ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 15, 2016
Question 1 |
1.ಜೇರುಸಲೇಂ ಮಾನವ ಹಕ್ಕು ಸಂಘಟನೆ “ಸೈಮನ್ ವಿಸೆಂಥಲ್ ಮಾನವತಾವಾದಿ ಪ್ರಶಸ್ತಿ”ಗೆ ಯಾರನ್ನು ಆಯ್ಕೆಮಾಡಲಾಗಿದೆ?
ಅಮಿತಾಬ್ ಬಚ್ಚನ್ | |
ಶ್ರೀರವಿಶಂಕರ್ ಗುರೂಜಿ | |
ನರೇಂದ್ರ ಮೋದಿ | |
ಅಟಲ್ ಬಿಹಾರಿ ವಾಜಪೇಯಿ |
ಆರ್ಟ್ ಆಫ್ ಲೀವಿಂಗ್ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್ ಗುರೂಜಿ ಅವರನ್ನು ಜೇರುಸಲೇಂ ಮಾನವ ಹಕ್ಕುಗಳ ಸಂಘಟನೆ 'ಸೈಮನ್ ವಿಸೆಂಥಲ್ ಮಾನವತಾವಾದಿ ಪ್ರಶಸ್ತಿ (Simon Wiesenthal Humanitarian Laureate')'ಗೆ ಆಯ್ಕೆ ಮಾಡಿದೆ. ಮಾನವನ ಘನತೆ, ಅಂತರ್ ಧರ್ಮೀಯ ಸಂಬಂಧಗಳು ಮತ್ತು ಜನರಲ್ಲಿ ಸಹನೆ ಪಸರಿಸುವ ನಿಟ್ಟಿನಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 21ರಂದು ದೆಹಲಿಯಲ್ಲಿ “ಜನರು ಪುಸ್ತಕ, ಭೂಮಿ: ಪವಿತ್ರನಾಡಿನೊಂದಿಗೆ 3500 ವರ್ಷಗಳ ಯಹೂದಿಗಳ ಬಾಂದವ್ಯ” ಹೆಸರಿನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಾನವ ಹಕ್ಕುಗಳ ರಕ್ಷಣೆಗೆ ಜೇರುಸಲೇಂ ಮಾನಹ ಹಕ್ಕು ಸಂಘಟನೆ ಕೈಗೊಂಡ ಕಾರ್ಯಕ್ಕೆ ರವಿಶಂಕರ್ ಗುರೂಜಿ ಕೈಜೋಡಿಸಿದ್ದರು. ಅಲ್ಲದೇ, ಭಾರತದಲ್ಲಿ 2009ರಿಂದ ವ್ಯವಹಾರದ ಪ್ರಮುಖ ಸಾಧನವಾಗಿ ಬಳಸಲಾಗುತ್ತಿರುವ ಹಿಟ್ಲರ್ನ ಪುಸ್ತಕ 'ಮೈನ್ ಕಾಂಫ್'ನ ಮಾರಾಟಕ್ಕೆ ಈ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು ಇದನ್ನು ರವಿಶಂಕರ್ ಗುರೂಜಿ ಬೆಂಬಲಿಸಿದ್ದರು. ಸೈಮನ್ ವಿಸೆಂಥಲ್ ಕೇಂದ್ರ ನೀಡುವ ದೊಡ್ಡ ಗೌರವ ಇದಾಗಿದೆ.
Question 2 |
2. “ಸತ್ಕೊಸಿಯಾ ಹುಲಿ ಸಂರಕ್ಷಣ ಪ್ರದೇಶ (Satkosia Tiger Reserve) ಯಾವ ರಾಜ್ಯದಲ್ಲಿದೆ?
ಬಿಹಾರ | |
ಒಡಿಶಾ | |
ಕೇರಳ | |
ಪಶ್ಚಿಮ ಬಂಗಾಳ |
ಸತ್ಕೊಸಿಯಾ ಹುಲಿ ಸಂರಕ್ಷಣ ಪ್ರದೇಶವು ಒಡಿಶಾದ ಅಂಗುಲ್ ಜಿಲ್ಲೆಯಲ್ಲಿದೆ. 2007 ರಲ್ಲಿ ಇದನ್ನು ಹುಲಿ ಸಂರಕ್ಷಣ ಪ್ರದೇಶವೆಂದು ಘೋಷಿಸಲಾಗಿದೆ. ಸತ್ಕೋಸಿಯಾ ಗೊರ್ಜ್ ವನ್ಯಜೀವಿ ಅಭಯಾರಣ್ಯ ಮತ್ತು ಬೈಸಿಪಲ್ಲಿ ವನ್ಯಜೀವಿ ಅಭಯಾರಣ್ಯ ಈ ಸಂರಕ್ಷಣ ಪ್ರದೇಶದ ಭಾಗವಾಗಿವೆ.
Question 3 |
3. ಫಿಪಾ (FIFA) ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಯಾವ ದೇಶ ಅಗ್ರಸ್ಥಾನವನ್ನು ಪಡೆದುಕೊಂಡಿದೆ?
ಜರ್ಮನಿ | |
ಅರ್ಜೆಂಟೀನಾ | |
ಕೋಲಂಬಿಯ | |
ಬ್ರೆಜಿಲ್ |
ಫಿಪಾ ಸಂಸ್ಥೆ ಬಿಡುಗಡೆಗೊಳಿಸಿರುವ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಲಿಯೊನೆಲ್ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡ ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಪಟ್ಟಿಯಲ್ಲಿ ಭಾರತ ನಾಲ್ಕು ಸ್ಥಾನ ಮೇಲೇರಿದ್ದು, 205 ಅಂಕದೊಂದಿಗೆ ಭಾರತ 148ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದೆ. ಬೆಲ್ಜಿಯಂ ತಂಡ ಎರಡನೇ ಸ್ಥಾನವನ್ನು ಕಾಯ್ದುಕೊಂಡರೆ, ಜರ್ಮನ್ ತಂಡ ಕೋಲಂಬಿಯಾ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನವನ್ನು ದಕ್ಕಿಸಿಕೊಂಡಿದೆ.
Question 4 |
4. ಈ ಕೆಳಗಿನ ಯಾವ ಪರ್ವತ ಶ್ರೇಣಿ ಜಗತ್ತಿನ ಅತಿ ಉದ್ದದ ಪರ್ವತ ಶ್ರೇಣಿಯಾಗಿದೆ?
ಉತ್ತರ ಅಮೆರಿಕಾದ ರಾಕೀಸ್ ಪರ್ವತ | |
ದಕ್ಷಿಣ ಅಮೆರಿಕಾದ ಆಂಡಿಸ್ | |
ಆಸ್ಟ್ರೇಲಿಯಾದ ಗ್ರೇಟ್ ಡಿವೈಡೆಂಡ್ ಪರ್ವತ | |
ಹಿಮಾಲಯ ಪರ್ವತ ಶ್ರೇಣಿ |
ದಕ್ಷಿಣ ಅಮೆರಿಕಾದ ಆಂಡಿಸ್ ಶ್ರೇಣಿ ವಿಶ್ವದ ಅತಿ ಉದ್ದದ ಪರ್ವತ ಶ್ರೇಣಿಯಾಗಿದೆ.
Question 5 |
5. ಇಂಗ್ಲೆಂಡ್ನ ಮಾಜಿ ಬ್ಯಾಟ್ಸಮನ್ ಗ್ರೇಮ್ ಹಿಕ್ ಅವರು ಯಾವ ದೇಶದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ?
ನ್ಯೂಜಿಲ್ಯಾಂಡ್ | |
ಆಸ್ಟ್ರೇಲಿಯ | |
ದಕ್ಷಿಣ ಆಫ್ರಿಕಾ | |
ಜಿಂಬಾಂಬ್ವೆ |
ಇಂಗ್ಲೆಂಡ್ನ ಮಾಜಿ ಬ್ಯಾಟ್ಸ್ಮನ್ ಗ್ರೇಮ್ ಹಿಕ್ ಆಸ್ಟ್ರೇಲಿಯದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕ ವಿರುದ್ಧ ಸರಣಿಯಲ್ಲಿ ತನ್ನ ಕೋಚಿಂಗ್ ವೃತ್ತಿ ಆರಂಭಿಸಲಿದ್ದಾರೆ. ಇಂಗ್ಲೆಂಡ್ನ ಪರ 65 ಟೆಸ್ಟ್ ಹಾಗೂ 120 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಹಿಕ್, 2013ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯದ ಉನ್ನತ ಪ್ರದರ್ಶನ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಹಿಕ್ 1987ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 136 ಶತಕಗಳ ಸಹಿತ 41,112 ರನ್ ಗಳಿಸಿರುವ ಹಿಕ್ 2008ರಲ್ಲಿ ನಿವೃತ್ತಿಯಾಗಿದ್ದರು. ಇದೀಗ 2020ರ ತನಕ ಆಸ್ಟ್ರೇಲಿಯದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
Question 6 |
6. ಯಾವ ರಾಜ್ಯದಲ್ಲಿ “ಬ್ರಿಕ್ಸ್ ಪರಿಸರ ಸಚಿವರ (Environment Minister) ಸಭೆ” ಇತ್ತೀಚೆಗೆ ಆರಂಭಗೊಂಡಿತು?
ಗೋವಾ | |
ಕೇರಳ | |
ಮಹಾರಾಷ್ಟ್ರ | |
ತೆಲಂಗಣ |
ಬ್ರಿಕ್ಸ್ ರಾಷ್ಟ್ರಗಳ ಪರಿಸರ ಸಚಿವರ ಸಭೆ ಸೆಪ್ಟೆಂಬರ್ 16ರಂದು ಗೋವಾದ ಪಣಜಿಯಲ್ಲಿ ಆರಂಭಗೊಂಡಿತು. ವಾಯು ಹಾಗೂ ಜಲ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಲಾಗುವುದು. ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಯ ಸಹಾಯಕ ಸಚಿವ ಅನಿಲ್ ಮಾಧವ ದವೆ, ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಮುಖ್ಯಸ್ಥರ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕೇಂದ್ರದ ವಿವಿಧ ಸಚಿವಾಲಯಗಳು ಹಮ್ಮಿಕೊಳ್ಳುತ್ತಿರುವ ಸರಣಿ ಸಭೆಗಳಲ್ಲಿ ಇದು ಒಂದಾಗಿದೆ. [ಗಮನಿಸಿ: ಬ್ರಿಕ್ಸ್ ಆರೋಗ್ಯ ಕಾರ್ಯಾಗಾರ: ಬೆಂಗಳೂರಿನಲ್ಲಿ ನಡೆಯಿತು, ಬ್ರಿಕ್ಸ್ ಸಿನಿಮೋತ್ಸವ: ದೆಹಲಿಯಲ್ಲಿ ಆಯೋಜಿಸಲಾಗಿತ್ತು, ಬ್ರಿಕ್ಸ್ ಎಂಪ್ಲಾಯ್ಮೆಂಟ್ ವರ್ಕಿಂಗ್ ಗ್ರೂಫ್ ಸಭೆ: ಹೈದ್ರಾಬಾದ್ ನಲ್ಲಿ ಆಯೋಜಿಸಲಾಗಿತ್ತು, ಬ್ರಿಕ್ಸ್ ಮಹಿಳಾ ಸಂಸದರ ಸಭೆ: ಜೈಪುರದಲ್ಲಿ ನಡೆಯಿತು, ಬ್ರಿಕ್ಸ್ ವಿಪತ್ತು ನಿರ್ವಹಣೆ ಸಭೆ: ಉದಯಪುರದಲ್ಲಿ ನಡೆಯಿತು, ಇತ್ತೀಚೆಗೆ ಬ್ರಿಕ್ಸ್ ನಗರೀಕರಣ ವೇದಿಕೆ ಸಭೆ: ಆಂಧ್ರದ ವಿಶಾಖಪಟ್ಟಣದಲ್ಲಿ ಮುಕ್ತಾಯಗೊಂಡಿತು].
Question 7 |
7. ಇತ್ತೀಚೆಗೆ ನಿಧನರಾದ “ರೋಸ್ ಮೊಫೊರ್ಡ್ (Rose Mofford) ಅಮೆರಿಕಾದ ಯಾವ ರಾಜ್ಯದ ಮೊದಲ ಮಹಿಳಾ ಗವರ್ನರ್ ಆಗಿದ್ದರು?
ಫ್ಲೋರಿಡಾ | |
ಅರಿಝೋನ | |
ಅಲಸ್ಕ | |
ಹವಾಯಿ |
ಅರಿಝೋನ ರಾಜ್ಯದ ಮೊದಲ ಮಹಿಳಾ ಗವರ್ನರ್ ರೋಸ್ ಮೊಫೊರ್ಡ್ ನಿಧನರಾದರು. 94 ವರ್ಷದ ಮೊಫೊರ್ಡ್ ಇತ್ತೀಚೆಗೆ ಆಕಸ್ಮಿಕವಾಗಿ ಜಾರಿ ಬಿದ್ದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 1988 ರಿಂದ 1991 ರವರೆಗೆ ಮೊಫೊರ್ಡ್ ಅರಿಝೋನದ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎನಿಸಿದ್ದರು.
Question 8 |
8. ಈ ಕೆಳಗಿನ ಯಾರು “2016 ಮಾರ್ಕೋನಿ ಸೊಸೈಟಿ ಪೌಲ್ ಬ್ಯಾರನ್ ಯುವ ವಿದ್ಯಾರ್ಥಿ (2016 Marconi Society Paul Baran Young Scholar Award) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ?
ದಿನೇಶ್ ಭರಡಿಯ | |
ರಮೇಶ್ ರಸ್ಕರ್ | |
ಸತೀಶ್ ಜೈನ್ | |
ಸುರೇಂದ್ರ ನಾಥ್ |
ಭಾರತದ ದಿನೇಶ್ ಭರಡಿಯ ಅವರನ್ನು ಪ್ರತಿಷ್ಠಿತ “2016 ಮಾರ್ಕೋನಿ ಸೊಸೈಟಿ ಪೌಲ್ ಬ್ಯಾರನ್ ಯುವ ವಿದ್ಯಾರ್ಥಿ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಐಐಟಿ ಕಾನ್ಪುರದಲ್ಲಿ ಎಲೆಕ್ಟ್ರಿಕಲ್ ಎಂಜನಿಯರಿಂಗ್ ಪದವಿ ಪಡೆದಿರುವ ಭರಡಿಯ ಪ್ರಸ್ತುತ ಅಮೆರಿಕಾದ ಎಂಐಟಿಯಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೇಡಿಯೋ ತರಂಗ ಕ್ಷೇತ್ರದಲ್ಲಿ ವಿಶೇಷ ಅನ್ವೇಷಣೆಗಾಗಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ನವೆಂಬರ್ 2 ರಂದು ಕ್ಯಾಲಿಪೋರ್ನಿಯಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೀಡಲಾಗುವುದು.
Question 9 |
9. ದಕ್ಷಿಣ ಭಾರತದ ಅತಿ ಎತ್ತರದ ವಸತಿ ಸಮುಚ್ಚಯ ಯಾವ ನಗರದಲ್ಲಿ ಸ್ಥಾಪನೆಯಾಗಲಿದೆ?
ಕೊಚ್ಚಿ | |
ಮಂಗಳೂರು | |
ಬೆಂಗಳೂರು | |
ಹೈದ್ರಾಬಾದ್ |
ಮಂಗಳೂರಿನಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ವಸತಿ ಸಮುಚ್ಚಯ ಸ್ಥಾಪನೆಯಾಗಲಿದೆ. ನಗರದ ನಂತೂರು ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 53 ಮಹಡಿಗಳ ಪ್ರೀಮಿಯಂ ವಸತಿ ಸಮುಚ್ಚಯವನ್ನು ವೆಸ್ಟ್ಲೈನ್ ಬಿಲ್ಡರ್ಸ್ ಆಯಂಡ್ ಡೆವಲಪರ್ಸ್ ನಿರ್ಮಾಣ ಮಾಡುತ್ತಿದೆ. ದಕ್ಷಿಣ ಭಾರತದಲ್ಲೇ ಅತೀ ಎತ್ತರದಿಂದ ಕೂಡಿರುವ ವೆಸ್ಟ್ಲೈನ್ ಸಿಗ್ನೇಚರ್ ಸಂಪೂರ್ಣವಾಗಿ ಆವಿಷ್ಕಾರಿ ವಿನ್ಯಾಸದಿಂದ ಕೂಡಿರುವ ವಸತಿ ಸಮುಚ್ಚಯವಾಗಿದೆ. ಬಿಸಿಲಿನ ಪ್ರಖರತೆಯಿಂದ ಮನೆಯೊಳಗಿನ ಶಾಖ ಕಡಿಮೆ ಮತ್ತು ಮನೆ ತಂಪಾಗಿರುವಂತೆ ಮಾಡುವ ಉದ್ದೇಶದಿಂದ ಕಟ್ಟಡದ ಗೋಡೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಅಲ್ಟ್ರಾ ಐಷಾರಾಮಿ ಯೋಜನೆಯಲ್ಲಿ ಒಟ್ಟು 135 ವಸತಿಗಳಿದ್ದು, 4 ಬೆಡ್ ರೂಂನ ಡ್ಯುಪ್ಲೆಕ್ಸ್, 3 ಬೆಡ್ ರೂಂನ ಡ್ಯುಪ್ಲೆಕ್ಸ್, 3 ಬೆಡ್ ರೂಂ ಹಾಗೂ ಎರಡು ಬೆಡ್ ರೂಂನ ವಸತಿಗಳು ಇವೆ.
Question 10 |
10. ಈ ಕೆಳಗಿನ ಯಾವುವು ಸಕ್ರಿಯ ಜ್ವಾಲಮುಖಿಗಳಾಗಿವೆ?
I) ಮೌಂಟ್ ಕಿಲಿಮಂಜಾರೊ
II) ಮೌಂಟ್ ಕೊಟೊಪಾಕ್ಸಿ
III) ಮೌನಾ ಲೊವಾ
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆರಿಸಿ:
I & II | |
II & III | |
I & III | |
ಮೇಲಿನ ಎಲ್ಲವೂ |
ಮೌಂಟ್ ಕೊಟೊಪಾಕ್ಸಿ ಮತ್ತು ಮೌನಾ ಲೊವಾ ಜೀವಂತ ಜ್ವಾಲಮುಖಿಗಳಾಗಿವೆ. ಮೌಂಟ್ ಕಿಲಿಮಂಜಾರೊ ಕಳೆದ 400 ವರ್ಷಗಳಿಂದ ಸ್ಪೋಟಿಸಿದ ಕಾರಣ ಇದನ್ನು ಸಕ್ರಿಯವಲ್ಲದ ಜ್ವಾಲಾಮುಖಿ ಎಂದು ಪರಿಗಣಿಸಲಾಗಿದೆ.
[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-15.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ಧನ್ಯವಾದಗಳು ಸರ್