ಕ್ವಿಜ್ ರಾಜ್ಯ , ಕೇಂದ್ರ ಸರ್ಕಾರ ಮತ್ತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -1
Question 1 |
1. ಇತ್ತೀಚೆಗೆ ಈ ಕೆಳಗಿನ ಯಾರನ್ನು ಪ್ರತಿಷ್ಟಿತ ನೃಪತುಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ?
ಡಾ. ಟಿ. ವಿ ವೆಂಕಟಚಲ ಶಾಸ್ತ್ರಿ | |
ಚಂದ್ರಶೇಖರ ಕಂಬಾರ | |
ವೈದೇಹಿ | |
ಸುಧಾ ಮೂರ್ತಿ |
Question 1 Explanation:
ಡಾ. ಟಿ. ವಿ ವೆಂಕಟಚಲ ಶಾಸ್ತ್ರಿ:
ಖ್ಯಾತ ವಿದ್ವಾಂಸರಾದ ಡಾ.ಟಿ.ವಿ ವೆಂಕಟಚಲ ಶಾಸ್ತ್ರಿ ರವರನ್ನು ಪ್ರತಿಷ್ಟಿತ ನೃಪತುಂಗ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ನೃಪತುಂಗ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಥಾಪಿಸಿದ್ದು, ಪ್ರಶಸ್ತಿಯು ರೂ 7 ಲಕ್ಷ ನಗದನ್ನು ಒಳಗೊಂಡಿದೆ. ದೇ ಜವರೇಗೌಡರು ಈ ಪ್ರಶಸ್ತಿಯನ್ನು ಪಡೆದ ಮೊದಲಿಗರು.
Question 2 |
2. ಈ ಕೆಳಗಿನ ಯಾರು ಕರ್ನಾಟಕ ಉಚ್ಚ ನ್ಯಾಯಾಲಯದ ಈಗಿನ ಮುಖ್ಯ ನ್ಯಾಯಾಧೀಶರು?
ನ್ಯಾ. ಎಚ್.ಡಿ. ವಘೇಲಾ | |
ನ್ಯಾ. ಎಸ್.ಕೆ. ಮುಖರ್ಜಿ | |
ನ್ಯಾ. ನಾಗರತ್ನ | |
ನ್ಯಾ. ಚಂದ್ರಕಾಂತ್ ಚಿಂಚೊಳ್ಳಿ |
Question 2 Explanation:
ನ್ಯಾ. ಎಸ್.ಕೆ. ಮುಖರ್ಜಿ:
ನ್ಯಾಯಮೂರ್ತಿ ಸುಬ್ರೊ ಕಮಲ್ ಮುಖರ್ಜಿ ಅವರು ಕರ್ನಾಟಕ ಉಚ್ಚನ್ಯಾಯಾಲಯದ ಪ್ರಸ್ತುತ ಮುಖ್ಯ ನ್ಯಾಯಾಧೀಶರಾಗಿದ್ದಾರೆ.
Question 3 |
3. ಕರ್ನಾಟಕದ ಮೊದಲ ಸ್ಕಿನ್ ಬ್ಯಾಂಕ್ (Skin Bank) ಅನ್ನು ಇತ್ತೀಚೆಗೆ ಎಲ್ಲಿ ತೆರೆಯಲಾಯಿತು?
ಮಣಿಪಾಲ್ ಆಸ್ಪತ್ರೆ | |
ವಿಕ್ಟೋರಿಯಾ ಆಸ್ಪತ್ರೆ | |
ಕೊಲೊಂಬಿಯ ಏಷಿಯಾ | |
ವಾಣಿ ವಿಲಾಸ್ ಆಸ್ಪತ್ರೆ |
Question 3 Explanation:
ವಿಕ್ಟೋರಿಯಾ ಆಸ್ಪತ್ರೆ:
ಬೆಂಗಳೂರಿನ ವಿಕ್ಟೋರಿತಯಾ ಆಸ್ಪತ್ರೆ ರಾಜ್ಯದ ಮೊದಲ ಸ್ಕಿನ್ ಬ್ಯಾಂಕ್ ವ್ಯವಸ್ಥೆ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಆಕಸ್ಮಿಕವಾಗಿ ಬೆಂಕಿಗೆ ತುತ್ತಾದವರು ಮತ್ತು ಅಪಘಾತದಿಂದ ಗಾಯಗೊಂಡವರಿಗೆ ಈ ಸೇವೆ ಅತ್ಯಂತ ಉಪಯುಕ್ತವಾಗಲಿದೆ.
Question 4 |
4. ಪ್ರಸ್ತಕ ಸಾಲಿನ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ನೀಡುವ ಬೇಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
ಡಾ. ಚೆನ್ನವೀರ ಕಣವಿ | |
ಡಾ. ಜಿ. ಎಸ್ ಅಮೂರ | |
ಡಾ. ಟಿ. ವಿ ವೆಂಕಟಚಲ ಶಾಸ್ತ್ರಿ | |
ಡಾ. ಅನುರೂಪ ಭಟ್ |
Question 4 Explanation:
ಡಾ. ಜಿ. ಎಸ್ ಅಮೂರ:
ಹಿರಿಯ ವಿಮರ್ಶಕ ಡಾ. ಜಿ.ಎಸ್. ಅಮೂರ ಅವರನ್ನು ಪ್ರಸ್ತಕ ಸಾಲಿನ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ನೀಡುವ ಬೇಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರೂ 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
Question 5 |
5. ಇತ್ತೀಚೆಗೆ ಜಾರಿಗೆ ತಂದ ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಗೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಗಮನಿಸಿ:
i) ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತಾಗಿ ಧನ ಸಹಾಯ ಮಾಡುವುದು
ii) ಈ ಯೋಜನೆಯು ಕೇವಲ ಕರ್ನಾಟಕ ರಾಜ್ಯದ ಹಾಗೂ ಬಿಪಿಲ್ ಅರ್ಹತೆ ಇರುವವರಿಗೆ ಮಾತ್ರ
iii) ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿಗೊಳಿಸಲಾಗುತ್ತಿದೆ
ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ.
i ಮಾತ್ರ | |
i & ii ಮಾತ್ರ | |
i & iii ಮಾತ್ರ | |
ಮೇಲಿನ ಎಲ್ಲವೂ |
Question 5 Explanation:
i & iii ಮಾತ್ರ:
ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಯನ್ನು ರಾಜ್ಯ ಸರ್ಕಾರ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಆರ್ಥಿಕವಾಗಿ ನೆರವಾಗುವ ಸಲುವಾಗಿ ಸಲುವಾಗಿ ಜಾರಿಗೆ ತಂದಿದೆ. ಇದೊಂದು ನಗದು ರಹಿತ ಯೋಜನೆಯಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜನೆಯಡಿ ಸ್ಥಾಪಿಸಲಾಗಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯು ರಾಜ್ಯದಲ್ಲಾಗುವ ಅಪಘಾತಗಳಲ್ಲಿ ರಾಜ್ಯ ವಲ್ಲದೇ ಬೇರೆ ರಾಜ್ಯದ ಜನರಿಗೂ ಮತ್ತು ಬಿಪಿಲ್/ಎಪಿಲ್ ಹೊಂದಿರುವವರಿಗೂ ಅನ್ವಯವಾಗಲಿದೆ. ಒಂದು ಬಾರಿಗೆ ಗರಿಷ್ಟ ರೂ 25,000/ ಗಳವರೆಗೂ ನಗದು ರಹಿತ ಚಿಕಿತ್ಸೆ ನೆರವು ನೀಡಲಾಗುವುದು.
Question 6 |
6. ದೇಶದ ಮೊದಲ ಹೊಗೆ ರಹಿತ ಗ್ರಾಮ ಎಂಬ ಹೆಗ್ಗಳಿಕೆ ಪಾತ್ರವಾದ ವ್ಯಾಚಕುರಹಳ್ಳಿ ರಾಜ್ಯದ ಯಾವ ಜಿಲ್ಲೆಯಲ್ಲಿದೆ?
ಬೆಂಗಳೂರು ಗ್ರಾಮಾಂತರ | |
ಕೋಲಾರ | |
ಚಿಕ್ಕಬಳ್ಳಾಪುರ | |
ಮಂಡ್ಯ |
Question 6 Explanation:
ಚಿಕ್ಕಬಳ್ಳಾಪುರ:
ವ್ಯಾಚಕುರಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರುನಲ್ಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇತ್ತೀಚೆಗೆ ವ್ಯಾಚಕುರಹಳ್ಳಿಯನ್ನು ದೇಶದ ಮೊದಲ ಹೊಗೆ ರಹಿತ ಗ್ರಾಮವೆಂದು ಘೋಷಿಸಿದೆ. ಇಂಡಿಯ ಆಯಿಲ್ ಕಾರ್ಪೋರೇಷನ್ ಹೊಗೆ ರಹಿತ ಗ್ರಾಮ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.
Question 7 |
7. ಹೆಚ್.ಎ.ಎಲ್ ನ ಹೆಲಿಕಾಪ್ಟರ್ ತಯಾರಿಕ ಘಟಕಾ ಸ್ಥಾಪನೆಯಾಗುತ್ತಿರುವ ಜಿಲ್ಲೆ________?
ತುಮಕೂರು | |
ಕೋಲಾರ | |
ಚಿತ್ರದುರ್ಗ | |
ಹಾಸನ |
Question 7 Explanation:
ತುಮಕೂರು:
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಹೆಲಿಕಾಪ್ಟರ್ ತಯಾರಿಕ ಘಟಕಾ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಸ್ಥಾಪಿತವಾಗುತ್ತಿದೆ. 2018 ರ ವೇಳೆಗೆ ಈ ಘಟಕದಿಂದ ತಯಾರಾಗುವ ಮೊದಲ ಹೆಲಿಕಾಪ್ಟರ್ ಹಾರಾಟ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
Question 8 |
8. ಕರ್ನಾಟಕ ರಾಜ್ಯವು ಪಾವಗಡದಲ್ಲಿ ಸ್ಥಾಪಿಸುತ್ತಿರುವ ಸೋಲಾರ್ ವಿದ್ಯುತ್ ಉತ್ಪಾದನ ಘಟಕದ ಸಾಮರ್ಥ್ಯವೆಷ್ಟು?
1000 ಮೆಗಾ ವ್ಯಾಟ್ | |
1500 ಮೆಗಾ ವ್ಯಾಟ್ | |
2000 ಮೆಗಾ ವ್ಯಾಟ್ | |
500 ಮೆಗಾ ವ್ಯಾಟ್ |
Question 8 Explanation:
2000 ಮೆಗಾ ವ್ಯಾಟ್:
ಕರ್ನಾಟಕ ರಾಜ್ಯ ಸರ್ಕಾರ ಪಾವಗಡದಲ್ಲಿ ನಿರ್ಮಿಸುತ್ತಿರುವ ಸೋಲಾರ್ ವಿದ್ಯುತ್ ಉತ್ಪಾದನ ಘಟಕದ ಸಾಮರ್ಥ್ಯ 2000 ಮೆಗಾ ವ್ಯಾಟ್. ಸುಮಾರು 10,000 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣಗೊಳ್ಳುತ್ತಿದ್ದು, ದೇಶದಲ್ಲೇ ಅತಿ ದೊಡ್ಡ ಸೋಲಾರ್ ವಿದ್ಯುತ್ ಘಟಕವಾಗಲಿದೆ.
There are 8 questions to complete.