಗಳು) |
ಕಳ್-ಕಳ್ಳು |
ಬಾಳ್-ಬಾಳು | ಕೊಳ್-ಕೊಳ್ಳು |
(v) ರಕಾರಾಂತಗಳಾದ ಶಬ್ದಗಳು ಉಕಾರಾಂತಗಳಾಗುವುದಕ್ಕೆ
ನಾರ್-ನಾರು | ಬಸಿರ್-ಬಸಿರು |
ಕಾರ್-ಕಾರು | ತಳಿರ್-ತಳಿರು |
ಸೋರ್-ಸೋರು | ಮೊಸರ್-ಮೊಸರು |
ಸೇರ್-ಸೇರು | ಬೆಮರ್-ಬೆವರು (ಬೆಮರು) |
ತೆಮರ್-ತೆವರು | ಉಸಿರ್-ಉಸಿರು |
(vi) ಯಕಾರಾಂತ ಶಬ್ದಗಳು ಇಕಾರಾಂತ ಮತ್ತು ದ್ವಿತ್ವದಿಂದ ಕೂಡಿದ ಇಕಾರಾಂತ ಗಳಾಗುವುದಕ್ಕೆ
ತಾಯ್-ತಾಯಿ | ಕಾಯ್-ಕಾಯಿ | ಬಯ್-ಬಯ್ಯಿ |
ನಾಯ್-ನಾಯಿ | ಕಯ್-ಕಯ್ಯಿ | ಪೊಯ್-ಪೊಯ್ಯಿ |
ಸಾಯ್-ಸಾಯಿ | ಮೆಯ್-ಮೆಯ್ಯಿ | ನೆಯ್-ನೆಯ್ಯಿ |
(vii) ಅನುಸ್ವಾರದಿಂದ ಕೂಡಿದ ಎಷ್ಟೋ ಶಬ್ದಗಳು ಅದಿಲ್ಲದೆ ಹೊಸಗನ್ನಡದಲ್ಲಿ ರೂಪಾಂತರವಾಗಿವೆ.
ತೋಂಟ-ತೋಟ | ನೊರಂಜು-ನೊರಜು | ಸಿಡುಂಬು-ಸಿಡುಬು |
ಕುಸುಂಬೆ-ಕುಸುಬೆ | ತುಳುಂಕು-ತುಳುಕು | ಸೇಂದು-ಸೇದು |
ಪೊಸಂತಿಲ್-ಹೊಸತಿಲು | ಬಣಂಜಿಗ-ಬಣಜಿಗ | ಕರಂಡಗೆ-ಕರಡಗೆ |
ಬಣಂಬೆ-ಬಣವೆ | ತುರುಂಬು-ತುರುಬು | ಜಿನುಂಗು-ಜಿನುಗು |
ಕೊಡಂತಿ-ಕೊಡತಿ | ನಾಂದು-ನಾದು | ಮುಸುಂಕು-ಮುಸುಗು |
ಕವುಂಕುಳ್-ಕಂಕುಳ | ಪಲುಂಬು-ಹಲುಬು | ಸೆರೆಂಗು-ಸೆರಗು |
ಒರಂತೆ-ಒರತೆ | ಮೀಂಟು-ಮೀಟು | ಬೆಡಂಗು-ಬೆಡಗು |
ತೋಂಟಿಗ-ತೋಟಿಗ |
(viii) ಇನ್ನೂ ಕೆಲವು ರೂಪಾಂತರಗಳನ್ನು ನೋಡಿರಿ.
ಕಳ್ತೆ-ಕರ್ತೆ-ಕತ್ತೆ | ಎಳ್ನೆಯ್- ಎಣ್ಣೆ |
ಗಳ್ದೆ-ಗರ್ದೆ-ಗದ್ದೆ | ಬೆಳ್ನೆಯ್- ಬೆಣ್ಣೆ |
ಪೊಳ್ತು-ಪೊತ್ತು- ಹೊತ್ತು | ಕಾಣ್ಕೆ-ಕಾಣಿಕೆ |
ಅಪ್ಪುದು- ಅಹುದು- ಹೌದು | ಪೂಣ್ಕೆ-ಪೂಣಿಕೆ (ಹೂಣಿಕೆ) |
ತನತ್ತು-ತನ್ನತು- ತನ್ನ | ಬಳಲ್ಕೆ-ಬಳಲಿಕೆ |
ನಿನತ್ತು-ನಿನ್ನತು-ನಿನ್ನ | ಒರ್ಮೆ-ಒಮ್ಮೆ |
ಎನಿತ್ತು-ಎನಿತು, ಎಸುಟು-ಎಷ್ಟು | ನುರ್ಗು-ನುಗ್ಗು |
ಅನಿತ್ತು- ಅನಿತು, ಅಸುಟು- ಅಷ್ಟು | ತರ್ಗು-ತಗ್ಗು |
ಚುರ್ಚು- ಚುಚ್ಚು | ಗುರ್ದು-ಗುದ್ದು |
ಕರ್ಚು-ಕಚ್ಚು | ಪರ್ದು-ಹದ್ದು |
ಬಿರ್ದು- ಬಿದ್ದು | ತೋರ್ಪ-ತೋರುವ |
ಉರ್ದು- ಉದ್ದು | ಕಾರ್ದ-ಕಾರಿದ |
ಇರ್ಪ- ಇರುವ | ಅಲ್ಲಂ-ಅಲ್ಲ |
ಪೀರ್ದಂ-ಹೀರಿದನು | ತಣ್ಣು-ತಂಪು |
ಸೇರ್ದಂ-ಸೇರಿದನು | ತೆಳು- ತಿಳುವು |
ಕರ್ಪು-ಕಪ್ಪು | ನೇರ್ಪು- ನೇರ |
ಕೆರ್ಪು-ಕೆರ | ಕಲ್ತು-ಕಲಿತು |
ಬೆಳ್ಪು- ಬಿಳುಪು |
[button link=”http://www.karunaduexams.com/wp-content/uploads/2016/09/ಗ್ರಾ-ಪಂ-ಅ-ಅ-ಮತ್ತು-ಕಾರ್ಯದರ್ಶಿ-ಗ್ರೇಡ್-ಕನ್ನಡ-ವ್ಯಾಕರಣ-5.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Continued..
Thanks this information Sir…
Thank you Karunadu team its very useful but some gramatically mistakes are their.
ex: actual word aptami(it is sapthami)
Ramannu, Bhimannu (Ramanu, Bhimanu)
ತುಂಬಾ ಧನ್ಯವಾದಗಳು ಶ್ರೇಷ್ಠವಾದ ಪ್ರಯತ್ನ
Comment
Very good information sir.thanks
Thanks for all web developer’s
Thanks for all web developer’s
OK
Thank you sir these was helpful in my activity questions
Thank you very very much sir
Thanks sir
Thank you….. Its really good information to all
Please Send All Notes
lease Send Kannada Grammmer
Full notes cover admele download madkobodu plz wait for two days
downloading option is available .. under everyday contents..
To download click the blue button
realy nice thank u so much
realy nice thank u so much
hi, karunadu team it’s very useful and worthy information thank you very much karunadu team keep up the great work
Thank u very much
ಉಪಯುಕ್ತ ಮಾಹಿತಿ ತುಂಬಾ ಚೆನ್ನಾಗಿದೆ ಧನ್ಯವಾದಗಳು ಗುರೂಜಿ,ನಮಸ್ತೆ
Ty sir……
Really good work from the developer, I’m very glad for this website, really it helps for rural students mainly, and for all who are preparing for exams, you are doing great job sir, sharing is caring, really this website is proving.
Thank u
Good
Comment
very nice sir
Super Web really I enjoyed 3
ಮಾಹಿತಿ ಅತ್ಯಂತ ಸಮಪಕ ವಾಗಿದೆ.ನಿಮ್ಮ ಪ್ರಯತ್ನಕ್ಕೆಧನ್ಯವಾದಗಳು
Thanks sir
Thank u so much
ಧನ್ಯವಾದಗಳು
Sir when will be published english grammar,
Very soon
Tq so much
hi
ನಿಮ್ಮ ಪ್ರಯತ್ನ ಶ್ಲಾಘನೀಯ. ಕನ್ನಡಕ್ಕೆ ಇಂಥದ್ದೊಂದು ಅಂತರ್ಜಾಲ ಪುಟದ ಅವಶ್ಯಕತೆ ತುಂಬಾ ಇತ್ತು. ನೀವು ಆ ಕೊರಗನ್ನು ನೀಗಿಸಿದ್ದೀರಿ
Comment
Thank u sir.
ತುಂಬಾ ಧನ್ಯವಾದಗಳು.
Thank u sir
THANK U SO MUCH SIR VERY GOOD INFORMATION
You Guys simply awesome …Thanks for giving such a webside … I wish to continue this work its helpful Lot.. particularly Rural students …
really good informatin sir.rural students ge neejavaglu help agutte sir.thank you…..
Supper nots sir
Thanks plz English grammer upload madi plz
Thank u very much sir. Please upload English Grammer
AMOGA MAHITI
It’s very nice
Thanks sir very good information
And please give me a English exam oriented grammar
thanku so much sir very good informtion.
Thank u English grammar upload Madi plz
Really good Well information I gratitude to karunaduexam
Please give the information of English grammar thank you
Really good information sir……
Sir pls send sda Fda old question paper
Thank you so much sir
ಗುರುಗಳೇ ಇಂಥ ಮಾಹಿತಿ ಕೊಟ್ಟಿದ್ದಕ್ಕೆ ಟೀಮ್ಬಾ ತಮಗೆ ತುಂಬಾ ಧನ್ಯ ವಾದಗಳು.
dundamma dundumh39@email.com
Thanks
thank u so much sir it really help us a lot
ok ok
ಈ ರೀತಿಯ ಮಾಹಿತಿಯನ್ನು ಒದಗಿಸಿದರೆ ಕನ್ನಡ ಕಲಿಕೆ ಬಹಳ ಸುಲಬ
ಅನಂತ ಧನ್ಯವಾದಗಳೂ
Thank you
ವ್ಯಾಕರಣದ ಬಗ್ಗೆ ತಿಳಿದುಕೊಳ್ಳಲು ತುಂಬಾ ಉಪಯುಕ್ತವಾಗಿದೆ.
ಧನ್ಯವಾದಗಳು.
Danyavadagalu
Nimma upayuktha maahithi haagu sahakaarakke nammella grameena abyarthigala paravaagi nooru pranaamagalu.
Great work by Karunaadu team…
“Sarve Janah Sukinobhavanthu””
Thank u sir
Hi back end team ctrl+shift J is still not disabled 😉
ಉತ್ತಮವಾಗಿದೆ ಸರ್ ಧನ್ಯವಾದ
Thanks for the information
Its very use full thanks u sir
it is use full thanks u sir
THANKS
Super knowledge baratte sir thanks sir
Nice sir
Sir tumb tumb thanks namge vakayagalu bagge mahiti kodi
Hi
Thank you sir/medam
Thank you sir
Really good information thank you sir,
Bhoomi tatsama tadbava room kalsi
Comment
thank you vare much sir
Hi sir thanks
Thank u so much karunadu team
thank you it helped me me to do project very easily
Thank you sir
its wonderfull ,i am proud of karunadu. thank you so much
Sir swatantra padadaa bhavanama roopa yavudu ?
Thanks ok sir sach a good informetion
Very usefull
It is good work in Kannada language it need for Kannada and thank you all karunadu team
Thanku veery muchM
good work sir thanks
Very usefull information
Comment
super app it’s very useful …..
good thik sir thank you
Thanks sir
Really useful for the needy like us.. We really thankful to Karunadu exams
Thank u so much for your help with this one of the most important thing
Thank you sir and all concern members of the karanaduexam website
Must read information
Thank you sir
Thank you sir
Comment
Thank you so much for your help with this one of the most important thing
ಧನ್ಯವಾದಗಳು ನನಗೆ ಈ ಮಾಹಿತಿಯಿಂಧ ತುಂಬಾ ಉಪಯೋಗವಾಗಿದೆ.
ತುಂಬಾ ಉಪಯುಕ್ತವಾಗಿದೆ.ಧನ್ಯವಾದಗಳು
Comment
This site helpfull to students and comparative exam writers.thanks to this