ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 12, 2016
Question 1 |
1. ಈ ಕೆಳಗಿನ ದೇಶಗಳನ್ನು ಗಮನಿಸಿ:
I) ಚೀನಾ
II) ಭಾರತ
III) ದಕ್ಷಿಣ ಕೊರಿಯಾ
IV) ಪಾಕಿಸ್ತಾನ
ಈ ಮೇಲಿನ ಯಾವ ರಾಷ್ಟ್ರಗಳು “ಏಷ್ಯಾ ಫೆಸಿಫಿಕ್ ವ್ಯಾಪಾರ ಒಪ್ಪಂದ (APTA)”ಕ್ಕೆ ಸಂಬಂಧಿಸಿವೆ?
I & II | |
II & III | |
I, II & III | |
ಮೇಲಿನ ಎಲ್ಲವೂ |
ಏಷ್ಯಾ ಫೆಸಿಫಿಕ್ ವ್ಯಾಪಾರ ಒಪ್ಪಂದ (APTA)ಕ್ಕೆ 1975 ರಲ್ಲಿ ಸಹಿಹಾಕಲಾಗಿದೆ. ಮುಂಚೆ ಈ ಒಪ್ಪಂದವನ್ನು ಬ್ಯಾಂಕಾಕ್ ಒಪ್ಪಂದವೆಂದು ಕರೆಯಲಾಗುತ್ತಿದ್ದು, ನವೆಂಬರ್ 2, 2005 ರಲ್ಲಿ ಏಷ್ಯಾ ಫೆಸಿಫಿಕ್ ವ್ಯಾಪಾರ ಒಪ್ಪಂದವೆಂದು ಮರುನಾಮಕರಣ ಮಾಡಲಾಗಿದೆ. ಇದು ಏಷ್ಯಾ ಮತ್ತು ಫೆಸಿಫಿಕ್ ದೇಶಗಳ ನಡುವೆ ಸಹಿ ಹಾಕಲಾದ ಅತ್ಯಂತ ಹಳೆಯ ಆದ್ಯತಾ ವ್ಯಾಪಾರ ಒಪ್ಪಂದವಾಗಿದೆ. ಭಾರತ, ಚೀನಾ, ಲಾವೋಸ್, ಬಾಂಗ್ಲದೇಶ ಮತ್ತು ದಕ್ಷಿಣ ಕೊರಿಯಾ ಈ ಒಪ್ಪಂದಕ್ಕೆ ಸಹಿ ಹಾಕಿರುವ ಆರು ದೇಶಗಳಾಗಿವೆ. ಇತ್ತೀಚೆಗೆ ಮಂಗೋಲಿಯಾವನ್ನು ಈ ಒಪ್ಪಂದಕ್ಕೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದ್ದು, ಈ ಒಪ್ಪಂದಕ್ಕೆ ಕೈಜೋಡಿಸಲಿರುವ ಏಳನೇ ರಾಷ್ಟ್ರವಾಗಲಿದೆ.
Question 2 |
2. 2016 ಭಾರತ-ಅಮೆರಿಕಾ ಆರ್ಥಿಕ ಶೃಂಗಸಭೆ ಈ ಕೆಳಗಿನ ಯಾವ ನಗರದಲ್ಲಿ ನಡೆಯಲಿದೆ?
ನವದೆಹಲಿ | |
ಡೆಹ್ರೂಡಾನ್ | |
ವಾಷಿಂಗ್ಟನ್ | |
ನ್ಯೂಯಾರ್ಕ್ |
2016 ಭಾರತ-ಅಮೆರಿಕಾ ಆರ್ಥಿಕ ಶೃಂಗಸಭೆಯು ಸೆಪ್ಟೆಂಬರ್ 14 ರಿಂದ ಎರಡು ದಿನಗಳ ಕಾಲ ನವದೆಹಲಿಯಲ್ಲಿ ನಡೆಯಲಿದೆ. ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವು ಸಲುವಾಗಿ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ಅಮೆರಿಕಾದ ಭಾರತದ ರಾಯಭಾರಿ ರಿಚರ್ಡ್ ವರ್ಮಾ ಅವರು ಈ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ.
Question 3 |
3. ಮೊಘಲರ ಕಾಲದಲ್ಲಿ ಈ ಕೆಳಗಿನ ಯಾವ ಬಂದರನ್ನು “ಗೇಟ್ ಆಫ್ ಮೆಕ್ಕಾ” ಎಂದು ಕರೆಯಲಾಗುತ್ತಿತ್ತು?
ಸೂರತ್ | |
ಕ್ಯಾಲಿಕಟ್ | |
ಕ್ಯಾಂಬೆ | |
ಕೊಚ್ಚಿ |
ಸೂರತ್ ಬಂದರನ್ನು ಮೊಘಲರ ಕಾಲದಲ್ಲಿ “ಗೇಟ್ ಆಫ್ ಮೆಕ್ಕಾ” ಎಂದು ಕರೆಯಲಾಗುತ್ತಿತ್ತು. ಯಾಕೆಂದರೆ ಮೆಕ್ಕಾಗೆ ಯಾತ್ರೆಯನ್ನು ಇಲ್ಲಿಂದಲೇ ಕೈಗೊಳ್ಳಲಾಗುತ್ತಿದ್ದ ಕಾರಣ ಇದನ್ನು ಗೇಟ್ ಆಫ್ ಮೆಕ್ಕಾ ಎನ್ನಲಾಗುತ್ತಿತ್ತು.
Question 4 |
4. ಉತ್ತರಪ್ರದೇಶದ ಮಹತ್ವಕಾಂಕ್ಷಿ “ಸಮಾಜವಾದಿ ಪಿಂಚಣಿ ಯೋಜನೆ”ಯ ರಾಯಭಾರಿಯನ್ನಾಗಿ ಯಾರನ್ನು ನೇಮಕಮಾಡಲಾಗಿದೆ?
ಪಿ ವಿ ಸಿಂಧು | |
ಸಚಿನ್ ತೆಂಡೂಲ್ಕರ್ | |
ವಿದ್ಯಾ ಬಾಲನ್ | |
ಸಲ್ಮಾನ್ ಖಾನ್ |
ಉತ್ತರ ಪ್ರದೇಶದ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಸಮಾಜವಾದಿ ಪಿಂಚಣಿ ಯೋಜನೆಯ ರಾಯಭಾರಿಯನ್ನಾಗಿ ಖ್ಯಾತ ನಟಿ ವಿದ್ಯಾ ಬಾಲನ್ ಅವರನ್ನು ನೇಮಕಮಾಡಲಾಗಿದೆ. ಈ ಯೋಜನೆಯಡಿ ರಾಜ್ಯದ ಬಡ ಮಹಿಳೆಯರಿಗೆ ಮಾಸಿಕ ರೂ 500 ಪಿಂಚಣಿ ರೂಪದಲ್ಲಿ ನೀಡಲಾಗುವುದು. ಸುಮಾರು 50 ಲಕ್ಷ ಮಹಿಳೆಯರಿಗೆ ಈ ಯೋಜನೆಯನ್ನು ತಲುಪಿಸುವ ಮಹದಾಸೆಯನ್ನು ಸರ್ಕಾರ ಹೊಂದಿದೆ.
Question 5 |
5. ಈ ಕೆಳಗಿನ ಯಾವುದು ವಿಶ್ವದ ಮೊದಲ ನವೀಕರಿಸಬಹುದಾದ ಇಂಧನ ಚಾಲಿತ ಹಡುಗಿನ ಹೆಸರಾಗಿದೆ?
ಗ್ರೀನ್ ಈಗಲ್ | |
ಎನರ್ಜಿ ಅಬ್ಸರ್ವರ್ | |
ಸೋಲಾರ್ ಬೋಟ್ | |
ಎಕೋ ಗ್ರೀನ್ |
ಎನರ್ಜಿ ಅಬ್ಸರ್ವರ್ ((Energy Observer) ವಿಶ್ವದ ಮೊದಲ ನವೀಕರಿಸಬಹುದಾದ ಇಂಧನ ಮೂಲಗಳಿಂದ ಚಲಿಸುವ ಹಡಗು. ಈ ನೌಕೆಯು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರ ವಿದ್ಯುತ್, ಪವನ ವಿದ್ಯುತ್ ಮತ್ತು ಜಲಜನಕದಿಂದ ಚಲಿಸಲಿದೆ. ಸೋಲಾರ್ ಇಂಪಲ್ಸ್ ಆಫ್ ದಿ ಸೀಸ್ (Solar Impulse of the Seas) ಎಂತಲೇ ಕರೆಯಲಾಗುತ್ತಿರುವ ಈ ಹಡಗು ಮುಂದಿನ ಫೆಬ್ರವರಿಯಲ್ಲಿ ವಿಶ್ವ ಪರ್ಯಟನೆಯನ್ನು ನಡೆಸಲಿದೆ. ಸುಮಾರು 6 ವರ್ಷಗಳ ಸಂಚರಿಸುವ ಮೂಲಕ ಶುದ್ದ ಇಂಧನದ ಪರಿಕಲ್ಪನೆ ಮತ್ತು ಮಹತ್ವವನ್ನು ಸಾರಲಿದೆ. ಈಗಾಗಲೇ ವಿಶ್ವದ ಮೊದಲ ಸೌರ ವಿದ್ಯುತ್ ಚಾಲಿತ ವಿಮಾನ “ಸೋಲಾರ್ ಇಂಪಲ್ಸ್” ವಿಶ್ವ ಪರ್ಯಟನೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದನ್ನು ಸ್ಮರಿಸಬಹುದು.
Question 6 |
6. ಇತ್ತೀಚೆಗೆ ಸುದ್ದಿಯಲ್ಲಿರುವ “ಹೆಝ್ಬ್-ಇ-ಇಸ್ಲಾಮಿ (Hezb-e Islami)” ಉಗ್ರಗಾಮಿ ಗುಂಪು ಯಾವ ದೇಶಕ್ಕೆ ಸಂಬಂಧಿಸಿದೆ?
ಸಿರಿಯಾ | |
ಆಫ್ಘಾನಿಸ್ತಾನ | |
ಪಾಕಿಸ್ತಾನ | |
ಇರಾನ್ |
ಹೆಝ್ಬ್-ಇ-ಇಸ್ಲಾಮಿ ಆಫ್ಘಾನಿಸ್ತಾನದ ಕಮ್ಯೂನಿಸ್ಟ್ ಸರ್ಕಾರದ ವಿರುದ್ದ ಹೋರಾಡುತ್ತಿರುವ ಉಗ್ರಗಾಮಿ ಗುಂಪು. ಗುಲ್ಬುದ್ದೀನ್ ಹೆಕ್ಮತ್ಯಾರ್ ಈ ಉಗ್ರಗಾಮಿ ಸಂಘಟನೆಯ ಮುಖಂಡ. ಹೆಝ್ಬ್-ಇ-ಇಸ್ಲಾಮಿಯನ್ನು 1975 ರಲ್ಲಿ ಸ್ಥಾಪಸಿಲಾಗಿದೆ. ಇತ್ತೀಚೆಗೆ ಆಫ್ಘಾನಿಸ್ತಾನ ಸರ್ಕಾರ ಮತ್ತು ಈ ಉಗ್ರಗಾಮಿ ಸಂಘಟನೆ ನಡುವೆ ಶಾಂತಿ ಒಪ್ಪಂದಕ್ಕೆ ಮಾತುಕತೆ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ ಎನ್ನಲಾಗಿದೆ.
Question 7 |
7. ಈ ಕೆಳಗಿನ ಸ್ಥಳಗಳನ್ನು ಗಮನಿಸಿ:
I) ಕೋನಾರ್ಕ್ ದೇವಸ್ಥಾನ
II) ಚತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ
III) ಮಾನಸ್ ರಾಷ್ಟ್ರೀಯ ಉದ್ಯಾನವನ
ಈ ಮೇಲಿನ ಯಾವುವು ಯುನೆಸ್ಕೋ ವಿಶ್ವ ಪರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ?
I | |
I & II | |
II & III | |
I, II & III |
ಮೇಲಿನ ಎಲ್ಲವೂ ಯುನೆಸ್ಕೊ ವಿಶ್ವಪರಂಪರಿಕ ತಾಣಗಳಾಗಿವೆ
Question 8 |
8. ತೆರಿಗೆ ಪಾವತಿದಾರರ ಕುಂದುಕೊರತೆಯನ್ನು ನಿವಾರಿಸುವ ಸಲುವಾಗಿ ಯಾವ ಸಂಸ್ಥೆ ಇತ್ತೀಚೆಗೆ “ಇ-ನಿವಾರಣ್” ಸೌಲಭ್ಯವನ್ನು ಜಾರಿಗೊಳಿಸಿದೆ?
ಭಾರತೀಯ ರಿಸರ್ವ್ ಬ್ಯಾಂಕ್ | |
ಕೇಂದ್ರ ನೇರ ತೆರಿಗೆ ಮಂಡಳಿ | |
ಕೇಂದ್ರ ಅಬಕಾರಿ ಸುಂಕ ಮಂಡಳಿ | |
ಆದಾಯ ತೆರಿಗೆ ಇಲಾಖೆ |
ಕೇಂದ್ರ ನೇರ ತೆರಿಗೆ ಮಂಡಳಿ (CBDT) ತೆರಿಗೆ ಪಾವತಿದಾರರ ಕುಂದುಕೊರತೆಯನ್ನು ಆನ್ ಲೈನ್ ಮೂಲಕ ನಿವಾರಿಸಲು “ಇ-ನಿವಾರಣ್” ಸೌಲಭ್ಯವನ್ನು ಜಾರಿಗೆ ತಂದಿದೆ. ತೆರಿಗೆ ಪಾವತಿ ವೇಳೆ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಸಂಕಷ್ಟಗಳನ್ನು ಸುಲಭವಾಗಿ ಪರಿಹರಿಸುವ ಸಲುವಾಗಿ ಕೇಂದ್ರ ನೇರ ತೆರಿಗೆ ಮಂಡಳಿ ಈ ವಿಶೇಷ ವ್ಯವಸ್ಥೆಗೆ ಮುಂದಾಗಿದೆ. ಈ ಸೌಲಭ್ಯದಡಿ ತೆರಿಗೆದಾರರು ತಮ್ಮ ಕಂಪ್ಯೂಟರ್ ಬಳಸಿ ದೂರನ್ನು ದಾಖಲು ಮಾಡಬಹುದು. ದೂರು ದಾಖಲಾದ ನಂತರ ದೂರುದಾರರ ಮೊಬೈಲ್ ಮತ್ತು ಇ-ಮೇಲ್ ವಿಳಾಸಕ್ಕೆ ಪಿಸ್ ಸಂಖ್ಯೆಯನ್ನು ರವಾನಿಸಲಾಗುದು. ಈ ಸಂಖ್ಯೆಯ ಮೂಲಕ ತಮ್ಮ ದೂರಿನ ಸ್ಥಿತಿಯನ್ನು ತಿಳಿಯಬಹುದಾಗಿದೆ.
Question 9 |
9. ಪ್ರಸಿದ್ದ “ವಿಕ್ಟೋರಿಯಾ” ಜಲಪಾತವೂ ಈ ಕೆಳಗಿನ ಯಾವ ನದಿಗೆ ಸಂಬಂಧಿಸಿದೆ?
ನೈಲ್ | |
ಅಮೆಜಾನ್ | |
ಝಾಂಬೆಝಿ | |
ಮಿಸ್ಸೊರಿ |
ವಿಕ್ಟೋರಿಯಾ ಜಲಪಾತ ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿದೆ. ಝಾಂಬೆಝಿ ನದಿಯಿಂದ ಈ ಜಲಪಾತ ಸೃಷ್ಟಿಯಾಗಿದೆ. ಈ ಜಲಪಾತವೂ ಜಿಂಬಾಬ್ವೆ ಮತ್ತು ಝಾಂಬಿಯಾ ದೇಶಗಳ ನಡುವೆ ಗಡಿ ಭಾಗವಾಗಿದೆ.
Question 10 |
10. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಹಣಕಾಸಿನ ನೆರವು ನೀಡಲು “ಎಚ್ಇಎಫ್ಎ(HEFA)” ಅನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. “ಎಚ್ಇಎಫ್ಎ” ವಿಸ್ತ್ರತ ರೂಪವೇನು?
ಹೈಯರ್ ಎಜುಕೇಷನ್ ಫೈನಾನ್ಸಿಂಗ್ ಏಜೆನ್ಸಿ | |
ಹೈಯರ್ ಎಜುಕೇಷನ್ ಫಂಡಿಂಗ್ ಏಜೆನ್ಸಿ | |
ಹೈಯರ್ ಎಜುಕೇಷನ್ ಫಂಡಮೆಂಟಲ್ ಏಜೆನ್ಸಿ | |
ಮೇಲಿನ ಯಾವುದು ಅಲ್ಲ |
ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ), ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್ಐಟಿ) ಹಾಗೂ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳಲ್ಲಿ (ಐಐಎಂ) ಸಂಶೋಧನೆಗೆ ಬೇಕಿರುವ ಅನುದಾನ ನೀಡಲು ‘ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (Higher Education Financing Agency)’ಯನ್ನು (ಎಚ್ಇಎಫ್ಎ) ಕೇಂದ್ರ ಸರ್ಕಾರ ಶೀಘ್ರದಲ್ಲೇ ಸ್ಥಾಪಿಸಲಿದೆ. ಎಚ್ಇಎಫ್ಎ ಸ್ಥಾಪನೆಗೆ ಅನುಮೋದನೆ ನೀಡಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಪ್ರಸ್ತಾವವನ್ನು ಒಪ್ಪಿದೆ. 2 ಸಾವಿರ ಕೋಟಿ ಬಂಡವಾಳದ ಎಚ್ಇಎಫ್ಎಯನ್ನು ಕೇಂದ್ರ ಸರ್ಕಾರವು ಎನ್ಬಿಎಫ್ಸಿ (ಬ್ಯಾಂಕೇತರ ಹಣಕಾಸು ಸಂಸ್ಥೆ) ಅಥವಾ ಸರ್ಕಾರಿ ಬ್ಯಾಂಕ್ ಜೊತೆ ಸೇರಿ ಆರಂಭಿಸಲಿದೆ. ಇದರಲ್ಲಿ ಕೇಂದ್ರದ ಪಾಲು ₹ 1 ಸಾವಿರ ಕೋಟಿ ಆಗಿರಲಿದೆ. ಎಚ್ಇಎಫ್ಎಯ ಬಂಡವಾಳವನ್ನು ₹ 20 ಸಾವಿರ ಕೋಟಿವರೆಗೆ ಹೆಚ್ಚಿಸಲು ಅವಕಾಶ ಇದೆ. ಈ ಹಣ ಬಳಸಿ ಐಐಟಿ, ಐಐಎಂ, ಎನ್ಐಟಿಗಳಲ್ಲಿ ವಿಶ್ವದರ್ಜೆಯ ಪ್ರಯೋಗಾಲಯಗಳು ಹಾಗೂ ಮೂಲಸೌಕರ್ಯ ನಿರ್ಮಿಸಲು ನೆರವು ನೀಡಲಾಗುವುದು.
Thanks
ಧನ್ಯವಾದಗಳು ಸರ್
Sir answers not ticking
Thank you sooo much.
Agtide plz check or refresh it again
Nice. Sir..